ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ನಡೆಸಿದ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ ಯಶಸ್ವಿ

ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್ ರಿ. ನವದೆಹಲಿ, ಕೇಂದ್ರ ಕಚೇರಿ ಧಾರವಾಡ.ಕರ್ನಾಟಕ

ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ರಿ.ರಾಜ್ಯಘಟಕ ಧಾರವಾಡ. ಜಿಲ್ಲಾ ಘಟಕ ತುಮಕೂರು

ತಾಲೂಕು ಘಟಕ ಗುಬ್ಬಿ

ಹಾಗೂ

ಚಾಲುಕ್ಯ ಆಸ್ಪತ್ರೆ ಗುಬ್ಬಿ, ಇವರ ಸಹಯೋಗದಲ್ಲಿ

ದಿನಾಂಕ 02/03/2024ರ ಶನಿವಾರದಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮವನ್ನು ಬಾಬು ಜಗಜೀವನ್ ರಾಮ್ ಭವನ ಗುಬ್ಬಿ ಇಲ್ಲಿ ಬೆಳಿಗ್ಗೆ ೧೧ ಗಂಟೆಗೆ ಹಮ್ಮಿಕೊಳ್ಳಲಾಯಿತು ಕಾರ್ಯಕ್ರಮವನ್ನು ಡಾ. ಲತಾ ಎಸ್ ಮುಳ್ಳೂರ, ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರು ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್ ನವದೆಹಲಿ ಮತ್ತು ರಾಜ್ಯಾಧ್ಯಕ್ಷರು, ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ರಿ. ರಾಜ್ಯಘಟಕ ಧಾರವಾಡ ಇವರು ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ಲತಾ ಎಸ್ ಮುಳ್ಳೂರ ರವರು ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ ವೃತ್ತಿ ,ಸಂಘಟನೆ, ಕುಟುಂಬ ನಿರ್ವಹಣೆ ಎಲ್ಲದರಲ್ಲೂ ಮಹಿಳೆಯರು ಇಂದು ಮುಂದಿದ್ದಾರೆ ಸಮಸ್ಯೆಗಳು ಬಂದಾಗ ಮಹಿಳೆಯರು ದಿಟ್ಟವಾಗಿ ಎದುರಿಸಿ ನಿಲ್ಲಬೇಕು ಎಂದರು. ಜೊತೆಗೆ ಜನವರಿ 3 ನೇ ತಾರೀಖು ಮಾತೆ ಸಾವಿತ್ರಿಬಾಯಿ ಪುಲೆ ಅವರ ಜಯಂತಿ ಪ್ರಯುಕ್ತ ಶಿಕ್ಷಕಿಯರ ದಿನವನ್ನಾಗಿ ಆಚರಣೆ ಮಾಡಲು ಆದೇಶ ಮಾಡಬೇಕೆಂದು ಈ ಮೂಲಕ ಸರ್ಕಾರಕ್ಕೆ ಮನವಿ ಮಾಡಿದರು. ಶೈಕ್ಷಣಿಕವಾಗಿ ಸಾಮಾಜಿಕವಾಗಿ ಇಂದು ನಮ್ಮ ಸಂಘ ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಶ್ರಮಿಸುತ್ತಿದೆ ಎಂದು ತಿಳಿಸಿದರು.

ಸತತ ಐದು ಬಾರಿ ಗೆಲವು ಪಡೆದಿರುವ, ಗುಬ್ಬಿ ಶಾಸಕರಾಗಿರುವ ಶ್ರೀ ಶ್ರೀನಿವಾಸ್ ರವರ ಧರ್ಮಪತ್ನಿ ಶ್ರೀಮತಿ ಭಾರತಿ ಶ್ರೀನಿವಾಸ್ ರವರು ಉಚಿತ ಆರೋಗ್ಯ ತಪಾಸಣೆಯನ್ನು ಡಾ.ಲತಾ ಎಸ್.ಮುಳ್ಳೂರ ರವರ ಹೃದಯ ಬಡಿತ ತಪಾಸಣೆ ಮಾಡುವ ಮೂಲಕ ಉದ್ಘಾಟಿಸಿದರು

ಶ್ರೀಯುತ ಶ್ರೀನಿವಾಸ್ ರವರು ಶಾಸಕರು ಗುಬ್ಬಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಡಳಿ ಅಧ್ಯಕ್ಷರು ಇವರ ಧರ್ಮಪತ್ನಿಯವರಾದಂತಹ ಶ್ರೀಮತಿ ಭಾರತಿ ಶ್ರೀನಿವಾಸ್ ರವರು ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಮಹಿಳೆಯರು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದಾಗ ಮಹಿಳಾ ಸಬಲೀಕರಣ ಸಾಧ್ಯ ಹೆಣ್ಣುಮಕ್ಕಳ ಶಿಕ್ಷಣ ಹಾಗೂ ಮಹಿಳೆಯರ ಕಾರ್ಯಾಗಾರಗಳಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.

