ಅಕ್ಷರದವ್ವ ಮಾತೆ ಸಾವಿತ್ರಿಬಾಯಿ ಫುಲೆ ಅವರ 193 ನೇ ಜಯಂತಿ ಆಚರಣೆ ಮತ್ತು ಸಾಧಕರಿಗೆ ಸನ್ಮಾನ

ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ). ರಾಜ್ಯ ಘಟಕ – ಧಾರವಾಡ, ಜಿಲ್ಲಾ ಘಟಕ – ತುಮಕೂರು, ತಾಲ್ಲೂಕು ಘಟಕ – ಗುಬ್ಬಿ..

ಗುಬ್ಬಿ: ದಿನಾಂಕ 26 ಜನವರಿ 2023ರ ಗುರುವಾರದಂದು ಗುಬ್ಬಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ಭಾರತದ ಮೊದಲ ಶಿಕ್ಷಕಿ, ಕ್ರಾಂತಿಜ್ಯೋತಿ, ಅಕ್ಷರದವ್ವ, ಮಾತೆ ಸಾವಿತ್ರಿಬಾಯಿ ಫುಲೆ ಅವರ 193ನೇ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗುಬ್ಬಿ ಶಾಖೆಯ ವ್ಯವಸ್ಥಾಪಕರು, ಒತ್ತಡದ ಕೆಲಸದ ನಡುವೆಯೂ ಸದಾ ಹಸನ್ಮುಖಿಗಳಾಗಿ ಸಾರ್ವಜನಿಕರ ಸೇವೆ ಮಾಡುತ್ತಿರುವ ಶ್ರೀಮತಿ ಸುಮಾ ಮೇಡಂ ರವರನ್ನು ಮತ್ತು ಸ್ವಚ್ಚತಾ ಕಾರ್ಯದಲ್ಲಿ ತೊಡಗಿರುವ ಶ್ರೀಮತಿ ಯಶೋದಾ ಅವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಮತಿ ಸುಮಾ ಮೇಡಂ ಅವರು ಸಂಘದ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದರು ಮತ್ತು ಸದಾ ಸಂಘದ ಜೊತೆಗಿರುವುದಾಗಿ ತಿಳಿಸಿದರು.
ಗುಬ್ಬಿ ಘಟಕದ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀ ಎಸ್ ವಿ ಅವರು ಪ್ರಾಸ್ತಾವಿಕ ನುಡಿಗಳಲ್ಲಿ ಮಾತೆಯ ಬಗ್ಗೆ, ಅವರ ಆದರ್ಶಗಳ ಬಗ್ಗೆ ಮತ್ತು ರಾಜ್ಯ ಘಟಕ, ಜಿಲ್ಲಾ ಘಟಕ ಮತ್ತು ತಾಲ್ಲೂಕು ಘಟಕದ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು.ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಅನಿತ.ವಿ.ಎಸ್. ರವರು ಮಾತೆಯನ್ನು ಆರಾಧಿಸುವ,ಪೂಜಿಸುವ ಜೊತೆ ಜೊತೆಯಾಗಿ ನಾವೆಲ್ಲರು ಮಾತೆಯ ಅನುಯಾಯಿಗಳಾಗಬೇಕು ಅವರ ಆದರ್ಶಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಗುಬ್ಬಿ ಘಟಕದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಕೋಶಾಧ್ಯಕ್ಷರು ಮತ್ತು ತಾಲ್ಲೂಕಿನ ಸಮಸ್ತ ಪದಾಧಿಕಾರಿಗಳು, ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದರು.

ಜೀರೋ ಟ್ರಾಫಿಕ್ ನಲ್ಲಿ ಕೊಂಡೊಯ್ದ ದೇಹದ ಅಂಗಾಂಗಳು- ಸಾವಿನಲ್ಲೂ ಉದಾರತೆ ಮೆರೆದ ಲೋಹಿತ್

ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ-ಧಾರವಾಡ
ತಾಲ್ಲೂಕು ಘಟಕ- ಪಿರಿಯಾಪಟ್ಟಣ

ಕಳೆದ ಎರಡು ದಿನಗಳ ಹಿಂದೆ ಆಕಸ್ಮಿಕ ರಸ್ತೆ ಅಪಘಾತದಲ್ಲಿ ಮೆದುಳಿಗೆ ಪೆಟ್ಟು ಬಿದ್ದು ನಿಷ್ಕ್ರಿಯವಾದ ಕಾರಣದಿಂದ ಮೃತಪಟ್ಟ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷರಾದ‌ ಶ್ರೀಮತಿ ಗಾಯತ್ರಿ ಅವರ ಅಕ್ಕನ ಮಗನಾದ ಕುಮಾರ ಲೋಹಿತ (29) ರವರ ದೇಹದ ಅಂಗಾಂಗಗಳಾದ ಹೃದಯ,ಶ್ವಾಸಕೋಶ,ಲಿವರ್,ಕಿಡ್ನಿ, ಸ್ಪೈನಲ್ ಕಾರ್ಡ್ ದಾನ ಮಾಡಿಸುವ ಮೂಲಕ ನಾಡಿಗೇ ಮಾದರಿಯಾಗಿದ್ದಾರೆ.

