ನೂತನ ಪದಾಧಿಕಾರಿಗಳ ಆಯ್ಕೆ-ಮೊದಲ ಸಭೆ ಯಶಸ್ವಿ

ಮಧುಗಿರಿ ಜು.24 ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕರ ಸಂಘ ರಾಜ್ಯ ಘಟಕ- ಧಾರವಾಡ ಜಿಲ್ಲಾ ಘಟಕ- ಮಧುಗಿರಿ ತಾಲ್ಲೂಕು ಘಟಕ- ಪಾವಗಡ
ತಾಲ್ಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಆಗಿದ್ದು ಸಂಘದ ವತಿಯಿಂದ ಮೊದಲನೇ ಸಭೆಯನ್ನು ದಿನಾಂಕ 24 -7 -20 21ರಂದು ಗೂಗಲ್ ಮೀಟ್ ಸಭೆಯನ್ನು ಕರೆಯಲಾಗಿದ್ದು, ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್. ಮುಳ್ಳೂರ ಮೇಡಂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಜ್ಯೋತಿ ಮೇಡಂ ರವರು,ರಾಜ್ಯ ಉಪಾಧ್ಯಕ್ಷರು ಮತ್ತು ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಅನಸೂಯ ಮೇಡಂ ಜಿಲ್ಲಾ ಘಟಕದ ಅಧ್ಯಕ್ಷರು ಕಾರ್ಯದರ್ಶಿಗಳು ಹಾಗೂ ತಾಲ್ಲೂಕು ಘಟಕದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಿದರು.

ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ಮೇಡಂ ರವರು ನೂತನ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಸಂಘದ ಧ್ಯೇಯೋದ್ದೇಶಗಳನ್ನು ಕುರಿತು ಮಾತನಾಡಿದರು ಹಾಗೂ ಸಂಘದ ಕಾರ್ಯಗಳ ಕುರಿತು ಹೇಳುತ್ತಾ ಸಂಘವು ರಾಜ್ಯದ ಎಲ್ಲಾ ಶಿಕ್ಷಕಿಯರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ, ಶಿಕ್ಷಕಿಯರ ಅಭಿವೃದ್ಧಿಗಾಗಿ ಸದಾ ಶ್ರಮಿಸುತ್ತದೆ ಎಂದು ಹೇಳಿದರು.ಹಾಗೂ ಶಿಕ್ಷಕಿಯರಿಗೆ ಇರುವ ಸೌಲಭ್ಯಗಳ ಕುರಿತು ತಿಳಿಸಿದರು. ಇದರಲ್ಲಿ ಶಿಶುಪಾಲನಾ ರಜೆಯ ಬಗ್ಗೆ ಸವಿವರವಾಗಿ ತಿಳಿಸಿದರು ಮತ್ತು ಸಂಘದ ಬಲವರ್ಧನೆಗಾಗಿ ಪದಾಧಿಕಾರಿಗಳ ಕಾರ್ಯದ ಬಗ್ಗೆ ತಿಳಿಸಿದರು

ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಜ್ಯೋತಿ ಮೇಡಂ ರವರು ಮಾತನಾಡುತ್ತಾ ತಮ್ಮ ಭಾವನೆಗಳನ್ನು ಕ್ರಿಯಾಶೀಲತೆಯನ್ನು ಪ್ರತಿಬಿಂಬಿಸಲು ಶಿಕ್ಷಕಿಯರಿಗಾಗಿ ಇರುವ ಕುಟುಂಬ ಆಪ್, ಇದನ್ನು ಶಿಕ್ಷಕಿಯರು ಸದ್ಬಳಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸಂಘದಲ್ಲಿ ಪ್ರತಿದಿನ ಪ್ರತಿ ವಿಚಾರಗಳನ್ನು ಅಪ್ಡೇಟ್ ಮಾಡುವ ವಿಚಾರದ ಬಗ್ಗೆ ಮನವರಿಕೆ ಮಾಡಿಕೊಟ್ಟರು.ಈ ಗೂಗಲ್ ಮೀಟ್ ನಲ್ಲಿ ಸೇರಿದ್ದ ಪಾವಗಡ ತಾಲೂಕು ಘಟಕದ ಅಧ್ಯಕ್ಷರು ಕಾರ್ಯದರ್ಶಿಗಳು, ಗೌರವಾಧ್ಯಕ್ಷರು , ಪದಾಧಿಕಾರಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ನಮ್ಮ ಸಾವಿತ್ರಿಬಾಯಿಪುಲೆ ಸಂಘಕ್ಕೆ ಸಂಪೂರ್ಣ ಪ್ರೋತ್ಸಾಹ ನೀಡುತ್ತಿದ್ದು ಸಂಘದ ಪರವಾಗಿ ರಾಮಾಂಜನೇಯ ರವರು ಮೀಟ್ ನಲ್ಲಿ ಭಾಗವಹಿಸಿ ಸಂಪೂರ್ಣ ಸಹಕಾರ ನೀಡಿದರು. ಒಟ್ಟಾರೆಯಾಗಿ ಸಂಘದ ಮೊದಲ ಸಭೆ ಯಶಸ್ವಿಯಾಗಿ ಪೂರ್ಣಗೊಂಡಿತು ಸಭೆಯಲ್ಲಿ ಯಶೋಧ ಮೇಡಂ ರವರು ಪ್ರಾರ್ಥನೆ ಮಾಡಿದರೆ ರಾಧಾ ಮೇಡಂ ರವರು ಸರ್ವರನ್ನು ಸ್ವಾಗತಿಸಿದರು. ದುರ್ಗಾ ಮೇಡಂ ರವರು ವಂದನಾರ್ಪಣೆ ಸಲ್ಲಿಸಿದರು.

ಸ್ವಾಗತಿಸಿ ಸನ್ಮಾನಿಸಿದ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ

ಧಾರವಾಡ.ಜು.17.ಇಂದು ಕರ್ನಾಟಕ ರಾಜ್ಯ ಸಾವಿತ್ರಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ರಾಜ್ಯ ಘಟಕ ಧಾರವಾಡ. ಜಿಲ್ಲಾ ಘಟಕ ಧಾರವಾಡ ವತಿಯಿಂದ ಶ್ರೀಮತಿ N K ಸಾವಕಾರ ಮೇಡಮ್ ಅವರಿಗೆ ಶುಭ ಕೊರಲಾಯಿತು

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸ0ಸ್ಥೆ ಧಾರವಾಡದ ಪ್ರಾಚಾರ್ಯರಾಗಿ ಅಧಿಕಾರವಹಿಸಿಕೊಂಡ ಮಾನ್ಯ ಶ್ರೀಮತಿ N K. ಸಾವಕಾರ ಮೇಡಂರವರಿಗೆ ಸನ್ಮಾನಿಸಲಾಯಿತು 💐

ಸಂದರ್ಭದಲ್ಲಿ ಮಾತನಾಡಿದ ಮೇಡಂ ರವರು ಮಹಿಳಾ ಶಿಕ್ಷಕಿಯರು ಅನೇಕ ಸಮಸ್ಯೆಗಳಿದ್ದರು ಕೂಡ ಕುಟುಂಬದ ನಿರ್ವಹಣೆ ಜೊತೆ ವೃತ್ತಿಯ ಜೊತೆಗೆ ಸಂಘಟನೆಯಲ್ಲಿಯೂ ತೊಡಗಿ ಉತ್ತಮ ಕಾರ್ಯ ಶೈಕ್ಷಣಿಕ ಕಾರ್ಯ ಮಾಡುತ್ತಿರುವಿರಿ. ಎಂದು ಪ್ರಶ0ಸಿಸಿದರು
ಈ ಸಂದರ್ಭದಲ್ಲಿ ಸಂಘದ ಸ0ಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ಲತಾ. ಎಸ್. ಮುಳ್ಳೂರ ರಾಜ್ಯ ಕೋಶಾಧ್ಯಕ್ಷರಾದ ಶ್ರೀಮತಿ ಪ್ರೇಮಾ ಹೆಗಡೆ .ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ಎಸ್. ಆರ್ .ಶೀಲವಂತ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಸುಶೀಲಾ ಕರಡಿ .ಪದಾಧಿಕಾರಿಗಳಾದ ಶ್ರೀಮತಿ ಉಮಾದೇವಿ ಕಲಕೋಟಿ. ಶ್ರೀಮತಿ ಟಿ. ಎಸ್. ಅರವಳ್ಳಿ. ಶ್ರೀಮತಿ. R. B.ದಿಲಶಾದ ಶ್ರೀಮತಿ G. Y.ಹುಲಮನಿ. ಶ್ರೀಮತಿ Y M.ಬಡಿಗೇರ. ಶ್ರೀಮತಿ ಜಯಶ್ರೀ ಮುದಿಗೌಡರ ಶ್ರೀಮತಿ ಶಾರದಾ ಗೋಸಾಲ ಉಪಸ್ಥಿತರಿದ್ದರು

