ಸನ್ಮಾನ್ಯ ಗೌರವಯುತ ಮುಖ್ಯಮಂತ್ರಿಗಳು ಹಾಗೂ ಸನ್ಮಾನ್ಯ ಶಿಕ್ಷಣ ಸಚಿವರು ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಯಂದು ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರದೊಂದಿಗೆ ಮಾತೇ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರವನ್ನೂ ಇರಿಸಿ,ಎರಡೂ ಭಾವಚಿತ್ರಗಳಿಗೂ ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಿದ್ದಾರೆ,ಇದು ಶಿಕ್ಷಕ ಶಿಕ್ಷಕಿಯರ ಮೇಲಿರುವ ಅವರ ಅಭಿಮಾನವನ್ನು ತೋರಿಸುತ್ತದೆ,ಸಮಸ್ತ ಕರ್ನಾಟಕದ ಮಹಿಳಾ ಶಿಕ್ಷಕಿಯರ ಪರವಾಗಿ ಘನ ಸರ್ಕಾರದ ಮಾನ್ಯಮುಖ್ಯಮಂತ್ರಿಗಳಿಗೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ಗೌರವಪೂರ್ವಕ ಧನ್ಯವಾದಗಳನ್ನು ಸಮರ್ಪಿಸುತ್ತದೆ. ರಾಜ್ಯಾದ್ಯಂತ ಜಿಲ್ಲಾಮಟ್ಟದ ಹಾಗೂ ತಾಲ್ಲೂಕು ಮಟ್ಟದContinue reading “ಶಿಕ್ಷಕರ ದಿನಾಚರಣೆ – ಎರಡು ಭಾವಚಿತ್ರಗಳಿಗೂ ಸಮಾನ ಗೌರವ ನೀಡಿ ಪುಷ್ಪಾರ್ಪಣೆ ಮಾಡಿದ ಮುಖ್ಯಮಂತ್ರಿಗಳು-ಮೆಚ್ಚುಗೆ ವ್ಯಕ್ತಪಡಿಸಿದ ಶಿಕ್ಷಕಿಯರ ಸಂಘ”
Author Archives: ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ
ಡಾ.ಮುಳ್ಳೂರ ರವರ ಎರಡು ದಿನಗಳ ತುಮಕೂರು ಜಿಲ್ಲಾ ಪ್ರವಾಸ ಸಂಪೂರ್ಣ ಯಶಸ್ವಿ
ತುಮಕೂರು ಆ.22 ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್ ಮುಳ್ಳೂರ ರವರ ಎರಡು ದಿನಗಳ ತುಮಕೂರು ಜಿಲ್ಲಾ ಪ್ರವಾಸ ಸಂಪೂರ್ಣ ಯಶಸ್ವಿಯಾಗಿದೆ. ಹೌದು ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲಾ ಘಟಕಗಳು ಜಂಟಿಯಾಗಿ ಅಯೋಜನೆ ಮಾಡಿದ್ದ ಜಿಲ್ಲಾ ಮಟ್ಟದ ಕಾರ್ಯಕಾರಿ ಸಭೆಗೆ ಧಾರವಾಡ ದಿಂದ ಶನಿವಾರ ಬೆಳಿಗ್ಗೆ ತುಮಕೂರಿಗೆ ಬಂದಿಳಿದಿದ್ದ ಡಾ.ಲತಾ.ಎಸ್.ಮುಳ್ಳೂರ ರವರು ನೇರವಾಗಿ ಶ್ರೀ ಕ್ಷೇತ್ರ ಸಿದ್ದಗಂಗಾ ಮಠಕ್ಕೆ ಬೇಟಿ ಮಾಡಿ ಶ್ರೀಗಳ ಆಶೀರ್ವಾದ ಪಡೆದುಕೊಂಡರು. ನಂತರದಲ್ಲಿ ಶ್ರೀ ಮಠಕ್ಕೆContinue reading “ಡಾ.ಮುಳ್ಳೂರ ರವರ ಎರಡು ದಿನಗಳ ತುಮಕೂರು ಜಿಲ್ಲಾ ಪ್ರವಾಸ ಸಂಪೂರ್ಣ ಯಶಸ್ವಿ”