ಜೀರೋ ಟ್ರಾಪಿಕ್ ಮೂಲಕ ಲೋಹಿತ್ ನ ಹೃದಯವನ್ನು ಚೆನ್ನೈಗೆ ಕೊಂಡೊಯ್ದರು

ಪಿರಿಯಾ ಪಟ್ಟಣ ತಾಲ್ಲೂಕಿನ ಚಿಟ್ಟೇನಹಳ್ಳಿ ಗ್ರಾಮದ ವಾಸಿಯಾಗಿದ್ದ ಮೃತರು ತಾಲ್ಲೂಕಿನ ಅಧ್ಯಕ್ಷರಾದ ಗಾಯತ್ರಿರವರ ಅಕ್ಕನಾದ ಶ್ರೀಮತಿ ಸುಮತಿ ರವರ ಪುತ್ರರಾಗಿದ್ದು, ತನ್ನ ಅಂಗಾಂಗಳ ದಾನದಿಂದ ಅಂಗ ಪಡೆಯುವವರ ಜೀವನಕ್ಕೆ ಬೆಳಕಾಗಿದ್ದಾರೆ.ಮೈಸೂರಿನ ಅಪೊಲೊ ಆಸ್ಪತ್ರೆಯಲ್ಲಿ ಅಂಗಾಂಗಗಳನ್ನು ಪಡೆದು ಕೊಳ್ಳುವ ಕಾರ್ಯ ನಡೆಯುತ್ತಲಿದ್ದು,ನಾಳೆ ಮೃತರ ಸ್ವಗ್ರಾಮದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ..ಮರೆಯಲಾಗದ ಮಾಣಿಕ್ಯ ಲೋಹಿತ್ ರವರ ಆತ್ಮಕೆ ಚಿರಶಾಂತಿ ಸಿಗಲಿ.ಅವರ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ಆ ಭಗವಂತ ಕರುಣಿಸಲಿ ಎಂದು ತಾಲ್ಲೂಕಿನ ಬಂಧುಗಳು, ಮೈಸೂರು ಹಾಗೂ ಇತರೆ ಜಿಲ್ಲೆಗಳ ಬಂದು ಮಿತ್ರರು ಪ್ರಾರ್ಥಿಸಿದ್ದಾರೆ.

ಸಾವಿತ್ರಿಬಾಯಿ ಫುಲೆ ಚಲನಚಿತ್ರ ವೀಕ್ಷಣೆ-ಎಲ್ಲಡೆ ಪ್ರಶಂಸೆಯ ಮಾತು

ಶ್ರೀಮತಿ ಅರುಣಾ ಬಾಯಿ .ಅಧ್ಯಕ್ಷರು.
ಮಾನವಿ ತಾಲ್ಲೂಕು ,ರಾಯಚೂರು ಜಿಲ್ಲೆ..

