ತುಮಕೂರು,ಡಿ.10-ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ರಾಜ್ಯ ಘಟಕ (ರಿ) ಧಾರವಾಡ. ಜಿಲ್ಲಾ ಘಟಕ ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲಾ ಘಟಕಗಳ ವತಿಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೆ ನೂತನವಾಗಿ ಆಯ್ಕೆಯಾಗಿರುವ ಕೆ. ಎಸ್. ಸಿದ್ದಲಿಂಗಪ್ಪನವರುಗಳಿಗೆ ಮತ್ತು ತಾಲ್ಲೂಕು ಅಧ್ಯಕ್ಷರಾದ ಶಿವಕುಮಾರ್ ರವರಿಗೆ ಸಾವಿತ್ರಿಭಾಯಿ ಪುಲೆ ಯವರ ಭಾವ ಚಿತ್ರ ನೀಡಿ ಗೌರವಿಸಿ ಅಭಿನಂದಿಸಿ,ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಅನುಸೂಯ ದೇವಿ,ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಜಿ. ಎಲ್. ರಾಧಮ್ಮ ರವರು ತುಮಕೂರು ತಾಲೂಕು ಅಧ್ಯಕ್ಷರಾದ ಶ್ರೀಮತಿ ಸಿದ್ದಮ್ಮ ಹಾಗೂ ಪದಾಧಿಕಾರಿಗಳಾದ, ಮಂಗಳಮ್ಮ, ಲಕ್ಷ್ಮಿ ದೇವಮ್ಮ, ಉಮಾವತಿ, ಕನಕರತ್ನ,ಲಲಿತಮ್ಮ, ಕವಿತಾ, ನಾಗರತ್ನ, ಡಿ :ಶಶಿಕಲಾ, ಸೌಮ್ಯ, ಕೊರಟಗೆರೆ ತಾ :ಅಧ್ಯಕ್ಷರಾದ ಶ್ರೀ ಮತಿ ಸುಜಾತಾ ರವರು ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಗುಬ್ಬಿ ತಾಲ್ಲೂಕಿನ ಶ್ರೀ ರಂಗಸ್ವಾಮಿ ರವರು ಹಾಗೂ ಶ್ರೀ ರವೀಶ್ ರವರು ಸಹಾ ಹಾಜರಿದ್ದರು
ದಿನಾಂಕ:-27/11/2021 ರಂದು ಮಂಡಘಟ್ಟ ಕ್ಲಸ್ಟರಿನ ಸ.ಕಿ.ಪ್ರಾ.ಸೂಡೂರು ಶಾಲೆಯಲ್ಲಿನಿವೃತ್ತಿ ಹೊಂದಿದ್ದ ಶ್ರೀ ವಿರೂಪಾಕ್ಷಪ್ಪ ಸರ್ ಅವರನ್ನು ನಮ್ಮ ಶಿವಮೊಗ್ಗ ಜಿಲ್ಲಾ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಮತಿ ರಾಧಾ ಅವರು ಜಿಲ್ಲಾ ಸಹಕಾರ್ಯದರ್ಶಿಯಾದ ಶ್ರೀಮತಿ ಸುಮಂಗಲಾ ನಾಯ್ಕ ಅವರು ಶಿವಮೊಗ್ಗ ತಾಲ್ಲೂಕು ಸಂಘದ ಅಧ್ಯಕ್ಷರಾದ ಶ್ರೀಮತಿ ಶಾಹಿನಬಾನು ಹಾಗೂ ಗೌರವಾಧ್ಯಕ್ಷರಾದ ಲಕ್ಷ್ಮೀಯವರು ಸೇರಿ ಸನ್ಮಾನಿಸಿದರು.
