ಶಿವಮೊಗ್ಗ ಮೇ.28 ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ- ಧಾರವಾಡ. ಶಿವಮೊಗ್ಗ ಘಟಕದ ವತಿಯಿಂದ ಕೊವಿಡ್ ಕರ್ತವ್ಯ ನಿರ್ವಹಿಸುತ್ತಿರುವ ವಾರಿಯರ್ ಶಿಕ್ಷಕರಿಗಷ್ಟೆ ಅಲ್ಲದೇ ಪ್ರತೀ ಶಿಕ್ಷಕರುಗಳಿಗೂ ಕೊವಿಡ್ ಲಸಿಕೆ ಹಾಕಿಸಲು ಕೋರಿ ಇಂದು ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಮನವಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಾನ್ಯ ನಾಗರಾಜ್ ಪಿ.ರವರು ಸಕಾರಾತ್ಮಕವಾಗಿ ಸ್ಪಂದಿಸಿರುತ್ತಾರೆ ಎಂದು ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಶ್ರೀಮತಿ ರಾಧಾ ರವರು ತಿಳಿಸಿದ್ದಾರೆ. ಉಪಾಧ್ಯಕ್ಷರಾದ ಶ್ರೀಮತಿ ಅನಿತ ಕೃಷ್ಣ, ತಾಲ್ಲೂಕು ಅಧ್ಯಕ್ಷರಾದ ಶ್ರೀಮತಿ ಶಾಯಿನ್ ಬಾನು ಹಾಗು ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಧಾರವಾಡ ಮೇ27- ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ತಮ್ಮ ಎಲ್ಲಾ ಸದಸ್ಯ ಶಿಕ್ಷಕಿಯರನ್ನು ಸೋಶಿಯಲ್ ಮೀಡಿಯ ಬಳಸಿ ಒಂದೆಡೆ ಸೇರಿಸುವ ಹಾಗೂ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಹೆಜ್ಹೆ ಇಟ್ಟಿದೆ.ಕುಟುಂಬ ಎಂಬ ಆಪ್ ನೊಂದಿಗೆ ಒಪ್ಪಂದ ಮಾಡಿಕೊಂಡು ತನ್ನೆಲ್ಲ ಸದಸ್ಯರನ್ನು ಒಂದೇ ಸೂರಿನಡಿ ತರುವಲ್ಲಿ ಯಶಸ್ವಿಯಾಗಿದೆ.ಇದರಿಂದ ಸಂಘಟನೆ ಬಲಗೊಳಿಸಲು ಸುಲಭಸಾದ್ಯವಾಗಲಿದೆ. ಹೌದು ಇತ್ತೀಚೆಗೆ ಅಭಿವೃದ್ದಿಪಡಿಸಲಾಗಿರುವ ಭಾರತ ಮೂಲದ ‘ಕುಟುಂಬ’ ಎಂಬ ಅಪ್ಲಿಕೇಶನ್ ಎಲ್ಲ ಕಡೆ ಎಲ್ಲರ ಮನಸಲ್ಲಿ ಮನೆ ಮಾಡಿದೆ.ಇದು ಒಂದು ಭಾರತದ ಬಹುದೊಡ್ಡ ಸೋಶಿಯಲ್ ಅಪ್ಲಿಕೇಶನ್ ಆಗಿದ್ದು ಸಂಘಟನೆ ಸಲುವಾಗಿಯೇ ಸಿದ್ದಪಡಿಸಲಾಗಿದೆ. ವಿವಿಧ ವಿನ್ಯಾಸದ ಗುಣಲಕ್ಷಣ ಹೊಂದಿರುವ ಹಾಗೂ ಯಾವುದೇ ಸಂಘಟನೆಗಳು ಸುಲಭವಾಗಿ ಬಳಕೆ ಮಾಡಿ ಎಲ್ಲಾ ಸದಸ್ಯರನ್ನು ಒಂದೇ ಸೂರಿನಡಿ ಸೇರಿಸುವ ಹಾಗೂ ದಿನನಿತ್ಯ ಎಲ್ಲರಲ್ಲಿಯೂ ಕ್ಷಣಾರ್ಧದಲ್ಲಿ ಸಂಪರ್ಕ ಕಲ್ಪಿಸುವ ರೀತಿ ಅಭಿವೃದ್ದಿ ಮಾಡಲಾಗಿದೆ.