‘ದಾರ್ಶನಿಕ ದರ್ಶನ’ಪುಸ್ತಕ ಬಿಡುಗಡೆ- ಉಷಾರಾಣಿರವರ ಲೇಖನಕ್ಕೆ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಮೆಚ್ಚುಗೆ.

ಶಿಕಾರಿಪುರ ಜ.27. ಪಟ್ಟಣದಲ್ಲಿ ಸುವ್ವಿ ಪ್ರಕಾಶನ ಹಾಗೂ ಜನಸ್ಪಂದನ ಟ್ರಸ್ಟ್ ವತಿಯಿಂದ ಅಯೋಜಿಸಿದ್ದ ‘ದಾರ್ಶನಿಕರ ದರ್ಶನ’ ಪುಸ್ತಕ ಬಿಡುಗಡೆ ಸಮಾರಂಭ ಆಯೋಜಿಸಲಾಗಿತ್ತು. ಅಧ್ಯಕ್ಷತೆಯನ್ನು ಶ್ರೀ ಜಯಪ್ಪ ನಿವೃತ್ತಿ ಪ್ರಾಂಶುಪಾಲರು ವಹಿಸಿದ್ದು,ಉಪನ್ಯಾಸವನ್ನು ಡಾ.ಮೋಹನ್ ಚಂದ್ರಗುತ್ತಿ,ಸಹ ಪ್ರಧ್ಯಾಪಕರು, ಸಹ್ಯಾದ್ರಿ ಕಾಲೇಜ್ ಶಿವಮೊಗ್ಗ ರವರು ದಾರ್ಶನಿಕ ದರ್ಶನ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು ಸಮಾಜದಲ್ಲಿ ಸಮಾಜದಲ್ಲಿ ಸುಧಾರಣೆ ತರಲು ಶ್ರಮಿಸಿದ ದಾರ್ಶನಿಕರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಅಪಾಯಕಾರಿ ಬೆಳವಣಿಗೆ ಎಂದರು.

ನಮ್ಮ ನಾಡಿನಲ್ಲಿ ಹಲವಾರು ದಾರ್ಶನಿಕರು ಕತ್ತಲೆಯಿಂದ ಬೆಳಕಿನಡೆಗೆ ಜನರನ್ನು ಕೊಂಡೊಯ್ಯಲು ಅಗತ್ಯವಾದ ಸಂದೇಶಗಳನ್ನು ನೀಡಿದ್ದಾರೆ. ಅಧಿಕಾರ ಹಣ ಧರ್ಮದ ಆಧಾರದ ಮೇಲೆ ಸಮಾಜವನ್ನು ಒಡೆಯುವ ಕಾರ್ಯ ಆಗಬಾರದು ಎಂದು ತಿಳಿಸಿದರು. ,ಸಂಪಾದಕರಾದ ಬಂಗಾರಪ್ಪ ಬಿ,ರವರು 32 ಲೇಖಕರಿಂದ ರಚಿತವಾದ ದಾರ್ಶನಿಕ ದರ್ಶನ ಪುಸ್ತಕವನ್ನು ಎಲ್ಲರು ಓದಬೇಕು ಎಂದು ಸಲಹೆ ನೀಡಿ, 32 ಲೇಖಕರಿಗೂ ಕೃತಜ್ಞತೆ ಸಲ್ಲಿಸಿ,ದಾರ್ಶನಿಕರ ತತ್ವ,ವಿಚಾರಗಳನ್ನು ಎಲ್ಲರಿಗು ತಿಳಿಸಬೇಕು, ದಲಿತರ ಹಾಗೂ ಮಹಾನಾಯಕರ ಜಯಂತಿ ಕಾರ್ಯಕ್ರಮಗಳು ಕೇವಲ ಒಂದು ಸಮುದಾಯವನ್ನು ಓಲೈಸಲು ಮಾತ್ರ ಸೀಮಿತವಾಗಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.32 ಲೇಖಕರಲ್ಲಿ ಒಬ್ಬರಾದ ಶ್ರೀಮತಿ ಉಷಾರಾಣಿ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಸಾವಿತ್ರಿಬಾಯಿಪುಲೆ ಸಂಘ,ತಾಲ್ಲೂಕು ಘಟಕ ಶಿಕಾರಿಪುರ ಇವರು ಸಹ ಮಾತೆ ಸಾವಿತ್ರಿಬಾಯಿ ಫುಲೆ ಅವರ ಜೀವನ ಚರಿತ್ರೆ ಶೈಕ್ಷಣಿಕ ಸುಧಾರಣೆಗಳು ಸಾಮಾಜಿಕ ಕಳಕಳಿಯನ್ನು ಕುರಿತಂತೆ ಒಂದು ಅತ್ಯುತ್ತಮ ಲೇಖನವನ್ನು ಬರೆದಿದ್ದು ಅವಕಾಶ ದೊರಕಿಸಿಕೊಟ್ಟವರನ್ನು ಈ ಸಂದರ್ಭದಲ್ಲಿ ಅವರು ನೆನೆದು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ತಾಲ್ಲೂಕು ಘಟಕದ ಕಾರ್ಯದರ್ಶಿಯಾದ ಉಷಾರಾಣಿರವರು ಲೇಖನ‌ ಬರೆದು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಗರಿಮೆ ಹೆಚ್ಚಿಸಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾಧ್ಯಕ್ಷರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಕಾಶಕರಾದ ಸುನಿಲ್ ಕುಮಾರ್ ರವರು , ರಾಘು ಹೆಚ್ ಎಸ್ ಅಧ್ಯಕ್ಷರು ಕ. ಸಾಹಿತ್ಯ ಪರಿಷತ್ ಶಿಕಾರಿಪುರ , ಶ್ರೀ ಪಾಪಯ್ಯ ಅಧ್ಯಕ್ಷರು ತಾಲ್ಲೂಕು ಜಾನಪದ ಪರಿಷತ್ ಶಿಕಾರಿಪುರ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಶ್ರೀ ಮಧುಕೇಶವ ಹೆಚ್ ಡಿ,ಮುಖ್ಯ ಅತಿಥಿ ಗಳಾಗಿ ಹಾಗೂ ಕರ್ನಾಟಕ ಸಾವಿತ್ರಿಬಾಯಿ ಪುಲೆ ಸಂಘದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ರಾಧಾ , ಶಿಕಾರಿಪುರ ತಾಲ್ಲೂಕು ಅಧ್ಯಕ್ಷರಾದ ಲಕ್ಷ್ಮವ್ವ ಎಂ ಸುಣಗಾರ,ಪ್ರಧಾನ ಕಾರ್ಯದರ್ಶಿ ಶ್ರೀಮತಿ ಉಷಾರಾಣಿ ಎಸ್ ವಿ, ಉಪಾಧ್ಯಕ್ಷರಾದ ಶ್ರೀಮತಿ ಮಧುರ, ಗೃಹಲಕ್ಷ್ಮಿ, ಪ್ರತಿಭಾ ಇತರ ಸದಸ್ಯರು ಭಾಗವಹಿಸಿದ್ದರು.