ಹೆಣ್ಣಿನ ಸ್ವಾತಂತ್ರ್ಯ ಕಸಿಯಲು ಯತ್ನ- ಡಾ.ಮುಳ್ಳೂರ ಖಂಡನೆ

ಧಾರವಾಡ ಜು.16 .ಹೆಣ್ಣಿನ ಶೋಷಣೆ,ಹೆಣ್ಣಿನ ಸ್ವಾತಂತ್ರ್ಯ ಕಸಿಯುವ ಯತ್ನಗಳು ನಡೆಯುತ್ತಲೆ ಇವೆ.ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂತಹ ಪ್ರಕರಣ ಶಿಕ್ಷಣ ವಯಲದಲ್ಲಿ ನಡೆದಿರುವುದು ವಿಷಾದನೀಯ.


ಎಲ್ಲಾ ಶಿಕ್ಷಕ ಶಿಕ್ಷಕಿಯರು ತಮಗಿಷ್ಟವಾದ ಉಡುಪನ್ನು ಧರಿಸಲು ಸ್ವತಂತ್ರವಿದೆ.ಆದರೆ ಸಭ್ಯ ಉಡುಪಾಗಿರಲಿ ಎಂದು 2017 ರಲ್ಲಿ ಘನ ಸರ್ಕಾರವು ಅಧಿಕೃತವಾಗಿ ಘೋಷಣೆ ಮಾಡಿತ್ತು.ಅದರಂತೆ ಶಿಕ್ಷಣ ಇಲಾಖೆಯ ನಿರ್ದೇಶಕರು ಕೂಡ ದಿನಾಂಕ 28:07:2017 ರಲ್ಲಿ ತಮ್ಮ ಆದೇಶ ಸಂಖ್ಯೆ ಎಡಿಎಂ೨(೧)ಸ ಉಡುಪು/2016-17 ಆದೇಶ ಹೊರಡಿಸಿ ಎಲ್ಲಾ ಜಿಲ್ಲೆಯ ಉಪನಿರ್ದೇಶಕರಿಗೆ ನಿರ್ದೇಶನ ನೀಡಿದೆ.ಅದರಂತೆ ಎಲ್ಲಾ ಬೋಧಕ ವಲಯದ ಶಿಕ್ಷಕಿಯರು ಸಬ್ಯ ಉಡುಪಗಳಾದ ಸೀರೆ ಅಥವಾ ಚೂಡಿದಾರ್ ತೊಡಲು ಅವಕಾಶ ಕಲ್ಪಿಸಲಾಗಿದೆ.ಇದನ್ನು ಸಹಿಸದ ಕೆಲವು ಪುರುಷ ಶಿಕ್ಷಕರು,ಶಿಕ್ಷಕಿಯರಿಗೆ ಸೀರೆಯನ್ನೇ ತೊಡಲು ಸೂಚಿಸುವಂತೆ ಚಿಕ್ಕಮಗಳೂರು ಜಿಲ್ಲಾ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿರುತ್ತಾರೆ,ಇದು ಅವರ ಅಸಹನೆಯನ್ನು ಬಿಂಬಿಸುತ್ತಿದೆ‌.ಹಾಗೂ ಮಹಿಳೆಯರ ಸ್ವಾತಂತ್ರ್ಯ ಕಸಿಯುವ ಯತ್ನವಾಗಿದೆ.ಇದನ್ನು ನಮ್ಮ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಖಂಡಿಸಿದೆ.ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ರವರು ಕಟುವಾಗಿ ಮಾತನಾಡಿದ್ದಾರೆ.

