ಕಲ್ಬುರ್ಗಿ June-23.ರಾಜ್ಯದ ಸಮಸ್ತ ಸರ್ಕಾರಿ ಮಹಿಳಾ ಸಿಬ್ಬಂದಿಗಳಿಗೆ ತಮ್ಮ ಸೇವಾವಧಿಯಲ್ಲಿ ಒಟ್ಟು 180 ದಿನಗಳ ಶಿಶುಪಾಲನೆ ರಜೆಗಳನ್ನು ಘೋಷಣೆ ಮಾಡಿ ಘನ ಸರ್ಕಾರವು ಆದೇಶ ಮಾಡಿರುತ್ತದೆ.ರಾಜ್ಯದ ಎಲ್ಲಾ ಸರ್ಕಾರಿ,ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನು ಒಳಗೊಂಡ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ಸರ್ಕಾರದ ಈ ಆದೇಶವನ್ನು ಸಂತಸದಿಂದ ಸ್ವಾಗತಿಸಿದೆ.ಹಾಗೂ ಘನ ಸರ್ಕಾರಕ್ಕೆ ಅಭಿನಂದನೆಯನ್ನು ಸಲ್ಲಿಸಿದೆ. ಮಕ್ಕಳಿಗೆ ಮಾತೃ ವಾತ್ಸಲ್ಯದ ಪ್ರೀತಿ ಮಮಕಾರದ ಅಮ್ಮನ ತೋಳಿನ ಆರೈಕೆ ಅಗತ್ಯವಾಗಿ ಬೇಕಾಗಿತ್ತು. ಇದು ಅತೀ ಮುಖ್ಯವಾಗಿ ಎಲ್ಲಾContinue reading “ಶಿಶುಪಾಲನೆ ರಜೆಗೆ ಮೂಲ ಕಾರಣರಾದ IAS ಅಧಿಕಾರಿಯನ್ನು ಗೌರವಿಸಿ ಸನ್ಮಾನಿಸಿದ ರಾಜ್ಯ ಫುಲೆ ಸಂಘ”
Author Archives: ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ
ಮಹಿಳಾ ನೌಕರರಿಗೆ ಸರ್ಕಾರದ ಬಂಪರ್ ಕೊಡುಗೆ-ಧನ್ಯವಾದ ಸಲ್ಲಿಸಿದ ಶಿಕ್ಷಕಿಯರ ಸಂಘ
ಧಾರವಾಡ ಜೂ.22 2020-21 ಸಾಲಿನ ರಾಜ್ಯದ ಬಜೆಟ್ ನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಎಲ್ಲಾ ಮಹಿಳಾ ನೌಕರರಿಗೆ ಮಕ್ಕಳ ಆರೈಕೆ ಮಾಡುವ ಸಲುವಾಗಿ ಶಿಶುಪಾಲನಾ ರಜೆ ಘೋಷಣೆ ಮಾಡಿದ್ದರು. ಅಂದಿನಿಂದಶಿಶುಪಾಲನಾ ರಜೆ ಸಂಬಂಧ ಸರ್ಕಾರದ ಆದೇಶಕ್ಕಾಗಿ ಎದುರು ನೋಡುತ್ತಾ ಇದ್ದ ರಾಜ್ಯದ ಸಮಸ್ತ ಮಹಿಳಾ ನೌಕರರು,ಶಿಕ್ಷಕಿಯರುಗಳಿಗೆ ಘನ ಸರ್ಕಾರ ಇಂದು ಆದೇಶ ಜಾರಿ ಮಾಡಿದೆ.ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ಇದರ ಸಂಬಂಧ ಸರ್ಕಾರಕ್ಕೆ ಒತ್ತಾಯಿಸಿ ಹಲವಾರು ಬಾರಿ ಮನವಿ ಸಲ್ಲಿಸಿ ಗಮನContinue reading “ಮಹಿಳಾ ನೌಕರರಿಗೆ ಸರ್ಕಾರದ ಬಂಪರ್ ಕೊಡುಗೆ-ಧನ್ಯವಾದ ಸಲ್ಲಿಸಿದ ಶಿಕ್ಷಕಿಯರ ಸಂಘ”
ಸಸಿಗೆ ಬೇಡಿಕೆ ಇಟ್ಟ ಫುಲೆ ಶಿಕ್ಷಕಿಯರ ಸಂಘ
ಶಿವಮೊಗ್ಗ ಜೂ21.ಬರಡಾದ ನೆಲಕ್ಕೆ ಜೀವಚೈತನ್ಯ ತಲುಪಿಸುವ ಹೊಣೆ ಹೊತ್ತು, ಸದ್ದಿಲ್ಲದೆ ಚಿಗುರೊಡೆದು ಬಂದ ಫುಲೆ ಸಂಘವು ಪ್ರಕೃತಿ ಯಂತೆ ಶುದ್ಧ. ವನಸಿರಿಯ ಪ್ರೀತಿಯಂತೆ ಅದಕ್ಕೆ ಪರ್ಯಾಯ ಪದ ಇಲ್ಲವೆನ್ನುವಷ್ಟು ಪರಿಶುದ್ಧ ಎಂಬ ನುಡಿಯಂತೆ ಇಂದು ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಸಂಘವು, ಶಿವಮೊಗ್ಗದ ವಲಯ ಅರಣ್ಯಾಧಿಕಾರಿ ಶ್ರೀ ಉಮೇಶ್ ರವರಿಗೆ ಔಷಧಿಯುಕ್ತ ಹಾಗೂ ಉಪಯುಕ್ತ ಸಸಿಗಳನ್ನು ನೀಡುವಂತೆ ಮನವಿ ಮಾಡಿದೆ.ವಲಯ ಅರಣ್ಯಾಧಿಕಾರಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಉತ್ತಮ ಕೆಲಸದಲ್ಲಿ ಫುಲೆ ಶಿಕ್ಷಕಿಯರ ಸಂಘ ತೊಡಗಿಸಿಕೊಂಡಿದೆContinue reading “ಸಸಿಗೆ ಬೇಡಿಕೆ ಇಟ್ಟ ಫುಲೆ ಶಿಕ್ಷಕಿಯರ ಸಂಘ”
ಶಿಶುಪಾಲನೆ ರಜೆ- ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಕಛೇರಿಗೆ ಬೇಟಿ.
