ಜಿಲ್ಲಾ ಮಟ್ಟದ ಮಾತೇ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ ಮತ್ತು ಶೈಕ್ಷಣಿಕ ಕಾರ್ಯಾಗಾರ(ಕಾನೂನು ಅರಿವು ಮತ್ತು ನೆರವು)

ಶಿರಾ.ಜ.23. ಮಧುಗಿರಿ ಶೈ ಜಿಲ್ಲೆಯ ಜಿಲ್ಲಾ ಮಟ್ಟದ ಮಾತೇ ಸಾವಿತ್ರಿಬಾಯಿ ಫುಲೆ ರವರ ಜನ್ಮದಿನಾಚರಣೆ ಮತ್ತು ಶೈಕ್ಷಣಿಕ ಕಾರ್ಯಾಗಾರವು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ,ರಾಜ್ಯಘಟಕ-ಧಾರವಾಡ, ಜಿಲ್ಲಾಘಟಕ ಮಧುಗಿರಿ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾ, ತುಮಕೂರು ಜಿಲ್ಲೆ ಸಹಯೋಗದಲ್ಲಿ ಇಂದು ದಿನಾಂಕ 23-01-2024 ಮಂಗಳವಾರ ಬೆ.10am ಕ್ಕೆ ಶಿರಾ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ

ಈ ಕಾರ್ಯಕ್ರಮವು ಡಾ. ಶ್ರೀ ಶ್ರೀ ಶ್ರೀ ಹನುಮಂತನಾಥ ಸ್ವಾಮೀಜಿ ಯವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿದ್ದು, ಕಾರ್ಯಕ್ರಮವನ್ನು ತುಮಕೂರು ಜಿಲ್ಲೆಯ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀಮತಿ ನೂರುನ್ನೀಸ ರವರು ಉದ್ಘಾಟನೆ ಮಾಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ DDPI ರವರಾದ ಸನ್ಮಾನ್ಯ ಶ್ರೀ ಮಂಜುನಾಥ ಸರ್ ರವರು ಭಾಗವಹಿಸಲಿದ್ದಾರೆ
ಹಿರಿಯ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀಮತಿ ನೂರುನ್ನೀಸ ಮೇಡಂ ರವರು ಕಾರ್ಯಾಗಾರದಲ್ಲಿ ಕಾನೂನು ಅರಿವು ಮೂಡಿಸಲಿದ್ದಾರೆ
ಗೌರವ ಅತಿಥಿಗಳಾಗಿ ಮಧುಗಿರಿ ತಾಲ್ಲೂಕಿನ BEO ರವರಾದ ಸನ್ಮಾನ್ಯ ಶ್ರೀ K.N ಹನುಮಂತರಾಯಪ್ಪ ಸರ್, ಶಿರಾ ತಾಲ್ಲೂಕಿನ BEO ರವರಾದ ಸನ್ಮಾನ್ಯ ಶ್ರೀ ಕೃಷ್ಣಪ್ಪ ಸರ್, ಕೊರಟಗೆರೆ ತಾಲ್ಲೂಕಿನ BEO ರವರಾದ ಸನ್ಮಾನ್ಯ ಶ್ರೀ ನಟರಾಜು ಸರ್, ಪಾವಗಡ ತಾಲ್ಲೂಕಿನ BEO ರವರಾದ ಸನ್ಮಾನ್ಯ ಶ್ರೀಮತಿ ಇಂದ್ರಾಣಮ್ಮನವರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ
ಅಂತೆಯೇ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ತಾಲ್ಲೂಕುಗಳ ನೌಕರರ ಮತ್ತು ಶಿಕ್ಷಕರ ಎಲ್ಲಾ ಸಂಘಟನೆಗಳ ಪದಾಧಿಕಾರಿಗಳು ಬಾಗಿಯಾಗಲಿದ್ದಾರೆ. ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಲು, ಮಾತೇ ಸಾವಿತ್ರಿ ಬಾಯಿ ಫುಲೆರವರನ್ನು ಸ್ಮರಿಸಲು ಹಾಗೂ ಶೈಕ್ಷಣಿಕ ಕಾರ್ಯಾಗಾರದ ಸದುಪಯೋಗ ಪಡಿಸಿಕೊಳ್ಳಲು ಕಾರ್ಯಕ್ರಮಕ್ಕೆ ಭಾಗವಹಿಸುವ ಶಿಕ್ಷಕಿಯರಿಗೆ ಸನ್ಮಾನ್ಯ ಜಿಲ್ಲಾ ಉಪನಿರ್ದೇಶಕರು OOD ಸೌಲಭ್ಯವನ್ನು ಒದಗಿಸಿದ್ದಾರೆ. ತಪ್ಪದೇ ಎಲ್ಲರು ಕಾರ್ಯಕ್ರಮದಲ್ಲಿ ಬಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದೆ

ಸ್ಥಳ: ಅಂಬೇಡ್ಕರ್ ಭವನ, ಸಪ್ತಗಿರಿ ಟಾಕೀಸ್ ಮುಂಭಾಗ, ಅಂಬೇಡ್ಕರ್ ಭವನ,ಶಿರಾ
ದಿನಾಂಕ:23:01:2024ಮಂಗಳವಾರ ಸಮಯ:10:00am

ಇಂದ:

ಜಿಲ್ಲಾ ಮತ್ತು ಎಲ್ಲಾ ತಾಲ್ಲೂಕುಗಳ ಅಧ್ಯಕ್ಷರು,ಕಾರ್ಯದರ್ಶಿಗಳು ಹಾಗೂ ಎಲ್ಲಾ ಪದಾಧಿಕಾರಿಗಳು
ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ-ಧಾರವಾಡ ಜಿಲ್ಲಾಘಟಕ ಮಧುಗಿರಿ

