ವೃದ್ಧಾಶ್ರಮದಲ್ಲಿ ಫುಲೆ ಶಿಕ್ಷಕಿಯರಿಂದ ವಿಶ್ವ ಪರಿಸರ ದಿನಾಚರಣೆ ಹಾಗೂ ವೈದ್ಯರ ದಿನಾಚರಣೆ

ರಾಮನಗರ.jul.26. ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ರಿ ರಾಜ್ಯ ಘಟಕ ಧಾರವಾಡ, ಜಿಲ್ಲಘಟಕ ರಾಮನಗರ ವತಿಯಿಂದ ಹಾಗೂ  ತಾಲೂಕು ಘಟಕಗಳಾದ ಕನಕಪುರ, ರಾಮನಗರ, ಚನ್ನಪಟ್ಟಣದ ಸಹಯೋಗದೊಂದಿಗೆ, ದಿನಾಂಕ 25-07-2026ರ ಶನಿವಾರ ಮಧ್ಯಾನ್ಹ 2 ಗಂಟೆಗೆ ಸರಿಯಾಗಿ ರಾಮನಗರ ತಾಲೂಕಿನ ಕೃಷ್ಣಪುರ ದೊಡ್ಡಿ ಗ್ರಾಮದಲ್ಲಿ ಇರುವ ದಾರಿದೀಪ ವೃದ್ಧಾಶ್ರಮದಲ್ಲಿ ವಿಶ್ವ ಪರಿಸರ ದಿನಾಚರಣೆ, ವೃದ್ಧರ ದಿನಾಚರಣೆ, ಹಾಗೂ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು .

ಈ ಕಾರ್ಯಕ್ರಮದಲ್ಲಿ ಸಾವಿತ್ರಿಬಾಯಿ ಪುಲೆ ರಾಷ್ಟ್ರೀಯ ಫೆಡರೇಶನ್ ನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀಮತಿ ಪ್ರಭಾವತಿ ರವರು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಮನಗರ ಜಿಲ್ಲೆಯ ಗೌರವಾಧ್ಯಕ್ಷರಾದ ಶ್ರೀಮತಿ ಶೋಭಾರವರು ರಾಮನಗರ ಜಿಲ್ಲಾಧ್ಯಕ್ಷರಾದ
ರೀಟಾ ಮನುಗೌಡ ಅವರು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಲಲಿತಾರವರು ಜಿಲ್ಲಾ ಜಿ ಪಿ ಟಿ ಮುಖ್ಯಸ್ಥರಾದ ಭವ್ಯರವರು ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ದೀಪ ರವರು ಚನ್ನಪಟ್ಟಣ ತಾಲೂಕಿನ ಅಧ್ಯಕ್ಷರಾದ ನಾಗಮ್ಮ ರವರು ರಾಮನಗರ ತಾಲೂಕಿನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಯೋಗಿತಾರವರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಶ್ರೀಯುತ ಪ್ರಭಾಕರವರು ಡಾ. ಧರಣೇಶ್ ಅವರು ಉಪನ್ಯಾಸಕರಾದ ಗಂಗಾಧರ್ ರವರು ದಾರಿ ದೀಪ ಟ್ರಸ್ಟ್ ಸಂಸ್ಥಾಪಕರಾದ ಶ್ರೀಮತಿ ಕವಿತಾ ರಾವ್ ಅವರು ಅಕ್ಷರ ಫೌಂಡೇಶನ್ ಕಾರ್ಯಕರ್ತರಾದ ಸಂಧ್ಯಾ ರವರು ಹಾಗೂ ದಾರಿದೀಪ ವೃದ್ಧಾಶ್ರಮದಲ್ಲಿರುವ 60 ಜನ ಹಿರಿಯ ವಯೋವೃದ್ದರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ರಾಮನಗರ ತಾಲೂಕಿನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಯೋಗಿತಾರವರಿಂದ ನಿರೂಪಣೆ ಆರಂಭವಾಗಿ ಕಾರ್ಯಕ್ರಮದಲ್ಲಿ ಚನ್ನಪಟ್ಟಣ ತಾಲೂಕಿನ ಅಧ್ಯಕ್ಷರಾದ ಶ್ರೀಮತಿ ನಾಗಮ್ಮ ರವರು ಪ್ರಾರ್ಥನೆಯನ್ನು ಹಾಡಿದರು ನಂತರ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀಮತಿ ಪ್ರಭಾವತಿ ರವರು ಸರ್ವರನ್ನು ಆತ್ಮೀಯವಾಗಿ ಸ್ವಾಗತಿಸಿದರು ನಂತರ ಆಶ್ರಮದ ಹಿರಿಯರಿಂದ ಸಸಿಗೆ ನೀರನ್ನು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ನಂತರ ದಾರಿದೀಪ ಟ್ರಸ್ಟ್ ನ ಸಂಸ್ಥಾಪಕರಾದ ಕವಿತಾ ರಾವ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ನಂತರ ವೈದ್ಯರ ದಿನಾಚರಣೆಯ ಅಂಗವಾಗಿ ಡಾಕ್ಟರ್ ಧರಣೇಶ್ ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಡಾಕ್ಟರ್ ದಿನೇಶ್ ಪ್ರಸಾದ್ ರವರು ವೃದ್ಧರಿಗೆ ಕೆಲವು ಆರೋಗ್ಯಕ್ಕೆ ಸಂಬಂಧಿಸಿದಂತೆ ಉತ್ತಮ ಮಾರ್ಗದರ್ಶನವನ್ನು ನೀಡಿ ಅವರನ್ನು ತಪಾಸಣೆ ಮಾಡಿದರು ನಂತರ ರಾಮನಗರ ಜಿಲ್ಲಾ ಉಪಾಧ್ಯಕ್ಷರಾದ ಶ್ರೀಯುತ ಪ್ರಭಾಕರ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ನಮ್ಮ ಸಂಘದ ಬಗೆಗೆ ಹೆಮ್ಮೆಯ ವಿಚಾರಗಳನ್ನು ಅಭಿವ್ಯಕ್ತಪಡಿಸಿದರು ನಂತರ ರಾಮನಗರ ಜಿಲ್ಲಾಧ್ಯಕ್ಷರಾದ ಶ್ರೀಮತಿ ರೀಟಾ ಮನು ಗೌಡರವರು ಭಜನಾ ಗೀತೆಯನ್ನು ಹಾಡಿದರು ನಂತರ ಉಪನ್ಯಾಸಕರಾದ ಗಂಗಾಧರ್ ರವರು ಹಿರಿಯರಿಗೆ ಆರೋಗ್ಯಕರ ಜೀವನಕ್ಕೆ ಬೇಕಾದ ಮಾರ್ಗದರ್ಶನಗಳನ್ನು ನೀಡಿದರು ನಂತರ ಅನಿತಾ ರಾವ್ ಅವರನ್ನು ,ಡಾಕ್ಟರ್ ಧರಣೇಶ್ ಅವರನ್ನು ಶ್ರೀಯುತ ಪ್ರಭಾಕರ್ ಅವರನ್ನು ಉಪನ್ಯಾಸಕರಾದ ಗಂಗಾಧರ್ ರವರನ್ನು ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಸರ್ವರನ್ನು ಸನ್ಮಾನಿಸಲು ರಾಮನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಲಲಿತಾ ರವರು ನೆರವು ನೀಡಿದರು ರಾಮನಗರ ಜಿಲ್ಲೆಯ ಗೌರವಾಧ್ಯಕ್ಷರಾದ ಶೋಭಾ ಮೇಡಂ ರವರು ವಂದನಾರ್ಪಣ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು.

