ಶಾಲೆ ತೆರೆಯುವ ಮುನ್ನ  ಮೊದಲು ಸೂಕ್ತ ಸೌಕರ್ಯ ಕೊಡಿ – ಡಾ.ಮುಳ್ಳೂರ ಒತ್ತಾಯ

ಡಾ.ಲತಾ ಎಸ್ ಮುಳ್ಳೂರ, ಸಂಸ್ಥಾಪಕ ರಾಜ್ಯಾಧ್ಯಕ್ಷರು

ಧಾರವಾಡ,ಜೂನ್ 8
ಈ ಕೊವಿಡ್ ಸಂಕಷ್ಟ ದಿನಗಳಲ್ಲಿ ಹಲವಾರು ಸವಾಲುಗಳು ಇರುವಂತ ಈ ಸಮಯದಲ್ಲಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಬಿಸಲು ಈಗಾಗಲೇ ಶಿಕ್ಷಣ ಇಲಾಖೆ ಸೂಚನೆ ನೀಡಿರುವುದನ್ನು ಸ್ವಾಗತ ಮಾಡುತ್ತೇವೆ.
ಬೇಸಿಗೆ ರಜೆ ಮೇಲೆ ತಮ್ಮ ತಮ್ಮ ಸ್ವಂತ ಜಿಲ್ಲೆಗಳಿಗೆ ತೆರೆಳಿದ್ದ ಎಲ್ಲಾ ಶಿಕ್ಷಕ ಶಿಕ್ಷಕಿಯರು
ಜೂನ್ 15 ರಿಂದ ಶಾಲೆಗೆ ಹಾಜರಾಗಿ ಮಕ್ಕಳ ಶಾಲಾ ದಾಖಲಾತಿ ಪ್ರಾರಂಬಿಸಿಕೊಳ್ಳಲು ಶಾಲೆಗಳಿಗೆ ಮರಳಲೂ ಕೂಡ ತಿಳಿಸಲಾಗಿದೆ

ಕೊವಿಡ್ ಎರಡನೇ ಅಲೆಯು  ನಗರ ಪ್ರದೇಶಗಳಿಗಿಂತ ಹಳ್ಳೀ ಪ್ರದೇಶಗಳಲ್ಲಿಯೇ ಬಾರಿ ಸಂಚಲನ‌ ಉಂಟು ಮಾಡಿರುವುದು ಎಲ್ಲರಿಗೂ ತಿಳಿದಿದೆ..ಈಗಾಗಲೇ ನೂರಾರು ಶಿಕ್ಷಕ‌-ಶಿಕ್ಷಕಿಯರ ಪ್ರಾಣ ಬಲಿಯಾಗಿದೆ, ಇಂತಹ  ಸಂದಿಗ್ಧ ಪರಿಸ್ಥಿತಿಯಲ್ಲಿ ಶಾಲೆಗಳಿಗೆ ತೆರಳಿ ಕರ್ತವ್ಯ ಪ್ರಾರಂಬಿಸುವುದು ಶಿಕ್ಷಕರುಗಳಿಗೆ ಸವಾಲಾಗಿ ಪರಿಣಮಿಸಿದೆ. ಆದ್ದರಿಂದ ಘನ ಸರ್ಕಾರವು ಶಾಲೆಗೆ ಮರಳುವ ಮುನ್ನ ಪ್ರತೀ ಶಿಕ್ಷಕರುಗಳಿಗೆ ಸೂಕ್ತ ಸೌಕರ್ಯಗಳನ್ನು ಒದಗಿಸಿಬೇಕಾಗಿದೆ, ಅವರಿಗೆ ಶಾಲೆಗೆ ಮರಳುವ ಮುನ್ನವೇ ಮೊದಲ ಸಾಲಿನ‌ಲ್ಲಿ ಕೊವಿಡ್ ಲಸಿಕೆ ನೀಡಬೇಕು,ಶಾಲೆಗೆ ಸ್ವಚ್ಚತೆಯ ಜೊತೆಯಲ್ಲಿ ಸಂಪೂರ್ಣ ಸಾನಿಟೈಸರ್ ಮಾಡಿಸಬೇಕು,


ಪ್ರತಿದಿನ‌ ಬಳಸಲು ಸಾನಿಟೈಸರ್ ಬಾಟಲ್ಸ್, ಮಾಸ್ಕ್ ಗಳನ್ನು ಪ್ರತೀ ಶಾಲೆಗೆ ವಿತರಿಸಬೇಕು.ಎಲ್ಲದಕ್ಕು ಮೊದಲಾಗಿ, ಲಾಕ್ ಡೌನ್ ವಿಸ್ತರಣೆಯಿಂದ ಬಸ್ ಸಂಚಾರ ನಿರ್ಬಂದ ಹೇರಿರುವುದರಿಂದ ಬೇಸಿಗೆ ರಜೆ ಇದ್ದ ಕಾರಣಕ್ಕೆಪ್ರಸ್ತುತ ದಿನದಲ್ಲಿ ತಮ್ಮ ಸ್ವಂತ ಜಿಲ್ಲೆಗಳಲ್ಲಿರುವ ಸಾವಿರಾರು ಶಿಕ್ಷಕರು ಇಂದು ವಿವಿದ ಜಿಲ್ಲೆಗಳಿಂದ  ಶಾಲೆಗಳತ್ತ ತೆರಳಲು ಸಾದ್ಯವಿಲ್ಲ, ಆದ ಕಾರಣ ಜೂನ್ 15 ರ ಒಳಗಾಗಿ ಕೂಡಲೇ ಬಸ್ ಸಂಚಾರ ಪ್ರಾರಂಬಿಸಬೇಕಾಗಿದೆ. ಇದೆಲ್ಲ ಸರ್ಕಾರವಾಗಲಿ ,ಶಿಕ್ಷಣ ಇಲಾಖೆಯಾಗಲಿ ಕೂಡಲೇ  ಗಮನ ಹರಿಸಿ ಎಲ್ಲಾ ಸೌಕರ್ಯಗಳನ್ನು ಒದಗಿಸಿದಾಗ ಮಾತ್ರ ಸಕಾಲದಲ್ಲಿ ಶಾಲೆಗೆ ತೆರಳಿ ಕರ್ತವ್ಯಕ್ಕೆ ಹಾಜರಾಗಲು ಸಾದ್ಯವಿದೆ. ಇದರಿಂದ ಎಲ್ಲಾ ಶಿಕ್ಷಕರಿಗು ಅನುಕೂಲವಾಗುತ್ತದೆ.ಎಂದು  ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ರವರು ಸಮಸ್ತ ಶಿಕ್ಷಕ- ಶಿಕ್ಷಕಿಯರ ಪರವಾಗಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೊವಿಡ್ ಸಂಕಷ್ಟಕ್ಕೆ ಸಿಕ್ಕ ಖಾಸಗಿ ಶಿಕ್ಷಕಿಯ ಕುಟುಂಬ-ಫುಲೆ ಸಂಘ ನೆರವು

ಶಿವಮೊಗ್ಗ ಜೂನ್ 3.
*ಇಂದು ನಮ್ಮ  ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಸಂಘ(ರಿ)ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ  ಖಾಸಗಿ ಶಾಲಾ ಶಿಕ್ಷಕಿಯೊಬ್ಬರಿಗೆ  10,000₹ (ಹತ್ತು ಸಾವಿರ)ರೂಗಳನ್ನು ಧನಸಹಾಯವಾಗಿ ನೀಡಲಾಯಿತು..*

*ಖಾಸಗಿ ಶಾಲಾ ಶಿಕ್ಷಕಿಯವರು ಒಂದುಕಡೆ ಕೋವಿಡ್19 ಕ್ಕೆ ಸಿಲುಕಿ ಇತ್ತೀಚೆಗಷ್ಟೆ ಚೇತರಿಸಿಕೊಳ್ಳುತ್ತಿದ್ದರೆ ಮತ್ತೊಂದು ಕಡೆ ಅವರ ಪತಿಯವರು ಕೋವಿಡ್ ನಿಂದ  ಆಸ್ಪತ್ರೆಗೆ ಸೇರಿದ್ದಾರೆ.  ಅವರಿಗೆ ತುರ್ತು ಹಣದ ಅಗತ್ಯವಿದೆ ಎಂದು ನಮ್ಮ ಮಾನ್ಯ ಶಿಕ್ಷಣಾಧಿಕಾರಿಗಳಿಂದ ಗಮನಕ್ಕೆ ಬಂದ ಕೂಡಲೇ ನಮ್ಮ ಸಂಘವು ಎಚ್ಚೆತ್ತುಕೊಂಡು ಈ ಒಂದು ಸಣ್ಣ ಅಳಿಲು ಸೇವೆಯನ್ನು ಮಾಡಲು ನಮ್ಮ ಸಂಘದ ಸದಸ್ಯರು ಎಲ್ಲರೂ ನಿರ್ಧರಿಸಿ ಇಂದು ಧನಸಹಾಯಕ್ಕೆ ಮುಂದಾದೆವು ಎಂದು ಜಿಲ್ಲಾಧ್ಯಕ್ಷರಾದ ಶ್ರೀಮತಿ ರಾಧಾ ರವರು ತಿಳಿಸಿದ್ದಾರೆ*
*ನಮ್ಮ ಈ ಸೇವಾಕಾರ್ಯಕ್ಕೆ ಶ್ಲಾಘಿಸಿದ  ಮಾನ್ಯ ಶಿಕ್ಷಣಾಧಿಕಾರಿಗಳಾದ ಶ್ರೀ.ನಾಗರಾಜ್ ಸರ್ ಅವರಿಗೂ*ಹಾಗೂ ಈ ಕಾರ್ಯಕ್ಕೆ ಧನ ಸಹಾಯ ಮಾಡಿದ ಎಲ್ಲಾ ಪದಾಧಿಕಾರಿಗಳು, ಶಿಕ್ಷಕಿ ಮಿತ್ರರಿಗೆ ಹಾಗೂ ಇನ್ನಿತರ ಬಂಧುಗಳಿಗೆ ನಮ್ಮ ಸಂಘದ ವತಿಯಿಂದ ಧನ್ಯವಾದಗಳನ್ನು ಸಹಾ ಅರ್ಪಿಸಿದ್ದಾರೆ*ಈ ಸುಸಂದರ್ಭದಲ್ಲಿ ಶ್ರೀಮತಿ.ರಾಧಾ,ಜಿಲ್ಲಾಧ್ಯಕ್ಷರು, ಶ್ರೀಮತಿ. ಅನಿತ  ಜಿಲ್ಲಾ ಉಪಾಧ್ಯಕ್ಷರು,ಶ್ರೀಮತಿ. ಶಾಹಿನ್ ಬಾನು,ತಾಲೂಕು ಅಧ್ಯಕ್ಷರು,ಶ್ರೀಮತಿ.ಶರಾವತಿ,ತಾಲೂಕು ಪ್ರಧಾನಕಾರ್ಯಾದರ್ಶಿಗಳು ಬಾಗವಹಿಸಿದ್ದರು*

ಮಹಿಳೆ ಮತ್ತು ಕಾನೂನು- ವೆಬಿನಾರ್ ಯಶಸ್ವಿ

ವಿಜಯನಗರ ದಿನಾಂಕ:01-06-2021
ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ (ರಿ)ಘಟಕ ವಿಜಯನಗರ ಜಿಲ್ಲೆ ಮತ್ತು ಹೊಸಪೇಟೆ ತಾಲೂಕು.ವತಿಯಿಂದ
“ಇಂದು ಕಾನೂನು ಮತ್ತು ಮಹಿಳೆ” ಎನ್ನುವ ಬಗ್ಗೆ ವೆಬಿನಾರ ಕಾಯ೯ಕ್ರಮ ಆಯೋಜನೆ ಮಾಡಲಾಗಿತ್ತು. ಶ್ರೀ ಮತಿ ಅರುಂಧತಿ ಜಿಲ್ಲಾ ಪ್ರಧಾನಕಾಯ೯ದಶಿ೯ ಇವರ ನಿರೂಪಣೆಯ ಮುಖಾಂತರ ಪ್ರಾರಂಭವಾಯಿತು. ಶ್ರೀ ಮತಿ ರೇಶ್ಮಾ ಜಿಲ್ಲಾ ಉಪಾಧ್ಯಕ್ಷೆ ಇವರಿಂದ ಪ್ರಾಥ೯ನೆ. ನಂತರ ಶ್ರೀ ಮತಿ ಉಮಾದೇವಿ ಜಿಲ್ಲಾ ಅಧ್ಯಕ್ಷೆ ಇವರಿಂದ ಸ್ವಾಗತ. ನಂತರ ರಾಜ್ಯಾಧ್ಯಕ್ಷರಾದ ಶ್ರೀ ಮತಿ ಲತಾಮೂಳ್ಳೂರ ಮೇಡಂ ಇವರು ಪ್ರಸ್ಥಾವಿಕ ನುಡಿಗಳನ್ನು ಹೇಳಿದರು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ನಮ್ಮ ಸಾವಿತ್ರಿಬಾಯಿ ಪುಲೆ ಸಂಘ ನಡೆದು ಬಂದ ದಾರಿ ಬಗ್ಗೆ ತುಂಬಾ ಚೆನ್ನಾಗಿ ಮಾತನಾಡಿದರು. ಸಂಘದ ಉದ್ದೇಶಗಳ ಬಗ್ಗೆ ಸಹ ತಿಳಿಸಿದರು.
ಶ್ರೀ ಮತಿ ಡಾ. ಉಷರಾಣಿ ಇವರು ವಕೀಲರಾದ ಶ್ರೀ ಮತಿ ಅಖಿಲಾ ಮೇಡಂ ಇವರ ಪರಿಚಯವನ್ನೂ ಮಾಡಿದರು .ನಂತರ ಅಖಿಲಾ ಮೇಡಂ ಇವರು ಮೊದಲು ಸಂವಿಧಾನಾತ್ಮಕ ವಾಗಿ ದೊರೆತಿರುವ ನಮಗೆ ಸಾಮಾಜಿಕ ನ್ಯಾಯ , ಆಥಿ೯ಕ ನ್ಯಾಯ, ರಾಜಕೀಯ ನ್ಯಾಯ ,ಹೀಗೆ ವಿಷಯ ವಿವರಣೆ ಮಾಡಿದರು. ಕಲಂ 14 ,15 , 21, & 51 A , ಒಬ್ಬ ಮಹಿಳೆ ಗೃಹಿಣಿಯಾಗಿ , ಉದ್ಯೋಗಿಯಾಗಿ ಕಾನೂನಾತ್ಮಕವಾಗಿಪಡೆಯುವ ಸೌಲಭ್ಯಗಳನ್ನು ತುಂಬಾ ಚೆನ್ನಾಗಿ ವಿವರಿಸಿದರು . ಕೆಲವು ವಿಷಯಗಳು ಶಾಲೆ ,ವಿಧ್ಯಾರ್ಥಿ ಗಳ ಬಗ್ಗೆ ಮತ್ತು ಮಕ್ಕಳ ಹಕ್ಕುಗಳು ,ಹಕ್ಕುಗಳ ಉಲ್ಲಂಗನೆಯ ಪರಿಣಾಮ , ಬಾಲಿಕಾ ಶಿಕ್ಷಣದ ಮಹತ್ವ , ತಂದೆ ತಾಯಿ ಗಳ ಪಾತ್ರ , ಮಹಿಳಾ ದೌಜ೯ನ್ಯ ವಿರೋಧಿ ಕಾನೂನುಗಳು , ಪೋಸ್ಕೋ ಕಾಯ್ದೆಯ ವ್ಯಾಪ್ತಿ , ಶಿಕ್ಷೆ , ಮಹಿಳೆಯ ನಿರಂತರ ಸಮಾಜದ ತಾರತಮ್ಯ ಭಾವನೆಯ ವಿರುದ್ಧ ದ ಹೋರಾಟ ಜೀವನ, ಶಿಕ್ಷಕರಾಗಿ ಹೆಣ್ಣು ಮಕ್ಕಳಿಗೆ ನಾವು ನೀಡುವ ಸವಾ೯ಂಗಿಣ ಅಭಿವೃದ್ಧಿಯ ಮಾಗ೯ದಶ೯ನ ಮಾಡಿದರು . ಉತ್ತಮವಾದ ಸಂವಾದ ನಡೆಯಿತು. ವಿಷಯ ವಿವರಣೆ ತುಂಬಾ ಚೆನ್ನಾಗಿತ್ತು. ಕೊನೆಯಲ್ಲಿ ನಮ್ಮ ತಾಲೂಕಿನ ಪ್ರಧಾನಕಾಯ೯ದಶಿ೯ಯವರು ವಂದನಾಪ೯ಣೆ ಮಾಡುವುದರ ಮೂಲಕ ಇಂದಿನ ವೆಬಿನಾರ್ ಕಾಯ೯ಕ್ರಮ ಮುಕ್ತಾಯ ಮಾಡಲಾಯಿತು.
ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ವಿಜಯನಗರ ಜಿಲ್ಲೆ.

ತಮ್ಮ ಅಮೋಘ ಸೇವೆಯನ್ನು ಮುಗಿಸಿ ವಿಶ್ರಾಂತಿ ಜೀವನಕ್ಕೆ ಕಾಲಿಡುತ್ತಿರುವ ರಾಜ್ಯದ ಎಲ್ಲಾ ಶಿಕ್ಷಕ ಶಿಕ್ಷಕಿಯರಿಗೆ ಶುಭಾಶಯಗಳು

ಮಾಸ್ಕ್ ಹಾಗೂ ಸಾನಿಟೈಸರ್ ವಿತರಣೆ-ಸೇವೆಯಲ್ಲಿಯು ಫುಲೆ ಸಂಘ ಮುಂದಾಗಿದೆ.

ಹೊಸಪೇಟೆ ಮೇ31.
ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ (ರಿ) ಜಿಲ್ಲಾಘಟಕ ವಿಜಯನಗರ ಹೊಸಪೇಟೆ ತಾಲೂಕಿನಲ್ಲಿ ಫ್ರಂಟ್ ವಾರಿಯರ್ಸ್ ಆಗಿ ,ಮನೆ ಮನೆ ಸವೆ೯ ಮಾಡುತ್ತಿರುವವರಿಗೆ ಸಂಘವು ಮೆಡಿಸನ್ ಕಿಟ್ ವಿತರಿಸುವ ಮೂಲಕ ಸೇವೆಯನ್ನು ಮಾಡುತ್ತಿದೆ.
ಈ ಕೋರೋನ್ ಎನ್ನುವಂತ ಮಹಾಮಾರಿಯ ಸಂದಭ೯ದಲ್ಲಿ ತಮ್ಮ ಜೀವವನ್ನು ಅಂಗೈಯಲ್ಲಿ ಇಟ್ಟುಕೊಂಡು ಈ ಒಂದು ಕಾಯ೯ವನ್ನು ಮಾಡುತ್ತಿರುವವರಿಗೆ ಕೋವೀಡ್ ಕಿಟ್ ಮತ್ತು ಸ್ಯಾನಿಟೈಜರ್ ವಿತರಿಸಲು ಹೊಸಪೇಟೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಸುನಂದಮ್ಮ ನವರು ಚಾಲನೆ ನೀಡಿ ಉತ್ತಮ ಕಾರ್ಯಕ್ರಮವನ್ನು ಫುಲೆ ಶಿಕ್ಷಕಿಯರು ಮಾಡುತ್ತಿದ್ದೆ ಎಂದು ಶುಭ ಹಾರೈಸಿದರು ಈ ಒಂದು ಕಾಯ೯ಕ್ಕೆ ಸಂಘದ ಪದಾಧಿಕಾರಿಗಳು ಎಲ್ಲರೂ ಕೈಜೋಡಿಸಿದ್ದಾರೆ. ಈ ಕಾಯ೯ಕ್ರಮದಲ್ಲಿ ಸಿ.ಆರ್.ಪಿ. ಮತ್ತು ಹಿರಿಯ ಗುರುಗಳು ಚಂದ್ರಶೇಖರ್ ಸಾರ್ ಹೇಮರೆಡ್ಡಿ ಸಾರ್ ,ವಿಶ್ವನಾಥ್ ಸಾರ್ ವೆಂಕಟೇಶ ರೆಡ್ಡಿ ಇ.ಸಿ.ಒ.ಸರ್ .ಗುರುಗಳು ,ಗುರುಮಾತೆಯರು ಎಲ್ಲರೂ ಭಾಗವಹಿಸಿದ್ದರು.
ಧನ ಸಹಾಯ ಮಾಡಿದಂತ ಪದಾಧಿಕಾರಿಗಳು
ಉಮಾದೇವಿ, ಅರುಂಧತಿ,ಮಾಧವಿ,ಶಶಿಕಲಾ, ರೇಷ್ಮಾ, ರೂಪ ಟೀಕಾರಿ, ಅನ್ನಪೂರ್ಣ ಸುಣಗಾರ, ವಿನುತಾ, ಮನೋಹರಿ,ರೂಪದೇವಿ .ಡಿ.ಎಸ್.ಹನುಮವ್ವ ಉಷಾರಾಣಿ ಸುಧಮ್ಮ, ಶೋಭಾ ಜಮಾದರ್,ಶ್ರೀ ಲತಾ ಇನ್ನೂ ಹಲವರು ಸಂಘಕ್ಕೆ ಧನ ಸಹಾಯ ಮಾಡಿದ್ದಾರೆ.

ಇಂಥ ಜನಸೇವಾ ಸಮಾಜಮುಖಿ ಕಾರ್ಯಕ್ರಮ ಮಾಡಲು ಸಾವಿತ್ರಿಬಾಯಿ ಫುಲೆ ಸಂಘದ ವೇದಿಕೆ ಕಲ್ಪಿಸಿ ಕೊಟ್ಟ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ ಎಸ್ ಮುಳ್ಳೂರ,ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಜ್ಯೋತಿ ರವರುಗಳಿಗೆ ಈ ಸುಸಂದರ್ಬದಲ್ಲಿ ವಿಜಯನಗರ ಜಿಲ್ಲಾಧ್ಯಕ್ಷರಾದ
ಉಮಾದೇವಿ. ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ
ಅರುಂಧತಿ ರವರು ಅಭಿನಂದಿಸಿದ್ದಾರೆ.

ಸಹಕಾರ ನೀಡಿದ ಎಲ್ಲಾ ಪದಾಧಿಕಾರಿಗಳಿಗೆ
ಹನುಮವ್ವ ಹೊಸಪೇಟೆ ತಾಲ್ಲೂಕು ಅಧ್ಯಕ್ಷೆ ಹಾಗೂ
ಉಷಾರಾಣಿ.ತಾಲ್ಲೂಕು ಪ್ರಧಾನಕಾಯ೯ದಶಿ೯ಯವರು
ಅನಂತ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಉನ್ನತ ವಿದ್ಯಾರ್ಹತೆಯುಳ್ಳ,ಸುದೀರ್ಘ ಸೇವಾ ಅನುಭವವುಳ್ಳ ಕಾರ್ಯನಿರತ ಶಿಕ್ಷಕರಿಗೆ ನ್ಯಾಯ ಸಿಗಲಿ- ಮುಳ್ಳೂರ ಅಭಿಪ್ರಾಯ

