ಮಾಸ್ಕ್ ಹಾಗೂ ಸಾನಿಟೈಸರ್ ವಿತರಣೆ-ಸೇವೆಯಲ್ಲಿಯು ಫುಲೆ ಸಂಘ ಮುಂದಾಗಿದೆ.

ಹೊಸಪೇಟೆ ಮೇ31.
ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ (ರಿ) ಜಿಲ್ಲಾಘಟಕ ವಿಜಯನಗರ ಹೊಸಪೇಟೆ ತಾಲೂಕಿನಲ್ಲಿ ಫ್ರಂಟ್ ವಾರಿಯರ್ಸ್ ಆಗಿ ,ಮನೆ ಮನೆ ಸವೆ೯ ಮಾಡುತ್ತಿರುವವರಿಗೆ ಸಂಘವು ಮೆಡಿಸನ್ ಕಿಟ್ ವಿತರಿಸುವ ಮೂಲಕ ಸೇವೆಯನ್ನು ಮಾಡುತ್ತಿದೆ.
ಈ ಕೋರೋನ್ ಎನ್ನುವಂತ ಮಹಾಮಾರಿಯ ಸಂದಭ೯ದಲ್ಲಿ ತಮ್ಮ ಜೀವವನ್ನು ಅಂಗೈಯಲ್ಲಿ ಇಟ್ಟುಕೊಂಡು ಈ ಒಂದು ಕಾಯ೯ವನ್ನು ಮಾಡುತ್ತಿರುವವರಿಗೆ ಕೋವೀಡ್ ಕಿಟ್ ಮತ್ತು ಸ್ಯಾನಿಟೈಜರ್ ವಿತರಿಸಲು ಹೊಸಪೇಟೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಸುನಂದಮ್ಮ ನವರು ಚಾಲನೆ ನೀಡಿ ಉತ್ತಮ ಕಾರ್ಯಕ್ರಮವನ್ನು ಫುಲೆ ಶಿಕ್ಷಕಿಯರು ಮಾಡುತ್ತಿದ್ದೆ ಎಂದು ಶುಭ ಹಾರೈಸಿದರು ಈ ಒಂದು ಕಾಯ೯ಕ್ಕೆ ಸಂಘದ ಪದಾಧಿಕಾರಿಗಳು ಎಲ್ಲರೂ ಕೈಜೋಡಿಸಿದ್ದಾರೆ. ಈ ಕಾಯ೯ಕ್ರಮದಲ್ಲಿ ಸಿ.ಆರ್.ಪಿ. ಮತ್ತು ಹಿರಿಯ ಗುರುಗಳು ಚಂದ್ರಶೇಖರ್ ಸಾರ್ ಹೇಮರೆಡ್ಡಿ ಸಾರ್ ,ವಿಶ್ವನಾಥ್ ಸಾರ್ ವೆಂಕಟೇಶ ರೆಡ್ಡಿ ಇ.ಸಿ.ಒ.ಸರ್ .ಗುರುಗಳು ,ಗುರುಮಾತೆಯರು ಎಲ್ಲರೂ ಭಾಗವಹಿಸಿದ್ದರು.
ಧನ ಸಹಾಯ ಮಾಡಿದಂತ ಪದಾಧಿಕಾರಿಗಳು
ಉಮಾದೇವಿ, ಅರುಂಧತಿ,ಮಾಧವಿ,ಶಶಿಕಲಾ, ರೇಷ್ಮಾ, ರೂಪ ಟೀಕಾರಿ, ಅನ್ನಪೂರ್ಣ ಸುಣಗಾರ, ವಿನುತಾ, ಮನೋಹರಿ,ರೂಪದೇವಿ .ಡಿ.ಎಸ್.ಹನುಮವ್ವ ಉಷಾರಾಣಿ ಸುಧಮ್ಮ, ಶೋಭಾ ಜಮಾದರ್,ಶ್ರೀ ಲತಾ ಇನ್ನೂ ಹಲವರು ಸಂಘಕ್ಕೆ ಧನ ಸಹಾಯ ಮಾಡಿದ್ದಾರೆ.

ಇಂಥ ಜನಸೇವಾ ಸಮಾಜಮುಖಿ ಕಾರ್ಯಕ್ರಮ ಮಾಡಲು ಸಾವಿತ್ರಿಬಾಯಿ ಫುಲೆ ಸಂಘದ ವೇದಿಕೆ ಕಲ್ಪಿಸಿ ಕೊಟ್ಟ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ ಎಸ್ ಮುಳ್ಳೂರ,ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಜ್ಯೋತಿ ರವರುಗಳಿಗೆ ಈ ಸುಸಂದರ್ಬದಲ್ಲಿ ವಿಜಯನಗರ ಜಿಲ್ಲಾಧ್ಯಕ್ಷರಾದ
ಉಮಾದೇವಿ. ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ
ಅರುಂಧತಿ ರವರು ಅಭಿನಂದಿಸಿದ್ದಾರೆ.

