ಶಿಕ್ಷಕರ ಸ್ನೇಹಿ,ಪ್ರಾಮಾಣಿಕ ಅಧಿಕಾರಿಗೆ ಶುಭಕೋರಿದ ಫುಲೆ ಶಿಕ್ಷಕಿಯರ ಸಂಘ

ಮಧುಗಿರಿ. ಜೂ.10.
ಸರಳ ಸಜ್ಜನಿಕೆಯ ಕ್ರಿಯಾಶೀಲರು, ಶಿಕ್ಷಣ ಆಸಕ್ತರು, ಸದಾ ಶೈಕ್ಷಣಿಕ ಚಟುವಟಿಕೆಯಲ್ಲಿ ಜೀವನವನ್ನು ತೊಡಗಿಸಿಕೊಂಡವರು,ಮಕ್ಕಳ ಕಲಿಕೆಗಾಗಿ ಸದಾ ಚಿಂತನೆ ಮಾಡುವವರು ಮಧುಗಿರಿ ಶೈ. ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಮಾನ್ಯ ಉಪನಿರ್ದೇಶಕರು ಶ್ರೀ ಎಂ ರೇವಣ್ಣಸಿದ್ದಪ್ಪ‌ನವರು.

ಕೊವಿಡ್ ಎರಡನೇ ಅಲೆಗೆ ಸಿಕ್ಕಿ ಹಲವಾರು ಶಿಕ್ಷಕರು ತಮ್ಮ ಜೀವವನ್ನೆ ಕಳೆದುಕೊಂಡಾಗ ಮರುಗಿ, ಅಂತಹ ಸಂಕಷ್ಟದ ದುಸ್ಥಿತಿಯಲ್ಲೂ ವಿವಿಧ ವರ್ಚ್ಯುಯಲ್ ವೆಬಿನಾರ್ ಕಾರ್ಯಕ್ರಮಗಳನ್ನು ಎಲ್ಲಾ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಾರಥ್ಯದಲ್ಲಿ ಹಮ್ಮಿಕೊಂಡು ಜಿಲ್ಲೆಯ ಎಲ್ಲಾ ಶಿಕ್ಷಕರಿಗೆ ಮತ್ತು ಅವರ ಕುಟುಂಬದವರಿಗೆ ಆತ್ಮಸ್ಥೈರ್ಯ ಮೂಡಿಸಿದರು, ಎಲ್ಲರಿಗೂ ಧೈರ್ಯ ತುಂಬುವ ಮೂಲಕ ಪ್ರತೀ ಶಿಕ್ಷಕರ ಪ್ರೀತಿಗೆ ಪಾತ್ರರಾದವರು, ಸರಳ ಸೌಮ್ಯ ಸ್ವಭಾವ,ಸ್ಪಂದನೆ,ಸಹಕಾರಗಳಿಂದ ಇವರು ಶಿಕ್ಷಕರ ಸ್ನೇಹಿಯಾಗಿ.ದಕ್ಷ ಪ್ರಾಮಾಣಿಕ ಅಧಿಕಾರಿಯಾಗಿ ಶಿಕ್ಷಕರ ಆಶಾಕಿರಣವಾಗಿ ಹೆಮ್ಮೆಯ ಜಿಲ್ಲಾ ಉಪ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಎಂ. ರೇವಣ್ಣ ಸಿದ್ದಪ್ಪ ರವರ ಜನ್ಮ ದಿನ ಇಂದು,

ಅವರಿಗೆ ಪ್ರೀತಿಪೂರ್ವಕವಾಗಿ ಶುಭಕೋರುವ ಮೂಲಕ ಅವರಿಗೆ ಆ ದೇವರು ಆರೋಗ್ಯ ಐಶ್ವರ್ಯ,ಸಂಪತ್ತನ್ನು ನೀಡಲಿ, ಹೆಚ್ಚು ಹೆಚ್ಚು ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಉನ್ನತ ಮಟ್ಟದಲ್ಲಿ ಅವರಿಗೆ ಕೀರ್ತಿ ಲಬಿಸಲಿ ಎಂದು ನಮ್ಮ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ಪ್ರಾರ್ಥಿಸಿ ಆಶಿಸುತ್ತಾ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಪದಾಧಿಕಾರಿಗಳ ಪರವಾಗಿ, ಹಾಗೂ ಪ್ರಾಥಮಿಕ ಪ್ರೌಢಶಾಲೆಯ ಸಮಸ್ತ ಶಿಕ್ಷಕಿಯರ ಪರವಾಗಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಜಿ.ಎಲ್.ರಾಧಮ್ಮ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಲತಾಮಣಿ. ಹೆಚ್.ಕೆ ರವರು ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ – ಫುಲೆ ಸಂಘ

ಶಿಕಾರಿಪುರ- ಜೂ.9 ಕೊವಿಡ್ ಮಹಾಮಾರಿಯ ಎರಡನೇ ಅಲೆಯು ಹಳ್ಳಿ ಹಳ್ಳಿಗೆ ಹರಡಿ ಇಂದು ದೊಡ್ಡಪ್ರಮಾಣದ ಜೀವ ಹಾನಿ ಮಾಡಿದೆ. ರಾಜ್ಯದ ನೂರಾರು ಶಿಕ್ಷಕರು ಬಲಿಯಾಗಿದ್ದಾರೆ,ಇದರಿಂದ ತಾಲ್ಲೂಕಿನ ಶಿಕ್ಷಕ ಶಿಕ್ಷಕಿಯರಿಗೆ ಆತಂಕ ಮೂಡಿದೆ.
ಈಗಾಗಲೇ ಶಿಕ್ಷಣ ಇಲಾಖೆಯು 2021-22 ನೇ ಸಾಲಿನ ಶೈಕ್ಷಣಿಕ ಅವದಿ ಪ್ರಕಟಿಸಿ ಶಾಲಾ ದಾಖಲಾತಿ ಪ್ರಾರಂಬಿಸಲು ಸೂಚಿಸಿದೆ. ಆದರಿಂದ ಕೊವಿಡ್ ಡ್ಯೂಟಿ ಮಾಡುವ ಶಿಕ್ಷಕರಿಗೆ ಮಾತ್ರವಲ್ಲದೇ ತಾಲ್ಲೂಕಿನ ಪ್ರತೀ ಶಿಕ್ಷಕ-ಶಿಕ್ಷಕಿಯರಿಗೂ ಅವರ ಆರೋಗ್ಯದ ಹಿತದೃಷ್ಟಿಯಿಂದ
ಮೊದಲ ಸಾಲಿನ ಆದ್ಯತೆ ನೀಡಿ ಕೋವಿಡ್ ಲಸಿಕೆ ಹಾಕಿಸಬೇಕು ಎಂದು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಿಕಾರಿಪುರ ತಾಲ್ಲೂಕಿನ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ಇಂದು ಮನವಿ ಸಲ್ಲಿಸಿದೆ.
ತಾಲೂಕಿನ ಎಲ್ಲಾ ಪದಾಧಿಕಾರಿಗಳ ಪರವಾಗಿ
ತಾಲ್ಲೂಕಿನ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮವ್ವ ಸುಣಗಾರ, ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಉಷಾರಾಣಿ ಎಸ್ ವಿ,ತಾಲ್ಲೂಕು ಕೋಶಾಧ್ಯಕ್ಷರಾದ ಶ್ರೀಮತಿ ಅರುಣ ದೊಡ್ಡಮನಿ, ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ಚಂದ್ರಕಲಾ ಬ್ಯಾಡಗಿ ರವರು ಹಾಜರಿದ್ದರು.

ಶಾಲಾ ಕರ್ತವ್ಯದಿಂದ ವಿನಾಯಿತಿ ನೀಡಲಿ- ಫುಲೆ ಸಂಘ ಮನವಿ.

