ಸಾವಿತ್ರಿಬಾಯಿ ಫುಲೆ ಚಲನಚಿತ್ರ- ಯಶಸ್ವಿ ಪ್ರದರ್ಶನ

ರಾಮನಗರ-ಜು.31 ಕರ್ನಾಟಕ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘ ರಾಜ್ಯ ಘಟಕ ಧಾರವಾಡ ಜಿಲ್ಲಾ ಘಟಕ ರಾಮನಗರ ದಿನಾಂಕ 31/7/22ರಂದು “ಶಾನ್” ಥಿಯೇಟರ್ ನಲ್ಲಿ “ಸಾವಿತ್ರಿ ಬಾಯಿ ಫುಲೆ” ಚಲನಚಿತ್ರದ ವಿಶೇಷ ಪ್ರದರ್ಶನ ಮಾಡಲಾಯಿತು. ಚಲನಚಿತ್ರ ವೀಕ್ಷಿಸಿದ ವೀಕ್ಷಕರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು.ಸಾವಿತ್ರಿ ಬಾಯಿ ಫುಲೆ ಯವರ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಸಮಾಜಮುಖಿ ಕಾರ್ಯಗಳನ್ನು ಮಾಡಿದಲ್ಲಿ ದೇಶದ ಪ್ರಗತಿ ಉತ್ತುಂಗ ಕ್ಕೇರುವುದರಲ್ಲಿ ಸಂಶಯವಿಲ್ಲ ಎಂದು ವ್ಯಕ್ತಪಡಿಸಿದರು. ಇಂತಹ ಒಂದು ಉತ್ತಮ ಚಲನಚಿತ್ರ ನೀಡಿದ ನಿರ್ದೇಶಕ ರಿಗೂ,ನಿರ್ಮಾಪಕರಿಗೂ, ಅಭಿನಯಿಸಿದ ಎಲ್ಲಾ ತಾರಾಬಳಗಕ್ಕೂ ಸಂಘದ‌ಪರವಾಗಿ ಧನ್ಯವಾದಗಳು. ಇದೇ ಒಂದು ಸಂದರ್ಭದಲ್ಲಿ ಜಿಲ್ಲೆಯ ನಿವೃತ್ತ ಶಿಕ್ಷಕಿಯರ ಗೆ ಸನ್ಮಾನ ಮಾಡಿ ಅಭಿನಂದಿಸಲಾಯಿತು.ಜೈ ಸಾವಿತ್ರಿ ಬಾಯಿ ಫುಲೆ ನಮ್ಮ ಸಂಘ ನಮ್ಮ ಹೆಮ್ಮೆ

ಜುಲೈ-31ಕ್ಕೆ ಸಾವಿತ್ರಿಬಾಯಿ ಫುಲೆ ಚಲನಚಿತ್ರ ವಿಶೇಷ ಪ್ರದರ್ಶನ

ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ,ರಾಜ್ಯಘಟಕ-ಧಾರವಾಡ ಜಿಲ್ಲಾಘಟಕ- ತುಮಕೂರು

