ನಲಿಕಲಿ ಸೇತುಬಂಧ ವೆಬಿನಾರ್ ವಿಚಾರ ಕಾರ್ಯಕ್ರಮ- ಫುಲೆ ಸಂಘ ಯಶಸ್ವಿ

ಹರಿಹರ-ಜು.3- ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ರಾಜ್ಯ ಘಟಕ ಧಾರವಾಡ ಜಿಲ್ಲಾ ಘಟಕ ದಾವಣಗೆರೆ ಹರಿಹರ ತಾಲ್ಲೂಕು ಘಟಕ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಹರಿಹರ ಸಹಯೋಗದಲ್ಲಿ

ದಿನಾಂಕ 3/7/2021 ರಂದು ನಲಿಕಲಿ ಸೇತುಬಂಧ (Bridge Course) ಕಾರ್ಯಕ್ರಮ ಸಂಜೆ 4 ಗಂಟೆಗೆ ವೇಬಿನಾರ್ ಕಾರ್ಯಕ್ರಮ ಆಯೋಜಿಸಲಾಗಿತ್ತು Microsoft Teams ನಲ್ಲಿ 300 ಕ್ಕಿಂತ ಹೆಚ್ಚು ಶಿಕ್ಷಕ ಶಿಕ್ಷಕಿಯರು ಜಾಯಿನ್ ಆಗಿ ಪ್ರಯೋಜನ ಪಡೆದರು.ರಾಜ್ಯ ಪ್ರಧಾನ ಕಾರ್ಯದರ್ಶಿ ಗಳಾದ ಶ್ರೀಮತಿ ಜ್ಯೋತಿ ಹೆಚ್ ರವರು ಎಲ್ಲರನ್ನೂ ಸ್ವಾಗತಿಸಿದರು…ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಹರಿಹರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಾನ್ಯ ಶ್ರೀ ಬಸವರಾಜಪ್ಪ. U. ಅವರು ನಲಿ ಕಲಿ 60ದಿನಗಳ ಸೇತುಬಂಧ ಬಗ್ಗೆ ಮಾಹಿತಿ ತುಂಬಾ ಅವಶ್ಯಕತೆ ಇತ್ತು.ಅಧಕ್ಕೆ ಪೂರಕವಾಗಿ ವೆಬಿನಾರ್ ಆಯೋಜಿಸಿದ್ದು ಉತ್ತಮ…ಇದನ್ನು ಶಿಕ್ಷಕರು ಉತ್ತಮವಾಗಿ ಶಾಲಾ ಹಂತದಲ್ಲಿ ಬಳಸಿಕೊಳ್ಳಿ .. ಯಶಸ್ವಿ ಆಗಲಿ ಎಂದು ಹಾರೈಸಿದರು..

ನಂತರ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಮಾನ್ಯ ಶ್ರೀ ವಿಶ್ವನಾಥ.K. R ಅವರು ಕಾರ್ಯಕ್ರಮ ಕುರಿತು ನಲಿ ಕಲಿ ವಿಭಿನ್ನ.. ವಿಶಿಷ್ಟ ಭೋದನಾ ಕಾರ್ಯಕ್ರಮ…ಅಭ್ಯಾಸ ಹಾಳೆ ಗಳ ಬಳಕೆ…ಮೌಲ್ಯಮಾಪನ ಕಾರ್ಯದ ಬಗ್ಗೆ ಹೆಚ್ಚಿನ ಮಾಹಿತಿ ಈ ವೆಬಿನಾರ್ ನಲ್ಲಿ ಸಿಗಲಿದೆ… ಎಲ್ಲರೂ ಉತ್ತಮ ವಾಗಿ ಬಳಸಿಕೊಳ್ಳಿ ಎಂದು ಉತ್ತಮ ಮಾರ್ಗ ದರ್ಶನ ನೀಡಿ ಎಲ್ಲರಿಗೂ ಶುಭ ಕೋರಿದರುನಂತರ ಡಾ. ಲತಾ. ಎಸ್. ಮುಳ್ಳೂರ ಸಂಘದ ಸ0ಸ್ಥಾಪಕ ಅಧ್ಯಕ್ಷರು. ನಮ್ಮ ಸಂಘ ಸಾಮಾಜಿಕ ಕಾರ್ಯಗಳಲ್ಲಿ ಹಾಗೂ ಶಿಕ್ಷಕಿಯರ ಬೇಕು ಬೇಡಿಕೆ ಸಮಸ್ಯೆಗಳಿಗೆ ಸ್ಪಂದಿಸುತ್ತ ಶಾಲೆಗಳ ಸಬಲೀಕರಣ. ಶೈಕ್ಷಣಿಕ ಕಾರ್ಯಕ್ರಮ ..ಕಾರ್ಯಾಗಾರ. ತರಬೇತಿ. ಶೈಕ್ಷಣಿಕ ವೆಬಿನಾರಗಳನ್ನು ಆಯೋಜಿಸುವ ಮೂಲಕ ಶೈಕ್ಷಣಿಕ ಚಟುವಟಿಕೆ ಗಳಲ್ಲಿ ತೊಡಗಿದೆ. ರಾಜ್ಯದ ಬಹುತೇಕ ಶಿಕ್ಷಕ ಶಿಕ್ಷಕಿಯರು ಬೆಂಬಲ. ಪ್ರೋತ್ಸಾಹ. ಪ್ರಯೋಜನ ಪಡೆಯುತ್ತಿದ್ದಾರೆ.ಎಂದು ತಿಳಿಸಿ ಶುಭ ಕೋರಿದರು ..