ಧಾರವಾಡ ಮೇ30*  ಹೊಸ ಸಿ ಅಂಡ್ ರೂಲ್ ಬಂದಾಗಿನಿಂದಲೂ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕದಲ್ಲಾಗಲಿ ಅಥವಾ ಅವರುಗೆ ಬಡ್ತಿ ನೀಡುವ ವಿಚಾರದಲ್ಲಾಗಲಿ, ಹಾಲಿ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ಶಿಕ್ಷಕ ಶಿಕ್ಷಕಿಯರಿಗೆ ಮೇಲಿಂದ ಮೇಲೆ  ಹಲವಾರು ಸಮಸ್ಯೆಗಳು  ಎದುರಾಗುತ್ತಲೇ ಇವೆ.
ಹೌದು ಇಲ್ಲಿಯವರೆಗೆ  1-7 ನೇ ತರಗತಿ ಬೋದನೆಗಾಗಿ ನೇಮಕವಾದ ಶಿಕ್ಷಕರನ್ನು ಇಂದು 1-5 ನೇ ತರಗತಿಗೆ ಸೀಮಿತಗೊಳಿಸಿರುವುದು, 6-8 ನೇ ತರಗತಿಗೆ ಪದವಿ ಮಾಡಿದವರನ್ನು ನೇರವಾಗಿ ನೇಮಕಾತಿ ಮಾಡಿರುವುದು ,ಪ್ರಸ್ತುತ ಕಾರ್ಯ ನಿರತ ಶಿಕ್ಷಕರುಗಳ ಉನ್ನತ ವಿದ್ಯಾರ್ಹತೆಗೆ ಹಾಗೂ ಅವರು ಸಲ್ಲಿಸುವ ದೀರ್ಘ ಸೇವಾವಧಿಯ ಅನುಭವಕ್ಕೆ ಕಿಂಚಿತ್ತು ಮಾನ್ಯತೆ ಇಲ್ಲದಂತಾಗಿದೆ. ಇಂದು ಅವರನ್ನು 1-5 ನೇ ತರಗತಿಗೆ ಮಾತ್ರ ಸೀಮಿತಗೊಳಿಸಿರುವುದು ಹಿಂಬಡ್ತಿ ನೀಡಿದಂತೆ ಮಾಡಲಾಗಿದೆ. ಇದು ರಾಜ್ಯದ ಎಲ್ಲಾ ಶಿಕ್ಷಕರಿಗೂ ಅಸಮಾದಾನವನ್ನುಂಟು ಮಾಡಿದೆ. ಸರ್ಕಾರಕ್ಕೆ ಹಲವಾರು ಬಾರಿ ಈ ವಿಷಯವಾಗಿ ಸಿ ಅಂಡ್ ಆರ್ ನಿಯಮ ತಿದ್ದುಪಡಿ ಮಾಡಿ ಕಾರ್ಯನಿರತ ಶಿಕ್ಷಕರು ಗಳಿಸಿರುವ ಉನ್ನತ ಪದವಿ ವಿದ್ಯಾರ್ಹತೆಯನ್ನು ಪರಿಗಣಿಸಿ ಮೊದಲು ಅವರನ್ನು 6-8 ನೇ ತರಗತಿ ಬೋದಕರೆಂದು ವಿಲೀನ ಮಾಡಿ ನಂತರದಲ್ಲಿ ಉಳಿದ ಖಾಲಿ ಹುದ್ದೆಗಳಿಗೆ ಹೊಸ ನೇಮಕಾತಿ ಮಾಡಿ ಎಂದು ಮನವಿ ಸಲ್ಲಿಸಿದ್ದು,ಸರ್ಕಾರವು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ   ಭರವಸೆ ನೀಡಿತ್ತಾದರೂ ಮುಂದುವರೆದು  ಶಿಕ್ಷಕರ ಬಡ್ತಿ ವಿಚಾರದಲ್ಲಿಯೂ ಸಮಸ್ಯೆಯುಂಟಾಗಿದೆ. ಹಿಂದಿನಿಂದಲೂ 1-7 ನೇ ತರಗತಿ ಬೋದಿಸುತ್ತಿದ್ದ ಶಿಕ್ಷಕರನ್ನು ಇಲಾಖೆಯು ಅವರ ವಿದ್ಯಾರ್ಹತೆ ಪರಿಗಣಿಸಿ  8-10 ತರಗತಿ ಪ್ರೌಢಶಾಲೆಗೆ  ಬಡ್ತಿ ನೀಡುವ ಪ್ರಕ್ರಿಯೆ ನಡೆಸುತ್ತಲೇ  ಬಂದಿತ್ತು‌..ಅದೇ ರೀತಿ ಕಳೆದ ವರ್ಷದಲ್ಲು ಹಲವಾರು ಶಿಕ್ಷಕರಿಗೆ  ಬಡ್ತಿ ಬಾಗ್ಯ ಲಭಿಸಿತ್ತು.. ಇದನ್ನು ಪ್ರಶ್ನಿಸಿ ಪಧವೀಧರ(6-8) ಶಿಕ್ಷಕರು ನ್ಯಾಯಾಲಯದ ಮೊರೆ ಹೋಗಿದ್ದರ ಪರಿಣಾಮ ಪ್ರಸ್ತುತ ಜಾರಿಯಲ್ಲಿದ್ದ ಸಿ ಅಂಡ್ ಆರ್ ನಿಯಮವನ್ನು ಎತ್ತಿಹಿಡಿದು ಇಂದು ಪ್ರಾಥಮಿಕ ಶಾಲಾ ಶಿಕ್ಷಕರು  8-10 ನೇ ತರಗತಿಗೆ ಬಡ್ತಿ ಹೊಂದಲು ಅನರ್ಹರು ಹಾಗೂ ಈಗಾಗಲೆ  ಬಡ್ತಿ ಹೊಂದಿದ್ದ ಸುಮಾರು 8000 ಶಿಕ್ಷಕರಿಗೆ ಹಿಂಬಡ್ತಿ ನೀಡಲು ಘನ ನ್ಯಾಯಾಲಯ ತೀರ್ಪು ನೀಡಿದೆ. ಎಲ್ಲಾ ಕಾರ್ಯನಿರತ ಶಿಕ್ಷಕರಿಗೆ ಈ ತೀರ್ಪಿನಿಂದ ಆಘಾತವಾಗಿದೆ.ಇದರ ಜೊತೆಗೆ ಮನ ನೋವಾಗಿದೆ ಅವರ ಉನ್ನತ ವಿದ್ಯಾರ್ಹತೆ ಹಾಗೂ ಅವರ ಸುದೀರ್ಘ ಸೇವಾ ಅನುಭವಕ್ಕೆ ಬೆಲೆಯೇ ಇಲ್ಲದಂತಾಗಿದೆ,
ಈ ಸಂಬಂಧ ಘನ ಸರ್ಕಾರವು ಗಮನಾರ್ಹವಾಗಿ ಪರಿಗಣಿಸಿ ಘನ ನ್ಯಾಯಾಲಯಕ್ಕೆ ಮರುಪರಿಶೀಲಿಸುವಂತೆ ಕೋರಿ ಮನವಿ ಸಲ್ಲಿಸುವಂತೆ ಹಾಗೂ ಮುಂದೆಯೂ ಇಂತ ಸಮಸ್ಯೆಗಳು ಶಿಕ್ಷಕರಿಗೆ ಬಾರದಂತೆ,ಶಿಕ್ಷಕರ ಉನ್ನತ  ವಿದ್ಯಾರ್ಹತೆಗೆ ಹಾಗೂ ಅವರು ಸಲ್ಲಿಸುತ್ತಿರುವ ಸುದೀರ್ಘ ಸೇವಾ ಅನುಭವಕ್ಕೆ ಸೂಕ್ತ ನ್ಯಾಯ ಒದಗಿಸಲು ಸಿ ಅಂಡ್ ಆರ್ ನಿಯಮವನ್ನು ತಿದ್ದುಪಡಿ ಮಾಡಿ ಅನುಕೂಲ ಮಾಡಿಕೊಡುವಂತೆ ನಮ್ಮ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಮನವಿಯನ್ನು ಮಾಡಿದೆ.