ಅಂತವರ ಮನವಿಯನ್ನು ತಿರಸ್ಕರಿಸಿರುವ ಮಾನ್ಯ ಉಪನಿರ್ದೇಶಕರು ಸಬ್ಯ ಉಡುಪು ಧರಿಸಲು ಎಲ್ಲರಿಗೂ ಸ್ವಾತಂತ್ರ್ಯ ವಿದೆ..ಇದರ ಬಗ್ಗೆ ಯಾರೂ ಕೂಡ ಆಕ್ಷೇಪ ಸಲ್ಲಿಸಬಾರದೆಂದು ಸೂಚಿಸಿರುತ್ತಾರೆ.ಅವರ ಈ ಅದೇಶವನ್ನು ನಮ್ಮ ಸಂಘವು ಸ್ವಾಗತಿಸುತ್ತದೆ, ಮನವಿಯನ್ನು ತಿರಸ್ಕರಿಸಿ ಶಿಕ್ಷಕಿಯರ ಸ್ವಾತಂತ್ರ್ಯಪರ ಸೂಕ್ತ ನಿರ್ಣಯ ತೆಗೆದುಕೊಂಡಿರುವ ಚಿಕ್ಕಮಗಳೂರು ಜಿಲ್ಲಾ ಮಾನ್ಯ ಉಪನಿರ್ದೇಶಕರವರಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಜ್ಯೋತಿ ಹೆಚ್.ರವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

C&R ತಿದ್ದುಪಡಿ ಸೇರಿದಂತೆ ಶಿಕ್ಷಕಿಯರ ವಿವಿಧ ಸಮಸ್ಯೆ ಬಗೆಹರಿಸಲು ಕೋರಿ ಮನವಿ ಸಲ್ಲಿಕೆ

ಬೆಂಗಳೂರು, ಜು.13

ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯ ಘಟಕ ಧಾರವಾಡ
ಬೆಂಗಳೂರು ದಕ್ಷಿಣ ಜಿಲ್ಲೆ ಬೆಂಗಳೂರು ದಕ್ಷಿಣ ವಲಯ 01 ವತಿಯಿಂದ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ. ಕೆ. ಪ್ರಕಾಶ ಅವರಿಗೆ ತಾಲೂಕಿನ ಶಿಕ್ಷಕಿಯರ ಸಮಸ್ಯೆ ಕುರಿತಂತೆ ಮನವಿ ಸಲ್ಲಿಸಲಾಯಿತು. ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಅವರಿಗೆ ಸಂಘವು ಧನ್ಯವಾದಗಳನ್ನು ಸಲ್ಲಿಸಿದೆ.

ಈ ಸಂದರ್ಭದಲ್ಲಿ ಶ್ರೀಮತಿ ಲಷ್ಮಿ. ಕೆ. ಎಸ್. ಅಧ್ಯಕ್ಷರು ಕರ್ನಾಟಕ ರಾಜ್ಯ ಸಾವಿತ್ರಬಾಯಿ ಫುಲೆ ಶಿಕ್ಷಕಿಯರ ಸಂಘ .(ರಿ) ಬೆಂಗಳೂರು ದಕ್ಷಿಣ ವಲಯ 01 ( ಇಂಗ್ಲಿಷ್ ರಾಜ್ಯ ಸಂಪನ್ಮೂಲ ವ್ಯಕ್ತಿ ಈಗ ಪ್ರಸ್ತುತ DSERT ಇ ಕಲಿಕಾ ಸ0ವೇದ ಕಾರ್ಯಕ್ರಮ ಚಂದನವಾಹಿನಿಯಲ್ಲಿ 1 ರಿಂದ 7 ನೇ ತರಗತಿವರೆಗೆ ಇಂಗ್ಲಿಷ್ ವಿಡಿಯೋ ಪಾಠಗಳ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಲಷ್ಮಿ.ಕೆ. ಎಸ್) ಹಾಗೂ ಶ್ರೀಮತಿ ವಿಜಯಾ ಗೌರವಾಧ್ಯಕ್ಷರು ಶ್ರೀಮತಿ ನೂರಜಹಾನ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಉಮಾದೇವಿ ಕೋಶಾಧ್ಯಕ್ಷರು ಶ್ರೀಮತಿ ಮಣಿ. R. ಉಪಾಧ್ಯಕ್ಷರು ಶ್ರೀಮತಿ ಲೀಲಾವತಿ ಸಂಘಟನಾ ಕಾರ್ಯದರ್ಶಿ ಗಳು ಶ್ರೀಮತಿ ರಾಜೇಶ್ವರಿ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಆಯಿಷಾ ಸಹ ಕಾರ್ಯದರ್ಶಿ. ಶ್ರೀಮತಿ ಭಾರತಿ ಸಹ ಕಾರ್ಯದರ್ಶಿ ಹಾಜರಿದ್ದರು

SSLC ಪರೀಕ್ಷೆ ಕುರಿತಂತೆ ನೇರ ಪೋನ್ ಇನ್ ಕಾರ್ಯಕ್ರಮ ಯಶಸ್ವಿ

ಹುಮ್ನಾಬಾದ್ ಜು.10- 2020-21ನೇ ಸಾಲಿನ SSLC ವಿದ್ಯಾರ್ಥಿಗಳಿಗಾಗಿ ನೇರ ಫೋನ್ ಇನ್ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹುಮನಾಬಾದ, ಕ. ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಹುಮನಾಬಾದ, ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಜಿಲ್ಲಾ ಘಟಕ ಬೀದರ ಹಾಗೂ ತಾಲೂಕಾ ಘಟಕ ಹುಮನಾಬಾದ ಸಹಯೋಗದಲ್ಲಿ ದಿನಾಂಕ 10-07-2021ರಂದು ಆಯೋಜಿಸಲಾಯಿತು.. ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಶಿವಗುಂಡಪ್ಪನವರು ವಹಿಸಿ ತಾಲೂಕಿನ ಎಲ್ಲಾ ಎಸ್ಸೆಸೆಲ್ಸಿ ಮಕ್ಕಳಿಗೆ ಹೊಸ ಪರೀಕ್ಷಾ ವಿಧಾನದ ಕುರಿತು ಅರಿವು ಮೂಡಿಸಲು ಕಾರ್ಯಕ್ರಮ ಆಯೋಜಿಸಲಾಗಿದ್ದು ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ಮಕ್ಕಳು ಕೇಳುವ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಬೇಕೆಂದು ಸೂಚನೆ ನೀಡಿದರು.

ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಮತಿ ಸಾರಿಕಾ ಗಂಗಾ ಪ್ರಸ್ತಾವಿಕ ಮಾತನಾಡಿ, ಕೋವಿಡ್ 19 ಸಂದರ್ಭದಲ್ಲಿ ಮಕ್ಕಳು ಶಾಲೆಯಿಂದ ದೂರ ಉಳಿದಿದ್ದು ಅವರಿಗೆ ಪರೀಕ್ಷಾ ವಿಧಾನ ಕುರಿತು ಜಾಗೃತಿ ಮೂಡಿಸುವುದು ಅವಶ್ಯವೆಂದು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಶ್ರೀ ಲೋಕೇಶ ಶಿಕ್ಷಣ ಸಂಯೋಜಕರು, ಶ್ರೀ ಪರಮೇಶ್ವರ ಉಪ ಪ್ರಾಂಶುಪಾಲರು , ಶ್ರೀ ಶೇಕ್ ಮೆಹಬೂಬ ಅಧ್ಯಕ್ಷರು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಹುಮನಾಬಾದ ಹಾಗೂ ಸುನಿತಾ ಪಾಟೀಲ ತಾಲೂಕ ಅಧ್ಯಕ್ಷರು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಹುಮನಾಬಾದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಉರ್ದು ಮಧ್ಯಮ ಹಾಗೂ ಕನ್ನಡ ಮಾಧ್ಯಮದ ಒಟ್ಟು 24 ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ, ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಭುವನೇಶ್ವರಿ ನೆರವೇರಿಸಿದರು..