ನಲಿಕಲಿ ಸೇತುಬಂಧ ಕುರಿತು ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಫೌಜಿಯಾ ಸರವತ್ ಅವರು 3 ತಾಸುಗಳ ವರೆಗೆ ಸುದೀರ್ಘವಾಗಿ ಎಲ್ಲರ ಮನಮುಟ್ಟುವಂತೆ ಅಭ್ಯಾಸ ಹಾಳೆಗಳ ಮೂಲಕ ..ಕಲಿಕೋಪಕರಣಗಳ ಮೂಲಕ .ಮಕ್ಕಳಿಗೆ ಆನ್ಲೈನ್..ಆಫ್ಲೈನ್ .. ಮತ್ತು ಸಮಿಶ್ರವಾಗೀ ಈಗಿನ ಕೋವಿಡ್ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಯಾವ ರೀತಿಯಾಗಿ ಕಲಿಸಬೇಕೆಂದು ವಿವರವಾಗಿ ತಿಳಿಸಿದರು ಅನೇಕ ಶಿಕ್ಷಕ ಶಿಕ್ಷಕಿಯರು ಮುಕ್ತವಾಗಿ ಚರ್ಚಿಸಿ. ಪ್ರಶ್ನಿಸಿ ಸಮಸ್ಯೆ ಬಗೆಹರಿಸಿಕೊಂಡರು..ನಲಿ ಕಲಿ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಎಲ್ಲರಿಗೂ ಹೊಸ ಭರವಸೆ ..ಹುಮ್ಮಸ್ಸು ತುಂಬಿದರು
ಹಾಗೆಯೇ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರೇಣುಕಾರಾಧ್ಯ ಸರ್ ರವರು ನಲಿ ಕಲಿ ವಿಷಯದ ಕುರಿತು ಕೇಳುಗರ ಪ್ರಶ್ನೆಗಳಿಗೆ ಅರ್ಥ ಪೂರ್ಣವಾಗಿ ವಿಷಯ ಮನದಟ್ಟಾಗುವಂತೆ ಮಾಹಿತಿ ತಿಳಿಸಿದರು
ರಾಜ್ಯ ಪ್ರಧಾನ ಕಾರ್ಯದರ್ಶಿ ಗಳಾದ ಶ್ರೀಮತಿ ಜ್ಯೋತಿ ಹೆಚ್ ರವರು ತಾಳ್ಮೆ ಸಹನೆಯಿಂದ ನಿರಂತರ ವಾಗಿ ವೇಬಿನಾರ ನಲ್ಲಿ ಭಾಗವಹಿಸಿದ ಬಿಇಒ ಸರ್..BRC ಸರ್..ECO..BRP..CRP ಗಳಿಗೆ ಹಾಗೂ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯ ..ಜಿಲ್ಲಾ.. ತಾಲೂಕು ಪದಾಧಿಕಾರಿಗಳಿಗೆ .ಮತ್ತು ಸರ್ವ ಶಿಕ್ಷಕ ಶಿಕ್ಷಕಿಯರಿಗೆ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿದರು .. ಕಾರ್ಯಕ್ರಮದ ಅಚ್ಚುಕಟ್ಟಾದ ನಿರೂಪಣೆಯನ್ನು ಕವಿತಾ.ಉಪಾಧ್ಯಕ್ಷರು. ಶಿಕಾರಿಪುರ ಇವರು ನಡೆಸಿಕೊಟ್ಟರು ಒಟ್ಟಿನಲ್ಲಿ ವೆಬಿನಾರ್ ಸಂವಾದ ಕಾರ್ಯಕ್ರಮ ಅತ್ಯುತ್ತಮ ವಾಗಿ ಸರ್ವರ ಸಹಕಾರದಿಂದ ಅತ್ಯುತ್ತಮ ವಾಗಿ ಮೂಡಿ ಬಂದಿತು.. ಭಾಗವಹಿಸಿದ ಸರ್ವರಿಗೂ ಧನ್ಯವಾದಗಳನ್ನು ಅರ್ಪಿಸಿದರು.

🌹🌹🌹🌹🌹🌹🌹🌹🌹🌹🌹🌹🌹🌹

ಇಂದ:

ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಹಾಗೂ ಎಲ್ಲಾ ಪದಾಧಿಕಾರಿಗಳು
ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ರಾಜ್ಯ ಘಟಕ ಧಾರವಾಡ
ದಾವಣಗೆರೆ ಜಿಲ್ಲೆ .ಹರಿಹರ ತಾಲೂಕು ಘಟಕ🙏🙏🙏🙏🙏🙏🙏🙏🙏🤝🤝🤝🤝🤝🤝🤝🤝🌹🤝

ವೈದ್ಯರಿಗೆ ನಮಿಸಿ ಗೌರವಿಸಿದ ಫುಲೆ ಶಿಕ್ಷಕಿಯರ ಸಂಘ

ಬೀದರ್ ಜು-1.

ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ)ರಾಜ್ಯ ಘಟಕ ಧಾರವಾಡ .ಜಿಲ್ಲಾ ಘಟಕ ಬೀದರ,ತಾಲೂಕಾ ಘಟಕ ಹುಮನಾಬಾದ ಮತ್ತು ತಾಲೂಕಾ ಘಟಕ ಚಿಟಗುಪ್ಪ ವತಿಯಿಂದ ಇಂದು ವಿಶ್ವ ವೈದ್ಯರ ದಿನದ ಪ್ರಯುಕ್ತ ಹುಮನಾಬಾದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು..

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಹಾಯಕ ಆಯುಕ್ತರಾಗಿರುವ ಶ್ರೀ ಭುವನೇಶ ಪಾಟೀಲ Sir ಉಪಸ್ಥಿತರಿದ್ದರು. .. ತಾಲೂಕಿನ ವೈಧ್ಯಾಧಿಕಾರಿಗಳಾದ ಶ್ರೀ ನಾಗನಾಥ ಹುಲಸೂರೆ, ಡಾ. ಬಸವಂತರಾವ ಗುಮ್ಮೆದ, ಡಾ.ದಿಲೀಪ್ ಡೊಂಗ್ರೆ, ಡಾ.ಪ್ರವೀಣ, dr ರೋಹಿತ ರಘೋಜಿ, ಡಾ ವಿಶ್ವ ಸೈನೀರ, ಡಾ.ಸುಭಾನ್ ಮತ್ತು ಡಾ.ಮುಸ್ತಾಜ ಎಲ್ಲ ವೈದ್ಯರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು💐💐💐.

ಜಿಲ್ಲಾ ಸಂಘದ ಅಧ್ಯಕ್ಷರಾದ ಶ್ರೀಮತಿ ಸಾರಿಕಾ ಗಂಗಾ ಪ್ರಾಸ್ತಾವಿಕವಾಗಿ ಮಾತನಾಡಿ ವೈದ್ಯರನ್ನು ಎರಡನೇ ದೇವರೆಂದು ಶ್ಲಾಘಿಸಿ ಧನ್ಯವಾದ ಅರ್ಪಿಸಿದರು.👏👏👏. ಜೊತೆಗೆ ಹುಮನಾಬಾದ ತಾಲೂಕಾ ಅಧ್ಯಕ್ಷರಾದ ಸುನಿತಾ ಪಾಟೀಲ, ಚಿಟಗುಪ್ಪ ತಾಲೂಕಿನ ಅಧ್ಯಕ್ಷರಾದ ಪ್ರಮೀಳಾ ರೆಡ್ಡಿ, ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿಬಾಯಿ ರೆಡ್ಡಿ ತಾಲೂಕಾ ಪ್ರಧಾನ ಕಾರ್ಯದರ್ಶಿ ಪ್ರೇಮೀಲಾ ನೆಲವಾಡೇ, ತಾಲೂಕಾ ಕೋಶಾಧ್ಯಕ್ಷರಾದ ಭುವನೇಶ್ವರಿ ಪಾಟೀಲ, ಪದಾಧಿಕಾರಿಗಳಾದ ಪ್ರತಿಭಾ ರೆಡ್ಡಿ, ಅಂಬಿಕಾ ಚಳಕಾಪೂರೆ, ಸವಿತಾ ಹೂಗಾರ, ಸುಮಂಗಲಾ,ಅರುಣಾ, ಅಂಬಿಕಾ ಉಪಸ್ಥಿತರರಿದ್ದರು.. ಭುವನೇಶ್ವರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾರ್ಯಕ್ರಮ ನಿರೂಪಿಸಿ ಸರ್ವರನ್ನು ವಂದಿಸಿದರು🙏🙏🙏🙏🙏 ರಾಜ್ಯ ಘಟಕದಿಂದ ಎಲ್ಲರಿಗೂ ಧನ್ಯವಾದಗಳು

ಕೊವಿಡ್ ಲಸಿಕೆ ಕ್ಯಾಂಪ್ ನಲ್ಲಿ ಫುಲೆ ಶಿಕ್ಷಕಿಯರ ಸಂಘ ಭಾಗಿ-ಯಶಸ್ವಿ

ಕರ್ನಾಟಕ ರಾಜ್ಯ ಸಾವಿತ್ರಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ರಾಜ್ಯ ಘಟಕ ಧಾರವಾಡ. ರಾಯಚೂರು ಜಿಲ್ಲಾ ಘಟಕ

