ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸೇವೆ ಅನನ್ಯ – ಉಚಿತ ಆರೋಗ್ಯ ತಪಾಸಣೆ ಶಿಬಿರ ಯಶಸ್ವಿ

ಸಿರಾ .ದಿನಾಂಕ 28.6.2025 ರಂದು ಸರ್ಕಾರಿ ನೌಕರರ ಭವನ ಸಿರಾ ಇಲ್ಲಿ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ವನ್ನು ಕರ್ನಾಟಕ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘ, ಮಧುಗಿರಿ ಜಿಲ್ಲೆಯ ತಾಲೂಕ್ ಘಟಕ ಸಿರಾ ವತಿಯಿಂದ ಆಯೋಜಿಸಿದ್ದರು.  ಶಿಬಿರದಲ್ಲಿ ಅಧಿಕ ರಕ್ತದೋತ್ತಡ, ಮಧುಮೇಹ, ಕಣ್ಣಿನ ತಪಾಸಣೆ, ಸ್ತ್ರೀ ಸಂಬಂದ ರೋಗ ತಪಾಸಣೆ ನೆಡೆಸಲಾಯಿತು. ಡಾ. ಡಿ. ಎಂ. ಗೌಡ ಹಾಗೂ ವೈದ್ಯಕೀಯ ತಂಡದವರು ನೂರಕ್ಕೂ ಹೆಚ್ಚು ಶಿಕ್ಷಕ ಶಿಕ್ಷಕಿಯರ ಆರೋಗ್ಯ ತಪಾಸಣೆ ನೆಡೆಸಿ ಸಲಹೆ ಸೂಚನೆ ನೀಡಿದರು.
ಶಿಬಿರದ ಕುರಿತು ಡಾ. ಡಿ. ಎಂ. ಗೌಡ ರವರು ಮಾತನಾಡಿ ಇಂದಿನ ಒತ್ತಡ ಕಾರ್ಯದಲ್ಲಿ ನೌಕರರು ಸ್ವಯಂ ಆರೋಗ್ಯ, ಮಾನಸಿಕ ಒತ್ತಡ ನಿರ್ವಹಣೆ ಮಾಡುವುದನ್ನು ರೂಢಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ರಾಧಮ್ಮ ಮಾತನಾಡಿ ಮಹಿಳೆಯರು ಅಬಲೆ ಯಲ್ಲ ಸಬಲೆ ,ಇಂತಹ ಸಮಾಜ ಮುಖಿ ಕಾರ್ಯ ಮಾಡಲು ನಮ್ಮ ಸಂಘದ ಸಂಸ್ಥಾಪಕರು ರಾಷ್ಟೀಯ ಅಧ್ಯಕ್ಷರು ಡಾ . ಲತಾ ಎಸ್ ಮುಳ್ಳುರ ರವರು ಸಮಸ್ತ  ಶಿಕ್ಷಕಿಯರಿಗೆ ಸ್ವಾಭಿಮಾನದ ವೇದಿಕೆ ಕಲ್ಪಿಸಿರುವುದೇ ಕಾರಣವಾಗಿದೆ.  ನಮ್ಮ ಜಿಲ್ಲೆಯ ತಾಲೂಕ್ ಘಟಕ ಸಿರಾ ವತಿಯಿಂದ ಆಯೋಜಿಸಿರುವ ಈ ಉಚಿತ ಆರೋಗ್ಯ ತಪಾಸಣೆ ಸೇವೆ ಅನನ್ಯ ಎಂದು ತಿಳಿಸಿದರು. ಶಿಬಿರದಲ್ಲಿ ಸಹಕರಿಸಿದವರನ್ನು ಸನ್ಮಾನಿಸಲಾಯಿತು. ಸಿರಾ ತಾಲೂಕ್ ಘಟಕದ ಗೌರವಾಧ್ಯಕ್ಷರಾದ ಶ್ರೀಮತಿ ಮಂಜುಳ, ಗೌರವ ಸಲಹೆಗಾರ ರಾದ ಶ್ರೀಮತಿ ವೆಂಕಟಲಕ್ಷ್ಮಮ್ಮ. ತಾಲೂಕು ಘಟಕದ ಅಧ್ಯಕ್ಷರಾದ ಶ್ರೀಮತಿ ಜಗದಾಂಬ, ಪ್ರಧಾನ ಕಾರ್ಯದರ್ಶಿ ಶ್ರೀಮತಿ ಅರ್ಪಣ, ಖಜಾಂಚಿ ಶ್ರೀಮತಿ ಚಂದ್ರಕಲಾ, ಪಿ ಎಸ್ ಟಿ ಮುಖ್ಯಸ್ಥೆ ಶಬನಾ ಹಾಗೂ ಹಲವು ಸದಸ್ಯ ವೃಂದದವರು ಈ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು.