PST ಬೇಡ GPT ಬೇಕು-ಫುಲೆ ಶಿಕ್ಷಕಿಯರ ಸಂಘ ಒತ್ತಾಯ

ಶಿಕಾರಿಪುರ ಜು.07 ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ.ರಾಜ್ಯಘಟಕ ಧಾರವಾಡ. ಜಿಲ್ಲಾ ಘಟಕ ಶಿವಮೊಗ್ಗ, ಶಿಕಾರಿಪುರ ತಾಲ್ಲೂಕು ಘಟಕದಿಂದ C&R ನಿಯಮ ತಿದ್ದುಪಡಿಮಾಡಿ ಪದವೀಧರ ಸೇವಾನಿರತ ಶಿಕ್ಷಕರಿಗೆ 6-8ನೇ ತರಗತಿ ಬೋದಿಸುವ ಶಿಕ್ಷಕರನ್ನಾಗಿ ಮಾಡಿ PST ಇಂದ GPT ವೃಂದಕ್ಕೆ ವಿಲೀನ ಮಾಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಲಾಗಿದೆ.

1-7 ನೇ ತರಗತಿ ಬೋದಿಸುವ ಶಿಕ್ಷಕರನ್ನು 1-5 ನೇ ತರಗತಿಗೆ ಸೀಮಿತಗೊಳಿಸಿ ಹಿಂಬಡ್ತಿ ಮಾಡಿರುವುದು ಅವರ ವಿದ್ಯಾರ್ಹತೆಗೆ ಹಾಗೂ ಅವರ ಸುದೀರ್ಘ ಸೇವೆಗೆ ಮಾನ್ಯತೆ ಇಲ್ಲದಂತಾಗಿದೆ.ಇದರಿಂದ ರಾಜ್ಯದ ಎಲ್ಲಾ ಪದವೀಧರ ಸೇವಾನಿರತ ಶಿಕ್ಷಕರಿಗೆ , ಅನ್ಯಾಯವಾಗಿದೆ.ಅದಾಗ್ಯೂ ಇದುವರೆಗೆ 1-7 ನೇ ತರಗತಿವರೆಗೆ ಬೋದಿಸುತ್ತಿದ್ದೇವೆ, ಸಿ.ಅಂಡ್ ಆರ್.ತಿದ್ದುಪಡಿ ಮಾಡಿ ಶೀಘ್ರದಲ್ಲಿ ಪದವೀಧರ ಶಿಕ್ಷ ಶಿಕ್ಷಕಿಯರನ್ನು 6-8 ನೇ ತರಗತಿಯ GPT ವೃಂದಕ್ಕೆ ವಿಲೀನಮಾಡಬೇಕು,ಅವರು ಮಾಡಿರುವ ಸುದೀರ್ಘವಾದ ಸೇವೆಗೆ ಹಾಗೂ ಗಳಿಸಿರುವ ವಿದ್ಯಾರ್ಹತೆಗೆ ನ್ಯಾಯ ಒದಗಿಸಬೇಕು .ಇಲ್ಲವಾದರೆ 6ರಿಂದ 8ನೇ ತರಗತಿ ಬೋದನೆಯನ್ನು ಬಹಿಷ್ಕರಿಸುವುದಾಗಿ ತಾಲ್ಲೂಕಿನ ಅಧ್ಯಕ್ಷರು ಶ್ರೀಮತಿ ಲಕ್ಷ್ಮವ್ವ ಎಂ ಸುಣಗಾರರವರು ಮಾನ್ಯ ಕ್ಷೇತ್ರ ಶಿಕ್ಷಣಧಿಕಾರಿಗಳಿಗೆ ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ. ಪ್ರಧಾನ ಕಾರ್ಯದರ್ಶಿ ಶ್ರೀಮತಿ ಉಷಾರಾಣಿ ಎಸ್ ವಿ. &ಎಲ್ಲಾ ಪದಾಧಿಕಾರಿಗಳು. ಹಾಜರಿದ್ದರು.