ದಿನಾಂಕ 31.7. 2022 ರ ಭಾನುವಾರ ಬೆಳಗ್ಗೆ 8.30 ಗಂಟೆಗೆ ತುಮಕೂರು ನಗರದ ಎಂಜಿ ರಸ್ತೆಯಲ್ಲಿರುವ ಶ್ರೀಕೃಷ್ಣ ಚಿತ್ರಮಂದಿರದಲ್ಲಿ” ಭಾರತದ ಮೊದಲ ಮಹಿಳಾ ಶಿಕ್ಷಕಿ, ಅಕ್ಷರದವ್ವ ,ಮಾತೆ ಸಾವಿತ್ರಿಬಾಯಿ ಫುಲೆಯವರ ಜೀವನಾಧರಿತ “ಸಾವಿತ್ರಿಬಾಯಿ ಫುಲೆ” ಚಲನಚಿತ್ರದ ವಿಶೇಷ ಪ್ರದರ್ಶನವನ್ನು ಶ್ರೀ ಅಮೋಘ ಸಿದ್ದೇಶ್ವರ ಕ್ರಿಯೇಷನ್ಸ್ ರವರ ಸಹಭಾಗಿತ್ವದಲ್ಲಿ ಏರ್ಪಡಿಸಲಾಗಿರುತ್ತದೆ.ಸ್ವತಂತ್ರಪೂರ್ವದಲ್ಲಿ ಬ್ರಿಟಿಷ್ ಕಾಲದಲ್ಲಿದ್ದ ಮಹಿಳೆಯರ ಶೋಷಣೆಯ ಸ್ಥಿತಿಗತಿಗಳನ್ನ ಬಿಂಬಿಸುವಂತ,ಶೋಷಿತ,ಹಿಂದುಳಿದ ಸಮಾಜದ ದನಿಯಾಗಿದ್ದ ಮಾತೇ ಸಾವಿತ್ರಿಬಾಯಿ ಫುಲೆಯವರ ಸಮಗ್ರ ಜೀವನ ಚರಿತ್ರೆಯನ್ನು ಎಳೆಎಳೆಯಾಗಿ ಚಿತ್ರಿಸಿರುವ ಈ ಚಲನಚಿತ್ರ ಇದಾಗಿದ್ದು ಪ್ರತಿ ಮಹಿಳೆಯರು ನೋಡಲೇಬೇಕಾದ ಚಲನಚಿತ್ರ ವಾಗಿದೆ.ಮಾತೆಯ ಪಾತ್ರದಲ್ಲಿ ಪ್ರಸಿದ್ಧ ನಟಿ,ರಾಷ್ಟ್ರಪ್ರಶಸ್ತಿ ಪುರಸ್ಕೃತ ರಾದ ತಾರಾ ಅನುರಾಧರವರು , ಹಾಗೂ ಜ್ಯೋತಿಬಾ ಫುಲೆಯವರ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ರವರ ನಟಿಸಿದ್ದಾರೆ. ಪ್ರಸಿದ್ಧ ಪತ್ರಕರ್ತರು, ಸಾಹಿತಿಗಳಾದ,ಡಾ.ಸರಜೂ ಕಾಟ್ಕರ್ ಅವರ ಕಾದಂಬರಿ ಆಧಾರಿತ ಚಿತ್ರ ಇದಾಗಿದ್ದು,ವಿಶಾಲ್ ರಾಜ್ ರವರ ಅಮೋಘ ನಿರ್ದೇಶನದಲ್ಲಿ ಬಸವರಾಜ ಬೂತಾಳಿ ರವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.,ಸಾಮಾಜಿಕ, ಶೈಕ್ಷಣಿಕಸಾಹಿತ್ಯಿಕ, ಐತಿಹಾಸಿಕ,ವಿಚಾರವಂತರು ಎಲ್ಲರೂ ಈ ಚಲನಚಿತ್ರವನ್ನು ತಪ್ಪದೇ ವೀಕ್ಷಿಸಲು ಈ ಮೂಲಕ ಕೋರಲಾಗಿದೆ.

ಇಂದ:

ಶ್ರೀಮತಿ ಪಿ.ಎಸ್ ಅನುಸೂಯಾದೇವಿ,ಅಧ್ಯಕ್ಷರು. ಹಾಗೂ ರಾಜ್ಯ ಉಪಾಧ್ಯಕ್ಷರು
ಶ್ರೀಮತಿ ಪ್ರವೀಣಕುಮಾರಿ.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು

(ಸಂಘದ ಎಲ್ಲಾ ಜಿಲ್ಲಾ ಪದಾಧಿಕಾರಿಗಳ ಪರವಾಗಿ)

ಕರ್ನಾಟಕ ಸಾವಿತ್ರಿಬಾಯಿ‌ ಫುಲೆ ಶಿಕ್ಷಕಿಯರ ಸಂಘದ YOUTUBE CHANNEL

https://youtube.com/channel/UC5iITWHiMVcE7YblGh-l2wg
ಈ ಲಿಂಕ್ ಬಳಸಿ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ YOU TUBE ಚಾನೆಲ್ ಗೆ ತಪ್ಪದೇ ಎಲ್ಲರು subscribe ಬಟನ್ ಒತ್ತುವ ಮೂಲಕ SUBSCRIBERS ಆಗಿ,, ಸಪೋರ್ಟ್ ಮಾಡಿ, ಬೆಂಬಲ ನೀಡಿ.

https://youtube.com/channel/UC5iITWHiMVcE7YblGh-l2wg

Dr.Latha.S.Mullur, Founder and state President

ಶಿಕ್ಷಕಿಯರ ಸಂಘದ ವತಿಯಿಂದ ಶಿಕ್ಷಣ ಅಧಿಕಾರಿಗಳಿಗೆ ಬೀಳ್ಕೊಡುಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮ

ದಿನಾಂಕ: 16 ಜುಲೈ 2022 ರ ಶನಿವಾರದಂದು ಶ್ರೀ ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ವರ್ಗಾವಣೆಗೊಂಡ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀಯುತ ಸಿದ್ಧಲಿಂಗಸ್ವಾಮಿ ಸರ್ ರವರಿಗೆ ಹಾಗೂ ಅಕ್ಷರ ದಾಸೋಹ ನಿರ್ದೇಶಕರಾದ ಶ್ರೀಯುತ ಯೋಗಾನಂದ ಸರ್ ರವರಿಗೆ

ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ)
ರಾಜ್ಯಘಟಕ – ಧಾರವಾಡ
ಜಿಲ್ಲಾ ಘಟಕ -ತುಮಕೂರು. ತಾಲ್ಲೂಕು ಘಟಕ – ಗುಬ್ಬಿ ವತಿಯಿಂದ

ಬೀಳ್ಕೊಡುಗೆ ಸಮಾರಂಭ ಹಾಗೂ ಸಂಘದ ಸದಸ್ಯರ SSLC, PUC ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವು ವಿಶಾಲಾಕ್ಷಿ ಮೇಡಂ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಸದಸ್ಯರೆಲ್ಲರೂ ನಾಡಗೀತೆ ಹಾಡುವುದರ ಮೂಲಕ ನಾಡಿಗೊಂದು ನಮನ ಸಲ್ಲಿಸಿದರು. ಮಂಜುಳರವರು ಎಲ್ಲರನ್ನೂ ಸ್ವಾಗತಿಸಿದರು. ಎಲ್ಲಾ ಗಣ್ಯರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು..

ಸಂಘದ ಗುಬ್ಬಿ ತಾಲ್ಲೂಕು ಘಟಕದ ಅಧ್ಯಕ್ಷೆ ಎಸ್ ವಿ ಲಕ್ಷ್ಮಿರವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಕುಟುಂಬ ಸಮೇತರಾಗಿ ಬಂದು ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಯುತ ಯೋಗಾನಂದ ಸರ್ ರವರು ಪ್ರಾರಂಭದಿಂದಲೂ ಸಂಘವು ಉತ್ತಮ ಕೆಲಸಗಳನ್ನು ಮಾಡುತ್ತ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದೆ. ಮಕ್ಕಳನ್ನು ಗುರ್ತಿಸಿ ಸನ್ಮಾನಿಸಿದ್ದೂ ಕೂಡ ಶ್ಲಾಘನೀಯ ಎಂದರು. ಸಂಘವು ರಾಜ್ಯದಾದ್ಯಂತ ಪಸರಿಸಿದ್ದು ಈಗ ಮಹಾರಾಷ್ಟ್ರದಲ್ಲಿಯೂ ರಚನೆಯಾಗುತ್ತಿರುವ ಬಗ್ಗೆ ಮಾಹಿತಿ ತಿಳಿದು ಸಂತೋಷವಾಯಿತು. ಮುಂದೆ ದೇಶದಾದ್ಯಂತ ವ್ಯಾಪಿಸಿ ಉತ್ತಮ ಹೆಸರು ಪಡೆಯಲಿ ಎಂದು ಹಾರೈಸಿದರು.

ಶ್ರೀಯುತ ಸಿದ್ದಲಿಂಗಸ್ವಾಮಿ ಸರ್ ರವರು ಸಂಘದ ಕಾರ್ಯಚಟುವಟಿಕೆಗಳನ್ನು ಮೊದಲಿನಿಂದಲೂ ಗಮನಿಸುತ್ತಾ ಬಂದಿದ್ದೇನೆ.. ಸಾಮಾಜಿಕ ಮತ್ತು ಶೈಕ್ಷಣಕವಾಗಿ ಅನೇಕ ಕೆಲಸಗಳನ್ನು ಈ ಸಂಘವು ಮಾಡುತ್ತಿದೆ. ಸಾವಿತ್ರಿಬಾಯಿ ಫುಲೆ ರವರ ಚಲನಚಿತ್ರ ಬಿಡುಗಡೆ ಈ ಸಂಘದ ಮುಂದಾಳತ್ವದಲ್ಲಿ ಆಗುತ್ತಿರುವ ವಿಷಯ ಕೂಡ ಪ್ರಶಂಸನೀಯ. ಹೀಗೆಯೇ ಇನ್ನೂ ಹೆಚ್ಚು ಹೆಚ್ಚು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಂಘವು ಇನ್ನೂ ಉನ್ನತ ಸ್ಥಾನಕ್ಕೇರಲಿ.
ಎಲ್ಲಾ ಸಂಘಟನೆಗಳ ಗುರಿ ಒಂದೇ. ಎಲ್ಲರೂ ಸಾಮರಸ್ಯದಿಂದ ಕಾರ್ಯಪ್ರವೃತ್ತರಾಗಿ ಎಂದು ಕಿವಿಮಾತು ಹೇಳಿದರು.

