ಶಿಕ್ಷಕಿಯರ ಸಂಘಟನೆಗೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಪ್ರೋತ್ಸಾಹ

ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ-ಧಾರವಾಡ
ಜಿಲ್ಲಾಘಟಕ- ವಿಜಯನಗರ,

ತಾಲ್ಲೂಕು ಘಟಕ- ಹರಪನಹಳ್ಳಿ

ಮಾ.28. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷರು.ಪ್ರಧಾನ ಕಾರ್ಯದರ್ಶಿಗಳು ಹಾಗೂ ಎಲ್ಲ ಪದಾಧಿಕಾರಿಗಳು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಭೇಟಿಮಾಡಿ ಅಧಿಕೃತವಾಗಿ ನೂತನ ತಾಲ್ಲೂಕು ಘಟಕದ ಬಗ್ಗೆ ಮಾಹಿತಿ ನೀಡಿದರು. ರಾಜ್ಯಾದ್ಯಂತ ಹೆಮ್ಮರವಾಗಿ ಬೆಳೆದಿರುವ ಮಹಿಳಾ ಶಿಕ್ಷಕಿಯರ ಸಂಘಟನೆ ಇದಾಗಿದ್ದು ಇದರಲ್ಲಿ ರಾಜ್ಯದ ಸರ್ಕಾರಿ,ಅನುದಾನಿತ,ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕಿಯರು ಒಳಗೊಂಡಿದ್ದು,ರಾಜ್ಯ ಘಟಕದ ಅನುಮೋದನೆಯೊಂದಿಗೆ ನಾವೆಲ್ಲರೂ ತಾಲ್ಲೂಕು ಘಟಕ ರಚನೆ ಮಾಡಿಕೊಂಡಿರುತ್ತೇವೆ.ಇದರಡಿ ನಾವೆಲ್ಲರೂ ಹಲವಾರು ಶೈಕ್ಷಣಿಕ ಸೇವಾ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಾಗುವುದು. ತಾಲ್ಲೂಕು ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ನಮ್ಮ ಸಂಘದ ಸಹಕಾರ ಕೊಡಲು ನಾವು ಸದಾ ಸಿದ್ದರಿರುತ್ತೇವೆ,ಯಾವುದೇ ಕಾರ್ಯಾಗಾರ ಆಯೋಜಿಸಲು ನಮ್ಮನ್ನು ಸಹಾ ಪರಿಗಣಿಸಿ ಅವಕಾಶ ಕಲ್ಪಿಸಿಕೊಡಬೇಕೆಂದು ವಿನಂತಿಸಲಾಯಿತು. ಸಕಾರಾತ್ಮಕವಾಗಿ ಸ್ಪಂದಿಸಿರುವ ಮಾನ್ಯ ಶಿಕ್ಷಣಾಧಿಕಾರಿಗಳು ಸಂಘಟನೆ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿ ನಮ್ಮ ಸಂಪೂರ್ಣ ಬೆಂಬಲ ಪ್ರೋತ್ಸಾಹ ನೀಡುವುದಾಗಿ ತಿಳಿಸಿದ್ದಾರೆ, ಮಾನ್ಯರಿಗೆ ಸಂಘಟನ ಪರವಾಗಿ ಅನಂತ ಧನ್ಯವಾದಗಳನ್ನು ತಿಳಿಸಿದ್ದಾರೆ. ಹಾಗೆಯೇ ಇಂದು ಭಾಗವಹಿಸಿದ್ದ ತಾಲ್ಲೂಕಿನ ಎಲ್ಲಾ ಪದಾಧಿಕಾರಿಗಳಿಗೂ ಸಹಾ ಧನ್ಯವಾದಗಳನ್ನು ಸಲ್ಲಿಸಲಾಗಿದೆ.
ನಮ್ಮ ಸಂಘ ನಮ್ಮ ಹೆಮ್ಮೆ ನಮ್ಮ‌ಸ್ವಾಭಿಮಾನ

