ನಲಿಕಲಿ ಸೇತುಬಂಧ ವೆಬಿನಾರ್ ವಿಚಾರ ಕಾರ್ಯಕ್ರಮ- ಫುಲೆ ಸಂಘ ಯಶಸ್ವಿ

ಹರಿಹರ-ಜು.3- ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ರಾಜ್ಯ ಘಟಕ ಧಾರವಾಡ ಜಿಲ್ಲಾ ಘಟಕ ದಾವಣಗೆರೆ ಹರಿಹರ ತಾಲ್ಲೂಕು ಘಟಕ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಹರಿಹರ ಸಹಯೋಗದಲ್ಲಿ ದಿನಾಂಕ 3/7/2021 ರಂದು ನಲಿಕಲಿ ಸೇತುಬಂಧ (Bridge Course) ಕಾರ್ಯಕ್ರಮ ಸಂಜೆ 4 ಗಂಟೆಗೆ ವೇಬಿನಾರ್ ಕಾರ್ಯಕ್ರಮ ಆಯೋಜಿಸಲಾಗಿತ್ತು Microsoft Teams ನಲ್ಲಿ 300 ಕ್ಕಿಂತ ಹೆಚ್ಚು ಶಿಕ್ಷಕ ಶಿಕ್ಷಕಿಯರು ಜಾಯಿನ್ ಆಗಿ ಪ್ರಯೋಜನ ಪಡೆದರು.ರಾಜ್ಯ ಪ್ರಧಾನ ಕಾರ್ಯದರ್ಶಿ ಗಳಾದ ಶ್ರೀಮತಿ ಜ್ಯೋತಿ ಹೆಚ್ ರವರು ಎಲ್ಲರನ್ನೂContinue reading “ನಲಿಕಲಿ ಸೇತುಬಂಧ ವೆಬಿನಾರ್ ವಿಚಾರ ಕಾರ್ಯಕ್ರಮ- ಫುಲೆ ಸಂಘ ಯಶಸ್ವಿ”

ವೈದ್ಯರಿಗೆ ನಮಿಸಿ ಗೌರವಿಸಿದ ಫುಲೆ ಶಿಕ್ಷಕಿಯರ ಸಂಘ

ಬೀದರ್ ಜು-1. ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ)ರಾಜ್ಯ ಘಟಕ ಧಾರವಾಡ .ಜಿಲ್ಲಾ ಘಟಕ ಬೀದರ,ತಾಲೂಕಾ ಘಟಕ ಹುಮನಾಬಾದ ಮತ್ತು ತಾಲೂಕಾ ಘಟಕ ಚಿಟಗುಪ್ಪ ವತಿಯಿಂದ ಇಂದು ವಿಶ್ವ ವೈದ್ಯರ ದಿನದ ಪ್ರಯುಕ್ತ ಹುಮನಾಬಾದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಹಾಯಕ ಆಯುಕ್ತರಾಗಿರುವ ಶ್ರೀ ಭುವನೇಶ ಪಾಟೀಲ Sir ಉಪಸ್ಥಿತರಿದ್ದರು. .. ತಾಲೂಕಿನ ವೈಧ್ಯಾಧಿಕಾರಿಗಳಾದ ಶ್ರೀ ನಾಗನಾಥ ಹುಲಸೂರೆ, ಡಾ. ಬಸವಂತರಾವ ಗುಮ್ಮೆದ, ಡಾ.ದಿಲೀಪ್ ಡೊಂಗ್ರೆ, ಡಾ.ಪ್ರವೀಣ,Continue reading “ವೈದ್ಯರಿಗೆ ನಮಿಸಿ ಗೌರವಿಸಿದ ಫುಲೆ ಶಿಕ್ಷಕಿಯರ ಸಂಘ”