ಪರಿಸರ ದಿನಾಚರಣೆಯ ಅಂಗವಾಗಿ ಪಪ್ಪಾಯಿ ಕರಿಬೇವು ಸೀತಾಫಲ ಹಾಗೂ ನುಗ್ಗೆಕಾಯಿ ಸಸಿಗಳನ್ನು ಆಶ್ರಮದಲ್ಲಿ ನೀಡಲಾಯಿತು. ದಿನಸಿ ತರಕಾರಿ ಹಣ್ಣು ಬಿಸ್ಕೆಟ್ ಬ್ರೇಡ್ ರಸ್ಕ್ ಮಿಕ್ಸ್ಚೆರ್ ಇತ್ಯಾದಿಗಳನ್ನು ಆಶ್ರಮಕ್ಕೆ ವಿತರಿಸಲಾಯಿತು.  ಸರ್ವರಿ ಗೂ ಶ್ರೀಯುತ ಪ್ರಭಾಕರ್ ಅವರು ಭೋಜನ ವ್ಯವಸ್ಥೆಯನ್ನು ಏರ್ಪಡಿಸಿದ್ದರು. ಕಾರ್ಯಕ್ರಮಕ್ಕೆ ಕಾರಣಕರ್ತರಾದ ಸರ್ವರಿಗೂ ತುಂಬು ಹೃದಯದ ಧನ್ಯವಾದಗಳು ಸಲ್ಲಿಸಿ ಹಿರಿಯರಿಂದ ಆಶೀರ್ವಾದವನ್ನು ಪಡೆಯಲಾಯಿತು. ಒಟ್ಟಾರೆಯಾಗಿ ಇಂದಿನ ಈ ಕಾರ್ಯಕ್ರಮವು ಇಷ್ಟು ಅಚ್ಚುಕಟ್ಟಾಗಿ ನೆರವೇರಲು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕಾರಣರಾದ ಸರ್ವ ಮಾನ್ಯರಿಗೂ ತುಂಬು ಹೃದಯದ ಅನಂತ ಅನಂತ ಧನ್ಯವಾದಗಳನ್ನು ಜಿಲ್ಲಾ ಸಂಘಟನೆ ಸಲ್ಲಿಸಿದೆ

ಲಲಿತಾ ವೃದ್ಧಾಶ್ರಮದಲ್ಲಿ ಫುಲೆ ಶಿಕ್ಷಕಿಯರ ಅರ್ಥಪೂರ್ಣ ಪರಿಸರ ದಿನಾಚರಣೆ

ಕರ್ನಾಟಕ  ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಜಿಲ್ಲಾ ಘಟಕ ಮತ್ತು ತಾಲೂಕು ಘಟಕ ರಾಯಚೂರು


ರಾಯಚೂರು.ಜೂನ್ 20

ಇಂದು ಲಲಿತ ವೃದ್ಧಾಶ್ರಮದಲ್ಲಿ ಪರಿಸರ ದಿನಾಚರಣೆ ನಿಮಿತ್ತವಾಗಿ ಗಿಡಗಳನ್ನ ನೆಡುವದರ ಮೂಲಕ ಹಾಗೂ ಅಲ್ಲಿನ ವೃದ್ಧರಿಗೆ ಹಣ್ಣುಗಳನ್ನು ಹಂಚುವುದರ ಜೊತೆಗೆ ಆಶ್ರಮಕ್ಕೆ ಅಗತ್ಯವಿರುವ ದಿನಸಿ ಸಾಮಗ್ರಿಗಳನ್ನ ಸಂಘದ ವತಿಯಿಂದ ಸಂಘದ ಎಲ್ಲಾ ಪಧಾಧಿಕಾರಿಗಳ ಸಹಾಯ ಮತ್ತು ಸಹಕಾರದಿಂದ ಆಶ್ರಮಕ್ಕೆ ನೀಡಲಾಯಿತು .
ಈ ಸೇವಾ ಮನೋಭಾವಕ್ಕೆ ಅಲ್ಲಿನ ಹಿರಿಯ ಜೀವಿಗಳು ತುಂಬು ಹೃದಯದಿಂದ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಹಾಜರಿದ್ದ ಎಲ್ಲಾ ಶಿಕ್ಷಕಿಯರನ್ನು ಅಕ್ಷತೆ ಹಾಕುವುದರ ಮೂಲಕ ಆಶೀರ್ವದಿಸಿದರು ಹಾಗೆ ಒಬ್ಬ ಹಿರಿಯ ಅಪ್ಪಾಜಿಯವರು ತವರು ಮನೆಗೆ ಹೆಣ್ಣು ಮಕ್ಕಳು ಬಂದು ಹರಸಿ ದಂತೆ ಖುಷಿಯಾಗಿದೆ ಎಂಬ ಮಾತನ್ನು ಹೇಳುವುದರ ಮೂಲಕ ಎಲ್ಲರನ್ನು ಭಾವನಾತ್ಮಕವಾಗಿ ಬಂದಿಸಿದರು ಆಗ ಎಲ್ಲರ ಕಣ್ಣುಗಳಲ್ಲಿ ಭಾವನಾತ್ಮಕ ಹನಿಗಳು ತುಂಬಿ ಬಂತು  ಅಲ್ಪ ಸೇವೆ ನಮ್ಮ ಸಂಘದ ವತಿಯಿಂದ ಇಂದು ನೆರವೇರಿದೆ ಎನ್ನುವ ಆತ್ಮತೃಪ್ತಿ ಎಲ್ಲರಲ್ಲೂ ಮೂಡಿ ಬಂತು  ಈ ಒಂದು ಕಾರ್ಯಕ್ರಮ ಯಶಸ್ವಿಯಾಗುವುದಕ್ಕೆ ಕಾರಣೀಭೂತರಾದಂತಹ ಎಲ್ಲಾ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರಿಗೆ ತುಂಬು ಹೃದಯದ ಧನ್ಯವಾದಗಳು