ಕಾದಂಬರಿ ಆಧಾರಿತ ಸಿನೆಮಾ ಇದಾಗಿದ್ದು,ಮಾತೆ ಸಾವಿತ್ರಿ ಅನಾಚಾರ ಮೌಡ್ಯವನ್ನು ಚೆನ್ನಾಗಿ ಪ್ರಶ್ನೆ ಮಾಡಿದ್ದಾರೆ, ಸತಿಸಹಗಮನ ಪದ್ದತಿ, ಬಾಲ್ಯ ವಿವಾಹ , ಶಿಕ್ಷಣ ದಿಂದ ಹಳೆ ಕಂದಾಚಾರಕ್ಕೆ ಸವಾಲು ಎತ್ತಿದ್ದಾರೆ, ಸಮಾನತೆ , ಸ್ವಾತಂತ್ರ್ಯ,ಬಗ್ಗೆ ತಿಳಿಯಬೇಕು ಅಂದರೆ ಶಿಕ್ಷಣ ಬೇಕು ಎನ್ನುವ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದಿದ್ದಾರೆ. ಮುಖ್ಯವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಸಮಾಜದಲ್ಲಿ ಇರುವ ಅನಿಷ್ಟ ಪದ್ಧತಿ ಗಳನ್ನ ಪ್ರಶ್ನೆ ಮಾಡಿದ್ದಾರೆ. ಲಿಂಗ,ಜಾತಿಗಿಂತ ಎಲ್ಲರೂ ಸಮಾನರು ಎಂಬುದನ್ನು ಮನಗಂಡು ಸತ್ಯವನ್ನು ಪ್ರತಿಪಾದಿಸಿದ್ದಾರೆ, ವಿತಂಡವಾದ ಎಂದವರಿಗೆ ಲಕ್ಷ್ಯ ಕೊಡದೆ ಹೆಣ್ಣುಮಕ್ಕಳ ಮೇಲೆ ಆಗುವ ಅತ್ಯಾಚಾರ ,ಶೋಷಣೆ ,ಅನ್ಯಾಯ ವಿರುದ್ಧ ಸಿಡಿದೆದ್ದ ಸಾವಿತ್ರಿ ಬಾಯಿ, ಶೋಷಣೆ ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಕ್ಕಳಿಗೆ ಶಿಕ್ಷಣ ದಿಂದಲೇ ಧೈರ್ಯ ತುಂಬಿದ್ದಾರೆ. ಹೆಣ್ಣು ಒಂದು ಭೋಗದ ವಸ್ತು ಅಲ್ಲಾ ಮಹಿಳೆಯರು ಜಾಗೃರಾಗಿರಬೇಕು ಸಮಾಜದ ಅನಿಷ್ಟ ಪದ್ಧತಿ ವಿರುದ್ಧ ಧ್ವನಿ ಎತ್ತಬೇಕು ಎಂದು ಸಿನೆಮಾದಲ್ಲಿ ಸ್ಪಷ್ಟವಾಗಿ ಮೂಡಿ ಬಂದಿದೆ.
ಸಮಾಜದ ಸುಧಾರಣೆ ಆಗಬೇಕಾದರೆ ಹೊಸ ಕ್ರಾಂತಿ ಜ್ವಾಲೆ ಕಿಡಿ ಹಚ್ಚಿದವರು ಸಾವಿತ್ರಿ.. ಅಜ್ಞಾನದಿಂದ ಜ್ಞಾನದ ಕಡೆಗೆ ಕೊoಡಯ್ಯುವಲ್ಲಿ ಜೀವನದ ರಹಸ್ಯ ಇದೆ. ಮನುಷ್ಯರು ಎಲ್ಲರೂ ಸಮಾನರು ಎಂದು ಪ್ರತಿಪಾದಿಸಿದ್ದಾರೆ..ಮಹಿಳೆಯರ ಕೇಶಮುಂಡನೆಗೂ ಕೊನೆ ಹಾಡಿದ್ದಾರೆ.. ಸಿನೆಮಾದಲ್ಲಿ ಎಲ್ಲಾ ನಟರು ತಮ್ಮ ಪಾತ್ರಗಳಿಗೆ ನಿಜವಾಗಿಯೂ ಜೀವ ತುಂಬಿದ್ದಾರೆ.. ಜನ ಸೇವಾ ಜನಾರ್ಧನ ಸೇವಾ ಎಂದು ಹೇಳಿ ಸಾವಿರಾರು ವರ್ಷಗಳ ಇತಿಹಾಸದಲ್ಲಿ ಇರುವ ಅಜ್ಞಾನ ಹೋಗಲಾಡಿಸಿ ಜ್ಞಾನದ ಜ್ಯೋತಿ ಹಚ್ಚಿದ್ದಾರೆ.. ಇಂಥಾ ಸಿನಿಮಾ ಮಾಡಿದ ನಿರ್ಮಾಪಕರಿಗೆ, ನಿರ್ದೇಶಕರಿಗೆ ಅನಂತ ದನ್ಯವಾದಗಳು.

ಡಾ. ರಾಧಾ ಕೆ. ಎಂ. ತಿಪಟೂರು

ಸಾವಿತ್ರಿಬಾಯಿ ಫುಲೆ ಚಲನಚಿತ್ರವು ಅತ್ಯುತ್ತಮ ಚಲನಚಿತ್ರವಾಗಿದ್ದು ಸಾವಿತ್ರಿಬಾಯಿ ಫುಲೆಯವರು ತಮ್ಮ ಜೀವನದಲ್ಲಿ ಪಟ್ಟಂತಹ ಕಷ್ಟ, ಅಕ್ಷರ ಅಭ್ಯಾಸವನ್ನು ಕಲಿತು ಅವರು ಶಾಲೆಯನ್ನು ಪ್ರಾರಂಭಿಸಿ ಹೆಣ್ಣುಮಕ್ಕಳಿಗೆ ದಾರಿದೀಪವಾದಂತಹ ರೀತಿಯನ್ನು ಅತ್ಯಂತ ಮನಮುಟ್ಟುವಂತೆ ಚಿತ್ರಿಸಲಾಗಿದ್ದು ಇಂದಿನ ಎಲ್ಲಾ ಹೆಣ್ಣು ಮಕ್ಕಳಿಗೆ ಆಕೆ ಹೇಗೆ ಮಾದರಿಯದಳು ಎಂಬುದನ್ನು ಮನೋಹರವಾಗಿ ತಿಳಿಸಲಾಗಿದೆ. ಚಲನಚಿತ್ರ ನಿರ್ದೇಶಕರಿಗೆ ನಿರ್ಮಾಪಕರಿಗೆ ಹಾಗೂ ನಟನೆ ಮಾಡಿದ ಎಲ್ಲರಿಗೂ ಹೃತ್ಪೂರ್ವಕವಾದ ಧನ್ಯವಾದಗಳು