ಸಂಘದ ಸಹಾಯವಾಣಿ ಮತ್ತು ವೆಬ್ಸೈಟ್ URLs ಬಿಡುಗಡೆ

ಧಾರವಾಡ.ಜ.22 ಇಂದು ಧಾರವಾಡ ಶಹರದಲ್ಲಿನ ಡಾ.ಪಾಟೀಲ್ ಪುಟ್ಟಪ್ಪರವರ ಸಭಾಭವನದಲ್ಲಿ ನಡೆದ ಮಾತೇ ಸಾವಿತ್ರಿಬಾಯಿ ಫುಲೆರವರ ಜನ್ಮದಿನಾಚರಣೆ ಹಾಗೂ ಶೈಕ್ಷಣಿಕ ಕಾರ್ಯಾಗಾರ ಸಮಾರಂಭವನ್ನು ಉದ್ಘಾಟನೆ ಮಾಡಿದ ವಿಧಾನಪರಿಷತ್ ಸಭಾಪತಿಗಳಾದ ಗೌರವಾನ್ವಿತ ಸನ್ಮಾನ್ಯ ಶ್ರೀ ಬಸವರಾಜ ಹೊರಟ್ಟಿ ರವರು ಹಾಗೂ ಅವರ ಜೊತೆಯಾಗಿ ಸಾವಿತ್ರಿಬಾಯಿ ಫುಲೆ ಚಲನಚಿತ್ರದ ನಿರ್ಮಾಕರಾದ ಶ್ರೀ ಬಸವರಾಜ ಭೂತಾಳಿರವರು ಹಾಗೂ ವೇದಿಕೆಯ ಗಣ್ಯರೆಲ್ಲರೂ ಸಾಮೂಹಿಕವಾಗಿ ಸಂಘದ ಸಹಾಯವಾಣಿ ಮತ್ತು ವೆಬ್ಸೈಟ್ URLs ಬಿಡುಗಡೆ ಮಾಡಿದರು.

ಇದು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಮತ್ತೊಂದು ಬೆಳವಣಿಗೆಯ ಹೆಜ್ಜೆಯಾಗಿದೆ.

ಇದರಿಂದ ರಾಷ್ಟ್ರದ ಮತ್ತು ರಾಜ್ಯದ ಪ್ರತೀ ಶಿಕ್ಷಕಿಯರಿಗೆ ಸಂಘದ ಚಟುವಟಿಕೆಗಳ ಮಾಹಿತಿ ವೆಬ್ಸೈಟ್ ನಲ್ಲಿ ಲಬ್ಯವಾಗಲಿದೆ.ಹಾಗೂ ಶಿಕ್ಷಕಿಯರ ಕುಂದುಕೊರತೆಗಳಿಗಾಗಿ ಸಹಾಯವಾಣಿಯನ್ನು ನಿಗದಿತ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ.

Helpline – 8904772928

Website URLs:- Phuleteachers. In

ಮಾತೇ ಸಾವಿತ್ರಿಬಾಯಿ ಫುಲೆ ಜನ್ಮಜಯಂತಿ ಆಚರಣೆಗೆ ತಯ್ಯಾರಿ

ಧಾರವಾಡ ಜ.20 ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ಜಿಲ್ಲಾಘಟಕ- ಧಾರವಾಡ ವತಿಯಿಂದ ಜನವರಿ 22 ರಂದು ಬೆ.10:30 ಗಂಟೆಗೆ ಧಾರವಾಡ ಶಹರದ ವಿದ್ಯಾವರ್ಧಕ ಸಂಘ,ಡಾ. ಪಾಟೀಲ್ ಪುಟ್ಟಪ್ಪ ಸಭಾ ಭವನದಲ್ಲಿ ಮಾತೇ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ ಹಾಗೂ ಶೈಕ್ಷಣಿಕ ಕಾರ್ಯಾಗಾರಗಳನ್ನು ಹಮ್ಮಿಕೊಂಡಿದೆ.ಈ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸಭಾಪತಿಗಳಾದ ಗೌರವಾನ್ವಿತ ಸನ್ಮಾನ್ಯ ಬಸವರಾಜ ಹೊರಟ್ಟಿ ರವರು ಉದ್ಘಾಟಿಸಲಿದ್ದು,ವಿಶೇಷ ಆಹ್ವಾನಿತರಾಗಿ ಗೌರವಾನ್ವಿತ ಶ್ರೀ ಪರಶುರಾಮ.ಎಫ್.ದೊಡ್ಡಮನಿ ,ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಧಾರವಾಡ ರವರು‌ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ರವರು ವಹಿಸಲಿದ್ದು,ಕಾರ್ಯಕ್ರಮದಲ್ಲಿ ಪೋಕ್ಸೊ ಕಾಯಿದೆ ಮತ್ತು ಆಧುನಿಕ ಜಗತ್ತಿನಲ್ಲಿ ಮಹಿಳೆಯ ಪಾತ್ರ, ಹಾಗೂ ಜೀವನ ಕೌಶಲಗಳು ಮತ್ತು ಮಾನವೀಯ ಮೌಲ್ಯಗಳು ಈ ವಿಷಯಗಳ ಕುರಿತಂತೆ ಶೈಕ್ಷಣಿಕ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರತೀವರ್ಷ ಸಂಘಟನೆಯಿಂದ ಕೊಡಮಾಡುವ ಏಕೈಕ ಅತ್ಯುನ್ನತ ರಾಜ್ಯ ಪ್ರಶಸ್ತಿಯಾದ ” ಮಾತೇ ಅಕ್ಷರದವ್ವ ರಾಜ್ಯ ಪ್ರಶಸ್ತಿಯನ್ಮು ಈ ಸಾಲಿಗೆ ಶಿಕ್ಷಣತಾಯಿ ಲೂಸಿ ಸಾಲ್ಡಾನ ರವರಿಗೆ ನೀಡಲಾಗುತ್ತಿದೆ. ಅಲ್ಲದೇ ನಮ್ಮ ಸಂಘಟನೆ ಸಹಾಯವಾಣಿ ಸಂಖ್ಯೆ ಹಾಗೂ ವೆಬ್ಸೈಟ್ URLs ಬಿಡುಗಡೆ ಮಾಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾಜ್ಯ ಪ್ರಶಸ್ತಿ ವಿಜೇತ ಸಾವಿತ್ರಿಬಾಯಿ ಫುಲೆ ಚಲನಚಿತ್ರದ ನಿರ್ಮಾಪಕರಾದ ಶ್ರೀ ಬಸವರಾಜ ಭೂತಾಳಿ ರವರು, ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರಾದ (ಆಡಳಿತ) ಶ್ರೀ ಎಸ್ ಎಸ್ ಕೆಳದಿಮಠ ರವರು ಹಾಗೂ ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರಾದ (ಅಭಿವೃದ್ದಿ)  ಶ್ರೀಮತಿ ಜಯಶ್ರೀ ಕಾಳೇಕರ್ ರವರು ಹಾಗೂ ಇತರೆ ಗಣ್ಯಮಾನ್ಯರುಗಳು ಉಪಸ್ಥಿತರಿದ್ದು ಎಲ್ಲಾ ತಾಲ್ಲೂಕಿನ ಕ್ಷೇತ್ರಶಿಕ್ಷಣಾಧಿಕಾರಿಗಳು,ಇತರೆ ಶಿಕ್ಷಣ ಅಧಿಕಾರಿಗಳು,ಸಂಘಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಭಾಗವಹಿಸಲು ಧಾರವಾಡ ಜಿಲ್ಲೆಯ ಶಾಲಾ ಶಿಕ್ಷಕಿಯರಿಗೆ ಒಒಡಿ ಸೌಲಭ್ಯ ವಿದ್ದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಜಿಲ್ಲಾ ಹಾಗೂ ಎಲ್ಲಾ ಪದಾಧಿಕಾರಿಗಳ ಪರವಾಗಿ ಜಿಲ್ಲಾಘಟಕದ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ರಾಥೋಡ್ ರವರು ಮನವಿ ಮಾಡಿದ್ದಾರೆ.