ಹಾಗೆ ಈ ಒಂದು ಕಾರ್ಯಕ್ರಮ ಯಶಸ್ವಿ ಯಾಗುವುದಕ್ಕೆ ಕಾರಣಭೂತರಾದಂತ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷರಾದಂತಹ ಶ್ರೀಮತಿ ಛಾಯಾದೇವಿ ಕೋಳೂರು ಮತ್ತು ತಾಲೂಕಾಧ್ಯಕ್ಷರಾದಂತ ಶ್ರೀಮತಿ ಧನಲಕ್ಷ್ಮಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದಂತಹ ಶ್ರೀಮತಿ ಕೆ ವಿಜಯಲಕ್ಷ್ಮಿ ಹಾಗೂ ಶ್ರೀಮತಿ ನಿರ್ಮಲ, ಶ್ರೀಮತಿ ಶಾರದಾ, ಶ್ರೀಮತಿ ಪ್ರಮೀಳಾ, ಶ್ರೀಮತಿ ಗೀತಾಂಜಲಿ,ಶ್ರೀಮತಿ ಕವಿತಾ, ಶ್ರೀಮತಿ ಜಯಲಕ್ಷ್ಮಿ,ಶ್ರೀಮತಿ ಅನಿತಾ, ಶ್ರೀಮತಿ ದೀಕ್ಷಾ, ಶ್ರೀಮತಿ ಗಾಯಿತ್ರಿ ಶಿಕ್ಷಕಿಯವರೆಲ್ಲರೂ ಉಪಸ್ಥಿದ್ದಾರೆಂದು ಹಾಗೆ ಇನ್ನುಳಿದ ಎಲ್ಲಾ ಪದಾಧಿಕಾರಿಗಳು ಹಾಗೂ ಮಹಿಳಾ ಶಿಕ್ಷಕಿಯರು ಸಕ್ರಿಯವಾಗಿ ಉತ್ಸಾಹದಿಂದ, ಸಹಕಾರದಿಂದ ಗೌರವಯುತವಾಗಿ ಕಾರ್ಯನಿರ್ವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದು ಕೊಟ್ಟದ್ದಕ್ಕಾಗಿ ಮತ್ತು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಾರಣೀಭೂತರಾದಂತಹ ಎಲ್ಲಾ ಮಹಿಳಾ ನೌಕರರಿಗೂ ಕರ್ನಾಟಕ  ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ವತಿಯಿಂದ ತುಂಬ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಲಾಗಿದೆ.

ವರದಿ – ಧನಲಕ್ಷ್ಮೀ .ತಾಲೂಕು ಅಧ್ಯಕ್ಷರು, ರಾಯಚೂರು.

ಶಿರಾ ಶಿಕ್ಷಕಿಯರಿಂದ ಮಾತೆ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆ

ದಿನಾಂಕ 3.1.2026 ರಂದು ಸಿರಾ ನಗರದ ರಂಗನಾಥ ಕಾಲೇಜು ಆವರಣದಲ್ಲಿನ ಕುಂಚಶ್ರೀ ಪ್ಯಾಲೇಸ್ ನಲ್ಲಿ ಮಾತೆ ಸಾವಿತ್ರಿ ಬಾಯಿ ಫುಲೆ ದಿನಾಚರಣೆ ನೆಡೆಯಿತು. ಕಾರ್ಯಕ್ರಮವನ್ನು ಸ್ಥಳೀಯ ಶಾಸಕರು, ದೆಹಲಿಯ ವಿಶೇಷ ಪ್ರತಿನಿಧಿ ಗಳಾದ ಶ್ರೀ ಟಿ ಬಿ ಜಯಚಂದ್ರರವರು ಉದ್ಘಾಟನೆ ಮಾಡಿದರು.


ಹೆಣ್ಣು ಮಕ್ಕಳು ಇಂದು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದು, ಸಮಾಜದಲ್ಲಿನ ಮೌಢ್ಯತೆ ತೊಡೆದು ಹಾಕಬೇಕು. ಎಲ್ಲಾ ರಂಗದಲ್ಲಿ ಮೀಸಲಾತಿ ನೀಡಬೇಕು, ಸಮಾನ ಆದ್ಯತೆ ನೀಡಬೇಕು.ದೇಶದ ಪರಿವರ್ತನೆಯಲ್ಲಿ ಹೆಣ್ಣುಮಕ್ಕಳ ಪಾತ್ರ ಅತೀ ದೊಡ್ಡದು ಎಂದು ಮಹಿಳೆಯರ ಪಾತ್ರದ ಬಗ್ಗೆ ಅಪಾರ ಕಾಳಜಿ ತೋರಿದ್ದಾರೆ. ಅಲ್ಲದೇ ತಾಲೂಕಿನ ಸಾವಿತ್ರಿ ಬಾಯಿ ಫುಲೆ ಸಂಘದ ಬೇಡಿಕೆಗೆ ಸ್ಪಂದಿಸಿದ ಸರ್ಕಾರದ ವತಿಯಿಂದ ಒಂದು ಎಕರೆ ಜಮೀನು ಮಂಜೂರು ಮಾಡಿಕೊಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.


ಕರ್ನಾಟಕ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ರಾಧಮ್ಮ ನವರು ನಮ್ಮ ಸಂಘ ಕೇವಲ ಸಂಘ ಅಲ್ಲ ಅದು ಒಂದು ಶಕ್ತಿ. ಇಂದು  ರಾಷ್ಟ್ರದಾದ್ಯಂತ ನಮ್ಮ ಸಂಘಟನೆ ವ್ಯಾಪಿಸಿದೆ. ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರು ಮತ್ತು ನಮ್ಮೆಲ್ಲರ ಹೆಮ್ಮೆಯ ಧೀಮಂತ ನಾಯಕಿ ಡಾ.ಲತಾ ಎಸ್ ಮುಳ್ಳೂರ ರವರ ದಿಟ್ಟ  ನಾಯಕತ್ವವೇ ಇದಕೆಲ್ಲ ಮೂಲ ಕಾರಣ ಎಂದು ತಿಳಿಸಿದರು.


