ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ). ರಾಜ್ಯ ಘಟಕ-ಧಾರವಾಡ ಜಿಲ್ಲಾಘಟಕ : ವಿಜಯನಗರ.
ಅಕ್ಷರದವ್ವ ಮಾತೆ ಸಾವಿತ್ರಿಬಾಯಿ ಫುಲೆಯವರ ಜೀವನಾಧಾರಿತ ಚಲನಚಿತ್ರ ‘ರಾಷ್ಟ್ರ ಪ್ರಶಸ್ತಿ ವಿಜೇತೆ ಜನಪ್ರಿಯ ನಟಿ ತಾರಾ ಅವರು ಮಾತೇ ಸಾವಿತ್ರಿಬಾಯಿ ಫುಲೆ ಅವರ ಪಾತ್ರದಲ್ಲಿ ನಟಿಸಿರುವ. ಜನಪ್ರಿಯ ನಟ ಸುಚೇಂದ್ರ ಪ್ರಸಾದ ಅವರು ಜ್ಯೋತಿಬಾ ಫುಲೆ ಪಾತ್ರದಲ್ಲಿ ನಟಿಸಿರುವ, ಜನಪ್ರಿಯ ನಿರ್ದೇಶಕರಾದ ಶ್ರೀ ವಿಶಾಲರಾಜ್ ಅವರು ನಿರ್ದೇಶಿಸಿದ ಹಾಗೂ ಉತ್ತರ ಕರ್ನಾಟಕದ ಯಾದವಾಡದ ಶ್ರೀ ಬಸವರಾಜ ಭೂತಾಳ್ಳಿ ಅವರು ಪ್ರೊಡ್ಯೂಸರ ಆಗಿರುವ ಚಲನಚಿತ್ರ ಮಾತೆಯ ಹೆಸರಿನ ಸಾವಿತ್ರಿಬಾಯಿ ಫುಲೆ’ ಯು ಜುಲೈ 31ರಂದು ರಾಜ್ಯಾದ್ಯಂತ ಏಕಕಾಲದಲ್ಲಿ ಪ್ರದರ್ಶನಗೊಳ್ಳುತ್ತಿರುವುದು ನಿಜಕ್ಕೂ ಸಂತಸದ ವಿಷಯ. ಅದರಲ್ಲೂ ನಮ್ಮ ಸಂಘಟನೆಯ ಮೂಲಕ ತರೆಕಾಣುತ್ತಿರುವುದು ಇನ್ನಷ್ಟು ಹೆಮ್ಮೆಯ ಸಂಗತಿ.ವಿಜಯನಗರ ಜಿಲ್ಲೆಯ ಹೆಮ್ಮಯ ಜನನಾಯಕರು, ಜನಪ್ರಿಯ ಶಾಸಕರು. ಸಚಿವರು ಆದ ಸನ್ಮಾನ್ಯ ಶ್ರೀ ಆನಂದಸಿಂಗ್ ಸಾರ್ ಅವರ ಸುಪುತ್ರರಾದ ಶ್ರೀ ಸಿದ್ದಾಥ೯ಸಿಂಗ್ ಸಾರ್ ಅವರು ತಮ್ಮ ಕ್ಷೇತ್ರದಲ್ಲಿ 10ನೇ ತರಗತಿ ಓದುತ್ತಿರುವ ವಿದ್ಯಾಥಿ೯ / ವಿದ್ಯಾಥಿ೯ನಿಯರಿಗೆ ಮತ್ತು ಎಲ್ಲಾ ಶಿಕ್ಷಕ / ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ ಅವರ ಜೀವನಾಧಾರಿತ ಸಿನೆಮಾ ತೋರಿಸಲು ಅದರ ಖರ್ಚುವೆಚ್ಚ ಭರಿಸಲು ಒಪ್ಪಿಕೊಂಡಿದ್ದಾರೆ . ಅವರಿಗೆ ನಮ್ಮ ಸಂಘದ ಪರವಾಗಿ ಹೃದಯಪೂವ೯ ಧನ್ಯವಾದಗಳು.