ಶಿಕ್ಷಕ-ಶಿಕ್ಷಕಿಯರಿಗೆ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಿದರೆ ಅದುವೇ‌ ನನಗೆ ಸಿಕ್ಕ ಸನ್ಮಾನ ಡಾ.ಲತಾ.ಎಸ್.ಮುಳ್ಳೂರ

ಧಾರವಾಡ ಶಹರದ ಪ್ರಾಥಮಿಕ ಶಾಲಾ‌ ಶಿಕ್ಷಕರ ಪತ್ತು ಬೆಳೆಸುವ ಸಹಕಾರಿ ಸಂಘ ಇದರ ಆಡಳಿತ ಮಂಡಳಿಯ ಚುನಾವಣೆ‌ಯಲ್ಲಿ‌ ಶ್ರೀ ಫೀರೋಜ ಗುಡೆನಕಟ್ಟಿ ಸರ ನೇತೃತ್ವದಲ್ಲಿ ಹಾಗೂ ಶ್ರೀ M.R. ಕಬ್ಬೇರ ಸರ್ ನೇತ್ರತ್ವದ ಸಮಾನ ಮನಸ್ಕರ ತಂಡ
ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ರವರ ಮನೆಗೆ ತೆರಳಿ ಚುನಾವಣೆಯಲ್ಲಿ ಬಹಿರಂಗವಾಗಿ ಬೆಂಬಲಿಸಿದ ಅವರಿಗೆ ಮತ್ತು ಅವರ ಸಂಘಟನೆಯ ಬಳಗಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು.
ಬಳಗದ ಪರವಾಗಿ ಅವರನ್ನು ಸನ್ಮಾನಿಸಲು ಮುಂದಾದಾಗ ಚುನಾವಣೆ ಯಲ್ಲಿ ಶಿಕ್ಷಕರಿಗೆ ನೀಡಿದ ಎಲ್ಲ ಆಶ್ವಾಸನೆಗಳನ್ನು ಈಡೇರಿಸಿದರೆ ಅದುವೆ‌ ನನಗೆ‌ ನಿಮ್ಮಿಂದ ಸಿಕ್ಕ‌ಬಹುದಾದ‌ ಬಹುದೊಡ್ಡ ಗೌರವ ಸನ್ಮಾನವಾಗುತ್ತದೆ. ನಿಮ್ಮಗಳ ಸಮಾನ ಮನಸ್ಕರ ತಂಡವು ನೀಡಿದ್ದ ಎಲ್ಲ ಆಶ್ವಾಸನೆಗಳನ್ನು ಖಂಡಿತ ಈಡೇರುತ್ತವೆ ಎಂಬ‌ ಭರವಸೆ ನನಗೆ ಇದೆ ಎಂದು ಡಾ.ಲತಾ.ಎಸ್.ಮುಳ್ಳೂರ ರವರು ಸನ್ಮಾನವನ್ನ ನಿರಾಕರಿಸಿ ,ಸನ್ಮಾನ ಮಾಡಲು ಬಂದಿದ್ದ ತಂಡದ ಎಲ್ಲರ ಗೌರವ ವಿಶ್ವಾಸದ ಮನಸುಗಳಿಗೆ ತಮ್ಮ ಪ್ರೀತಿಯ ಸಲಹೆಗಳನ್ನು ನೀಡಿ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ವತಿಯಿಂದ ಧನ್ಯವಾದಗಳನ್ನು ಅವರು ಸಮರ್ಪಿಸಿದ್ದಾರೆ.ಈ ಸಂದರ್ಭದಲ್ಲಿ ನೂತನ ನಿರ್ದೇಶಕರುಗಳಾದ .ಶ್ರೀ M. R. ಕಬ್ಬೆರ.ಶ್ರೀಮತಿ ಸ್ನೇಹಾ.ಅರಮನಿ. ಶ್ರೀ. ಹರಳಯ್ಯ.ದೊಡ್ಡಮನಿ. ಶ್ರೀ ನೀಲಪ್ಪ. ಕಟ್ಟಿಮನಿ ಮೊದಲಾದವರು‌ ಹಾಜರಿದ್ದರು.

ಮಾತೇ ಅಕ್ಷರದವ್ವ-2023 ರಾಜ್ಯ ಪ್ರಶಸ್ತಿಗೆ ಮಾತೆ ಲೂಸಿ ಸಾಲ್ಡಾನ ಆಯ್ಕೆ

ಧಾರವಾಡ.ಜ.12.ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ಪ್ರತಿವರ್ಷ ನೀಡುತ್ತಿರುವ ರಾಜ್ಯದ ಏಕೈಕ ಅತ್ಯುನ್ನತ ಪ್ರಶಸ್ತಿ”ಮಾತೇ ಅಕ್ಷರದವ್ವ”ರಾಜ್ಯಪ್ರಶಸ್ತಿಗೆ 2023 ನೇ ಸಾಲಿಗೆ ಲೂಸಿ ಸಾಲ್ಡಾನ್ ರವರು ಆಯ್ಕೆಯಾಗಿದ್ದಾರೆ ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ ಎಸ್ ಮುಳ್ಳೂರ ರವರು ತಿಳಿಸಿದ್ದಾರೆ.ಇದೇ ತಿಂಗಳು ಜನವರಿ 22 ರಂದು ಧಾರವಾಡ ಶಹರದ ವಿದ್ಯಾ ವರ್ಧಕ ಸಭಾಂಗಣದಲ್ಲಿ ನಡೆಯುವ ಮಾತೆ ಸಾವಿತ್ರಿ ಬಾಯಿ ಫುಲೆ ರವರ ಜನ್ಮಜಯಂತಿ ಆಚರಣೆಯಂದು ಮಾತೆ ಲೂಸಿ ಸಾಲ್ಡಾನ ರವರನ್ನು ಆಹ್ವಾನಿಸಿ ಗೌರವಿಸಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.ಮಾತೆ ಲೂಸಿ ಸಾಲ್ಡಾನ ರವರ ಆಯ್ಕೆಗೆ ರಾಜ್ಯದ ಎಲ್ಲಾ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.ಮಾತೆ ಲೂಸಿ ಸಾಲ್ಡಾನ ರವರ ಬದುಕಿನ ದಾರಿಯ ಯಶೋಗಾಥೆ ತಿಳಿಯಬಯಸುವುದಾದರೆ ಇವರು

