ಹಾವೇರಿ ಅ.22. ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ರಾಜ್ಯ ಘಟಕ ( ರಿ ) ಧಾರವಾಡ, ಜಿಲ್ಲಾ ಘಟಕ ಹಾವೇರಿ, ರಟ್ಟೀಹಳ್ಳಿ ತಾಲ್ಲೂಕು ಘಟಕದ ವತಿಯಿಂದ .ರಾಜ್ಯ ಘಟಕದ ತೀರ್ಮಾನದಂತೆ, 6 ಮತ್ತು 7 ನೇ ತರಗತಿ ಬೋದನೆಗೆ ಸಂಬಂಧಿಸಿದ ಶಿಕ್ಷಕರ ವೈಯಕ್ತಿಕ ದಾಖಲೆ ನಿರ್ವಹಣೆ ಸ್ಥಗಿತಗೊಳಿಸುವ ಮೂಲಕ PST ಶಿಕ್ಷಕರ ಚಳುವಳಿ ಪ್ರಾರಂಭಿಸಿದ್ದಾರೆ. ಹಿರೇಕೆರೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.ತಾಲೂಕಿನ ಶಿಕ್ಷಣಾಧಿಕಾರಿಗಳು ಇಲಾಖಾ ಕಾರ್ಯದ ನಿಮಿತ್ತ ಹಾವೇರಿಗೆ ಹೋಗಿದ್ದರಿಂದ ಅವರ ಅನುಪಸ್ಥಿತಿಯಲ್ಲಿ ತಾಲೂಕಿನ ದೈಹಿಕ ಪರಿವೀಕ್ಷಕರಾದ, ಶ್ರೀ M. B. Makandar. ಸರ್ ರವರಿಗೆ ಸಲ್ಲಿಸಿದೆ ಎಂದು ತಾಲ್ಲೂಕಿನ ಅದ್ಯಕ್ಷರು ತಿಳಿಸಿದ್ದಾರೆ.ಹಾಗೂ ನಮ್ಮ ಸಂಘದ ವತಿಯಿಂದ, ತಾಲೂಕಿನ ಜಿಲ್ಲಾ ಪದಾಧಿಕಾರಿಗಳು, ತಾಲೂಕಿನ ಅಧ್ಯಕ್ಷರು, ಗೌರವಅಧ್ಯಕ್ಷರು, ಕಾರ್ಯದರ್ಶಿಗಳು, ಕೋಶಾಧ್ಯಕ್ಷರು, ಉಪಾಧ್ಯಕ್ಷರು, ಸಹಕಾರ್ಯದರ್ಶಿಗಳು, ಸಂಘಟನಾ ಕಾರ್ಯದರ್ಶಿಗಳು ಹಾಜರಿದ್ದು ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಧಾರವಾಡ ಅ.2 ರಾಜ್ಯ ಮಟ್ಟದ ನಲಿಕಲಿ ಶಿಕ್ಷಕರ ವರ್ಚ್ಯಯಲ್ ಸಂವಾದ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾದರೂ ಸಹಾ ನೂರಾರು ಶಿಕ್ಷಕ ಶಿಕ್ಷಕಿಯರಿಗೆ ಜಾಯಿನ್ ಆಗಲು ಅವಕಾಶ ಸಿಗದ ಕಾರಣ ನಿರಾಶೆ ಅನುಭವಿಸಬೇಕಾಯಿತು..ಹೌದು ನಿನ್ನೆ ಶನಿವಾರ ಸಂಜೆ 4 ಗಂಟೆಗೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವೆಬಿನಾರ್ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ರಾಜ್ಯದ ನಲಿಕಲಿ ತಜ್ಞ ರಂದೇ ಹೆಸರಾಗಿರುವ, ರಾಜ್ಯ ಸಂಪನ್ಮೂಲ ವ್ಯಕ್ತಿಗಳಿಗೆಯೇ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ರವೀಂದ್ರ.ಆರ್.ಡಿ. ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ಕಾರ್ಯಕ್ರಮ ಪ್ರಾರಂಭವಾದ ಹತ್ತಾರು ನಿಮಿಷದಲ್ಲಿ ರಾಜ್ಯಾದ್ಯಂತ 1000 ಶಿಕ್ಷಕ ಶಿಕ್ಷಕಿಯರು ಭಾಗವಹಿಸಿ ಮೈಕ್ರೋಸಾಫ್ಟ್ ಟೀಮ್ಸ್ ಆಪ್ಲಿಕೇಷನ್ ಲಿಮಿಟ್ ದಾಟಿದ ಕಾರಣ ಇತರ ನೂರಾರು ಶಿಕ್ಷಕರಿಗೆ ಭಾಗವಹಿಸಲು ಅಡಚಣೆ ಉಂಟಾಯಿತು.