ಸುಜಾತ ಎಸ್ ಹೇಮಂತ್ , ಉಪಾಧ್ಯಕ್ಷ ರು, ಸಾವಿತ್ರಿಬಾಯಿ ಫುಲೆ ಸಂಘ, ಶಿವಮೊಗ್ಗ.ಇವರು ಸರ್ಕಾರಿ ಪದವಿ ಪೂರ್ವ ಕಾಲೇಜು ಬಸವಾನಿಯ ಪ್ರೌಢಶಾಲಾ ವಿಭಾಗದಲ್ಲಿ ಸಹ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಇವರ “ಅನುಭಾವ” ಎಂಬ ಶೀರ್ಷಿಕೆಯ ಕವನಸಂಕಲನವನ್ನು ದಿನಾಂಕ26/06/22 ರ ಭಾನುವಾರ ಮಧ್ಯಾಹ್ನ ಎರಡು ಗಂಟೆಗೆ ಮಾನ್ಯ ಶ್ರೀಯುತ ಆರಗ ಜ್ಞಾನೇಂದ್ರ ರವರು ಗೃಹ ಸಚಿವರು ಕರ್ನಾಟಕ ಸರ್ಕಾರ ಇವರು ತಮ್ಮ ಅಮೃತ ಹಸ್ತದಿಂದ ಲೋಕಾರ್ಪಣೆ ಮಾಡಿದರು. ಹಾಗೂ ಅನುಭಾವ ಕೃತಿಗೆ ಶುಭ ಹಾರೈಸಿ ಮಾತನಾಡಿದರು. ಶ್ರೀಯುತ ಹರೀಶ್ ಕೆ ಎಸ್ ಹಿರಿಯ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜು ಬಸವಾನಿ ಇವರು ಕೃತಿಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಮಾರಂಭದಲ್ಲಿ ಪ್ರೌಢಶಾಲಾ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು, ಎಸ್ ಡಿ ಎಂ ಸಿ ಯು ಸರ್ವ ಸದಸ್ಯರು, ಗ್ರಾಮಪಂಚಾಯತಿಯ ಸರ್ವ ಸದಸ್ಯರು, ಗ್ರಾಮದ ಹಿರಿಯರು ಶಿಕ್ಷಣ ಪ್ರೇಮಿಗಳು ಪೋಷಕರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಗುಬ್ಬಿ-ಮೇ 21, 2022ರ ಶನಿವಾರದಂದು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ರಾಜ್ಯಘಟಕ-ಧಾರವಾಡ,ಜಿಲ್ಲಾಘಟಕ- ತುಮಕೂರು, ಗುಬ್ಬಿ ತಾಲೂಕು ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಾಲೂಕಿಗೆ ನೂತನವಾಗಿ ಆಗಮಿಸಿದ ಬಿಆರ್ಸಿಯವರಾದ ಶ್ರೀಯುತ ಮಧುಸೂದನ್ ಸರ್ ಹಾಗೂ ಅಕ್ಷರ ದಾಸೋಹದ ನಿರ್ದೇಶಕರಾದ ಶ್ರೀಯುತ ಜಗದೀಶ್ ಸರ್ ರವರಿಗೆ ಸ್ವಾಗತವನ್ನು ಕೋರಿ ಅಭಿನಂದಿಸಿದರು
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶ್ರೀಯುತ ಮಧುಸೂದನ್ ಸರ್ ರವರು ಸಂಘದ ಬಗ್ಗೆ ನನಗೆ ತಿಳಿದಿದೆ. ಸಂಘವು ರಚನೆಯಾಗಿ ಮೂರು ವರ್ಷಗಳಲ್ಲೇ ರಾಜ್ಯದಾದ್ಯಂತ ಉತ್ತಮ ಹೆಸರು ಗಳಿಸಿದೆ.. ಹೀಗೆಯೇ ಉತ್ತಮ ಕೆಲಸಗಳನ್ನು ಮಾಡುತ್ತಾ ಹೋದರೆ ಮಾತೃ ಸಂಘವನ್ನೆ ಹಿಂದಿಕ್ಕಿ ಸಾವಿತ್ರಿ ಬಾಯಿ ಫುಲೆ ಸಂಘವು ಮುನ್ನುಗ್ಗುವುದರಲ್ಲಿ ಅನುಮಾನವಿಲ್ಲ. ನಿಮ್ಮ ಸಂಘಕ್ಕೆ ನನ್ನ ಸಹಕಾರ ಯಾವಾಗಲೂ ಇರುತ್ತದೆ ಎಂದು ಹೇಳಿದರು..
ಶ್ರೀಯುತ ಜಗದೀಶ್ ಸರ್ ರವರು ಮಾತನಾಡಿ ನನಗೆ ಅಭಿನಂದನೆ ಸಲ್ಲಿಸಿದ ಸಾವಿತ್ರಿ ಬಾಯಿ ಫುಲೆ ಸಂಘಕ್ಕೆ ಧನ್ಯವಾದಗಳು ಸಂಘದ ಎಲ್ಲಾ ಕೆಲಸಗಳಿಗೂ ನನ್ನ ಸಹಕಾರ ಇರುತ್ತದೆ ನಿಮ್ಮೆಲ್ಲ ಕಾರ್ಯಕ್ರಮಗಳಿಗೂ ನಾನು ಹಾಜರಾಗುತ್ತೇನೆ ನಿಮ್ಮ ಸಂಘವು ರಾಜ್ಯಾದ್ಯಂತ ಉತ್ತಮ ಕೆಲಸಗಳನ್ನು ಮಾಡುತ್ತಿದೆ ನೀವು ಕೂಡ ನಮ್ಮ ಇಲಾಖಾ ಕೆಲಸಗಳಿಗೆ ಕೈ ಜೋಡಿಸಿ.. ಸಂಘವು ಇನ್ನೂ ಹೆಚ್ಚು ಉತ್ತಮ ಕೆಲಸಗಳನ್ನು ಮಾಡುತ್ತಾ ಮುನ್ನಡೆಯಲಿ ಎಂದು ಹರಸಿದರು..