ಶ್ರೀಮತಿ ಉಷಾರಾಣಿ.ತಾಲ್ಲೂಕು ಪ್ರಧಾನ ಕಾರ್ಯದರ್ಶಿ,
ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)
ರಾಜ್ಯಘಟಕ-ಧಾರವಾಡ, ಜಿಲ್ಲಾಘಟಕ- ಶಿವಮೊಗ್ಗ
ತಾಲ್ಲೂಕು ಘ
ಶ್ರೀಮತಿ ಉಷಾರಾಣಿ,ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ(ರಿ). ತಾಲ್ಲೂಕು ಘಟಕ-ಶಿಕಾರಿಪುರ

ಔದಾರ್ಯ ಮೆರೆದು ಮಾದರಿಯಾದ ಸಾವಿತ್ರಿಬಾಯಿ ಫುಲೆ ಸಂಘದ ಪದಾಧಿಕಾರಿ -ಅಭಿನಂದನೆ ಕೋರಿದ ಡಾ.ಲತಾ.ಎಸ್.ಮುಳ್ಳೂರ

ವಿಜಯಪುರ ಜ. 26. ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ಮುಗಿಸಿ ಶಿಕ್ಷಕಿಯರು ರಿಕ್ಷಾದಲ್ಲಿ ಮನೆಗೆ ಮರಳುತ್ತಿರುವಾಗ ದಾರಿ ಮದ್ಯದಲ್ಲಿ ರಿಕ್ಷಾ ಹಾಗೂ ಮೋಟಾರ್ಸೈಕಲ್ ನಡುವೆ ಅಪಘಾತ ಉಂಟಾಗಿದೆ.ಈ ಅವಘಡದಿಂದಾಗಿ 3 ಜನ ಶಿಕ್ಷಕಿಯರು ಗಂಭೀರವಾಗಿ ಘಾಯಗೊಂಡು ನರಳುವುದನ್ನು ನೋಡಿದ ಬಹಳಷ್ಟು ಜನರು ಫೋಟೋ ವಿಡಿಯೋ ತೆಗಿಯುವುದರಲ್ಲಿ ತೊಡಗಿದ್ದರೇ ಹೊರತು ಗಾಯಾಳುಗಳ ನೆರವಿಗೆ ಗಮನ ಕೊಡದೇ ಹೋದರು.