ಸಂಘದ ಕೆಲವಾರು ತಾಂತ್ರಿಕ ಸಮಿತಿ ಸದಸ್ಯರಿಗು ಹಾಗೂ ಪದಾಧಿಕಾರಿಗಳಿಗೂ ಸಹಾ ಜಾಯಿನ್ ಆಗಲು ಅವಕಾಶ ಸಿಗದೇ ಪರಿತಪಿಸುವಂತಾಯಿತು. ರಾಜ್ಯದ ಮೂಲೆ ಮೂಲೆಯಿಂದ ಮೇಲಿಂದ ಮೇಲೆ ಕರೆ ಮಾಡಿ ಆಯೋಜಕರಿಗೆ ಮತ್ತೊಮ್ಮೆ ವೆಬಿನಾರ್ ಹಾಗೂ ಸಂವಾದ ಕಾರ್ಯಕ್ರಮ ಆಯೋಜಿಸಲೇಬೇಕೆಂಬ ಒತ್ತಾಯವನ್ನೂ ಸಹಾ ಮಾಡಿದ್ದಾರೆ. ರಾಜ್ಯದ ಕೋವಿಡ್ ಸಂಕಷ್ಟ ದಿನಗಳಲ್ಲಿ ನಲಕಲಿ ಮಕ್ಕಳಿಗೆ ಪರ್ಯಾಯ ಶೈಕ್ಷಣಿಕ ಯೋಜನೆ,ತರಗತಿ ನಿರ್ವಹಣೆ,ಮೌಲ್ಯಮಾಪನ ಹಾನಿರ್ವಹಣೆ, ನಿರ್ವಹಣೆಗಳನ್ನು ಮಾಡುವ ವಿಚಾರದಲ್ಲಿ ಹಲವಾರು ಗೊಂದಲಗಳಿಗೆ ರವೀಂದ್ರ ಸರ್ ರವರು ಉತ್ತಮ ಮಾರ್ಗದರ್ಶನ ನೀಡಿದರು,
ಶಿಕ್ಷಕರ ಪ್ರಶ್ನೆಗಳನ್ನು ಆಲಿಸಿ ಸೂಕ್ತ ಸಲಹೆ ಕೂಡ ನೀಡಿದ್ದಾರೆ. ವೆಬಿನಾರ್ ನ ವಿಶೇಷವೇನೆಂದರೆ ರಾಜ್ಯದ ವಿವಿಧ ಶಿಕ್ಷಣ ಅಧಿಕಾರಿಗಳು,ಡಯಟ್ ನೋಡಲ್ ಅಧಿಕಾರಿಗಳು, ಬ್ಲಾಕ್ ಸಂಪನ್ಮೂಲ ವ್ಯಕ್ತಿಗಳು ಸಹಾ ಜಾಯಿನ್ ಆಗಿದ್ದು ಯಶಸ್ವಿಗೆ ಕಾರಣವಾಯಿತು.
ನಮ್ಮ ಸಂಘದ ಆಹ್ವಾನಕ್ಕೆ ಒಪ್ಪಿ, ತಮ್ಮೆಲ್ಲ ಒತ್ತಡದ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಜ್ಯದ ಹಲವು ವಿಷಯಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿರುವ ಶ್ರೀಯುತ ರವೀಂದ್ರ.ಆರ್.ಡಿ ರವರಿಗೆ ಹಾಗೂ ಸಂಘಟನೆಗೆ ಜೊತೆಯಾಗಿ ಕೈಜೋಡಿಸಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಉತ್ತಮ ಸಲಹೆ ಮಾರ್ಗದರ್ಶನ ನೀಡಿದ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಅಧ್ಯಕ್ಷರಾದ ಶ್ರೀ ಮಹೇಶ್ ರವರಿಗೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘಟನೆಯು ವಿಶೇಷ ಧನ್ಯವಾದಗಳನ್ನು ಸಲ್ಲಿಸಿದೆ.
ರಾಜ್ಯದ ನಲಿಕಲಿ ಶಿಕ್ಷಕ ಶಿಕ್ಷಕಿಯರ ಒತ್ತಾಯದ ಮೇರೆಗೆ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಜ್ಯೋತಿರವರ ಕಾರ್ಯಕ್ರಮ ಆಯೋಜನೆ,ರಾಜ್ಯ ತಾಂತ್ರಿಕ ಸಮಿತಿಯ ಮುಖ್ಯಸ್ಥರಾದ ಭುವನೇಶ್ವರಿ ಯವರ ಅಪ್ಲಿಕೇಷನ್ ನಿರ್ವಹಣೆ, ತಾಂತ್ರಿಕ ಸಮಿತಿಯ ಸದಸ್ಯರಾದ ನಂದಿನಿಯಾದವ್ ರವರ ಮೀಡಿಯ ಪ್ರಕಟಣೆ, ಹಾವೇರಿಯ ರಾಜಶ್ರೀ ರವರ ಅದ್ಬುತ ನಿರೂಪಣೆ, ಬಹಳ ಅಚ್ಚುಕಟ್ಟಾಗಿ ನಿಬಾಯಿಸಿದ್ದು ಪ್ರಶಂಸನೀಯ. ಒಂದೇ ದಿನದಲ್ಲಿ ತುರ್ತಾಗಿ ಯೋಜನೆ ಮಾಡಿ ದಿನಾಂಕ ನಿಗಧಿ ಮಾಡಿ, ಪ್ರಚಾರ ಮಾಡಿ, ಹೆಚ್ಚು ಶಿಕ್ಷಕರ ಗಮನ ಸೆಳೆದು ಅತೀ ಹೆಚ್ಚು ಸಂಖ್ಯೆಯಲ್ಲಿ ಶಿಕ್ಷಕರು ಭಾಗವಹಿಸುವಂತೆ ಸಹಕಾರ ನೀಡಿದ ರಾಜ್ಯದ ಪದಾಧಿಕಾರಿಗಳಿಗೆ,ರಾಜ್ಯ ತಾಂತ್ರಿಕ ಸಮಿತಿಯ ಎಲ್ಲಾ ಸದಸ್ಯರಿಗೆ,ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಶಿಕ್ಷಕ ಶಿಕ್ಷಕಿಯರಿಗೆ ಹಾಗೂ ,ಸಹಕರಿಸಿದ ಎಲ್ಲರಿಗೂ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ರವರು ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.
ವಿಜಯನಗರ ಸೆ.26 ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ ಜಿಲ್ಲಾ ಘಟಕ ವಿಜಯನಗರ ಶನಿವಾರ ನಿನ್ನೆ ಮಧ್ಯಹ್ನ1-30 ನಿಮಿಷಕ್ಕೆ ಸಭೆ ಪ್ರಾರಂಭವಾಗಿ, ಕಾರ್ಯಕ್ರಮದಲ್ಲಿ ಶ್ರೀ ಮತಿ ರೇಶ್ಮಾ. ಕೆ.ಪ್ರಾರ್ಥನೆ ಸಲ್ಲಿಸಿದರು. ಶ್ರೀ ಮತಿ ರೂಪ.ಡಿ.ಕೆ.ಜಿಲ್ಲಾ ಸಂಘಟನಾ ಕಾಯ೯ದಶಿ೯ ಎಲ್ಲರನ್ನೂ ಸ್ವಾಗತಿಸಿದರು. ಎಲ್ಲಾ ತಾಲೂಕು ಮತ್ತು ಜಿಲ್ಲಾ ಪದಾಧಿಕಾರಿಗಳಿಂದ ಮಾತೆ ಸಾವಿತ್ರಿಬಾಯಿ ಫುಲೆ ಭಾವಚಿತ್ರಕ್ಕೆ ಪುಷ್ಪಾಚ೯ನೆ ಮಾಡಲಾಯಿತು. ಈ ಸಭೆಯ ಇಂದಿನ ಪ್ರಸ್ತಾವಿಕ ನುಡಿ ತಾಲೂಕು ಘಟಕ ಹೊಸಪೇಟೆಯ ಅಧ್ಯೆಕ್ಷೆಯಾದ ಶ್ರೀಮತಿ ಹನುಮಕ್ಕನವರು ನಡೆಸಿಕೊಟ್ಟರು.ವಿಜಯನಗರ ಜಿಲ್ಲೆಯ ತಾಂತ್ರಿಕ ಸಮಿತಿಯ ಪರಿಚಯ ಶ್ರೀಮತಿ ಡಾ. ಉಷರಾಣಿ ಹೊಸಪೇಟೆ ಪ್ರಧಾನಕಾಯ೯ದಶಿ೯ಯವರು ಪರಿಚಯಿಸಿದರು.ನಂತರ ಬಂದಂಥ ಎಲ್ಲಾ ಪದಾಧಿಕಾರಿಗಳ ಅನಿಸಿಕೆಗಳನ್ನು ಹಂಚಿಕೊಳ್ಳಲು ತಿಳಿಸಲಾಯಿತು. ವಿಜಯನಗರ ಜಿಲ್ಲಾ ಅಧ್ಯಕ್ಷರಾದ ಉಮಾದೇವಿ ಸಂಘದ ಚರ್ಚಾ ವಿಷಯವನ್ನು ಈ ಕೆಳಗಿನಂತೆ ತಿಳಿಸಿದರು.
ಜಿಲ್ಲಾ ಘಟಕದ ಉದ್ಘಾಟನ ಕಾಯ೯ಕ್ರಮದ ಬಗ್ಗೆ. 2.ಮಹಿಳಾ ಶಿಕ್ಷಕಿಯರ ಸದಸ್ಯತ್ವದ ರಷೀದಿ ಬಗ್ಗೆ ಮಾಹಿತಿ. 3.ಎಲ್ಲಾ ತಾಲೂಕುಗಳಲ್ಲಿ ತಾಂತ್ರಿಕ ಸಮೀತಿ ರಚನೆಯ ಬಗ್ಗೆ ಮಾಹಿತಿ. 4.ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆಯ ನಿಮಿತ್ಯ ವಿಡಿಯೋ ಮಾಡುವ ಬಗ್ಗೆ 5.ತಾಲೂಕು ಹಂತದಲ್ಲಿ ಸಂಘದ ಬ್ಯಾಂಕ್ ಖಾತೆ ತೆರೆಯುವ ಬಗ್ಗೆ ಮಾಹಿತಿ ಕೊಡಲಾಯಿತು. ಚಚೆ೯ಯಲ್ಲಿ ವಿಜಯನಗರ ಜಿಲ್ಲೆಯ ಎಲ್ಲಾ ತಾಲೂಕಿನ ಅಧ್ಯಕ್ಷರು ,ಪ್ರಧಾನಕಾಯ೯ದಶಿ೯ಗಳು , ಕೋಶಾಧ್ಯಕ್ಷರು ,ಗೌರವಾಧ್ಯಕ್ಷರು ,ಉಪಾಧ್ಯಕ್ಷರು ,ಸಂಘಟನಾಕಾಯ೯ದಶಿ೯ಗಳು ,ಸಹಕಾಯ೯ದಶಿ೯ಗಳು ಎಲ್ಲರೂ ಈ ಸಭೆಯಲ್ಲಿ ಉಪಸ್ಥಿತರಿದ್ದರು . ಈ ಎಲ್ಲಾ ಕಾಯ೯ಕ್ರಮದ ನಿರೂಪಣೆಯನ್ನು ವಿಜಯನಗರ ಜಿಲ್ಲೆಯ ಪ್ರಧಾನಕಾ೯ದಶಿ೯ಯಾದ ಶ್ರೀ ಮತಿ ಅರುಂಧತಿ ಇವರು ತುಂಬಾ ಚೆನ್ನಾಗಿ ನಡೆಸಿಕೊಟ್ಟರು.