ಶಿಕ್ಷಕಿಗೆ ಹಲ್ಲೆ,ಮಾಂಗಲ್ಯ ಸರ ಕಳವು-ಠಾಣೆಗೆ ದೂರು ಸಲ್ಲಿಸಿದ ಶಿಕ್ಷಕಿಯರ ಸಂಘ

ಸಾಗರ ಮಾ.25.ಕಳೆದ ಎರಡು ದಿನಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ ಶ್ರೀಮತಿ ಪ್ರಭಾವತಿ ಬ್ರಾಹ್ಮಣ ಮಂಚಾಲೆ ರವರು ಎಂದಿನಂತೆ ಬೆಳಿಗ್ಗೆ ಶಾಲೆಗೆ ತೆರಳುತ್ತಿರುವ ಸಂದರ್ಭದಲ್ಲಿ ಮಾರ್ಗ ಮದ್ಯದಲ್ಲಿ‌ ಅವರನ್ನು ಅಪರಿಚಿತ ವ್ಯಕ್ತಿಯೊಬ್ಬರು ಏಕಾಏಕಿ ಅಡ್ಡಗಟ್ಟಿ ಹಲ್ಲೆ ಮಾಡಿ ಕೊರಳಲ್ಲಿದ್ದ 50 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಅಪಹರಣ ಮಾಡಿದ್ದಾರೆ.ಈ ಸುದ್ದಿ ತಿಳಿದ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಸಾಗರ ತಾಲೂಕು ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದ ಶಿಕ್ಷಕಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮಹಿಳಾ ಶಿಕ್ಷಕಿಯರ ಸಮಸ್ಯೆಗಳು ಹಾಗೂ ಸುರಕ್ಷಣೆಗಾಗಿ ಹೆಚ್ಚು ಗಮನ ಹರಿಸಲು ತಾಲ್ಲೂಕಿನ
ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಆರಕ್ಷಕ ಠಾಣಾಧಿಕಾರಿಗಳನ್ನೂ ಸಹ ಬೇಟಿ ಮಾಡಿ ಕೂಡಲೇ ಆರೋಪಿಯನ್ನು ಪತ್ತೆಮಾಡಿ ಬಂಧಿಸಬೇಕು ಹಾಗೂ ಅವನಿಂದ ಕದ್ದ ಚಿನ್ನದ ಸರವನ್ನು ವಾಪಸ್ ಕೊಡಿಸಿಕೊಡುವಂತೆ ಮನವಿ ನೀಡಿದ್ದಾರೆ.
ಸಾಗರ ತಾಲ್ಲೂಕು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಈ ಸೇವಾ ಕಾರ್ಯವನ್ನು ಎಲ್ಲರು ಪ್ರಶಂಸಿದ್ದಾರೆ.ಅಲ್ಲಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನಡೆಯನ್ನು ಶ್ಲಾಘಿಸಿ,ಶಿವಮೊಗ್ಗ ಜಿಲ್ಲಾ ಘಟಕ ಹಾಗೂ ರಾಜ್ಯಘಟಕವು ಅಭಿನಂದನೆ ಸಲ್ಲಿಸಿದೆ.

ವಿಶ್ವ ಮಹಿಳಾ ದಿನಾಚರಣೆ-ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಯಶಸ್ವಿ.

ಗುಬ್ಬಿ: ದಿನಾಂಕ 19 ಮಾರ್ಚ್ 2022

ಕರ್ನಾಟಕ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘ (ರಿ) ತಾಲ್ಲೂಕು ಘಟಕ-ಗುಬ್ಬಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸ್ಥಳೀಯ ಸಂಸ್ಥೆ ಗುಬ್ಬಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಗುಬ್ಬಿಶಾಖೆ, ಲಯನ್ಸ್ ಕ್ಲಬ್ ಗುಬ್ಬಿ, ಸುಧೆ ಸೇವಾ ಟ್ರಸ್ಟ್(ರಿ) ತುಮಕೂರು, ಶ್ರೀ ಗುರುರಾಘವೇಂದ್ರ ಚಾರಿಟಬಲ್ ಟ್ರಸ್ಟ್ (ರಿ) ಗುಬ್ಬಿ, ಈ ಎಲ್ಲಾ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆ ಮತ್ತು ಸೇವಾ ತೃಪ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಕರ್ನಾಟಕ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘದ ಗುಬ್ಬಿ ಘಟಕದ ಕಾರ್ಯದರ್ಶಿಗಳಾದ ಶ್ರೀಮತಿ ಅನಿತ ವಿ ಎಸ್ ಅವರು ಎಲ್ಲರನ್ನೂ ಕಾರ್ಯಕ್ರಮಕ್ಕೆ ಸ್ವಾಗತಿಸಿದರು.
ಎಲ್ಲಾ ಗಣ್ಯರು ದೀಪವನ್ನು ಬೆಳಗಿಸಿ ಸಾವಿತ್ರಿಬಾಯಿ ಪುಲೆಯವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮವು ನಾಡಗೀತೆ ಮತ್ತು ರೈತ ಗೀತೆಯೊಂದಿಗೆ ಪ್ರಾರಂಭವಾಯಿತು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದಂತಹ ಸಾಧಕಿಯರನ್ನು ಗುರುತಿಸಿ ಸನ್ಮಾನಿಸಲಾಯಿತು. ಸ್ಪರ್ಧೆಗಳಲ್ಲಿ ಗೆದ್ದವರಿಗೆ ಗಣ್ಯರಿಂದ ಬಹುಮಾನವನ್ನು ವಿತರಿಸಲಾಯಿತು.