ರಾಯಚೂರು,june,26. ಇಂದು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜ್ ರಾಯಚೂರಿನಲ್ಲಿ ವಿಶೇಷವಾಗಿ ಶಿಕ್ಷಕರಿಗಾಗಿ ,ಉಪನ್ಯಾಸಕರಿಗಾಗಿ, ಹಾಗೂ ವಿದ್ಯಾರ್ಥಿಗಳಿಗಾಗಿ, ಉಚಿತ ಕೋವಿಡ್-19 ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮಕ್ಕೆ ರಾಯಚೂರು ಜಿಲ್ಲೆಯ ಲೋಕಸಭಾ ಸದಸ್ಯರಾದ ಸನ್ಮಾನ್ಯ ಶ್ರೀ ರಾಜ ಅಮರೇಶ ನಾಯಕ, ರಾಯಚೂರು ನಗರದ ಜನಪ್ರಿಯ ಶಾಸಕರಾದ ಹಾಗೂ ಶಿಕ್ಷಕರ ಹಿತೈಷಿಗಳಾದ ಸನ್ಮಾನ್ಯ ಶ್ರೀ ಶಿವರಾಜ್ ಪಾಟೀಲ್ ಹಾಗೂ ಸನ್ಮಾನ್ಯ ಶ್ರೀ ಶಶೀಲ್. ಜಿ. ನಮೋಶಿ ವಿಧಾನ ಪರಿಷತ್ ಸದಸ್ಯರು ಈಶಾನ್ಯ ಶಿಕ್ಷಕರ ಮತಕ್ಷೇತ್ರ ಕಲ್ಬುರ್ಗಿ, ಹಾಗೂ ಸ್ಥಳೀಯ ಗಣ್ಯರು, ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ,ನಗರಸಭಾ ಸದಸ್ಯರು, ಅಧಿಕಾರಿಗಳು ಎಲ್ಲರೂ ಭಾಗವಹಿಸಿದ್ದರು. ಶಿಕ್ಷಣ ಇಲಾಖೆಯಿಂದ ಜಿಲ್ಲಾ ಉಪನಿರ್ದೇಶಕರಾದ ಸನ್ಮಾನ್ಯ ಶ್ರೀ ವೃಷಭೇಂದ್ರ ,ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ. ಚಂದ್ರಶೇಖರ್ ದೊಡ್ಡಮನಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹೆಮ್ಮೆಯ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ಜಿಲ್ಲಾ ಘಟಕ ರಾಯಚೂರಿನ ಅಧ್ಯಕ್ಷರಾದ ಶ್ರೀಮತಿ. ಛಾಯಾದೇವಿ, ಪ್ರಧಾನ ಕಾರ್ಯದರ್ಶಿ ಶ್ರೀಮತಿ ಲಕ್ಷ್ಮಿ ಶಾಂತಪ್ಪ ,ಪದಾಧಿಕಾರಿಗಳಾದ ರಮಾದೇವಿ ರವರುಗಳು ಸನ್ಮಾನ್ಯ ಶ್ರೀ ಶಶೀಲ್.ಜಿ.ನಮೋಶಿ ಅವರನ್ನು ಬೇಟಿ ಮಾಡಲಾಗಿ,ಅವರೊಂದಿಗೆ ಕೆಲವು ವಿಷಯಗಳನ್ನು ಚರ್ಚಿಸಿ,ಹೊಸ ಸಿ&ಅರ್ ನಿಯಮ ತಿದ್ದುಪಡಿ ಕುರಿತು ಮತ್ತು ವರ್ಗಾವಣೆ ಪ್ರಕ್ರಿಯೆಯನ್ನು ಅತಿ ಶೀಘ್ರದಲ್ಲಿ ನಡೆಸುವಂತೆ ಮನವಿ ಮಾಡಿಕೊಂಡಿದ್ದಾರೆ.ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ನೌಕರರಿಗಾಗಿ 6 ತಿಂಗಳು ಶಿಶುಪಾಲನಾ ರಜೆ ಮಂಜೂರು ಮಾಡಿದ ಘನ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿ ಸನ್ಮಾನಿಸಿ ಗೌರವಿಸಲಾಯಿತು.

42ನೇದಿನ ದಾಟಿದ ಫುಲೆ ಶಿಕ್ಷಕಿಯರ ಧ್ಯಾನ ತರಬೇತಿ ಕಾರ್ಯಕ್ರಮ

ಶಿವಮೊಗ್ಗ ಜೂ.24.
ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ,ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಕೊವಿಡ್ ಸಂಕಷ್ಟದ ಈ ಸಮಯದಲ್ಲಿ ‘ಮಾನಸಿಕ ಧ್ಯಾನ ತರಬೇತಿ’ ಎಂಬ ವಿಶೇಷ ಕಾರ್ಯಕ್ರಮವನ್ನು ಗೂಗಲ್ ಮೀಟ್ ಮೂಲಕ ಕಳೆದ ಮೇ-2 ರಿಂದ ಹಮ್ಮಿಕೊಂಡಿದ್ದು,