ಧಾರವಾಡ ಸೆ.25 ಹತ್ತು ಹಲವಾರು ವರ್ಷಗಳಿಂದ ತಮ್ಮ ಸ್ವಂತ ಜಿಲ್ಲೆ ತೊರೆದು,ತಮ್ಮ ತಂದೆ ತಾಯಿ ಬಂದು ಬಳಗ ಅಲ್ಲದೇ ಕುಟುಂಬಗಳನ್ನೇ ದೂರ ಮಾಡಿ ನೂರಾರು ಕಿಲೋ ಮೀಟರ್ ದೂರದ ಶಾಲೆಗಳಲ್ಲಿ ಮಕ್ಕಳಿಗೆ ಪಾಠ ಪ್ರವಚನ ಮಾಡುತ್ತಿರುವ ಸಾವಿರಾರು ಶಿಕ್ಷಕರಿದ್ದಾರೆ. ಅಂತಹ ಶಿಕ್ಷಕರ ಕೌಟುಂಬಿಕ ಬದುಕು ಶೋಚನೀಯ ಸ್ಥಿತಿ ತಲುಪಿದ್ದು,ಮಾನಸಿಕವಾಗಿ ಕುಗ್ಗಿಹೋಗಿರುತ್ತಾರೆ, ಗಂಡ ಹೆಂಡತಿಯರ ಸಂಬಂದ ಅನೇಕ ವಿಚ್ಚೇದನಗಳ ಕಡೆ ತಿರುಗಿ ಸಂಸಾರದಲ್ಲೂ ನೆಮ್ಮದಿ ಸಿಗದಂತಾಗಿದೆ..ಇಳಿವಯಸ್ಸಿನ ತಂದೆ ತಾಯಂದಿರನ್ನು ಸಹಾ ನೋಡಿಕೊಳ್ಳದ ಸ್ಥಿತಿ ಇದೆ.
ಹೀಗೆ ಬೇರೆ ಬೇರೆ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕ ಶಿಕ್ಷಕಿಯರು ತಮ್ಮ ಹಲವಾರು ಸಮಸ್ಯೆಗಳ ನಡುವೆ ಈಗಾಗಲೇ ಒಂದೇ ಶಾಲೆಯಲ್ಲಿ 10-15 ವರ್ಷಗಳನ್ನು ಸಹಾ ಪೂರೈಸಿರುತ್ತಾರೆ. ನಾನಾ ಕಾರಣಗಳಿಂದಾಗಿ ಈ ವರ್ಷದಲ್ಲಿ ಪ್ರತಿ ಜಿಲ್ಲೆಗಳಲ್ಲಿ ಬಹುತೇಕ ಶಿಕ್ಷಕರ ಹುದ್ದೆಗಳು ಖಾಲಿಯಾಗಿವೆ, ಅಲ್ಲದೇ ಇತ್ತೀಚೆಗೆ ಶಿಕ್ಷಕರ ನೇಮಕಾತಿ ಕೂಡ ನಡೆಸಲು ಘನ ಸರ್ಕಾರ ತೀರ್ಮಾನಿಸಿದೆ. ಇಂತಹ ಸಂದರ್ಭದಲ್ಲಿ ಹೊಸ ನೇಮಕಾತಿ ಪ್ರಾರಂಬಿಸುವ ಮುನ್ನ ಪ್ರಥಮ ಹಂತವಾಗಿ ಇಂತಹ ಶೋಚನೀಯ ಸ್ಥಿತಿಯಲ್ಲಿರುವ ಶಿಕ್ಷಕ-ಶಿಕ್ಷಕಿಯರ ಕಡೆ ಗಮನ ಹರಿಸಿ ಪ.ಬಂಗಾಳದಲ್ಲಿ ಅವಕಾಶ ಕಲ್ಪಿಸಿದ ಹಾಗೇ ಕರ್ನಾಟಕದಲ್ಲೂ ಶಿಕ್ಷಕರಿಗೆ ತಮ್ಮ ಸೇವಾವಧಿಯಲ್ಲಿ ಒಮ್ಮೆ ಬಯಸಿದ ಜಿಲ್ಲೆಗಳಿಗೆ ವಿಶೇಷ ವರ್ಗಾವಣೆ ಪ್ರಕ್ರಿಯೆ ನಡೆಸಿ ಶಿಕ್ಷಕರ ಕೌಟುಂಬಿಕ ಬದುಕನ್ನು ನೆಮ್ಮದಿಯಿಂದ ಸಾಗಿಸಲು ವಯಸ್ಸಾದ ತಂದೆ ತಾಯಿಗಳನ್ನು ಸಾಕಿ ಸಲುಹಲು ಅವಕಾಶ ಮಾಡಿಕೊಡಬೇಕೆಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯರಾದ ಡಾ.ಲತಾ.ಎಸ್.ಮುಳ್ಳೂರ ರವರು ಘನ ಸರ್ಕಾರಕ್ಕೆ ಒತ್ತಾಯಿಸಿ ಮನವಿ ಮಾಡಿದ್ದಾರೆ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ ಜನರ ಜೀವನ ಮಟ್ಟ ಸುಧಾರಣೆ ಗುರಿಯೊಂದಿಗೆ ಸಾಗಿರುವ ಜ್ಞಾನಬಿಕ್ಷಾ ಪಾದಯಾತ್ರಿಗಳಾದ ಶ್ರೀ ವಿವೇಕಾನಂದ ಅವರೊಂದಿಗೆ ಸಂವಾದ ಸಭೆ ನಡೆಸಿದ ಸಾವಿತ್ರಿಬಾಯಿಪುಲೆ ಶಿಕ್ಷಕರ ಸಂಘ