ಮಾತೆ ಸಾವಿತ್ರಿಬಾಯಿ ಪುಲೆ ಅವರ ಭಾವಚಿತ್ರ ಅನಾವರಣ ಹಾಗೂ ಕಲಾಕೃತಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಡಾ.ಮಹಾಲಕ್ಷ್ಮಿ, ಪ್ರಸೂತಿ ತಜ್ಞರು, ಚಾಲುಕ್ಯ ಆಸ್ಪತ್ರೆ ಗುಬ್ಬಿ ಇವರು ಅಧಿಕೃತ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಲಕ್ಷ್ಮಿ ಎಸ್ ವಿ ತಾಲೂಕು ಅಧ್ಯಕ್ಷರು ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ತಾಲೂಕು ಘಟಕ ಗುಬ್ಬಿ ಇವರು ವಹಿಸಿಕೊಂಡಿದ್ದರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷರಾದ ಶ್ರೀಯುತ ಯತೀಶ್ ರವರು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಶ್ರೀಯುತ ಜಗದೀಶ್ ರವರು, ಡಾ.ಲತಾ ಎಸ್ ಮುಳ್ಳೂರ ರವರ ಆಪ್ತ ಕಾರ್ಯದರ್ಶಿಗಳಾದ ಶ್ರೀಮತಿ ಅನಿತಾ ಮತ್ತು ಶ್ರೀಮತಿ ಸೂರ್ಯಕಲಾ ರವರು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀ ಉಮೇಶ್ ರವರು, ಕರ್ನಾಟಕ ಸಾವಿತ್ರಿಬಾಯಿ ಫುಲೆ ಸಂಘದ ಗುಬ್ಬಿ ಘಟಕದ ಗೌರವಾಧ್ಯಕ್ಷರಾದ ಶ್ರೀಮತಿ ಸುಭಾಷಿಣಿ, ಕಾರ್ಯದರ್ಶಿ ಶ್ರೀಮತಿ ವಿಶಾಲಾಕ್ಷಿ, ಖಜಾಂಚಿ ಮಂಜಮ್ಮ, ಹಿರಿಯ ಸಲಹೆಗಾರರಾದ ಶ್ರೀಮತಿ ವಿಜಯಮ್ಮ, ತುಮಕೂರು ತಾಲ್ಲೂಕು ಘಟಕದ ಅಧ್ಯಕ್ಷರಾದ ಶ್ರೀಮತಿ ಸಿದ್ದಮ್ಮನವರು, ಜಿಲ್ಲಾ ಕಾರ್ಯದರ್ಶಿ ಶೋಭರವರು, ತಿಪಟೂರು ಅಧ್ಯಕ್ಷರಾದ ಶ್ರೀಮತಿ ವನಿತಾ ರವರು,ಕುಣಿಗಲ್ ಅಧ್ಯಕ್ಷರಾದ ಶ್ರೀಮತಿ ಗೀತಾಂಜಲಿಯವರು, ಸಂಘದ ಪ್ರೋತ್ಸಾಹಕರಾದ ಶ್ರೀ ಸುರೇಶಯ್ಯ ಎಂ ಜಿ, ಶ್ರೀ ರಂಗಸ್ವಾಮಿ, ಶ್ರೀ ರವೀಶ್, ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಉಷಾ,ಶ್ರೀಮತಿ ನಾಗರತ್ನಾ, ಶ್ರೀಮತಿ ಭವ್ಯ,
ವಿವಿಧ ಸಂಘಗಳ ನಿರ್ದೇಶಕರಾದಂತ ಶ್ರೀ ಶಶಿಧರ್, ಶ್ರೀ ಸಿದ್ದಲಿಂಗೇಗೌಡ, ಶ್ರೀ ಅರುಣ್ ಕುಮಾರ್, ಶ್ರೀಮತಿ ಎನ್.ಟಿ ಲಕ್ಷ್ಮಿ, ಶ್ರೀ ಪಿ ಆರ್ ಚನ್ನಬಸಪ್ಪ, ಶ್ರೀ ಜಗದೀಶ್, ಶ್ರೀ ಶ್ರೀನಿವಾಸ್ ಹಾಗೂ ಗುಬ್ಬಿ ತಾಲೂಕು ಘಟಕದ ಎಲ್ಲಾ ಪದಾಧಿಕಾರಿಗಳು, ಬಿ ಆರ್ ಪಿ ಗಳು, ಬಿ ಐ ಆರ್ ಟಿ, ಸಿ ಆರ್ ಪಿ ಗಳು ಹಾಜರಿದ್ದರು.

ಉಚಿತ ಆರೋಗ್ಯ ತಪಾಸಣೆ- ಚಾಲುಕ್ಯ ಆಸ್ಪತ್ರೆ ಸಿಬ್ಬಂದಿಗಳು

ಆದಾಯ ತೆರಿಗೆ ಕಟ್ಟಲು ವಿನಾಯಿತಿಯ ಅವಕಾಶಗಳು:

🔶🔶🔶🔶🔶🔶🔶🔶

ಬರಹ: ಪರಶುರಾಮ ಗುತ್ತಲ್ ಸಹಶಿಕ್ಷಕರು

👉80C:- (ಈಗಾಗಲೇ ವೇತನದಲ್ಲೇ ಕಟಾವಣೆಗಳ ಒಟ್ಟು ಮೊತ್ತ ರೂ 1,50,000 ಮೀರಿದವರಿಗೆ ಈ ಕೆಳಗಿನವುಗಳು ಅನ್ವಯಿಸುವುದಿಲ್ಲ)
• 1) ಮಕ್ಕಳ ಟ್ಯೂಷನ್ ಫೀ ರಸೀದಿ
• 2) PLI ತುಂಬಿದ ದಾಖಲೆ
• 3) ಕೈಯಿಂದ ತುಂಬುವ LIC ಕಂತು
• 4) NSC
• 5) ಸುಕನ್ಯಾ ಸಮೃದ್ಧಿ
• 6) ವಾಪಸ್ಸು ತುಂಬಿದ ಗೃಹ ಸಾಲದ ಅಸಲು
• 7) ಇತರೆ