ಆದರೆ ಅದೇ ಸಮಯದಲ್ಲಿ ಬಂದ ವಿಜಯಪುರ ಜಿಲ್ಲೆಯ ಕರ್ನಾಟಕ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ),ತಿಕೋಟಾ ತಾಲೂಕ ಘಟಕದ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಭಾರತಮಾತಾ ಗುಜರೆ ಇವರು ತಕ್ಷಣದಲ್ಲಿ ಗಾಯಗೊಂಡಿದ್ದ ಆ ಮೂರು ಜನ ಶಿಕ್ಷಕಿಯರನ್ನು ಕಾರಿನೊಳಗೆ ಕರೆದುಕೊಂಡು ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಉಪಚಾರ ಮಾಡಿಸಿ ತಮ್ಮ ಸೇವಾ ಔದಾರ್ಯ ಮೆರೆದಿದ್ದಾರೆ. ಹಾಗೂ ಸಂಘದ ಆದರ್ಶಗಳಿಗೆ ಮಾದರಿಯಾಗಿನಡೆದುಕೊಂಡಿ ದ್ದಾರೆ. ತದ ನಂತರದಲ್ಲಿ ಇಲಾಖಾಧಿಕಾರಿಗಳು, ಸಂಘಟನೆಗಳ ನಾಯಕರುಗಳು ಸಹಾ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ ಎನ್ನಲಾಗಿದೆ. ಈ ಸುದ್ದಿ ತಿಳಿದ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯ ಘಟಕದ ಸಂಸ್ಥಾಪಕ ರಾಜ್ಠಾಧ್ಯಕ್ಷರು ಡಾ.ಲತಾ ಮುಳ್ಳೂರ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಶ್ರೀಮತಿ ಜ್ಯೋತಿ ಎಚ್ ,ವಿಜಯಪುರ ಜಿಲ್ಲಾ ಅಧ್ಯಕ್ಷರು ಶ್ರೀಮತಿ A. B. ನಾಯಕ. ಹಾಗೂ ರಾಜ್ಯದಿಂದ ಹಲವಾರು ಪದಾಧಿಕಾರಿಗಳು ತಿಕೋಟಾ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಭಾರತಮಾತಾ ಗುಜರೆ ರವರ ಸೇವಾ ಕಾರ್ಯ ಮೆಚ್ಚಿ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ. ಇದೇ ಸಂದರ್ಬದಲ್ಲಿ ಇಂಡಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಕು.ಎಂ.ಸಿ.ಗಿರಣಿ ವಡ್ಡರ ರವರು ಸಹಾ ಕಳೆದ ಬಾರಿ ದ್ವಿಚಕ್ರ ವಾಹನ ಉರುಳಿಬಿದ್ದು ಗಾಯಗೊಂಡಿದ್ದ ವ್ಯಕ್ತಿಗೆ ಉಪಚರಿಸಿದ್ದ ಕ್ಷಣಗಳನ್ನು ನೆನಯಬಹುದಾಗಿದೆ.