ಶಿವಮೊಗ್ಗದ ಸಂಜೀವಿನಿ ಸ್ಪಿರಿಚ್ಯುಯಲ್ ಸಲ್ಯೂಷನ್ ನ ಸಂಮೋಹಿನಿ‌ ತಜ್ಞೆ, ಮಾನಸಿಕ ಧ್ಯಾನ ಪ್ರಚಾರಕಿ.ಅಧ್ಯಾತ್ಮ ಚಿಂತಕಿ ಶ್ರೀಲಕ್ಷ್ಮಿ ರವರು ಧ್ಯಾನ ತರಬೇತಿಯನ್ನು ಬಹಳ ಉತ್ಸಾಹದಿಂದ ನಡೆಸಿಕೊಡುತ್ತಿದ್ದಾರೆ, ಅವರು ಮಾತನಾಡಿ ಧ್ಯಾನ ಒಂದು ಪರಮಾನಂದಕರವಾದ ಅನುಭವ, ಇದು ನಮ್ಮ ಎಲ್ಲಾ ನೋವು, ಸಂಕಟ, ಬಂಧನಗಳಿಂದ ಬಿಡಿಸುತ್ತದೆ. ಧ್ಯಾನದಿಂದ ನಮ್ಮ ಕಾರ್ಯದಕ್ಷತೆ, ನೈಪುಣ್ಯತೆ ಉತ್ತುಂಗ ಮಟ್ಟಕ್ಕೇರುತ್ತದೆ ಎಂದಿದ್ದಾರೆ,


ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಶ್ರೀಮತಿ ರಾಧಾ ರವರು
ಶಿಕ್ಷಕಿಯರು ಇಂಥ ಮಹಾಮಾರಿ ಕಾಯಿಲೆ ಮಧ್ಯದಲ್ಲಿ ಆತ್ಮವಿಶ್ವಾಸದಿಂದ ಮುನ್ನುಗ್ಗಿ ತಮ್ಮ ಕೆಲಸಕಾರ್ಯಗಳ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುವಂತೆ ಆರೋಗ್ಯಕರ ವಾತಾವರಣವನ್ನು ಈ ಧ್ಯಾನದಿಂದ ಸೃಷ್ಟಿಸಬಹುದಾಗಿದೆ,ಇದು ನಮ್ಮೆಲ್ಲರಿಗೂ ಇಂತಹ ಕೊವಿಡ್ ಭಯಾನಕ‌ ಪರಿಸ್ಥಿತಿಯಲ್ಲಿ ಉತ್ತಮ ಕಾರ್ಯಕ್ರಮ ಆಗಿದ್ದು.ಎಲ್ಲರಿಗೂ ಪ್ರಯೋಜನವಾಗಿದೆ ಎಂದಿದ್ದಾರೆ.

ಧ್ಯಾನ ತರಬೇತಿಯು ಒಟ್ಟು 21 ದಿನಗಳ ಕಾಲ‌ ಹಮ್ಮಿಕೊಂಡಿದ್ದೆವು,ಪ್ರತಿ ದಿನ‌ ಸುಮಾರು 60-90 ಜನ ಧ್ಯಾನ ಆಸಕ್ತರು‌ ಭಾಗವಹಿಸುತ್ತಿದ್ದರು. ಇದರ ಸದ್ಬಳಕೆ ಮಾಡಿಕೊಳ್ಳುವ ಆಸಕ್ತರು ಇನ್ನೂ ಹೆಚ್ಚು ದಿನಗಳ ಕಾಲ ತರಬೇತಿ‌ ಪಡೆಯಲು ಬಯಸಿ ಬೇಡಿಕೆ ಇಟ್ಟ ಕಾರಣ ಇಂದಿಗೆ 42 ದಿನಗಳಾದರೂ ಇಲ್ಲಿಯವರೆಗೂ ಸಹಾ ಧ್ಯಾನ ತರಬೇತಿಯನ್ನು ನಡೆಸಲಾಗುತ್ತಿದೆ. ಇದರಿಂದ ಉತ್ತಮವಾದ ಆರೋಗ್ಯ ಲಭಿಸುತ್ತಿರುವುದು ಈ ಧ್ಯಾನದ ಮಹಿಮೆ ಎನ್ನಬಹುದು ಎಂದು ಜಿಲ್ಲಾ ಕಾರ್ಯದರ್ಶಿ ಯಾದ ಶ್ರೀಮತಿ ‌ಪುಷ್ಪಾ ನರೇಗೌಡರ್ ಅಭಿಪ್ರಾಯ ಪಟ್ಟಿದ್ದಾರೆ.