ಸಹಕಾರ ನೀಡಿದ ಎಲ್ಲಾ ಪದಾಧಿಕಾರಿಗಳಿಗೆ
ಹನುಮವ್ವ ಹೊಸಪೇಟೆ ತಾಲ್ಲೂಕು ಅಧ್ಯಕ್ಷೆ ಹಾಗೂ
ಉಷಾರಾಣಿ.ತಾಲ್ಲೂಕು ಪ್ರಧಾನಕಾಯ೯ದಶಿ೯ಯವರು
ಅನಂತ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಉನ್ನತ ವಿದ್ಯಾರ್ಹತೆಯುಳ್ಳ,ಸುದೀರ್ಘ ಸೇವಾ ಅನುಭವವುಳ್ಳ ಕಾರ್ಯನಿರತ ಶಿಕ್ಷಕರಿಗೆ ನ್ಯಾಯ ಸಿಗಲಿ- ಮುಳ್ಳೂರ ಅಭಿಪ್ರಾಯ

ಧಾರವಾಡ ಮೇ30*  ಹೊಸ ಸಿ ಅಂಡ್ ರೂಲ್ ಬಂದಾಗಿನಿಂದಲೂ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕದಲ್ಲಾಗಲಿ ಅಥವಾ ಅವರುಗೆ ಬಡ್ತಿ ನೀಡುವ ವಿಚಾರದಲ್ಲಾಗಲಿ, ಹಾಲಿ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ಶಿಕ್ಷಕ ಶಿಕ್ಷಕಿಯರಿಗೆ ಮೇಲಿಂದ ಮೇಲೆ  ಹಲವಾರು ಸಮಸ್ಯೆಗಳು  ಎದುರಾಗುತ್ತಲೇ ಇವೆ.
ಹೌದು ಇಲ್ಲಿಯವರೆಗೆ  1-7 ನೇ ತರಗತಿ ಬೋದನೆಗಾಗಿ ನೇಮಕವಾದ ಶಿಕ್ಷಕರನ್ನು ಇಂದು 1-5 ನೇ ತರಗತಿಗೆ ಸೀಮಿತಗೊಳಿಸಿರುವುದು, 6-8 ನೇ ತರಗತಿಗೆ ಪದವಿ ಮಾಡಿದವರನ್ನು ನೇರವಾಗಿ ನೇಮಕಾತಿ ಮಾಡಿರುವುದು ,ಪ್ರಸ್ತುತ ಕಾರ್ಯ ನಿರತ ಶಿಕ್ಷಕರುಗಳ ಉನ್ನತ ವಿದ್ಯಾರ್ಹತೆಗೆ ಹಾಗೂ ಅವರು ಸಲ್ಲಿಸುವ ದೀರ್ಘ ಸೇವಾವಧಿಯ ಅನುಭವಕ್ಕೆ ಕಿಂಚಿತ್ತು ಮಾನ್ಯತೆ ಇಲ್ಲದಂತಾಗಿದೆ. ಇಂದು ಅವರನ್ನು 1-5 ನೇ ತರಗತಿಗೆ ಮಾತ್ರ ಸೀಮಿತಗೊಳಿಸಿರುವುದು ಹಿಂಬಡ್ತಿ ನೀಡಿದಂತೆ ಮಾಡಲಾಗಿದೆ. ಇದು ರಾಜ್ಯದ ಎಲ್ಲಾ ಶಿಕ್ಷಕರಿಗೂ ಅಸಮಾದಾನವನ್ನುಂಟು ಮಾಡಿದೆ. ಸರ್ಕಾರಕ್ಕೆ ಹಲವಾರು ಬಾರಿ ಈ ವಿಷಯವಾಗಿ ಸಿ ಅಂಡ್ ಆರ್ ನಿಯಮ ತಿದ್ದುಪಡಿ ಮಾಡಿ ಕಾರ್ಯನಿರತ ಶಿಕ್ಷಕರು ಗಳಿಸಿರುವ ಉನ್ನತ ಪದವಿ ವಿದ್ಯಾರ್ಹತೆಯನ್ನು ಪರಿಗಣಿಸಿ ಮೊದಲು ಅವರನ್ನು 6-8 ನೇ ತರಗತಿ ಬೋದಕರೆಂದು ವಿಲೀನ ಮಾಡಿ ನಂತರದಲ್ಲಿ ಉಳಿದ ಖಾಲಿ ಹುದ್ದೆಗಳಿಗೆ ಹೊಸ ನೇಮಕಾತಿ ಮಾಡಿ ಎಂದು ಮನವಿ ಸಲ್ಲಿಸಿದ್ದು,ಸರ್ಕಾರವು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ   ಭರವಸೆ ನೀಡಿತ್ತಾದರೂ ಮುಂದುವರೆದು  ಶಿಕ್ಷಕರ ಬಡ್ತಿ ವಿಚಾರದಲ್ಲಿಯೂ ಸಮಸ್ಯೆಯುಂಟಾಗಿದೆ. ಹಿಂದಿನಿಂದಲೂ 1-7 ನೇ ತರಗತಿ ಬೋದಿಸುತ್ತಿದ್ದ ಶಿಕ್ಷಕರನ್ನು ಇಲಾಖೆಯು ಅವರ ವಿದ್ಯಾರ್ಹತೆ ಪರಿಗಣಿಸಿ  8-10 ತರಗತಿ ಪ್ರೌಢಶಾಲೆಗೆ  ಬಡ್ತಿ ನೀಡುವ ಪ್ರಕ್ರಿಯೆ ನಡೆಸುತ್ತಲೇ  ಬಂದಿತ್ತು‌..ಅದೇ ರೀತಿ ಕಳೆದ ವರ್ಷದಲ್ಲು ಹಲವಾರು ಶಿಕ್ಷಕರಿಗೆ  ಬಡ್ತಿ ಬಾಗ್ಯ ಲಭಿಸಿತ್ತು.. ಇದನ್ನು ಪ್ರಶ್ನಿಸಿ ಪಧವೀಧರ(6-8) ಶಿಕ್ಷಕರು ನ್ಯಾಯಾಲಯದ ಮೊರೆ ಹೋಗಿದ್ದರ ಪರಿಣಾಮ ಪ್ರಸ್ತುತ ಜಾರಿಯಲ್ಲಿದ್ದ ಸಿ ಅಂಡ್ ಆರ್ ನಿಯಮವನ್ನು ಎತ್ತಿಹಿಡಿದು ಇಂದು ಪ್ರಾಥಮಿಕ ಶಾಲಾ ಶಿಕ್ಷಕರು  8-10 ನೇ ತರಗತಿಗೆ ಬಡ್ತಿ ಹೊಂದಲು ಅನರ್ಹರು ಹಾಗೂ ಈಗಾಗಲೆ  ಬಡ್ತಿ ಹೊಂದಿದ್ದ ಸುಮಾರು 8000 ಶಿಕ್ಷಕರಿಗೆ ಹಿಂಬಡ್ತಿ ನೀಡಲು ಘನ ನ್ಯಾಯಾಲಯ ತೀರ್ಪು ನೀಡಿದೆ. ಎಲ್ಲಾ ಕಾರ್ಯನಿರತ ಶಿಕ್ಷಕರಿಗೆ ಈ ತೀರ್ಪಿನಿಂದ ಆಘಾತವಾಗಿದೆ.ಇದರ ಜೊತೆಗೆ ಮನ ನೋವಾಗಿದೆ ಅವರ ಉನ್ನತ ವಿದ್ಯಾರ್ಹತೆ ಹಾಗೂ ಅವರ ಸುದೀರ್ಘ ಸೇವಾ ಅನುಭವಕ್ಕೆ ಬೆಲೆಯೇ ಇಲ್ಲದಂತಾಗಿದೆ,
ಈ ಸಂಬಂಧ ಘನ ಸರ್ಕಾರವು ಗಮನಾರ್ಹವಾಗಿ ಪರಿಗಣಿಸಿ ಘನ ನ್ಯಾಯಾಲಯಕ್ಕೆ ಮರುಪರಿಶೀಲಿಸುವಂತೆ ಕೋರಿ ಮನವಿ ಸಲ್ಲಿಸುವಂತೆ ಹಾಗೂ ಮುಂದೆಯೂ ಇಂತ ಸಮಸ್ಯೆಗಳು ಶಿಕ್ಷಕರಿಗೆ ಬಾರದಂತೆ,ಶಿಕ್ಷಕರ ಉನ್ನತ  ವಿದ್ಯಾರ್ಹತೆಗೆ ಹಾಗೂ ಅವರು ಸಲ್ಲಿಸುತ್ತಿರುವ ಸುದೀರ್ಘ ಸೇವಾ ಅನುಭವಕ್ಕೆ ಸೂಕ್ತ ನ್ಯಾಯ ಒದಗಿಸಲು ಸಿ ಅಂಡ್ ಆರ್ ನಿಯಮವನ್ನು ತಿದ್ದುಪಡಿ ಮಾಡಿ ಅನುಕೂಲ ಮಾಡಿಕೊಡುವಂತೆ ನಮ್ಮ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಮನವಿಯನ್ನು ಮಾಡಿದೆ.