R.ಮುಕ್ತಾಮಣಿ. ಸಂಘಟನಾ ಕಾರ್ಯದರ್ಶಿ. ತಿಪಟೂರು ತಾಲೂಕು

ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಚಲನಚಿತ್ರ ಅತ್ಯುತ್ತಮ ಚಲನಚಿತ್ರವಾಗಿದ್ದು ಸಾವಿತ್ರಿಬಾಯಿ ಯವರು ಅಕ್ಷರ ಅಭ್ಯಾಸವನ್ನು ಕಲಿತು ಅವರು ಶಾಲೆಯನ್ನು ಪ್ರಾರಂಭಿಸಿ ಹೆಣ್ಣು ಮಕ್ಕಳಿಗೆ ಬೆಳಕಾಗಿ ಆಕೆ ಹೇಗೆ ಮಾದರಿಯಾದರು ಎಂಬುದನ್ನು ಮನಮುಟ್ಟುವಂತೆ ತಿಳಿಸಲಾಗಿದೆ. ಈ ಚಲನಚಿತ್ರವನ್ನು ಶಾಲಾ ಮಕ್ಕಳು ಸಹ ವೀಕ್ಷಿಸುವಂತೆ ಅವಕಾಶ ಒದಗಿ ಬರಲಿ.

Vijayalakshmi Teacher GHS SHIVANAGERE MADHUGIRI DISTRICT

I need to discussing about Savitri bai pule picture. It was excellent story. She met so much of risk in her life. But she didn’t think about it. Really she’s a good teacher and mother also.

ಭವ್ಯ ಎಂಟಿ,ಅಧ್ಯಕ್ಷರು
ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಸಂಘ. ತುರುವೇಕೆರೆ ತಾಲೂಕು ಘಟಕ, ತುಮಕೂರು ಜಿಲ್ಲೆ

ಸಾವಿತ್ರಿಬಾಯಿ ಪುಲೆ ರವರ ಕನ್ನಡ ಚಲನಚಿತ್ರ ಒಂದು ಅಭೂತಪೂರ್ವವಾದ ಚಲನಚಿತ್ರವಾಗಿದೆ, ಅದನ್ನ ತೆರೆಯ ಮೇಲೆ ತಂದಂತಹ ನಿರ್ದೇಶಕರಿಗೆ ಅನಂತ ಅನಂತ ಧನ್ಯವಾದಗಳು ಹಾಗು ಕಾದಂಬರಿ ಕಾರರಿಗೆ ಹಾಗೂ ತಾರಾ ಗಣಕ್ಕೆ ಕೋಟಿ ಕೋಟಿ ನಮಸ್ಕಾರಗಳು, ಅಂದಿನ ಕಾಲದ ಹೆಣ್ಣಿನ ಸುಖ ದುಃಖವನ್ನು ಎಳೆ ಎಳೆಯಾಗಿ ಚಿತ್ರಿಸಿರುವ ನಮ್ಮ ನಿರ್ದೇಶಕರಿಗೆ, ಚಿತ್ರತಂಡಕ್ಕೆ ಮತ್ತು ಪ್ರೊಡ್ಯೂಸರ್ ಗೆ ನಮ್ಮ ಹೃದಯಪೂರ್ವಕ ಧನ್ಯವಾದಗಳು, ಇಂತಹ ಒಂದು ಚಲನಚಿತ್ರವನ್ನು ತೆರೆಯ ಮೇಲೆ ತಂದಿರುವುದೇ ಒಂದು ದೊಡ್ಡ ಮತ್ತು ಗೌರವ ಪೂರ್ವಕವಾದ ವಿಷಯವಾಗಿದೆ. ಪ್ರತಿಯೊಂದು ಸೂಕ್ಷ್ಮ ಸಂಗತಿಗಳನ್ನು ತೆರೆಯ ಮೇಲೆ ತಂದಿರುವುದು, ಅಸಹಾಯಕ ಸಂದರ್ಭದಲ್ಲಿ ಸಾವಿತ್ರಿಯ ದಿಟ್ಟ ನಡೆ ಜ್ಯೋತಿಬಾ ರವರ ಸಹಕಾರ ಸಾಂಗತ್ಯ, ಗಂಡ ಹೆಂಡಿರ ಪವಿತ್ರ ಬಂಧನ, ಹೆಣ್ಣಿನ ಶೋಷಣೆ ಮೂಢನಂಬಿಕೆ, ಅವೆಲ್ಲವನ್ನು ತೊಡೆದು ಹಾಕುವಲ್ಲಿ ಸಾವಿತ್ರಿ ಮತ್ತು ಜ್ಯೋತಿಬಾ ರವರ ಗಟ್ಟಿ ನಿರ್ಧಾರ, ಕಥಾ ಎಣಿಕೆಯ ಸರಳತೆ, ಎಲ್ಲವೂ ತುಂಬಾ ಸುಂದರವಾಗಿ ಮೂಡಿ ಬಂದಿದೆ.

