ಧಾರವಾಡ ಸೆ.25 ಹತ್ತು ಹಲವಾರು ವರ್ಷಗಳಿಂದ ತಮ್ಮ ಸ್ವಂತ ಜಿಲ್ಲೆ ತೊರೆದು,ತಮ್ಮ ತಂದೆ ತಾಯಿ ಬಂದು ಬಳಗ ಅಲ್ಲದೇ ಕುಟುಂಬಗಳನ್ನೇ ದೂರ ಮಾಡಿ ನೂರಾರು ಕಿಲೋ ಮೀಟರ್ ದೂರದ ಶಾಲೆಗಳಲ್ಲಿ ಮಕ್ಕಳಿಗೆ ಪಾಠ ಪ್ರವಚನ ಮಾಡುತ್ತಿರುವ ಸಾವಿರಾರು ಶಿಕ್ಷಕರಿದ್ದಾರೆ. ಅಂತಹ ಶಿಕ್ಷಕರ ಕೌಟುಂಬಿಕ ಬದುಕು ಶೋಚನೀಯ ಸ್ಥಿತಿ ತಲುಪಿದ್ದು,ಮಾನಸಿಕವಾಗಿ ಕುಗ್ಗಿಹೋಗಿರುತ್ತಾರೆ, ಗಂಡ ಹೆಂಡತಿಯರ ಸಂಬಂದ ಅನೇಕ ವಿಚ್ಚೇದನಗಳ ಕಡೆ ತಿರುಗಿ ಸಂಸಾರದಲ್ಲೂ ನೆಮ್ಮದಿ ಸಿಗದಂತಾಗಿದೆ..ಇಳಿವಯಸ್ಸಿನ ತಂದೆ ತಾಯಂದಿರನ್ನು ಸಹಾ ನೋಡಿಕೊಳ್ಳದ ಸ್ಥಿತಿ ಇದೆ.

ಹೀಗೆ ಬೇರೆ ಬೇರೆ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕ ಶಿಕ್ಷಕಿಯರು ತಮ್ಮ ಹಲವಾರು ಸಮಸ್ಯೆಗಳ ನಡುವೆ ಈಗಾಗಲೇ ಒಂದೇ ಶಾಲೆಯಲ್ಲಿ 10-15 ವರ್ಷಗಳನ್ನು ಸಹಾ ಪೂರೈಸಿರುತ್ತಾರೆ. ನಾನಾ ಕಾರಣಗಳಿಂದಾಗಿ ಈ ವರ್ಷದಲ್ಲಿ ಪ್ರತಿ ಜಿಲ್ಲೆಗಳಲ್ಲಿ ಬಹುತೇಕ ಶಿಕ್ಷಕರ ಹುದ್ದೆಗಳು ಖಾಲಿಯಾಗಿವೆ, ಅಲ್ಲದೇ ಇತ್ತೀಚೆಗೆ ಶಿಕ್ಷಕರ ನೇಮಕಾತಿ ಕೂಡ ನಡೆಸಲು ಘನ ಸರ್ಕಾರ ತೀರ್ಮಾನಿಸಿದೆ. ಇಂತಹ ಸಂದರ್ಭದಲ್ಲಿ ಹೊಸ ನೇಮಕಾತಿ ಪ್ರಾರಂಬಿಸುವ ಮುನ್ನ ಪ್ರಥಮ ಹಂತವಾಗಿ ಇಂತಹ ಶೋಚನೀಯ ಸ್ಥಿತಿಯಲ್ಲಿರುವ ಶಿಕ್ಷಕ-ಶಿಕ್ಷಕಿಯರ ಕಡೆ ಗಮನ ಹರಿಸಿ ಪ.ಬಂಗಾಳದಲ್ಲಿ ಅವಕಾಶ ಕಲ್ಪಿಸಿದ ಹಾಗೇ ಕರ್ನಾಟಕದಲ್ಲೂ ಶಿಕ್ಷಕರಿಗೆ ತಮ್ಮ ಸೇವಾವಧಿಯಲ್ಲಿ ಒಮ್ಮೆ ಬಯಸಿದ ಜಿಲ್ಲೆಗಳಿಗೆ ವಿಶೇಷ ವರ್ಗಾವಣೆ ಪ್ರಕ್ರಿಯೆ ನಡೆಸಿ ಶಿಕ್ಷಕರ ಕೌಟುಂಬಿಕ ಬದುಕನ್ನು ನೆಮ್ಮದಿಯಿಂದ ಸಾಗಿಸಲು ವಯಸ್ಸಾದ ತಂದೆ ತಾಯಿಗಳನ್ನು ಸಾಕಿ ಸಲುಹಲು ಅವಕಾಶ ಮಾಡಿಕೊಡಬೇಕೆಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯರಾದ ಡಾ.ಲತಾ.ಎಸ್.ಮುಳ್ಳೂರ ರವರು ಘನ ಸರ್ಕಾರಕ್ಕೆ ಒತ್ತಾಯಿಸಿ ಮನವಿ ಮಾಡಿದ್ದಾರೆ.




