ಶ್ರೀ ವಿರೂಪಾಕ್ಷಪ್ಪ ಸರ್ ರವರು ಸೂಡೂರು ಸ. ಕಿ.ಪ್ರಾ.ಶಾಲೆಯಲ್ಲಿ ಸುಮಾರು 20 ವರ್ಷಗಳಕಾಲ ಸುದೀರ್ಘ ಸೇವೆ ಸಲ್ಲಿಸಿ ಈಗ ವಯೋ ನಿವೃತ್ತಿ ಹೊಂದಿದ್ದಾರೆ. ಇವರು ವೃತ್ತಿ ಜೀವನದಲ್ಲಿಯಾವಾಗಲೂ ಹಸನ್ಮುಖಿಯಾಗಿದ್ದು ಒಳ್ಳೆತನದಿಂದ ಕ್ಲಸ್ಟರಿನ ಎಲ್ಲಾ ಶಿಕ್ಷಕರ, ವಿದ್ಯಾರ್ಥಿಗಳ ,ಪೋಷಕರ,ಊರಿನವರ ಮೆಚ್ಚುಗೆಗೆ ಪಾತ್ರರಾಗಿದ್ದರು.ವಿರೂಪಾಕ್ಷಪ್ಪ ಶಿಕ್ಷಕರ ಸಂಘದಲ್ಲಿ ಗುರುತಿಸಿ ಕೊಂಡಿದ್ದರು.
ಕ್ಲಸ್ಟರಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಮುಂದಾಳತ್ವ ವಹಿಸಿ ಕಿರಿಯರಿಗೆ ಉತ್ತಮ ಮಾರ್ಗದರ್ಶನ ನೀಡುತ್ತಿದ್ದರು ಇವರ ಬಗ್ಗೆ ಸಹೋದ್ಯೋಗಿ ಶಿಕ್ಷಕರು ಹಾಗೂ ಸಿ.ಆರ್.ಪಿ ಸದಾನಂದ ಅವರು ಮೆಚ್ಚುಗೆಯ ಮಾತುಗಳನ್ನಾಡಿದರು ವಿರೂಪಾಕ್ಷಪ್ಪ ಸರ್ ಅವರು ಹಲವಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ ಅವರ ನಿವೃತ್ತಿ ಜೀವನ ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ನಮ್ಮ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘ ಶಿವಮೊಗ್ಗ ದಲ್ಲಿ ಸಮಾಜಮುಖಿ ಕೆಲಸ ಕಾರ್ಯದಲ್ಲಿ ತೊಡಗಿದೆ ಎಂದರು.ಸಹಕರಿಸಿದ ಎಲ್ಲರಿಗೂ ಜಿಲ್ಲಾ ಮತ್ತು ತಾಲ್ಲೂಕು ಸಾವಿತ್ರಿಬಾಯಿಪುಲೆ ಮಹಿಳಾ ಶಿಕ್ಷಕಿಯರ ಸಂಘದ ಪರವಾಗಿ ಶುಭಕೋರಲಾಗಿದೆ.
ಶಿವಮೊಗ್ಗ- ದಿನಾಂಕ 19:11:2021 ರಂದು ಸಾಗರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಮ್ರೀನ್ ಮತ್ತು ಆಫ್ರೀನ್ ಸಹೋದರಿಯರು ಗಾಯಗೊಂಡಿದ್ದು ಆಫ್ರೀನ್ ಕೋಮಾದಲ್ಲಿ ಇರುತ್ತಾರೆ ಇವರಿಗೆ ಚಿಕಿತ್ಸೆಗಾಗಿ ಆರ್ಥಿಕ ಸಹಾಯ ಕೇಳಲಾಗಿತ್ತು,