ಸ್ವಪ್ನ ಆರ್. ಎ. ಸಹ ಶಿಕ್ಷಕಿ
ಸ.ಕಿ. ಪ್ರಾ.ಶಾಲೆ ದಾಸಣ್ಣನಹಟ್ಟಿ
ಹಿರಿಯೂರು ತಾಲ್ಲೂಕು,ಚಿತ್ರದುರ್ಗ ಜಿಲ್ಲೆ

ಆಗಿನ ಕಾಲದಲ್ಲಿ ಶಿಕ್ಷಣ ಪಡೆಯುವ ಕಷ್ಟಗಳು ಹೇಗೆ ಎಂಬುದನ್ನು ಅದ್ರಲ್ಲೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ,ಸಮಾಜದ ಉದ್ದಾರಕ್ಕೆ ತಮ್ಮ ಪ್ರಾಣವನ್ನೇ ಅರ್ಪಣೆ ಮಾಡಿದ ಮಹಾತಾಯಿಗೆ ಶರಣು ಶರಣು ಅದೇ ರೀತಿ ಇದನ್ನು ಚಿತ್ರಮಂದಿರದಲ್ಲಿ ನೋಡಲು ಅವಕಾಶ ನೀಡಿದ ಹಾಗೂ ಚಿತ್ರವನ್ನು ಮಾಡಲು ವಿಶಾಲ ಮನಸ್ಸು ಮಾಡಿದ ನಿರ್ದೇಶಕರಿಗೂ, ನಿರ್ಮಾಪಕರಿಗೆ,ಚಿತ್ರಕ್ಕೆ ಕಾದಂಬರಿ ರೂಪುರೇಷೆ ಕೊಟ್ಟ ಸರಜು ಕಾಟ್ಕರ್ ಅವರಿಗೆ ಅನಂತ ಧನ್ಯವಾದಗಳು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಸಮಯದ ಚಿತ್ರ ಬರಲಿ ಎಂದು ನಿರೀಕ್ಷಿಸುವೆ.

ಸಾವಿತ್ರಿಬಾಯಿ ಫುಲೆ ಚಲನಚಿತ್ರ- ಯಶಸ್ವಿ ಪ್ರದರ್ಶನ

ರಾಮನಗರ-ಜು.31 ಕರ್ನಾಟಕ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘ ರಾಜ್ಯ ಘಟಕ ಧಾರವಾಡ ಜಿಲ್ಲಾ ಘಟಕ ರಾಮನಗರ ದಿನಾಂಕ 31/7/22ರಂದು “ಶಾನ್” ಥಿಯೇಟರ್ ನಲ್ಲಿ “ಸಾವಿತ್ರಿ ಬಾಯಿ ಫುಲೆ” ಚಲನಚಿತ್ರದ ವಿಶೇಷ ಪ್ರದರ್ಶನ ಮಾಡಲಾಯಿತು. ಚಲನಚಿತ್ರ ವೀಕ್ಷಿಸಿದ ವೀಕ್ಷಕರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು.ಸಾವಿತ್ರಿ ಬಾಯಿ ಫುಲೆ ಯವರ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಸಮಾಜಮುಖಿ ಕಾರ್ಯಗಳನ್ನು ಮಾಡಿದಲ್ಲಿ ದೇಶದ ಪ್ರಗತಿ ಉತ್ತುಂಗ ಕ್ಕೇರುವುದರಲ್ಲಿ ಸಂಶಯವಿಲ್ಲ ಎಂದು ವ್ಯಕ್ತಪಡಿಸಿದರು. ಇಂತಹ ಒಂದು ಉತ್ತಮ ಚಲನಚಿತ್ರ ನೀಡಿದ ನಿರ್ದೇಶಕ ರಿಗೂ,ನಿರ್ಮಾಪಕರಿಗೂ, ಅಭಿನಯಿಸಿದ ಎಲ್ಲಾ ತಾರಾಬಳಗಕ್ಕೂ ಸಂಘದ‌ಪರವಾಗಿ ಧನ್ಯವಾದಗಳು. ಇದೇ ಒಂದು ಸಂದರ್ಭದಲ್ಲಿ ಜಿಲ್ಲೆಯ ನಿವೃತ್ತ ಶಿಕ್ಷಕಿಯರ ಗೆ ಸನ್ಮಾನ ಮಾಡಿ ಅಭಿನಂದಿಸಲಾಯಿತು.ಜೈ ಸಾವಿತ್ರಿ ಬಾಯಿ ಫುಲೆ ನಮ್ಮ ಸಂಘ ನಮ್ಮ ಹೆಮ್ಮೆ