ಅಕ್ಷರದವ್ವರ ದಿನಾಚರಣೆ ಆಚರಿಸಿದ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ

ತುಮಕೂರು ಜ.27 ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ. ಜಿಲ್ಲಾಘಟಕ- ತುಮಕೂರು ಹಾಗೂ ತಾಲೂಕು ಘಟಕ-ತುಮಕೂರು ಇವರ ಸಹಯೋಗ ದೊಂದಿಗೆ ದಿನಾಂಕ 26/01/2022 ರಂದು ಅಪರಾಹ್ನ ಆರ್ಯಬಾಲಿಕ ಪ್ರಾಥಮಿಕ ಪಾಠ ಶಾಲೆ ಯಲ್ಲಿ ಮಾತೆ ಸಾವಿತ್ರಿಬಾಯಿ ಫುಲೆ ಹಾಗೂ ಫಾತಿಮಾ ಶೇಕ್ ರವರ ಜನ್ಮ ದಿನಾಚರಣೆ ಯನ್ನು ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಜಿಲ್ಲಾಧ್ಯಕ್ಷರಾದ ಶ್ರೀಮತಿ ಅನುಸೂಯ ದೇವಿ ಅವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ತುಮಕೂರು ತಾಲೂಕ್ ತಹಶಿಲ್ದಾರವರು ಹಾಗೂ ತಾಲ್ಲೂಕು ದಂಡಾಧಿಕಾರಿ ಗಳಾದ ಶ್ರೀ ಮೋಹನ್ ಕುಮಾರ್ ರವರು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತುಮಕೂರು ಜಿಲ್ಲಾಧ್ಯಕ್ಷರಾದ ನರಸಿಂಹರಾಜು ರವರು ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವಿಶೇಷ ಅತಿಥಿಗಳಾಗಿ ಉಪನ್ಯಾಸ ನೀಡಲು ಸಾಹಿತಿಗಳಾದ ಶ್ರೀಮತಿ ಶೈಲಾ ನಾಗರಾಜು ರವರು ಸಹ ಭಾಗವಹಿಸದ್ದರು. ನಿರೂಪಣೆಯನ್ನು ಶ್ರೀಮತಿ ಪುಷ್ಪ ತಿಪಟೂರು ಇವರು ನಡೆಸಿಕೊಟ್ಟರು.ಶ್ರೀಮತಿ ಸುವರ್ಣ ಚಿ.ನಾ.ಹಳ್ಳಿ ಪ್ರಾರ್ಥನೆ ಸಲ್ಲಿಸಿದರೆ, ಎಲ್ಲರನ್ನೂ ತುಮಕೂರು ತಾಲೂಕ್ ಘಟಕದ ಅಧ್ಯಕ್ಷೆ ಶ್ರೀಮತಿ ಸಿದ್ದಮ್ಮನವರು ಸ್ವಾಗತಿಸಿದರು.ಮಾತೆ ಸಾವಿತ್ರಿ ಬಾಯಿ ಫುಲೆ ಹಾಗೂ ಫಾತಿಮಾ ಶೇಕ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು,ತಾಲೂಕ್ ದಂಡಾಧಿಕಾರಿಗಳಾದ ಶ್ರೀ ಮೋಹನ್ ಕುಮಾರ್ ಅವರು ಮಾತನಾಡಿ ಸಾವಿತ್ರಿ ಬಾಯಿ ಫುಲೆ ಹಾಗೂ ಫಾತಿಮಾ ಶೇಕ್ ಅವರ ಜೀವನ ಆದರ್ಶ ಗುಣಗಳನ್ನು ಸ್ಮರಿಸಿದರು,ಎಲ್ಲರೂ ಅವರ ಆದರ್ಶಗಳನ್ನು ಅನುಸರಿಸುತ್ತ ಸಾಗಬೇಕಿದೆ ಎಂದು,ಸಂಘಕ್ಕೆ ಸಹಕಾರ ನೀಡುವ ಆಶಯ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾದ ನರಸಿಂಹರಾಜು ರವರು ಮಾತನಾಡಿ ಸಾವಿತ್ರಿ ಬಾಯಿ ಫುಲೆ ಸಂಘಕ್ಕೆ ನಮ್ಮ ಸಂಪೂರ್ಣ ಬೆಂಬಲ ಹಾಗೂ ಸಹಕಾರ ಇದೆ ಎಂಬ ಆಶಯ ಹಾಗೂ ಭರವಸೆ ನೀಡಿದರು ಜೊತೆಗೆ ಶಿಕ್ಷಕಿಯರ ಕುಂದುಕೊರತೆಗಳ ಕುರಿತು ನೇರವಾಗಿ ಬಗೆಹರಿಸುವುದಾಗಿ ಭರವಸೆ ನೀಡಿದರು. ಅನಂತರ ಶ್ರೀಮತಿ ಶೈಲಾ ನಾಗರಾಜು ಅವರಿಂದ ಮಾತೆ ಸಾವಿತ್ರಿ ಬಾಯಿ ಫುಲೆ ಅವ್ರ ಕುರಿತಂತೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಬಹಳ ಆಸಕ್ತಿದಾಯಕ ವಾಗಿತ್ತು.ಫುಲೆ ಅವರ ಬಾಲ್ಯ ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಅವರ ಹೋರಾಟ ಸಾಧನೆ ಗಳನ್ನು ತಿಳಿಸಿಕೊಟ್ಟರು.ತದ ನಂತರದಲ್ಲಿ ತುಮಕೂರು ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಆಗಮಿಸಿದ್ದ ನಿವೃತ್ತ ಶಿಕ್ಷಕರನ್ನು ಸನ್ಮನಿಸಲಾಯಿತು. ಉರ್ದು ಮಾದ್ಯಮದ ಬೋಧನಾ ಶಿಕ್ಷಕಿಯರನ್ನು ಈ ಸಂದರ್ಭದಲ್ಲಿ ಸನ್ಮಾನಿಲಾಯಿತು.ಈ ಕಾರ್ಯಕ್ರಮಕ್ಕೆ ಸಾವಿತ್ರಿ ಬಾಯಿ ಫುಲೆ ಜಿಲ್ಲಾ ಸಂಘದ ಅಧ್ಯಕ್ಷ ರಾದ ಶ್ರೀಮತಿ ಅನುಸೂಯ ದೇವಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಪ್ರವೀಣ ಕುಮಾರಿ ಹಾಗೂ ಜಿಲ್ಲಾ ಖಜಾಂಚಿಗಳಾದ ಡಾ.ಸೌಮ್ಯರವರು ಹಾಗೂ ಜಿಲ್ಲಾಪದಾಧಿಕಾರಿಗಳಾದ ವನಿತ, ಸೂರ್ಯಕಲಾ,ಸುಜಾತ ಇತರರು,