ಮಾತೇ ಲೂಸಿ ಸಾಲ್ಡಾನ

ಲಕ್ಷ ಲಕ್ಷ ರೂಪಾಯಿಗಳನ್ನು ಸರಕಾರಿ ಶಾಲೆಗಳಿಗೆ ದತ್ತಿ ನೀಡಿದ್ದರೂ ಇವರು ಕೋಟ್ಯಾಧೀಶರಲ್ಲ.ಇವರು ಸಾವಿರಾರು ಮಕ್ಕಳ ತಾಯಿಯಾಗಿದ್ದರೂ ಯಾರೂ ಸ್ವಂತ ಒಡಲಿನ ಮಕ್ಕಳಲ್ಲ.  ಸಾವಿರಾರು ಜನರ ಮನದಲ್ಲಿ ಶಾಶ್ವತವಾಗಿ ಮನೆ ಮಾಡಿದ್ದರೂ ಇವರದ್ದು ಹತ್ತಾರು ಮಂದಿ ಕೂಡದ ಒಂದು ಚಿಕ್ಕ ವಾಸದ ಮನೆ. ಹುಟ್ಟಿದ್ದು ಕೃಷ್ಣನ ನಾಡು ಉಡುಪಿ ಜಿಲ್ಲೆಯಾದರೂ ಸಾಧನಗೈದದ್ದು ಬೇಂದ್ರೆಯವರ ಧಾರವಾಡದಲ್ಲಿ. ಜನಿಸಿದ್ದು ಕ್ರೈಸ್ಥ ಧರ್ಮದಲ್ಲಾದರೂ ಸಾಧಿಸಿದ್ದು ಎಲ್ಲಾ ಧರ್ಮದವರ ಜೊತೆಗೂಡಿ. ತನಗೆ ಯಾರು ದಿಕ್ಕಿಲ್ಲದೇ ಬದುಕುತ್ತಿದ್ದ ಇವರು ಇಂದು ಸಾವಿರಾರು ಜನರಿಗೆ ದಿಕ್ಕಾಗಿದ್ದಾರೆ. ಬೇಕು ಬೇಕು ಎನ್ನುವರ ನಡುವೆ ಇವರು ಸಾಕು ಸಾಕು ಎನ್ನುತಾ ಶ್ರೀಮಂತೆ ಎನಿಸಿದ್ದಾರೆ. ಇವರದು ಹೃದಯ ಶ್ರೀಮಂತಿಕೆ.. ಅಂದು ಮಾತೇ ಸಾವಿತ್ರಿ ಬಾಯಿ ಪುಲೆ ಅನೇಕ ಕಷ್ಟನಷ್ಟಗಳನ್ನು ಎದುರಿಸಿ ಶಿಕ್ಷಣಕ್ಕಾಗಿ ಶ್ರಮಿಸಿ ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿ ಉಳಿದಂತೆ ಇಂದು ಈ ಮಾತೆ ನಿಸ್ವಾರ್ಥ ಸೇವೆಯಿಂದ ಜನರ ಪ್ರೀತಿ ಪಡೆದಿದ್ದಾರೆ. ಇವರ ಬದುಕಿನ ತಿರುವುಗಳು ಯಾವ ಸಿನಿಮಾ ಗಳಿಗಿಂತ ಕಡಿಮೆ ಏನಿಲ್ಲ. ಆ ಕಷ್ಟಗಳ ಸುಳಿಯಲ್ಲಿ ಸಿಲುಕಿ ಗೆದ್ದು ಬಂದ,ಎದ್ದು ಬಂದ ಇವರ ಜೀವನ ಸಾಧನೆ ನಮಗೆಲ್ಲಾ ಮಾದರಿ ಯಾರಿವರು ?