ನೊಂದಣಿ ಆದ ಸದಸ್ಯರ,ಗುರುತಿನ ಚೀಟಿ, ಉತ್ತಮ ಪ್ರೋತ್ಸಾಹ ನೀಡಿದವರಿಗೆ ಪ್ರಶಂಸ ಪತ್ರಗಳು ಸ್ವಯಂಚಾಲಿತವಾಗಿ ಮುದ್ರಣಗೊಳ್ಳುತ್ತವೆ. ಫೇಸ್ ಬುಕ್ ನಂತೆಯೇ ಇದೂ ಕೂಡ ನೊಂದಾಯಿತ ಸದಸ್ಯರ ಸಂಖ್ಯೆಗೆ ಯಾವುದೇ ಮಿತಿ ಇರುವುದಿಲ್ಲ…ಲಕ್ಷಾಂತರ ಸದಸ್ಯರು ಒಂದೇ ಸಂಘಟನೆ ಪ್ಲಾಟ್ ಫಾರಂ ಲಿ ಸೇರ್ಪಡೆಯಾಗಿ ಚಾಟಿಂಗ್,ಶೇರಿಂಗ್,ಕಾಮೆಂಟ್,ಲೈಕ್,ಹಾಗೂ ,ಚರ್ಚೆ,ಪ್ರಕಟಣೆ, ಆಡಿಯೊ ವೀಡಿಯೊ ಕಾಲ್,ವೆಬಿನಾರ್ ಮೀಟ್,ಕಾನ್ಫರೆನ್ಸ್ ಇತರೆ ಎಲ್ಲದಕೂ ಒಂದೇ ಆಪ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ. ವಾಟ್ಸಪ್ ರೀತಿ ಪೋನ್ ಸ್ಟೋರೆಜ್ ಸಮಸ್ಯೆ ಇದರಲ್ಲಿಲ್ಲ. ಹಾಗೂ ಉತ್ತಮ ಡೆಟಾ ಶೇರಿಂಗ್ ಭದ್ರತೆ ಕೂಡ ಒದಗಿಸಲಾಗಿದೆ. ರಾಜ್ಯದ ಅಥವಾ ರಾಷ್ಟ್ರದ ಯಾವುದೇ ಸರ್ಕಾರಿ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕಿಯರು ಈ ಕೆಳಗಿನ ಲಿಂಕ್ ಬಳಸಿ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ತಮ್ಮ ಮೊಬೈಲ್ ಸಂಖ್ಯೆ,ಹೆಸರು ತಮ್ಮ ಕೆಲಸ ಮಾಡುವ ತಾಲ್ಲೂಕಿನ ಪಿನ್ ಕೊಡ್ ಬಳಸಿ ರಿಜಿಸ್ಟರ್ ಮಾಡಿಕೊಳ್ಳಲು ಎಲ್ಲರಿಗೂ ಸೂಚಿಸಿದೆ. https://kutumb.app/karnataka-savitribhai-shikshakiyar-sanga?ref=R3SE3 ತಮಗೆ ಯಾವುದೇ ತಾಂತ್ರಿಕ ಅಡಚಣೆ ಉಂಟಾದಲ್ಲಿ ಅಥವಾ ಹೆಚ್ಚಿನ ಮಾಹಿತಿಗೆ ತಮ್ಮ ಜಿಲ್ಲೆಯ/ ತಾಲ್ಲೂಕಿನ ಪದಾಧಿಕಾರಿಗಳನ್ನು ಸಂಪರ್ಕಿಸಲು ತಿಳಿಸಿದೆ. ಅಪ್ಲಿಕೇಷನ್ ಅಳವಡಿಸಿಕೊಂಡ 24 ಗಂಟೆಯ ಅವಧಿಯಲ್ಲಿ ಸಾವಿರಕ್ಕೂ ಹೆಚ್ಚು ಶಿಕ್ಷಕಿಯರು ನೊಂದಾವಣೆ ಮಾಡಿಕೊಂಡು ಗುರುತಿನ ಚೀಟಿ ಪಡೆದಿರುವುದು ಸಂತೋಷದ ಸಂಗತಿಯಾಗಿದೆ. ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ರವರು ಹರ್ಷ ವ್ಯಕ್ತಪಡಿಸಿದ್ದಾರೆ.ಹಾಗೂ ರಾಜ್ಯದ ಎಲ್ಲಾ ಸರ್ಕಾರಿ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕಿಯರು ಕುಟುಂಬ ಆಪ್ ಡೌನ್‌ಲೋಡ್ ಮಾಡಿಕೊಂಡು ನಮ್ಮ ಸಂಘದ ಈ ಮೇಲಿನ ಲಿಂಕ್ ಬಳಸಿ ನೊಂದಣಿ ಮಾಡಿಕೊಳ್ಳಲು ತಿಳಿಸಿದ್ದಾರೆ.