ಕೊವಿಡ್ ಲಸಿಕೆ ಕ್ಯಾಂಪ್ ನಲ್ಲಿ ಫುಲೆ ಶಿಕ್ಷಕಿಯರ ಸಂಘ ಭಾಗಿ-ಯಶಸ್ವಿ

ಕರ್ನಾಟಕ ರಾಜ್ಯ ಸಾವಿತ್ರಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ರಾಜ್ಯ ಘಟಕ ಧಾರವಾಡ. ರಾಯಚೂರು ಜಿಲ್ಲಾ ಘಟಕ ರಾಯಚೂರು,june,26. ಇಂದು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜ್ ರಾಯಚೂರಿನಲ್ಲಿ ವಿಶೇಷವಾಗಿ ಶಿಕ್ಷಕರಿಗಾಗಿ ,ಉಪನ್ಯಾಸಕರಿಗಾಗಿ, ಹಾಗೂ ವಿದ್ಯಾರ್ಥಿಗಳಿಗಾಗಿ, ಉಚಿತ ಕೋವಿಡ್-19 ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮಕ್ಕೆ ರಾಯಚೂರು ಜಿಲ್ಲೆಯ ಲೋಕಸಭಾ ಸದಸ್ಯರಾದ ಸನ್ಮಾನ್ಯ ಶ್ರೀ ರಾಜ ಅಮರೇಶ ನಾಯಕ, ರಾಯಚೂರು ನಗರದ ಜನಪ್ರಿಯ ಶಾಸಕರಾದ ಹಾಗೂ ಶಿಕ್ಷಕರ ಹಿತೈಷಿಗಳಾದ ಸನ್ಮಾನ್ಯ ಶ್ರೀ ಶಿವರಾಜ್ ಪಾಟೀಲ್ ಹಾಗೂ ಸನ್ಮಾನ್ಯ ಶ್ರೀ ಶಶೀಲ್. ಜಿ.Continue reading “ಕೊವಿಡ್ ಲಸಿಕೆ ಕ್ಯಾಂಪ್ ನಲ್ಲಿ ಫುಲೆ ಶಿಕ್ಷಕಿಯರ ಸಂಘ ಭಾಗಿ-ಯಶಸ್ವಿ”

42ನೇದಿನ ದಾಟಿದ ಫುಲೆ ಶಿಕ್ಷಕಿಯರ ಧ್ಯಾನ ತರಬೇತಿ ಕಾರ್ಯಕ್ರಮ

ಶಿವಮೊಗ್ಗ ಜೂ.24.ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ,ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಕೊವಿಡ್ ಸಂಕಷ್ಟದ ಈ ಸಮಯದಲ್ಲಿ ‘ಮಾನಸಿಕ ಧ್ಯಾನ ತರಬೇತಿ’ ಎಂಬ ವಿಶೇಷ ಕಾರ್ಯಕ್ರಮವನ್ನು ಗೂಗಲ್ ಮೀಟ್ ಮೂಲಕ ಕಳೆದ ಮೇ-2 ರಿಂದ ಹಮ್ಮಿಕೊಂಡಿದ್ದು, ಶಿವಮೊಗ್ಗದ ಸಂಜೀವಿನಿ ಸ್ಪಿರಿಚ್ಯುಯಲ್ ಸಲ್ಯೂಷನ್ ನ ಸಂಮೋಹಿನಿ‌ ತಜ್ಞೆ, ಮಾನಸಿಕ ಧ್ಯಾನ ಪ್ರಚಾರಕಿ.ಅಧ್ಯಾತ್ಮ ಚಿಂತಕಿ ಶ್ರೀಲಕ್ಷ್ಮಿ ರವರು ಧ್ಯಾನ ತರಬೇತಿಯನ್ನು ಬಹಳ ಉತ್ಸಾಹದಿಂದ ನಡೆಸಿಕೊಡುತ್ತಿದ್ದಾರೆ, ಅವರು ಮಾತನಾಡಿ ಧ್ಯಾನ ಒಂದು ಪರಮಾನಂದಕರವಾದ ಅನುಭವ, ಇದು ನಮ್ಮ ಎಲ್ಲಾ ನೋವು,Continue reading “42ನೇದಿನ ದಾಟಿದ ಫುಲೆ ಶಿಕ್ಷಕಿಯರ ಧ್ಯಾನ ತರಬೇತಿ ಕಾರ್ಯಕ್ರಮ”

ಶಿಶುಪಾಲನೆ ರಜೆಗೆ ಮೂಲ ಕಾರಣರಾದ IAS ಅಧಿಕಾರಿಯನ್ನು ಗೌರವಿಸಿ ಸನ್ಮಾನಿಸಿದ ರಾಜ್ಯ ಫುಲೆ ಸಂಘ

ಕಲ್ಬುರ್ಗಿ June-23.ರಾಜ್ಯದ ಸಮಸ್ತ ಸರ್ಕಾರಿ ಮಹಿಳಾ ಸಿಬ್ಬಂದಿಗಳಿಗೆ ತಮ್ಮ ಸೇವಾವಧಿಯಲ್ಲಿ ಒಟ್ಟು 180 ದಿನಗಳ ಶಿಶುಪಾಲನೆ ರಜೆಗಳನ್ನು ಘೋಷಣೆ ಮಾಡಿ ಘನ ಸರ್ಕಾರವು ಆದೇಶ ಮಾಡಿರುತ್ತದೆ.ರಾಜ್ಯದ ಎಲ್ಲಾ ಸರ್ಕಾರಿ,ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನು ಒಳಗೊಂಡ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ಸರ್ಕಾರದ ಈ ಆದೇಶವನ್ನು ಸಂತಸದಿಂದ ಸ್ವಾಗತಿಸಿದೆ.ಹಾಗೂ ಘನ ಸರ್ಕಾರಕ್ಕೆ ಅಭಿನಂದನೆಯನ್ನು ಸಲ್ಲಿಸಿದೆ. ಮಕ್ಕಳಿಗೆ ಮಾತೃ ವಾತ್ಸಲ್ಯದ ಪ್ರೀತಿ ಮಮಕಾರದ ಅಮ್ಮನ ತೋಳಿನ ಆರೈಕೆ ಅಗತ್ಯವಾಗಿ ಬೇಕಾಗಿತ್ತು. ಇದು ಅತೀ ಮುಖ್ಯವಾಗಿ ಎಲ್ಲಾContinue reading “ಶಿಶುಪಾಲನೆ ರಜೆಗೆ ಮೂಲ ಕಾರಣರಾದ IAS ಅಧಿಕಾರಿಯನ್ನು ಗೌರವಿಸಿ ಸನ್ಮಾನಿಸಿದ ರಾಜ್ಯ ಫುಲೆ ಸಂಘ”