ತುಮಕೂರು ತಾಲ್ಲೂಕು ಘಟಕದಿಂದ ಸಿದ್ದಮ್ಮ,ಲತಾ,ಯಶೋದ,ಮಂಗಳಮ್ಮ,ಗೀತಾ, ರಾಧ,ಹೇಮಾ,ಗಂಗಮ್ಮ,ಭಾಗ್ಯಮ್ಮ ,ಬಾಗ್ಯಶ್ರೀ, ಲಕ್ಷ್ಮೀ,ನಜರತ್,ಉಮಾ,ಸುಮಿತ್ರಾ ಇತರರು, ಕುಣಿಗಲ್ ಘಟಕದಿಂದ ಗಂಗಮ್ಮ, ಗೀತಾಂಜಲಿ, ಶಶಿಕಲಾ ಇತರರು, ತುರುವೇಕೆರೆ ಘಟಕದಿಂದ ವನಜಾಕ್ಷಮ್ಮ,ನೇತ್ರಾವತಿ, ಪೂರ್ಣಮ್ಮ ಇತರರು, ತಿಪಟೂರು ಘಟಕದಿಂದ ವನಿತಾ, ಪುಷ್ಪ, ಮುಕ್ತಾಮಣಿ,ಸುಧಾಮಣಿ ಚಂದ್ರಮ್ಮ ಇತರರು,
ಚಿ.ನಾ.ಹಳ್ಳಿ ಘಟಕದಿಂದ ಯಶೋದ,ಸುವರ್ಣ ಹಾಗೂ ಇತರೆ ಪದಾಧಿಕಾರಿಗಳು ಬಾಗವಹಿಸಿದ್ದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಿಗೆ ಫುಲೆ ಶಿಕ್ಷಕಿಯರಿಂದ ಸನ್ಮಾನ

ತುಮಕೂರು,ಡಿ.10-ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ರಾಜ್ಯ ಘಟಕ (ರಿ) ಧಾರವಾಡ. ಜಿಲ್ಲಾ ಘಟಕ ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲಾ ಘಟಕಗಳ ವತಿಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೆ ನೂತನವಾಗಿ ಆಯ್ಕೆಯಾಗಿರುವ ಕೆ. ಎಸ್. ಸಿದ್ದಲಿಂಗಪ್ಪನವರುಗಳಿಗೆ ಮತ್ತು ತಾಲ್ಲೂಕು ಅಧ್ಯಕ್ಷರಾದ ಶಿವಕುಮಾರ್ ರವರಿಗೆ ಸಾವಿತ್ರಿಭಾಯಿ ಪುಲೆ ಯವರ ಭಾವ ಚಿತ್ರ ನೀಡಿ ಗೌರವಿಸಿ ಅಭಿನಂದಿಸಿ,ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಅನುಸೂಯ ದೇವಿ,ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಜಿ. ಎಲ್. ರಾಧಮ್ಮ ರವರು ತುಮಕೂರು ತಾಲೂಕು ಅಧ್ಯಕ್ಷರಾದ ಶ್ರೀಮತಿ ಸಿದ್ದಮ್ಮ ಹಾಗೂ ಪದಾಧಿಕಾರಿಗಳಾದ, ಮಂಗಳಮ್ಮ, ಲಕ್ಷ್ಮಿ ದೇವಮ್ಮ, ಉಮಾವತಿ, ಕನಕರತ್ನ,ಲಲಿತಮ್ಮ, ಕವಿತಾ, ನಾಗರತ್ನ, ಡಿ :ಶಶಿಕಲಾ, ಸೌಮ್ಯ, ಕೊರಟಗೆರೆ ತಾ :ಅಧ್ಯಕ್ಷರಾದ ಶ್ರೀ ಮತಿ ಸುಜಾತಾ ರವರು ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಗುಬ್ಬಿ ತಾಲ್ಲೂಕಿನ ಶ್ರೀ ರಂಗಸ್ವಾಮಿ ರವರು ಹಾಗೂ ಶ್ರೀ ರವೀಶ್ ರವರು ಸಹಾ ಹಾಜರಿದ್ದರು