ಇಂಥ ಅತ್ಯುತ್ತಮವಾದ ತರಬೇತಿಯನ್ನು ನಡೆಸಿಕೊಡುತ್ತಿರುವ ಆಧ್ಯಾತ್ಮ ಚಿಂತಕರಾದ ಶ್ರೀಲಕ್ಷ್ಮಿಯವರಿಗೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಸಂಘ,ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ರಾಧಾ ರವರು, ಪ್ರಧಾನ ಕಾರ್ಯದರ್ಶಿಗಳಾದ ಪುಷ್ಪ ನರೇಗೌಡರ್, ಕೋಶಾಧ್ಯಕ್ಷರಾದ ಲಲಿತ, ಹಾಗೂ ತಾಲೂಕು ಘಟಕ ಶಿವಮೊಗ್ಗ ಅಧ್ಯಕ್ಷರಾದ ಶಾಹಿನ ಬಾನು, ಕೋಶಾಧ್ಯಕ್ಷರಾದ ಲಕ್ಷ್ಮಿ ರವರುಗಳು ಎಲ್ಲಾ ಶಿವಮೊಗ್ಗ ಜಿಲ್ಲಾ ಎಲ್ಲಾ ತಾಲ್ಲೂಕು ಎಲ್ಲಾ ಪದಾಧಿಕಾರಿಗಳು.ಶಿಕ್ಷಕ ಶಿಕ್ಷಕಿಯರ ಪರವಾಗಿ ಅನಂತ ಅನಂತ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಶಿಶುಪಾಲನೆ ರಜೆಗೆ ಮೂಲ ಕಾರಣರಾದ IAS ಅಧಿಕಾರಿಯನ್ನು ಗೌರವಿಸಿ ಸನ್ಮಾನಿಸಿದ ರಾಜ್ಯ ಫುಲೆ ಸಂಘ

ಕಲ್ಬುರ್ಗಿ June-23.
ರಾಜ್ಯದ ಸಮಸ್ತ ಸರ್ಕಾರಿ ಮಹಿಳಾ ಸಿಬ್ಬಂದಿಗಳಿಗೆ ತಮ್ಮ ಸೇವಾವಧಿಯಲ್ಲಿ ಒಟ್ಟು 180 ದಿನಗಳ ಶಿಶುಪಾಲನೆ ರಜೆಗಳನ್ನು ಘೋಷಣೆ ಮಾಡಿ ಘನ ಸರ್ಕಾರವು ಆದೇಶ ಮಾಡಿರುತ್ತದೆ.ರಾಜ್ಯದ ಎಲ್ಲಾ ಸರ್ಕಾರಿ,ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನು ಒಳಗೊಂಡ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ಸರ್ಕಾರದ ಈ ಆದೇಶವನ್ನು ಸಂತಸದಿಂದ ಸ್ವಾಗತಿಸಿದೆ.ಹಾಗೂ ಘನ ಸರ್ಕಾರಕ್ಕೆ ಅಭಿನಂದನೆಯನ್ನು ಸಲ್ಲಿಸಿದೆ.

ನಲಿನ್ ಅತುಲ್.IAS. ಅಪರ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ.ಕಲ್ಬುರ್ಗಿ ವಿಭಾಗ


ಮಕ್ಕಳಿಗೆ ಮಾತೃ ವಾತ್ಸಲ್ಯದ ಪ್ರೀತಿ ಮಮಕಾರದ ಅಮ್ಮನ ತೋಳಿನ ಆರೈಕೆ ಅಗತ್ಯವಾಗಿ ಬೇಕಾಗಿತ್ತು. ಇದು ಅತೀ ಮುಖ್ಯವಾಗಿ ಎಲ್ಲಾ ಮಹಿಳಾ ಸಿಬ್ಬಂದಿಗಳಿಗೆ ಅನಿವಾರ್ಯವಾಗಿತ್ತು.ಇದು ರಾಜ್ಯದ ಎಲ್ಲಾ ಮಹಿಳಾ ನೌಕರರಿಗೆ ಸಂತಸ ತಂದಿದೆ. ಕಳೆದ ವರ್ಷದ ಡಿಸೆಂಬರ್ ನಲ್ಲಿ ಕಲ್ಬುರ್ಗಿ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರು ಶ್ರೀ ನಲಿನ್ ಅತುಲ್ ರವರು ಈ ಶಿಶುಪಾಲನೆ ರಜೆ ಕೋರಿ ಘನ ಸರ್ಕಾರಕ್ಕೆ ಐದು ಪುಟಗಳ ಸಮಗ್ರ ಪ್ರಸ್ಥಾವನೆಯನ್ನು ಸಲ್ಲಿಸಿ ಗಮನ ಸೆಳೆದಿದ್ದರು.ಈ ಆದೇಶದ ಮೂಲ‌ ಕಾರಣ ಅವರೇ ಆಗಿದ್ದಾರೆ ಎಂದು ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ. ಎಸ್.ಮುಳ್ಳೂರ ರವರು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ, ಕಲ್ಬುರ್ಗಿ ಜಿಲ್ಲಾ ಘಟಕವು ಅವರಿಗೆ ಇಂದು ಸನ್ಮಾನಿಸಿ ಗೌರವಿಸಿದೆ.
ಈ ಸಂದರ್ಭದಲ್ಲಿ, ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀ ಚನ್ನಬಸಪ್ಪ ಮುಧೋಳ ಸರ್ ಹಾಗೂ ಜಿಲ್ಲಾಧ್ಯಕ್ಷರಾದ ಶ್ರೀಮತಿ ಸೇವಂತ ಚೌಹಾಣ್,ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಸಾವಿತ್ರಿ ಪಾಟೀಲ್ ಹಾಗೂ ಪದಾಧಿಕಾರಿಗಳಾದ ಗಂಗಮ್ಮ ನಾಲ್ವರ್, ರೇಣುಕಾ ಎನ್, ವಿಶಾಲಾಕ್ಷಿ, ರಾಜೇಶ್ವರಿ, ವಿಜಯಲಕ್ಷ್ಮಿ ಹಿರೇಮಠ್, ಮಲ್ಲಮ್ಮ, ಯಶೋಧ ಉಪಸ್ಥಿತರಿದ್ದರು.