ತರಗತಿಯಲ್ಲಿ ಇನ್ನೊವೇಟಿವ್ ಬೋಧನ ಕೌಶಲ್ಯದೊಂದಿಗೆ ಶಾಲಾ ಕರ್ತವ್ಯ ನಿರ್ವಹಿಸುತ್ತಿರುವ ಉತ್ತಮ ಶಿಕ್ಷಕಿಯರನ್ನು  ತಾಲೂಕಿನ ತಲಾ 34 ಕ್ಲಸ್ಟರ್  ಗೆ ಒಬ್ಬರಂತೆ ಗುರುತಿಸಿ ಸನ್ಮಾನಿಸಲಾಯಿತು


ತಾ.ಅಧ್ಯಕ್ಷರಾದ ಶ್ರೀಮತಿ ಜಗದಾಂಬ ಮಾತನಾಡಿ  ಮಾತೆ ಸಾವಿತ್ರಿ ಬಾಯಿ ಫುಲೆ ಯವರ ಜೀವನದ ಸಾಧನೆ ಕುರಿತು ಸ್ಮರಿಸಿ ಅವರ ಆದರ್ಶಗಳ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕು ಸಮಾಜಮುಖಿ ಸೇವೆಗಳಲ್ಲಿ ನಾವೆಲ್ಲರೂ ತೊಡಗಿಸಿಕೊಳ್ಳಬೇಕು ಎಂದಿದ್ದಾರೆ. ತಾ .ಕಾರ್ಯದರ್ಶಿ ಶ್ರೀಮತಿ ಅರ್ಪಣ ಎಲ್ಲರನ್ನು ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಕೃಷ್ಣಪ್ಪ ಕೆ. ಗೌರವಾಧ್ಯಕ್ಷರಾದ ಶ್ರೀಮತಿ ಮಂಜುಳ ಎಸ್. ಜಿ. ಗೌರವ ಸಲಹೆಗಾರರಾದ ಶ್ರೀಮತಿ ವೆಂಕಟಲಕ್ಷ್ಮಮ್ಮ,
ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರು ಶ್ರೀ ಹನುಮಂತರಾಜು ಬಿ ಆರ್. ರಾಜ್ಯ ಸರ್ಕಾರಿ ನೌಕರರ ಸಂಘದ ತಾ ಕಾರ್ಯದರ್ಶಿ ಶ್ರೀ ದೇವರಾಜು, ಶಿಕ್ಷಕರ ಸಂಘದ ಪದಾಧಿಕಾರಿ ಶ್ರೀ ಹನುಮಂತರಾಜು, ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ನಾಗರಾಜು,ಮುಕುಂದಪ್ಪ, ರಂಗನಾಥ್, ಕರ್ನಾಟಕ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ಮಧುಗಿರಿ ಜಿಲ್ಲಾ ಘಟಕದ ಪ್ರಧಾನ  ಕಾರ್ಯದರ್ಶಿ ಶ್ರೀಮತಿ ಲತಾಮಣಿ, ಸಿರಾ ತಾಲೂಕಿನ ಪದಾಧಿಕಾರಿಗಳಾದ ಚಂದ್ರಕಲಾ, ಶಬನಾ, ಪ್ರೇಮಲೀಲಾ, ಸುಜಾತ, ಸೌಭಾಗ್ಯ, ಮಮತ,ಕುಬ್ರಾ ಬಾನು, ಮುಂತಾದ ವರು ಪಾಲ್ಗೊಂಡರು ಶ್ರೀಮತಿ ಶೃತಿ  ನಿರೂಪಿಸಿ ಕಾರ್ಯಕ್ರಮದ ಯಶಸ್ವಿಗೆ ಭಾಗವಸಿದ್ದ ಹಾಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿ ಸ್ಪಂದಿಸಿದ್ದ ಎಲ್ಲರಿಗೂ ವಂದಿಸಿದರು.

ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಿ ಮಾತೆಯ ಆದರ್ಶ ಪಾಲನೆ ಮಾಡಿದ ಫುಲೆ ಶಿಕ್ಷಕಿಯರು