ಧಾರವಾಡ ಜೂನ್-8

ಈ ಕೊವಿಡ್ ಸಂಕಷ್ಟ ದಿನಗಳಲ್ಲಿ ಹಲವಾರು ಸವಾಲುಗಳು ಇರುವಂತ ಈ ಸಮಯದಲ್ಲಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಬಿಸಲು ಈಗಾಗಲೇ ಇಲಾಖೆ ಸೂಚನೆ ನೀಡಿದೆ.  ಎಲ್ಲಾ ಶಿಕ್ಷಕ ಶಿಕ್ಷಕಿಯರು
ಜೂನ್ 15 ರಿಂದ ಶಾಲೆಗೆ ಹಾಜರಾಗಿ ಮಕ್ಕಳ ಶಾಲಾ ದಾಖಲಾತಿ ಪ್ರಾರಂಬಿಸಿಕೊಳ್ಳಲು ಶಾಲೆಗಳಿಗೆ ಮರಳಬೇಕಾಗಿದೆ

ಕೊವಿಡ್ ಎರಡನೇ ಅಲೆಯು  ನಗರ ಪ್ರದೇಶಗಳಿಗಿಂತ ಹಳ್ಳಿ ಪ್ರದೇಶಗಳಲ್ಲಿಯೇ ಬಾರಿ ಸಂಚಲನ‌ ಉಂಟು ಮಾಡಿರುವುದು ಎಲ್ಲರಿಗೂ ತಿಳಿದಿದೆ..ಈಗಾಗಲೇ ನೂರಾರು ಶಿಕ್ಷಕ‌-ಶಿಕ್ಷಕಿಯರು ಕೊವಿಡ್ ಸೋಂಕಿಗೆ ಸಿಕ್ಕಿ ಪ್ರಾಣ ಕಳೆದುಕೊಂಡಿದ್ದಾರೆ, ಇಂತಹ  ಸಂದಿಗ್ಧ ಪರಿಸ್ಥಿತಿಯಲ್ಲಿ ಶಾಲೆಗಳಿಗೆ ತೆರಳಿ ಕರ್ತವ್ಯ ನಿರ್ವಹಿಸಲು  ಗರ್ಬಿಣಿ ಶಿಕ್ಷಕಿಯರು, ಒಂದು ವರ್ಷದ ಮಗು ಇರುವ ತಾಯಂದಿರುಗಳಿಗೆ, ವಿಕಲಚೇತನ ಶಿಕ್ಷಕಿಯರಿಗೆ ಹಾಗೂ ತೀವ್ರತರ ಕಾಯಿಲೆಗಳಿಂದ ಬಳಲುತ್ತಿರುವ ಶಿಕ್ಷಕಿಯರಿಗೆ ಕಷ್ಟಸಾದ್ಯವಾಗಿದೆ.

ಅಂತಹ ಶಿಕ್ಷಕಿಯರ ಆರೋಗ್ಯದ ದೃಷ್ಟಿಯಿಂದ ಶಾಲಾ ಕರ್ತವ್ಯದಿಂದ  ವಿನಾಯಿತಿ ನೀಡಬೇಕು ಹಾಗೂ  ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಿಕೊಡಬೇಕು, ಅವರ ಆರೋಗ್ಯದ ಬಗ್ಗೆ ಕಾಳಜಿ ತೋರಬೇಕೆಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಪರವಾಗಿ, ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ರವರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಜ್ಯೋತಿ ಹೆಚ್.ರವರುಗಳು ಘನ ಸರ್ಕಾರವನ್ನು ಒತ್ತಾಯಿಸಿ ಮನವಿ ಮಾಡಿಕೊಂಡಿದ್ದಾರೆ.

