ಮಹಿಳೆ ಮತ್ತು ವಿಜ್ಞಾನ ಕಾರ್ಯಗಾರದಲ್ಲಿ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಬಾಗಿ – ಯಶಸ್ವಿ

ದಿನಾಂಕ 24/10/2026 ಮತ್ತು 25/10/2026 ರಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ವತಿಯಿಂದ ಮಹಿಳೆ ಮತ್ತು ವಿಜ್ಞಾನ ರಾಜ್ಯಮಟ್ಟದ ಶಿಬಿರವನ್ನು ಡಾ. ರಾಮ ಮನೋಹರ ಲೋಹಿಯಾ ಸಮತಾ ವಿದ್ಯಾಲಯ, ಸಿರಾದಲ್ಲಿ ಹಮ್ಮಿಕೊಂಡಿದ್ದರು.

ಈ ಕಾರ್ಯಕ್ರಮಕ್ಕೆ ಡಾ. ಲತಾ. ಎಸ್ ಮುಳ್ಳೂರು ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರು ಮತ್ತು ರಾಜ್ಯಾಧ್ಯಕ್ಷರು ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್ (ರಿ) ನವದೆಹಲಿ, ಮತ್ತು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ರಾಜ್ಯ ಘಟಕ- ಧಾರವಾಡ ಇವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಿದ್ದರು. ಆದರೆ ಇವರು ಬೇರೊಂದು ಕಾರ್ಯಕ್ರಮದಲ್ಲಿ ನಿರತರಾಗಿದ್ದರಿಂದ ಇವರ ಪ್ರತಿನಿಧಿಯಾಗಿ ರಾಷ್ಟ್ರೀಯ ಹಾಗೂ ರಾಜ್ಯಕೋಶಾಧ್ಯಕ್ಷರು ಮತ್ತು ಸಂಸ್ಥಾಪಕರ ಆಪ್ತ ಕಾರ್ಯದರ್ಶಿಯಾದ ಶ್ರೀಮತಿ ಪಲ್ಲವಿ ಅವರು ಭಾಗವಹಿಸಿದ್ದರು. ಇವರು ಮಹಿಳೆ ಮತ್ತು ವಿಜ್ಞಾನ ವಿಷಯವಾಗಿ ಮಾತನಾಡಿ ಮಹಿಳೆಯರು ತಮ್ಮ
ಜೀವನದಲ್ಲಿ ವಿಜ್ಞಾನವನ್ನು ಅಳವಡಿಸಿಕೊಂಡಿದ್ದಾರೆ ಆದರೆ ವೈಜ್ಞಾನಿಕ ಮನೋಭಾವವನ್ನು ಇನ್ನೂ ಅಳವಡಿಸಿಕೊಂಡಿಲ್ಲ, ಗೊಡ್ಡು ಸಂಪ್ರದಾಯಿಗಳಿಗೆ,
ಮೌಢ್ಯತೆಗೆ,ಮೂಢನಂಬಿಕೆಗಳಿಗೆ ಮಹಿಳೆಯರು ಬಲಿಯಾಗುತ್ತಿದ್ದಾರೆ. ಶಿಕ್ಷಣದ ಜೊತೆಗೆ ಮಹಿಳೆಯರು ವೈಜ್ಞಾನಿಕ ಮನೋಭಾವವನ್ನ ಮೂಡಿಸಿಕೊಳ್ಳಬೇಕೆಂದು ತಿಳಿಸಿದರು. ಹಾಗೂ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘಟನೆಯಿಂದ ಶಿಕ್ಷಕಿಯರಿಗೆ ಇರುವ ಸೌಲಭ್ಯಗಳ ಬಗ್ಗೆ ತಿಳಿಸಿದರು.

ಶ್ರೀಮತಿ ಪಲ್ಲವಿ,ರಾಜ್ಯ ಕೋಶಾಧ್ಯಕ್ಷರು,ಹಾಗೂ ಸಂಸ್ಥಾಪಕ ರಾಜ್ಯಾಧ್ಯಕ್ಷರ ಆಪ್ತ ಕಾರ್ಯದರ್ಶಿಗಳು
ಶ್ರೀಮತಿ ರಾಧಮ್ಮ ಜಿಲ್ಲಾಧ್ಯಕ್ಷರು, ಮಧುಗಿರಿ ಜಿಲ್ಲಾ ಘಟಕ ಇವರೊಂದಿಗೆ ಸಿರಾ ತಾಲೂಕು ಘಟಕ ಹಾಗೂ ಇತರೆ ಪದಾಧಿಕಾರಿಗಳು

ಈ ಕಾರ್ಯಕ್ರಮದಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾಧ್ಯಕ್ಷರಾದಂತಹ ಶ್ರೀಮತಿ ಜಿ.ಎಲ್ ರಾಧಮ್ಮ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಾದಂತಹ ಶ್ರೀಮತಿ ಲಕ್ಷ್ಮಮ್ಮ ಮತ್ತು ಸಿರಾ ತಾಲೂಕಿನ ಅಧ್ಯಕ್ಷರಾದಂತಹ ಶ್ರೀಮತಿ ಜಗದಾಂಬ ಕೆ ಮತ್ತು ಶಿರ ತಾಲೂಕಿನ ಕಾರ್ಯದರ್ಶಿಗಳಾಗಿರುವಂತಹ ಶ್ರೀಮತಿ ಅರ್ಪಣಾ ಸಿ ಕೆ ಮತ್ತಿತರರು ಭಾಗವಹಿಸಿದ್ದರು.

ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ಸಿರಾ ತಾಲ್ಲೂಕು ಘಟಕದ ವತಿಯಿಂದ ಈ ಕಾರ್ಯಕ್ರಮಕ್ಕೆ ಆಗಮಿಸಿದಂತಹ ಎಲ್ಲಾ ಗಣ್ಯರಿಗೆ ಸನ್ಮಾನಿಸಲಾಯಿತು

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

Leave a Reply