ಸಂಘದ ಸದಸ್ಯರ SSLC ಮತ್ತು PUC ಮಕ್ಕಳಿಗೆ ಅವರ ಪೋಷಕರ ಸಹಿತ ಸನ್ಮಾನಿಸಲಾಯಿತು

ಲತಾಮಣಿ ಮೇಡಂ ಮತ್ತು ಅರ್ಪಣಾ ಮೇಡಂ ರವರ ಸ್ವರಚಿತ ಕವನ ವಾಚನ (ಸನ್ಮಾನಿತರನ್ನು ಕುರಿತು) ಅತ್ಯುತ್ತಮವಾಗಿತ್ತು.
ಪದ್ಮ ಮೇಡಂ ರವರು ಎಲ್ಲರಿಗೂ ವಂದನೆಗಳನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತೃ ಸಂಘದ ಮಾಜಿ ಅಧ್ಯಕ್ಷರು ಹಾಲಿ ನಿರ್ದೇಶಕರಾದ ಶ್ರೀ ದಯಾನಂದ ಸರಸ್ವತಿ ಸರ್, ನಿರ್ದೇಶಕರುಗಳಾದ ಶ್ರೀ ಶಶಿಧರ್,
ಶ್ರೀ ಸಿದ್ದಲಿಂಗೆಗೌಡರು,ಶ್ರೀಮತಿ N T ಲಕ್ಷ್ಮಿ,ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರವೀಣ ಕುಮಾರಿ.TN ತುಮಕೂರು ತಾ.ಘಟಕದ ಲತಾ ಮೇಡಂ,ಗುಬ್ಬಿ ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಅನಿತ ವಿ ಎಸ್, ಕೋಶಾಧ್ಯಕ್ಷರಾದ ಮಂಜಮ್ಮ, ಸಂಘಕ್ಕೆ ಸದಾ ಬೆನ್ನುಲುಬುಗಳಂತಿರುವ ಶ್ರೀ ಸುರೇಶಯ್ಯ M G, ಶ್ರೀ ರಂಗಸ್ವಾಮಿ, ಶ್ರೀ ರವೀಶ್, ತಾಲೂಕಿನ CRP ಗಳು, BRC ಮತ್ತು BEO ಕಛೇರಿಯವರು, ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜುಲೈ-8ಕ್ಕೆ ರಾಜ್ಯಾದ್ಯಂತ ಸಾವಿತ್ರಿಬಾಯಿ ಫುಲೆ ಚಲನಚಿತ್ರ ವೀಕ್ಷಣೆಗೆ ಚಾಲನೆ,ಉದ್ಘಾಟನಾ ಸಮಾರಂಭ & ಶೈಕ್ಷಣಿಕ ಕಾರ್ಯಾಗಾರ

*ಮಾತೆ *ಸಾವಿತ್ರಿಬಾಯಿ ಫುಲೆ ಚಲನಚಿತ್ರ (ಅಂತಾರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿ ಪಡೆದ ಚಲನಚಿತ್ರ) ರಾಜ್ಯಾದ್ಯಂತ ಬಿಡುಗಡೆ ಸಮಾರಂಭ* *,ಹಾಗೂ *ಶೈಕ್ಷಣಿಕ ಕಾರ್ಯಾಗಾರ*💐💐💐💐💐💐
*ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ರಾಜ್ಯ ಘಟಕ ಧಾರವಾಡ ಹಾಗೂ ಶ್ರೀ ಅಮೋಘ.ಸಿದ್ದೇಶ್ವರ ಕ್ರಿಯೇಷನ್ಸ್ ಅವರ ಸಹಯೋಗದಲ್ಲಿ ದಿ. 08.07.2022 ಶುಕ್ರವಾರ 12.00 ಗಂಟೆಗೆ ಆಲೂರ ವೆಂಕಟರಾವ ಸಭಾ ಭವನ ಧಾರವಾಡದಲ್ಲಿ ನೆರವೇರಲಿದೆ*

ಉದ್ಘಾಟಕರು

ಅಂದು ಸಮಾರಂಭದ ಉದ್ಘಾಟಕರಾಗಿ ಗೌರವಾನ್ವಿತ ಸನ್ಮಾನ್ಯ ಮಹಾಪೌರರಾದ ಶ್ರೀ ಈರೇಶ.ಅಂಚಟಗೇರಿ ಅವರು ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತೆ ಹಿರಿಯ ಕಲಾವಿದೆ ಜನಪ್ರಿಯ ನಟಿ ಶ್ರೀಮತಿ ತಾರಾ ಅನುರಾಧ ಅವರು .ಉದ್ಘಾಟಿಸಲಿದ್ದಾರೆ💐💐💐💐💐💐
ಮಾತೆ ಸಾವಿತ್ರಬಾಯಿ ಫುಲೆ ಭಾವಚಿತ್ರಕ್ಕೆ ಪುಷ್ಪಾರ್ಚನೆ