ಶಿಕ್ಷಕಿಯರು ಬರುತ್ತಿದ್ದಾರೆ.ದಾರಿ ಬಿಡಿ.ಗೌರವ ಕೊಡಿ ಎಂದು ಸಂದೇಶ ನೀಡಿದ ವಿಶ್ರಾಂತ ಕುಲಪತಿಗಳು ಡಾ.ಮಲ್ಲಿಕಾ ಘಂಟಿರವರು
ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ ವತಿಯಿಂದ ಆಯೋಜನೆಯಾದ ರಾಜ್ಯಮಟ್ಟದ ವರ್ಚುವಲ್ ವೇಬಿನಾರ ಕಾರ್ಯಕ್ರಮ,ದಿನಾಂಕ 14 /08/ 2021 ಶನಿವಾರ ಸಂಜೆ. 4 ಗಂಟೆಗೆ ಹೆಸರಾಂತ ಮಹಿಳಾಪರ ಹೋರಾಟಗಾರರು, ಸ್ತ್ರೀವಾದಿ ಚಿಂತಕರು .ರಾಜ್ಯಕ್ಕೆ ಚುರಪರಿಚಿತರು ಹಾಗೂ ಹಿರಿಯ ಸಾಹಿತಿಗಳು ಆದಂತಹ ಡಾ. ಮಲ್ಲಿಕಾ ಘಂಟಿ ಮೇಡಂ .ವಿಶ್ರಾಂತ ಉಪಕುಲಪತಿಗಳು ಕನ್ನಡ ವಿಶ್ವವಿದ್ಯಾನಿಲಯ ಹಂಪಿ ಇವರಿಂದ ಮಹಿಳಾ ಸ್ವಾತಂತ್ರ್ಯ ಸಮಾನತೆ ಮತ್ತು ಮಹಿಳಾ ಮೀಸಲಾತಿ ಎಂಬ ವಿಷಯದ ಕುರಿತು ವೆಬಿನಾರ್ ಹಾಗೂContinue reading “ಶಿಕ್ಷಕಿಯರು ಬರುತ್ತಿದ್ದಾರೆ.ದಾರಿ ಬಿಡಿ.ಗೌರವ ಕೊಡಿ ಎಂದು ಸಂದೇಶ ನೀಡಿದ ವಿಶ್ರಾಂತ ಕುಲಪತಿಗಳು ಡಾ.ಮಲ್ಲಿಕಾ ಘಂಟಿರವರು”
ನೂತನ ಶಿಕ್ಷಣ ಸಚಿವರ ಬೇಟಿ-ಶೈಕ್ಷಣಿಕ ಸಭೆಗಳಿಗೆ ಫುಲೆ ಪದಾಧಿಕಾರಿಗಳ ಆಹ್ವಾನಕ್ಕೆ ಬೇಡಿಕೆ.
ತುಮಕೂರು.ಆ.11 ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ( ರಿ) ರಾಜ್ಯ ಘಟಕ ಧಾರವಾಡ. ತುಮಕೂರು ಮತ್ತು ಮಧುಗಿರಿ ಜಿಲ್ಲಾ ಘಟಕಗಳ ವತಿಯಿಂದ ಈ ದಿನ ದಿನಾಂಕ -11/8/21ರಂದು ಮುಂಜಾನೆ 8 ಗಂಟೆಗೆ ನೂತನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವರಾಗಿ ಸಾರಥ್ಯವಹಿಸಿರುವ ಸನ್ಮಾನ್ಯ ಶ್ರೀ ಬಿ.ಸಿ.ನಾಗೇಶ್ ರವರನ್ನು ಭೇಟಿ ಮಾಡಿ ಸ್ವಾಗತಿಸಿ ಗೌರವಿಸಲಾಯಿತು . ಕರ್ನಾಟಕದ ಏಕೈಕ ಮಹಿಳಾ ಶಿಕ್ಷಕಿಯರ ಸಂಘ ಇದಾಗಿದ್ದು,ರಾಜ್ಯದ ಸಂಸ್ಥಾಪಕ ಅಧ್ಯಕ್ಷರಾದ ಡಾ.ಲತಾ ಎಸ್.ಮುಳ್ಳೂರವರು ಈ ಸಂಘವನ್ನ ಸಂಸ್ಥಾಪಿಸಿ ಎಲ್ಲಾ ಶಿಕ್ಷಕಿಯರಿಗೂContinue reading “ನೂತನ ಶಿಕ್ಷಣ ಸಚಿವರ ಬೇಟಿ-ಶೈಕ್ಷಣಿಕ ಸಭೆಗಳಿಗೆ ಫುಲೆ ಪದಾಧಿಕಾರಿಗಳ ಆಹ್ವಾನಕ್ಕೆ ಬೇಡಿಕೆ.”