ಹಾಸನ, ದಿ.14 ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ( ರಿ) ತಾಲೂಕು ಘಟಕ ಹೊಳೆನರಸೀಪುರ ಮತ್ತು ಇತರ ಸಾಮಾಜಿಕ ಸಂಘಟನೆಗಳ ಸಹಯೋಗದಲ್ಲಿ  “ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ರಕ್ತದಾನ ಶಿಬಿರ”ವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಶ್ರೀಮತಿ ಕಾಂತಮಣಿ ಯವರು ಶ್ರೀ ಗಣೇಶನ ಪ್ರಾರ್ಥನೆಯೊಂದಿಗೆ ಚಾಲನೆ ನೀಡಿದರು. ಈ ಕಾರ್ಯಕ್ರಮವನ್ನು ಹೊಳೆನರಸೀಪುರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದಂತಹ ಶ್ರೀಯುತ ಸೋಮಲಿಂಗೇಗೌಡ ರವರು ಹಾಗೂ ನೆರೆದ ಗಣ್ಯರಿಂದ ಗಿಡಕ್ಕೆ ನೀರು ಇರುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಯುತ ಸೋಮಲಿಂಗೇಗೌಡ ರವರು ಮಾತೆ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ವತಿಯಿಂದ ನಡೆಯುತ್ತಿರುವ ಈ ಕಾರ್ಯಕ್ರಮ ನಿಜವಾಗಲೂ ಒಂದು ಉತ್ತಮವಾದಂತಹ ಕಾರ್ಯಕ್ರಮ. ಇಂತಹ ಸಮಾಜಮುಖಿ ಕಾರ್ಯಕ್ರಮದ ಸದುಪಯೋಗವನ್ನು ಶಿಕ್ಷಕರು ಮತ್ತು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಮತ್ತೆ ಸಾವಿತ್ರಿಬಾಯಿ ಫುಲೆ ಸಂಘಕ್ಕೆ ನಮ್ಮ ಸಂಪೂರ್ಣ ಸಹಕಾರವಿರುತ್ತದೆ ಎಂದು ತಿಳಿಸಿದರು. ಮತ್ತು ಈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅದೇ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ರಾಜ್ಯ ಸರ್ಕಾರ ನೌಕರರ ಸಂಘದ ಅಧ್ಯಕ್ಷರಾದ ಪೃಥ್ವಿರಾಜ್ ರವರು ಸಂಘಕ್ಕೆ ಶುಭ ಕೋರುವುದರೊಂದಿಗೆ ತಮ್ಮ ಸಹಕಾರ ಸಂಘಕ್ಕೆ ಸದಾ ಇರುತ್ತದೆ ಎಂದು ತಿಳಿಸಿದರು ಮತ್ತು ರಕ್ತದಾನ ಮಾಡುವ ಮುಖಾಂತರ ಕಾರ್ಯಕ್ರಮಕ್ಕೆ ಮೆರುಗು ತಂದರು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀಮತಿ ಆಶಾ ಆರ್ ಜಿಲ್ಲಾ ಸಾವಿತ್ರಿಬಾಯಿ ಸಂಘದ ಅಧ್ಯಕ್ಷರು,ಇಂತಹ ಒಂದು ವೇದಿಕೆಯನ್ನು ನಮ್ಮ ಹೆಮ್ಮೆಯ ನಾಯಕಿ,  ಸಂಸ್ಥಾಪಕ ರಾಜ್ಯಾಧ್ಯಕ್ಷರು ಡಾ ಲತಾ ಎಸ್ ಮುಳ್ಳೂರ ರವರು ನಮಗೆ ನೀಡಿದ್ದಾರೆ, ಮಾತೆ ಸಾವಿತ್ರಿಬಾಯಿ ಫುಲೆ  ಅವರ ಆದರ್ಶಗಳನ್ನು ಪಾಲಿಸೋಣವೆಂದರು ಮತ್ತು ಸಂಘದ ಯಶಸ್ವಿಗೆ ಎಲ್ಲರ ಪರಿಶ್ರಮ ಬಹಳ ಮುಖ್ಯ ಎಂದು ತಿಳಿಸಿದರು.
ಪುನರ ಜೀವನ ಪ್ರಶ್ನ ಅಧ್ಯಕ್ಷರಾದಂತಹ ಶ್ರೀಯುತ ಭರತ್ ರವರು ಮಾತನಾಡಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರದ ಮಹತ್ವವನ್ನು ತಿಳಿಸುವುದರೊಂದಿಗೆ ಆರೋಗ್ಯ ಕಾಳಜಿಯನ್ನು ವಹಿಸುವುದು ಬಹಳ ಮುಖ್ಯವೆಂದರು. ಹಾಗೆಯೇ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಸಾವಿತ್ರಿಬಾಯಿ ಫುಲೆ ಮಹಿಳಾ ಶಿಕ್ಷಕರ ಸಂಘದ ಅಧ್ಯಕ್ಷರಾದಂತಹ ಶ್ರೀಮತಿ ಮಮತ ಕೆ .ಎಂ ರವರು
ನಮ್ಮ ಸಂಘದ ವತಿಯಿಂದ ಹಮ್ಮಿಕೊಂಡಿರುವ ಈ ಸಮಾಜಮುಖಿ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಮನ್ವಯ ಅಧಿಕಾರಿಗಳ ಮಾರ್ಗದರ್ಶನ ಮತ್ತು ತಾಲೂಕಿನ ಎಲ್ಲಾ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಹಕಾರದಿಂದ ಸಾಧ್ಯವಾಗಿದೆ ಎಂದರು ಹಾಗೆಯೇ ಮಾತೆ ಸಾವಿತ್ರಿಬಾಯಿ ಫುಲೆ ಅವರನ್ನು ಸ್ಮರಿಸುವುದು ನಮ್ಮೆಲ್ಲರ ಭಾಗ್ಯ ವೆಂದರು ಅಕ್ಷರದ ಅವ ಮಾತೇ ಸಾವಿತ್ರಿಬಾಯಿ ಫುಲೆ ದೇಶದ ಮೊದಲ ಮಹಿಳಾ ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯನಿ, ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ದಣಿವರಿಯದ ಸತ್ಯ ಶೋಧಕಿ, ಆಧುನಿಕ ಶಿಕ್ಷಣದ ತಾಯಿ, ಅಕ್ಷರದ ದೀಪ ಹಿಡಿದು ಹೆಣ್ಣು ಮಕ್ಕಳ ಬಾಳಿಗೆ ಬೆಳಕಾಗ ಮಾತೆ ಸಾವಿತ್ರಿಬಾಯಿ ಫುಲೆ ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸುತ್ತಾ ಸಮಾಜಕ್ಕೆ ಮಾದರಿಯಾಗುವುದರೊಂದಿಗೆ ಶಿಕ್ಷಣದ ಪ್ರಗತಿಗೆ ಎಲ್ಲರೂ ಶ್ರಮಿಸೋಣ ಎಂದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಮಹಾಲಿಂಗಪ್ಪ ರವರು ಮಹಿಳಾ ಶಿಕ್ಷಕಿಯರು ಕೈಗೊಂಡಿರುವ ಈ ಉತ್ತಮ ಕಾರ್ಯ ಸ್ವಾಗತ ಅರ್ಹವಾಗಿದೆ ಈ ಸಂಘಕ್ಕೆ ನಮ್ಮ ಸಂಪೂರ್ಣ ಸಹಕಾರವಿರುತ್ತದೆ ಎಂದರೆ. ಈ ಕಾರ್ಯಕ್ರಮದಲ್ಲಿ ಮಲ್ಲರಾಜೇಡೌಡ ರವರು, ಶ್ರೀಯುತ ಶಿವಕುಮಾರಚಾರಿ ರವರು ತಾಲೂಕು ಪ್ರೌಢಶಾಲಾಲಾ ಸಹ ಶಿಕ್ಷಕರ ಸಂಘದ ನಿರ್ದೇಶಕರು, ಶ್ರೀಯುತ ಉಮೇಶ್ ರವರು ಎಸ್ಸಿ ಎಸ್ಟಿ ನೌಕರ ಸಂಘದ ಅಧ್ಯಕ್ಷರು, ಶ್ರೀಯುತ ಗಣೇಶ್ ರವರು ಎನ್. ಪಿ .ಎಸ್ ನೌಕರರ ಸಂಘದ ಅಧ್ಯಕ್ಷರು. ಶ್ರೀಯುತ ರಂಗಸ್ವಾಮಿ ಎಂ.ಪಿ ಬಡ್ತಿ ಮುಖ್ಯ ಗುರುಗಳ ಸಂಘದ ಅಧ್ಯಕ್ಷರು. ಹಾಗೂ ಸಾವಿತ್ರಿಬಾಯಿ ಫುಲೆ ಸಂಘದ ಗೌರವಾಧ್ಯಕ್ಷರಾದ ಸುವರ್ಣ, ಪ್ರಧಾನ ಕಾರ್ಯದರ್ಶಿಗಳಾದ ಬ್ರಮರಾಂಭ, ಖಜಂಚಿಗಳಾದ ಮಧುಮತಿ ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು. ಈ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಶಿಕ್ಷಕರು, ಸಾರ್ವಜನಿಕರು, ಆರೋಗ್ಯ ತಪಾಸಣೆಯ ಸದುಪಯೋಗ ಪಡೆಯುವುದರೊಂದಿಗೆ, ರಕ್ತದಾನ ಮಾಡುವುದರೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಶ್ರೀಮತಿ ಉಮಾದೇವಿಯವರ ಎಲ್ಲರನ್ನು ವಂದಿಸಿದರು.