ಈ ದಿನ‌ ವಿಶ್ವ ಹಸಿವಿನ ದಿನ- ಆಹಾರ ಕಿಟ್ ವಿತರಿಸಿದ ಫುಲೆ ಶಿಕ್ಷಕಿಯರ ಸಂಘ

ಆಹಾರ ಕಿಟ್ ವಿತರಣೆಗಾಗಿ ಸಿದ್ದತೆ ನಡೆಸುತ್ತಿರುವುದು

ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ,ರಾಜ್ಯಘಟಕ- ಧಾರವಾಡ

ಜಿಲ್ಲಾ ಘಟಕ- ಶಿವಮೊಗ್ಗ

ಶಿವಮೊಗ್ಗ ಮೇ 28.ಶಿವಮೊಗ್ಗ ಘಟಕವು  ಈ ದಿನ ಕೋವಿಡ್ ಪರಿಸ್ಥಿತಿಯಲ್ಲಿ ನಾಲ್ಕಾರು ಜನರ
ಹಸಿವನ್ನು ನೀಗಿಸುವ ಕಾರ್ಯ ಮಾಡೋಣ ಎಂದು ತೀರ್ಮಾನಿಸಿ ಆಸಕ್ತ ಶಿಕ್ಷಕಿಯರಿಂದ ಒಂದಿಷ್ಟು ಧನ ಸಹಾಯ ಹಣವನ್ನು ಸಂಗ್ರಹಿಸಿ ಹಸಿದವರಿಗೆ ಆಹಾರ ಕಿಟ್ ವಿತರಿಸುವ ಕಾರ್ಯವನ್ನು ತಾಲ್ಲೂಕಿನ ನವುಲೇ ಸಮೀಪದ ಟೆಂಟ್ ನಿವಾಸಿಗಳಿಗೆ ಮೊದಲ ಸುತ್ತಿನಲ್ಲಿ 12 ಕುಟುಂಬಗಳಿಗೆ ವಿತರಿಸಲಾಯಿತು,
ತಾಲ್ಲೂಕಿನ ಮಾನ್ಯ  ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ನಾಗರಾಜು ಪಿ.ರವರು ಈ ಕಾರ್ಯಕ್ರಮಕ್ಕೆ ಚಾಲನೆ ಮಾಡು ಶುಭ ಹಾರೈಸಿ ಇಂತಹ ಉತ್ತಮ ಕಾರ್ಯಕ್ರಮಗಳು ಸಂಘಟನೆ ವತಿಯಿಂದ ನಡೆಯುತ್ತಲೇ ಇರಲಿ ಎಂದು ಆಶಿಸಿದರು,.ಫುಲೆ
ಸಂಘದ  ಈ ಅಳಿಲು ಸೇವಾಕಾರ್ಯಕ್ಕೆ ಹಲವು ಶಿಕ್ಷಕಿ ಮಿತ್ರರು ಕೈಜೋಡಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಧನ ಸಹಾಯ ಮಾಡಿದವರಲ್ಲಿ
ರಾಧಾ.  ಜಿಲ್ಲಾಧ್ಯಕ್ಷ ರು,ಪುಷ್ಪ ನರೇಗೌಡರ್ ಪ್ರ.ಕಾರ್ಯದರ್ಶಿ,ಅನಿತಕೃಷ್ಣ ಜಿಲ್ಲಾಉಪಾಧ್ಯಕ್ಷರು,ಶಾಹಿನ್ ಬಾನು ತಾಲೂಕು ಅಧ್ಯಕ್ಷ ರು ಶಿವಮೊಗ್ಗ,ಲಕ್ಷ್ಮಿ ಖಜಾಂಚಿ,ಶಿವಮೊಗ್ಗ ತಾಲೂಕು,ಸುಮಂಗಲ.ಉಪಾಧ್ಯಕ್ಷ ರು.ಸಾಗರ,ಪಾರ್ವತವ್ವ. ಸಹಕಾರ್ಯದರ್ಶಿ,ಗೀತಾ.ಎಲ್.ಎಂ.ಸಹ ಕಾರ್ಯದರ್ಶಿ ತೀರ್ಥಹಳ್ಳಿ ಹಾಗೂ ಶಾಂತಿ ಆಗ್ನಿಸ್ ಸಹಕಾರ್ಯದರ್ಶಿ,ಶಿವಮೊಗ್ಗ ತಾಲೂಕು,ರಾಧಾ,ಅನಿತ,ಶಾಹಿನ್ ಇವರುಗಳು ಈ ಅತ್ಯುತ್ತಮ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದರು, ತಮ್ಮಗಳ ಧನ ಸಹಾಯದ ಜೊತೆಗೆ ಆಹಾರ ಕಿಟ್ ವಿತರಣೆಯಲ್ಲಿ ಸಕ್ರಿಯವಾಗಿ ಬಾಗಿಯಾಗಿದ್ದರು.
ಈ ಕಾರ್ಯಕ್ರಮಕ್ಕೆ ಕೈಜೋಡಿಸಿದ ಶಿಕ್ಷಕಿ ಮಿತ್ರರಿಗೆ
ಜಿಲ್ಲಾಧ್ಯಕ್ಷರಾದ ಶ್ರೀಮತಿ ರಾಧಾ ರವರು ಎಲ್ಲಾ ಪದಾಧಿಕಾರಿಗಳ ವತಿಯಿಂದ ಅನಂತ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಹಾಗೂ  ಎರಡನೇ ಸುತ್ತಿನ ಆಹಾರ ಕಿಟ್ ವಿತರಣೆಗೆ ಧನ ಸಹಾಯ ಮಾಡುವ ಶಿಕ್ಷಕಿಯರು ಶಿವಮೊಗ್ಗ ಜಿಲ್ಲಾಧ್ಯಕ್ಷರು ಶ್ರೀಮತಿ ರಾಧಾ ರವರನ್ನು ಸಂಪರ್ಕಿಸಲು ತಿಳಿಸಿದ್ದಾರೆ..