ಶಾಲೆ ತೆರೆಯುವ ಮುನ್ನ  ಮೊದಲು ಸೂಕ್ತ ಸೌಕರ್ಯ ಕೊಡಿ – ಡಾ.ಮುಳ್ಳೂರ ಒತ್ತಾಯ

ಡಾ.ಲತಾ ಎಸ್ ಮುಳ್ಳೂರ, ಸಂಸ್ಥಾಪಕ ರಾಜ್ಯಾಧ್ಯಕ್ಷರು

ಧಾರವಾಡ,ಜೂನ್ 8
ಈ ಕೊವಿಡ್ ಸಂಕಷ್ಟ ದಿನಗಳಲ್ಲಿ ಹಲವಾರು ಸವಾಲುಗಳು ಇರುವಂತ ಈ ಸಮಯದಲ್ಲಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಬಿಸಲು ಈಗಾಗಲೇ ಶಿಕ್ಷಣ ಇಲಾಖೆ ಸೂಚನೆ ನೀಡಿರುವುದನ್ನು ಸ್ವಾಗತ ಮಾಡುತ್ತೇವೆ.
ಬೇಸಿಗೆ ರಜೆ ಮೇಲೆ ತಮ್ಮ ತಮ್ಮ ಸ್ವಂತ ಜಿಲ್ಲೆಗಳಿಗೆ ತೆರೆಳಿದ್ದ ಎಲ್ಲಾ ಶಿಕ್ಷಕ ಶಿಕ್ಷಕಿಯರು
ಜೂನ್ 15 ರಿಂದ ಶಾಲೆಗೆ ಹಾಜರಾಗಿ ಮಕ್ಕಳ ಶಾಲಾ ದಾಖಲಾತಿ ಪ್ರಾರಂಬಿಸಿಕೊಳ್ಳಲು ಶಾಲೆಗಳಿಗೆ ಮರಳಲೂ ಕೂಡ ತಿಳಿಸಲಾಗಿದೆ

ಕೊವಿಡ್ ಎರಡನೇ ಅಲೆಯು  ನಗರ ಪ್ರದೇಶಗಳಿಗಿಂತ ಹಳ್ಳೀ ಪ್ರದೇಶಗಳಲ್ಲಿಯೇ ಬಾರಿ ಸಂಚಲನ‌ ಉಂಟು ಮಾಡಿರುವುದು ಎಲ್ಲರಿಗೂ ತಿಳಿದಿದೆ..ಈಗಾಗಲೇ ನೂರಾರು ಶಿಕ್ಷಕ‌-ಶಿಕ್ಷಕಿಯರ ಪ್ರಾಣ ಬಲಿಯಾಗಿದೆ, ಇಂತಹ  ಸಂದಿಗ್ಧ ಪರಿಸ್ಥಿತಿಯಲ್ಲಿ ಶಾಲೆಗಳಿಗೆ ತೆರಳಿ ಕರ್ತವ್ಯ ಪ್ರಾರಂಬಿಸುವುದು ಶಿಕ್ಷಕರುಗಳಿಗೆ ಸವಾಲಾಗಿ ಪರಿಣಮಿಸಿದೆ. ಆದ್ದರಿಂದ ಘನ ಸರ್ಕಾರವು ಶಾಲೆಗೆ ಮರಳುವ ಮುನ್ನ ಪ್ರತೀ ಶಿಕ್ಷಕರುಗಳಿಗೆ ಸೂಕ್ತ ಸೌಕರ್ಯಗಳನ್ನು ಒದಗಿಸಿಬೇಕಾಗಿದೆ, ಅವರಿಗೆ ಶಾಲೆಗೆ ಮರಳುವ ಮುನ್ನವೇ ಮೊದಲ ಸಾಲಿನ‌ಲ್ಲಿ ಕೊವಿಡ್ ಲಸಿಕೆ ನೀಡಬೇಕು,ಶಾಲೆಗೆ ಸ್ವಚ್ಚತೆಯ ಜೊತೆಯಲ್ಲಿ ಸಂಪೂರ್ಣ ಸಾನಿಟೈಸರ್ ಮಾಡಿಸಬೇಕು,