ನಿವೃತ್ತಿ ಶಿಕ್ಷಕರಿಗೆ ಗೌರವದಿ ಬೀಳ್ಕೊಟ್ಟ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ

ದಿನಾಂಕ:-27/11/2021 ರಂದು ಮಂಡಘಟ್ಟ ಕ್ಲಸ್ಟರಿನ ಸ.ಕಿ.ಪ್ರಾ.ಸೂಡೂರು ಶಾಲೆಯಲ್ಲಿನಿವೃತ್ತಿ ಹೊಂದಿದ್ದ ಶ್ರೀ ವಿರೂಪಾಕ್ಷಪ್ಪ ಸರ್ ಅವರನ್ನು ನಮ್ಮ ಶಿವಮೊಗ್ಗ ಜಿಲ್ಲಾ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಮತಿ ರಾಧಾ ಅವರು ಜಿಲ್ಲಾ ಸಹಕಾರ್ಯದರ್ಶಿಯಾದ ಶ್ರೀಮತಿ ಸುಮಂಗಲಾ ನಾಯ್ಕ ಅವರು ಶಿವಮೊಗ್ಗ ತಾಲ್ಲೂಕು ಸಂಘದ ಅಧ್ಯಕ್ಷರಾದ ಶ್ರೀಮತಿ ಶಾಹಿನಬಾನು ಹಾಗೂ ಗೌರವಾಧ್ಯಕ್ಷರಾದ ಲಕ್ಷ್ಮೀಯವರು ಸೇರಿ ಸನ್ಮಾನಿಸಿದರು.


ಶ್ರೀ ವಿರೂಪಾಕ್ಷಪ್ಪ ಸರ್ ರವರು ಸೂಡೂರು ಸ. ಕಿ.ಪ್ರಾ.ಶಾಲೆಯಲ್ಲಿ ಸುಮಾರು 20 ವರ್ಷಗಳಕಾಲ ಸುದೀರ್ಘ ಸೇವೆ ಸಲ್ಲಿಸಿ ಈಗ ವಯೋ ನಿವೃತ್ತಿ ಹೊಂದಿದ್ದಾರೆ. ಇವರು ವೃತ್ತಿ ಜೀವನದಲ್ಲಿಯಾವಾಗಲೂ ಹಸನ್ಮುಖಿಯಾಗಿದ್ದು ಒಳ್ಳೆತನದಿಂದ ಕ್ಲಸ್ಟರಿನ ಎಲ್ಲಾ ಶಿಕ್ಷಕರ, ವಿದ್ಯಾರ್ಥಿಗಳ ,ಪೋಷಕರ,ಊರಿನವರ ಮೆಚ್ಚುಗೆಗೆ ಪಾತ್ರರಾಗಿದ್ದರು.ವಿರೂಪಾಕ್ಷಪ್ಪ ಶಿಕ್ಷಕರ ಸಂಘದಲ್ಲಿ ಗುರುತಿಸಿ ಕೊಂಡಿದ್ದರು.


ಕ್ಲಸ್ಟರಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಮುಂದಾಳತ್ವ ವಹಿಸಿ ಕಿರಿಯರಿಗೆ ಉತ್ತಮ ಮಾರ್ಗದರ್ಶನ ನೀಡುತ್ತಿದ್ದರು ಇವರ ಬಗ್ಗೆ ಸಹೋದ್ಯೋಗಿ ಶಿಕ್ಷಕರು ಹಾಗೂ ಸಿ.ಆರ್.ಪಿ ಸದಾನಂದ ಅವರು ಮೆಚ್ಚುಗೆಯ ಮಾತುಗಳನ್ನಾಡಿದರು ವಿರೂಪಾಕ್ಷಪ್ಪ ಸರ್ ಅವರು ಹಲವಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ ಅವರ ನಿವೃತ್ತಿ ಜೀವನ ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ನಮ್ಮ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘ ಶಿವಮೊಗ್ಗ ದಲ್ಲಿ ಸಮಾಜಮುಖಿ ಕೆಲಸ ಕಾರ್ಯದಲ್ಲಿ ತೊಡಗಿದೆ ಎಂದರು.ಸಹಕರಿಸಿದ ಎಲ್ಲರಿಗೂ ಜಿಲ್ಲಾ ಮತ್ತು ತಾಲ್ಲೂಕು ಸಾವಿತ್ರಿಬಾಯಿಪುಲೆ ಮಹಿಳಾ ಶಿಕ್ಷಕಿಯರ ಸಂಘದ ಪರವಾಗಿ ಶುಭಕೋರಲಾಗಿದೆ.