ಬೆಂಗಳೂರು ಜೂನ್-21 2021-22ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೆ ೬ ತಿಂಗಳ ಶಿಶುಪಾಲನಾ ರಜೆಯನ್ನು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶೀಘ್ರದಲ್ಲಿ ಜಾರಿಯಾಗಲುಸರ್ಕಾರದ ಆದೇಶ ಹೊರಬೀಳಬೇಕಾಗಿದೆ. ಇಂತಹ ಕೋವಿಡ್ ಸಂಕಷ್ಟದಿನದಲ್ಲಿ ಶಿಶು ಆರೈಕೆ ರಜೆಯು ಪ್ರತಿ ಮಹಿಳಾ ನೌಕರರಿಗೆ ಅನಿವಾರ್ಯವಾಗಿದ್ದು ಅತ್ಯಂತ ಮಹತ್ವದ ಆದೇಶವಾಗಿರುತ್ತದೆ.ಇಂದು ರಾಜ್ಯದ ಎಲ್ಲಾ ಮಹಿಳಾ ನೌಕರರು ,ಶಿಕ್ಷಕಿಯರು ಸರ್ಕಾರದ ಈ ಆದೇಶವನ್ನೇ ಎದುರು ನೋಡುತ್ತಿದ್ದಾರೆ.ಘನ ಸರ್ಕಾರವುಅತೀ ಶೀಘ್ರದಲ್ಲಿ ರಾಜ್ಯ ಮಹಿಳಾ ನೌಕರರಿಗೆ ‘೬ ತಿಂಗಳContinue reading “ಶಿಶುಪಾಲನೆ ರಜೆ- ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಕಛೇರಿಗೆ ಬೇಟಿ.”
ಶಿಶುಪಾಲನಾ ರಜೆ ಶೀಘ್ರವಾಗಿ ಜಾರಿಯಾಗಲಿ-ಡಾ.ಲತಾ.ಎಸ್.ಮುಳ್ಳೂರ ಮನವಿ
ಧಾರವಾಡ ಜೂನ್ 18. ಶಿಶುಪಾಲನೆ ರಜೆ ಕುರಿತ ಸರ್ಕಾರದ ಆದೇಶ ಮಾಡಲು ಮನವಿ ಸಲ್ಲಿಸಿದ ರಾಜ್ಯ ಫುಲೆ ಸಂಘ 2021-22ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೆ ೬ ತಿಂಗಳ ಶಿಶುಪಾಲನಾ ರಜೆಯನ್ನು ಘೋಷಣೆ ಮಾಡಿದ್ದು,ಇದು ಮಹಿಳಾ ನೌಕರರ ಮತ್ತು ಶಿಕ್ಷಕಿಯರ ಪರವಾಗಿ ಸನ್ಮಾನ್ಯ ಮುಖ್ಯಮಂತ್ರಿಗಳಿಗಿರುವ ಕಾಳಜಿಯನ್ನು ತೋರಿಸುತ್ತದೆ. ಇದು ರಾಜ್ಯದ ಎಲ್ಲಾ ಮಹಿಳಾ ಸರ್ಕಾರಿ ನೌಕರರು ಮತ್ತು ಮಹಿಳಾ ಶಿಕ಼ಕಿಯರಿಗೆ ಇದು ಅತ್ಯಂತ ಹೆಮ್ಮೆಯ ವಿಷಯವಾಗಿದೆ.ಈ ಹಿನ್ನೆಲೆಯಲ್ಲಿ ಮಾನ್ಯContinue reading “ಶಿಶುಪಾಲನಾ ರಜೆ ಶೀಘ್ರವಾಗಿ ಜಾರಿಯಾಗಲಿ-ಡಾ.ಲತಾ.ಎಸ್.ಮುಳ್ಳೂರ ಮನವಿ”
ಬಿ.ಇ.ಒ ಅಧಿಕಾರಿಗೆ ಮನವಿ ಸಲ್ಲಿಕೆ