ಮಹಿಳಾ ನೌಕರರಿಗೆ ಸರ್ಕಾರದ ಬಂಪರ್ ಕೊಡುಗೆ-ಧನ್ಯವಾದ ಸಲ್ಲಿಸಿದ ಶಿಕ್ಷಕಿಯರ ಸಂಘ

ಧಾರವಾಡ ಜೂ.22

2020-21 ಸಾಲಿನ ರಾಜ್ಯದ ಬಜೆಟ್ ನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ‌ನವರು ರಾಜ್ಯದ ಎಲ್ಲಾ ಮಹಿಳಾ ನೌಕರರಿಗೆ ಮಕ್ಕಳ ಆರೈಕೆ ಮಾಡುವ ಸಲುವಾಗಿ ಶಿಶುಪಾಲನಾ ರಜೆ ಘೋಷಣೆ ಮಾಡಿದ್ದರು. ಅಂದಿನಿಂದ
ಶಿಶುಪಾಲನಾ ರಜೆ ಸಂಬಂಧ ಸರ್ಕಾರದ ಆದೇಶಕ್ಕಾಗಿ ಎದುರು ನೋಡುತ್ತಾ ಇದ್ದ ರಾಜ್ಯದ ಸಮಸ್ತ ಮಹಿಳಾ ನೌಕರರು,ಶಿಕ್ಷಕಿಯರುಗಳಿಗೆ ಘನ‌ ಸರ್ಕಾರ ಇಂದು ಆದೇಶ ಜಾರಿ ಮಾಡಿದೆ.
ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ಇದರ ಸಂಬಂಧ ಸರ್ಕಾರಕ್ಕೆ ಒತ್ತಾಯಿಸಿ ಹಲವಾರು ಬಾರಿ ಮನವಿ ಸಲ್ಲಿಸಿ ಗಮನ ಸೆಳೆದಿತ್ತು.ಸರ್ಕಾರ ಸ್ಪಂದಿಸಿ ಅಧೀಕೃತ ಆದೇಶವನ್ನು ಇಂದು ಪ್ರಕಟಿಸಿದೆ .ಇದರಿಂದ ರಾಜ್ಯದ ಎಲ್ಲಾ ಮಹಿಳಾ ನೌಕರರು ಒಮ್ಮೆಗೆ 15 ದಿನಗಳಿಗೂ ಕಡಿಮೆ ಇಲ್ಲದಂತೆ ಅನುಕೂಲಕ್ಕೆ ಅನುಗುಣವಾಗಿ ತಮ್ಮ ಸಂಪೂರ್ಣ ಸೇವಾವಧಿಯಲ್ಲಿ ಒಟ್ಟು 180 ದಿನಗಳ ಶಿಶುಪಾಲನೆ ರಜೆಯನ್ನು ಪಡೆಯಬಹುದಾಗಿದೆ.ಯಾವುದೇ ದಾಖಲೆ ಪ್ರಮಾಣ ಪತ್ರಗಳ ಅಗತ್ಯವಿಲ್ಲದೆ ಸೇವಾವಹಿಯಲ್ಲಿನ ಮಾಹಿತಿ ಆಧರಿಸಿ ಮಕ್ಕಳ ಸಂಖ್ಯೆಗೆ ಮಿತಿಯಿಲ್ಲದೆ ಕಿರಿಯ ಮಗುವಿಗೆ 18 ವರ್ಷ ತುಂಬುವವರೆಗೆ ಶಿಶುಪಾಲನೆ ರಜೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.ಇದರಿಂದ ರಾಜ್ಯದ 75% ಗೂ ಹೆಚ್ಚಿರುವ ಮಹಿಳಾ ನೌಕರರುಗಳಿಗೆ ಅನುಕೂಲವಾಗಿದೆ,ಇದರಿಂದ ಎಲ್ಲಾ ಮಹಿಳಾ ಶಿಕ್ಷಕಿಯರು ಸಂತಸ ವ್ಯಕ್ತಪಡಿಸಿದ್ದಾರೆ,

ನಲಿನ್ ಅತುಲ್ IAS,ಅಪರ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ.