ಈ ಸುದ್ದಿ ತಿಳಿದ ಕರ್ನಾಟಕ ರಾಜ್ಯ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘ,ತಾಲೂಕು ಘಟಕ- ಶಿವಮೊಗ್ಗ ವತಿಯಿಂದ ಸ್ವಯಂಪ್ರೇರಿತ ಧನ ಸಹಾಯ ಮಾಡಲು ಸಂಘದ ಶಿಕ್ಷಕಿಯರಿಗೆ ಪ್ರಕಟಣೆ ಮಾಡಿ ಸ್ವಯಂ ಪ್ರೇರಣೆಯಿಂದ ಸಂಗ್ರಹವಾದ ಹಣವನ್ನು ಕೋಮ ತಲುಪಿರುವ ಗಾಯಾಳುವಿನ ತಂದೆ ತಾಯಿಗೆ ವಿತರಿಸಿ,ಸಾಂತ್ವನ ಹೇಳಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶಿವಮೊಗ್ಗ ತಾಲ್ಲೂಕಿನ ಅಧ್ಯಕ್ಷರು ಶ್ರೀಮತಿ ಶಾಹೀನ್ ಬಾನು ರವರು ಇದರ ಉಸ್ತುವಾರಿಯನ್ನು ವಹಿಸಿದ್ದು, ಉತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ, ಇಂತಹ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆ ಮಾಡಲು ಈ ಒಂದು ಸಂಘವನ್ನು ರಾಜ್ಯದ ಪ್ರತೀ ಜಿಲ್ಲೆಯಲ್ಲೂ,ತಾಲ್ಲೂಕುಗಳಲ್ಲಿಯೂ ಸ್ಥಾಪಿಸಿ ನಮ್ಮೆಲ್ಲರಿಗೂ ಅವಕಾಶ ಕಲ್ಪಿಸಿರುವ ನಮ್ಮ ಹೆಮ್ಮೆಯ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರು ಡಾ.ಲತಾ.ಎಸ್.ಮುಳ್ಳೂರ ರವರಿಗೆ ನಾವೆಲ್ಲರೂ ಅಭಾರಿಯಾಗಿದ್ದೀವಿ ಎಂದು ಶಿವಮೊಗ್ಗ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಶ್ರೀಮತಿ ರಾಧರವರು ತಿಳಿಸಿದ್ದಾರೆ.ಕೋಶಾಧ್ಯಕ್ಷರಾದ ಶ್ರೀಮತಿ ಲಲಿತ ರವರು ಸಹ ಹಾಜರಿದ್ದು, ಇದಕ್ಕಾಗಿ ಧನ ಸಹಾಯಮಾಡಿ, ಸಹಕಾರ ನೀಡಿದ ನಮ್ಮ ಸಂಘದ ಎಲ್ಲಾ ಪದಾಧಿಕಾರಿಗಳಿಗೂ ಸದಸ್ಯರಿಗೂ ಹಾಗೂ ಶಿಕ್ಷಕ ವರ್ಗದವರಿಗೂ ತುಂಬು ಹೃದಯದ ಧನ್ಯವಾದಗಳನ್ನು ಸಹಾ ತಾಲೂಕು ಘಟಕ ಹಾಗೂ ಜಿಲ್ಲಾಘಟಕ ವತಿಯಿಂದ ಧನ್ಯವಾದಗಳನ್ನು ಸಲ್ಲಿಸಲಾಗಿದೆ.
ಹೊಸಪೇಟೆ ಅ.22.ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ), ರಾಜ್ಯಘಟಕ ಧಾರವಾಡ, ಜಿಲ್ಲಾ ಘಟಕ ವಿಜಯನಗರ ವತಿಯಿಂದ PST ಶಿಕ್ಷಕಿ ವೃಂದದವರಿಂದ ಮಾನ್ಯ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಹಾಗೂ ಮಾನ್ಯ ಉಪನಿರ್ದೇಶಕರಿಗೆ ಚಳುವಳಿ ಪತ್ರ ರವಾನೆ ಮಾಡಲಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕ/ಕಿ ವೃಂದದಲ್ಲಿ C&R ನಿಯಮ ಜ್ವಲಂತ ಸಮಸ್ಯೆಯಾಗಿ ಎಲ್ಲ ಶಿಕ್ಷಕ ಸಮುದಾಯದ ಹೃದಯದಲ್ಲಿ ಅಸಮಾಧಾನದ ಅಲೆಗಳನ್ನೇ ಎಬ್ಬಿಸಿದೆ ಎಂದರೆ ನಿಜಕ್ಕೂ ತಪ್ಪಾಗದು..ಬರೆಯುವವರಿಗೆ, ತಪ್ಪಾದಾಗ ಅಳಿಸುವ ವಿಧಾನಗಳೂ ತಿಳಿದಿರುತ್ತವೆ.ಹಾಗೆಯೇ ಬರೆದಿರುವ ನಿಯಮದಲ್ಲಿ ಬದಲಾವಣೆ ಸಾಧ್ಯವೇ ಇಲ್ಲವೇ? ಪ್ರಾಥಮಿಕ ಶಾಲಾ ಶಿಕ್ಷಕ/ಕಿ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ತಡೆದು, ವರ್ಗಾವಣೆಯ ಸಮಸ್ಯೆ, ದೈಹಿಕ ಶಿಕ್ಷಕರು ಹಾಗೂ ಹಿಂದಿ ಶಿಕ್ಷಕರ ಸಮಸ್ಯೆ ಇತರೆ ಸಮಸ್ಯೆಗಳಿಗೆ ನ್ಯಾಯಸಮ್ಮತವಾದ ಪರಿಹಾರವನ್ನು ಒದಗಿಸಬೇಕಾಗಿ ಹೊಸಪೇಟೆಯ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಮಾನ್ಯ ಉಪನಿರ್ದೇಶಕರು, ವಿಜಯನಗರ ಜಿಲ್ಲೆ, ಇವರಿಗೆ ಚಳುವಳಿ ಪತ್ರವನ್ನು ರವಾನಿಸಲಾಯಿತು… ಸೇವಾಹಿರಿತನವನ್ನು ಹಾಗೂ ವಿದ್ಯಾರ್ಹತೆಯನ್ನು ಪರಿಗಣಿಸಿ ಮುಂಬಡ್ತಿ ನೀಡುವಂತೆ ಒತ್ತಾಯಿಸಲಾಯಿತು. ಮಕ್ಕಳಿಗೆ ಶೈಕ್ಷಣಿಕವಾಗಿ ತೊಂದರೆ ನೀಡದೇ ಭೋದನೆಯೊಂದಿಗೆ ಅಸಹಕಾರ ಚಳುವಳಿ ನಡೆಸುತ್ತಿರುವುದನ್ನು ಉಮಾದೇವಿಯವರು ಹೇಳಿದರು…ಜಿಲ್ಲಾಧ್ಯಕ್ಷೆ ಶ್ರೀಮತಿ ಉಮಾದೇವಿ ಮಾತನಾಡಿ , ನಮ್ಮ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯಗಳಿಗೆ ನ್ಯಾಯಸಮ್ಮತ ಪರಿಹಾರ ಒದಗಿಸಿ ಎಂದು ಸಮಸ್ತ ಶಿಕ್ಷಕ ಬಳಗದ ಪರವಾಗಿ ಕೇಳಿಕೊಂಡರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಅರುಂಧತಿ.ಎಸ್, ಗೌರವ ಅಧ್ಯಕ್ಷರಾದ ಶ್ರೀಮತಿ ಮಾಧವಿ, ಹೊಸಪೇಟೆ ತಾಲ್ಲೂಕು ಅಧ್ಯಕ್ಷೆ ಶ್ರೀಮತಿ ಹನುಮವ್ವ,ಪದಾಧಿಕಾರಿಗಳಾದ ಶ್ರೀಮತಿ ಮನೋಹರಿ, ಶ್ರೀಮತಿ ರೂಪ ಟಿಕಾರೆ, ಲಕ್ಷ್ಮಿ, ರೂಪ D.S ಇತರರು ಉಪಸ್ಥಿತರಿದ್ದರು.