ಈ ದಿನ‌ ವಿಶ್ವ ಹಸಿವಿನ ದಿನ- ಆಹಾರ ಕಿಟ್ ವಿತರಿಸಿದ ಫುಲೆ ಶಿಕ್ಷಕಿಯರ ಸಂಘ

ಆಹಾರ ಕಿಟ್ ವಿತರಣೆಗಾಗಿ ಸಿದ್ದತೆ ನಡೆಸುತ್ತಿರುವುದು

ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ,ರಾಜ್ಯಘಟಕ- ಧಾರವಾಡ

ಜಿಲ್ಲಾ ಘಟಕ- ಶಿವಮೊಗ್ಗ

ಶಿವಮೊಗ್ಗ ಮೇ 28.ಶಿವಮೊಗ್ಗ ಘಟಕವು  ಈ ದಿನ ಕೋವಿಡ್ ಪರಿಸ್ಥಿತಿಯಲ್ಲಿ ನಾಲ್ಕಾರು ಜನರ
ಹಸಿವನ್ನು ನೀಗಿಸುವ ಕಾರ್ಯ ಮಾಡೋಣ ಎಂದು ತೀರ್ಮಾನಿಸಿ ಆಸಕ್ತ ಶಿಕ್ಷಕಿಯರಿಂದ ಒಂದಿಷ್ಟು ಧನ ಸಹಾಯ ಹಣವನ್ನು ಸಂಗ್ರಹಿಸಿ ಹಸಿದವರಿಗೆ ಆಹಾರ ಕಿಟ್ ವಿತರಿಸುವ ಕಾರ್ಯವನ್ನು ತಾಲ್ಲೂಕಿನ ನವುಲೇ ಸಮೀಪದ ಟೆಂಟ್ ನಿವಾಸಿಗಳಿಗೆ ಮೊದಲ ಸುತ್ತಿನಲ್ಲಿ 12 ಕುಟುಂಬಗಳಿಗೆ ವಿತರಿಸಲಾಯಿತು,
ತಾಲ್ಲೂಕಿನ ಮಾನ್ಯ  ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ನಾಗರಾಜು ಪಿ.ರವರು ಈ ಕಾರ್ಯಕ್ರಮಕ್ಕೆ ಚಾಲನೆ ಮಾಡು ಶುಭ ಹಾರೈಸಿ ಇಂತಹ ಉತ್ತಮ ಕಾರ್ಯಕ್ರಮಗಳು ಸಂಘಟನೆ ವತಿಯಿಂದ ನಡೆಯುತ್ತಲೇ ಇರಲಿ ಎಂದು ಆಶಿಸಿದರು,.ಫುಲೆ
ಸಂಘದ  ಈ ಅಳಿಲು ಸೇವಾಕಾರ್ಯಕ್ಕೆ ಹಲವು ಶಿಕ್ಷಕಿ ಮಿತ್ರರು ಕೈಜೋಡಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಧನ ಸಹಾಯ ಮಾಡಿದವರಲ್ಲಿ
ರಾಧಾ.  ಜಿಲ್ಲಾಧ್ಯಕ್ಷ ರು,ಪುಷ್ಪ ನರೇಗೌಡರ್ ಪ್ರ.ಕಾರ್ಯದರ್ಶಿ,ಅನಿತಕೃಷ್ಣ ಜಿಲ್ಲಾಉಪಾಧ್ಯಕ್ಷರು,ಶಾಹಿನ್ ಬಾನು ತಾಲೂಕು ಅಧ್ಯಕ್ಷ ರು ಶಿವಮೊಗ್ಗ,ಲಕ್ಷ್ಮಿ ಖಜಾಂಚಿ,ಶಿವಮೊಗ್ಗ ತಾಲೂಕು,ಸುಮಂಗಲ.ಉಪಾಧ್ಯಕ್ಷ ರು.ಸಾಗರ,ಪಾರ್ವತವ್ವ. ಸಹಕಾರ್ಯದರ್ಶಿ,ಗೀತಾ.ಎಲ್.ಎಂ.ಸಹ ಕಾರ್ಯದರ್ಶಿ ತೀರ್ಥಹಳ್ಳಿ ಹಾಗೂ ಶಾಂತಿ ಆಗ್ನಿಸ್ ಸಹಕಾರ್ಯದರ್ಶಿ,ಶಿವಮೊಗ್ಗ ತಾಲೂಕು,ರಾಧಾ,ಅನಿತ,ಶಾಹಿನ್ ಇವರುಗಳು ಈ ಅತ್ಯುತ್ತಮ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದರು, ತಮ್ಮಗಳ ಧನ ಸಹಾಯದ ಜೊತೆಗೆ ಆಹಾರ ಕಿಟ್ ವಿತರಣೆಯಲ್ಲಿ ಸಕ್ರಿಯವಾಗಿ ಬಾಗಿಯಾಗಿದ್ದರು.
ಈ ಕಾರ್ಯಕ್ರಮಕ್ಕೆ ಕೈಜೋಡಿಸಿದ ಶಿಕ್ಷಕಿ ಮಿತ್ರರಿಗೆ
ಜಿಲ್ಲಾಧ್ಯಕ್ಷರಾದ ಶ್ರೀಮತಿ ರಾಧಾ ರವರು ಎಲ್ಲಾ ಪದಾಧಿಕಾರಿಗಳ ವತಿಯಿಂದ ಅನಂತ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಹಾಗೂ  ಎರಡನೇ ಸುತ್ತಿನ ಆಹಾರ ಕಿಟ್ ವಿತರಣೆಗೆ ಧನ ಸಹಾಯ ಮಾಡುವ ಶಿಕ್ಷಕಿಯರು ಶಿವಮೊಗ್ಗ ಜಿಲ್ಲಾಧ್ಯಕ್ಷರು ಶ್ರೀಮತಿ ರಾಧಾ ರವರನ್ನು ಸಂಪರ್ಕಿಸಲು ತಿಳಿಸಿದ್ದಾರೆ..