👉80 ಸಿ ಅಡಿ ರೂ. 1,50,000 ಮೀರಿದ್ದರೂ ನೇರವಾಗಿ ಆದಾಯದಲ್ಲಿ ಕಟಾವಣೆಗೆ ಇರುವ ಅವಕಾಶಗಳು

👉ಗೃಹ ಸಾಲದ ಬಡ್ಡಿ ತುಂಬುತ್ತಿರುವವರು ಬ್ಯಾಂಕ್ ನಿಂದ ‘Provisional Interest Certificate’ ಅಂತಾ ಕೇಳಿ (ಸ್ಟೇಟ್ ಮೆಂಟ್ ಅಂತಾ ಕೇಳಿ ತರಬೇಡಿರಿ) ಪಡೆದುಕೊಂಡು ಪೂರೈಸಿರಿ.

👉80 D:- ಆರೋಗ್ಯ ವಿಮೆ
ಸ್ವಂತ ಹಾಗೂ ಅವಲಂಬಿತರ ಹೆಸರಿನಲ್ಲಿ ಆರೋಗ್ಯ ವಿಮೆ ಮಾಡಿಸಲು ತುಂಬಿದ ಪ್ರೀಮಿಯಂ ಗೆ ಗರಿಷ್ಟ 25000 ವರೆಗೆ ಆದಾಯದಲ್ಲಿ ವಿನಾಯಿತಿ ಸಿಗುತ್ತದೆ. 60 ವರ್ಷ ಮೀರಿದ ಅವಲಂಬಿತರಿಗೆ (ತಂದೆ-ತಾಯಿಗಳಿಗೆ) ಆರೋಗ್ಯ ವಿಮೆ ಮಾಡಿಸಲು ತುಂಬಿದ ಪ್ರೀಮಿಯಂ ಗೆ ಗರಿಷ್ಟ 50000 ವರೆಗೆ ಆದಾಯದಲ್ಲಿ ವಿನಾಯಿತಿ ಸಿಗುತ್ತದೆ.

👉80 DD:- ವಿಕಲಚೇತನ ಅವಲಂಬಿತರ ವೈದ್ಯಕೀಯ ವೆಚ್ಚ
ಅವಲಂಬಿತರು ವಿಕಲಚೇತನರಾಗಿದ್ದಲ್ಲಿ ಅವರ ವೈಕಲ್ಯ ಪ್ರಮಾಣ ಶೇ 40-79 ಇದ್ದಲ್ಲಿ ಗರಿಷ್ಠ ರೂ 75,000 ಅಥವಾ ಶೇ 80 ಕ್ಕಿಂತ ಹೆಚ್ಚಿದ್ದಲ್ಲಿ ಗರಿಷ್ಠ ರೂ 1,25,000 ಆದಾಯದಿಂದ ಕಳೆಯಲ್ಪಡುತ್ತದೆ.

👉80 DDB:- ನಿರ್ಧಾರಿತ ಖಾಯಿಲೆಗಳಿಗೆ ಚಿಕಿತ್ಸಾ ವೆಚ್ಚ ವಿನಾಯಿತಿ
ಆದಾಯ ತೆರಿಗೆ ಇಲಾಖೆಯು ಕೆಲವು ನಿರ್ಧಾರಿತ ರೋಗಗಳಿಗೆ ಮಾಡುವ ವೆಚ್ಚಕ್ಕೆ ವಿನಾಯಿತಿ ನೀಡುತ್ತದೆ. ತಾವು ಅಥವಾ ತಮ್ಮಅವಲಂಬಿತರು ಅಂತಹ ರೋಗಗಳಿಗೆ ಚಿಕಿತ್ಸೆ ಪಡೆದಿದ್ದಲ್ಲಿ ರಸೀದಿಗಳು ಹಾಗೂ ಹಾಗೂ ಎಂ.ಡಿ ಅಥವಾ ಎಂ.ಎಸ್ ಪದವಿ ಹೊಂದಿದ ವೈದ್ಯರಿಂದ ’10 – I’ ಪ್ರ.ಪತ್ರ ಪಡೆದು ಸಲ್ಲಿಸಬೇಕು. ಆ ನಿರ್ಧಾರಿತ ರೋಗಗಳ ಪಟ್ಟಿ ಈ ಕೆಳಗಿನಂತೆ ಇದೆ, ಇದನ್ನು ಸಕ್ಷಮ ವೈದ್ಯರೇ ನಿರ್ಧರಿಸಿ ಪ್ರಮಾಣ ಪತ್ರ ನೀಡಬೇಕಾಗುತದತೆ.
(i) Neurological Diseases where the disability level has been certified to be of 40% and above,—
(a) Dementia ;
(b) Dystonia Musculorum Deformans ;
(c) Motor Neuron Disease ;
(d) Ataxia ;
(e) Chorea ;
(f) Hemiballismus ;
(g) Aphasia ;
(h) Parkinsons Disease ;
(ii) Malignant Cancers ;
(iii) Full Blown Acquired Immuno-Deficiency Syndrome (AIDS) ;
(iv) Chronic Renal failure ;
(v) Hematological disorders :
(i) Hemophilia ;
(ii) Thalassaemia.