ಹಾವೇರಿ ಅ.22. ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ರಾಜ್ಯ ಘಟಕ ( ರಿ ) ಧಾರವಾಡ, ಜಿಲ್ಲಾ ಘಟಕ ಹಾವೇರಿ, ರಟ್ಟೀಹಳ್ಳಿ ತಾಲ್ಲೂಕು ಘಟಕದ ವತಿಯಿಂದ .ರಾಜ್ಯ ಘಟಕದ ತೀರ್ಮಾನದಂತೆ, 6 ಮತ್ತು 7 ನೇ ತರಗತಿ ಬೋದನೆಗೆ ಸಂಬಂಧಿಸಿದ ಶಿಕ್ಷಕರ ವೈಯಕ್ತಿಕ ದಾಖಲೆ ನಿರ್ವಹಣೆ ಸ್ಥಗಿತಗೊಳಿಸುವ ಮೂಲಕ PST ಶಿಕ್ಷಕರ ಚಳುವಳಿ ಪ್ರಾರಂಭಿಸಿದ್ದಾರೆ. ಹಿರೇಕೆರೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.ತಾಲೂಕಿನ ಶಿಕ್ಷಣಾಧಿಕಾರಿಗಳು ಇಲಾಖಾ ಕಾರ್ಯದ ನಿಮಿತ್ತ ಹಾವೇರಿಗೆ ಹೋಗಿದ್ದರಿಂದ ಅವರ ಅನುಪಸ್ಥಿತಿಯಲ್ಲಿ ತಾಲೂಕಿನ ದೈಹಿಕ ಪರಿವೀಕ್ಷಕರಾದ, ಶ್ರೀ M. B. Makandar. ಸರ್ ರವರಿಗೆ ಸಲ್ಲಿಸಿದೆ ಎಂದು ತಾಲ್ಲೂಕಿನ ಅದ್ಯಕ್ಷರು ತಿಳಿಸಿದ್ದಾರೆ.ಹಾಗೂ ನಮ್ಮ ಸಂಘದ ವತಿಯಿಂದ, ತಾಲೂಕಿನ ಜಿಲ್ಲಾ ಪದಾಧಿಕಾರಿಗಳು, ತಾಲೂಕಿನ ಅಧ್ಯಕ್ಷರು, ಗೌರವಅಧ್ಯಕ್ಷರು, ಕಾರ್ಯದರ್ಶಿಗಳು, ಕೋಶಾಧ್ಯಕ್ಷರು, ಉಪಾಧ್ಯಕ್ಷರು, ಸಹಕಾರ್ಯದರ್ಶಿಗಳು, ಸಂಘಟನಾ ಕಾರ್ಯದರ್ಶಿಗಳು ಹಾಜರಿದ್ದು ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಧಾರವಾಡ ಅ.2 ರಾಜ್ಯ ಮಟ್ಟದ ನಲಿಕಲಿ ಶಿಕ್ಷಕರ ವರ್ಚ್ಯಯಲ್ ಸಂವಾದ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾದರೂ ಸಹಾ ನೂರಾರು ಶಿಕ್ಷಕ ಶಿಕ್ಷಕಿಯರಿಗೆ ಜಾಯಿನ್ ಆಗಲು ಅವಕಾಶ ಸಿಗದ ಕಾರಣ ನಿರಾಶೆ ಅನುಭವಿಸಬೇಕಾಯಿತು..ಹೌದು ನಿನ್ನೆ ಶನಿವಾರ ಸಂಜೆ 4 ಗಂಟೆಗೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವೆಬಿನಾರ್ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ರಾಜ್ಯದ ನಲಿಕಲಿ ತಜ್ಞ ರಂದೇ ಹೆಸರಾಗಿರುವ, ರಾಜ್ಯ ಸಂಪನ್ಮೂಲ ವ್ಯಕ್ತಿಗಳಿಗೆಯೇ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ರವೀಂದ್ರ.ಆರ್.ಡಿ. ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ಕಾರ್ಯಕ್ರಮ ಪ್ರಾರಂಭವಾದ ಹತ್ತಾರು ನಿಮಿಷದಲ್ಲಿ ರಾಜ್ಯಾದ್ಯಂತ 1000 ಶಿಕ್ಷಕ ಶಿಕ್ಷಕಿಯರು ಭಾಗವಹಿಸಿ ಮೈಕ್ರೋಸಾಫ್ಟ್ ಟೀಮ್ಸ್ ಆಪ್ಲಿಕೇಷನ್ ಲಿಮಿಟ್ ದಾಟಿದ ಕಾರಣ ಇತರ ನೂರಾರು ಶಿಕ್ಷಕರಿಗೆ ಭಾಗವಹಿಸಲು ಅಡಚಣೆ ಉಂಟಾಯಿತು.