. *ಗೌರವಾನ್ವಿತ *ಡಾ.ಸರಜೂ ಕಾಟ್ಕರ ಸಾಹಿತಿಗಳು ಸಾವಿತ್ರಿಬಾಯಿ ಫುಲೆ ಚಲನಚಿತ್ರ ಕಾದಂಬರಿ ರಚಿಸಿದವರು.**ಗೌರವಾನ್ವಿತ ಶ್ರೀ ವಿಶಾಲ್ ರಾಜ್ ಜನಪ್ರಿಯ ನಿದೇ೯ಶಕರು ಸಾವಿತ್ರಿಬಾಯಿ ಫುಲೆ ಚಲನಚಿತ್ರ ಚಿತ್ರಕಥೆ ನಿದೇ೯ಶನ*

. ಗೌರವಾನ್ವಿತ ಶ್ರೀ ಬಸವರಾಜ. ಭೂತಾಳಿ ಸಾವಿತ್ರಿಬಾಯಿ ಫುಲೆ ಚಲನಚಿತ್ರದ ನಿಮಾ೯ಪಕರು.

ಶ್ರೀ ನಾಗರಾಜ ಆದವಾನಿ
ರಾಷ್ಟ್ರೀಯ ಪ್ರಶಸ್ತಿ ವಿಜೇತ ಕ್ಯಾಮರಾಮನ

ಸಮಾರಂಭದ ಅಧ್ಯಕ್ಷತೆ ಡಾ.ಲತಾ ಎಸ್ ಮುಳ್ಳೂರ ಸಂಸ್ಥಾಪಕ ರಾಜ್ಯಾಧ್ಯಕ್ಷರು ಕನಾ೯ಟಕ ಸಾವಿತ್ರಿಬಾಯಿ ಫುಲೆ. ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ
💐💐💐💐💐💐 . ಮಾತೇ ಸಾವಿತ್ರಿಬಾಯಿ ಫುಲೆ ಅವರ ಕುರಿತು ಉಪನ್ಯಾಸ

  • ಗೌರವಾನ್ವಿತ ಶ್ರೀಮತಿ ವಿದ್ಯಾ ನಾಡಗೇರ KES
    ಹಾಗೂ ಮುಖ್ಯಅತಿಥಿಗಳು ಸಾವ೯ಜನಿಕ ಸಂಪಕಾ೯ಧಿಕಾರಿಗಳು ಆಯುಕ್ತರ ಕಛೇರಿ ಧಾರವಾಡ . 💐💐💐💐💐💐💐💐*
    ವಿಶೇಷ ಆಹ್ವಾನಿತರು ಗೌರವಾನ್ವಿತ ಸನ್ಮಾನ್ಯ ಶ್ರೀಎಸ್,ವಿ,ಸಂಕನೂರ ಸದಸ್ಯರು ಕನಾ೯ಟಕ ವಿಧಾನಪರಿಷತ್ತು
    💐💐💐💐💐🎂
    . ಸನ್ಮಾನ್ಯ ಶ್ರೀ ಎಸ್,ಎಸ್ ಕೆಳದಿಮಠ ಉಪನಿರ್ದೇಶಕರು (ಆಡಳಿತ)ಸಾವ೯ಜನಿಕ ಶಿಕ್ಷಣ ಇಲಾಖೆ ಧಾರವಾಡ
    💐💐💐💐
    . ಗೌರವಾನ್ವಿತಸನ್ಮಾನ್ಯ ಶ್ರೀಮತಿ ಶೀವಲೀಲಾ ಕಳಸಣ್ಣನವರ KES ಮಾನ್ಯ ಸಹಾಯಕ ಯೋಜನಾಸಮನ್ವಯಾಧಿಕಾರಿಗಳು ಸಮಗ್ರ ಶಿಕ್ಷಣ ಕನಾ೯ಟಕ ಉಪನಿರ್ದೇಶಕ ರ ಕಾಯಾ೯ಲಯ ಸಾವ೯ಜನಿಕ ಶಿಕ್ಷಣ ಇಲಾಖೆ ಧಾರವಾಡ
    💐💐💐💐💐💐💐💐💐💐
    . ಗೌರವಾನ್ವಿತ ಸನ್ಮಾನ್ಯ. ಶ್ರೀಮತಿ ಪಾವ೯ತಿ ವಸ್ತ್ರದ KES ಹಿರಿಯ ಉಪನ್ಯಾಸಕರು ಡೈಟ್ ಧಾರವಾಡ
    💐💐💐💐💐💐💐💐
    . ಗೌರವಾನ್ವಿತ ಸನ್ಮಾನ್ ಶ್ರೀ ಗಿರೀಶ ಪದಕಿ ಮಾನ್ ಕ್ಷೇತ್ರ ಶಿಕ್ಷಣಾಧಿಕಾರಿಗ ಧಾರವಾಡ ಶಹರ.
    💐💐💐💐💐💐💐
    ಗೌರವಾನ್ವಿತ ಸನ್ಮಾನ್ಯ ಶ್ರೀಮತಿ ಲೂಸಿ ಕಾಶ್ಮೀರ ಸಾಲ್ಡಾನ ಮಹಾಪೋಷಕರು,ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆ ಧಾರವಾಡ
    💐💐💐💐💐💐💐. ಗೌರವಾನ್ವಿತ ಸನ್ಮಾನ್ಯ ಶ್ರೀ ಮಾತಾ೯ಂಡಪ್ಪ ಕತ್ತಿ ಸಾಹಿತಿಗಳು ಧಾರವಾಡ. ಪ್ರಧಾನ ಕಾಯ೯ದಶಿ೯ಗಳು ಪುಟ್ಟರಾಜ ಗವಾಯಿಗಳ ಕಲಾಪ್ರತಿಷ್ಟಾನ ಧಾರವಾಡ. 💐💐💐💐💐💐💐💐💐
    💐💐*
    ಸವ೯ರಿಗೂ ಸ್ವಾಗತ ಬಯಸುವವರು
    ಡಾ.ಲತಾ ಎಸ್ ಮುಳ್ಳೂಸಂಸ್ಥಾಪಕ ರಾಜ್ಯಾಧ್ಯಕ್ಷರು