👉80 CCD 1(B):- NPS ಗೆ ಹೆಚ್ಚುವರಿಯಾಗಿ ಸಂದಾಯ ಮಾಡಿದ ಮೊತ್ತ.
ವೇತನದಲ್ಲಿ ಕಟಾವಣೆಯಾಗುವ ಮೊತ್ತವಲ್ಲದೇ ಎನ್.ಪಿ.ಎಸ್ ಗೆ ಹೆಚ್ಚುವರಿಯಾಗಿ ಹಣ ತುಂಬಿದ್ದರೆ ಗರಿಷ್ಠ ರೂ 50000 ವರೆಗೆ ವಿನಾಯಿತಿ ಇದೆ.

👉80 E:- ಶಿಕ್ಷಣ ಸಾಲದ ಬಡ್ಡಿ
ನೌಕರನು ತನ್ನ ಹಾಗೂ ಅವಲಂಬಿತರ ಶಿಕ್ಷಣ ಸಾಲದ ಬಡ್ಡಿ ತುಂಬಿದ್ದರೆ ಅದಕ್ಕೆ ವಿನಾಯಿತಿ ಸಿಗುತ್ತದೆ.

👉80 G:- ದೇಣಿಗೆ/ದಾನ ಕ್ಕೆ ವಿನಾಯಿತಿ
ಆದಾಯ ತೆರಿಗೆ ಇಲಾಖೆಯಲ್ಲಿ 80ಜಿ ಅಡಿ ನೋಂದಣಿ ಮಾಡಿಕೊಂಡು ಚಾಲ್ತಿ ಪ್ರಮಾಣಪತ್ರ ಹೊಂದಿರುವ ಟ್ರಸ್ಟ್ / ಸಂಸ್ಥೆಗಳಿಗೆ ದಾನ ನೀಡಿದ್ದರೆ ಗರಿಷ್ಟ ಒಟ್ಟು ವೇತನದ ಶೇ 10 ಕ್ಕೆ ವಿನಾಯಿತಿ ಸಿಗುತ್ತದೆ

  • ಸರಕಾರೇತರ ಟ್ರಸ್ಟ್ ಗಳಿಗೆ ನೀಡಿರುವ ದೇಣಿಗೆಯ ಶೇ 50 ರಷ್ಟು ಮಾತ್ರ ನಿಮ್ಮ ಆದಾಯದಿಂದ ಕಳೆಯಲ್ಪಡುತ್ತದೆ.
  • ಸರಕಾರಿ ನಿಧಿಗಳಾಗಿದ್ದಲ್ಲಿ ನೀಡಿರುವ ದೇಣಿಗೆಯ ಶೇ 100 ರಷ್ಟು ಮಾತ್ರ ನಿಮ್ಮ ಆದಾಯದಿಂದ ಕಳೆಯಲ್ಪಡುತ್ತದೆ.
  • ರೂ 2000 ಕ್ಕಿಂತ ಹೆಚ್ಚಿಗೆ ದೇಣಿಗೆ ನೀಡುವವರು ಕಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆಯಿಂದ ಚೆಕ್/ಡಿ.ಡಿ/NEFT/RTGS ವಿಧಾನದ ಮುಖಾಂತರವೇ ಹಣ ಸಂದಾಯ ಮಾಡಿರಬೇಕಾಗುತ್ತದೆ.

👉80 U:- ಸ್ವತಃ ನೌಕರನೇ ವಿಕಲಚೇತನರಾಗಿದ್ದಲ್ಲಿ ಪ್ರಮಾಣ ಪತ್ರ ಪೂರೈಸಿರಿ

ಮಾತೆ ಸಾವಿತ್ರಿಬಾಯಿ ಪುಲೆ ಜನ್ಮದಿನಾಚರಣೆಯನ್ನು ವೃದ್ದಾಶ್ರಮದಲ್ಲಿ ಆಚರಿಸಿ ರಾಜ್ಯಕ್ಕೆ ಮಾದರಿಯಾದ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ

ಚಾಮರಾಜನಗರ.ಜ.28.ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್(ರಿ) ನವದೆಹಲಿ
ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)
ರಾಜ್ಯ ಘಟ್ಟಕ – ಧಾರವಾಡ
ಜಿಲ್ಲಾ ಹಾಗೂ ತಾಲೂಕು ಘಟಕ ಚಾಮರಾಜನಗರದ ವತಿಯಿಂದ ಮಾತೆ ಸಾವಿತ್ರಿಬಾಯಿ ಫುಲೆರವರ ಜನ್ಮ ದಿನಾಚರಣೆಯ ಅಂಗವಾಗಿ ದಿನಾಂಕ 27.01. 2024 ರಂದು ಆಶ್ರಯ ಸೇವಾ ಚಾರಿಟಬಲ್ ಟ್ರಸ್ಟನ ವೃದ್ಧಾಶ್ರಮದಲ್ಲಿ ಉಪನ್ಯಾಸ ಹಾಗೂ ವೃದ್ಧಾಶ್ರಮಕ್ಕೆ ಕೊಡುಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಂಘದ ವತಿಯಿಂದ ವೃದ್ಧಾಶ್ರಮಕ್ಕೆ ಊಟದ ವ್ಯವಸ್ಥೆಯನ್ನು ಮಾಡಿ, ಬ್ಲೂಟೂತ್ ಧ್ವನಿವರ್ಧಕವನ್ನು ಕೊಡುಗೆಯಾಗಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಚಾಮರಾಜನಗರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದಂತ ಡಿ ಸೋಮಣ್ಣೇಗೌಡ ರವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಮತಿ ಭವಾನಿದೇವಿ ಸಿ. ಎನ್. ರವರು ವಹಿಸಿದ್ದರು. ಪ್ರಾಸ್ತಾವಿಕ ನುಡಿಗಳನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಸುಶೀಲ ಸಿ.ಎಂ.ರವರು ನೆರವೇರಿಸಿ ಕೊಟ್ಟರು. ಸ್ವಾಗತ ಕಾರ್ಯಕ್ರಮವನ್ನು ತಾಲೂಕು ಅಧ್ಯಕ್ಷರಾದ ಶ್ರೀಮತಿ ನೇತ್ರಾವತಿ .ಎಸ್. ನಡೆಸಿಕೊಟ್ಟರು. ನಂಜನಗೂಡು ತಾಲೂಕು ಕೋಶಾಧ್ಯಕ್ಷರಾದ ಶ್ರೀಮತಿ ಚಂದ್ರಕಲಾ ಪಿ ರವರು ಮಾತೆ ಸಾವಿತ್ರಿಬಾಯಿ ಫುಲ್ಲರವರ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನೆರವೇರಿಸಿದರು. ಶ್ರೀಮತಿ ಪ್ರೇಮ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ಮಂಗಳಮ್ಮ ರವರು ವಂದನಾರ್ಪಣೆ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ವೈ.ಎಸ್. ಮಹದೇವಯ್ಯನವರು ಆಶ್ರಯ ಸೇವಾ ಚಾರಿಟೇಬಲ್ ಟ್ರಸ್ಟ್ ನ ವ್ಯವಸ್ಥಾಪಕರಾದ ಶ್ರೀಯುತ ರಮೇಶ್ ರವರು, ಸಂಘದ ಕಾರ್ಯದರ್ಶಿಗಳಾದ ಶ್ರೀಮತಿ ಶ್ಯಾಮ ಸುಂದರಿ ರವರು ಕೋಶ ಅಧ್ಯಕ್ಷರಾದ ಶ್ರೀಮತಿ ಶಿವರುದ್ರಮ್ಮನವರು,ಸಾವಿತ್ರಿಬಾಯಿ ಫುಲೆ ಸಂಘದ ಸರ್ವ ಸದಸ್ಯರು
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಹಾಗೂ ತಾಲೂಕು ಘಟಕದ ಅಧ್ಯಕ್ಷರು ಕಾರ್ಯದರ್ಶಿಗಳು ಹಾಗೂ ಸರ್ವ ಪದಾಧಿಕಾರಿಗಳು ಶಿಕ್ಷಕ ಶಿಕ್ಷಕಿ ಬಂಧುಗಳು ಹಾಗೂ ಆಶ್ರಮದ ಫಲಾನುಭವಿಗಳು ಹಾಜರಿದ್ದರು.

ಮಧುಗಿರಿ ಶೈ ಜಿಲ್ಲಾ ಮಟ್ಟದ ಮಾತೆ ಸಾವಿತ್ರಿಬಾಯಿ ಫುಲೆ‌ ಜನ್ಮದಿನಾಚರಣೆ‌ ಮತ್ತು ಶೈಕ್ಷಣಿಕ ಕಾರ್ಯಾಗಾರ ಯಶಸ್ವಿ.

ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ಧಾರವಾಡ. ಮಧುಗಿರಿ ಜಿಲ್ಲಾ ಘಟಕ ವತಿಯಿಂದ ಇಂದು ನಡೆದ ಜಿಲ್ಲಾ ಘಟಕದ ಜಿಲ್ಲಾಮಟ್ಟದ ಸಾವಿತ್ರಿಬಾಯಿ ಪುಲೆ ಜನ್ಮದಿನೋತ್ಸವ ಹಾಗೂ ಶೈಕ್ಷಣಿಕ ಕಾರ್ಯಗಾರವು ಇಂದು ಶಿರಾ ನಗರದ ಅಂಬೇಡ್ಕರ್ ಭವನದಲ್ಲಿ ಜರುಗಿತು. ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷರಾದಂತಹ ಶ್ರೀಮತಿ ರಾಧಮ್ಮನವರು ಅಧ್ಯಕ್ಷತೆ ವಹಿಸಿದ್ದರು.ಡಾ/ ಶ್ರೀ ಶ್ರೀ ಶ್ರೀ ಹನುಮಂತನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮವು ಜರುಗಿತು. ಕಾರ್ಯಕ್ರಮವನ್ನು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ನೂರುನ್ನೀಸರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗೌರವಾನ್ವಿತ ಅತಿಥಿಗಳಾದಂತಹ ಶಿರಾ ತಾಲೂಕಿನ ಹಿರಿಯ ನ್ಯಾಯಾಧೀಶರಾದ ಗೀತಾಂಜಲಿ ಮೇಡಂ ರವರು DYPC ಶ್ರೀಮತಿ ಪುಷ್ಪವಲ್ಲಿ ಮೇಡಂ ರವರು, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸನ್ಮಾನ್ಯ ಕೃಷ್ಣಪ್ಪ ಸರ್ ಅ ವರು, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿಯಾದ ಟಿ.ಡಿ ನರಸಿಂಹಮೂರ್ತಿ, ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಲತಾಮಣಿ ಹೆಚ್ ಕೆ,ಶಿರಾ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಹನುಮಂತರಾಜು ಬಿ ಆರ್, ಮಧುಗಿರಿ ಶೈಕ್ಷಣಿಕ ಜಿಲ್ಲೆಯ ನಾಲ್ಕು ತಾಲೂಕಿನ ಅಧ್ಯಕ್ಷರಾದ ಕೊರಟಗೆರೆ ತಾಲೂಕಿನ ಸುಜಾತ ಜಿ ರವರು. ಮಧುಗಿರಿ ತಾಲೂಕಿನ ಮೀನಾಕ್ಷಮ್ಮ ಹಾಗೂ ಶಿರಾ ತಾಲೂಕಿನ ಪದ್ಮಕ್ಕ ಪಾವಗಡ ತಾಲೂಕಿನ ದುರ್ಗಮ್ಮ ಅಧ್ಯಕ್ಷರು ಹಾಜರಿದ್ದರು ತಾಲ್ಲೂಕು ಘಟಕದಅಧ್ಯಕ್ಷರು , ಕಾರ್ಯದರ್ಶಿಗಳು, ಕೋಶಾಧ್ಯಕ್ಷರು, ಎಲ್ಲಾ ಪದಾಧಿಕಾರಿಗಳು, ಶಿರಾ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಹಿಳಾ ಪದಾಧಿಕಾರಿಗಳು ಹಾಜರಿದ್ದರು. ನ್ಯಾಯಾಧೀಶರಾದಂತಹ ಗೀತಾಂಜಲಿ ಮೇಡಂ ಅವರು ಕಾನೂನಿನ ಅರಿವು ಮೂಡಿಸಿದರು. ತುಮಕೂರಿನ ಹಿರಿಯ ನ್ಯಾಯಾಧೀಶರಾದ ನೂರು ನ್ನೀಸಾ ಮೇಡಂ ರವರು ಶಿಕ್ಷಕಿಯರಿಗೆ ಮಕ್ಕಳಿಗೆ ಅಪ್ರಾಪ್ತ ವಯಸ್ಸಿನಲ್ಲಿ ಆಗುವಂತಹ ತೊಂದರೆಗಳು ಹಾಗೂ ಅದರ ಪರಿಣಾಮಗಳ ಬಗ್ಗೆ ವಿವರವಾಗಿ ತಿಳಿಸಿದರು. ಹಾಗೆ ಶಿಕ್ಷಕರು ಯಾವ ರೀತಿ ಮಕ್ಕಳ ವಿಷಯದಲ್ಲಿ ಕ್ರಮ ಕೈಗೊಳ್ಳಬೇಕೆಂಬುದರ ಬಗ್ಗೆಯೂ ತಿಳಿಸಿದರು. ಡಾ/ ಶ್ರೀ ಶ್ರೀ ಹನುಮಂತನಾಥ ಸ್ವಾಮೀಜಿರವರು ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ಹೆಚ್ಚಿಸುವ ಕುರಿತು ತಿಳಿಸಿದರು, ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವಂತಹ ತೊಂದರೆಗಳು ಹಾಗೂ ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಜವಾಬ್ದಾರಿ ತಿಳಿಸಿದರು .

ಜಿಲ್ಲಾ ಮಟ್ಟದ ಮಾತೇ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ ಮತ್ತು ಶೈಕ್ಷಣಿಕ ಕಾರ್ಯಾಗಾರ(ಕಾನೂನು ಅರಿವು ಮತ್ತು ನೆರವು)

ಶಿರಾ.ಜ.23. ಮಧುಗಿರಿ ಶೈ ಜಿಲ್ಲೆಯ ಜಿಲ್ಲಾ ಮಟ್ಟದ ಮಾತೇ ಸಾವಿತ್ರಿಬಾಯಿ ಫುಲೆ ರವರ ಜನ್ಮದಿನಾಚರಣೆ ಮತ್ತು ಶೈಕ್ಷಣಿಕ ಕಾರ್ಯಾಗಾರವು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ,ರಾಜ್ಯಘಟಕ-ಧಾರವಾಡ, ಜಿಲ್ಲಾಘಟಕ ಮಧುಗಿರಿ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾ, ತುಮಕೂರು ಜಿಲ್ಲೆ ಸಹಯೋಗದಲ್ಲಿ ಇಂದು ದಿನಾಂಕ 23-01-2024 ಮಂಗಳವಾರ ಬೆ.10am ಕ್ಕೆ ಶಿರಾ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ

ಈ ಕಾರ್ಯಕ್ರಮವು ಡಾ. ಶ್ರೀ ಶ್ರೀ ಶ್ರೀ ಹನುಮಂತನಾಥ ಸ್ವಾಮೀಜಿ ಯವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿದ್ದು, ಕಾರ್ಯಕ್ರಮವನ್ನು ತುಮಕೂರು ಜಿಲ್ಲೆಯ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀಮತಿ ನೂರುನ್ನೀಸ ರವರು ಉದ್ಘಾಟನೆ ಮಾಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ DDPI ರವರಾದ ಸನ್ಮಾನ್ಯ ಶ್ರೀ ಮಂಜುನಾಥ ಸರ್ ರವರು ಭಾಗವಹಿಸಲಿದ್ದಾರೆ
ಹಿರಿಯ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀಮತಿ ನೂರುನ್ನೀಸ ಮೇಡಂ ರವರು ಕಾರ್ಯಾಗಾರದಲ್ಲಿ ಕಾನೂನು ಅರಿವು ಮೂಡಿಸಲಿದ್ದಾರೆ
ಗೌರವ ಅತಿಥಿಗಳಾಗಿ ಮಧುಗಿರಿ ತಾಲ್ಲೂಕಿನ BEO ರವರಾದ ಸನ್ಮಾನ್ಯ ಶ್ರೀ K.N ಹನುಮಂತರಾಯಪ್ಪ ಸರ್, ಶಿರಾ ತಾಲ್ಲೂಕಿನ BEO ರವರಾದ ಸನ್ಮಾನ್ಯ ಶ್ರೀ ಕೃಷ್ಣಪ್ಪ ಸರ್, ಕೊರಟಗೆರೆ ತಾಲ್ಲೂಕಿನ BEO ರವರಾದ ಸನ್ಮಾನ್ಯ ಶ್ರೀ ನಟರಾಜು ಸರ್, ಪಾವಗಡ ತಾಲ್ಲೂಕಿನ BEO ರವರಾದ ಸನ್ಮಾನ್ಯ ಶ್ರೀಮತಿ ಇಂದ್ರಾಣಮ್ಮನವರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ
ಅಂತೆಯೇ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ತಾಲ್ಲೂಕುಗಳ ನೌಕರರ ಮತ್ತು ಶಿಕ್ಷಕರ ಎಲ್ಲಾ ಸಂಘಟನೆಗಳ ಪದಾಧಿಕಾರಿಗಳು ಬಾಗಿಯಾಗಲಿದ್ದಾರೆ. ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಲು, ಮಾತೇ ಸಾವಿತ್ರಿ ಬಾಯಿ ಫುಲೆರವರನ್ನು ಸ್ಮರಿಸಲು ಹಾಗೂ ಶೈಕ್ಷಣಿಕ ಕಾರ್ಯಾಗಾರದ ಸದುಪಯೋಗ ಪಡಿಸಿಕೊಳ್ಳಲು ಕಾರ್ಯಕ್ರಮಕ್ಕೆ ಭಾಗವಹಿಸುವ ಶಿಕ್ಷಕಿಯರಿಗೆ ಸನ್ಮಾನ್ಯ ಜಿಲ್ಲಾ ಉಪನಿರ್ದೇಶಕರು OOD ಸೌಲಭ್ಯವನ್ನು ಒದಗಿಸಿದ್ದಾರೆ. ತಪ್ಪದೇ ಎಲ್ಲರು ಕಾರ್ಯಕ್ರಮದಲ್ಲಿ ಬಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದೆ

ಸ್ಥಳ: ಅಂಬೇಡ್ಕರ್ ಭವನ, ಸಪ್ತಗಿರಿ ಟಾಕೀಸ್ ಮುಂಭಾಗ, ಅಂಬೇಡ್ಕರ್ ಭವನ,ಶಿರಾ
ದಿನಾಂಕ:23:01:2024ಮಂಗಳವಾರ ಸಮಯ:10:00am

ಇಂದ:

ಜಿಲ್ಲಾ ಮತ್ತು ಎಲ್ಲಾ ತಾಲ್ಲೂಕುಗಳ ಅಧ್ಯಕ್ಷರು,ಕಾರ್ಯದರ್ಶಿಗಳು ಹಾಗೂ ಎಲ್ಲಾ ಪದಾಧಿಕಾರಿಗಳು
ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ-ಧಾರವಾಡ ಜಿಲ್ಲಾಘಟಕ ಮಧುಗಿರಿ

ಸಂಘದ ಸಹಾಯವಾಣಿ ಮತ್ತು ವೆಬ್ಸೈಟ್ URLs ಬಿಡುಗಡೆ

ಧಾರವಾಡ.ಜ.22 ಇಂದು ಧಾರವಾಡ ಶಹರದಲ್ಲಿನ ಡಾ.ಪಾಟೀಲ್ ಪುಟ್ಟಪ್ಪರವರ ಸಭಾಭವನದಲ್ಲಿ ನಡೆದ ಮಾತೇ ಸಾವಿತ್ರಿಬಾಯಿ ಫುಲೆರವರ ಜನ್ಮದಿನಾಚರಣೆ ಹಾಗೂ ಶೈಕ್ಷಣಿಕ ಕಾರ್ಯಾಗಾರ ಸಮಾರಂಭವನ್ನು ಉದ್ಘಾಟನೆ ಮಾಡಿದ ವಿಧಾನಪರಿಷತ್ ಸಭಾಪತಿಗಳಾದ ಗೌರವಾನ್ವಿತ ಸನ್ಮಾನ್ಯ ಶ್ರೀ ಬಸವರಾಜ ಹೊರಟ್ಟಿ ರವರು ಹಾಗೂ ಅವರ ಜೊತೆಯಾಗಿ ಸಾವಿತ್ರಿಬಾಯಿ ಫುಲೆ ಚಲನಚಿತ್ರದ ನಿರ್ಮಾಕರಾದ ಶ್ರೀ ಬಸವರಾಜ ಭೂತಾಳಿರವರು ಹಾಗೂ ವೇದಿಕೆಯ ಗಣ್ಯರೆಲ್ಲರೂ ಸಾಮೂಹಿಕವಾಗಿ ಸಂಘದ ಸಹಾಯವಾಣಿ ಮತ್ತು ವೆಬ್ಸೈಟ್ URLs ಬಿಡುಗಡೆ ಮಾಡಿದರು.

ಇದು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಮತ್ತೊಂದು ಬೆಳವಣಿಗೆಯ ಹೆಜ್ಜೆಯಾಗಿದೆ.

ಇದರಿಂದ ರಾಷ್ಟ್ರದ ಮತ್ತು ರಾಜ್ಯದ ಪ್ರತೀ ಶಿಕ್ಷಕಿಯರಿಗೆ ಸಂಘದ ಚಟುವಟಿಕೆಗಳ ಮಾಹಿತಿ ವೆಬ್ಸೈಟ್ ನಲ್ಲಿ ಲಬ್ಯವಾಗಲಿದೆ.ಹಾಗೂ ಶಿಕ್ಷಕಿಯರ ಕುಂದುಕೊರತೆಗಳಿಗಾಗಿ ಸಹಾಯವಾಣಿಯನ್ನು ನಿಗದಿತ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ.