ಸಂಘದ ಕೆಲವಾರು ತಾಂತ್ರಿಕ ಸಮಿತಿ ಸದಸ್ಯರಿಗು ಹಾಗೂ ಪದಾಧಿಕಾರಿಗಳಿಗೂ ಸಹಾ ಜಾಯಿನ್ ಆಗಲು ಅವಕಾಶ ಸಿಗದೇ ಪರಿತಪಿಸುವಂತಾಯಿತು. ರಾಜ್ಯದ ಮೂಲೆ ಮೂಲೆಯಿಂದ ಮೇಲಿಂದ ಮೇಲೆ ಕರೆ ಮಾಡಿ ಆಯೋಜಕರಿಗೆ ಮತ್ತೊಮ್ಮೆ ವೆಬಿನಾರ್ ಹಾಗೂ ಸಂವಾದ ಕಾರ್ಯಕ್ರಮ ಆಯೋಜಿಸಲೇಬೇಕೆಂಬ ಒತ್ತಾಯವನ್ನೂ ಸಹಾ ಮಾಡಿದ್ದಾರೆ. ರಾಜ್ಯದ ಕೋವಿಡ್ ಸಂಕಷ್ಟ ದಿನಗಳಲ್ಲಿ ನಲಕಲಿ ಮಕ್ಕಳಿಗೆ ಪರ್ಯಾಯ ಶೈಕ್ಷಣಿಕ ಯೋಜನೆ,ತರಗತಿ ನಿರ್ವಹಣೆ,ಮೌಲ್ಯಮಾಪನ ಹಾನಿರ್ವಹಣೆ, ನಿರ್ವಹಣೆಗಳನ್ನು ಮಾಡುವ ವಿಚಾರದಲ್ಲಿ ಹಲವಾರು ಗೊಂದಲಗಳಿಗೆ ರವೀಂದ್ರ ಸರ್ ರವರು ಉತ್ತಮ ಮಾರ್ಗದರ್ಶನ ನೀಡಿದರು,
ಶಿಕ್ಷಕರ ಪ್ರಶ್ನೆಗಳನ್ನು ಆಲಿಸಿ ಸೂಕ್ತ ಸಲಹೆ ಕೂಡ ನೀಡಿದ್ದಾರೆ. ವೆಬಿನಾರ್ ನ ವಿಶೇಷವೇನೆಂದರೆ ರಾಜ್ಯದ ವಿವಿಧ ಶಿಕ್ಷಣ ಅಧಿಕಾರಿಗಳು,ಡಯಟ್ ನೋಡಲ್ ಅಧಿಕಾರಿಗಳು, ಬ್ಲಾಕ್ ಸಂಪನ್ಮೂಲ ವ್ಯಕ್ತಿಗಳು ಸಹಾ ಜಾಯಿನ್ ಆಗಿದ್ದು ಯಶಸ್ವಿಗೆ ಕಾರಣವಾಯಿತು.
ನಮ್ಮ ಸಂಘದ ಆಹ್ವಾನಕ್ಕೆ ಒಪ್ಪಿ, ತಮ್ಮೆಲ್ಲ ಒತ್ತಡದ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಜ್ಯದ ಹಲವು ವಿಷಯಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿರುವ ಶ್ರೀಯುತ ರವೀಂದ್ರ.ಆರ್.ಡಿ ರವರಿಗೆ ಹಾಗೂ ಸಂಘಟನೆಗೆ ಜೊತೆಯಾಗಿ ಕೈಜೋಡಿಸಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಉತ್ತಮ ಸಲಹೆ ಮಾರ್ಗದರ್ಶನ ನೀಡಿದ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಅಧ್ಯಕ್ಷರಾದ ಶ್ರೀ ಮಹೇಶ್ ರವರಿಗೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘಟನೆಯು ವಿಶೇಷ ಧನ್ಯವಾದಗಳನ್ನು ಸಲ್ಲಿಸಿದೆ.