ಜುಲೈ-31ಕ್ಕೆ ಸಾವಿತ್ರಿಬಾಯಿ ಫುಲೆ ಚಲನಚಿತ್ರ ವಿಶೇಷ ಪ್ರದರ್ಶನ

ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ,ರಾಜ್ಯಘಟಕ-ಧಾರವಾಡ ಜಿಲ್ಲಾಘಟಕ- ತುಮಕೂರು

ದಿನಾಂಕ 31.7. 2022 ರ ಭಾನುವಾರ ಬೆಳಗ್ಗೆ 8.30 ಗಂಟೆಗೆ ತುಮಕೂರು ನಗರದ ಎಂಜಿ ರಸ್ತೆಯಲ್ಲಿರುವ ಶ್ರೀಕೃಷ್ಣ ಚಿತ್ರಮಂದಿರದಲ್ಲಿ” ಭಾರತದ ಮೊದಲ ಮಹಿಳಾ ಶಿಕ್ಷಕಿ, ಅಕ್ಷರದವ್ವ ,ಮಾತೆ ಸಾವಿತ್ರಿಬಾಯಿ ಫುಲೆಯವರ ಜೀವನಾಧರಿತ “ಸಾವಿತ್ರಿಬಾಯಿ ಫುಲೆ” ಚಲನಚಿತ್ರದ ವಿಶೇಷ ಪ್ರದರ್ಶನವನ್ನು ಶ್ರೀ ಅಮೋಘ ಸಿದ್ದೇಶ್ವರ ಕ್ರಿಯೇಷನ್ಸ್ ರವರ ಸಹಭಾಗಿತ್ವದಲ್ಲಿ ಏರ್ಪಡಿಸಲಾಗಿರುತ್ತದೆ.ಸ್ವತಂತ್ರಪೂರ್ವದಲ್ಲಿ ಬ್ರಿಟಿಷ್ ಕಾಲದಲ್ಲಿದ್ದ ಮಹಿಳೆಯರ ಶೋಷಣೆಯ ಸ್ಥಿತಿಗತಿಗಳನ್ನ ಬಿಂಬಿಸುವಂತ,ಶೋಷಿತ,ಹಿಂದುಳಿದ ಸಮಾಜದ ದನಿಯಾಗಿದ್ದ ಮಾತೇ ಸಾವಿತ್ರಿಬಾಯಿ ಫುಲೆಯವರ ಸಮಗ್ರ ಜೀವನ ಚರಿತ್ರೆಯನ್ನು ಎಳೆಎಳೆಯಾಗಿ ಚಿತ್ರಿಸಿರುವ ಈ ಚಲನಚಿತ್ರ ಇದಾಗಿದ್ದು ಪ್ರತಿ ಮಹಿಳೆಯರು ನೋಡಲೇಬೇಕಾದ ಚಲನಚಿತ್ರ ವಾಗಿದೆ.ಮಾತೆಯ ಪಾತ್ರದಲ್ಲಿ ಪ್ರಸಿದ್ಧ ನಟಿ,ರಾಷ್ಟ್ರಪ್ರಶಸ್ತಿ ಪುರಸ್ಕೃತ ರಾದ ತಾರಾ ಅನುರಾಧರವರು , ಹಾಗೂ ಜ್ಯೋತಿಬಾ ಫುಲೆಯವರ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ರವರ ನಟಿಸಿದ್ದಾರೆ. ಪ್ರಸಿದ್ಧ ಪತ್ರಕರ್ತರು, ಸಾಹಿತಿಗಳಾದ,ಡಾ.ಸರಜೂ ಕಾಟ್ಕರ್ ಅವರ ಕಾದಂಬರಿ ಆಧಾರಿತ ಚಿತ್ರ ಇದಾಗಿದ್ದು,ವಿಶಾಲ್ ರಾಜ್ ರವರ ಅಮೋಘ ನಿರ್ದೇಶನದಲ್ಲಿ ಬಸವರಾಜ ಬೂತಾಳಿ ರವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.,ಸಾಮಾಜಿಕ, ಶೈಕ್ಷಣಿಕಸಾಹಿತ್ಯಿಕ, ಐತಿಹಾಸಿಕ,ವಿಚಾರವಂತರು ಎಲ್ಲರೂ ಈ ಚಲನಚಿತ್ರವನ್ನು ತಪ್ಪದೇ ವೀಕ್ಷಿಸಲು ಈ ಮೂಲಕ ಕೋರಲಾಗಿದೆ.