ಶ್ರೀ ಬಸವರಾಜ ವಿ ಭೂತಾಳಿ . ನಿಮಾ೯ಪಕರು ಸಾವಿತ್ರಿಬಾಯಿ ಫುಲೆ ಚಲನಚಿತ್ರ ಹಾಗೂ ಅಧ್ಯಕ್ಷರು: ಶ್ರೀ ಅಮೋಘಸಿದ್ದೇಶ್ವರ ಕ್ರಿಯೇಷನ್ ಯಾದವಾಡ.

ರಾಜ್ಯಪದಾಧಿಕಾರಿಗಳು
ಶ್ರೀಮತಿ ಹೇಮಾ
ಕೊಡ್ಡಣನವರ ರಾಜ್ಯ ಹಿರಿಯ ಉಪಾಧ್ಯರು

ಶ್ರೀಮತಿ ಸಾರಿಕಾ ಗಂಗಾ ರಾಜ್ಯ HS. ಮುಖ್ಯಸ್ಥರು

ಶ್ರೀಮತಿ ಜ್ಯೋತಿ ಹೆಚ್
ರಾಜ್ಯ ಪ್ರಧಾನ ಕಾರ್ಯದರ್ಶಿ
💐ಶ್ರೀಮತಿ ಅನುಸೂಯದೇವಿ
ರಾಜ್ಯ ಉಪಾಧ್ಯಕ್ಷರು
💐ಶ್ರೀಮತಿ ಕಲ್ಪನ ರವೀಂದ್ರನಾಥ
ರಾಜ್ಯ ಸಂಘಟನಕಾರ್ಯದರ್ಶಿ
💐ಶ್ರೀಮತಿ ಲಕ್ಷ್ಮಿದೇವಮ್ಮ
ರಾಜ್ಯ ಉಪಾಧ್ಯಕ್ಷರು
💐ಶ್ರೀಮತಿ ಜಯಶ್ರೀ ಬೆಣ್ಣೆ
ರಾಜ್ಯ ಸಂಘಟನ ಕಾರ್ಯದರ್ಶಿ
💐ಶ್ರೀಮತಿ ಸರಸ್ವತಿ ಸಿ ಕೆ
ರಾಜ್ಯ ಸಹಕಾರ್ಯದರ್ಶಿ
💐ಶ್ರೀಮತಿ ರೂಪ ಕೆ
ರಾಜ್ಯ ಸಹ ಕಾರ್ಯದರ್ಶಿ
💐ಶ್ರೀಮತಿ ಶಮಾ ಪಾಟೀಲ್
ರಾಜ್ಯ ಸಹ ಕಾರ್ಯದರ್ಶಿ
💐ಶ್ರೀಮತಿ ಅಕ್ಕ ಮಹಾದೇವಿ ಉಪ್ಪಿನ
ರಾಜ್ಯ ಸಂಘಟನ ಕಾರ್ಯದರ್ಶಿ
💐ಶ್ರೀಮತಿ ರೇಷ್ಮಾ ಕೆ
ರಾಜ್ಯ ಸಂಘಟನ ಕಾರ್ಯದರ್ಶಿ
ಶ್ರೀಮತಿ ಲಲಿತಾ ಕ್ಯಾಸಣ್ಣನವರ
ರಾಜ್ಯ ಸಹ ಕಾರ್ಯದರ್ಶಿ
ಶ್ರೀಮತಿ ಮಮತಾ ರಾಣಿ ಕೋಲಾರ
ರಾಜ್ಯ ಸಹ ಕಾರ್ಯದರ್ಶಿ
ಶ್ರೀಮತಿ ಸುನಿತಾ ಕುಲಕರ್ಣಿ
ರಾಜ್ಯ ಸಹ ಕಾರ್ಯದರ್ಶಿ

ಶ್ರೀಮತಿ ಸರಸ್ವತಿ ಹೆಚ್ ವೈ
ರಾಜ್ಯ PST ಸಮಿತಿ ಮುಖ್ಯಸ್ಥರು
ಶ್ರೀಮತಿ ಸಾರಿಕಾ ಎಸ್ ಗಂಗಾ
ರಾಜ್ಯ ಫ್ರೌಢಶಾಲಾ ಸಮಿತಿ ಮುಖ್ಯಸ್ಥರು
💐ಶ್ರೀಮತಿ ರಾಜಶ್ರೀ
ರಾಜ್ಯ ಆಪ್ತ ಕಾರ್ಯದರ್ಶಿಗಳು
💐ಶ್ರೀಮತಿ ಮಮತಾ
ರಾಜ್ಯ ಮಾಹಿತಿ ಮುಖ್ಯಸ್ಥರು
💐ಶ್ರೀಮತಿ ಪ್ರವೀಣ
ರಾಜ್ಯ ಆಪ್ತ ಕಾರ್ಯದರ್ಶಿಗಳು

ಸರ್ವರಿಗೂ ಮತ್ತೊಮ್ಮೆ ಸ್ವಾಗತ

ವೈದ್ಯರ ದಿನಾಚರಣೆ ಪ್ರಯುಕ್ತ ವೈದ್ಯರಿಗೆ ಸನ್ಮಾನ

“ವೈದ್ಯ ನಾರಾಯಣೋ ಹರಿ”

ವೈದ್ಯರ ದಿನಾಚರಣೆ ಪ್ರಯುಕ್ತ ದಿನಾಂಕ 02-07-2 022 ಶನಿವಾರದಂದು ಪ್ರಾಥಮಿಕ ಆರೋಗ್ಯ ಕೇಂದ್ರ ಘಟಕ ಮಂಡಘಟ್ಟದಲ್ಲಿ ವೈದ್ಯರಿಗೆ ಸನ್ಮಾನ ಕಾರ್ಯಕ್ರಮ ಕರ್ನಾಟಕ ಸಾವಿತ್ರಬಾಯಿ ಫುಲೆ ಶಿಕ್ಷಕಿಯರ ಸಂಘ ಶಿವಮೊಗ್ಗ ಇವರಿಂದ ಸಮಾರಂಭ ನಡೆಸಲಾಯಿತು.

ಆಸ್ಪತ್ರೆಯ ವೈದ್ಯರಾದ ಶ್ರೀಯುತ ಸುರೇಶ್,l ಅಪ್ಪಾಜಿಗೌಡ ,ಹಾಗೂ ಸಿಬ್ಬಂದಿ ವರ್ಗದವರಾದ ಶ್ರೀಮತಿ ಪ್ರೇಮ, ಸುಮಾ, ರಂಗನಾಥ್, ಮುಂತಾದವರು *ಪಾಲ್ಗೊಂಡಿದ್ದರು. ಇವರಿಗೆ ಕರ್ನಾಟಕ *ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಮತಿ ರಾಧಾ ಪ್ರಭುಗೌಡ ಅವರು ವೈದ್ಯರ ದಿನಾಚರಣೆ ಪ್ರಯುಕ್ತ ಪ್ರತಿಯೊಬ್ಬರಿಗೂ ಗೌರವಿಸಿ ಸನ್ಮಾನಿಸಲಾಯಿತು.*
ಶ್ರೀಯುತ ಡಾಕ್ಟರ್ ಸುರೇಶ್ ಅಪ್ಪಾಜಿಗೌಡರವರು ಶಾಲೆಯ ಮಕ್ಕಳಿಗೆ ಯಾವ ಸಮಯದಲ್ಲೂ ಕೂಡ ಹೋದರು ಮಕ್ಕಳಿಗೆ ಪ್ರೀತಿಯಿಂದ ಕಾಳಜಿಯಿಂದ ಜವಾಬ್ದಾರಿಯುತವಾಗಿ ಚಿಕಿತ್ಸೆ ನೀಡಿ ಗುಣಪಡಿಸಿ ಕಳಿಸುತ್ತಾರೆ . ಇದು ನಮ್ಮೆಲ್ಲರ ಹೆಮ್ಮೆಯ ವಿಚಾರ ಅದೇ ರೀತಿ ಪ್ರೇಮ ರವರು ಕೂಡ ನಮ್ಮ ಶಾಲೆ ಎಲ್ಲಾ ಮಕ್ಕಳನ್ನು ಕೂಡ ಚಿಕಿತ್ಸೆ ಸಮಯದಲ್ಲಿ ಕಾಳಜಿ ರೂಪದಿಂದ ನೋಡಿಕೊಳ್ಳುತ್ತಾರೆ ಇಂತಹ ಡಾಕ್ಟರ್ ಹಾಗೂ ಸಿಬ್ಬಂದಿಯಿಂದ ನಮಗೆ ಮತ್ತು ನಮ್ಮ ಗ್ರಾಮಕ್ಕೆ ಹೆಮ್ಮೆಯ ವಿಚಾರ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ತಿಳಿಸುತ್ತೇವೆ…
ಈ ಕಾರ್ಯಕ್ರಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಉಪಾಧ್ಯಕ್ಷರಾದ ಶ್ರೀಮತಿ ವನಜಾಕ್ಷಿ ಶಶಿಕುಮಾರ್ ಹಾಗೂ ಶಿಕ್ಷಕಿಯರಾದ ಶ್ರೀಮತಿ ದಮಯಂತಿ ಮಂಜುಳಾ ದೇವಿಕ ಇನ್ನು ಮುಂತಾದವರು ಉಪಸ್ಥಿತರಿದ್ದರು