ರಾಜ್ಯದ ನಲಿಕಲಿ ಶಿಕ್ಷಕ ಶಿಕ್ಷಕಿಯರ ಒತ್ತಾಯದ ಮೇರೆಗೆ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಜ್ಯೋತಿರವರ ಕಾರ್ಯಕ್ರಮ ಆಯೋಜನೆ,ರಾಜ್ಯ ತಾಂತ್ರಿಕ ಸಮಿತಿಯ ಮುಖ್ಯಸ್ಥರಾದ ಭುವನೇಶ್ವರಿ ಯವರ ಅಪ್ಲಿಕೇಷನ್ ನಿರ್ವಹಣೆ, ತಾಂತ್ರಿಕ ಸಮಿತಿಯ ಸದಸ್ಯರಾದ ನಂದಿನಿಯಾದವ್ ರವರ ಮೀಡಿಯ ಪ್ರಕಟಣೆ, ಹಾವೇರಿಯ ರಾಜಶ್ರೀ ರವರ ಅದ್ಬುತ ನಿರೂಪಣೆ, ಬಹಳ ಅಚ್ಚುಕಟ್ಟಾಗಿ ನಿಬಾಯಿಸಿದ್ದು ಪ್ರಶಂಸನೀಯ. ಒಂದೇ ದಿನದಲ್ಲಿ ತುರ್ತಾಗಿ ಯೋಜನೆ ಮಾಡಿ ದಿನಾಂಕ ನಿಗಧಿ ಮಾಡಿ, ಪ್ರಚಾರ ಮಾಡಿ, ಹೆಚ್ಚು ಶಿಕ್ಷಕರ ಗಮನ ಸೆಳೆದು ಅತೀ ಹೆಚ್ಚು ಸಂಖ್ಯೆಯಲ್ಲಿ ಶಿಕ್ಷಕರು ಭಾಗವಹಿಸುವಂತೆ ಸಹಕಾರ ನೀಡಿದ ರಾಜ್ಯದ ಪದಾಧಿಕಾರಿಗಳಿಗೆ,ರಾಜ್ಯ ತಾಂತ್ರಿಕ ಸಮಿತಿಯ ಎಲ್ಲಾ ಸದಸ್ಯರಿಗೆ,ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಶಿಕ್ಷಕ ಶಿಕ್ಷಕಿಯರಿಗೆ ಹಾಗೂ ,ಸಹಕರಿಸಿದ ಎಲ್ಲರಿಗೂ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ರವರು ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.
ವಿಜಯನಗರ ಸೆ.26 ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ ಜಿಲ್ಲಾ ಘಟಕ ವಿಜಯನಗರ ಶನಿವಾರ ನಿನ್ನೆ ಮಧ್ಯಹ್ನ1-30 ನಿಮಿಷಕ್ಕೆ ಸಭೆ ಪ್ರಾರಂಭವಾಗಿ, ಕಾರ್ಯಕ್ರಮದಲ್ಲಿ ಶ್ರೀ ಮತಿ ರೇಶ್ಮಾ. ಕೆ.ಪ್ರಾರ್ಥನೆ ಸಲ್ಲಿಸಿದರು. ಶ್ರೀ ಮತಿ ರೂಪ.ಡಿ.ಕೆ.