ಕರ್ನಾಟಕ ರಾಜ್ಯ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘ ರಿಜಿಸ್ಟರ್ ರಾಜ್ಯ ಘಟಕ ಧಾರವಾಡ ಜಿಲ್ಲಾ ಘಟಕ ತುಮಕೂರು ತಾಲೂಕು ಘಟಕ ಗುಬ್ಬಿ
ದಿನಾಂಕ 20 ಸೆಪ್ಟೆಂಬರ್ 2021ರ ಸೋಮವಾರದಂದು ಜ್ಞಾನ ಬಿಕ್ಷಾ ಪಾದಯಾತ್ರಿಗಳಾದ ಶ್ರೀ ವಿವೇಕಾನಂದ ಹೆಚ್ ಕೆ ರವರು ಗುಬ್ಬಿ ತಾಲೂಕಿನ ಪ್ರವಾಸಿ ಮಂದಿರದಲ್ಲಿ ತಂಗಿರುವುದನ್ನು ತಿಳಿದ ಗುಬ್ಬಿ ತಾಲೂಕಿನ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘದ ಪದಾಧಿಕಾರಿಗಳು ಅವರನ್ನು ಸ್ವಾಗತಿಸಿ ಸನ್ಮಾನಿಸಲು ಪ್ರವಾಸಿ ಮಂದಿರಕ್ಕೆ ತೆರಳಿ ಅವರೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಿದರು
ಈ ಕಾರ್ಯಕ್ರಮಕ್ಕೆ ಶ್ರೀಯುತ ರಂಗಸ್ವಾಮಯ್ಯ ಸರ್ ಅವರು ಎಲ್ಲರನ್ನೂ ಸ್ವಾಗತಿಸಿದರು ನಂತರ ವಿವೇಕಾನಂದ ಸರ್ ಅವರು ಮಾತನಾಡಿ ಸಮಾಜದ ಜನರ ಜೀವನಮಟ್ಟ ಸುಧಾರಣೆ ಗುರಿಯೊಂದಿಗೆ ನಾನು ಪಾದಯಾತ್ರೆಯನ್ನು ಕೈಗೊಂಡಿರುವೆ ಕರ್ನಾಟಕದಾದ್ಯಂತ ಪಾದಯಾತ್ರೆಯನ್ನು ಕೈಗೊಂಡು ಎಲ್ಲ ಇಲಾಖೆಗಳಲ್ಲೂ ನಡೆಯುತ್ತಿರುವ ಭ್ರಷ್ಟತೆಯನ್ನು ಕಡಿಮೆಮಾಡುವ ಉದ್ದೇಶ ಹೊಂದಿದ್ದೇನೆ ಒಮ್ಮೆಲೆ ಎಲ್ಲವನ್ನೂ ಬದಲಾಯಿಸಲು ಸಾಧ್ಯವಿಲ್ಲ ಇದೊಂದು ಆಂದೋಲನವಾಗಿದೆ ಎಲ್ಲ ಇಲಾಖೆಗಳಲ್ಲಿರುವ ಒಳ್ಳೆಯವರನ್ನು ಗುರುತಿಸಿ ಅವರನ್ನು ಒಳ್ಳೆತನವನ್ನು ಮೇಲೆ ತರುವುದು ಹಾಗೂ ಕೆಟ್ಟದ್ದನ್ನು ಕಡಿಮೆ ಮಾಡುವ ಪಣತೊಟ್ಟಿರುವೆ ಭ್ರಷ್ಟತೆಯ ಮಟ್ಟ ಪೂರ್ತಿ ನಿರ್ಮೂಲನೆಯಾಗದಿದ್ದರೂ ಕ್ರಮೇಣ ಕಡಿಮೆಯಾದರೆ ನನ್ನ ಆಂದೋಲನಕ್ಕೆ ಪಾದಯಾತ್ರೆಗೆ ಜಯ ಸಿಕ್ಕಂತೆ ಎಂದು ಹೇಳಿದರು ನಂತರ ಸುರೇಶ್ ಸರ್ ಅವರು ಮಾತನಾಡಿ ವಿವೇಕ್ ಸರ್ ಅವರ ಉದ್ದೇಶ ಅತ್ಯಮೂಲ್ಯವಾದದ್ದು ಅವರ ಪಾದಯಾತ್ರೆಗೆ ಜಯ ಸಿಗಲಿ ಎಂದು ಆಶಿಸಿದರು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಯರ ಸಂಘ ಗುಬ್ಬಿ ತಾಲೂಕು ಘಟಕದ ವತಿಯಿಂದ ಸರ್ ರವರನ್ನು ಸನ್ಮಾನಿಸಲಾಯಿತು ಶ್ರೀಯುತ ರವೀಶ್ ಸರ್ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರಿಗೂ ಧನ್ಯವಾದ ತಿಳಿಸಿದರು ಈ ಕಾರ್ಯಕ್ರಮದಲ್ಲಿ ತಾಲೂಕು ಘಟಕದ ಅಧ್ಯಕ್ಷರಾದ ಲಕ್ಷ್ಮಿ ಎಸ್ ವಿ ರವರು ಕಾರ್ಯದರ್ಶಿಯವರಾದ ಭಾರತಿ ಭಾಯಿ ರವರು ಪದಾಧಿಕಾರಿಗಳಾದ ಲೀಲಾವತಿ ಪದ್ಮಾವತಿ ತಿಮ್ಮಮ್ಮ ಮಂಜಮ್ಮ ಚಂದ್ರಕಲಾ ಮುಂತಾದವರು ಹಾಜರಿದ್ದರು
