ತುಮಕೂರು.ಆ.11
ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ( ರಿ) ರಾಜ್ಯ ಘಟಕ ಧಾರವಾಡ. ತುಮಕೂರು ಮತ್ತು ಮಧುಗಿರಿ ಜಿಲ್ಲಾ ಘಟಕಗಳ ವತಿಯಿಂದ ಈ ದಿನ ದಿನಾಂಕ -11/8/21ರಂದು ಮುಂಜಾನೆ 8 ಗಂಟೆಗೆ ನೂತನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವರಾಗಿ ಸಾರಥ್ಯವಹಿಸಿರುವ ಸನ್ಮಾನ್ಯ ಶ್ರೀ ಬಿ.ಸಿ.ನಾಗೇಶ್ ರವರನ್ನು ಭೇಟಿ ಮಾಡಿ ಸ್ವಾಗತಿಸಿ ಗೌರವಿಸಲಾಯಿತು .

ಕರ್ನಾಟಕದ ಏಕೈಕ ಮಹಿಳಾ ಶಿಕ್ಷಕಿಯರ ಸಂಘ ಇದಾಗಿದ್ದು,ರಾಜ್ಯದ ಸಂಸ್ಥಾಪಕ ಅಧ್ಯಕ್ಷರಾದ ಡಾ.ಲತಾ ಎಸ್.ಮುಳ್ಳೂರವರು ಈ ಸಂಘವನ್ನ ಸಂಸ್ಥಾಪಿಸಿ ಎಲ್ಲಾ ಶಿಕ್ಷಕಿಯರಿಗೂ ಒಂದು ಉತ್ತಮ ಸ್ವಾಭಿಮಾನದ ವೇದಿಕೆಯನ್ನು ಅಕ್ಷರಮಾತೆ ಭಾರತದ ಮೊದಲ ಶಿಕ್ಷಕಿ ತಾಯಿ ಸಾವಿತ್ರಿಬಾಯಿ ಫುಲೆ ಯವರ ಹೆಸರಿನಡಿ ಕಲ್ಪಿಸಿದ್ದಾರೆ.ಇದರಿಂದ ಸಮಸ್ತ ಶಿಕ್ಷಕಿಯರ ಕುಂದು ಕೊರತೆಗಳ ನಿವಾರಣೆಗಾಗಿ ಹಾಗೂ ಹಲವಾರು ಶೈಕ್ಷಣಿಕ ಕಾರ್ಯಾಗಾರ, ಮಕ್ಕಳ ಶೈಕ್ಷಣಿಕ ವಿಚಾರಗಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಹಕಾರಿಯಾಗಿದೆ. ಇಂತಹ ನಮ್ಮ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘಕ್ಕೂ ಸಹಾ ಪ್ರಾಧಾನ್ಯತೆ ನೀಡಿ ಯಾವುದೇ ಜಿಲ್ಲೆ ಹಾಗೂ ತಾಲ್ಲೂಕು ಶೈಕ್ಷಣಿಕ ಸಭೆಗಳಿಗೆ ಸಂಘದ ಅಧ್ಯಕ್ಷರು ಕಾರ್ಯದರ್ಶಿ ಗಳನ್ನು ಸಹಾ ಆಹ್ವಾನಿಸುವಂತೆ ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.


ಅಲ್ಲದೇ ಶೈಕ್ಷಣಿಕ ವಿಚಾರವಾಗಿ ಶಿಕ್ಷಕರ ಸ್ನೇಹಿ ವರ್ಗಾವಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದು ತಮ್ಮ ಪ್ರೋತ್ಸಾಹ ಸಹಕಾರ ಹಾಗೂ ಬೆಂಬಲ ಯಾವಾಗಲೂ ಇರಲಿ ಎಂದು ರಾಜ್ಯ ಉಪಾಧ್ಯಕ್ಷರು ಹಾಗೂ ತುಮಕೂರು ಜಿಲ್ಲಾಧ್ಯಕ್ಷರಾದ ಶ್ರೀಮತಿ ಅನುಸೂಯದೇವಿ ಮನವಿ ಮಾಡಿದ್ದಾರೆ. ಮನವಿಗೆ ಶ್ರೀಯುತರು ಸಕಾರಾತ್ಮಕವಾಗಿ ಸ್ಪಂದಿಸಿದ್ದು,ಉತ್ತಮ ಪ್ರತಿಕ್ರಿಯೆ ನೀಡಿರುವುದು ಎಲ್ಲರಲ್ಲೂ ಸಂತಸ ತಂದಿದೆ ಎಂದು ಮಧುಗಿರಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ರಾಧಮ್ಮ ರವರು ತಿಳಿಸಿದ್ದಾರೆ. ರಾಜ್ಯ ಉಪಾಧ್ಯಕ್ಷರು ಹಾಗೂ
ತುಮಕೂರು ಜಿಲ್ಲಾಧ್ಯಕ್ಷರಾದ ಶ್ರೀಮತಿ ಅನಸೂಯಾದೇವಿ, ಮಧುಗಿರಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಜಿ .ಎಲ್. ರಾಧಮ್ಮ, ಕಾರ್ಯದರ್ಶಿಯಾದ ಶ್ರೀಮತಿ ಲತಾಮಣಿ H.K.ಕೊರಟಗೆರೆ ತಾಲ್ಲೂಕು ಅಧ್ಯಕ್ಷರಾದ ಶ್ರೀಮತಿ ಸುಜಾತಾ ಜಿ . ತಿಪಟೂರು ತಾಲ್ಲೂಕು ಅಧ್ಯಕ್ಷರಾದ ಶ್ರೀಮತಿ ವನಿತಾ ಬಿ .ಆರ್.ಕಾರ್ಯದರ್ಶಿಯಾದ ಶ್ರೀಮತಿ ಪುಷ್ಪಾವತಿ ಕೋಶಾಧ್ಯಕ್ಷರಾದ ಶ್ರೀಮತಿ ರಾಧಾಮಣಿ ಉಪಾಧ್ಯಕ್ಷರುಗಳಾದ ಶ್ರೀಮತಿ ಮುಕ್ತ ಮಣಿ ಮತ್ತು ಶ್ರೀಮತಿ ಸಾವಿತ್ರಿ ಹಾಗೂ ಸಹ ಕಾರ್ಯದರ್ಶಿಗಳಾದ ಶ್ರೀಮತಿ ಜಯಶೀಲ ಹಾಗೂ ಶ್ರೀಮತಿ ಸೀತಮ್ಮ .ತುರುವೇಕೆರೆ ತಾಲ್ಲೂಕು ಅಧ್ಯಕ್ಷರಾದ ಶ್ರೀಮತಿ ಲತಾ ರಾಜ್ ಕಾರ್ಯದರ್ಶಿಯಾದ ಶ್ರೀಮತಿ
ಸಾವಿತ್ರಿ ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕು ಅಧ್ಯಕ್ಷರಾದ ಯಶೋದಾ ಗುಬ್ಬಿ ತಾಲ್ಲೂಕಿನ ಶಿಕ್ಷಕರಾದ ಶ್ರೀ ರಂಗಸ್ವಾಮಿ ಜೆ.ಎಸ್ ಹಾಜರಿದ್ದರು .

