ಪ್ರತೀ ಶಿಕ್ಷಕರುಗಳಿಗೂ ಕೊವಿಡ್ ಲಸಿಕೆ ಹಾಕಿಸಲು ಒತ್ತಾಯಿಸಿ ಫುಲೆ ಸಂಘ ಮನವಿ ಸಲ್ಲಿಕೆ

ಶಿವಮೊಗ್ಗ ಮೇ.28  ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ- ಧಾರವಾಡ.  ಶಿವಮೊಗ್ಗ ಘಟಕದ ವತಿಯಿಂದ ಕೊವಿಡ್ ಕರ್ತವ್ಯ ನಿರ್ವಹಿಸುತ್ತಿರುವ ವಾರಿಯರ್ ಶಿಕ್ಷಕರಿಗಷ್ಟೆ ಅಲ್ಲದೇ ಪ್ರತೀ ಶಿಕ್ಷಕರುಗಳಿಗೂ ಕೊವಿಡ್ ಲಸಿಕೆ ಹಾಕಿಸಲು ಕೋರಿ  ಇಂದು  ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ  ಮನವಿ ಸಲ್ಲಿಸಲಾಯಿತು.
ಮನವಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಾನ್ಯ ನಾಗರಾಜ್ ಪಿ.ರವರು ಸಕಾರಾತ್ಮಕವಾಗಿ ಸ್ಪಂದಿಸಿರುತ್ತಾರೆ ಎಂದು ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಶ್ರೀಮತಿ ರಾಧಾ ರವರು ತಿಳಿಸಿದ್ದಾರೆ. ಉಪಾಧ್ಯಕ್ಷರಾದ ಶ್ರೀಮತಿ ಅನಿತ ಕೃಷ್ಣ, ತಾಲ್ಲೂಕು ಅಧ್ಯಕ್ಷರಾದ ಶ್ರೀಮತಿ ಶಾಯಿನ್ ಬಾನು  ಹಾಗು ಇತರರು ಈ ಸಂದರ್ಭದಲ್ಲಿ  ಹಾಜರಿದ್ದರು.

ಸಂಘ ಬಲಗೊಳಿಸಲು ಮತ್ತೊಂದು ಹೆಜ್ಜೆ ಮುಂದೆ ಇಟ್ಟ ಫುಲೆ ಶಿಕ್ಷಕಿಯರ ಸಂಘ.