ಈ ಸಂದರ್ಭದಲ್ಲಿ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಗುಬ್ಬಿ ತಾಲೂಕು ಘಟಕದ ಅಧ್ಯಕ್ಷರಾದ ಲಕ್ಷ್ಮಿ ಎಸ್ ವಿ ರವರು, ಕಾರ್ಯದರ್ಶಿಯವರಾದ ಅನಿತ ವಿ ಎಸ್ ರವರು, ಕೋಶಾಧ್ಯಕ್ಷರಾದ ಮಂಜಮ್ಮ ಬಿ ಎಸ್ ರವರು ಪದಾಧಿಕಾರಿಗಳಾದ ಶ್ರಿಮತಿ ಲೀಲಾವತಿ ಶ್ರಿಮತಿ ಸುಗುಣ ಶ್ರಿಮತಿ ತಿಮ್ಮಮ್ಮ ಶ್ರಿಮತಿ ಜಯಮ್ಮ ಶ್ರೀಮತಿ ಲತಾಮಣಿ ಕೆ ಎಸ್ ಶ್ರೀಮತಿ ಅರ್ಪಣಾ ಶ್ರೀಮತಿ ಪದ್ಮಾವತಿ ಶ್ರೀಮತಿ ವಿಶಾಲಾಕ್ಷಿ, ಮಾತೃ ಸಂಘದ ನಿರ್ದೇಶಕರಾದ ಶ್ರೀಯುತ ಕಾಂತರಾಜು ಸರ್ ರವರು ಹಾಗೂ ಸದಾ ನಮಗೆ ಬೆಂಬಲವಾಗಿರುವ ಶ್ರೀಯುತ ಸುರೇಶ್ ಸರ್ ಅವರು ಹಾಜರಿದ್ದರು,ಭಾಗವಹಿಸಿ ಸಹಕರಿಸಿದ ಎಲ್ಲರಿಗೂ ಶ್ರೀಮತಿ ಅನಿತ ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಶ್ರೀಮತಿ ಲಕ್ಷ್ಮೀ,ಎಸ್.ವಿ. ಅಧ್ಯಕ್ಷರು,ಗುಬ್ಬಿ ತಾಲ್ಲೂಕುಶ್ರೀಮತಿ ಅನಿತಾ,ವಿ.ಎಸ್.ಪ್ರಧಾನ ಕಾರ್ಯದರ್ಶಿ,ಗುಬ್ಬಿ.ತಾ.
ತುಮಕೂರು ಮೇ04-ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ರಾಜ್ಯಘಟಕ-ಧಾರವಾಡ, ಜಿಲ್ಲಾ- ಘಟಕ ತುಮಕೂರು ವತಿಯಿಂದ ಉಪನಿರ್ದೇಶಕರಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ತುಮಕೂರು(ದ) ಇಲ್ಲಿ ವಿಜ್ಞಾನ ವಿಷಯದ ಪರಿವೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀಮತಿ ಪ್ರತಿಭಾ ಆರ್.ರವರು ರವರು ತಹಸೀಲ್ದಾರರಾಗಿ ನೇಮಕಗೊಂಡಿದ್ದರಿಂದ ಅವರಿಗೆ ಅಭಿನಂದಿಸಿ ಗೌರವಿಸಲಾಯಿತು. ಶ್ರೀಮತಿ ಪ್ರತಿಭಾ ರವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಪ್ರಾರಂಭದಲ್ಲಿ ಸರ್ಕಾರಿ ಸೇವೆಗೆ ಸೇರಿ ನಂತರದಲ್ಲಿ ಪ್ರೌಢಶಾಲಾ ಶಿಕ್ಷಕಿಯಾಗಿ ಬಡ್ತಿಯಾಗಿ, ಸರ್ಕಾರಿ ಶಿಕ್ಷಕರ ತರಬೇತಿ ಕಾಲೇಜಿನ ಉಪನ್ಯಾಸಕರಾಗಿ ಪ್ರಸ್ತುತ ತುಮಕೂರಿನ ಉಪ ನಿರ್ದೇಶಕರ ಕಛೇರಿಯಲ್ಲಿ ವಿಜ್ಞಾನ ವಿಷಯದ ಪರಿವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೆಪಿಎಸ್ ಸಿ ನೇರ ನೇಮಕದಲ್ಲಿ ಇಂದು ತಹಸೀಲ್ದಾರರಾಗಿ ನೇಮಕಗೊಂಡು, ತುಮಕೂರು ಜಿಲ್ಲೆಯ ಮಹಿಳಾ ಸಾಧಕಿಯರಲ್ಲಿ ಒಬ್ಬರಾಗಿದ್ದಾರೆ.