ಶಿಕ್ಷಕಿಯರ ಸಂಘದ ವತಿಯಿಂದ ಹೃದಯ ತಪಾಸಣಾ ಶಿಬಿರ ಯಶಸ್ವಿ


ಮಧುಗಿರಿ/ಕೊರಟಗೆರೆ :
ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ, ಜಿಲ್ಲಾ ಘಟಕ ಮಧುಗಿರಿ ಮತ್ತು ತಾಲೂಕು ಘಟಕ ಕೊರಟಗೆರೆಯ ಸಂಯುಕ್ತ ಆಶ್ರಯದಲ್ಲಿ 05.12.2025 ರಂದು ಬೆಂಗಳೂರಿನ ಟ್ರಸ್ಟ್ ವೆಲ್ ಹಾಸ್ಪಿಟಲ್ ನಲ್ಲಿ ಶಿಕ್ಷಕರು ಮತ್ತು ಅವರ ಕುಟುಂಬದವರಿಗಾಗಿ ಹೃದಯದ ಸಂಪೂರ್ಣ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು.

ಶಿಬಿರದಲ್ಲಿ ಕೆಳಗಿನ ಪರೀಕ್ಷೆಗಳು ನಡೆಸಲಾಯಿತು:

CBC

Serum Creatinine (ಮೂತ್ರಪಿಂಡ ಕಾರ್ಯ ಪರೀಕ್ಷೆ)

Lipid Profile

RBS

ECG

BP

2D ECO Screening

Cardiac Consultancy

ಅನೇಕ ಶಿಕ್ಷಕರು ಹಾಗೂ ಅವರ ಕುಟುಂಬದವರು ಶಿಬಿರದ ಸದುಪಯೋಗವನ್ನು ಪಡೆದುಕೊಂಡಿದ್ದು, ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿದೆ.

ಶಿಬಿರಕ್ಕೆ ಬಂದ ಭಾಗವಹಿಸುವವರಿಗಾಗಿ ಸಂಘದ ವತಿಯಿಂದ ತಿಂಡಿ, ಊಟ ಮತ್ತು ಬಸ್ಸು ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷೆ ಶ್ರೀಮತಿ ಸುಜಾತ ಮ್ಯಾಡಂ, ಕಾರ್ಯದರ್ಶಿ ಆಶಾ, ಮತ್ತು ಸಂಘದ ಪದಾಧಿಕಾರಿಗಳಾದ ರೂಪ, ಮಂಜುಳಾ, ನೇತ್ರಾವತಿ, ಪುಟ್ಟಮ್ಮ, ಶೈಲಜಾ, ಗೌರವ ಸಲಹೆಗಾರರಾದ ಸಾಯಿರಾಬಾನು, ಶ್ರೀಮತಿ ಸುಜಾತ, ಲಲಿತ ಅವರು ಹಾಜರಿದ್ದರು.

ವಿಭಿನ್ನ ಕಾರಣಗಳಿಂದ ಕಾರ್ಯಕ್ರಮಕ್ಕಾಗಮಿಸಲು ಸಾಧ್ಯವಾಗದಿದ್ದರೂ ಸದಾ ಸಂಘದ ಬೆನ್ನೆಲುಬಾಗಿ ನಿಂತು ಸಹಕಾರ ನೀಡಿದ ಎಲ್ಲಾ ಪದಾಧಿಕಾರಿಗಳಿಗೆ ಸಂಘದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಲಾಗಿದೆ.

ಇದೇ ಸಂದರ್ಭದಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲು ಮಾರ್ಗದರ್ಶನ ನೀಡುತ್ತಿರುವ ಸಂಸ್ಥಾಪಕ ರಾಜ್ಯಾಧ್ಯಕ್ಷರು ಹಾಗೂ ರಾಷ್ಟ್ರಾಧ್ಯಕ್ಷರು ಡಾ. ಲತಾ ಎಸ್. ಮುಳ್ಳೂರ ಅವರಿಗೆ ಸಂಘದ ವತಿಯಿಂದ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಲಾಗಿದೆ

ಈ ಕಾರ್ಯಕ್ರಮದ ಯಶಸ್ವಿಗೆ ಕಾರಣಕರ್ತರಾದಂತಹ ಶ್ರೀಯುತ ಟ್ರಸ್ಟ್ ವೆಲ್ ಹಾಸ್ಪಿಟಲ್ ನ ನವೀನ್ ಕುಮಾರ್ ರವರಿಗೆ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಹಾಗೂ

ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲಾ ಪದಾಧಿಕಾರಿಗಳು, ಶಿಕ್ಷಕರು, ಬಂಧು–ಮಿತ್ರರಿಗೆ ಸಂಘವು ಧನ್ಯವಾದಗಳನ್ನು ತಿಳಿಸಿದೆ.