ಧಾರವಾಡ ಮೇ27- ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ತಮ್ಮ ಎಲ್ಲಾ ಸದಸ್ಯ ಶಿಕ್ಷಕಿಯರನ್ನು ಸೋಶಿಯಲ್ ಮೀಡಿಯ ಬಳಸಿ ಒಂದೆಡೆ ಸೇರಿಸುವ ಹಾಗೂ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಹೆಜ್ಹೆ ಇಟ್ಟಿದೆ.ಕುಟುಂಬ ಎಂಬ ಆಪ್ ನೊಂದಿಗೆ ಒಪ್ಪಂದ ಮಾಡಿಕೊಂಡು ತನ್ನೆಲ್ಲ ಸದಸ್ಯರನ್ನು ಒಂದೇ ಸೂರಿನಡಿ ತರುವಲ್ಲಿ ಯಶಸ್ವಿಯಾಗಿದೆ.ಇದರಿಂದ ಸಂಘಟನೆ ಬಲಗೊಳಿಸಲು ಸುಲಭಸಾದ್ಯವಾಗಲಿದೆ.
ಹೌದು ಇತ್ತೀಚೆಗೆ ಅಭಿವೃದ್ದಿಪಡಿಸಲಾಗಿರುವ ಭಾರತ ಮೂಲದ ‘ಕುಟುಂಬ’ ಎಂಬ ಅಪ್ಲಿಕೇಶನ್ ಎಲ್ಲ ಕಡೆ ಎಲ್ಲರ ಮನಸಲ್ಲಿ ಮನೆ ಮಾಡಿದೆ.ಇದು ಒಂದು ಭಾರತದ ಬಹುದೊಡ್ಡ ಸೋಶಿಯಲ್ ಅಪ್ಲಿಕೇಶನ್ ಆಗಿದ್ದು ಸಂಘಟನೆ ಸಲುವಾಗಿಯೇ ಸಿದ್ದಪಡಿಸಲಾಗಿದೆ. ವಿವಿಧ ವಿನ್ಯಾಸದ ಗುಣಲಕ್ಷಣ ಹೊಂದಿರುವ ಹಾಗೂ ಯಾವುದೇ ಸಂಘಟನೆಗಳು ಸುಲಭವಾಗಿ ಬಳಕೆ ಮಾಡಿ ಎಲ್ಲಾ ಸದಸ್ಯರನ್ನು ಒಂದೇ ಸೂರಿನಡಿ ಸೇರಿಸುವ ಹಾಗೂ ದಿನನಿತ್ಯ ಎಲ್ಲರಲ್ಲಿಯೂ ಕ್ಷಣಾರ್ಧದಲ್ಲಿ ಸಂಪರ್ಕ ಕಲ್ಪಿಸುವ ರೀತಿ ಅಭಿವೃದ್ದಿ ಮಾಡಲಾಗಿದೆ.ನೊಂದಣಿ ಆದ ಸದಸ್ಯರ,ಗುರುತಿನ ಚೀಟಿ, ಉತ್ತಮ ಪ್ರೋತ್ಸಾಹ ನೀಡಿದವರಿಗೆ ಪ್ರಶಂಸ ಪತ್ರಗಳು ಸ್ವಯಂಚಾಲಿತವಾಗಿ ಮುದ್ರಣಗೊಳ್ಳುತ್ತವೆ.
ಫೇಸ್ ಬುಕ್ ನಂತೆಯೇ ಇದೂ ಕೂಡ ನೊಂದಾಯಿತ ಸದಸ್ಯರ ಸಂಖ್ಯೆಗೆ ಯಾವುದೇ ಮಿತಿ ಇರುವುದಿಲ್ಲ…ಲಕ್ಷಾಂತರ ಸದಸ್ಯರು ಒಂದೇ ಸಂಘಟನೆ ಪ್ಲಾಟ್ ಫಾರಂ ಲಿ ಸೇರ್ಪಡೆಯಾಗಿ ಚಾಟಿಂಗ್,ಶೇರಿಂಗ್,ಕಾಮೆಂಟ್,ಲೈಕ್,ಹಾಗೂ ,ಚರ್ಚೆ,ಪ್ರಕಟಣೆ, ಆಡಿಯೊ ವೀಡಿಯೊ ಕಾಲ್,ವೆಬಿನಾರ್ ಮೀಟ್,ಕಾನ್ಫರೆನ್ಸ್ ಇತರೆ ಎಲ್ಲದಕೂ ಒಂದೇ ಆಪ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ. ವಾಟ್ಸಪ್ ರೀತಿ ಪೋನ್ ಸ್ಟೋರೆಜ್ ಸಮಸ್ಯೆ ಇದರಲ್ಲಿಲ್ಲ. ಹಾಗೂ ಉತ್ತಮ ಡೆಟಾ ಶೇರಿಂಗ್ ಭದ್ರತೆ ಕೂಡ ಒದಗಿಸಲಾಗಿದೆ.
ರಾಜ್ಯದ ಅಥವಾ ರಾಷ್ಟ್ರದ ಯಾವುದೇ ಸರ್ಕಾರಿ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕಿಯರು ಈ ಕೆಳಗಿನ ಲಿಂಕ್ ಬಳಸಿ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ತಮ್ಮ ಮೊಬೈಲ್ ಸಂಖ್ಯೆ,ಹೆಸರು ತಮ್ಮ ಕೆಲಸ ಮಾಡುವ ತಾಲ್ಲೂಕಿನ ಪಿನ್ ಕೊಡ್ ಬಳಸಿ ರಿಜಿಸ್ಟರ್ ಮಾಡಿಕೊಳ್ಳಲು ಎಲ್ಲರಿಗೂ ಸೂಚಿಸಿದೆ.
https://kutumb.app/karnataka-savitribhai-shikshakiyar-sanga?ref=R3SE3
ತಮಗೆ ಯಾವುದೇ ತಾಂತ್ರಿಕ ಅಡಚಣೆ ಉಂಟಾದಲ್ಲಿ ಅಥವಾ ಹೆಚ್ಚಿನ ಮಾಹಿತಿಗೆ ತಮ್ಮ ಜಿಲ್ಲೆಯ/ ತಾಲ್ಲೂಕಿನ ಪದಾಧಿಕಾರಿಗಳನ್ನು ಸಂಪರ್ಕಿಸಲು ತಿಳಿಸಿದೆ‌.
ಅಪ್ಲಿಕೇಷನ್ ಅಳವಡಿಸಿಕೊಂಡ 24 ಗಂಟೆಯ ಅವಧಿಯಲ್ಲಿ ಸಾವಿರಕ್ಕೂ ಹೆಚ್ಚು ಶಿಕ್ಷಕಿಯರು ನೊಂದಾವಣೆ ಮಾಡಿಕೊಂಡು ಗುರುತಿನ ಚೀಟಿ ಪಡೆದಿರುವುದು ಸಂತೋಷದ ಸಂಗತಿಯಾಗಿದೆ.
ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ರವರು ಹರ್ಷ ವ್ಯಕ್ತಪಡಿಸಿದ್ದಾರೆ.ಹಾಗೂ ರಾಜ್ಯದ ಎಲ್ಲಾ ಸರ್ಕಾರಿ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕಿಯರು ಕುಟುಂಬ ಆಪ್ ಡೌನ್‌ಲೋಡ್ ಮಾಡಿಕೊಂಡು ನಮ್ಮ ಸಂಘದ ಈ ಮೇಲಿನ ಲಿಂಕ್ ಬಳಸಿ ನೊಂದಣಿ ಮಾಡಿಕೊಳ್ಳಲು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ರಾಜ್ಯಘಟಕ- ಧಾರವಾಡ