ಇದುಜಿಲ್ಲೆಗೆ ಹೆಮ್ಮೆ ತಂದಿರುವ ವಿಷಯವಾಗಿದೆ ಎಂದು ಜಿಲ್ಲಾಧ್ಯಕ್ಷರಾದ ಶ್ರೀಮತಿ ಅನಸೂಯಾದೇವಿ ಯವರು ಅಭಿಪ್ರಾಯಪಟ್ಟಿದ್ದಾರೆ, ಕಾರ್ಯದರ್ಶಿಯಾದ ಪ್ರವೀಣ ಕುಮಾರಿಯವರು ಇತರ ಪದಾಧಿಕಾರಿಗಳಾದ ಯಶೋದಮ್ಮನವರು, ಹೇಮಾವತಿ ರವರು, ಲತಾ ರವರು, ಸುಶೀಲಮ್ಮನವರು, ಚಂದ್ರಮ್ಮ ನವರು, ಗೀತಾರವರು, ಲೋಕಾಂಬ ರವರು ಎಲ್ಲರು ಭಾಗವಹಿಸಿ ಅವರಿಗೆ ಗೌರವ ಸಮರ್ಪಣೆ ಸಲ್ಲಿಸುವ ಮೂಲಕ ಬೀಳ್ಕೊಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾ ಎಪಿಸಿ ಅಧಿಕಾರಿಗಳಾದ ಶ್ರೀಮತಿ ಲಾವಣ್ಯ ಮೇಡಂ ರವರು ಹಾಗೂ ಶ್ರೀಮತಿ ತಾರಾಮಣಿ ಮೇಡಂ ರವರು ಸಹಾ ಬಾಗವಹಿಸಿ ಅವರನ್ನು ಪ್ರೀತಿಯಿಂದ ಅಭಿನಂದಿಸಿದ್ದಾರೆ.
ಕಾರ್ಯಕ್ರಮ ಕುರಿತು ಮಾತಾನಾಡಿದ ಶ್ರೀಮತಿ ಪ್ರತಿಭ ಆರ್ ರವರು ತಾವು ಬೆಳೆದು ಬಂದ ಹಾದಿಯನ್ನ ಹಾಗೂ ತನಗಾದ ಸಂತೋಷವನ್ನ ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ.ನನ್ನ ಸಾದನೆಗೆ ತಂದೆ ತಾಯಿಗಳ ಆಶೀರ್ವಾದ ಹಾಗೂ ಕುಟುಂಬದ ಸಂಪೂರ್ಣ ಸಹಕಾರ ಸಿಕ್ಕಿದ್ದು ಕಾರಣವಾಗಿದೆ.ಹಾಗೆಯೇ ಹಿತೈಷಿಗಳ ಪ್ರೀತಿಯು ಸಹ ಇದರಲ್ಲಿದೆ ಆದ್ದರಿಂದ ತಹಶೀಲ್ದಾರಾಗುವ ಕನಸು ಇಂದು ನನಸಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.ವಿದ್ಯಾಬ್ಯಾಸದಲ್ಲಿ ಉತ್ತಮ ಸಾಧನೆ ಮಾಡಿರುವ ಅವರು ಪದವಿಯಲ್ಲಿ ಪ್ರಥಮ ರ್ಯಾಂಕ್ ಪಡೆದವರಾಗಿದ್ದು,ಬಿ.ಎಡ್.ಎಂ.ಎಡ್.ಎಂ.ಫಿಲ್ ಸಹಾ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.ಕೆ.ಇ.ಎಸ್. ಮಾಡಿದ್ದ ಅವರು ಇಂದು ಕೆ.ಎ.ಎಸ್.ಕೂಡ ಮುಗಿಸಿ ತಹಶೀಲ್ದಾರರು/ ತಾಲ್ಲೂಕು ದಂಡಾಧಿಕಾರಿಯಾಗಿ ನೇಮಕಗೊಂಡು ಶಿಕ್ಷಕಿಯರಿಗೆ ಮಾದರಿಯಾಗಿದ್ದಾರೆ. ತುಮಕೂರು ಜಿಲ್ಲೆಗಷ್ಟೆ ಅಲ್ಲದೇ ಇಡೀ ರಾಜ್ಯಕ್ಕೆ ಒಂದು ಹೆಮ್ಮೆಯ ವಿಚಾರವಾಗಿದೆ. ರಾಜ್ಯದ ಸಮಸ್ತ ಮಹಿಳಾ ಶಿಕ್ಷಕಿಯರಿಗೆ ಅತೀವ ಸಂತಸ ತಂದಿದೆ.ಅವರ ಮುಂದಿನ ಆಡಳಿತದಲ್ಲಿ ಉತ್ತಮ ಸೇವೆ ಮಾಡಲಿ,ಅತ್ಯುತ್ತಮ ಅಧಿಕಾರಿಯಾಗಿ ಅವರ ಹೆಸರು ಮತ್ತಷ್ಟು ಎತ್ತರಕ್ಕೆ ಏರಲಿ ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ರವರು ಅಭಿನಂದಿಸಿ ಆಶಿಸಿದ್ದಾರೆ.