ಪ್ರತಿದಿನ‌ ಬಳಸಲು ಸಾನಿಟೈಸರ್ ಬಾಟಲ್ಸ್, ಮಾಸ್ಕ್ ಗಳನ್ನು ಪ್ರತೀ ಶಾಲೆಗೆ ವಿತರಿಸಬೇಕು.ಎಲ್ಲದಕ್ಕು ಮೊದಲಾಗಿ, ಲಾಕ್ ಡೌನ್ ವಿಸ್ತರಣೆಯಿಂದ ಬಸ್ ಸಂಚಾರ ನಿರ್ಬಂದ ಹೇರಿರುವುದರಿಂದ ಬೇಸಿಗೆ ರಜೆ ಇದ್ದ ಕಾರಣಕ್ಕೆಪ್ರಸ್ತುತ ದಿನದಲ್ಲಿ ತಮ್ಮ ಸ್ವಂತ ಜಿಲ್ಲೆಗಳಲ್ಲಿರುವ ಸಾವಿರಾರು ಶಿಕ್ಷಕರು ಇಂದು ವಿವಿದ ಜಿಲ್ಲೆಗಳಿಂದ  ಶಾಲೆಗಳತ್ತ ತೆರಳಲು ಸಾದ್ಯವಿಲ್ಲ, ಆದ ಕಾರಣ ಜೂನ್ 15 ರ ಒಳಗಾಗಿ ಕೂಡಲೇ ಬಸ್ ಸಂಚಾರ ಪ್ರಾರಂಬಿಸಬೇಕಾಗಿದೆ. ಇದೆಲ್ಲ ಸರ್ಕಾರವಾಗಲಿ ,ಶಿಕ್ಷಣ ಇಲಾಖೆಯಾಗಲಿ ಕೂಡಲೇ  ಗಮನ ಹರಿಸಿ ಎಲ್ಲಾ ಸೌಕರ್ಯಗಳನ್ನು ಒದಗಿಸಿದಾಗ ಮಾತ್ರ ಸಕಾಲದಲ್ಲಿ ಶಾಲೆಗೆ ತೆರಳಿ ಕರ್ತವ್ಯಕ್ಕೆ ಹಾಜರಾಗಲು ಸಾದ್ಯವಿದೆ. ಇದರಿಂದ ಎಲ್ಲಾ ಶಿಕ್ಷಕರಿಗು ಅನುಕೂಲವಾಗುತ್ತದೆ.ಎಂದು  ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ರವರು ಸಮಸ್ತ ಶಿಕ್ಷಕ- ಶಿಕ್ಷಕಿಯರ ಪರವಾಗಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೊವಿಡ್ ಸಂಕಷ್ಟಕ್ಕೆ ಸಿಕ್ಕ ಖಾಸಗಿ ಶಿಕ್ಷಕಿಯ ಕುಟುಂಬ-ಫುಲೆ ಸಂಘ ನೆರವು

ಶಿವಮೊಗ್ಗ ಜೂನ್ 3.
*ಇಂದು ನಮ್ಮ  ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಸಂಘ(ರಿ)ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ  ಖಾಸಗಿ ಶಾಲಾ ಶಿಕ್ಷಕಿಯೊಬ್ಬರಿಗೆ  10,000₹ (ಹತ್ತು ಸಾವಿರ)ರೂಗಳನ್ನು ಧನಸಹಾಯವಾಗಿ ನೀಡಲಾಯಿತು..*