ಇಂದ:

ಶ್ರೀಮತಿ ಪಿ.ಎಸ್ ಅನುಸೂಯಾದೇವಿ,ಅಧ್ಯಕ್ಷರು. ಹಾಗೂ ರಾಜ್ಯ ಉಪಾಧ್ಯಕ್ಷರು
ಶ್ರೀಮತಿ ಪ್ರವೀಣಕುಮಾರಿ.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು

(ಸಂಘದ ಎಲ್ಲಾ ಜಿಲ್ಲಾ ಪದಾಧಿಕಾರಿಗಳ ಪರವಾಗಿ)

ಕರ್ನಾಟಕ ಸಾವಿತ್ರಿಬಾಯಿ‌ ಫುಲೆ ಶಿಕ್ಷಕಿಯರ ಸಂಘದ YOUTUBE CHANNEL

https://youtube.com/channel/UC5iITWHiMVcE7YblGh-l2wg
ಈ ಲಿಂಕ್ ಬಳಸಿ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ YOU TUBE ಚಾನೆಲ್ ಗೆ ತಪ್ಪದೇ ಎಲ್ಲರು subscribe ಬಟನ್ ಒತ್ತುವ ಮೂಲಕ SUBSCRIBERS ಆಗಿ,, ಸಪೋರ್ಟ್ ಮಾಡಿ, ಬೆಂಬಲ ನೀಡಿ.

https://youtube.com/channel/UC5iITWHiMVcE7YblGh-l2wg

Dr.Latha.S.Mullur, Founder and state President

ಶಿಕ್ಷಕಿಯರ ಸಂಘದ ವತಿಯಿಂದ ಶಿಕ್ಷಣ ಅಧಿಕಾರಿಗಳಿಗೆ ಬೀಳ್ಕೊಡುಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮ

ದಿನಾಂಕ: 16 ಜುಲೈ 2022 ರ ಶನಿವಾರದಂದು ಶ್ರೀ ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ವರ್ಗಾವಣೆಗೊಂಡ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀಯುತ ಸಿದ್ಧಲಿಂಗಸ್ವಾಮಿ ಸರ್ ರವರಿಗೆ ಹಾಗೂ ಅಕ್ಷರ ದಾಸೋಹ ನಿರ್ದೇಶಕರಾದ ಶ್ರೀಯುತ ಯೋಗಾನಂದ ಸರ್ ರವರಿಗೆ

ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ)
ರಾಜ್ಯಘಟಕ – ಧಾರವಾಡ
ಜಿಲ್ಲಾ ಘಟಕ -ತುಮಕೂರು. ತಾಲ್ಲೂಕು ಘಟಕ – ಗುಬ್ಬಿ ವತಿಯಿಂದ

ಬೀಳ್ಕೊಡುಗೆ ಸಮಾರಂಭ ಹಾಗೂ ಸಂಘದ ಸದಸ್ಯರ SSLC, PUC ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವು ವಿಶಾಲಾಕ್ಷಿ ಮೇಡಂ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಸದಸ್ಯರೆಲ್ಲರೂ ನಾಡಗೀತೆ ಹಾಡುವುದರ ಮೂಲಕ ನಾಡಿಗೊಂದು ನಮನ ಸಲ್ಲಿಸಿದರು. ಮಂಜುಳರವರು ಎಲ್ಲರನ್ನೂ ಸ್ವಾಗತಿಸಿದರು. ಎಲ್ಲಾ ಗಣ್ಯರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು..

ಸಂಘದ ಗುಬ್ಬಿ ತಾಲ್ಲೂಕು ಘಟಕದ ಅಧ್ಯಕ್ಷೆ ಎಸ್ ವಿ ಲಕ್ಷ್ಮಿರವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಕುಟುಂಬ ಸಮೇತರಾಗಿ ಬಂದು ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಯುತ ಯೋಗಾನಂದ ಸರ್ ರವರು ಪ್ರಾರಂಭದಿಂದಲೂ ಸಂಘವು ಉತ್ತಮ ಕೆಲಸಗಳನ್ನು ಮಾಡುತ್ತ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದೆ. ಮಕ್ಕಳನ್ನು ಗುರ್ತಿಸಿ ಸನ್ಮಾನಿಸಿದ್ದೂ ಕೂಡ ಶ್ಲಾಘನೀಯ ಎಂದರು. ಸಂಘವು ರಾಜ್ಯದಾದ್ಯಂತ ಪಸರಿಸಿದ್ದು ಈಗ ಮಹಾರಾಷ್ಟ್ರದಲ್ಲಿಯೂ ರಚನೆಯಾಗುತ್ತಿರುವ ಬಗ್ಗೆ ಮಾಹಿತಿ ತಿಳಿದು ಸಂತೋಷವಾಯಿತು. ಮುಂದೆ ದೇಶದಾದ್ಯಂತ ವ್ಯಾಪಿಸಿ ಉತ್ತಮ ಹೆಸರು ಪಡೆಯಲಿ ಎಂದು ಹಾರೈಸಿದರು.