ಕರ್ನಾಟಕ ರಾಜ್ಯ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ, ಜಿಲ್ಲಾ ಘಟಕ ತುಮಕೂರು, ತಾಲೂಕು ಘಟಕ ಗುಬ್ಬಿ
ದಿನಾಂಕ 15 ಸೆಪ್ಟೆಂಬರ್ 2021ರ ಬುಧವಾರದಂದು ಗುಬ್ಬಿ ತಾಲೂಕಿನ ಬೆಲವತ್ತ ಕ್ಲಸ್ಟರ್ ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಿ ಕೋಡಿಹಳ್ಳಿ ಯಲ್ಲಿ ಶಿಕ್ಷಕರ ದಿನಾಚರಣೆ ಜೊತೆಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಲಯನ್ಸ್ ಕ್ಲಬ್ ಗುಬ್ಬಿ ವತಿಯಿಂದ ಸನ್ಮಾನ ಕಾರ್ಯಕ್ರಮ ಹಾಗೂ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ವತಿಯಿಂದ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿಗಳ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು ಶಾಲಾ ಮಕ್ಕಳು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಜಿಲ್ಲಾ ಪ್ರಶಸ್ತಿ ವಿಜೇತರಾದ ಶ್ರೀಯುತ ರಂಗಸ್ವಾಮಿ ಸರ್ ಅವರು ಕಾರ್ಯಕ್ರಮಕ್ಕೆ ಎಲ್ಲರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲ ಗಣ್ಯರು ದೀಪಬೆಳಗಿಸಿ ನಂತರ ರಾಧಾಕೃಷ್ಣನ್ ಹಾಗೂ ಸಾವಿತ್ರಿಬಾಯಿ ಪುಲೆಯವರ ಫೋಟೋಗಳಿಗೆ ಪುಷ್ಪ ನಮನ ಸಲ್ಲಿಸಿದರು ನಂತರ ಪ್ರಾಸ್ತಾವಿಕ ನುಡಿಗಳನ್ನಾಡಿದ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀಮತಿ ಅನಸೂಯಾದೇವಿ ಅವರು ಮಾತನಾಡಿ ಗುಬ್ಬಿ ತಾಲೂಕಿನಲ್ಲಿ ಸಂಘದ ಚಟುವಟಿಕೆಗಳು ಅತ್ಯುತ್ತಮ ರೀತಿಯಲ್ಲಿ ನಡೆಯುತ್ತಿದ್ದು ಇದಕ್ಕೆಲ್ಲಾ ಕಾರಣರಾದ ಸಂಘದ ಬೆನ್ನೆಲುಬು ಗಳಂತೆ ಇರುವ ಶ್ರೀಯುತ ರಂಗಸ್ವಾಮಿ ಸರ್ ರವಿ ಸರ್ ಹಾಗೂ ಸುರೇಶ್ ಸರ್ ಅವರನ್ನು ತಮ್ಮ ಸಹೋದರರು ಎಂದು ಗುಬ್ಬಿ ತಾಲೂಕು ನನ್ನ ತವರುಮನೆ ಎಂದು ಭಾವನಾತ್ಮಕವಾಗಿ ಮಾತನಾಡಿದರು ಜೊತೆಗೆ ಮಾತೃಸಂಘ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಲ್ಲಿ ನಮ್ಮ ಸಂಘವು ಯಾವ ಸಂಘದ ವಿರೋಧಿಯೂ ಅಲ್ಲ ನಾವು ನಿಮ್ಮ ಜೊತೆಗಿರುತ್ತೇವೆ ನಮ್ಮನ್ನು ನಿಮ್ಮ ಕೆಲಸಕಾರ್ಯಗಳಿಗೆ ಆಹ್ವಾನಿಸಿ ನಾವು ನಮ್ಮ ಕಾರ್ಯಕ್ರಮಗಳಿಗೆ ನಿಮ್ಮನ್ನು ಆಹ್ವಾನಿಸುತ್ತೇವೆ ಎಂದರು.