ಸಮಾರಂಭದಲ್ಲಿ ಗುಬ್ಬಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಸೋಮಶೇಖರ್ ಸರ್ ಅವರು, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀಯುತ ಸಿದ್ದಲಿಂಗಸ್ವಾಮಿಯವರು, ಅಕ್ಷರ ದಾಸೋಹ ನಿರ್ದೇಶಕರಾದ ಶ್ರೀಯುತ ಯೋಗಾನಂದ ಸರ್ ರವರು, ಕರ್ನಾಟಕ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘ ಗುಬ್ಬಿ ಘಟಕದ ಅಧ್ಯಕ್ಷರಾದ ಶ್ರೀಮತಿ ಎಸ್ ವಿ ಲಕ್ಷ್ಮಿ ರವರು, ಚಿಕ್ಕನಾಯಕನಹಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಶ್ರೀಮತಿ ಯಶೋಧ ರವರು, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀಯುತ ಡಾಕ್ಟರ್ ಮಲ್ಲಪ್ಪ ಬಂಡಿಯವರು, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸ್ಥಳೀಯ ಸಂಸ್ಥೆ ಗುಬ್ಬಿ ಇದರ ಅಧ್ಯಕ್ಷರಾದ ಶ್ರೀಯುತ ಜಿ ಆರ್ ಶಿವಕುಮಾರ್ ಅವರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಗುಬ್ಬಿ ಶಾಖೆಯ ಕಾರ್ಯದರ್ಶಿಯವರಾದ ಶ್ರೀಯುತ ಕಮಲನಾಭ ಚಾರ್ಯರು, ಸುಧಾ ಸೇವಾ ಕಲೆ ಸಾಹಿತ್ಯ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಟ್ರಸ್ಟ್ ತುಮಕೂರು ಇದರ ಅಧ್ಯಕ್ಷರಾದ ಸುಧಾ ರಾಜುರವರು, ಶ್ರೀ ಗುರುರಾಘವೇಂದ್ರ ಚಾರಿಟಬಲ್ ಟ್ರಸ್ಟ್ ಗುಬ್ಬಿ ಇದರ ಅಧ್ಯಕ್ಷರಾದ ಶ್ರೀಯುತ ರಂಗನಾಥ್ ರವರು, ಪುಟ್ಟಣ್ಣನವರು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಉಮೇಶ್ ರವರು, ಭಾರತ್ ಗೌಡ್ಸ್ ಅಂಡ್ ಗೈಡ್ಸ್ ಕಾರ್ಯದರ್ಶಿಯವರಾದ ರಂಗಪ್ಪನವರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾದ ಶ್ರೀಯುತ ಅರುಣ್ ಕುಮಾರ್ ರವರು, ನಿರ್ದೇಶಕಿಯಾದ ಶ್ರೀಮತಿ ಯಶೋದಮ್ಮನವರು, ಕರ್ನಾಟಕ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾದ ಪ್ರವೀಣ ಕುಮಾರಿಯವರು, BRP ಗಳಾದ ಈಶ್ವರಪ್ಪನವರು, ಗಿರೀಶ ರವರು, ವಕೀಲರಾದ ಸದಾಶಿವಯ್ಯನವರು, ಶ್ರೀಯುತ ಅಣ್ಣಪ್ಪ ಸ್ವಾಮಿಯವರು ಪಟ್ಟಣ ಪಂಚಾಯತಿ ಅಧ್ಯಕ್ಷರು ಭಾಗವಹಿಸಿದ್ದರು, ಸಂಘದ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಿರುವ ನೆಚ್ಚಿನ ರಂಗಸ್ವಾಮಿ, ಸುರೇಶಯ್ಯ ಎಂ ಜಿ, ಹಾಗೂ ರವೀಶ್ ರವರು ಸಹಾ ಹಾಜರಿದ್ದರು, ಸಿಆರ್ಪಿ ಗಳಾದ ಚಿಕ್ಕವೀರಯ್ಯ ರವರು, ಶಿಕ್ಷಕರಾದ ಡಿಎಸ್ ಗಂಗಾಧರಯ್ಯ, ರೇಣುಕಾಪ್ರಸಾದ್ ರವರು, ಕರ್ನಾಟಕ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘದ ಗುಬ್ಬಿ ತಾಲೂಕಿನ ಎಲ್ಲಾ ಪದಾಧಿಕಾರಿಗಳು,
ಸದಸ್ಯರು ಹಾಗೂ ಜಿಲ್ಲಾ ಪ್ರತಿನಿಧಿಗಳು ಹಾಜರಿದ್ದರು.ಶ್ರೀಮತಿ ನಾಗರತ್ನಮ್ಮ ಮೇಡಂ ರವರು ಕಾರ್ಯಕ್ರಮಕ್ಕೆ ಹಾಜರಿದ್ದ ಎಲ್ಲರಿಗೂ ವಂದಿಸಿದರು. ಶ್ರೀಮತಿ ಲತಾಮಣಿ ಕೆ ಎಸ್ ರವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.

ಇಡೀ ರಾಜ್ಯಕ್ಕೆ ಮಾದರಿ ಸಂಘವಾಗಿದೆ-ಜಿಲ್ಲಾ ಶಿಕ್ಷಣಾಧಿಕಾರಿ ಹೆಚ್.ಸುಖದೇವ್ ಅಭಿಪ್ರಾಯ.

ರಾಯಚೂರು-ದಿನಾಂಕ 29 /01/ 2022 ರಂದು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ತಾಲೂಕು ಘಟಕ ರಾಯಚೂರು ವತಿಯಿಂದ ಸಾವಿತ್ರಿಬಾಯಿ ಪುಲೆಯವರ ಜನ್ಮ ದಿನಾಚರಣೆಯನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಷ್ಮಿಯಾದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಶಿಕ್ಷಣ ಅಧಿಕಾರಿಗಳಾದ H ಸುಖದೇವ ಸರ್ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಶಿಕ್ಷಣ ಇಲಾಖೆಯಲ್ಲಿ ಏನಾದರೂ ಉತ್ತಮ ಕೆಲಸಗಳು ಆಗಿದ್ದರೆ ಅದಕ್ಕೆ ಕಾರಣ ಶಿಕ್ಷಕಿಯರು. ಉದಾಹರಣೆಗೆ ಎಸ್ಎಸ್ಎಲ್ ಸಿ ಫಲಿತಾಂಶ ಮತ್ತೆ ಬೇರೆ ಬೇರೆ ಕಾರ್ಯಕ್ರಮಗಳ ನಿರ್ವಹಣೆಗೆ ಮುಖ್ಯ ಕಾರಣಿಕರ್ತರು ಶಿಕ್ಷಕಿಯರಾಗಿದ್ದಾರೆ. ಶಿಕ್ಷಕಿಯರು ಶಿಕ್ಷಣ ಇಲಾಖೆಯ ಬಹುದೊಡ್ಡ ಶಕ್ತಿಯಾಗಿದ್ದಾರೆ ರಾಜ್ಯ ಮಟ್ಟದಲ್ಲಿ ಉತ್ತಮ ಕೆಲಸಗಳು ನಮ್ಮ ಜಿಲ್ಲಾ ಸಂಘದ ವತಿಯಿಂದ ನಡೆಯಬೇಕು ಎಂದು ಅವರು ಹೇಳಿದರು.