*ಖಾಸಗಿ ಶಾಲಾ ಶಿಕ್ಷಕಿಯವರು ಒಂದುಕಡೆ ಕೋವಿಡ್19 ಕ್ಕೆ ಸಿಲುಕಿ ಇತ್ತೀಚೆಗಷ್ಟೆ ಚೇತರಿಸಿಕೊಳ್ಳುತ್ತಿದ್ದರೆ ಮತ್ತೊಂದು ಕಡೆ ಅವರ ಪತಿಯವರು ಕೋವಿಡ್ ನಿಂದ  ಆಸ್ಪತ್ರೆಗೆ ಸೇರಿದ್ದಾರೆ.  ಅವರಿಗೆ ತುರ್ತು ಹಣದ ಅಗತ್ಯವಿದೆ ಎಂದು ನಮ್ಮ ಮಾನ್ಯ ಶಿಕ್ಷಣಾಧಿಕಾರಿಗಳಿಂದ ಗಮನಕ್ಕೆ ಬಂದ ಕೂಡಲೇ ನಮ್ಮ ಸಂಘವು ಎಚ್ಚೆತ್ತುಕೊಂಡು ಈ ಒಂದು ಸಣ್ಣ ಅಳಿಲು ಸೇವೆಯನ್ನು ಮಾಡಲು ನಮ್ಮ ಸಂಘದ ಸದಸ್ಯರು ಎಲ್ಲರೂ ನಿರ್ಧರಿಸಿ ಇಂದು ಧನಸಹಾಯಕ್ಕೆ ಮುಂದಾದೆವು ಎಂದು ಜಿಲ್ಲಾಧ್ಯಕ್ಷರಾದ ಶ್ರೀಮತಿ ರಾಧಾ ರವರು ತಿಳಿಸಿದ್ದಾರೆ*
*ನಮ್ಮ ಈ ಸೇವಾಕಾರ್ಯಕ್ಕೆ ಶ್ಲಾಘಿಸಿದ  ಮಾನ್ಯ ಶಿಕ್ಷಣಾಧಿಕಾರಿಗಳಾದ ಶ್ರೀ.ನಾಗರಾಜ್ ಸರ್ ಅವರಿಗೂ*ಹಾಗೂ ಈ ಕಾರ್ಯಕ್ಕೆ ಧನ ಸಹಾಯ ಮಾಡಿದ ಎಲ್ಲಾ ಪದಾಧಿಕಾರಿಗಳು, ಶಿಕ್ಷಕಿ ಮಿತ್ರರಿಗೆ ಹಾಗೂ ಇನ್ನಿತರ ಬಂಧುಗಳಿಗೆ ನಮ್ಮ ಸಂಘದ ವತಿಯಿಂದ ಧನ್ಯವಾದಗಳನ್ನು ಸಹಾ ಅರ್ಪಿಸಿದ್ದಾರೆ*ಈ ಸುಸಂದರ್ಭದಲ್ಲಿ ಶ್ರೀಮತಿ.ರಾಧಾ,ಜಿಲ್ಲಾಧ್ಯಕ್ಷರು, ಶ್ರೀಮತಿ. ಅನಿತ  ಜಿಲ್ಲಾ ಉಪಾಧ್ಯಕ್ಷರು,ಶ್ರೀಮತಿ. ಶಾಹಿನ್ ಬಾನು,ತಾಲೂಕು ಅಧ್ಯಕ್ಷರು,ಶ್ರೀಮತಿ.ಶರಾವತಿ,ತಾಲೂಕು ಪ್ರಧಾನಕಾರ್ಯಾದರ್ಶಿಗಳು ಬಾಗವಹಿಸಿದ್ದರು*