ತೀರ್ಥಹಳ್ಳಿ ಜೂ.13. ಕೋವಿಡ್ 19 ಮಹಾ ರೋಗವು ಉಲ್ಬಣಗೊಂಡು ವಿಶ್ವವ್ಯಾಪಿ ಜನಜೀವನವನ್ನು ತಲ್ಲಣಗೊಳಿಸಿದೆ.ಅದರಲ್ಲೂ ಎರಡನೇ ಅಲೆಯು ನಮ್ಮ ದೇಶದಲ್ಲಿ ಅತೀವ ಶೀಘ್ರವಾಗಿ ವ್ಯಾಪಿಸಿ ಲಕ್ಷಾಂತರ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಸಾವಿರಾರು ಜನರ ಜೀವಹಾನಿ ಮಾಡಿರುತ್ತದೆಇದು ಶೈಕ್ಷಣಿಕ ರಂಗದ ಮೇಲೆ ಪ್ರಭಾವ ಬೀರಿರುತ್ತದೆಇನ್ನು ತಜ್ಞರ ಅಭಿಪ್ರಾಯದಂತೆ ಮೂರನೇ ಅಲೆಯು ಮಕ್ಕಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚು ಎಂದು ವರದಿ ಮಾಡಿರುತ್ತಾರೆ. ಈಗಾಗಲೇ ಶಿಕ್ಷಣ ಇಲಾಖೆಯು 2021 22ನೇ ಸಾಲಿನ ಶೈಕ್ಷಣಿಕ ಅವಧಿ ಶಾಲಾ ದಾಖಲಾತಿ ಪ್ರಾರಂಭಿಸಲು ಸೂಚಿಸಿದೆ. ಆದ್ದರಿಂದContinue reading “ಬಿ.ಇ.ಒ ಅಧಿಕಾರಿಗೆ ಮನವಿ ಸಲ್ಲಿಕೆ”
ಮಾನ್ಯ ಶಿಕ್ಷಣ ಸಚಿವರಿಗೆ ಮನವಿ ಮಾಡಿದ ಶಿಕ್ಷಕಿಯರ ಸಂಘ
ಧಾರವಾಡ ಜೂನ್ -12ಕೊವಿಡ್ ಎರಡನೇ ಅಲೆ ಇಡೀ ರಾಜ್ಯದ ಜನ ಸಮುದಾಯವನ್ನೇ ತಲ್ಲಣಗೊಳಿಸಿದ್ದಲ್ಲದೇ ಕೊರೊನಾ ಸೋಂಕಿಗೆ ಸಿಕ್ಕಿ ಹಲವಾರು ಶಿಕ್ಷಕರ ಪ್ರಾಣ ಬಲಿಯಾಗಿದೆ.ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ 2021-22 ನೇ ಸಾಲಿನ ಶೈಕ್ಷಣಿಕ ಅವಧಿ ಜುಲೈ-1 ರಿಂದ ಪ್ರಾರಂಭವಾಗುತ್ತಿದ್ದು,ಶಿಕ್ಷಕರು ಹದಿನೈದು ದಿನ ಮೊದಲೇ ಜೂನ್ -15 ಕ್ಕೆ ಪೂರ್ವಸಿದ್ದತೆಗಾಗಿ ಶಾಲೆಗೆ ಹೋಗಬೇಕೆಂದು ಇಲಾಖೆಯು ಆದೇಶ ಹೊರಡಿಸಿದೆ.ಇದರಿಂದ ಎಲ್ಲ ಶಿಕ್ಷಕರಿಗೂ ಸಮಸ್ಯೆ ಎದುರಾಗಿದೆ.ಕೊವಿಡ್ ಲಾಕ್ ಡೌನ್ 11 ಜಿಲ್ಲೆಗಳಲ್ಲಿ ಮುಂದುವರೆದಿದ್ದು,ಉಳಿದ 20 ಜಿಲ್ಲೆಗಳಲ್ಲಿ ಸೆಮಿ ಲಾಕ್ಡೌನ್ ಮಾಡಲಾಗಿದೆ ಸರಿಯಷ್ಟೆ.ಆದರೆಕೆ.ಎಸ್.ಆರ್.ಟಿ.ಸಿ.ಬಸ್ ಸಂಚಾರContinue reading “ಮಾನ್ಯ ಶಿಕ್ಷಣ ಸಚಿವರಿಗೆ ಮನವಿ ಮಾಡಿದ ಶಿಕ್ಷಕಿಯರ ಸಂಘ”