ಶಿಕ್ಷಕಿಯರು ಅಕ್ಷರದವ್ವನ ಕನಸುಗಳನ್ನು ಕಾಣಬೇಕು. ಸಾವಿತ್ರಿಬಾಯಿ ಪುಲೆಯವರ ಕನಸುಗಳನ್ನು ನನಸು ಮಾಡುವ ಸಂಘ ಇದಾಗಬೇಕು ಅಕ್ಷರದವರ ಆಶಯಗಳನ್ನು ಪ್ರತಿಯೊಂದು ಹೆಣ್ಣು ಮಗುವಿನಲ್ಲಿ ತುಂಬುವಂತಹ ಕೆಲಸವನ್ನು ನಮ್ಮ ಶಿಕ್ಷಕಿಯರು ಮಾಡಬೇಕು ಎಂದು ಹೇಳಿದರು. ಸಂಘವು ಶಿಕ್ಷಕರು ಮಾಡುವ ಉತ್ತಮ ಕೆಲಸಗಳನ್ನು ಗುರುತಿಸಿ ಎಲೆಮರೆ ಕಾಯಿಯಂತೆ ಕಾರ್ಯನಿರ್ವಹಿಸುವ ಶಿಕ್ಷಕರುಗಳನ್ನು ಸನ್ಮಾನಿಸಬೇಕು. ರಾಜ್ಯಕ್ಕೆ ಈ ಸಂಘವು ಮಾದರಿ ಸಂಘವಾಗಿದೆ ಎಂದು ಆಶಯ ವ್ಯಕ್ತಪಡಿಸಿದರು. ಬೇರೆ ಜಿಲ್ಲೆಯಿಂದ ಬಂದ ಶಿಕ್ಷಕಿಯರಿಗೆ ಧೈರ್ಯ ತುಂಬುವ, ಮಾನಸಿಕ ನೆಮ್ಮದಿ ನೀಡುವ, ಅವರ ಸಮಸ್ಯೆಗಳನ್ನು ಬಗೆಹರಿಸುವ ಕೆಲಸಗಳನ್ನು ಸಂಘವು ಮಾಡಬೇಕು ಅವರಿಗೆ ಭರವಸೆಯ ಸಂಘ ವಾಗಬೇಕು ಎಂದು ಹೇಳಿದರು. ಜಿಲ್ಲೆಯಲ್ಲಿ ಬಾಲಕಿಯರಿಗೆ ಬಹಳಷ್ಟು ಸಮಸ್ಯೆಗಳಿಗೆ ಅತಿ ಕನಿಷ್ಠವಾದ ಸಮಸ್ಯೆಗಳನ್ನು ಗುರುತಿಸಿ ನಿಮ್ಮ ಹಂತದಲ್ಲಿ ಸಾಧ್ಯವಾದರೆ ಬಗೆಹರಿಸಿ ಇಲ್ಲವಾದಲ್ಲಿ ಜಿಲ್ಲಾ ಹಂತದ ಗಮನಕ್ಕೆ ತೆಗೆದುಕೊಂಡು ಬನ್ನಿ. ಶಿಕ್ಷಕರ ಸಮಸ್ಯೆ ಇರಲಿ ಅಥವಾ ಬಾಲಕಿಯರ ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಇರಲಿ ನನ್ನ ಗಮನಕ್ಕೆ ತನ್ನಿ ಯಾವತ್ತೂ ನಿಮ್ಮ ಜೊತೆಗೆ ಸುಖದೇವ್ ಇರುತ್ತಾರೆ ಎಂಬ ಆಶ್ವಾಸನೆಯನ್ನು ನೀಡಿದರು. ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಶಿಕ್ಷಣ ಇಲಾಖೆ ನಿಮ್ಮ ಜೊತೆಗೆ ಇರುತ್ತದೆ. ಸಾಧ್ಯವಾದಷ್ಟು ಉತ್ತಮ ಕೆಲಸಗಳನ್ನು ಮಾಡಿ ಒಳ್ಳೆಯ ಹೆಸರನ್ನು ತೆಗೆದುಕೊಂಡು ಬನ್ನಿ ರಾಜ್ಯಕ್ಕೆ ಇಂದು ಇದು ಒಂದು ಮಾದರಿ ಸಂಘವಾಗಿದೆ ಎಂದು ತಮ್ಮ ಮಾತುಗಳ ಮೂಲಕ ಹೇಳಿದರು.ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು ತಾಲ್ಲೂಕಿನ ಪದಾಧಿಕಾರಿಗಳು ಬಾಗವಹಿಸಿದ್ದರು.ಎಲ್ಲರಿಗೂ ಅನಂತ ಧನ್ಯವಾದಗಳನ್ನು ರಾಯಚೂರು ಜಿಲ್ಲಾಧ್ಯಕ್ಷೆ ಶ್ರೀಮತಿ ಛಾಯಾ ಕೋಳೂರು ತಿಳಿಸಿದ್ದಾರೆ.