ಲತಾ ಮುಳ್ಳೂರ ವಿಧಾನ ಸೌಧ ಬೇಟಿ ವಿವಿಧ ಬೇಡಿಕೆಗಳಿಗೆ ಒತ್ತಾಯ

ಸಾವಿತ್ರಿಬಾಯಿಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ (ರಿ) ನವದೆಹಲಿ ಹಾಗೂ ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯ ಘಟಕ ಧಾರವಾಡ ವತಿಯಿಂದ ದಿನಾಂಕ 24 /11 /2025 ರಂದು ಬೆಂಗಳೂರಿನ ವಿಧಾನ ಸೌಧಕ್ಕೆ ಬೇಟಿ ಮಾಡಲಾಗಿತ್ತು. ಸಂಘದ ರಾಷ್ಟ್ರೀಯ ಅಧ್ಯಕ್ಷರು ಮತ್ತು ರಾಜ್ಯಾಧ್ಯಕ್ಷರಾದ ಡಾ. ಲತಾ ಮುಳ್ಳೂರ ಅವರ ನೇತೃತ್ವದಲ್ಲಿ ವಿವಿಧ ಹಂತದ ಘಟಕಗಳ ಪದಾಧಿಕಾರಿಗಳು ಬೇಟಿ ಮಾಡಿದ್ದರು. ಶಿಕ್ಷಕಿಯರ ವಿವಿಧ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವ ಬೇಟಿ ಇದಾಗಿದ್ದು ಮೊದಲನೆಯದಾಗಿ ಮಾನ್ಯ ಮುಖ್ಯಮಂತ್ರಿಗಳ ಕಚೇರಿಗೆ ತೆರಳಿ ಅಲ್ಲಿದ್ದ ಆಪ್ತ ಕಾರ್ಯದರ್ಶಿರವರಿಗೆ ತಮ್ಮ ಬೇಡಿಕೆ ಪತ್ರವನ್ನು ಸಲ್ಲಿಸಿ ಮನವಿ ಮಾಡಲಾಯಿತು. ನಂತರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಶಿಕ್ಷಣ ಸಚಿವರು ಸನ್ಮಾನ್ಯ ಶ್ರೀ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿ ತಮ್ಮ ಬೇಕು ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘಟನೆಯ ಸಂಸ್ಥಾಪಕ ರಾಷ್ಟ್ರೀಯ ಹಾಗೂ ರಾಜ್ಯ ಅಧ್ಯಕ್ಷರಾದ ಡಾ. ಲತಾ. ಎಸ್. ಮುಳ್ಳೂರ ರವರು ಶಿಕ್ಷಕಿಯರ ಸಮಸ್ಯೆ, ಬೇಡಿಕೆಗಳನ್ನು ಮಾನ್ಯ ಸಚಿವರ ಗಮನಕ್ಕೆ ತಂದು ಎಲ್ಲ ಬೇಡಿಕೆ ಸಮಸ್ಯೆಗಳಿಗೂ ಸಕಾರಾತ್ಮಕವಾಗಿ ಸ್ಪಂದಿಸಿ ಮುಟ್ಟಿನ ರಜೆಯನ್ನ ಸರ್ಕಾರಿ ಶಾಲಾ ಶಿಕ್ಷಕಿಯರು ಬಳಸಿಕೊಳ್ಳಲು ಸಹಾಯವಾಗುವ ರೀತಿ ತಕ್ಷಣವೆ ನಮ್ಮ ಇಲಾಖೆಯಿಂದ ಆದೇಶ ಮಾಡಿ ಜಾರಿಗೊಳಿಸುವುದು ಅಲ್ಲದೆ ಜನವರಿ 3 ಮಾತೆ ಸಾವಿತ್ರಿಬಾಯಿ ಫುಲೆ ಯವರ ಜನ್ಮ ದಿನಾಚರಣೆ ಯನ್ನು ಸರಕಾರದ ವತಿಯಿಂದ ಆಚರಿಸುವಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು ಎನ್ನಲಾಗಿದೆ.


ನಂತರ ಸೆಕ್ರೆಟರಿಯೇಟ್ ಕಚೇರಿಗೆ ತೆರಳಿ ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಗೌರವಾನ್ವಿತ ಮಾನ್ಯ ಶ್ರೀಮತಿ ರಶ್ಮಿ ಮೇಡಂ ರವರನ್ನು ಭೇಟಿ ಮಾಡಿದ ರಾಜ್ಯಾಧ್ಯಕ್ಷರು ಡಾ .ಲತಾ ಮುಳ್ಳೂರ ರವರು ಶಿಕ್ಷಕಿಯರ , ಬೇಡಿಕೆ ಸಮಸ್ಯೆಗಳ ಕುರಿತು ಮನವಿ ಮಾಡಿದರು ಮಾನ್ಯರು ಸಕರಾತ್ಮಕ ಮನಸಿನಿಂದ ಸ್ಪಂದಿಸಿದರು

ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ರಾಜಶ್ರೀ ಸಜ್ಜೇಶ್ವರ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀಮತಿ ಪ್ರಭಾರವರು, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀಮತಿ ಸರಸ್ವತಿ ಮಂಡ್ಯ ಜಿಲ್ಲೆ ರವರು, ರಾಜ್ಯ ಸಹ ಕಾರ್ಯದರ್ಶಿಗಳಾದ ಶ್ರೀಮತಿ ರಂಜಿತಾ ಗೋಪಿ ರವರು ,ರಾಮನಗರ ಜಿಲ್ಲಾಧ್ಯಕ್ಷರಾದ ಶ್ರೀಮತಿ ರೀಟಾ ಮನು ಗೌಡರವರು, ಬೆಂಗಳೂರು ನಗರದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಇಂದಿರಾ ಮುನಿರಾಜ್ ರವರು, ರಾಮನಗರ ಜಿಲ್ಲಾ ಸಹ ಕಾರ್ಯದರ್ಶಿಗಳಾದ ಶ್ರೀಮತಿ ಗಂಗಮ್ಮ ಅವರು ಬೆಂಗಳೂರು ದಕ್ಷಿಣ ವಲಯ ನಾಲ್ಕರ ತಾಲೂಕು ಅಧ್ಯಕ್ಷರು
ಶ್ರೀಮತಿ ಜಯಲಕ್ಷ್ಮಿ G ಅವರು
ಮತ್ತು ಕೋಶಾಧ್ಯಕ್ಷರಾದ ಶ್ರೀಮತಿ ರಬೇಕಾ ರವರು, ಕನಕಪುರ ತಾಲೂಕಿನ ಅಧ್ಯಕ್ಷರಾದ ಶ್ರೀಮತಿ ಲಲಿತಾರವರು ಉಪಸ್ಥಿತರಿದ್ದರು.

ಸಂಘಟನೆಯ ಬೇಡಿಕೆಗಳು ಇಂತಿವೆ.