ರಾಜ್ಯ ಮಟ್ಟದ ಸಾಮಾನ್ಯ ಸಭೆ-ಯಶಸ್ವಿ

*ಧಾರವಾಡ ಮೇ24* ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯ ಘಟಕ ಧಾರವಾಡ  ವತಿಯಿಂದ
ಇಂದು ಸಂಘದ ಎಲ್ಲಾ ರಾಜ್ಯ ಪದಾಧಿಕಾರಿಗಳು ಹಾಗೂ ಜಿಲ್ಲಾ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಎಲ್ಲಾ ಜಿಲ್ಲಾ ಕೋಶಾಧ್ಯಕ್ಷರುಗಳಿಗೆ
ರಾಜ್ಯ ಮಟ್ಟದ ಸಾಮಾನ್ಯ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಮೊದಲನೆಯದಾಗಿ covid ನಿಂದಾ ಮೃತಪಟ್ಟ ಶಿಕ್ಷಕ ಶಿಕ್ಷಕಿಯರಿಗೆ ಭಾವ ಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು…
ಸಭೆಯಲ್ಲಿ ಸಂಘಟನೆಯ ಕುರಿತು ಹಾಗೂ ಹಲೋ .. ಚಿಲ್ಡ್ರನ್ ಫೋನ್ ಇನ್ ಕಾರ್ಯಕ್ರಮದ ಕುರಿತು ಚರ್ಚಿಸಲಾಯಿತು.. ಮುಂದಿನ ವರ್ಷದಿಂದ ಸಂಘದ ವತಿಯಿಂದ ಹಮಿಕೊಳ್ಳಬೇಕಾದ ಕಾರ್ಯ ಚಟುವಟಕೆಗಳ ಕುರಿತು ಕ್ರಿಯಾ ಯೋಜನೆ.ಶಿಕ್ಷಕಿಯರ ಸಮಸ್ಯೆಗಳ ಕುರಿತು ಚರ್ಚೆ… ಕೋರೋನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕಿಯರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಬಗ್ಗೆ …ಹಾಗೂ
ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಎಲ್ಲಾ ಪದಾಧಿಕಾರಿಗಳಿಗೆ ತಿಳಿಸಲಾಯಿತು.. ಹಲವಾರು ಜಿಲ್ಲೆಗಳಲ್ಲಿ  ನಮ್ಮ ಸಂಘಟನೆಯ ವತಿಯಿಂದ ಈಗಾಗಲೇ covid ವಾರಿಯರ್ಸ್ ಗಳಿಗೆ ಮತ್ತು covid ಸೊಂಕೀತರಿಗೆ ಊಟ ಉಪಹಾರದ  ವ್ಯವಸ್ಥೆ.. ಮೆಡಿಕಲ್ ಕಿಟ್ ವಿತರಣೆ… ಅಗತ್ಯ ವೈದ್ಯಕೀಯ ಸಾಮಗ್ರಿ(ಆಕ್ಸಿಜನ್) ವಿತರಣೆ ಹಮ್ಮಿಕೊಳ್ಳುತ್ತಿರುವುದರ ಬಗ್ಗೆ ಸಂಘದ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿಲಾಯಿತು..ಉತ್ತಮ ಕ್ರಿಯಾಶೀಲ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.. .. ಸರ್ಕಾರದ ವತಿಯಿಂದ  ಶಾಲಾ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ಒದಗಿಸುವ ಬಗ್ಗೆ  ಚರ್ಚಿಸುತ್ತಿರುವ ಮಾನ್ಯ ಶಿಕ್ಷಣ ಸಚಿವರಾದ ಶ್ರೀ ಸುರೇಶ್ ಕುಮಾರ್ ಸರ್ ರವರಿಗೆ ಅಭಿನಂದನೆ ಸಲ್ಲಿಸಲಾಯಿತು.. ವರ್ಗಾವಣೆಯನ್ನೂ ಆದಷ್ಟೂ ಬೇಗ ಪ್ರಾರಂಭ ಮಾಡಲೂ ಸರ್ಕಾರಕ್ಕೇ ಒತ್ತಾಯ ಮಾಡಲು ಚರ್ಚಿಸಲಾಯಿತು. .
ಇಂದು ಹಾಜರಾದ ಎಲ್ಲಾ ರಾಜ್ಯ ಪದಾಧಿಕಾರಿಗಳಿಗೆ ಮತ್ತು ಜಿಲ್ಲಾ  ಅಧ್ಯಕ್ಷರು,ಪ್ರಧಾನ ಕಾರ್ಯದರ್ಶಿ ಮತ್ತು ಜಿಲ್ಲಾ ಕೋಶಧ್ಯಕ್ಷರು ಮತ್ತು ಎಲ್ಲಾ ಪದಾಧಿಕಾರಿಗಳಿಗೆ
ತುಂಬು ಹೃದಯದ  ಧನ್ಯವಾದಗಳನ್ನು ಸಲ್ಲಿಸಲಾಯಿತು.. ರಾಜ್ಯಾಧ್ಯಕ್ಷರಾದ  ಲತಾ ಎಸ್ ಮುಳ್ಳೂರು ಮೇಡಂ ರವರು ಎಲ್ಲಾ ಪದಾಧಿಕಾರಿಗಳಿಗೆ ಅಗತ್ಯ ಮಾಹಿತಿ. ಸಲಹೆ ಸೂಚನೆ ನೀಡಿದರು…