‘ದಾರ್ಶನಿಕ ದರ್ಶನ’ಪುಸ್ತಕ ಬಿಡುಗಡೆ- ಉಷಾರಾಣಿರವರ ಲೇಖನಕ್ಕೆ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಮೆಚ್ಚುಗೆ.

ಶಿಕಾರಿಪುರ ಜ.27. ಪಟ್ಟಣದಲ್ಲಿ ಸುವ್ವಿ ಪ್ರಕಾಶನ ಹಾಗೂ ಜನಸ್ಪಂದನ ಟ್ರಸ್ಟ್ ವತಿಯಿಂದ ಅಯೋಜಿಸಿದ್ದ ‘ದಾರ್ಶನಿಕರ ದರ್ಶನ’ ಪುಸ್ತಕ ಬಿಡುಗಡೆ ಸಮಾರಂಭ ಆಯೋಜಿಸಲಾಗಿತ್ತು. ಅಧ್ಯಕ್ಷತೆಯನ್ನು ಶ್ರೀ ಜಯಪ್ಪ ನಿವೃತ್ತಿ ಪ್ರಾಂಶುಪಾಲರು ವಹಿಸಿದ್ದು,ಉಪನ್ಯಾಸವನ್ನು ಡಾ.ಮೋಹನ್ ಚಂದ್ರಗುತ್ತಿ,ಸಹ ಪ್ರಧ್ಯಾಪಕರು, ಸಹ್ಯಾದ್ರಿ ಕಾಲೇಜ್ ಶಿವಮೊಗ್ಗ ರವರು ದಾರ್ಶನಿಕ ದರ್ಶನ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು ಸಮಾಜದಲ್ಲಿ ಸಮಾಜದಲ್ಲಿ ಸುಧಾರಣೆ ತರಲು ಶ್ರಮಿಸಿದ ದಾರ್ಶನಿಕರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಅಪಾಯಕಾರಿ ಬೆಳವಣಿಗೆ ಎಂದರು.

ನಮ್ಮ ನಾಡಿನಲ್ಲಿ ಹಲವಾರು ದಾರ್ಶನಿಕರು ಕತ್ತಲೆಯಿಂದ ಬೆಳಕಿನಡೆಗೆ ಜನರನ್ನು ಕೊಂಡೊಯ್ಯಲು ಅಗತ್ಯವಾದ ಸಂದೇಶಗಳನ್ನು ನೀಡಿದ್ದಾರೆ. ಅಧಿಕಾರ ಹಣ ಧರ್ಮದ ಆಧಾರದ ಮೇಲೆ ಸಮಾಜವನ್ನು ಒಡೆಯುವ ಕಾರ್ಯ ಆಗಬಾರದು ಎಂದು ತಿಳಿಸಿದರು. ,ಸಂಪಾದಕರಾದ ಬಂಗಾರಪ್ಪ ಬಿ,ರವರು 32 ಲೇಖಕರಿಂದ ರಚಿತವಾದ ದಾರ್ಶನಿಕ ದರ್ಶನ ಪುಸ್ತಕವನ್ನು ಎಲ್ಲರು ಓದಬೇಕು ಎಂದು ಸಲಹೆ ನೀಡಿ, 32 ಲೇಖಕರಿಗೂ ಕೃತಜ್ಞತೆ ಸಲ್ಲಿಸಿ,ದಾರ್ಶನಿಕರ ತತ್ವ,ವಿಚಾರಗಳನ್ನು ಎಲ್ಲರಿಗು ತಿಳಿಸಬೇಕು, ದಲಿತರ ಹಾಗೂ ಮಹಾನಾಯಕರ ಜಯಂತಿ ಕಾರ್ಯಕ್ರಮಗಳು ಕೇವಲ ಒಂದು ಸಮುದಾಯವನ್ನು ಓಲೈಸಲು ಮಾತ್ರ ಸೀಮಿತವಾಗಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.32 ಲೇಖಕರಲ್ಲಿ ಒಬ್ಬರಾದ ಶ್ರೀಮತಿ ಉಷಾರಾಣಿ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಸಾವಿತ್ರಿಬಾಯಿಪುಲೆ ಸಂಘ,ತಾಲ್ಲೂಕು ಘಟಕ ಶಿಕಾರಿಪುರ ಇವರು ಸಹ ಮಾತೆ ಸಾವಿತ್ರಿಬಾಯಿ ಫುಲೆ ಅವರ ಜೀವನ ಚರಿತ್ರೆ ಶೈಕ್ಷಣಿಕ ಸುಧಾರಣೆಗಳು ಸಾಮಾಜಿಕ ಕಳಕಳಿಯನ್ನು ಕುರಿತಂತೆ ಒಂದು ಅತ್ಯುತ್ತಮ ಲೇಖನವನ್ನು ಬರೆದಿದ್ದು ಅವಕಾಶ ದೊರಕಿಸಿಕೊಟ್ಟವರನ್ನು ಈ ಸಂದರ್ಭದಲ್ಲಿ ಅವರು ನೆನೆದು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ತಾಲ್ಲೂಕು ಘಟಕದ ಕಾರ್ಯದರ್ಶಿಯಾದ ಉಷಾರಾಣಿರವರು ಲೇಖನ‌ ಬರೆದು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಗರಿಮೆ ಹೆಚ್ಚಿಸಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾಧ್ಯಕ್ಷರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಕಾಶಕರಾದ ಸುನಿಲ್ ಕುಮಾರ್ ರವರು , ರಾಘು ಹೆಚ್ ಎಸ್ ಅಧ್ಯಕ್ಷರು ಕ. ಸಾಹಿತ್ಯ ಪರಿಷತ್ ಶಿಕಾರಿಪುರ , ಶ್ರೀ ಪಾಪಯ್ಯ ಅಧ್ಯಕ್ಷರು ತಾಲ್ಲೂಕು ಜಾನಪದ ಪರಿಷತ್ ಶಿಕಾರಿಪುರ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಶ್ರೀ ಮಧುಕೇಶವ ಹೆಚ್ ಡಿ,ಮುಖ್ಯ ಅತಿಥಿ ಗಳಾಗಿ ಹಾಗೂ ಕರ್ನಾಟಕ ಸಾವಿತ್ರಿಬಾಯಿ ಪುಲೆ ಸಂಘದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ರಾಧಾ , ಶಿಕಾರಿಪುರ ತಾಲ್ಲೂಕು ಅಧ್ಯಕ್ಷರಾದ ಲಕ್ಷ್ಮವ್ವ ಎಂ ಸುಣಗಾರ,ಪ್ರಧಾನ ಕಾರ್ಯದರ್ಶಿ ಶ್ರೀಮತಿ ಉಷಾರಾಣಿ ಎಸ್ ವಿ, ಉಪಾಧ್ಯಕ್ಷರಾದ ಶ್ರೀಮತಿ ಮಧುರ, ಗೃಹಲಕ್ಷ್ಮಿ, ಪ್ರತಿಭಾ ಇತರ ಸದಸ್ಯರು ಭಾಗವಹಿಸಿದ್ದರು.

