ರಾಮನಗರ, ನವೆಂಬರ್ 01

ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ (ರಿ ) ರಾಜ್ಯ ಘಟಕ ಧಾರವಾಡ ಜಿಲ್ಲಾ ಘಟಕ ರಾಮನಗರ, ತಾಲೂಕು ಘಟಕ ರಾಮನಗರ. ಇಂದು ರಾಮನಗರ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.


ಇಂದಿನ ಕಾರ್ಯಕ್ರಮದಲ್ಲಿ 40 ಮಕ್ಕಳಿಗೆ ಟ್ರ್ಯಾಕ್ ಶೂಟ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಮಕ್ಕಳಿಗೆ ಟ್ರ್ಯಾಕ್ ಸೂಟ್ ಒದಗಿಸಿದಂತಹ ಶ್ರೀಯುತ ಅನಿಲ್ ಸರ್ ಅವರ ಶ್ರೀಮತಿಗಳಾದ ಶ್ರೀಮತಿ ಆಶಾ ಅನಿಲ್ ರವರು ಹಾಗೂ ರಾಮನಗರ ರೋಟರಿ ಸಿಲ್ಕ್ ಸಿಟಿಯ ಅಧ್ಯಕ್ಷರಾದ ಶ್ರೀಯುತ ಸುಹಾಸ್ ಅವರು,


ಕರ್ನಾಟಕ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಷ್ಟ್ರೀಯ, ರಾಜ್ಯ, ರಾಮನಗರ ಜಿಲ್ಲಾ ಹಾಗೂ ರಾಮನಗರ ಮತ್ತು ಕನಕಪುರ ತಾಲ್ಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ಹೆಚ್ಚು ಮೆರಗನ್ನು ತಂದು ಕೊಟ್ಟಂತಹ ಸಂಘಟನೆಯ ಎಲ್ಲಾ ಪದಾಧಿಕಾರಿಗಳ ಉಪಸ್ಥಿತಿಯು ಸಂಘಟನೆಯ ಶಕ್ತಿಯನ್ನು , ಒಗ್ಗಟ್ಟನ್ನೂ ಮತ್ತಷ್ಟು ಹಿಮ್ಮಡಿಗೊಳಿಸಿದೆ.