ಇಂದಿನ ಈ ಶುಭ ದಿನದಂದು
ಘನ ಸರ್ಕಾರದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪ ನವರಿಗೆ ಹಾಗೂ ಮಹಿಳಾ ನೌಕರರ ಪರ ಶಿಶುಪಾಲನೆ ರಜೆ ಕೋರಿ ಪ್ರಸ್ತಾವನೆ ಸಲ್ಲಿಸಿ ಸರ್ಕಾರದ ಗಮನ ಸೆಳೆದಿದ್ದ ಕಲ್ಬುರ್ಗಿ ವಲಯದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಮಾನ್ಯ ನಲಿನ್ ಅತುಲ್ ರವರಿಗೂ ಹಾಗೂ ಆದೇಶ ಹೊರಬೀಳಲು ಸಹಕರಿಸಿದ ಘನ ಸರ್ಕಾರದ ಎಲ್ಲಾ ಮಾನ್ಯ ಕಾರ್ಯದರ್ಶಿಗಳಿಗೆ,ಅಧಿಕಾರಿಗಳಿಗೆ, ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ‌ಶಿಕ್ಷಕಿಯರ ಪರವಾಗಿ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ‌ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ರವರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಜ್ಯೋತಿ. ಹೆಚ್.ರವರಗಳು ಅನಂತ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಸಸಿಗೆ ಬೇಡಿಕೆ ಇಟ್ಟ ಫುಲೆ ಶಿಕ್ಷಕಿಯರ ಸಂಘ

ಶಿವಮೊಗ್ಗ ಜೂ21.
ಬರಡಾದ ನೆಲಕ್ಕೆ ಜೀವಚೈತನ್ಯ ತಲುಪಿಸುವ ಹೊಣೆ ಹೊತ್ತು, ಸದ್ದಿಲ್ಲದೆ ಚಿಗುರೊಡೆದು ಬಂದ ಫುಲೆ ಸಂಘವು ಪ್ರಕೃತಿ ಯಂತೆ ಶುದ್ಧ. ವನಸಿರಿಯ ಪ್ರೀತಿಯಂತೆ ಅದಕ್ಕೆ ಪರ್ಯಾಯ ಪದ ಇಲ್ಲವೆನ್ನುವಷ್ಟು ಪರಿಶುದ್ಧ ಎಂಬ ನುಡಿಯಂತೆ ಇಂದು ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಸಂಘವು, ಶಿವಮೊಗ್ಗದ ವಲಯ ಅರಣ್ಯಾಧಿಕಾರಿ ಶ್ರೀ ಉಮೇಶ್ ರವರಿಗೆ ಔಷಧಿಯುಕ್ತ ಹಾಗೂ ಉಪಯುಕ್ತ ಸಸಿಗಳನ್ನು ನೀಡುವಂತೆ ಮನವಿ ಮಾಡಿದೆ.ವಲಯ ಅರಣ್ಯಾಧಿಕಾರಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಉತ್ತಮ ಕೆಲಸದಲ್ಲಿ ಫುಲೆ ಶಿಕ್ಷಕಿಯರ ಸಂಘ ತೊಡಗಿಸಿಕೊಂಡಿದೆ ಹೀಗೇ ಮುಂದೆಯು ಪರಿಸರ ಪ್ರೇಮ ‌ಪರಿಸರ ಪ್ರಜ್ಞೆ ಎಲ್ಲರಲಿ ಮೂಡಿಸುವಂತ ಕಾರ್ಯಕ್ರಮಗಳನ್ನು ಫುಲೆ ಸಂಘವು ಹಮ್ಮಿಕೊಳ್ಳಲು ನಮ್ಮ ಸಹಕಾರ ಎಂದಿಗೂ ಸಿಗುತ್ತದೆ ಎಂದು ಭರವಸೆ ನೀಡಿದ್ದು,ಈ ಸಸಿಗಳನ್ನು
ರವೀಂದ್ರ ನಗರದ ಸರ್ಕಾರಿ ಶಾಲೆಯ ಆವರಣದಲ್ಲಿ ನೆಟ್ಟು ಬೆಳೆಸಿ ಪೋಷಿಸುವ ಸಂಪೂರ್ಣ ಜವಾಬ್ದಾರಿಯನ್ನು ನಮ್ಮ ಸಂಘಟನೆ ಹೊರಲಿದೆ ಎಂದು ಜಿಲ್ಲಾಧ್ಯಕ್ಷರಾದ ರಾಧಾ ರವರು ತಿಳಿಸಿದ್ದಾರೆ..
ಪ್ರಧಾನ ಕಾರ್ಯದರ್ಶಿಗಳಾದ ಪುಷ್ಪ ನರಗುಂದ ಹಾಗೂ ಜಿಲ್ಲಾ ಕೋಶಾಧ್ಯಕ್ಷರಾದ ಲಲಿತ ರವರು,ತಾಲೂಕಿನ ಅಧ್ಯಕ್ಷರಾದ ಶಾಹಿನ ಬಾನು,ತಾಲ್ಲೂಕಿನ ಕೋಶಾದಕ್ಷರಾದ ಲಕ್ಷ್ಮಿ ರವರುಗಳು ಸಂಘದ ಎಲ್ಲಾ ಪದಾಧಿಕಾರಿಗಳು ಪರವಾಗಿ ಭಾಗವಹಿಸಿ ಮನವಿ ಮಾಡಿಕೊಂಡಿದ್ದಾರೆ.