ಶ್ರೀಯುತ ಸಿದ್ದಲಿಂಗಸ್ವಾಮಿ ಸರ್ ರವರು ಸಂಘದ ಕಾರ್ಯಚಟುವಟಿಕೆಗಳನ್ನು ಮೊದಲಿನಿಂದಲೂ ಗಮನಿಸುತ್ತಾ ಬಂದಿದ್ದೇನೆ.. ಸಾಮಾಜಿಕ ಮತ್ತು ಶೈಕ್ಷಣಕವಾಗಿ ಅನೇಕ ಕೆಲಸಗಳನ್ನು ಈ ಸಂಘವು ಮಾಡುತ್ತಿದೆ. ಸಾವಿತ್ರಿಬಾಯಿ ಫುಲೆ ರವರ ಚಲನಚಿತ್ರ ಬಿಡುಗಡೆ ಈ ಸಂಘದ ಮುಂದಾಳತ್ವದಲ್ಲಿ ಆಗುತ್ತಿರುವ ವಿಷಯ ಕೂಡ ಪ್ರಶಂಸನೀಯ. ಹೀಗೆಯೇ ಇನ್ನೂ ಹೆಚ್ಚು ಹೆಚ್ಚು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಂಘವು ಇನ್ನೂ ಉನ್ನತ ಸ್ಥಾನಕ್ಕೇರಲಿ.
ಎಲ್ಲಾ ಸಂಘಟನೆಗಳ ಗುರಿ ಒಂದೇ. ಎಲ್ಲರೂ ಸಾಮರಸ್ಯದಿಂದ ಕಾರ್ಯಪ್ರವೃತ್ತರಾಗಿ ಎಂದು ಕಿವಿಮಾತು ಹೇಳಿದರು.

ಸಂಘದ ಸದಸ್ಯರ SSLC ಮತ್ತು PUC ಮಕ್ಕಳಿಗೆ ಅವರ ಪೋಷಕರ ಸಹಿತ ಸನ್ಮಾನಿಸಲಾಯಿತು

ಲತಾಮಣಿ ಮೇಡಂ ಮತ್ತು ಅರ್ಪಣಾ ಮೇಡಂ ರವರ ಸ್ವರಚಿತ ಕವನ ವಾಚನ (ಸನ್ಮಾನಿತರನ್ನು ಕುರಿತು) ಅತ್ಯುತ್ತಮವಾಗಿತ್ತು.
ಪದ್ಮ ಮೇಡಂ ರವರು ಎಲ್ಲರಿಗೂ ವಂದನೆಗಳನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತೃ ಸಂಘದ ಮಾಜಿ ಅಧ್ಯಕ್ಷರು ಹಾಲಿ ನಿರ್ದೇಶಕರಾದ ಶ್ರೀ ದಯಾನಂದ ಸರಸ್ವತಿ ಸರ್, ನಿರ್ದೇಶಕರುಗಳಾದ ಶ್ರೀ ಶಶಿಧರ್,
ಶ್ರೀ ಸಿದ್ದಲಿಂಗೆಗೌಡರು,ಶ್ರೀಮತಿ N T ಲಕ್ಷ್ಮಿ,ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರವೀಣ ಕುಮಾರಿ.TN ತುಮಕೂರು ತಾ.ಘಟಕದ ಲತಾ ಮೇಡಂ,ಗುಬ್ಬಿ ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಅನಿತ ವಿ ಎಸ್, ಕೋಶಾಧ್ಯಕ್ಷರಾದ ಮಂಜಮ್ಮ, ಸಂಘಕ್ಕೆ ಸದಾ ಬೆನ್ನುಲುಬುಗಳಂತಿರುವ ಶ್ರೀ ಸುರೇಶಯ್ಯ M G, ಶ್ರೀ ರಂಗಸ್ವಾಮಿ, ಶ್ರೀ ರವೀಶ್, ತಾಲೂಕಿನ CRP ಗಳು, BRC ಮತ್ತು BEO ಕಛೇರಿಯವರು, ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.