ನಂತರ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀಯುತ ಉಮೇಶ ರವರು ಮಾತನಾಡಿ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘದ ಜೊತೆ ಯಾವಾಗಲೂ ನಾವು ಕೈಜೋಡಿಸುತ್ತೇವೆ ಎಂದು ಹೇಳಿದರು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀ ಮಲ್ಲಪ್ಪನವರು ಮಾತನಾಡಿ ಅವರು ಕೂಡ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘ ಉತ್ತಮ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದ್ದು ಇದಕ್ಕೆ ಸದಾ ನಮ್ಮ ಬೆಂಬಲವಿರುತ್ತದೆ ಎಂದು ಹೇಳಿದರು ಗುಬ್ಬಿ ತಾಲೂಕಿನ ಅಕ್ಷರದಾಸೋಹ ಅಧಿಕಾರಿಗಳಾದ ಶ್ರೀಯುತ ಯೋಗಾನಂದ ರವರು ಮಾತನಾಡಿ ಸಂಘಟನೆ ಮಾಡಲು ಎಲ್ಲರಿಗೂ ಹಕ್ಕಿದೆ ನಾನು ಕೂಡ ಸಂಘಟನೆಗಾಗಿ ಹೋರಾಡಿದವನು ತಾಲೂಕಿನ ಎಲ್ಲಾ ಸಂಘಗಳು ಸಂಘಟನೆಗಳು ಕೈಜೋಡಿಸಿಕೊಂಡು ಕೆಲಸಕಾರ್ಯಗಳನ್ನು ಕಾರ್ಯಕ್ರಮಗಳನ್ನು ಮಾಡುತ್ತ ಮುನ್ನಡೆಯಬೇಕು ಎಲ್ಲಾ ಸಂಘ ಹಾಗೂ ಸಂಘಟನೆಗಳ ಉದ್ದೇಶವೂ ಒಂದೇ ಶಿಕ್ಷಕ ಶಿಕ್ಷಕಿಯರ ಹಿತ ಕಾಪಾಡುವುದು ಆದುದರಿಂದ ಎಲ್ಲರೂ ಒಗ್ಗಟ್ಟಿನಿಂದ ಕೆಲಸವನ್ನು ಮಾಡುತ್ತಾ ಮುನ್ನಡೆಯಿರಿ ಎಂದು ಎಲ್ಲರಿಗೂ ಕಿವಿಮಾತು ಹೇಳಿದರು ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಯುತ ರಂಗಸ್ವಾಮಿ ಸರ್ ಅವರು ಕಾರ್ಯಕ್ರಮಕ್ಕೆ ಹಾಜರಿದ್ದ ಎಲ್ಲಾ ಗಣ್ಯರನ್ನು ಸನ್ಮಾನಿಸಿದರು ಗುಬ್ಬಿ ತಾಲೂಕಿನ ಲಯನ್ಸ್ ಕ್ಲಬ್ ವತಿಯಿಂದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶ್ರೀಯುತ ರಂಗಸ್ವಾಮಿಯವರು ಶ್ರೀಯುತ ರವೀಶ್ ರವರು ಹಾಗೂ ಪ್ರೌಢಶಾಲಾ ವಿಭಾಗದ ಚಿತ್ರಕಲಾ ಶಿಕ್ಷಕರಾದ ಶ್ರೀಯುತ ರಂಗಸ್ವಾಮಿ ರವರನ್ನು ಸನ್ಮಾನಿಸಲಾಯಿತು ಹಾಗೆಯೇ ಕಾರ್ಯಕ್ರಮಕ್ಕೆ ಆಗಮಿಸಿದ್ದ ಇತರೆ ಗಣ್ಯರು ಹಾಗೂ ಶಿಕ್ಷಕ-ಶಿಕ್ಷಕಿಯರು ಕೂಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ವೈಯಕ್ತಿಕವಾಗಿ ಸನ್ಮಾನಿಸಿದರು ಲಯನ್ಸ್ ಕ್ಲಬ್ ವತಿಯಿಂದ ಶಾಲಾ ಮಕ್ಕಳಿಗೆ ಬ್ಯಾಗ್ ಗಳನ್ನು ಹಾಗೂ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘದವತಿಯಿಂದ ಲೇಖನ ಸಾಮಗ್ರಿಗಳು ಹಾಗೂ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು
ಈ ಕಾರ್ಯಕ್ರಮದಲ್ಲಿ ಗುಬ್ಬಿ ತಾಲೂಕಿನ ಅಕ್ಷರದಾಸೋಹ ಅಧಿಕಾರಿಗಳಾದ ಶ್ರೀಯುತ ಯೋಗಾನಂದ ರವರು ಲಯನ್ಸ್ ಕ್ಲಬ್ನ ಅಧ್ಯಕ್ಷರಾದ ಮಲ್ಲಪ್ಪನವರು ಗುಬ್ಬಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಗೊರವಯ್ಯ ನವರು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಉಮೇಶ್ ಸರ್ ಅವರು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ತುಮಕೂರು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಶ್ರೀಮತಿ ಅನಸೂಯಾ ದೇವಿಯವರು