ಧನ ಸಹಾಯ ಮಾಡಿದ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ

ಶಿವಮೊಗ್ಗ- ದಿನಾಂಕ 19:11:2021 ರಂದು ಸಾಗರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಮ್ರೀನ್ ಮತ್ತು ಆಫ್ರೀನ್ ಸಹೋದರಿಯರು ಗಾಯಗೊಂಡಿದ್ದು ಆಫ್ರೀನ್ ಕೋಮಾದಲ್ಲಿ ಇರುತ್ತಾರೆ ಇವರಿಗೆ ಚಿಕಿತ್ಸೆಗಾಗಿ ಆರ್ಥಿಕ ಸಹಾಯ ಕೇಳಲಾಗಿತ್ತು,

ಈ ಸುದ್ದಿ ತಿಳಿದ ಕರ್ನಾಟಕ ರಾಜ್ಯ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘ,ತಾಲೂಕು ಘಟಕ- ಶಿವಮೊಗ್ಗ ವತಿಯಿಂದ ಸ್ವಯಂಪ್ರೇರಿತ ಧನ ಸಹಾಯ ಮಾಡಲು ಸಂಘದ ಶಿಕ್ಷಕಿಯರಿಗೆ ಪ್ರಕಟಣೆ ಮಾಡಿ ಸ್ವಯಂ ಪ್ರೇರಣೆಯಿಂದ ಸಂಗ್ರಹವಾದ ಹಣವನ್ನು ಕೋಮ ತಲುಪಿರುವ ಗಾಯಾಳುವಿನ ತಂದೆ ತಾಯಿಗೆ ವಿತರಿಸಿ,ಸಾಂತ್ವನ ಹೇಳಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಶಿವಮೊಗ್ಗ ತಾಲ್ಲೂಕಿನ ಅಧ್ಯಕ್ಷರು ಶ್ರೀಮತಿ ಶಾಹೀನ್ ಬಾನು ರವರು ಇದರ ಉಸ್ತುವಾರಿಯನ್ನು ವಹಿಸಿದ್ದು, ಉತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ, ಇಂತಹ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆ ಮಾಡಲು ಈ ಒಂದು ಸಂಘವನ್ನು ರಾಜ್ಯದ ಪ್ರತೀ ಜಿಲ್ಲೆಯಲ್ಲೂ,ತಾಲ್ಲೂಕುಗಳಲ್ಲಿಯೂ ಸ್ಥಾಪಿಸಿ ನಮ್ಮೆಲ್ಲರಿಗೂ ಅವಕಾಶ ಕಲ್ಪಿಸಿರುವ ನಮ್ಮ ಹೆಮ್ಮೆಯ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರು ಡಾ.ಲತಾ.ಎಸ್.ಮುಳ್ಳೂರ ರವರಿಗೆ ನಾವೆಲ್ಲರೂ ಅಭಾರಿಯಾಗಿದ್ದೀವಿ ಎಂದು
ಶಿವಮೊಗ್ಗ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಶ್ರೀಮತಿ ರಾಧರವರು ತಿಳಿಸಿದ್ದಾರೆ.ಕೋಶಾಧ್ಯಕ್ಷರಾದ ಶ್ರೀಮತಿ ಲಲಿತ ರವರು ಸಹ ಹಾಜರಿದ್ದು, ಇದಕ್ಕಾಗಿ ಧನ ಸಹಾಯಮಾಡಿ, ಸಹಕಾರ ನೀಡಿದ ನಮ್ಮ ಸಂಘದ ಎಲ್ಲಾ ಪದಾಧಿಕಾರಿಗಳಿಗೂ ಸದಸ್ಯರಿಗೂ ಹಾಗೂ ಶಿಕ್ಷಕ ವರ್ಗದವರಿಗೂ ತುಂಬು ಹೃದಯದ ಧನ್ಯವಾದಗಳನ್ನು ಸಹಾ ತಾಲೂಕು ಘಟಕ ಹಾಗೂ ಜಿಲ್ಲಾಘಟಕ ವತಿಯಿಂದ ಧನ್ಯವಾದಗಳನ್ನು ಸಲ್ಲಿಸಲಾಗಿದೆ.

