ರಾಯಚೂರು-ದಿನಾಂಕ 29 /01/ 2022 ರಂದು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ತಾಲೂಕು ಘಟಕ ರಾಯಚೂರು ವತಿಯಿಂದ ಸಾವಿತ್ರಿಬಾಯಿ ಪುಲೆಯವರ ಜನ್ಮ ದಿನಾಚರಣೆಯನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಷ್ಮಿಯಾದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಶಿಕ್ಷಣ ಅಧಿಕಾರಿಗಳಾದ H ಸುಖದೇವ ಸರ್ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಶಿಕ್ಷಣ ಇಲಾಖೆಯಲ್ಲಿ ಏನಾದರೂ ಉತ್ತಮ ಕೆಲಸಗಳು ಆಗಿದ್ದರೆ ಅದಕ್ಕೆ ಕಾರಣ ಶಿಕ್ಷಕಿಯರು. ಉದಾಹರಣೆಗೆ ಎಸ್ಎಸ್ಎಲ್ ಸಿ ಫಲಿತಾಂಶ ಮತ್ತೆ ಬೇರೆ ಬೇರೆ ಕಾರ್ಯಕ್ರಮಗಳ ನಿರ್ವಹಣೆಗೆ ಮುಖ್ಯ ಕಾರಣಿಕರ್ತರು ಶಿಕ್ಷಕಿಯರಾಗಿದ್ದಾರೆ. ಶಿಕ್ಷಕಿಯರು ಶಿಕ್ಷಣ ಇಲಾಖೆಯ ಬಹುದೊಡ್ಡ ಶಕ್ತಿಯಾಗಿದ್ದಾರೆ ರಾಜ್ಯ ಮಟ್ಟದಲ್ಲಿ ಉತ್ತಮ ಕೆಲಸಗಳು ನಮ್ಮ ಜಿಲ್ಲಾ ಸಂಘದ ವತಿಯಿಂದ ನಡೆಯಬೇಕು ಎಂದು ಅವರು ಹೇಳಿದರು.

ಶಿಕ್ಷಕಿಯರು ಅಕ್ಷರದವ್ವನ ಕನಸುಗಳನ್ನು ಕಾಣಬೇಕು. ಸಾವಿತ್ರಿಬಾಯಿ ಪುಲೆಯವರ ಕನಸುಗಳನ್ನು ನನಸು ಮಾಡುವ ಸಂಘ ಇದಾಗಬೇಕು ಅಕ್ಷರದವರ ಆಶಯಗಳನ್ನು ಪ್ರತಿಯೊಂದು ಹೆಣ್ಣು ಮಗುವಿನಲ್ಲಿ ತುಂಬುವಂತಹ ಕೆಲಸವನ್ನು ನಮ್ಮ ಶಿಕ್ಷಕಿಯರು ಮಾಡಬೇಕು ಎಂದು ಹೇಳಿದರು. ಸಂಘವು ಶಿಕ್ಷಕರು ಮಾಡುವ ಉತ್ತಮ ಕೆಲಸಗಳನ್ನು ಗುರುತಿಸಿ ಎಲೆಮರೆ ಕಾಯಿಯಂತೆ ಕಾರ್ಯನಿರ್ವಹಿಸುವ ಶಿಕ್ಷಕರುಗಳನ್ನು ಸನ್ಮಾನಿಸಬೇಕು. ರಾಜ್ಯಕ್ಕೆ ಈ ಸಂಘವು ಮಾದರಿ ಸಂಘವಾಗಿದೆ ಎಂದು ಆಶಯ ವ್ಯಕ್ತಪಡಿಸಿದರು. ಬೇರೆ ಜಿಲ್ಲೆಯಿಂದ ಬಂದ ಶಿಕ್ಷಕಿಯರಿಗೆ ಧೈರ್ಯ ತುಂಬುವ, ಮಾನಸಿಕ ನೆಮ್ಮದಿ ನೀಡುವ, ಅವರ ಸಮಸ್ಯೆಗಳನ್ನು ಬಗೆಹರಿಸುವ ಕೆಲಸಗಳನ್ನು ಸಂಘವು ಮಾಡಬೇಕು ಅವರಿಗೆ ಭರವಸೆಯ ಸಂಘ ವಾಗಬೇಕು ಎಂದು ಹೇಳಿದರು. ಜಿಲ್ಲೆಯಲ್ಲಿ ಬಾಲಕಿಯರಿಗೆ ಬಹಳಷ್ಟು ಸಮಸ್ಯೆಗಳಿಗೆ ಅತಿ ಕನಿಷ್ಠವಾದ ಸಮಸ್ಯೆಗಳನ್ನು ಗುರುತಿಸಿ ನಿಮ್ಮ ಹಂತದಲ್ಲಿ ಸಾಧ್ಯವಾದರೆ ಬಗೆಹರಿಸಿ ಇಲ್ಲವಾದಲ್ಲಿ ಜಿಲ್ಲಾ ಹಂತದ ಗಮನಕ್ಕೆ ತೆಗೆದುಕೊಂಡು ಬನ್ನಿ. ಶಿಕ್ಷಕರ ಸಮಸ್ಯೆ ಇರಲಿ ಅಥವಾ ಬಾಲಕಿಯರ ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಇರಲಿ ನನ್ನ ಗಮನಕ್ಕೆ ತನ್ನಿ ಯಾವತ್ತೂ ನಿಮ್ಮ ಜೊತೆಗೆ ಸುಖದೇವ್ ಇರುತ್ತಾರೆ ಎಂಬ ಆಶ್ವಾಸನೆಯನ್ನು ನೀಡಿದರು. ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಶಿಕ್ಷಣ ಇಲಾಖೆ ನಿಮ್ಮ ಜೊತೆಗೆ ಇರುತ್ತದೆ. ಸಾಧ್ಯವಾದಷ್ಟು ಉತ್ತಮ ಕೆಲಸಗಳನ್ನು ಮಾಡಿ ಒಳ್ಳೆಯ ಹೆಸರನ್ನು ತೆಗೆದುಕೊಂಡು ಬನ್ನಿ ರಾಜ್ಯಕ್ಕೆ ಇಂದು ಇದು ಒಂದು ಮಾದರಿ ಸಂಘವಾಗಿದೆ ಎಂದು ತಮ್ಮ ಮಾತುಗಳ ಮೂಲಕ ಹೇಳಿದರು.ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು ತಾಲ್ಲೂಕಿನ ಪದಾಧಿಕಾರಿಗಳು ಬಾಗವಹಿಸಿದ್ದರು.ಎಲ್ಲರಿಗೂ ಅನಂತ ಧನ್ಯವಾದಗಳನ್ನು ರಾಯಚೂರು ಜಿಲ್ಲಾಧ್ಯಕ್ಷೆ ಶ್ರೀಮತಿ ಛಾಯಾ ಕೋಳೂರು ತಿಳಿಸಿದ್ದಾರೆ.