ಏನಿವರ ಸಾಧನೆ ಎಂಬ ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಸುಳಿಯುತ್ತಿರಬಹುದಲ್ವೇ ? ಹಾಗಾದರೆ ಮುಂದೆ ಓದಿ . ಓದಿದ ನಂತರ ಮನದಲ್ಲಿ ಈ ಮಾತೆಗೆ ನಮನ ಸಲ್ಲಿಸುವಿರಿ.ಇವರ ಹೆಸರು ಲೂಸಿ ಸಾಲ್ಡಾನ್ ಉಡುಪಿ ಜಿಲ್ಲೆಯ ಬೈಲೂರಿನಲ್ಲಿ ಕ್ಯಾಥೋಲಿಕ್ ಮನೆತನದಲ್ಲಿ ಜನಿಸಿದವರು.ಆರಂಭದಲ್ಲಿ ಎಲ್ಲಾ ಚೆನ್ನಾಗಿತ್ತು.. ಸಾಧಾರಣ ಮನೆತನ. ಅಮ್ಮ ಗೃಹಿಣಿ. ಅಪ್ಪ ಸಣ್ಣ ಉದ್ಯೋಗದಲ್ಲಿ ಇದ್ದವರು. ಅಲ್ಪ ಸ್ವಲ್ಪ ಆಸ್ತಿ ಇತ್ತು. ಹೀಗಿರಲು ಒಂದನೆಯ ತರಗತಿ ಇದ್ದಾಗ ಸಂಬಂಧಿಕರನ್ನು ಭೇಟಿಯಾಗಲು ಎಳೆಯ ಕಂದಮ್ಮ ಮನೆ ಮಂದಿ ಜೊತೆ ರೈಲು ಏರಿ ಮುಂಬೈಗೆ ಹೊರಟಳು. ನಡು ರಾತ್ರಿ ರೈಲು ಹುಬ್ಬಳ್ಳಿ ನಿಲ್ದಾಣಕ್ಕೆ ಬಂದಾಗ ಎಲ್ಲರೂ ನಿದ್ರೆಗೆ ಶರಣಾಗಿದ್ದಾಗ ಏನೂ ಅರಿಯದ ಈ ಬಾಲೆ ಬಾಗಿಲಿನಿಂದ  ಇಳಿದು ನೀರು ಕುಡಿಯಲು ನಳದ ಬಳಿ ಹೋಯಿತು. ಅಷ್ಟರಲ್ಲಿ ರೈಲು ಹೋಗಿಯೇ  ಬಿಟ್ಟಿತು. ಅಲ್ಲಿಯೇ ಇದ್ದ ರೈಲು ನೌಕರರಾದ ಮಹದೇವ ಹಾಗೂ ಅವರ ಇಬ್ಬರೂ  ಗೆಳೆಯರು ಬಂದು ಈ ಮಗುವನ್ನು ವಿಚಾರಿಸಿದರು. ಈ ಮಗುವಿಗೆ ಕನ್ನಡ ಬಾರದು. ಆ ರೈಲು ನೌಕರರಿಗೆ ಕೊಂಕಣಿ ಬಾರದು. ಮಹದೇವನಿಗೆ ದಾರಿ ತೋಚದೇ ಈ ಮಗುವಿನ ತಂದೆ ತಾಯಿ ಸಿಗುವರೆಗೆ ತಮ್ಮ ಬಳಿ ಇರಲೆಂದು ತಮ್ಮ ಕೊಠಡಿಯಲ್ಲಿ ಉಳಿಸಿಕೊಂಡು ಮುನ್ನಡೆದರು. ಗೆಳೆಯರ ಸಹಕಾರ ದೊರೆಯಿತು. ಹೀಗಿರಲು ಹಲವು ವರ್ಷದ ನಂತರ ಇವಳ ಬಗ್ಗೆ ತಂದೆ ತಾಯಿಗೆ ತಿಳಿದು ಕರೆಯಲು ಬಂದರು ಮಗಳು ಹೋಗಲಿಲ್ಲ. ಹೀಗೆ ಮಗು ಬೆಳೆಯುತ್ತಾ ಹೋಯಿತು. ಜೊತೆಗೆ ಶಾಲೆ ಕಲಿಯುತ್ತಾ ಹೋಯಿತು. ಹೀಗಿರಲು ಮಹದೇವ ಈ ಹುಡುಗಿಯನ್ನೇ ವಿವಾಹವಾಗಲು ಬಯಸಿದರು.. ಹಲವರ ವಿರೋಧದ ನಡುವೆ ಮದುವೆ ಆದರೂ ಕೂಡಾ. ತಾನೊಂದು ಬಗೆದರೆ ದೈವ ಮತ್ತೊಂದು ಬಗೆಯಿತು ಎಂಬಂತೆ ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಮಹದೇವಪ್ಪ ತೀರಿಹೋದರು
. ಲೂಸಿ ಬಾಲ ವಿಧವೆಯಾದಳು. ಜೀವನದ ಪ್ರತಿಕ್ಷಣ ಸಂಕಷ್ಟ ಪಟ್ಟಳು. ಹೀಗಿರಲು ಮಾವನ ಮನೆಯಲ್ಲಿ ಇದ್ದು ನೆರೆ ಹೊರೆಯವರ ಸಹಕಾರ ಪಡೆದು ಓದು ಮುಂದುವರೆಸಿದಳು. ಗುರುಗಳ ಮಾರ್ಗದರ್ಶನದಲ್ಲಿ ಓದಿ ಉನ್ನತ ದರ್ಜೆಯಲ್ಲಿ ಪಾಸಾದಳು. ಹುಬ್ಬಳ್ಳಿ ಮಹಿಳಾ ವಿದ್ಯಾಪೀಠದಲ್ಲಿ ಕಲಿತಳು. ನಿಷ್ಟೆಯಿಂದ ಓದಿ ಗುರುಗಳ ಪ್ರೀತಿಗೆ ಪಾತ್ರಳಾಗಿ ಕುಮಟಾದಲ್ಲಿ ಬಿ.ಇಡಿ ಓದಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ನೇಮಕವಾದರು. ಆರಂಭದಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಎಂಬಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದ ಇವರು. ತದನಂತರ ಧಾರವಾಡ ಜಿಲ್ಲೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲಘಟಗಿಯಲ್ಲಿ ಸರಕಾರಿ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದ ಇವರು ಮಕ್ಕಳೇ ನನ್ನ ಸರ್ವಸ್ವ. ಶಾಲೆಗಳೇ ತನ್ನ ಉಸಿರು ಎಂಬಂತೆ ಸೇವೆ ಸಲ್ಲಿಸಿದರು. ತದನಂತರ ಧಾರವಾಡ ತಾಲೂಕಿನ ಹೆಬ್ಬಳ್ಳಿ , ಲೋಕೂರ , ಮುಗದ , ಅಳ್ನಾವರ ಇತರೆಡೆ ಶಿಕ್ಷಕಿಯಾಗಿ ಮಕ್ಕಳಿಗೆ ಪ್ರೀತಿ ಪಾತ್ರರಾದರು.