PST ಶಿಕ್ಷಕಿಯರಿಂದ ಮಾನ್ಯ ಉಪನಿರ್ದೇಶಕರಿಗೆ ಚಳುವಳಿ ಪತ್ರ ರವಾನೆ

ಹೊಸಪೇಟೆ ಅ.22.ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ), ರಾಜ್ಯಘಟಕ ಧಾರವಾಡ, ಜಿಲ್ಲಾ ಘಟಕ ವಿಜಯನಗರ ವತಿಯಿಂದ PST ಶಿಕ್ಷಕಿ ವೃಂದದವರಿಂದ ಮಾನ್ಯ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಹಾಗೂ ಮಾನ್ಯ ಉಪನಿರ್ದೇಶಕರಿಗೆ ಚಳುವಳಿ ಪತ್ರ ರವಾನೆ ಮಾಡಲಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕ/ಕಿ ವೃಂದದಲ್ಲಿ C&R ನಿಯಮ ಜ್ವಲಂತ ಸಮಸ್ಯೆಯಾಗಿ ಎಲ್ಲ ಶಿಕ್ಷಕ ಸಮುದಾಯದ ಹೃದಯದಲ್ಲಿ ಅಸಮಾಧಾನದ ಅಲೆಗಳನ್ನೇ ಎಬ್ಬಿಸಿದೆ ಎಂದರೆ ನಿಜಕ್ಕೂ ತಪ್ಪಾಗದು..ಬರೆಯುವವರಿಗೆ, ತಪ್ಪಾದಾಗ ಅಳಿಸುವ ವಿಧಾನಗಳೂ ತಿಳಿದಿರುತ್ತವೆ.ಹಾಗೆಯೇ ಬರೆದಿರುವ ನಿಯಮದಲ್ಲಿ ಬದಲಾವಣೆ ಸಾಧ್ಯವೇ ಇಲ್ಲವೇ? ಪ್ರಾಥಮಿಕ ಶಾಲಾ ಶಿಕ್ಷಕ/ಕಿ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ತಡೆದು, ವರ್ಗಾವಣೆಯ ಸಮಸ್ಯೆ, ದೈಹಿಕ ಶಿಕ್ಷಕರು ಹಾಗೂ ಹಿಂದಿ ಶಿಕ್ಷಕರ ಸಮಸ್ಯೆ ಇತರೆ ಸಮಸ್ಯೆಗಳಿಗೆ ನ್ಯಾಯಸಮ್ಮತವಾದ ಪರಿಹಾರವನ್ನು ಒದಗಿಸಬೇಕಾಗಿ ಹೊಸಪೇಟೆಯ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಮಾನ್ಯ ಉಪನಿರ್ದೇಶಕರು, ವಿಜಯನಗರ ಜಿಲ್ಲೆ, ಇವರಿಗೆ ಚಳುವಳಿ ಪತ್ರವನ್ನು ರವಾನಿಸಲಾಯಿತು… ಸೇವಾಹಿರಿತನವನ್ನು ಹಾಗೂ ವಿದ್ಯಾರ್ಹತೆಯನ್ನು ಪರಿಗಣಿಸಿ ಮುಂಬಡ್ತಿ ನೀಡುವಂತೆ ಒತ್ತಾಯಿಸಲಾಯಿತು. ಮಕ್ಕಳಿಗೆ ಶೈಕ್ಷಣಿಕವಾಗಿ ತೊಂದರೆ ನೀಡದೇ ಭೋದನೆಯೊಂದಿಗೆ ಅಸಹಕಾರ ಚಳುವಳಿ ನಡೆಸುತ್ತಿರುವುದನ್ನು ಉಮಾದೇವಿಯವರು ಹೇಳಿದರು…ಜಿಲ್ಲಾಧ್ಯಕ್ಷೆ ಶ್ರೀಮತಿ ಉಮಾದೇವಿ ಮಾತನಾಡಿ , ನಮ್ಮ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯಗಳಿಗೆ ನ್ಯಾಯಸಮ್ಮತ ಪರಿಹಾರ ಒದಗಿಸಿ ಎಂದು ಸಮಸ್ತ ಶಿಕ್ಷಕ ಬಳಗದ ಪರವಾಗಿ ಕೇಳಿಕೊಂಡರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಅರುಂಧತಿ.ಎಸ್, ಗೌರವ ಅಧ್ಯಕ್ಷರಾದ ಶ್ರೀಮತಿ ಮಾಧವಿ, ಹೊಸಪೇಟೆ ತಾಲ್ಲೂಕು ಅಧ್ಯಕ್ಷೆ ಶ್ರೀಮತಿ ಹನುಮವ್ವ,ಪದಾಧಿಕಾರಿಗಳಾದ ಶ್ರೀಮತಿ ಮನೋಹರಿ, ಶ್ರೀಮತಿ ರೂಪ ಟಿಕಾರೆ, ಲಕ್ಷ್ಮಿ, ರೂಪ D.S ಇತರರು ಉಪಸ್ಥಿತರಿದ್ದರು.