ಶ್ರೀಮತಿ ಉಷಾರಾಣಿ.ತಾಲ್ಲೂಕು ಪ್ರಧಾನ ಕಾರ್ಯದರ್ಶಿ,
ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)
ರಾಜ್ಯಘಟಕ-ಧಾರವಾಡ, ಜಿಲ್ಲಾಘಟಕ- ಶಿವಮೊಗ್ಗ
ತಾಲ್ಲೂಕು ಘ
ಶ್ರೀಮತಿ ಉಷಾರಾಣಿ,ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ(ರಿ). ತಾಲ್ಲೂಕು ಘಟಕ-ಶಿಕಾರಿಪುರ

ಔದಾರ್ಯ ಮೆರೆದು ಮಾದರಿಯಾದ ಸಾವಿತ್ರಿಬಾಯಿ ಫುಲೆ ಸಂಘದ ಪದಾಧಿಕಾರಿ -ಅಭಿನಂದನೆ ಕೋರಿದ ಡಾ.ಲತಾ.ಎಸ್.ಮುಳ್ಳೂರ

ವಿಜಯಪುರ ಜ. 26. ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ಮುಗಿಸಿ ಶಿಕ್ಷಕಿಯರು ರಿಕ್ಷಾದಲ್ಲಿ ಮನೆಗೆ ಮರಳುತ್ತಿರುವಾಗ ದಾರಿ ಮದ್ಯದಲ್ಲಿ ರಿಕ್ಷಾ ಹಾಗೂ ಮೋಟಾರ್ಸೈಕಲ್ ನಡುವೆ ಅಪಘಾತ ಉಂಟಾಗಿದೆ.ಈ ಅವಘಡದಿಂದಾಗಿ 3 ಜನ ಶಿಕ್ಷಕಿಯರು ಗಂಭೀರವಾಗಿ ಘಾಯಗೊಂಡು ನರಳುವುದನ್ನು ನೋಡಿದ ಬಹಳಷ್ಟು ಜನರು ಫೋಟೋ ವಿಡಿಯೋ ತೆಗಿಯುವುದರಲ್ಲಿ ತೊಡಗಿದ್ದರೇ ಹೊರತು ಗಾಯಾಳುಗಳ ನೆರವಿಗೆ ಗಮನ ಕೊಡದೇ ಹೋದರು.


