ಬೆಂಗಳೂರು ಜೂನ್-21
2021-22ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೆ ೬ ತಿಂಗಳ ಶಿಶುಪಾಲನಾ ರಜೆಯನ್ನು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶೀಘ್ರದಲ್ಲಿ ಜಾರಿಯಾಗಲು
ಸರ್ಕಾರದ ಆದೇಶ ಹೊರಬೀಳಬೇಕಾಗಿದೆ.



ಇಂತಹ ಕೋವಿಡ್ ಸಂಕಷ್ಟದಿನದಲ್ಲಿ ಶಿಶು ಆರೈಕೆ ರಜೆಯು ಪ್ರತಿ ಮಹಿಳಾ ನೌಕರರಿಗೆ ಅನಿವಾರ್ಯವಾಗಿದ್ದು ಅತ್ಯಂತ ಮಹತ್ವದ ಆದೇಶವಾಗಿರುತ್ತದೆ.
ಇಂದು ರಾಜ್ಯದ ಎಲ್ಲಾ ಮಹಿಳಾ ನೌಕರರು ,ಶಿಕ್ಷಕಿಯರು ಸರ್ಕಾರದ ಈ ಆದೇಶವನ್ನೇ ಎದುರು ನೋಡುತ್ತಿದ್ದಾರೆ.
ಘನ ಸರ್ಕಾರವು
ಅತೀ ಶೀಘ್ರದಲ್ಲಿ ರಾಜ್ಯ ಮಹಿಳಾ ನೌಕರರಿಗೆ ‘೬ ತಿಂಗಳ ಶಿಶುಪಾಲನಾ ರಜೆ’ ಯ ಸರ್ಕಾರಿ ಆದೇಶವನ್ನು ಮಾಡಿಕೊಡುವಂತೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಬೆಂಗಳೂರು ದಕ್ಷಿಣ ಭಾಗ-1 ಘಟಕದ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀ ಕೆ.ಶಾಸ್ತ್ರೀ ,ಉಪಾಧ್ಯಕ್ಷರುಗಳಾದ ಶ್ರೀಮತಿ ನೂರುನ್ನೀಸಾ, ಶ್ರೀಮತಿ ಮಣಿ,ಆರ್ ಹಾಗೂ ಕೋಶಾಧ್ಯಕ್ಷರಾದ ಶ್ರೀಮತಿ ಉಮಾದೇವಿ ರವರುಗಳು ಇಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು,(DPAR) ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು ಕಛೇರಿಗೆ ಖುದ್ದಾಗಿ ಬೇಟಿ ಮಾಡಿ ಅತೀ ಶೀಘ್ರವಾಗಿ ಆದೇಶ ಹೊರಡಿಸಲು ಮನವಿ ಮಾಡಿಕೊಂಡಿರುತ್ತಾರೆ.
ಹಾಗೆಯೇ
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರು, ವಿಧಾನಸೌಧ, ಬೆಂಗಳೂರು
ಹಾಗೂ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು (ಆರ್ಥಿಕ ಇಲಾಖೆ), ವಿಧಾನಸೌಧ, ಬೆಂಗಳೂರು ರವರುಗಳಿಗೂ ಸಹಾ ಖುದ್ದಾಗಿ ಬೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.





