ಮಹಿಳಾ ಮೀಸಲಾತಿ ಕೋರಿ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಮನವಿ ಕೊಟ್ಟ ವಿಜಯನಗರ ಫುಲೆ ಶಿಕ್ಷಕಿಯರ ಸಂಘ
ವಿಜಯನಗರ ಆ.04 -2021 ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ (ರಿ) ಘಟಕ ಧಾರವಾಡ ,ಜಿಲ್ಲಾ ಘಟಕ ವಿಜಯನಗರ ವತಿಯಿಂದಇಂದು ಜಿಲ್ಲೆ ಹಾಗೂ ತಾಲೂಕಿನ ಎಲ್ಲಾ ಪದಾಧಿಕಾರಿಗಳ ಪರವಾಗಿ ಹಾಗೂ ಸಮಸ್ತ ಮಹಿಳಾ ಶಿಕ್ಷಕಿಯರ ಪರವಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಲ್ಲಿ ಇರುವಂತೆ 33% ಮಹಿಳಾ ಸಂವಿಧಾನಿಕ ಮೀಸಲಾತಿಯನ್ನು ಕರ್ನಾಟಕ ರಾಜ್ಯ ಸಕಾ೯ರಿ ನೌಕರರ ಸಂಘದಲ್ಲು ನೀಡುವಂತೆ ಸ್ನೇಹಪರರೂ, ಮಹಿಳಾ ಪರ ಕಾಳಜಿ ಇರುವ ರಾಜ್ಯ ಸಕಾ೯ರಿ ನೌಕರರ ಸಂಘದ ರಾಜ್ಯಧ್ಯಕ್ಷರಾದ ಶ್ರೀಯುತContinue reading “ಮಹಿಳಾ ಮೀಸಲಾತಿ ಕೋರಿ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಮನವಿ ಕೊಟ್ಟ ವಿಜಯನಗರ ಫುಲೆ ಶಿಕ್ಷಕಿಯರ ಸಂಘ”
ಅಧ್ಯಕ್ಷರೇ.ಮಹಿಳಾ ನೌಕರರಿಗೆ ಸಾಂವಿಧಾನಿಕ ಮೀಸಲಾತಿ ಕೊಡಿ – ಡಾ.ಲತಾ.ಎಸ್.ಮುಳ್ಳೂರ
ಗೆ,ಶ್ರೀ ಸಿ.ಎಸ್. ಷಡಾಕ್ಷರಿಅಧ್ಯಕ್ಷರು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ.(ರಿ) ಬೆಂಗಳೂರುಕಬ್ಬನ್ ಉದ್ಯಾನವನ ಬೆಂಗಳೂರು-560001 *ವಿಷಯ:* ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ಸಾಂವಿಧಾನಿಕ ಸಮಾನತೆಗಾಗಿ ಮಹಿಳಾ ನೌಕರರಿಗೆ ಮೀಸಲಾತಿ ಕಲ್ಪಿಸುವ ಕುರಿತು ಮಾನ್ಯರೇ,ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವನ್ನು ಹುಟ್ಟು ಹಾಕಿದ ದಿಟ್ಟ ಮಹಿಳೆ ಹಾಗೂ ಎಲ್ಲಾ ನೌಕರರ ವಿಶ್ವಾಸಕ್ಕೆ ದ್ವನಿಯಾಗಿದ್ದ ದಿ.ಶ್ರೀಮತಿ ಮೇರಿ ದೇವಾಸಿಯ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.. ಹಾಗಾಗಿ ರಾಜ್ಯದ ಸಮಸ್ತ ಸರ್ಕಾರಿ ನೌಕರರಲ್ಲಿ ಬಹುತೇಕ ಮಹಿಳಾContinue reading “ಅಧ್ಯಕ್ಷರೇ.ಮಹಿಳಾ ನೌಕರರಿಗೆ ಸಾಂವಿಧಾನಿಕ ಮೀಸಲಾತಿ ಕೊಡಿ – ಡಾ.ಲತಾ.ಎಸ್.ಮುಳ್ಳೂರ”
ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಿದ ಗುಬ್ಬಿ ತಾಲ್ಲೂಕು ಫುಲೆ ಶಿಕ್ಷಕಿಯರ ಸಂಘ
ಗುಬ್ಬಿ,ಆ.03-ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ,ತಾಲ್ಲೂಕು ಘಟಕ ಗುಬ್ಬಿ ಯ ನೂತನ ಪದಾಧಿಕಾರಿಗಳುಪರಿಚಯಪೂರ್ವಕ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳುವುದರ ಮೂಲಕ ಎಲ್ಲಾ ಪದಾಧಿಕಾರಿಗಳು ಹಾಜರಾಗಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಸೋಮಶೇಖರ್ ಸರ್ ಹಾಗೂ ಅಕ್ಷರ ದಾಸೋಹ ಅಧಿಕಾರಿಗಳಾದ ಶ್ರೀಯುತ ಯೋಗಾನಂದ್ ಸರ್ ಅವರನ್ನು ಬೇಟಿ ಮಾಡಿ ಸನ್ಮಾನಿಸಿ ಗೌರವಿಸಿದರು. ಈ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಶ್ರೀಮತಿ ಅನುಸೂಯ ದೇವಿಯವರು, ಗುಬ್ಬಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮಿಯವರು,ಗೌರವಾಧ್ಯಕ್ಷರಾದ ಶ್ರೀಮತಿ ದೇವಿಕಾ ರವರು, ಪ್ರಧಾನ ಕಾರ್ಯದರ್ಶಿಗಳಾದContinue reading “ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಿದ ಗುಬ್ಬಿ ತಾಲ್ಲೂಕು ಫುಲೆ ಶಿಕ್ಷಕಿಯರ ಸಂಘ”