  1. ಎಲ್ಲಾ ಮಹಿಳಾ ನೌಕರರಿಗೆ ಪ್ರತಿ ತಿಂಗಳು ಒಂದು ದಿನ ಮುಟ್ಟಿನ ರಜೆಯ ಸೌಲಭ್ಯವನ್ನು ಪಡೆಯಲು ಅನುಕೂಲವಾಗುವಂತೆ ಇಲಾಖಾ ಆದೇಶ ಮಾಡಿ ಜಾರಿಗೆ ತರಬೇಕು.
  2. ಜನವರಿ ಮೂರರಂದು ಭಾರತದ ಪ್ರಥಮ ಮಹಿಳಾ ಶಿಕ್ಷಕಿ ಅಕ್ಷರದವ್ವ ಮಾತೆ ಸಾವಿತ್ರಿಬಾಯಿ ಅವರ ಜನ್ಮ ದಿನಾಚರಣೆಯನ್ನು ಶಿಕ್ಷಕಿಯರ ದಿನಾಚರಣೆಯನ್ನಾಗಿ ಸರ್ಕಾರದ ವತಿಯಿಂದಲೇ ಆಚರಿಸಬೇಕು.
  3. ಎಲ್ಲಾ ಸಮೀಕ್ಷೆ ಹಾಗೂ ಗಣತಿ ಕಾರ್ಯದಿಂದ ಐವತ್ತು ವರ್ಷ ಮೇಲ್ಪಟ್ಟವರು ಮೂರು ವರ್ಷದ ಒಳಗಿನ ಮಕ್ಕಳಿರುವ ಮಹಿಳಾ ಶಿಕ್ಷಕಿಯರಿಗೆ ಅಂಗವಿಕಲ ಮಹಿಳಾ ಶಿಕ್ಷಕರಿಗೆ ಹಾಗೂ ಗರ್ಭಿಣಿಯರಿಗೆ ವಿನಾಯಿತಿ ನೀಡಬೇಕು.
  4. ಪ್ರಾಥಮಿಕ ಶಾಲೆಗಳಲ್ಲಿ ಜಾರಿಯಲ್ಲಿರುವ ನಲಿಕಲಿ ಬಹು ವರ್ಗ ಬೋಧನೆಯನ್ನು ರದ್ದು ಪಡಿಸಿ ತರಗತಿವಾರು ಬೋಧನೆಗೆ ಅವಕಾಶ ಮಾಡಿಕೊಡಬೇಕು.
  5. ಬೋಧಕೇತರ ಕಾರ್ಯಗಳಿಂದ ಹಾಗೂ ಮತದಾರರ ಪಟ್ಟಿ ಪರಿಷ್ಕರಣಿ ಕಾರ್ಯಾಗಳಿಂದ ಶಿಕ್ಷಕಿಯರಿಗೆ ವಿನಾಯಿತಿ ನೀಡಬೇಕು.

ಲತಾ ಮುಳ್ಳೂರ ಮನವಿಗೆ ಸ್ಪಂದಿಸಿದ ಮಹಿಳಾ ಆಯೋಗ

ಧಾರವಾಡ ಅಕ್ಟೋಬರ್.13.2025

ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ (ರಿ) ಧಾರವಾಡ ಇದರ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ಲತಾ ಎಸ್ ಮುಳ್ಳೂರ್ ಅವರು ಇತ್ತೀಚೆಗೆ ಕೋಲಾರದ ಮಾಲೂರು ವ್ಯಾಪ್ತಿಯಲ್ಲಿ ಶಿಕ್ಷಕಿಯ ಮೇಲೆ ನಡೆದಿದ್ದ ಹಲ್ಲೆ ಉಲ್ಲೇಖಿಸಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಗೌರವಾನ್ವಿತ ಮಾನ್ಯ ಅಧ್ಯಕ್ಷರಿಗೆ ಪತ್ರ ಬರೆದಿದ್ದರು.


ಕರ್ನಾಟಕ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕಿಯರ ಮೇಲೆ ಆಗುವ ದೌರ್ಜನ್ಯವನ್ನು, ಮಾನಸಿಕ ಹಾಗೂ ದೈಹಿಕ ಕಿರುಕುಳ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ತರಗತಿಗಳಲ್ಲಿ ನಿರ್ಭೀತರಾಗಿ ತಮ್ಮ ಕರ್ತವ್ಯ ನಿರ್ವಹಿಸುವ ನಿಟ್ಟಿನಲ್ಲಿ ಒಂದು ಸುಭದ್ರತೆಯ ವಾತಾವರಣವನ್ನು ಕಲ್ಪಿಸಿ ಕೊಡುವಂತಹ ಒಂದು ಕಾನೂನಾತ್ಮಕ ರಕ್ಷಣೆಯನ್ನು ಸರ್ಕಾರದ ಆದೇಶದ ಮೂಲಕ ಕಲ್ಪಿಸಬೇಕೆಂದು ಪತ್ರದಲ್ಲಿ ಕೋರಲಾಗಿತ್ತು

ಈ ಮನವಿಗೆ ಸ್ಪಂದಿಸಿದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಮಾನ್ಯ ಅಧ್ಯಕ್ಷರು ಗೌರವಾನ್ವಿತ ಶ್ರೀಮತಿ ನಾಗಲಕ್ಷ್ಮಿ ಚೌಧರಿ ರವರು ಇತೀಚೆಗೆ ಕೋಲಾರ ಮಾಲೂರಿನಲ್ಲಿ ನಡೆದಿದ್ದ ಶಿಕ್ಷಕಿಯ ಮೇಲಿನ ಹಲ್ಲೆ ಉಲ್ಲೇಖಿಸಿ ಅಂತಹ ಘಟನೆಗಳು ಮರುಕಳಿಸದಂತೆ ಶಾಲಾ ಶಿಕ್ಷಕಿಯರು ತಮ್ಮ ಕರ್ತವ್ಯವನ್ನು ಸುಭದ್ರತೆಯ ವಾತಾವರಣದಲ್ಲಿ ನಿರ್ವಹಿಸಲು ಕಾನೂನಾತ್ಮಕ ರಕ್ಷಣೆ ಒದಗಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
ಸ್ವಾಸ್ಥ ಸಮಾಜದ ಸರ್ವತೋಮುಖ ಬೆಳವಣಿಗೆಗೆ ಮಾರ್ಗದರ್ಶನ ಮಾಡುವ, ಗುರುಮಾತೆಯರಿಗೆ ರಕ್ಷಣೆ ಒದಗಿಸುವಲ್ಲಿ ಧನಾತ್ಮಕವಾಗಿ ಚಿಂತಿಸಿ, ಸಂಘಟನೆನೊಂದಿಗೆ ಸಹಕರಿಸುತ್ತಿರುವ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಗೌರವಾನ್ವಿತ ಡಾ. ನಾಗಲಕ್ಷ್ಮಿ ಚೌದರಿ ಅವರಿಗೆ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ವು ಸಮಸ್ತ ಶಿಕ್ಷಕಿಯರ ಪರವಾಗಿ ತುಂಬು ಹೃದಯದ ಅನಂತ ಧನ್ಯವಾದಗಳನ್ನು ಸಲ್ಲಿಸಿದೆ.