ಮಹಿಳಾ ನೌಕರರಿಗೆ ಸರ್ಕಾರದ ಬಂಪರ್ ಕೊಡುಗೆ-ಧನ್ಯವಾದ ಸಲ್ಲಿಸಿದ ಶಿಕ್ಷಕಿಯರ ಸಂಘ

ಧಾರವಾಡ ಜೂ.22 2020-21 ಸಾಲಿನ ರಾಜ್ಯದ ಬಜೆಟ್ ನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ‌ನವರು ರಾಜ್ಯದ ಎಲ್ಲಾ ಮಹಿಳಾ ನೌಕರರಿಗೆ ಮಕ್ಕಳ ಆರೈಕೆ ಮಾಡುವ ಸಲುವಾಗಿ ಶಿಶುಪಾಲನಾ ರಜೆ ಘೋಷಣೆ ಮಾಡಿದ್ದರು. ಅಂದಿನಿಂದಶಿಶುಪಾಲನಾ ರಜೆ ಸಂಬಂಧ ಸರ್ಕಾರದ ಆದೇಶಕ್ಕಾಗಿ ಎದುರು ನೋಡುತ್ತಾ ಇದ್ದ ರಾಜ್ಯದ ಸಮಸ್ತ ಮಹಿಳಾ ನೌಕರರು,ಶಿಕ್ಷಕಿಯರುಗಳಿಗೆ ಘನ‌ ಸರ್ಕಾರ ಇಂದು ಆದೇಶ ಜಾರಿ ಮಾಡಿದೆ.ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ಇದರ ಸಂಬಂಧ ಸರ್ಕಾರಕ್ಕೆ ಒತ್ತಾಯಿಸಿ ಹಲವಾರು ಬಾರಿ ಮನವಿ ಸಲ್ಲಿಸಿ ಗಮನContinue reading “ಮಹಿಳಾ ನೌಕರರಿಗೆ ಸರ್ಕಾರದ ಬಂಪರ್ ಕೊಡುಗೆ-ಧನ್ಯವಾದ ಸಲ್ಲಿಸಿದ ಶಿಕ್ಷಕಿಯರ ಸಂಘ”

ಸಸಿಗೆ ಬೇಡಿಕೆ ಇಟ್ಟ ಫುಲೆ ಶಿಕ್ಷಕಿಯರ ಸಂಘ

ಶಿವಮೊಗ್ಗ ಜೂ21.ಬರಡಾದ ನೆಲಕ್ಕೆ ಜೀವಚೈತನ್ಯ ತಲುಪಿಸುವ ಹೊಣೆ ಹೊತ್ತು, ಸದ್ದಿಲ್ಲದೆ ಚಿಗುರೊಡೆದು ಬಂದ ಫುಲೆ ಸಂಘವು ಪ್ರಕೃತಿ ಯಂತೆ ಶುದ್ಧ. ವನಸಿರಿಯ ಪ್ರೀತಿಯಂತೆ ಅದಕ್ಕೆ ಪರ್ಯಾಯ ಪದ ಇಲ್ಲವೆನ್ನುವಷ್ಟು ಪರಿಶುದ್ಧ ಎಂಬ ನುಡಿಯಂತೆ ಇಂದು ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಸಂಘವು, ಶಿವಮೊಗ್ಗದ ವಲಯ ಅರಣ್ಯಾಧಿಕಾರಿ ಶ್ರೀ ಉಮೇಶ್ ರವರಿಗೆ ಔಷಧಿಯುಕ್ತ ಹಾಗೂ ಉಪಯುಕ್ತ ಸಸಿಗಳನ್ನು ನೀಡುವಂತೆ ಮನವಿ ಮಾಡಿದೆ.ವಲಯ ಅರಣ್ಯಾಧಿಕಾರಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಉತ್ತಮ ಕೆಲಸದಲ್ಲಿ ಫುಲೆ ಶಿಕ್ಷಕಿಯರ ಸಂಘ ತೊಡಗಿಸಿಕೊಂಡಿದೆContinue reading “ಸಸಿಗೆ ಬೇಡಿಕೆ ಇಟ್ಟ ಫುಲೆ ಶಿಕ್ಷಕಿಯರ ಸಂಘ”