ಬೆಲವತ್ತ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ರೂಪ ಅವರು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಗುಬ್ಬಿ ತಾಲೂಕಿನ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮಿಯವರು ಕೊರಟಗೆರೆ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀಮತಿ ಸುಜಾತಾ ರವರು ಜಿಲ್ಲಾ ಪ್ರಧಾನ ಕಾರ್ಯದರ್ಶಿಯವರಾದ ಶ್ರೀಮತಿ ಪ್ರವೀಣ ಕುಮಾರಿಯವರು ಗುಬ್ಬಿ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಭಾರತಿ ಬಾಯಿ ಹಾಗೂ ಖಜಾಂಚಿ ಆದ ಶ್ರೀಮತಿ ಅನಿತಾ ಪದಾಧಿಕಾರಿಗಳಾದ ಶ್ರೀಮತಿ ವಿಶಾಲಾಕ್ಷಿ ಶ್ರೀಮತಿ ಲೀಲಾವತಿ ಹೆಚ್ ಬಿ ಶ್ರೀಮತಿ ಪುಷ್ಪ ಶ್ರೀಮತಿ ಲೀಲಾವತಿ ಶ್ರೀಮತಿ ದಾಕ್ಷಾಯಣಮ್ಮ ಶ್ರೀಮತಿ ರಾಜಮ್ಮ ಗುಬ್ಬಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಶ್ರೀಯುತ ಎಚ್ ಕೆ ಶಶಿಧರ್ ಶ್ರೀಯುತ ಶಿವಣ್ಣ ಶ್ರೀಯುತ ಅರುಣ್ ಕುಮಾರ್ ಶ್ರೀಯುತ ಸಿದ್ದಲಿಂಗೇಗೌಡ ಗುಬ್ಬಿ ತಾಲೂಕಿನ NPS ಸಂಘದ ಅಧ್ಯಕ್ಷರಾದ ಶ್ರೀಯುತ ಪ್ರಸಾದ್ ರವರು ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಬೆಲವತ್ತ ಕ್ಲಸ್ಟರ್ ನ ಶಿಕ್ಷಕ ಶಿಕ್ಷಕಿಯರು ಗ್ರಾಮಸ್ಥರು ಹಾಜರಿದ್ದರು ಶಾಲೆಯ ಅಡುಗೆ ಸಿಬ್ಬಂದಿಯವರು ಎಲ್ಲರಿಗೂ ಹೋಳಿಗೆ ಊಟವನ್ನು ತಯಾರಿಸಿದ್ದು ಊಟವು ತುಂಬಾ ರುಚಿಕರವಾಗಿತ್ತು ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಯುತ ರಂಗಸ್ವಾಮಿ ಸರ್ ಅವರು ಕಾರ್ಯಕ್ರಮವನ್ನು ತುಂಬಾ ಅಚ್ಚುಕಟ್ಟಾಗಿ ಏರ್ಪಡಿಸಿದ್ದರು ಸರ್ ಅವರಿಗೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘ ತಾಲೂಕು ಘಟಕ ಗುಬ್ಬಿ ವತಿಯಿಂದ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಲಾಯಿತು
ಶಿಕಾರಿಪುರ,ಸೆ.06 ತಾಲ್ಲೂಕಿನ GHPS ಹರಗಿ ಶಾಲೆಯ ಶಿಕ್ಷಕರಾದ ಶ್ರೀಯುತ ದಿನೇಶ್ ರವರು ಇತ್ತೀಚೆಗೆ ಅಕಾಲಿಕ ಮರಣ ಹೊಂದಿದ್ದು, ಸದರಿ ಶಿಕ್ಷಕರು NPS ಯೋಜನೆಗೆ ಒಳಪಟ್ಟವರಾಗಿದ್ದು ನಮ್ಮೆಲ್ಲರಿಗೂ ಗೊತ್ತಿರುವಂತೆ NPS ಯೋಜನೆಗೆ ಒಳಪಡುವ ನೌಕರರ ಮರಣ ಉಪಧನವು ಅತಿ ಕಡಿಮೆ ಇರುತ್ತದೆ. ಇಂತಹ ಸ್ಥಿತಿಯಲ್ಲಿ ಮೃತ ಶಿಕ್ಷಕರ ತಾಯಿಯವರು ಕ್ಯಾನ್ಸರ್ ಖಾಯಿಲೆಯಿಂದ ಬಳಲುತಿದ್ದು ಅವರ ಕುಟುಂಬ ಸಂಕಷ್ಟದಲ್ಲಿ ಸಿಲುಕಿದೆ. ಈ ಕುಟುಂಬಕ್ಕೆ ಸಹಾಯ ಹಸ್ತ ನೀಡಲು ಶಿಕಾರಿಪುರ ಘಟಕದ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಹಾಗೂ NPS ಶಿಕ್ಷಕರ ಸಂಘಗಳ ವತಿಯಿಂದ 1 ಲಕ್ಷ ರೂ ಹಣದ ಚೆಕ್ ನ್ನು ಸೆಪ್ಟಂಬರ್-05 ಶಿಕ್ಷಕರ ದಿನಾಚರಣೆಯಂದು ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಕೆ ಎಸ್ ಗುರುಮೂರ್ತಿಯವರ ಮುಖಾಂತರ ವಿತರಿಸಲಾಯಿತು ಎಂದು ಶಿಕಾರಿಪುರದ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮವ್ವ ಎಂ ಸುಣಗಾರ್ ತಿಳಿಸಿದ್ದಾರೆ.