Helpline – 8904772928

Website URLs:- Phuleteachers. In

ಮಾತೇ ಸಾವಿತ್ರಿಬಾಯಿ ಫುಲೆ ಜನ್ಮಜಯಂತಿ ಆಚರಣೆಗೆ ತಯ್ಯಾರಿ

ಧಾರವಾಡ ಜ.20 ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ಜಿಲ್ಲಾಘಟಕ- ಧಾರವಾಡ ವತಿಯಿಂದ ಜನವರಿ 22 ರಂದು ಬೆ.10:30 ಗಂಟೆಗೆ ಧಾರವಾಡ ಶಹರದ ವಿದ್ಯಾವರ್ಧಕ ಸಂಘ,ಡಾ. ಪಾಟೀಲ್ ಪುಟ್ಟಪ್ಪ ಸಭಾ ಭವನದಲ್ಲಿ ಮಾತೇ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ ಹಾಗೂ ಶೈಕ್ಷಣಿಕ ಕಾರ್ಯಾಗಾರಗಳನ್ನು ಹಮ್ಮಿಕೊಂಡಿದೆ.ಈ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸಭಾಪತಿಗಳಾದ ಗೌರವಾನ್ವಿತ ಸನ್ಮಾನ್ಯ ಬಸವರಾಜ ಹೊರಟ್ಟಿ ರವರು ಉದ್ಘಾಟಿಸಲಿದ್ದು,ವಿಶೇಷ ಆಹ್ವಾನಿತರಾಗಿ ಗೌರವಾನ್ವಿತ ಶ್ರೀ ಪರಶುರಾಮ.ಎಫ್.ದೊಡ್ಡಮನಿ ,ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಧಾರವಾಡ ರವರು‌ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ರವರು ವಹಿಸಲಿದ್ದು,ಕಾರ್ಯಕ್ರಮದಲ್ಲಿ ಪೋಕ್ಸೊ ಕಾಯಿದೆ ಮತ್ತು ಆಧುನಿಕ ಜಗತ್ತಿನಲ್ಲಿ ಮಹಿಳೆಯ ಪಾತ್ರ, ಹಾಗೂ ಜೀವನ ಕೌಶಲಗಳು ಮತ್ತು ಮಾನವೀಯ ಮೌಲ್ಯಗಳು ಈ ವಿಷಯಗಳ ಕುರಿತಂತೆ ಶೈಕ್ಷಣಿಕ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರತೀವರ್ಷ ಸಂಘಟನೆಯಿಂದ ಕೊಡಮಾಡುವ ಏಕೈಕ ಅತ್ಯುನ್ನತ ರಾಜ್ಯ ಪ್ರಶಸ್ತಿಯಾದ ” ಮಾತೇ ಅಕ್ಷರದವ್ವ ರಾಜ್ಯ ಪ್ರಶಸ್ತಿಯನ್ಮು ಈ ಸಾಲಿಗೆ ಶಿಕ್ಷಣತಾಯಿ ಲೂಸಿ ಸಾಲ್ಡಾನ ರವರಿಗೆ ನೀಡಲಾಗುತ್ತಿದೆ. ಅಲ್ಲದೇ ನಮ್ಮ ಸಂಘಟನೆ ಸಹಾಯವಾಣಿ ಸಂಖ್ಯೆ ಹಾಗೂ ವೆಬ್ಸೈಟ್ URLs ಬಿಡುಗಡೆ ಮಾಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾಜ್ಯ ಪ್ರಶಸ್ತಿ ವಿಜೇತ ಸಾವಿತ್ರಿಬಾಯಿ ಫುಲೆ ಚಲನಚಿತ್ರದ ನಿರ್ಮಾಪಕರಾದ ಶ್ರೀ ಬಸವರಾಜ ಭೂತಾಳಿ ರವರು, ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರಾದ (ಆಡಳಿತ) ಶ್ರೀ ಎಸ್ ಎಸ್ ಕೆಳದಿಮಠ ರವರು ಹಾಗೂ ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರಾದ (ಅಭಿವೃದ್ದಿ)  ಶ್ರೀಮತಿ ಜಯಶ್ರೀ ಕಾಳೇಕರ್ ರವರು ಹಾಗೂ ಇತರೆ ಗಣ್ಯಮಾನ್ಯರುಗಳು ಉಪಸ್ಥಿತರಿದ್ದು ಎಲ್ಲಾ ತಾಲ್ಲೂಕಿನ ಕ್ಷೇತ್ರಶಿಕ್ಷಣಾಧಿಕಾರಿಗಳು,ಇತರೆ ಶಿಕ್ಷಣ ಅಧಿಕಾರಿಗಳು,ಸಂಘಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಭಾಗವಹಿಸಲು ಧಾರವಾಡ ಜಿಲ್ಲೆಯ ಶಾಲಾ ಶಿಕ್ಷಕಿಯರಿಗೆ ಒಒಡಿ ಸೌಲಭ್ಯ ವಿದ್ದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಜಿಲ್ಲಾ ಹಾಗೂ ಎಲ್ಲಾ ಪದಾಧಿಕಾರಿಗಳ ಪರವಾಗಿ ಜಿಲ್ಲಾಘಟಕದ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ರಾಥೋಡ್ ರವರು ಮನವಿ ಮಾಡಿದ್ದಾರೆ.