ಡಾ.ಲತಾ.ಎಸ್.ಮುಳ್ಳೂರ್

       ಇಷ್ಟೇ ಆಗಿದ್ದರೆ ಇವರದು ಇತರರಂತೆ ಸಾಮಾನ್ಯ ಸಾಧನೆ ಎನಿಸುತ್ರಿತ್ತು. ಆದರೆ ಈ ಮಹಿಳೆ ತನಗೋಸ್ಕರ ಏನನ್ನು ಗಳಿಸಲಿಲ್ಲ. ಮರು ಮದುವೆ ಮಾಡಿಕೊಳ್ಳಲಿಲ್ಲ. ತಮಗೆ ಬರುವ ವೇತನದಲ್ಲಿ ಖರ್ಚಿಗೆ ಬೇಕಾಗುವಷ್ಟು ಪಡೆದು ಉಳಿದಿದ್ದನ್ನು ಸರಕಾರಿ ಶಾಲಾ ಬಡ ಮಕ್ಕಳಿಗೆ ಅಧ್ಯಯನ ಸಾಮಗ್ರಿ ಪಡೆಯಲು ನೀಡಿದಳು. ಭರ್ತಿ ಮೂವ್ವತ್ತು ವರ್ಷ ಮಕ್ಕಳಿಗೆ ಧನಸಹಾಯ , ಶಾಲೆಗಳಿಗೆ ದತ್ತಿ ನೀಡುವುದು. ಕಟ್ಟಡಗಳ ದುರಸ್ತಿ ಹೀಗೆ ಹಲವಾರು ಸಮಾಜಮುಖಿ ಕಾರ್ಯಗಳಿಗೆ ಧನ ವಿನಿಯೋಗಿಸಿದರು. ಮೊಟ್ಟ ಮೊದಲು ಹೆಬ್ಬಳ್ಳಿಯ ಸರಕಾರಿ ಗಂಡು ಮಕ್ಕಳ ಹಾಗೂ ಹೆಣ್ಣು ಮಕ್ಕಳ ಸರಕಾರಿ  ಹಿರಿಯ
ಸದ್ಗುರು ವಾಸುದೇವ ಪ್ರಾಥಮಿಕ ಶಾಲೆ ಹೆಬ್ಬಳ್ಳಿ, ಪ್ರೌಢಶಾಲೆ ಹೆಬ್ಬಳ್ಳಿ. .ಕೆ.ವಿ.ಜಿ.ಬಿ.ಶಾಲೆ.ಅಳ್ನಾವರ.ಕರ್ನಾಟಕ ವಿದ್ಯಾವರ್ಧಕ ಸಂಘ, ಪ್ರೀಮಿಯರ್ ಸಿಟಿಜನ್ ಕ್ಲಬ್, ಉತ್ತರ ಕರ್ನಾಟಕ ಲೇಖಕಿಯರ ಸಂಘ , ಗುಬ್ಬಚ್ಚಿ ಗೂಡು ಶಾಲೆ ಮಾಳಾಪೂರ ಧಾರವ ಇವೆ..ಸ.ಹಿ.ಪ್ರಾ.ಶಾಲೆ ಸಲಕಿನಕೊಪ್ಪ, .ಸ.ಹಿ.ಪ್ರಾ.ಶಾಲೆ ಮುಗದ .ದತ್ತಿ ದಾನ ಪಡೆದ ಶಾಲೆ ಸಂಸ್ಥೆಗಳು ನೂರಾರು ಅವುಗಳಲ್ಲಿ ಇಲ್ಲಿ ಕೆಲವನ್ನು ಹೆಸರಿಸಬಹುದು.ನೆಹರು ಪ್ರೌಢಶಾಲೆ ಹೆಬ್ಬಳ್ಳಿ ,ನೆಹರು ಪದವಿಪೂರ್ವ ಕಾಲೇಜು ಹೆಬ್ಬಳ್ಳಿ ಸ.ಹಿ.ಪ್ರಾ.ಶಾಲೆ ಜೀರಿಗವಾಡ ,ಬಾಲ ಬಳಗ ಶಾಲೆ ಧಾರವಾಡ, ಸ.ಹಿ.ಪ್ರಾ.ಶಾಲೆ ಆನಂದನಗರ ಹುಬ್ಬಳ್ಳಿ ,  ಮದಿಹಾಳ , ಬಾಡ , ತಡಕೋಡ ,  ವೆಂಕಟಾಪುರ, ಸೇಂಟ್ ಥೆರೆಸಾ ಶಾಲೆ ಅಳ್ನಾವರ, ಬೇರುಗಂಡಿ ಬೃಹನ್ಮಠ ಚಿಕ್ಕಮಗಳೂರು, ಆದರ್ಶ ವಿದ್ಯಾಲಯ ಧಾರವಾಡ, ವನಿತಾ ಸೇವಾ ಸಮಾಜ ಧಾರವಾಡ, ರಂಗಾಯಣ ಧಾರವಾಡ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದುರ್ಗಾಕಾಲನಿ ಧಾರವಾಡ. ನಂಜಯ್ಯಗಾರನಹಳ್ಳಿ ಗೌರಿಬಿದನೂರು ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ.,ಸ.ಹಿ.ಪ್ರಾ.ಶಾಲೆ ಮುಮ್ಮಿಗಟ್ಟಿ, ಮುಗಳಿ, ದುಬ್ಬನಮರಡಿ, ಭೈರಿದೇವರಕೊಪ್ಪ , ಗರಗ, ಮಡಕಿಹೊನ್ನಳ್ಳಿ,.ಕಡಬಗಟ್ಟಿ,.ಖಾನಾಪುರ  ನರೇಂದ್ರ,,.ಸುಳ್ಳ, ಸವದತ್ತಿ , ಮುಗದ , ಗೋವನಕೊಪ್ಪ, ವರವಿನಾಗಲಾವಿ , ಕೋಟೂರ ,ಕಲಕೇರಿ ,ಮಾರಡಗಿ , ಸೋಮಾಪುರ , ಲೋಕುರ ,ಬೇಗೂರ , ಕುರುಬಗಟ್ಟಿ ,ಅಂಬೊಳ್ಳಿ , ಮುರಕಟ್ಟಿ , ಹೊನ್ನಾಪುರ ,ನಿಗದಿ , ಬೆನಕಟ್ಟಿ , ಎತ್ತಿನಗುಡ್ಡ , ಗೋವನಕೊಪ್ಪ ಅಣ್ಣಿಗೇರಿ,  ಕುಮಾರಗೊಪ್ಪ, ಜಿ ಬಸನಕೊಪ್ಪ, ಗೊಂಗಡಿಕೊಪ್ಪ,,  ಹೀಗೆ ಈ ಪಟ್ಟಿ ಇನ್ನು ಬೆಳೆಯುತ್ತಲೇ ಹೋಗುತ್ತದೆ.