ವೈದ್ಯರಿಗೆ ಸನ್ಮಾನಿಸಿ ವೈದ್ಯರ ದಿನಾಚರಣೆ ಮಾಡಿದ ಶಿಕ್ಷಕಿಯರ ಸಂಘ

ವೈದ್ಯ ನಾರಾಯಣೋ ಹರಿ,ವೈದ್ಯರ ದಿನಾಚರಣೆಯ ಪ್ರಯುಕ್ತ ದಿ‌ನಾಂಕ 02-07-22 ಶನಿವಾರದಂದು ವೈದ್ಯರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಮಾಸಿಕ ಸಭೆಯನ್ನು ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘ ಜಿಲ್ಲಾಘಟಕ ರಾಮನಗರ ವತಿಯಿಂದ ನಡೆಸಲಾಯಿತು.ಈ ಕಾರ್ಯಕ್ರಮದಲ್ಲಿ ವೈದ್ಯರಾದ ಡಾ/ಜಮೀಲರವರು “ಆರೋಗ್ಯ” ದ ಬಗ್ಗೆ ಅತ್ಯುತ್ತಮ ವಾದ 4 ಟಿಪ್ಸ್ ತಿಳಿಸಿದರು.ಹಾಗೂ ದಿನಚರಿಯ ಆಹಾರ ಕ್ರಮಹೇಗಿರಬೇಕೆಂಬ ಬಗ್ಗೆಅತ್ಯಂತ ಸವಿಸ್ತಾರವಾಗಿ ತಿಳಿಸಿದರು.ವೈದ್ಯ ದಂಪತಿಗಳಾದ ಡಾ| ಮುಜಾಹಿದುಲ್ಲಾ ಶರೀಫ್ ಹಾಗೂ ಡಾ /ಸಯ್ಯಿದಾ ಬಾನು “ಆರೋಗ್ಯವೇ ಭಾಗ್ಯ” ಇಂದಿನ ಒತ್ತಡಸಹಿತ ಜೀವನದಲ್ಲಿ ನಾವು ಹೇಗೆ ಒತ್ತಡ ಮುಕ್ತರಾಗಿ ಆರೋಗ್ಯ ಕಾಪಾಡಿಕೊಳ್ಳಬಹುದೆಂಬುದರ ಬಗ್ಗೆ ಬಹಳ ಸರಳವಾಗಿ ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಡಾ.ರತ್ನಮ್ಮರೊಂದಿಗೆ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು , ಇದೇ ಸಂದರ್ಭದಲ್ಲಿ ಜುಲೈ31 ರಂದು ರಾಜ್ಯದಾದ್ಯಂತ ಬಿಡುಗಡೆಗೆ ಸಿದ್ದವಾಗಿರುವ ಮಾತೆ ಸಾವಿತ್ರಿ ಫುಲೆಯ ಚಿತ್ರದ ಟಿಕೆಟ್ ಗಳನ್ನು ಅಧ್ಯಕ್ಷರು, ಕಾರ್ಯದರ್ಶಿ ಗಳಿಗೆ ವಿತರಿಸಲಾಯಿತು ಈ ಸಂದರ್ಭದಲ್ಲಿ ಹಾಜರಿದ್ದು ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಪ್ರತಿಯೂಬ್ಬ ಪದಾದಿಕಾರಿಗಳಿಗೆ ಹಾಗೂ ವೈದ್ಯರಿಗೆ ಹೃದಯ ಸ್ಪರ್ಶಿ ಅಭಿನಂದನೆಗಳನ್ನು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧ್ಯಕ್ಷರು ತಿಳಿಸಿದ್ದಾರೆ. ನಮ್ಮ ಸಂಘ ನಮ್ಮ ಹೆಮ್ಮೆ