ಗೂಗಲ್ ಮೀಟ್

ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಜ್ಯೋತಿ ಹೆಚ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ವತಿಯಿಂದ ಹಮ್ಮಿಕೊಳ್ಳಬಹುದಾದ ಕಾರ್ಯಕ್ರಮಗಳ ವಿವರ. ಮತ್ತು ಅಗತ್ಯ ಮಾರ್ಗದರ್ಶನ ನೀಡಿದರು..ಕಾರ್ಯಕ್ರಮದಲ್ಲಿ ರಾಜ್ಯ ಹಿರಿಯ ಉಪಾಧ್ಯಕ್ಷರಾದ ಹೇಮಾ ಕೊಂಡಣ್ಣನ್ನವರ…ರಾಜ್ಯ ಉಪಾಧ್ಯಕ್ಷರಾದ ಅನುಸೂಯ .ಅಕ್ಕಮಹಾದೇವಿ.. ರಾಜ್ಯ ಸಂಘಟನಾ ಕಾರ್ಯದರ್ಶಿ ಕಲ್ಪನಾ.. ಹಾಗೂ ಜಿಲ್ಲಾ ಅಧ್ಯಕ್ಷರು ಕಾರ್ಯದರ್ಶಿಗಳು ಹಾಗೂ  ಕೋಶಾಧ್ಯಕ್ಷರು ಹಾಜರಿದ್ದರು.. ಲತಾ ಎಸ್ ಮುಳ್ಳೂರ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.. ಸಾರಿಕಾ ಗಂಗಾ ಪ್ರಾರ್ಥನೆ ಮಾಡಿದರು.ಹೇಮಾ ಕೊಡ್ಡಣ್ಣವರ ಸ್ವಾಗತ…ಜ್ಯೋತಿ ಹೆಚ್. ವಂದನಾರ್ಪಣೆ ಮಾಡಿದರು… ಅಕ್ಕಮಹಾದೇವಿ ರವರು ನಿರೂಪಣೆ ಮಾಡಿದರು.. ನಿಮ್ಮ ಸಹಕಾರ ಹೀಗೆ ಸದಾ ಇರಲಿ ಎಂದು
ಸಂಸ್ಥಾಪಕ ರಾಜ್ಯಾಧ್ಯಕ್ಷರಾದ
ಡಾ.ಲತಾ ಎಸ್ ಮುಳ್ಳೂರ
ಹಾಗೂ
ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ
ಶ್ರೀಮತಿ ಜ್ಯೋತಿ ಹೆಚ್
ರವರುಗಳು ಆಶಿಸಿದರು.ಒಟ್ಟಾರೆಯಾಗಿ ಸಾಮಾನ್ಯ ಸಭೆಯು ಯಶಸ್ವಿಯಾಯಿತು.