ಮಹಿಳೆ ಮತ್ತು ಕಾನೂನು- ವೆಬಿನಾರ್ ಯಶಸ್ವಿ

ವಿಜಯನಗರ ದಿನಾಂಕ:01-06-2021
ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ (ರಿ)ಘಟಕ ವಿಜಯನಗರ ಜಿಲ್ಲೆ ಮತ್ತು ಹೊಸಪೇಟೆ ತಾಲೂಕು.ವತಿಯಿಂದ
“ಇಂದು ಕಾನೂನು ಮತ್ತು ಮಹಿಳೆ” ಎನ್ನುವ ಬಗ್ಗೆ ವೆಬಿನಾರ ಕಾಯ೯ಕ್ರಮ ಆಯೋಜನೆ ಮಾಡಲಾಗಿತ್ತು. ಶ್ರೀ ಮತಿ ಅರುಂಧತಿ ಜಿಲ್ಲಾ ಪ್ರಧಾನಕಾಯ೯ದಶಿ೯ ಇವರ ನಿರೂಪಣೆಯ ಮುಖಾಂತರ ಪ್ರಾರಂಭವಾಯಿತು. ಶ್ರೀ ಮತಿ ರೇಶ್ಮಾ ಜಿಲ್ಲಾ ಉಪಾಧ್ಯಕ್ಷೆ ಇವರಿಂದ ಪ್ರಾಥ೯ನೆ. ನಂತರ ಶ್ರೀ ಮತಿ ಉಮಾದೇವಿ ಜಿಲ್ಲಾ ಅಧ್ಯಕ್ಷೆ ಇವರಿಂದ ಸ್ವಾಗತ. ನಂತರ ರಾಜ್ಯಾಧ್ಯಕ್ಷರಾದ ಶ್ರೀ ಮತಿ ಲತಾಮೂಳ್ಳೂರ ಮೇಡಂ ಇವರು ಪ್ರಸ್ಥಾವಿಕ ನುಡಿಗಳನ್ನು ಹೇಳಿದರು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ನಮ್ಮ ಸಾವಿತ್ರಿಬಾಯಿ ಪುಲೆ ಸಂಘ ನಡೆದು ಬಂದ ದಾರಿ ಬಗ್ಗೆ ತುಂಬಾ ಚೆನ್ನಾಗಿ ಮಾತನಾಡಿದರು. ಸಂಘದ ಉದ್ದೇಶಗಳ ಬಗ್ಗೆ ಸಹ ತಿಳಿಸಿದರು.
ಶ್ರೀ ಮತಿ ಡಾ. ಉಷರಾಣಿ ಇವರು ವಕೀಲರಾದ ಶ್ರೀ ಮತಿ ಅಖಿಲಾ ಮೇಡಂ ಇವರ ಪರಿಚಯವನ್ನೂ ಮಾಡಿದರು .ನಂತರ ಅಖಿಲಾ ಮೇಡಂ ಇವರು ಮೊದಲು ಸಂವಿಧಾನಾತ್ಮಕ ವಾಗಿ ದೊರೆತಿರುವ ನಮಗೆ ಸಾಮಾಜಿಕ ನ್ಯಾಯ , ಆಥಿ೯ಕ ನ್ಯಾಯ, ರಾಜಕೀಯ ನ್ಯಾಯ ,ಹೀಗೆ ವಿಷಯ ವಿವರಣೆ ಮಾಡಿದರು. ಕಲಂ 14 ,15 , 21, & 51 A , ಒಬ್ಬ ಮಹಿಳೆ ಗೃಹಿಣಿಯಾಗಿ , ಉದ್ಯೋಗಿಯಾಗಿ ಕಾನೂನಾತ್ಮಕವಾಗಿಪಡೆಯುವ ಸೌಲಭ್ಯಗಳನ್ನು ತುಂಬಾ ಚೆನ್ನಾಗಿ ವಿವರಿಸಿದರು . ಕೆಲವು ವಿಷಯಗಳು ಶಾಲೆ ,ವಿಧ್ಯಾರ್ಥಿ ಗಳ ಬಗ್ಗೆ ಮತ್ತು ಮಕ್ಕಳ ಹಕ್ಕುಗಳು ,ಹಕ್ಕುಗಳ ಉಲ್ಲಂಗನೆಯ ಪರಿಣಾಮ , ಬಾಲಿಕಾ ಶಿಕ್ಷಣದ ಮಹತ್ವ , ತಂದೆ ತಾಯಿ ಗಳ ಪಾತ್ರ , ಮಹಿಳಾ ದೌಜ೯ನ್ಯ ವಿರೋಧಿ ಕಾನೂನುಗಳು , ಪೋಸ್ಕೋ ಕಾಯ್ದೆಯ ವ್ಯಾಪ್ತಿ , ಶಿಕ್ಷೆ , ಮಹಿಳೆಯ ನಿರಂತರ ಸಮಾಜದ ತಾರತಮ್ಯ ಭಾವನೆಯ ವಿರುದ್ಧ ದ ಹೋರಾಟ ಜೀವನ, ಶಿಕ್ಷಕರಾಗಿ ಹೆಣ್ಣು ಮಕ್ಕಳಿಗೆ ನಾವು ನೀಡುವ ಸವಾ೯ಂಗಿಣ ಅಭಿವೃದ್ಧಿಯ ಮಾಗ೯ದಶ೯ನ ಮಾಡಿದರು . ಉತ್ತಮವಾದ ಸಂವಾದ ನಡೆಯಿತು. ವಿಷಯ ವಿವರಣೆ ತುಂಬಾ ಚೆನ್ನಾಗಿತ್ತು. ಕೊನೆಯಲ್ಲಿ ನಮ್ಮ ತಾಲೂಕಿನ ಪ್ರಧಾನಕಾಯ೯ದಶಿ೯ಯವರು ವಂದನಾಪ೯ಣೆ ಮಾಡುವುದರ ಮೂಲಕ ಇಂದಿನ ವೆಬಿನಾರ್ ಕಾಯ೯ಕ್ರಮ ಮುಕ್ತಾಯ ಮಾಡಲಾಯಿತು.
ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ವಿಜಯನಗರ ಜಿಲ್ಲೆ.

ತಮ್ಮ ಅಮೋಘ ಸೇವೆಯನ್ನು ಮುಗಿಸಿ ವಿಶ್ರಾಂತಿ ಜೀವನಕ್ಕೆ ಕಾಲಿಡುತ್ತಿರುವ ರಾಜ್ಯದ ಎಲ್ಲಾ ಶಿಕ್ಷಕ ಶಿಕ್ಷಕಿಯರಿಗೆ ಶುಭಾಶಯಗಳು