ಆದರೆ ಅದೇ ಸಮಯದಲ್ಲಿ ಬಂದ ವಿಜಯಪುರ ಜಿಲ್ಲೆಯ ಕರ್ನಾಟಕ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ),ತಿಕೋಟಾ ತಾಲೂಕ ಘಟಕದ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಭಾರತಮಾತಾ ಗುಜರೆ ಇವರು ತಕ್ಷಣದಲ್ಲಿ ಗಾಯಗೊಂಡಿದ್ದ ಆ ಮೂರು ಜನ ಶಿಕ್ಷಕಿಯರನ್ನು ಕಾರಿನೊಳಗೆ ಕರೆದುಕೊಂಡು ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಉಪಚಾರ ಮಾಡಿಸಿ ತಮ್ಮ ಸೇವಾ ಔದಾರ್ಯ ಮೆರೆದಿದ್ದಾರೆ. ಹಾಗೂ ಸಂಘದ ಆದರ್ಶಗಳಿಗೆ ಮಾದರಿಯಾಗಿನಡೆದುಕೊಂಡಿ ದ್ದಾರೆ. ತದ ನಂತರದಲ್ಲಿ ಇಲಾಖಾಧಿಕಾರಿಗಳು, ಸಂಘಟನೆಗಳ ನಾಯಕರುಗಳು ಸಹಾ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ ಎನ್ನಲಾಗಿದೆ. ಈ ಸುದ್ದಿ ತಿಳಿದ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯ ಘಟಕದ ಸಂಸ್ಥಾಪಕ ರಾಜ್ಠಾಧ್ಯಕ್ಷರು ಡಾ.ಲತಾ ಮುಳ್ಳೂರ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಶ್ರೀಮತಿ ಜ್ಯೋತಿ ಎಚ್ ,ವಿಜಯಪುರ ಜಿಲ್ಲಾ ಅಧ್ಯಕ್ಷರು ಶ್ರೀಮತಿ A. B. ನಾಯಕ. ಹಾಗೂ ರಾಜ್ಯದಿಂದ ಹಲವಾರು ಪದಾಧಿಕಾರಿಗಳು ತಿಕೋಟಾ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಭಾರತಮಾತಾ ಗುಜರೆ ರವರ ಸೇವಾ ಕಾರ್ಯ ಮೆಚ್ಚಿ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ. ಇದೇ ಸಂದರ್ಬದಲ್ಲಿ ಇಂಡಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಕು.ಎಂ.ಸಿ.ಗಿರಣಿ ವಡ್ಡರ ರವರು ಸಹಾ ಕಳೆದ ಬಾರಿ ದ್ವಿಚಕ್ರ ವಾಹನ ಉರುಳಿಬಿದ್ದು ಗಾಯಗೊಂಡಿದ್ದ ವ್ಯಕ್ತಿಗೆ ಉಪಚರಿಸಿದ್ದ ಕ್ಷಣಗಳನ್ನು ನೆನಯಬಹುದಾಗಿದೆ.