ಇವರು ಜನಿಸಿದ್ದು ಉಡುಪಿ ಜಿಲ್ಲೆಯಾದರೂ ನೆಲೆಸಿದ್ದು ಕಾರ್ಯ ನಿರ್ವಹಿಸಿದ್ದು ಹೆಚ್ಚಾಗಿ ಧಾರವಾಡ ಜಿಲ್ಲೆಯಲ್ಲಿ. ಜಿಲ್ಲೆಯ ಬಹುತೇಕ ಸರಕಾರಿ ಶಾಲೆಗಳಿಗೆ ಸೇವಾ ಸಂಸ್ಥೆಗೆ ಇವರ ದತ್ತಿ ನೆರವು ಸಹಾಯ ದೊರೆತಿದೆ. ಇವರು ಈ ಭಾಗದಲ್ಲಿ ಅಷ್ಟೇ ಅಲ್ಲಾ ನಾಡಿನಲ್ಲಿಯೇ ತಮ್ಮ ಸೇವಾ ಮನೋಭಾವನೆಯಿಂದ ಹೆಸರುವಾಸಿ. ಸಮಾಜಕ್ಕೆ ಇಷ್ಟು ಸಹಾಯ ನೀಡಿದರೂ.. ಪ್ರತಿಯಾಗಿ ಏನನ್ನು ನಿರೀಕ್ಷಿಸದೇ. ಈಗ ನಿವೃತ್ತಿ ಹೊಂದಿ ಹದಿನೈದು ವರ್ಷ ಆಗ್ತಾ ಬಂತು. ಈಗಲೂ ಪ್ರತಿ ತಿಂಗಳ ವೇತನ ಸರ್ಕಾರಿ ಶಾಲೆ ಮಕ್ಕಳಿಗೆ ಮೀಸಲು.ಇವರಿಂದ ಧನ ಸಹಾಯ ಪಡೆದ ಶಾಲೆಗಳು ನೂರಾರು, ಮಕ್ಕಳು ಸಾವಿರಾರು. ಈ ಮಹಿಳೆ ಧರ್ಮ ಮೀರಿ ಬೆಳೆದವರು. ನಿಮ್ಮ ಈ ಸಾಧನೆಗೆ ಸ್ಪೂರ್ತಿ ಯಾರೆಂದು ಈ ಸಾಧಕಿಯನ್ನು ಮಾತಿಗೆಳೆದರೆ ನಾನು ಜೀವನದಲ್ಲಿ ತುಂಬಾ ಕಷ್ಟ ಅನುಭವಿಸಿರುವೆ ನನ್ನ ಕಷ್ಟ ನನ್ನ ನಾಡಿನ ಮಕ್ಕಳಿಗೆ ಬರಬಾರದು. ಮಕ್ಕಳು ಶಿಕ್ಷಣವಂತರಾದರೆ ಸ್ವಾವಲಂಬಿ ಬದುಕನ್ನು ನಿರ್ವಹಿಸುವುದರ ಜೊತೆಗೆ ಮಾನವೀಯ ಮೌಲ್ಯ ಬೆಳೆಸಿಕೊಳ್ಳುವರು. ಮಕ್ಕಳೇ ನನ್ನ ಆಸ್ತಿ. ಸರಕಾರಿ ಶಾಲೆಗಳು ಸೇವಾ ಸಂಸ್ಥೆಗಳೇ ನನ್ನ ಉಸಿರು ಎಂದು ಈ ಅಕ್ಷರ ಶಬರಿ ಮನತುಂಬಿ ಹೇಳುವರು.ತನಗೋಸ್ಕರ ಏನನ್ನು ಆಸ್ತಿ ಮಾಡಿಕೊಳ್ಳದ ಇವರು ಅನೇಕ ಮಕ್ಕಳ ಬದುಕಿಗೆ ಆಸರೆಯಾಗಿ ನಿಸ್ವಾರ್ಥ ಬದುಕು ನಡೆಸುತ್ತಿದ್ದಾರೆ.ಇವರಿಗೆ ಪಬ್ಲಿಕ್ ,ಸುವರ್ಣ ವಾಹಿನಿ ಸಾಧಕ ಮಹಿಳೆ ಪ್ರಶಸ್ತಿ , ಅಪ್ನಾದೇಶ ಬಳಗ ಉತ್ತಮ ಶಿಕ್ಷಕಿ , ಗ್ರಾಮೀಣ ರತ್ನ ರಾಜ್ಯ ಪುರಸ್ಕಾರ ದೊರೆತಿವೆ. ಇವರು ಯಾವತ್ತು ಪ್ರಶಸ್ತಿ ಸನ್ಮಾನ ಬಯಸದ ವಿಶಾಲ ಹೃದಯಿ. ಸಾಧನೆಗೆ ಹೊಸ ವ್ಯಾಖ್ಯಾನ ಬರೆದವರು ಇವರು. ಬಡ ಮಕ್ಕಳ ನಗುವಲ್ಲಿ ತೃಪ್ತಿ ಕಂಡವರು. ಈ ಮಹಿಳೆ ಸಾಧನೆ ನಮಗೆಲ್ಲಾ ಸದಾ ಮಾದರಿ. ಈ ಅಕ್ಷರ ಶಬರಿ ವಿದ್ಯಾಕಾಶಿಯ ಸರಸ್ವತಿ. ಬದುಕನ್ನು ಸಾರ್ಥಕ ಪಡೆಸಿಕೊಂಡ ಸಾಧಕಿ ಇವರಿಗೆ ನಮ್ಮ ನಮನಗಳು. ಇವರ ಕುರಿತು ಇತ್ತೀಚೆಗೆ ಡೆಕ್ಕನ್‌ ಹೆರಾಲ್ಡ್‌ ಇಂಗ್ಲಿಷ್ ಪತ್ರಿಕೆಯಲ್ಲಿ ಬಂದ ವರದಿಯನ್ನು, ಓದಿ ಪ್ರೇರಿತರಾಗಿ, ಬೆಂಗಳೂರಿನ ರೋಹನ್ ಕೇರ್ ಪೌಂಡೇಶನ ಸಂಸ್ಥೆಯವರು ೨೦೨೨ ರ ಜೂನ್ ೪ ನಾಲ್ಕರಂದು ಈ ಮಹಾತಾಯಿಯನ್ನು ನೋಡಲು, ಧಾರವಾಡ ನಗರಕ್ಕೆ ಆಗಮಿಸಿ ಒಂದು ಪ್ರೌಢಶಾಲೆ ಹತ್ತು ಪ್ರಾಥಮಿಕ ಶಾಲೆಗಳಿಗೆ ತಲಾ ಹತ್ತು ಸಾವಿರದಂತೆ ಸರ್ಕಾರಿ ಶಾಲೆಗಳಿಗೆ ದತ್ತಿಯನ್ನು ಇವರ ಅಮೃತ ಹಸ್ತದಿಂದ ನೀಡಿದರು,