ಜಿಲ್ಲಾ ಸಂಘಟನಾ ಕಾಯ೯ದಶಿ೯ ಎಲ್ಲರನ್ನೂ ಸ್ವಾಗತಿಸಿದರು. ಎಲ್ಲಾ ತಾಲೂಕು ಮತ್ತು ಜಿಲ್ಲಾ ಪದಾಧಿಕಾರಿಗಳಿಂದ ಮಾತೆ ಸಾವಿತ್ರಿಬಾಯಿ ಫುಲೆ ಭಾವಚಿತ್ರಕ್ಕೆ ಪುಷ್ಪಾಚ೯ನೆ ಮಾಡಲಾಯಿತು. ಈ ಸಭೆಯ ಇಂದಿನ ಪ್ರಸ್ತಾವಿಕ ನುಡಿ ತಾಲೂಕು ಘಟಕ ಹೊಸಪೇಟೆಯ ಅಧ್ಯೆಕ್ಷೆಯಾದ ಶ್ರೀಮತಿ ಹನುಮಕ್ಕನವರು ನಡೆಸಿಕೊಟ್ಟರು.ವಿಜಯನಗರ ಜಿಲ್ಲೆಯ ತಾಂತ್ರಿಕ ಸಮಿತಿಯ ಪರಿಚಯ ಶ್ರೀಮತಿ ಡಾ. ಉಷರಾಣಿ ಹೊಸಪೇಟೆ ಪ್ರಧಾನಕಾಯ೯ದಶಿ೯ಯವರು ಪರಿಚಯಿಸಿದರು.ನಂತರ ಬಂದಂಥ ಎಲ್ಲಾ ಪದಾಧಿಕಾರಿಗಳ ಅನಿಸಿಕೆಗಳನ್ನು ಹಂಚಿಕೊಳ್ಳಲು ತಿಳಿಸಲಾಯಿತು. ವಿಜಯನಗರ ಜಿಲ್ಲಾ ಅಧ್ಯಕ್ಷರಾದ ಉಮಾದೇವಿ ಸಂಘದ ಚರ್ಚಾ ವಿಷಯವನ್ನು ಈ ಕೆಳಗಿನಂತೆ ತಿಳಿಸಿದರು.
ಜಿಲ್ಲಾ ಘಟಕದ ಉದ್ಘಾಟನ ಕಾಯ೯ಕ್ರಮದ ಬಗ್ಗೆ. 2.ಮಹಿಳಾ ಶಿಕ್ಷಕಿಯರ ಸದಸ್ಯತ್ವದ ರಷೀದಿ ಬಗ್ಗೆ ಮಾಹಿತಿ. 3.ಎಲ್ಲಾ ತಾಲೂಕುಗಳಲ್ಲಿ ತಾಂತ್ರಿಕ ಸಮೀತಿ ರಚನೆಯ ಬಗ್ಗೆ ಮಾಹಿತಿ. 4.ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆಯ ನಿಮಿತ್ಯ ವಿಡಿಯೋ ಮಾಡುವ ಬಗ್ಗೆ 5.ತಾಲೂಕು ಹಂತದಲ್ಲಿ ಸಂಘದ ಬ್ಯಾಂಕ್ ಖಾತೆ ತೆರೆಯುವ ಬಗ್ಗೆ ಮಾಹಿತಿ ಕೊಡಲಾಯಿತು. ಚಚೆ೯ಯಲ್ಲಿ ವಿಜಯನಗರ ಜಿಲ್ಲೆಯ ಎಲ್ಲಾ ತಾಲೂಕಿನ ಅಧ್ಯಕ್ಷರು ,ಪ್ರಧಾನಕಾಯ೯ದಶಿ೯ಗಳು , ಕೋಶಾಧ್ಯಕ್ಷರು ,ಗೌರವಾಧ್ಯಕ್ಷರು ,ಉಪಾಧ್ಯಕ್ಷರು ,ಸಂಘಟನಾಕಾಯ೯ದಶಿ೯ಗಳು ,ಸಹಕಾಯ೯ದಶಿ೯ಗಳು ಎಲ್ಲರೂ ಈ ಸಭೆಯಲ್ಲಿ ಉಪಸ್ಥಿತರಿದ್ದರು . ಈ ಎಲ್ಲಾ ಕಾಯ೯ಕ್ರಮದ ನಿರೂಪಣೆಯನ್ನು ವಿಜಯನಗರ ಜಿಲ್ಲೆಯ ಪ್ರಧಾನಕಾ೯ದಶಿ೯ಯಾದ ಶ್ರೀ ಮತಿ ಅರುಂಧತಿ ಇವರು ತುಂಬಾ ಚೆನ್ನಾಗಿ ನಡೆಸಿಕೊಟ್ಟರು.