ಧಾರವಾಡ ಏ.20.ಸೇವಾವದಿಯಲ್ಲಿ ಒಮ್ಮೆ ಬಯಸಿದ ಜಿಲ್ಲೆಗೆ ವರ್ಗಾವಣೆ OTS Transfer(One time settlement transfer) ಕೋರಿ ಬೆಂಗಳೂರಲ್ಲಿ ನೂರಾರು ಶಿಕ್ಷಕ ಶಿಕ್ಷಕಿಯರು ಸೇರಿ ಹೋರಾಟನಡೆಸುತ್ತಿದ್ದಾರೆ.ಈ ಹೋರಾಟಕ್ಕೆ ನಮ್ಮ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವುಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದು ಡಾ. ಲತಾ. ಎಸ್.ಮುಳ್ಳೂರ ಸಂಸ್ಥಾಪಕರಾಜ್ಯಾಧ್ಯಕ್ಷರು ತಿಳಿಸಿದ್ದಾರೆ. ಹತ್ತು ಹದಿನೈದು ವರ್ಷಗಳ ಕಾಲ ನೂರಾರು ಕಿ.ಮೀ ದೂರದ ಜಿಲ್ಲೆಗಳಲ್ಲಿ ಸಂಸಾರ ಇದ್ದು ಇಲ್ಲದಂತೆ ಎಲ್ಲದರಿಂದ ದೂರವಾಗಿ ಒಬ್ಬಂಟಿಯಾಗಿ ಮನೆ ಮಾಡಿಕೊಂಡು ಶಿಕ್ಷಕ ವೃತ್ತಿ ಮಾಡುತ್ತಿರುವ ಸಹೋದರ ಸಹೋದರಿಯರುಮಾನಸಿಕ ನೆಮ್ಮದಿಯಿಲ್ಲದೇ ಖಿನ್ನತೆಗೊಳಗಾಗಿದ್ದಾರೆ. ಕುಟುಂಬಗಳ ನಡುವಿನ ಬಾಂದವ್ಯದಲ್ಲಿ ಬಿರುಕು ಉಂಟಾಗಿದೆ,ಅವರ ಸಂಸಾರದ ಜೀವನಗಳುಅಸ್ತವ್ಯಸ್ಥವಾಗಿದೆ,ಪತಿ ಒಂದು ಕಡೆ, ಪತ್ನಿ ಒಂದು ಕಡೆ, ಮಕ್ಕಳು ಒಂದುಕಡೆಹೀಗೇ ಎಲ್ಲರ ನಡುವಿನ ಸಂಬಂಧಗಳೇ ಕಡಿದುಹೋಗಿದೆ,ಇದರಿಂದಾಗಿ ನೆಮ್ಮದಿಯಿಲ್ಲದೇ ಕೆಲಸ,ಮಾಡುತ್ತಿರುವ ಅನೇಕ ಶಿಕ್ಷಕಶಿಕ್ಷಕಿಯರಿದ್ದಾರೆ,ಇಳಿವಯಸ್ಸಿನ ತಂದೆತಾಯಿಗಳನ್ನುಸಾಕಲು ಸಹಾ ಸಾದ್ಯವಾಗದ ಪರಿಸ್ಥಿತಿಗಳು ಸಹಾ ಶಿಕ್ಷಕರಿಗೆ ಇದೆಇದರಿಂದ ಪತಿಪತ್ನಿಗಳ ನಡುವೇ ವ್ಯಾಜ್ಯಗಳು, ವಿಚ್ಚೇದನ ಪ್ರಕರಣಗಳು ಹೆಚ್ಚಾಗಿದೆ, ಮಾನಸಿಕಖಿನ್ನತೆಗೊಳಗಾಗಿದ್ದಾರೆ.