ಕೃಪೆ:- ಲೇಖಕರು – ಎಲ್ ಐ ಲಕ್ಕಮ್ಮನವರ,ಅದ್ಯಕ್ಷರು ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆ,

ಧಾರವಾಡ
ಮೊಬೈಲ್ –    9880454233

ವೀರವನಿತೆ ಒನಕೆ ಓಬವ್ವರಂತೆ ಸಮಯ ಪ್ರಜ್ಞೆ ಹಾಗೂ ಧೈರ್ಯ ಮನೋಭಾವವನ್ನು ರೂಢಿಸಿಕೊಳ್ಳಿ- ಡಾ.ಪ್ರತಿಭಾ,ಆರ್

ನ.11 ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ತಹಶಿಲ್ದಾರ್ ಕಾರ್ಯಾಲಯದಲ್ಲಿ ವೀರ ವನಿತೆ ಒನಕೆ ಓಬವ್ವ ಅವರ ದಿನಾಚರಣೆಯನ್ನು ಇಂದು ಆಚರಿಸಲಾಯಿತು. ಜ್ಯೋತಿ ಬೆಳಗಿಸುವುದರ ಮೂಲಕ ವೀರ ವನಿತೆ ಓಬವ್ವನ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿದ, ಕಾಪು ತಾಲ್ಲೂಕು ತಹಶಿಲ್ದಾರ್ ಡಾ.ಪ್ರತಿಭಾ ಆರ್ ರವರು ವೀರವನಿತೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ನಂತರ ಮಾತನಾಡಿದ ಅವರು ವೀರವನಿತೆ ಒನಕೆ ಓಬವ್ವ ಅವರ ಧೈರ್ಯ-ಸ್ಥೈರ್ಯ ಗಳನ್ನು ಶ್ಲಾಘಿಸಿದರು. ಆಕೆ ತನ್ನ ಧೈರ್ಯ ಮತ್ತು ಸಮಯ ಪ್ರಜ್ಞೆಯಿಂದ ಒಂದು ಸಾಮ್ರಾಜ್ಯದ ಉಳಿವಿಗೆ ಕಾರಣಳಾದಳು. ನಮ್ಮ ಹೆಣ್ಣುಮಕ್ಕಳು ಕೂಡಾ ಆಕೆಯಂತೆ ಸಮಯ ಪ್ರಜ್ಞೆ ಮತ್ತು ಧೈರ್ಯ ವನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಡೆಪ್ಯುಟಿ ತಹಶಿಲ್ದಾರ್ ಅಶೋಕ್ ಎನ್ ಕೋಟೆಕಾರ್ ಹಾಗೂ ಇತರ ಸಿಬ್ಬಂದಿ ವರ್ಗದವರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಸಂಪೂರ್ಣ ಹೃದಯ ತಪಾಸಣೆ ಕೇವಲ 555₹ ಮಾತ್ರ.ಉಚಿತ ಬಸ್ ವ್ಯವಸ್ಥೆ,ಊಟದ ವ್ಯವಸ್ಥೆ ಕಲ್ಪಿಸಿದ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ

ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ರಾಜ್ಯಘಟಕ ಧಾರವಾಡ ,ಮಧುಗಿರಿ ಜಿಲ್ಲಾ ಘಟಕದ ವತಿಯಿಂದ

  *ವಿಶ್ವ ಹೃದಯ ದಿನ* ಅಂಗವಾಗಿ ಬೆಂಗಳೂರಿನ  Trust well ಆಸ್ಪತ್ರೆಯಿಂದ ಹೃದಯಕ್ಕೆ ಸಂಬಂಧಿಸಿದ ತಪಾಸಣೆ ಖಾಸಗಿ ಆಸ್ಪತ್ರೆಗಳಲ್ಲಿ 2500 ರೂ ಖರ್ಚು ಬರುವಂತ ಈ ಕೆಳಗಿನ  Heart Screening Package ಸೌಲಭ್ಯವನ್ನು ಕೇವಲ 555ರೂ ಗಳಿಗೆ ಒದಗಿಸಲಾಗಿದೆ
ಈ ಪ್ಯಾಕೇಜ್ ನಲ್ಲಿ

BP
RBS
ECG
ECHO Screening
Interventional Cardiologist Consultation

*Free Angiogram*
( Excluding Drugs & Consumables )

ಪರೀಕ್ಷೆಗಳು ಒಳಗೊಂಡಿರುತ್ತವೆ.

ಈ ತಪಾಸಣೆಯು
*9th October 2023* ರಂದು
TRUSTWELL HOSPITALS
J C Road, Bengaluru
ಇಲ್ಲಿ ನಡೆಯಲಿದ್ದು,

ಆಸಕ್ತರು ಈ ಕೆಳಗಿನ ನಂಬರಿಗೆ ತಕ್ಷಣದಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ನೋಂದಣಿ ಮಾಡಿದವರನ್ನು  *ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ,ಮಧುಗಿರಿ ಜಿಲ್ಲಾ ಘಟಕದ ವತಿಯಿಂದ* ದಿನಾಂಕ :-9 /10/ 2023  ರಂದು ಬೆಳಗ್ಗೆ *7 ಗಂಟೆಗೆ* ತುಮಕೂರಿನಿಂದ ಬೆಂಗಳೂರಿನ   Trust well  ಆಸ್ಪತ್ರೆಗೆ   ಉಚಿತವಾಗಿ ಕರೆದುಕೊಂಡು ಹೋಗಲಾಗುವುದು. ಅಲ್ಲದೆ *ಮಧ್ಯಾಹ್ನದ  ಊಟದ* ವ್ಯವಸ್ಥೆಯನ್ನು ಕೂಡ ಉಚಿತವಾಗಿ ಮಾಡಲಾಗಿದೆ.(ಆದರೆ   ತಪಾಸಣಾ ಕನಿಷ್ಠ ವೆಚ್ಚ ರೂ 555 ಗಳನ್ನು ತಾವೇ   ಭರಿಸಬೇಕಾಗುತ್ತದೆ).ಬರಲು  ಇಚ್ಚಿಸುವವರು ಈ ಕೆಳಗಿನ
sujatha :9845532267
ನಂಬರ್ ಗೆ ಕರೆ ಮಾಡಿ ಕೂಡಲೇ ನೊಂದಾಯಿಸಿಕೊಳ್ಳಬೇಕೆಂದು
ಮಧುಗಿರಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ರಾಧಮ್ಮ ತಿಳಿಸಿದ್ದಾರೆ.
9008479795