*ಧಾರವಾಡ ಮೇ24* ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯ ಘಟಕ ಧಾರವಾಡ ವತಿಯಿಂದ ಇಂದು ಸಂಘದ ಎಲ್ಲಾ ರಾಜ್ಯ ಪದಾಧಿಕಾರಿಗಳು ಹಾಗೂ ಜಿಲ್ಲಾ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಎಲ್ಲಾ ಜಿಲ್ಲಾ ಕೋಶಾಧ್ಯಕ್ಷರುಗಳಿಗೆ ರಾಜ್ಯ ಮಟ್ಟದ ಸಾಮಾನ್ಯ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಮೊದಲನೆಯದಾಗಿ covid ನಿಂದಾ ಮೃತಪಟ್ಟ ಶಿಕ್ಷಕ ಶಿಕ್ಷಕಿಯರಿಗೆ ಭಾವ ಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು… ಸಭೆಯಲ್ಲಿ ಸಂಘಟನೆಯ ಕುರಿತು ಹಾಗೂ ಹಲೋ .. ಚಿಲ್ಡ್ರನ್ ಫೋನ್ ಇನ್ ಕಾರ್ಯಕ್ರಮದ ಕುರಿತು ಚರ್ಚಿಸಲಾಯಿತು.. ಮುಂದಿನ ವರ್ಷದಿಂದ ಸಂಘದ ವತಿಯಿಂದ ಹಮಿಕೊಳ್ಳಬೇಕಾದ ಕಾರ್ಯ ಚಟುವಟಕೆಗಳ ಕುರಿತು ಕ್ರಿಯಾ ಯೋಜನೆ.ಶಿಕ್ಷಕಿಯರ ಸಮಸ್ಯೆಗಳ ಕುರಿತು ಚರ್ಚೆ… ಕೋರೋನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕಿಯರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಬಗ್ಗೆ …ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಎಲ್ಲಾ ಪದಾಧಿಕಾರಿಗಳಿಗೆ ತಿಳಿಸಲಾಯಿತು.. ಹಲವಾರು ಜಿಲ್ಲೆಗಳಲ್ಲಿ ನಮ್ಮ ಸಂಘಟನೆಯ ವತಿಯಿಂದ ಈಗಾಗಲೇ covid ವಾರಿಯರ್ಸ್ ಗಳಿಗೆ ಮತ್ತು covid ಸೊಂಕೀತರಿಗೆ ಊಟ ಉಪಹಾರದ ವ್ಯವಸ್ಥೆ.. ಮೆಡಿಕಲ್ ಕಿಟ್ ವಿತರಣೆ… ಅಗತ್ಯ ವೈದ್ಯಕೀಯ ಸಾಮಗ್ರಿ(ಆಕ್ಸಿಜನ್) ವಿತರಣೆ ಹಮ್ಮಿಕೊಳ್ಳುತ್ತಿರುವುದರ ಬಗ್ಗೆ ಸಂಘದ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿಲಾಯಿತು..ಉತ್ತಮ ಕ್ರಿಯಾಶೀಲ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.. .. ಸರ್ಕಾರದ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ಒದಗಿಸುವ ಬಗ್ಗೆ ಚರ್ಚಿಸುತ್ತಿರುವ ಮಾನ್ಯ ಶಿಕ್ಷಣ ಸಚಿವರಾದ ಶ್ರೀ ಸುರೇಶ್ ಕುಮಾರ್ ಸರ್ ರವರಿಗೆ ಅಭಿನಂದನೆ ಸಲ್ಲಿಸಲಾಯಿತು.. ವರ್ಗಾವಣೆಯನ್ನೂ ಆದಷ್ಟೂ ಬೇಗ ಪ್ರಾರಂಭ ಮಾಡಲೂ ಸರ್ಕಾರಕ್ಕೇ ಒತ್ತಾಯ ಮಾಡಲು ಚರ್ಚಿಸಲಾಯಿತು. . ಇಂದು ಹಾಜರಾದ ಎಲ್ಲಾ ರಾಜ್ಯ ಪದಾಧಿಕಾರಿಗಳಿಗೆ ಮತ್ತು ಜಿಲ್ಲಾ ಅಧ್ಯಕ್ಷರು,ಪ್ರಧಾನ ಕಾರ್ಯದರ್ಶಿ ಮತ್ತು ಜಿಲ್ಲಾ ಕೋಶಧ್ಯಕ್ಷರು ಮತ್ತು ಎಲ್ಲಾ ಪದಾಧಿಕಾರಿಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಲಾಯಿತು.. ರಾಜ್ಯಾಧ್ಯಕ್ಷರಾದ ಲತಾ ಎಸ್ ಮುಳ್ಳೂರು ಮೇಡಂ ರವರು ಎಲ್ಲಾ ಪದಾಧಿಕಾರಿಗಳಿಗೆ ಅಗತ್ಯ ಮಾಹಿತಿ. ಸಲಹೆ ಸೂಚನೆ ನೀಡಿದರು…
ಗೂಗಲ್ ಮೀಟ್
ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಜ್ಯೋತಿ ಹೆಚ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ವತಿಯಿಂದ ಹಮ್ಮಿಕೊಳ್ಳಬಹುದಾದ ಕಾರ್ಯಕ್ರಮಗಳ ವಿವರ. ಮತ್ತು ಅಗತ್ಯ ಮಾರ್ಗದರ್ಶನ ನೀಡಿದರು..ಕಾರ್ಯಕ್ರಮದಲ್ಲಿ ರಾಜ್ಯ ಹಿರಿಯ ಉಪಾಧ್ಯಕ್ಷರಾದ ಹೇಮಾ ಕೊಂಡಣ್ಣನ್ನವರ…ರಾಜ್ಯ ಉಪಾಧ್ಯಕ್ಷರಾದ ಅನುಸೂಯ .ಅಕ್ಕಮಹಾದೇವಿ.. ರಾಜ್ಯ ಸಂಘಟನಾ ಕಾರ್ಯದರ್ಶಿ ಕಲ್ಪನಾ.. ಹಾಗೂ ಜಿಲ್ಲಾ ಅಧ್ಯಕ್ಷರು ಕಾರ್ಯದರ್ಶಿಗಳು ಹಾಗೂ ಕೋಶಾಧ್ಯಕ್ಷರು ಹಾಜರಿದ್ದರು.. ಲತಾ ಎಸ್ ಮುಳ್ಳೂರ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.. ಸಾರಿಕಾ ಗಂಗಾ ಪ್ರಾರ್ಥನೆ ಮಾಡಿದರು.ಹೇಮಾ ಕೊಡ್ಡಣ್ಣವರ ಸ್ವಾಗತ…ಜ್ಯೋತಿ ಹೆಚ್. ವಂದನಾರ್ಪಣೆ ಮಾಡಿದರು… ಅಕ್ಕಮಹಾದೇವಿ ರವರು ನಿರೂಪಣೆ ಮಾಡಿದರು.. ನಿಮ್ಮ ಸಹಕಾರ ಹೀಗೆ ಸದಾ ಇರಲಿ ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ ಎಸ್ ಮುಳ್ಳೂರ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಜ್ಯೋತಿ ಹೆಚ್ ರವರುಗಳು ಆಶಿಸಿದರು.ಒಟ್ಟಾರೆಯಾಗಿ ಸಾಮಾನ್ಯ ಸಭೆಯು ಯಶಸ್ವಿಯಾಯಿತು.