ಮಹಿಳಾ ಶಿಕ್ಷಕಿಯರು ಒಬ್ಬಂಟಿಯಾಗಿ ಮನೆ ಮಾಡಿಕೊಂಡು ಭಯದಿಂದ ಬದುಕುವ ಸ್ಥಿತಿ ಇದೆ ,ಭಯದವಾತಾವರಣದಲ್ಲಿಯೇ ಶಾಲೆಗೆ ಹೋಗಿ ಕೆಲಸ ಮಾಡುತ್ತಿರುವ ಹಲವಾರು ಶಿಕ್ಷಕಿಯರಿದ್ದಾರೆ.ಇದರಿಂದಶಾಲೆಯಲ್ಲಿ ಶಿಕ್ಷಕ ಶಿಕ್ಷಕಿಯರು ನೆಮ್ಮದಿಯಾಗಿ ಪಾಠ ಕಲಿಸಲುಸಾದ್ಯವಾಗುತಿಲ್ಲ, ಈಗಾಗಲೇ ಈ ಸಂಬಂಧ ಹಲವಾರು ಬಾರಿಮನವಿಯನ್ನು ಸಲ್ಲಿಸಿ ಸರ್ಕಾರದ ಗಮನ ಸೆಳೆಯಲಾಗಿದೆ. ಇದನ್ನೆಲ್ಲ ಮನಗಂಡು ಘನ ಸರ್ಕಾರವು ಕೂಡಲೇ ಅಂತಹ ಶಿಕ್ಷಕ ಶಿಕ್ಷಕಿಯರನ್ನು ಸೇವೆಯಲ್ಲಿ ಒಂದುಬಾರಿ ಅವರು ಬಯಸಿದ ಜಿಲ್ಲೆಗೆ ಈ ರಜೆ ಅವಧಿಯಲ್ಲಿಯೇ ವರ್ಗಾವಣೆ ಮಾಡಿ ಬರುವ ಶೈಕ್ಷಣಿಕ ವರ್ಷದಿಂದಾದರೂ ನೆಮ್ಮದಿಯ ಜೀವನದೊಂದಿಗೆ ಶಾಲಾ ಕರ್ತವ್ಯ ನಿರ್ವಹಿಸಲು ಅನುಕೂಲ ಮಾಡಿಕೊಡಬೇಕೆಂದು ಈ ಮೂಲಕ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ಒತ್ತಾಯಿಸಿದೆ
ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ-ಧಾರವಾಡ, ಜಿಲ್ಲಾ ಘಟಕ ರಾಮನಗರ ಹಾಗೂ ತಾಲೂಕು ಘಟಕ ರಾಮನಗರದ ಸಂಯುಕ್ತ ಆಶ್ರಯದ ವತಿಯಿಂದ ಇಂದು ರಾಮನವಮಿಯ ಪ್ರಯುಕ್ತ ಮದ್ಯಾಹ್ನ 1 ಗಂಟೆಗೆ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯದ ಬಳಿ ಮಜ್ಜಿಗೆ ಪಾನಕವನ್ನು ಹಂಚುವ ಕಾರ್ಯಕ್ರಮವನ್ನು ಹಮ್ಮಿಕ್ಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ರಾಮನಗರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ರೀಟಾ ಮನುಗೌಡ ಅವರು ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ಗೌರಮ್ಮ ಅವರು, ರಾಮನಗರ ತಾಲೂಕು ಅಧ್ಯಕ್ಷರಾದ ಶ್ರೀಮತಿ ಸತ್ಯಭಾಮ ಅವರು ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಸಾಕಮ್ಮ ಅವರು ಉಪಸ್ಥಿತರಿದ್ದರು.ಸ
ಸಂಘಟನೆಗೆ ಸರ್ಕಾರದಿಂದ ನೊಂದಣಿ ಕಡ್ಡಾಯ ಹೊರತು ಸರ್ಕಾರದ ಮಾನ್ಯತೆ ಪ್ರಮುಖವಲ್ಲ,ಸರ್ಕಾರದ ಮಾನ್ಯತೆ ಇಲ್ಲದ ಕಾರಣಕ್ಕೆ ಸಂಘಟನೆಗಳು ಅನಧಿಕೃತ ಎಂದು ಭಾವಿಸುವುದು ತಪ್ಪು.