ವಿಶ್ವ ವೈಧ್ಯರ ದಿನ-ವೈಧ್ಯರಿಗೆ ವಂದಿಸಿದ ಶಿವಮೊಗ್ಗ ಫುಲೆ ಸಂಘ

ಕರ್ನಾಟಕ ರಾಜ್ಯ ಸಾವಿತ್ರಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ಶಿವಮೊಗ್ಗ ಜಿಲ್ಲಾ ಘಟಕ

ಶಿವಮೊಗ್ಗ-ಜು.03-ವೈದ್ಯೋ ನಾರಾಯಣ ಹರಿಃ ಎಂಬ ಮಾತಿದೆ, ವೈದ್ಯರ ಆರೈಕೆ, ಚಿಕಿತ್ಸೆಯ ಸರಿಯಾದ ಕ್ರಮದಿಂದ ಆರೋಗ್ಯ ಉತ್ತಮವಾಗಿಸುತ್ತಾರೆ.ಅವರೇ ದೇವರೆನಿಸುತ್ತಾರೆ. ಯಾವುದೇ ತಮ್ಮ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಳ್ಳದೆ ರೋಗಿಯ ಆರೈಕೆಗಾಗಿ ಹೆಚ್ಚು ಕಾಲ ವಿನಿಯೋಗಿಸುವ ವೈದ್ಯರುಗಳು ಸದಾ ದೇವತೆಗಳಿಗೆ ಸಮನಾಗಿರುತ್ತಾರೆ, ನಾವು ಭೂಮಿಯ ಮೇಲೆ ದೇವರನ್ನು ನೋಡಲು ಸಾಧ್ಯವಿಲ್ಲ ಆದರೆ ನಮ್ಮ ಆರೋಗ್ಯ ಉತ್ತಮಗೊಳಿಸಿ ನಮ್ಮನ್ನು ಆರೈಕೆ ಮಾಡುವ ವೈದ್ಯರುಗಳೇ ದೈವಶಕ್ತಿ ಪಡೆದುಕೊಂಡು ರೋಗಿಯ ಕಣ್ಣೆದುರಿಗೆ ನಿಲ್ಲುವ ದೇವರಾಗುತ್ತಾರೆ.

ಅಂತಹ ವೈದ್ಯ ಸಮುದಾಯಕ್ಕೆ ಧನ್ಯವಾದ ಹೇಳುವ ಸುಸಂದರ್ಭದಲ್ಲಿ ಡಾಕ್ಟರ್ ಜೈ ಕುಮಾರ್ ಶೆಟ್ಟಿ,MBBS ,MD, ಮಕ್ಕಳ ತಜ್ಞರು ಸುಮಾರು 28 ವರ್ಷಗಳಿಂದ ರೋಗಿಗಳ ಆರೋಗ್ಯ ಉತ್ತಮವಾಗಿ ಸುವ ನಿಟ್ಟಿನಲ್ಲಿ ಇವರ ಪ್ರಿಯಾಂಕಾ ನರ್ಸಿಂಗ್ ಹೋಂ ಮತ್ತು ಸೃಷ್ಟಿ ಕ್ಲಿನಿಕ್ ನಲ್ಲಿ ಬಡವರಿಗೆಂದೇ ಉಚಿತ ತಪಾಸಣೆ ಮಾಡಿ ಬಡವರಿಗೆ ನೆರವಾಗುತ್ತಿರುವ ವೈದ್ಯರಿಗೆ ಒಂದು ವೈದ್ಯರ ದಿನಾಚರಣೆಯ ಸಲುವಾಗಿ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ಶಿವಮೊಗ್ಗ ಜಿಲ್ಲಾ ಘಟಕ ಅಧ್ಯಕ್ಷರು ರಾಧಾ ರವರು ಪ್ರಧಾನ ಕಾರ್ಯದರ್ಶಿಗಳು ಪುಷ್ಪ ನರೇ ಗೌಡರು ಹಾಗೂ ಕೋಶಾಧ್ಯಕ್ಷರು ಲಲಿತ ರವರು ಶಿವಮೊಗ್ಗ ತಾಲೂಕು ಘಟಕ ಅಧ್ಯಕ್ಷರು ಶಾಹಿದ್ ಬಾನು ಕೋಶಾಧ್ಯಕ್ಷರು ಲಕ್ಷ್ಮಿ ಎಸ್ ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು