ಫುಲೆ ಸಂಘದ ಶಿಕ್ಷಕಿಯರಿಂದ ಶಿಕ್ಷಕ ಸ್ನೇಹಿ ಗ್ರಂಥಾಲಯಕ್ಕೆ ಉಪಯುಕ್ತ ಪುಸ್ತಕಗಳ ಕೊಡುಗೆ.

ತುಮಕೂರು ಜೂ.21.ಇಂದು
ಸಾವಿತ್ರಿಬಾಯಿ ಪುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್(ರಿ) ನವದೆಹಲಿ ಮತ್ತು ಕರ್ನಾಟಕ ಸಾವಿತ್ರಿಬಾಯಿ‌ಫುಲೆ ಶಿಕ್ಷಕಿಯರ ಸಂಘ(ರಿ). ರಾಜ್ಯ ಘಟಕ ಧಾರವಾಡ,ತಾಲೂಕು ಘಟಕ ಗುಬ್ಬಿ ವತಿಯಿಂದ ತಾಲ್ಲೂಕಿನ ಶಿಕ್ಷಕರ ಜ್ಞಾನ ಬಲವರ್ಧನೆಗೆ ಪ್ರೋತ್ಸಾಹಿಸುವ ಶಿಕ್ಷಕ ಸ್ನೇಹಿ ಗ್ರಂಥಾಲಯಕ್ಕೆ ಉಪಯುಕ್ತ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಲೇಪಾಕ್ಷಪ್ಪ ಸರ್ , ಸಮೂಹ ಸಂಪನ್ಮೂಲ ಅಧಿಕಾರಿಗಳಾದ ಶ್ರೀಯುತ ಮಧುಸೂಧನ್ ಸರ್ ಹಾಗೂ ಅಕ್ಷರ ದಾಸೋಹ ನಿರ್ದೇಶಕರಾದ ಶ್ರೀಯುತ ಜಗದೀಶ್ ಸರ್ ಹಾಗೂ ಬಿ ಆರ್ ಪಿ .ಸಿ ಆರ್ ಪಿ ಗಳು ಹಾಜರಿದ್ದರು

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲೇಪಾಕ್ಷಪ್ಪ ರವರು ಶಿಕ್ಷಕ ಸ್ನೇಹಿ ಗ್ರಂಥಾಲಯಕ್ಕೆ ಸೂಕ್ತವಾದಂತಹ ಪುಸ್ತಕಗಳನ್ನ ಆಯ್ಕೆ ಮಾಡಿ ಉಪಯುಕ್ತ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದಕ್ಕಾಗಿ ಸಂಘಟನೆಯನ್ನು ಅಭಿನಂದಿಸಿದರು, ಈ ಒಂದು ಶಿಕ್ಷಕ ಸ್ನೇಹಿ ಗ್ರಂಥಾಲಯವನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.  ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳಾದಂತಹ ಶ್ರೀಯುತ ಮಧುಸೂದನ್ ಸರ್ ಅವರು ಸಾವಿತ್ರಿಬಾಯಿ ಪುಲೆ ಸಂಘದ ವತಿಯಿಂದ ಇದೇ ರೀತಿಯಲ್ಲಿ ಇನ್ನೂ ಹೆಚ್ಚಿನ ಸಂಘಟನಾತ್ಮಕ ಕೆಲಸಗಳು ನಡೆಯುತ್ತಿರಲಿ ಎಂದು ಆಶಿಸಿದರು ಹಾಗೂ ತಾಲೂಕಿನ ಅಕ್ಷರ ದಾಸೋಹ ನಿರ್ದೇಶಕರಾದಂತಹ ಶ್ರೀಯುತ ಜಗದೀಶ್ ಸರ್ ಅವರು ಮಾತನಾಡಿ ಸಂಘ ಅತ್ಯಂತ ಉತ್ಸುಕತೆಯಿಂದ ಎಲ್ಲಾ ಕಾರ್ಯಗಳಲ್ಲೂ ಪಾಲ್ಗೊಳ್ಳುತ್ತಿದೆ ಇದೇ ರೀತಿಯಾಗಿ ಮುಂದುವರೆಯಲಿ ಎಂದು ಹಾರೈಸಿದರು ಈ ಸುಸಂದರ್ಭದಲ್ಲಿ ಬಿ ಆರ್ ಪಿ ಸನ್ಮಿತ್ರರಾದಂತಹ ಶ್ರೀಮತಿ ರಾಜಲಕ್ಷ್ಮೀ ಮೇಡಂ ಹಾಗೂ ರೇಣುಕಾ ಪ್ರಸಾದ್ ಸರ್ ಮತ್ತು ತಾಲೂಕಿನ ಸಾವಿತ್ರಿಪಾಯಿ ಪುಲೆ ಸಂಘದ ಅಧ್ಯಕ್ಷರಾದಂತಹ ಶ್ರೀಮತಿ ಲಕ್ಷ್ಮಿ ಮೇಡಂ ಹಾಗೂ ಖಜಾಂಚಿಗಳಾದ ಶ್ರೀಮತಿ ಮಂಜುಳಾ ಮೇಡಂ ಹಾಗೂ ಪದಾಧಿಕಾರಿಗಳಾದಂತಹ ತಿಮ್ಮಮ್ಮ,ಪೂರ್ಣಿಮಾ, ರಾಜಮ್ಮ, ಪದ್ಮ ,ಜಯಮ್ಮ, ಚಂದ್ರಕಲಾ, ಸಿಂಧು ಹಾಜರಿದ್ದರು.

ಮಾತೆ ಸಾವಿತ್ರಿಬಾಯಿ‌ ಫುಲೆ ಪೆಂಟಿಂಗ್ ಚಿತ್ರವನ್ನು ಕೊಡುಗೆ ಕೊಟ್ಟ ಶಿಕ್ಷಕಿಯರು



ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ-ಧಾರವಾಡ✨ತಾಲ್ಲೂಕು ಘಟಕ-ಗುಬ್ಬಿ✨


2024 25 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲೇ ತಾಲ್ಲೂಕು ಘಟಕ- ಗುಬ್ಬಿ ವತಿಯಿಂದ ತಾಲ್ಲೂಕಿನ ಕಲಾವಿದರಾದ ಶ್ರೀ ಈಶ್ವರಪ್ಪ ರವರಿಂದ ರಚಿಸಲಾಗಿದ್ದು ಎನ್ನಲಾದ ಅಕ್ಷರದವ್ವ ಮಾತೇ ಸಾವಿತ್ರಿಬಾಯಿ ಫುಲೆ ಅವರ ಪೆಂಟಿಂಗ್ (ಅಳತೆ 6×4 ಅಡಿಗಳು) ಚಿತ್ರವನ್ನು ಇಂದು ಶಾಲಾ ಶಿಕ್ಷಣ ಇಲಾಖೆಯ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಕೊಡುಗೆಯಾಗಿ ನೀಡಿದ್ದಾರೆ ಅಲ್ಲದೇ ಒಂದು ಫ್ಯಾನ್ ಅನ್ನು ಸಹಾ ಕೊಡುಗೆಯಾಗಿ ಇದೇ ಸಂದರ್ಭದಲ್ಲಿ ನೀಡಲಾಗಿದೆ.

ಮಾತೆಯ ಈ ಪೆಂಟಿಂಗ್ ಚಿತ್ರವನ್ನು ತಾಲ್ಲೂಕಿನ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಲೇಪಾಕ್ಷಯ್ಯ ರವರು ಸ್ವೀಕರಿಸಿ‌ ಮಾತನಾಡಿದ ಅವರು ಭಾರತದ ಮೊದಲ ಶಿಕ್ಷಕಿ, ಅಕ್ಷರದವ್ವ,ಮಾತೇ ಸಾವಿತ್ರಿಬಾಯಿ ರವರ ಕೊಡುಗೆ ಅಪಾರವಾದದ್ದು, ಹೆಣ್ಣು ಶಾಲೆ ಕಲಿತಾಗ ಮಾತ್ರ ಸಮಾಜ ಸುಧಾರಣೆ ಸಾದ್ಯ ಎಂದು ಮನಗಂಡು, ಅನೇಕ ವಿರೋಧಗಳ ನಡುವೆ ಮೊಟ್ಟಮೊದಲ ಹೆಣ್ಣು ಮಕ್ಕಳ ಶಾಲೆ ತೆರೆದು ಇತಿಹಾಸ ಸೃಷ್ಟಿಸಿದವರಾಗಿದ್ದಾರೆ.ಅಂತಹ ಮಹಾ ಮಾತೆಗೆ ಎಲ್ಲರೂ ಮನೆ ಮನಗಳಲ್ಲಿ ಪೂಜನೀಯ ಸ್ಥಾನ ನೀಡಬೇಕಾಗಿದೆ,ಅವರ ಆದರ್ಶಗಳನ್ನ ತಾಲ್ಲೂಕಿನ ಪ್ರತೀ ಶಿಕ್ಷಕ ಶಿಕ್ಷಕಿಯರು ಅಳವಡಿಸಿಕೊಂಡು ಉತ್ತಮ ಸಮಾಜಕ್ಕಾಗಿ ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ಇಂದು ನೀಡಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.
ಮುಂದುವರೆದು
ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ಅನೇಕ ಉತ್ತಮ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು ಹೀಗೇ‌ ಇನ್ನೂ ಅನೇಕ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲಿ, ಸಂಘದ ಯಾವುದೇ ಸಮಾಜಮುಖಿ ಕಾರ್ಯಕ್ರಮಗಳಿಗೆ ನನ್ನ ಸಹಕಾರ,ಬೆಂಬಲ ಸದಾ ಇರಲಿದೆ ಎಂದರು.

ಸಂಘದ ತಾಲ್ಲೂಕು ಅಧ್ಯಕ್ಷರಾದ ಶ್ರೀಮತಿ ಎಸ್ ವಿ ಲಕ್ಷ್ಮಿ ಯವರು ಮಾತನಾಡಿ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಮಾತೆ ಸಾವಿತ್ರಿಬಾಯಿ ಪುಲೆಯ ಭಾವಚಿತ್ರವನ್ನು ಸಹಾ ಪ್ರತಿ ವರ್ಷ ವೇದಿಕೆಯಲ್ಲಿಟ್ಟು ಅನಾವರಣ ಮಾಡಿ ಮಾತೆಗೆ ಗೌರವ ಸಲ್ಲಿಸಬೇಕೆಂದು ಎಲ್ಲಾ ಪದಾಧಿಕಾರಿಗಳ ಪರವಾಗಿ ಮನವಿ ಮಾಡಿದರು.

ಮಾತೆಯ ಪೆಂಟಿಂಗ್ ಚಿತ್ರಕ್ಕಾಗಿ ತಗುಲಿದ ಖರ್ಚುವೆಚ್ಚ ಭರಿಸಿ ಸಂಪೂರ್ಣ ಸಹಕಾರ ನೀಡಿದ ಶ್ರೀಮತಿ ಸಾವಿತ್ರಮ್ಮ ರವರು ಮಾತನಾಡಿ ಮಾತೆಯ ಹೆಸರಿನಲ್ಲಿ ರಚಿಸಿಕೊಂಡಿರುವ ನಮ್ಮ ಸಂಘಕ್ಕೆ ಹೆಚ್ಚಿನ ಸಹಾಯ ಸಹಕಾರ ನೆರವನ್ನು ನೀಡಲು ನಾನು ಬಯಸುತ್ತೇನೆ ಇದರಿಂದ ಅಕ್ಷರದವ್ವ ಮಾತೆಗೆ ನನ್ನ ಸೇವೆ ಸಲ್ಲಿಸಿದಂತಾಗುತ್ತದೆ ಎಂಬ ಭಾವನೆಯನ್ನು ವ್ಯಕ್ತಪಡಿಸಿದರು.

ತಾಲ್ಲೂಕಿನ ಶಿಕ್ಷಕರಾದ ಶ್ರೀ
ಸುಬ್ರಹ್ಮಣ್ಯ ನವರು ಸಹ ಹಾಜರಿದ್ದು ಸಂಘದ ಉತ್ತಮ ಕಾರ್ಯಚಟುವಟಿಕೆಗಳಿಗೆ ನನ್ನ ಸಹಾಯ ಸಹಕಾರ ಸದಾ ಇರಲಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಬಿ ಇ ಒ ಕಚೇರಿಯ ಅಧಿಕಾರಿಗಳು,ಶಿಕ್ಷಕರ ಸಂಘದ ಎನ್.ಟಿ ಲಕ್ಷ್ಮಮ್ನ ,ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ತಾಲ್ಲೂಕು ಉಪಾಧ್ಯಕ್ಷರಾದ ಶ್ರೀಮತಿ ಜಯಮ್ಮ, ಸಂಘದ ತಾಲ್ಲೂಕು ಕಾರ್ಯದರ್ಶಿ ಶ್ರೀಮತಿ ವಿಶಾಲಾಕ್ಷಮ್ಮ, ಖಜಾಂಚಿಯಾದ ಶ್ರೀಮತಿ ಮಂಜಮ್ಮ ಮತ್ತು ಪದಾಧಿಕಾರಿಗಳಾದ ದಿವ್ಯ,ತಿಮ್ಮಮ್ಮ,ಚಂದ್ರಕಲಾ,ಸರೋಜಮ್ಮ,ರಾಜಮ್ಮ, ಪದ್ಮಾ, ರವರುಗಳು ಹಾಗೂ ಶಿಕ್ಷಕರಾದ ರವೀಶ್, ಸುಬ್ರಮಣ್ಯ, ಮುಂತಾದವರು
ಭಾಗವಹಿಸಿದ್ದರು.

SSLC ಪರೀಕ್ಷೆ ಮಾರ್ಚ್ 2024, ರಾಜ್ಯಕ್ಕೆ ಪ್ರಥಮ ಸ್ಥಾನ‌ ಕು.ಅಂಕಿತಾ ಗೆ ಸನ್ಮಾನ

ಸಾವಿತ್ರಿಬಾಯಿ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್ (ರಿ) ನವದೆಹಲಿ ಹಾಗೂ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ ಹಾಗೂ ಜಿಲ್ಲಾಘಟಕ ಬಾಗಲಕೋಟೆ ವತಿಯಿಂದ
2023-24 ನೇ ಸಾಲಿನ ಎಸ್.ಎಸ್. ಎಲ್.ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ‌ ಬಾಗಲಕೋಟೆ ಜಿಲ್ಲೆಯ,ಮುಧೋಳ ತಾ.ವಜ್ರಮಟ್ಟಿ ಗ್ರಾಮದ ವಿದ್ಯಾರ್ಥಿನಿ ಕುಮಾರಿ ಅಂಕಿತಾ ಬಸಪ್ಪ ಕೊಣ್ಣೂರ ರವರ ಮನೆಗೆ ಬೇಟಿ ನೀಡಿ ಸಾಧಕಿಗೆ ಸನ್ಮಾನಿಸಿ ಶುಭ ಹಾರೈಸಲಾಯಿತು


ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷರ ಮಾರ್ಗದರ್ಶನದಲ್ಲಿ ರಾಜ್ಯ ಹಿರಿಯ ಉಪಾಧ್ಯಕ್ಷರಾದ ಶ್ರೀಮತಿ ಹೇಮಾ ಕೊಡ್ಡಣ್ಣನವರ ನೇತೃತ್ವದಲ್ಲಿ ಬಾಗಲಕೋಟೆಯ ಜಿಲ್ಲಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಪರ್ವೀನ್ ನದಾಫ, ಜಿಲ್ಲಾ ಕೋಶಾಧ್ಯಕ್ಷರಾದ ಶ್ರೀಮತಿ ಸುಮಿತ್ರಾ ಹಿರೇಮಠ ರವರುಗಳು ಈ ಸನ್ಮಾನ ಸಂದರ್ಭದಲ್ಲಿ ಭಾಗವಹಿಸಿದ್ದರು ಇದೇ ಸಂದರ್ಭದಲ್ಲಿ ಮಾನ್ಯ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರು ಆದ ಡಾ. ಲತಾ.ಎಸ್.ಮುಳ್ಳೂರು ರವರು ಕು. ಅಂಕಿತಾಳೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಅಭಿನಂದನೆ ಸಲ್ಲಿಸಿ,ತಮ್ಮ ಭವಿಷ್ಯದ ಗುರಿ ಏನು ಎಂಬ ಮಾತಿಗೆ ಕು.ಅಂಕಿತ ಐ.ಎ.ಎಸ್.ಅಧಿಕಾರಿ ಆಗುವ ಆಸೆ ವ್ಯಕ್ತ ಪಡಿಸಿದಾಗ ತನ್ನ ಕನಸು ನನಸಾಗಲಿ,ತನ್ನ‌ ಗುರಿ ಸಾಧನೆಗಾಗಿ ಯಾವುದೇ ಸಹಕಾರ ನೆರವಿಗೆ ನಮ್ಮ ಸಂಘಟನೆ ಎಂದಿಗೂ ಸದಾ ಸಿದ್ದವಿರಲಿದೆ ಎಂದು ಭರವಸೆಯ ಮಾತಾಡಿದರು.

ಈ ಸಂದರ್ಭದಲ್ಲಿ ಹೆತ್ತವರಿಗೆ ಕೀರ್ತಿ ತಂದ ಅಂಕಿತಾ ರವರ ತಂದೆ ತಾಯಿಗೂ ಕೂಡ ಅಭಿನಂದನೆ ಸಲ್ಲಿಸಲಾಯಿತು.ಅಂಕಿತ ಮತ್ತು ತಂದೆ ತಾಯಿ ಕುಟುಂಬವು ಈ ಸಂದರ್ಭದಲ್ಲಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ

ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಮಹಿಳಾ ಶಿಕ್ಷಕಿಯರ ಸಂಘಕ್ಕೆ ಹೆಚ್ಚುವರಿಯಾಗಿ ಹೊಸ ಪದಾಧಿಕಾರಿಗಳ ನೇಮಕ

  • ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಮಹಿಳಾ ಶಿಕ್ಷಕಿಯರ ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕ 💐💐💐💐💐💐💐💐*
    ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಮಹಿಳಾ ಶಿಕ್ಷಕಿಯರ ಫೆಡರೇಶನ್ (ರಿ ) ನವದೆಹಲಿ, ದೇಶದ ಏಕೈಕ *ಮಹಿಳಾ ಶಿಕ್ಷಕಿಯರ ಸಂಘವು ರಾಷ್ಟ್ರ ಘಟಕಕ್ಕೆ * ಹೆಚ್ಚುವರಿಯಾಗಿ ಪದಾಧಿಕಾರಿಗಳ ನೇಮಕ ಮಾಡಿರುವುದನ್ನು ಘೋಷಿಸಲು ಹೆಮ್ಮೆಪಡುತ್ತದೆ *ತನ್ನ ರಾಷ್ಟ್ರೀಯ ಘಟಕಕ್ಕೆ ಹೊಸ ಪದಾಧಿಕಾರಿಗಳಾಗಿ ನೇಮಕಗೊಂಡ *ಎಲ್ಲರಿಗೂ ರಾಷ್ಟ್ರೀಯ ಘಟಕದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು. ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಶ್ರೀಮತಿ ಭಾಗ್ಯಮ್ಮ ಕರ್ನಾಟಕ ಜಂಟಿ *ಕಾರ್ಯದರ್ಶಿ, ಶ್ರೀಮತಿ ಭಾರತಿ ವರ್ಮ *ಚತ್ತೀಸ್‌ಗಢ ಜಂಟಿ ಕಾರ್ಯದರ್ಶಿ, ಶ್ರೀಮತಿ ಅರ್ಚನಾ* ಹರಿಯಾಣ ಸಂಘಟನಾ ಕಾರ್ಯದರ್ಶಿ ಮತ್ತು ಶ್ರೀಮತಿ ರಶ್ಮಿ ರಾಯ್. ಅಸ್ಸಾಂ ಸಂಘಟನಾ ಕಾರ್ಯದರ್ಶಿ.
    💐💐💐💐💐
    ಸರ್ವರಿಗೂ ಅಭಿನಂದನೆಗಳು *
  • ಡಾ. ಲತಾ ಎಸ್ ಮುಳ್ಳೂರ್ ರಾಷ್ಟ್ರೀಯ ಅಧ್ಯಕ್ಷರು

ಶ್ರೀಮತಿ ಒಕಂತಿ ರಜಿತಾ ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿ

ಡಾ. ಸಾರಿಕಾ ಎಸ್ ಗಂಗಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. 💐💐💐💐💐

ಛತ್ತೀಸ್‌ಗಢ ರಾಜ್ಯದ ಹೊಸ ರಾಜ್ಯ ಘಟಕದ ರಚನೆ

ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಸಂಘ(R) ನವದೆಹಲಿ , ದೇಶದ ಏಕೈಕ ಮಹಿಳಾ ಶಿಕ್ಷಕಿ ಯರ ಸಂಘವಾಗಿದೆ. ನಮ್ಮ ಶಿಕ್ಷಕಿಯರ ಸಂಘ ಈಗ ಛತ್ತೀಸ್‌ಗಢ ರಾಜ್ಯಕ್ಕೆ ತನ್ನ ಹೊಸ ರಾಜ್ಯ ಘಟಕವನ್ನು ಘೋಷಿಸಲು ಹೆಮ್ಮೆಪಡುತ್ತದೆ…. ರಾಷ್ಟ್ರೀಯ ಸಂಘದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಆಯ್ಕೆಯಾದ ರಾಜ್ಯಾಧ್ಯಕ್ಷರು, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜ್ಯಖಜಾಂಚಿ, ಛತ್ತೀಸ್‌ಗಢ ರಾಜ್ಯ ಘಟಕಕ್ಕೆ ಆಯ್ಕೆಯಾದ ಎಲ್ಲಾ ಉಪಾಧ್ಯಕ್ಷರು, ಸಹ ಕಾರ್ಯದರ್ಶಿಗಳು ಮತ್ತು ಸಂಘಟನಾ ಕಾರ್ಯದರ್ಶಿಗಳು ಹಾಗೂ ಛತ್ತೀಸ್ಘಡ್ ರಾಜ್ಯಘಟಕ ಸ್ಥಾಪಿಸಲು ಸಹಕರಿಸಿದ ಭಾಗ್ಯಮ್ಮ ರಾಮನಗರ ಎಲ್ಲರಿಗೂ
ಅಭಿನಂದನೆಗಳು.


ಡಾ. ಲತಾ ಎಸ್ ಮುಳ್ಳೂರ್ ರಾಷ್ಟ್ರೀಯ ಅಧ್ಯಕ್ಷರು

ಶ್ರೀಮತಿ ಒಕಾಂತಿ ರಜಿತಾ ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿ

ಡಾ. ಸಾರಿಕಾ ಎಸ್ ಗಂಗಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ.

ಇಂದು ಮಾತೆ ಸಾವಿತ್ರಿಬಾಯಿ ಫುಲೆ ಪುಣ್ಯ ಸ್ಮರಣಾ ದಿನ ನಿಮಿತ್ತಪೌರ ಕಾರ್ಮಿಕರಿಗೆ ಸನ್ಮಾನ

ಧಾರವಾಡ ಮಾರ್ಚಿ10

ದೇಶ ಕಾಯುವ ಯೋಧರನ್ನು ,ಹಸಿವು ನೀಗಿಸುವ ರೈತರನ್ನು ನೆನೆಯುವಷ್ಟೇ ದೇಶಕ್ಕಾಗಿ ದುಡಿಯುವ ಪೌರ ಕಾರ್ಮಿಕರನ್ನು ನೆನೆದು, ತಮ್ಮ ಬಡಾವಣಾ ವ್ತಾಪ್ತಿಗೆ ಬರುವ ಪೌರ ಕಾರ್ಮಿಕರನ್ನು ಆಹ್ವಾನಿಸಿ ಸನ್ಮಾನಿಸುವ ಮೂಲಕ ಇಂದು ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್ ರಿ.ನವದೆಹಲಿ ಇದರ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರು ಆದ ಡಾ.ಲತಾ.ಎಸ್‌ ಮುಳ್ಳೂರ ರವರು ಮಾತೇ ಸಾವಿತ್ರಿಬಾಯಿ‌ ಫುಲೆ ರವರ ಪುಣ್ಯ ಸ್ಮರಣಾ‌ ದಿನವನ್ನು ತಮ್ಮನಿವಾಸದ ಸಬಾ ಅಂಗಳದಲ್ಲಿ ಅಚರಿಸುವ ಮೂಲಕ ಮಾದರಿಯಾದರು.