ಸಂಘಟನೆ ಎಂಬುದು ಯಾರೊಬ್ಬರ ಹಿಡಿತದಲ್ಲಿ ರಚಿಸಿಕೊಳ್ಳುವ ವ್ಯವಸ್ಥೆ ಅಲ್ಲ.. ಯಾರೊಬ್ಬ ವ್ಯಕ್ತಿಯ ಬೆಂಬಲದ ಅನುಮತಿಯ ಅವಶ್ಯಕತೆಯೂ ಇಲ್ಲ, ತಮ್ಮ ಒಳಿತಿಗಾಗಿ,ರಕ್ಷಣೆಗಾಗಿ ಸಮಾನರು ಎಲ್ಲರೂ ಒಗ್ಗೂಡಿ ಒಗ್ಗಟ್ಟು ಮೂಡಿಸಿಕೊಳ್ಳುವ ಒಂದು ಸ್ವಯಂನಿರ್ಧಾರಿತ ಸಮೂಹದ ವ್ಯವಸ್ಥೆಯಾಗಿದೆ.ಸಂಘ ವ್ಯವಸ್ಥೆಗೆ ಸಂವಿಧಾನ ಕಾನೂನಿನ ಅಡಿಯಲ್ಲಿಯೂ ಸಹಾ ಅವಕಾಶ ಕಲ್ಪಿಸಲಾಗಿದೆ.ಯಾವುದೇ ಸಂಘ ಸಂಸ್ಥೆಗಳು ಕರ್ನಾಟಕ ಸರ್ಕಾರ,ಸಹಕಾರ ಇಲಾಖೆಯಲ್ಲಿ ನೊಂದಣಿ ಮಾಡಿಕೊಂಡಿರುತ್ತವೆ. ಅಂತ ನೊಂದಣಿಯಾದ ಸಂಘಗಳೆಲ್ಲವೂ ಅಧಿಕೃತ ಸಂಘಗಳಾಗಿರುತ್ತವೆ.ಇಲಾಖೆಯ ನೊಂದಣಿ ಪ್ರಮಾಣ ಪತ್ರವೇ ಸಂಘದ ಅಧಿಕೃತವಾದ ದಾಖಲೆಯಾಗಿರುತ್ತದೆ. ಸಂಘದ ಸದಸ್ಯರೆಲ್ಲರೂ ಉತ್ತಮ ನಾಯಕತ್ವದ ಅಡಿಯಲ್ಲಿ ಸಾಮೂಹಿಕ ಒಗ್ಗಟ್ಟು ಪ್ರದರ್ಶಿಸುವ ಜೊತೆಯಲ್ಲಿ ಪ್ರಾಮಾಣಿಕವಾಗಿ,ನಿಸ್ವಾರ್ಥತೆಯಿಂದ,ಸೇವಾಮನೋಭಾವದಿ ಅತ್ಯುತ್ತಮ ಸಮಾಜನುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಾಗ ಅಂತಹ ಸಂಘಟನೆಗಳು ತಾನಾಗಿಯೇ ಬೆಳೆದು ನಿಲ್ಲುತ್ತವೆ. ಅಂತಹ ಸಂಘಟನೆಗಳು ಅಗತ್ಯವೆನಿಸಿದರೆ ಮುಂದಿನ ದಿನಗಳಲ್ಲಿ ಸರ್ಕಾರದಿಂದ ವಿಶೇಷ ಸ್ಥಾನಮಾನ ಪಡೆಯಲು ಅಂದರೆ ಮಾನ್ಯತೆ ಪಡೆದುಕೊಳ್ಳಲು ಮುಂದಾಗಲೂಬಹುದು.
ಸಂಘದ ಬೆಳವಣಿಗೆ ಸಹಿಸದ ಕೆಲವರು,ಅಧಿಕೃತ ಸಂಘ ರಚನೆಯ ನಿಯಮ ತಿಳಿಯದ ಅಥವಾ ಮಾನ್ಯತೆಗೂ ನೊಂದಣಿಗೂ ವ್ಯತ್ಯಾಸ ತಿಳಿಯದ ಕೆಲವರು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಅನಧಿಕೃತ ಸಂಘ,ಮಾನ್ಯತೆ ಇಲ್ಲ ಎಂದು ವಾಟ್ಸಪ್ ಜಾಲತಾಣದಲ್ಲಿ ಪ್ರಚಾರ ಮಾಡಿ ತಮ್ಮತನವನ್ನು,ತಮ್ಮ ಗೌರವವನ್ನು,ತಮ್ಮ ಮರ್ಯಾದೆ ಯನ್ನು ತಾವೇ ಕಳೆದುಕೊಳ್ಳುತ್ತಿರುವ ಸಂದೇಶಗಳನ್ನು ನಾವಿಂದು ನೋಡುತ್ತಿದ್ದೇವೆ. ಇಂದು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ರಾಜ್ಯಾದ್ಯಂತ ತೀವ್ರಗತಿಯಲ್ಲಿ ಬಲಾಡ್ಯವಾಗಿ ಸಮಸ್ತ ಶಿಕ್ಷಕಿಯರು ಒಂದಾಗಿ ಒಗ್ಗಟ್ಟಾಗಿ ರುವುದು ಅಂತಹ ಕಿಡಿಗೇಡಿಗಳನ್ನು ನಿದ್ದೆಗೆಡಿಸಿರಬಹುದು.ಮಹಿಳಾ ಶಿಕ್ಷಕಿಯರು ಗುರುತರ ಹುದ್ದೆಗಳಲ್ಲಿ ಗುರ್ತಿಸಿಕೊಂಡು ಇಂದು ಸರಿಸಮಾನ ವೇದಿಕೆ ಅಲಂಕರಿಸುತ್ತಿರುವುದು ಸಹಾ ಅಂತಹ ಕಿಡಿಗೇಡಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿರಬಹುದು. ಮುಂದಿನ ದಿನಗಳಲ್ಲಿ ತಮ್ಮ ಸ್ಥಾನಗಳಿಗೆ ಚ್ಯುತಿ ಬರಬಹುದೆಂಬ ಭಯವೂ ಇರಬಹುದು.