ಅಕ್ಷರದವ್ವರ ದಿನಾಚರಣೆ ಆಚರಿಸಿದ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ

ತುಮಕೂರು ಜ.27 ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ. ಜಿಲ್ಲಾಘಟಕ- ತುಮಕೂರು ಹಾಗೂ ತಾಲೂಕು ಘಟಕ-ತುಮಕೂರು ಇವರ ಸಹಯೋಗ ದೊಂದಿಗೆ ದಿನಾಂಕ 26/01/2022 ರಂದು ಅಪರಾಹ್ನ ಆರ್ಯಬಾಲಿಕ ಪ್ರಾಥಮಿಕ ಪಾಠ ಶಾಲೆ ಯಲ್ಲಿ ಮಾತೆ ಸಾವಿತ್ರಿಬಾಯಿ ಫುಲೆ ಹಾಗೂ ಫಾತಿಮಾ ಶೇಕ್ ರವರ ಜನ್ಮ ದಿನಾಚರಣೆ ಯನ್ನು ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಜಿಲ್ಲಾಧ್ಯಕ್ಷರಾದ ಶ್ರೀಮತಿ ಅನುಸೂಯ ದೇವಿ ಅವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ತುಮಕೂರು ತಾಲೂಕ್ ತಹಶಿಲ್ದಾರವರು ಹಾಗೂ ತಾಲ್ಲೂಕು ದಂಡಾಧಿಕಾರಿ ಗಳಾದ ಶ್ರೀ ಮೋಹನ್ ಕುಮಾರ್ ರವರು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತುಮಕೂರು ಜಿಲ್ಲಾಧ್ಯಕ್ಷರಾದ ನರಸಿಂಹರಾಜು ರವರು ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವಿಶೇಷ ಅತಿಥಿಗಳಾಗಿ ಉಪನ್ಯಾಸ ನೀಡಲು ಸಾಹಿತಿಗಳಾದ ಶ್ರೀಮತಿ ಶೈಲಾ ನಾಗರಾಜು ರವರು ಸಹ ಭಾಗವಹಿಸದ್ದರು. ನಿರೂಪಣೆಯನ್ನು ಶ್ರೀಮತಿ ಪುಷ್ಪ ತಿಪಟೂರು ಇವರು ನಡೆಸಿಕೊಟ್ಟರು.ಶ್ರೀಮತಿ ಸುವರ್ಣ ಚಿ.ನಾ.ಹಳ್ಳಿ ಪ್ರಾರ್ಥನೆ ಸಲ್ಲಿಸಿದರೆ, ಎಲ್ಲರನ್ನೂ ತುಮಕೂರು ತಾಲೂಕ್ ಘಟಕದ ಅಧ್ಯಕ್ಷೆ ಶ್ರೀಮತಿ ಸಿದ್ದಮ್ಮನವರು ಸ್ವಾಗತಿಸಿದರು.ಮಾತೆ ಸಾವಿತ್ರಿ ಬಾಯಿ ಫುಲೆ ಹಾಗೂ ಫಾತಿಮಾ ಶೇಕ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು,ತಾಲೂಕ್ ದಂಡಾಧಿಕಾರಿಗಳಾದ ಶ್ರೀ ಮೋಹನ್ ಕುಮಾರ್ ಅವರು ಮಾತನಾಡಿ ಸಾವಿತ್ರಿ ಬಾಯಿ ಫುಲೆ ಹಾಗೂ ಫಾತಿಮಾ ಶೇಕ್ ಅವರ ಜೀವನ ಆದರ್ಶ ಗುಣಗಳನ್ನು ಸ್ಮರಿಸಿದರು,ಎಲ್ಲರೂ ಅವರ ಆದರ್ಶಗಳನ್ನು ಅನುಸರಿಸುತ್ತ ಸಾಗಬೇಕಿದೆ ಎಂದು,ಸಂಘಕ್ಕೆ ಸಹಕಾರ ನೀಡುವ ಆಶಯ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾದ ನರಸಿಂಹರಾಜು ರವರು ಮಾತನಾಡಿ ಸಾವಿತ್ರಿ ಬಾಯಿ ಫುಲೆ ಸಂಘಕ್ಕೆ ನಮ್ಮ ಸಂಪೂರ್ಣ ಬೆಂಬಲ ಹಾಗೂ ಸಹಕಾರ ಇದೆ ಎಂಬ ಆಶಯ ಹಾಗೂ ಭರವಸೆ ನೀಡಿದರು ಜೊತೆಗೆ ಶಿಕ್ಷಕಿಯರ ಕುಂದುಕೊರತೆಗಳ ಕುರಿತು ನೇರವಾಗಿ ಬಗೆಹರಿಸುವುದಾಗಿ ಭರವಸೆ ನೀಡಿದರು. ಅನಂತರ ಶ್ರೀಮತಿ ಶೈಲಾ ನಾಗರಾಜು ಅವರಿಂದ ಮಾತೆ ಸಾವಿತ್ರಿ ಬಾಯಿ ಫುಲೆ ಅವ್ರ ಕುರಿತಂತೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಬಹಳ ಆಸಕ್ತಿದಾಯಕ ವಾಗಿತ್ತು.ಫುಲೆ ಅವರ ಬಾಲ್ಯ ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಅವರ ಹೋರಾಟ ಸಾಧನೆ ಗಳನ್ನು ತಿಳಿಸಿಕೊಟ್ಟರು.ತದ ನಂತರದಲ್ಲಿ ತುಮಕೂರು ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಆಗಮಿಸಿದ್ದ ನಿವೃತ್ತ ಶಿಕ್ಷಕರನ್ನು ಸನ್ಮನಿಸಲಾಯಿತು. ಉರ್ದು ಮಾದ್ಯಮದ ಬೋಧನಾ ಶಿಕ್ಷಕಿಯರನ್ನು ಈ ಸಂದರ್ಭದಲ್ಲಿ ಸನ್ಮಾನಿಲಾಯಿತು.ಈ ಕಾರ್ಯಕ್ರಮಕ್ಕೆ ಸಾವಿತ್ರಿ ಬಾಯಿ ಫುಲೆ ಜಿಲ್ಲಾ ಸಂಘದ ಅಧ್ಯಕ್ಷ ರಾದ ಶ್ರೀಮತಿ ಅನುಸೂಯ ದೇವಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಪ್ರವೀಣ ಕುಮಾರಿ ಹಾಗೂ ಜಿಲ್ಲಾ ಖಜಾಂಚಿಗಳಾದ ಡಾ.ಸೌಮ್ಯರವರು ಹಾಗೂ ಜಿಲ್ಲಾಪದಾಧಿಕಾರಿಗಳಾದ ವನಿತ, ಸೂರ್ಯಕಲಾ,ಸುಜಾತ ಇತರರು,

ತುಮಕೂರು ತಾಲ್ಲೂಕು ಘಟಕದಿಂದ ಸಿದ್ದಮ್ಮ,ಲತಾ,ಯಶೋದ,ಮಂಗಳಮ್ಮ,ಗೀತಾ, ರಾಧ,ಹೇಮಾ,ಗಂಗಮ್ಮ,ಭಾಗ್ಯಮ್ಮ ,ಬಾಗ್ಯಶ್ರೀ, ಲಕ್ಷ್ಮೀ,ನಜರತ್,ಉಮಾ,ಸುಮಿತ್ರಾ ಇತರರು, ಕುಣಿಗಲ್ ಘಟಕದಿಂದ ಗಂಗಮ್ಮ, ಗೀತಾಂಜಲಿ, ಶಶಿಕಲಾ ಇತರರು, ತುರುವೇಕೆರೆ ಘಟಕದಿಂದ ವನಜಾಕ್ಷಮ್ಮ,ನೇತ್ರಾವತಿ, ಪೂರ್ಣಮ್ಮ ಇತರರು, ತಿಪಟೂರು ಘಟಕದಿಂದ ವನಿತಾ, ಪುಷ್ಪ, ಮುಕ್ತಾಮಣಿ,ಸುಧಾಮಣಿ ಚಂದ್ರಮ್ಮ ಇತರರು,
ಚಿ.ನಾ.ಹಳ್ಳಿ ಘಟಕದಿಂದ ಯಶೋದ,ಸುವರ್ಣ ಹಾಗೂ ಇತರೆ ಪದಾಧಿಕಾರಿಗಳು ಬಾಗವಹಿಸಿದ್ದರು.