ಪೌರ ಕಾರ್ಮಿಕರಿಗೆ ಸನ್ಮಾನಿಸಿ ಮಾತನಾಡಿದ ಡಾ.ಲತಾ.ಎಸ್.ಮುಳ್ಳೂರ ರವರು
ದೇಶದ ಸ್ವಚ್ಚತೆಯು ದೇಶದ ಅಭಿವೃದ್ಧಿಯಷ್ಟೇ ಪ್ರಮುಖ ಪಾತ್ರವಹಿಸಲಿದೆ. ಸ್ವಚ್ಚತಾ ಕಾರ್ಯದಲ್ಲಿ ಪ್ರಧಾನ ಪಾತ್ರವಹಿಸುತ್ತಿರುವ ಪೌರ ಕಾರ್ಮಿಕರನ್ನು ಎಲ್ಲರೂ ಗೌರವಿಸಬೇಕಿದೆ.ಅವರ ಬದುಕಿಗೆ ನಾವೆಲ್ಲರೂ ಸಹಕಾರ ನೆರೆವು ನೀಡಬೇಕಿದೆ.ಎಲ್ಲರಿಗೂ ಅವರದ್ದೆ ಆದ ಸ್ಥಾನಮಾನಗಳಿರುತ್ತವೆ, ಅವರನ್ನು ಕಸ ಕಸಿನವರು ಎಂದೆಲ್ಲ ಗುರ್ತಿಸಿ ಕರೆಯುವ ವಾಡಿಕೆಯನ್ನು ಬಿಡಬೇಕಿದೆ.
ಅವರನ್ನು ನಾವು ಗೌರವದಿಂದ ನಡೆಸಿಕೊಳ್ಳಬೇಕಾಗಿದೆ.
ಸ್ವಚ್ಚತೆಯೂ ಕೂಡ ದೇಶದ ಅಭಿವೃದ್ಧಿಯನ್ನು ಬಿಂಬಿಸುವ ಕನ್ನಡಿಯಾಗಿದೆ. ಮನೆಯ
ಕಸದ ವಿಲೇವಾರಿಯ ಸರಿಯಾದ ಕ್ರಮಗಳು ನಮ್ಮಿಂದಲೇ ಶುರು ಆಗಬೇಕಿದೆ. ಹಸಿಕಸ, ಒಣಕಸ,ಅಪಾಯಕಾರಿ ಕಸ, ಎಂದು ನಾವೆಲ್ಲರು ಮನೆಯಲ್ಲಿಯೇ ಮೂರು ಡಸ್ಟ್ ಬಕೆಟ್ ಗಳನ್ನು ಬಳಸಿ ವಿಂಗಡಣೆ ಮಾಡಿಕೊಡಬೇಕಿದೆ.
ಇದರಿಂದ ಮುಂದಿನ ಹಂತದ ಕಸ ವಿಲೇವಾರಿ ಕ್ರಮ‌ವಹಿಸಲು ಸುಲಭವಾಗಲಿದೆ ಎಂದರು,
ಈ ಒಂದು ಸಾಮಾಜಿಕ ಕಳಕಳಿಯ
ಕಾರ್ಯಕ್ರಮದಲ್ಲಿ ಶ್ರೀಮತಿ ಗಾಯತ್ರಿ. ಕಮ್ಮಾರ.CRP. ನವಲೂರ ಕ್ಲಸ್ಟರ ಧಾರವಾಡ ಶಹರ.ಹಾಗೂ ಶ್ರೀಮತಿ. ಶಾಂತಾ.ಬಿರಾದಾರ. ರಾಷ್ಟ್ರೀಯ ಸಂಘಟನಾ.ಕಾರ್ಯದರ್ಶಿ. ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್.(ರಿ)ನವದೆಹಲಿ ರವರುಗಳು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು ಅವರುಗಳಿಗೂ ಸಹ ಸನ್ಮಾನಿಸಿ ಗೌರವಿಸಲಾಯಿತು. ಅತಿಥಿಗಳಿಗೆ ಸನ್ಮಾನಿತರಿಗೆ ಉಪಹಾರದ ವ್ಯವಸ್ಥೆ ಕೂಡ ಮಾಡಲಾಗಿದ್ದು,ಸನ್ಮಾನಿತ ಪೌರಕಾರ್ಮಿಕರು ಈ ಸಂದರ್ಭದಲ್ಲಿ ಮಾತೆಯನ್ನು ನೆನೆದು ಆತಿಥ್ಯ ಸ್ವೀಕರಿಸಿ ಉತ್ತಮ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿ ಹಾರೈಸಿದರು.