ಒಂದು ಸಂಘದ ಪ್ರತಿನಿಧಿಯಾಗಲು ಆ ಸಂಘದ ಸದಸ್ಯ ಶಿಕ್ಷಕಿಯರ ಮತಗಳ ಬಿಕ್ಷೆಯೇ ಕಾರಣ ಎಂಬುದನ್ನ ಮರೆತು ಶಿಕ್ಷಕಿಯರ ಬಗ್ಗೆ ಅಗೌರವದ,ಅಹಂಕಾರದ ಮಾತುಗಳಾಡುವವರು ಮತ್ತೆ ಮತಬಿಕ್ಷೆ ಕೇಳಲು ಶಿಕ್ಷಕಿಯರ ಬಳಿ ಬರಲೇಬೇಕೆಂಬ ಕಿಂಚಿತ್ತು ಯೋಚನೆ ಮಾಡದೆ ಇಂತಹ ಹೇಳಿಕೆ ನೀಡುತ್ತಿರುವುದು ಅವರೇ ಅವರ ಅವನತಿಗೆ ಬಾವಿ ತೋಡಿಕೊಂಡಂತಿದೆ.ಅಲ್ಪಾವಧಿ ಅಧಿಕಾರದ ಬೆದರಿಕೆ ಮಾತುಗಳು ಸಂಪೂರ್ಣ ಸೇವಾವಧಿಯಲ್ಲಿ ಮತಬಿಕ್ಷೆ ಹಾಕುವ ಶಿಕ್ಷಕಿಯರಿಗೆ ಎಂದಿಗೂ ಅವಶ್ಯಕವಿಲ್ಲ. ಸದಸ್ಯರುಗಳಿಂದ ಸಂಘಟನೆ ಹೊರತು,ಸಂಘದಿಂದ ಸದಸ್ಯರುಗಳಲ್ಲ ಎಂಬುದನ್ನು ಅವರು ಮರೆತಂತಿದೆ. ಸ್ವಾಭಿಮಾನಿ ಇರುವ ಮಹಿಳಾ ಶಿಕ್ಷಕಿಯರು ನಾವು, ಹೇಳಿದೆಲ್ಲವನ್ನು ಕೇಳಲು ನಾವು ಯಾರೂ ಮೂಡಾತ್ಮರಲ್ಲ,ಯಾವ ದಬ್ಬಾಳಿಕೆಗೂ ಬಗ್ಗುವವರಲ್ಲ, ಗೊಡ್ಡು ಬೆದರಿಕೆಗಳಿಗೆ ಬೆವರುವವರಲ್ಲ. ನಮ್ಮ ಸಂಘಟನೆಯ ಪ್ರಮುಖ ಉದ್ದೇಶವೇ ನಮ್ಮ ರಕ್ಷಣೆ, ನಮ್ಮ ಜವಾಬ್ದಾರಿ,ನಮ್ಮ ಸಂಘಟನೆ ಯಾವ ಪುರುಷ ವಿರೋಧಿ ಸಂಘಟನೆ ಅಲ್ಲ,ಎಲ್ಲರ ಸಹಕಾರ ಸಹಯೋಗದಿಂದ ಬೆಳೆಯುತ್ತಿರುವ ಸಂಘಟನೆಯಾಗಿದೆ. ಸಹಕರಿಸುವ ಎಲ್ಲಾ ಸಂಘಟನೆಗಳಿಗೂ ನಮ್ಮ ಸಹಕಾರ,ನಮ್ಮ ಬೆಂಬಲವಿದೆ.ಸಹಯೋಗದಿಂದ ನಡೆಯಲು ನಾವು ಸಿದ್ದರಿದ್ದೇವೆ ಆದರೆ ಸ್ವಾಭಿಮಾನಕ್ಕೆ ದಕ್ಕೆಯಾದರೆ ಸಹಿಸುವರು ನಾವಲ್ಲ,ನಮ್ಮ ಸಂಘ,ನಮ್ಮ ಹೆಮ್ಮೆ, ನಮ್ಮ ಸ್ವಾಭಿಮಾನ.