ವಿಶೇಷ ಅತಿಥಿಗಳಾಗಿ ಸಿರಾ ನಗರ ಸಭೆ ಕೌನ್ಸಿಲರ್ ಶ್ರೀ ರಾಮಕೃಷ್ಣಪ್ಪ ನವರು, ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಶ್ರೀ ನಾಗರಾಜು, ಕಾರ್ಯದರ್ಶಿ ಶ್ರೀ ದೇವರಾಜು, ಜಿಲ್ಲಾ ಉಪಾಧ್ಯಕ್ಷರು ಶ್ರೀ ಸುರೇಶ್,ತಾಲೂಕು ಪ್ರಾಥಮಿಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಹನುಮಂತರಾಜು, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಹಿಮಂತರಾಜು,KSPSTA ಮಾಜಿ ಜಿಲ್ಲಾಧ್ಯಕ್ಷರು ಶ್ರೀ ಅನಿಲ್ ಕುಮಾರ್, ಮಾಜಿ ತಾಲೂಕ್ ಅಧ್ಯಕ್ಷರು ಶ್ರೀ ಓಂಕಾರೇಶ್ವರ್, ಹಾಲಿ ನಿರ್ದೇಶಕರು ಶ್ರೀ ಜಯಚಂದ್ರ, ಮುಖಂಡರಾದ ಶ್ರೀ ರಂಗನಾಥಪ್ಪ. ಸಿ ಆರ್ ಪಿ , ಬಿ ಆರ್ ಪಿ ಸಂಘ ದ ಅಧ್ಯಕ್ಷರಾದ ಶ್ರೀ ಮಂಜುನಾಥ್ ಹಾಗು ಇತರೆ ಪದಾಧಿಕಾರಿಗಳು, ಮುಖ್ಯಶಿಕ್ಷರುಗಳು ಆಗಮಿಸಿ ಶುಭ ಕೋರಿದರು.ಆಗಮಿಸಿದ್ದ ನೂರಾರು ಜನ ಶಿಕ್ಷಕರು ಕಾರ್ಯಕ್ರಮದ ಪ್ರಯೋಜನ ಪಡೆದರು.ಎಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಸಂಘದ ಪ್ರೌಢ ಶಾಲಾ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ರಶ್ಮಿ ರವರು ನಿರೂಪಿಸಿ, ಈ ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದ ವೈದ್ಯಕೀಯ ತಂಡದವರಿಗೂ , ಶಿಬಿರದಲ್ಲಿ ಭಾಗವಹಿಸಿದ್ದ ಎಲ್ಲರಿಗೂ, ಪ್ರತ್ಯಕ್ಷವಾಗಿ ಹಾಗು ಪರೋಕ್ಷವಾಗಿ ಸಹಕಾರ ನೀಡಿದವರಿಗೂ ವಂದಿಸಿದರು.

ಶಾಲಾ ಮೈದಾನದಲ್ಲಿ ಸಸಿ ನೆಟ್ಟು ,ಶಾಲಾ ಗೋಡೆಗೆ ಬಣ್ಣ ಹಚ್ಚಿ ವಿಶ್ವ ಪರಿಸರ ದಿನಾಚರಣೆ – ಲತಾ ಮುಳ್ಳೂರ ರವರಿಂದ ಅಭಿನಂದನಾ ಸನ್ಮಾನ

ಧಾರವಾಡ.ಜೂನ್.೦8
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ಧಾರವಾಡ ಗ್ರಾಮೀಣ ಯೋಜನಾ ಕಚೇರಿ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯ, ಇನ್ಸ್ಟಿಟ್ಯೂಟ್ ಫಾರ್ ಬಯೋಮೆಡಿಕಲ್ ಸೈನ್ಸ್, ರಾಷ್ಟ್ರೀಯ ಸೇವಾ ಯೋಜನೆ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಶ್ರಯ ಕಾಲೋನಿ ಸತ್ತೂರ್, ಧಾರವಾಡದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಜಾಗೃತಿ ಮತ್ತು ಸಸಿ ನಾಟಿ ಕಾರ್ಯಕ್ರಮವನ್ನು ಹಾಗು ಶಾಲಾ ಕಟ್ಟಡಗಳ ಹೊರ ಗೋಡೆ ಬಣ್ಣ ಮಾಡಿ ಸಿಂಗರಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.

ಸದ್ರಿ ಕಾರ್ಯಕ್ರಮವನ್ನು ಮಾನ್ಯ ಗೌರವಾನ್ವಿತ ಜಿಲ್ಲಾ ನಿರ್ದೇಶಕರಾದ ಶ್ರೀ ಯುತ ಪ್ರದೀಪ್ ಶೆಟ್ಟಿ ಸರ್ ಹಾಗೂ ಪ್ರೊಫೆಸರ್ ಕ್ಲೈಮೇಟ್ ಚೆಲ್ಲಿ deputy registrar SDM University ಇವರು ಸಸಿ ನೆಡುವ ಮುಖಾಂತರ ಕಾರ್ಯಕ್ರಮಕ್ಕೇ ಚಾಲನೆಯನ್ನು ನೀಡಿದರು

ಸದ್ರಿ ಕಾರ್ಯಕ್ರಮ ಉದ್ದೇಶಿಸಿ ಮಾನ್ಯ ಜಿಲ್ಲಾ ನಿರ್ದೇಶಕರು
ವಿಶ್ವ ಪರಿಸರ ದಿನವು ಜೂನ್ 5 ರಂದು ಜಾಗತಿಕವಾಗಿ ಆಚರಿಸಲಾಗುತ್ತದೆ. ಈ ದಿನದ ಮುಖ್ಯ ಉದ್ದೇಶವು ಪರಿಸರ ಸಂರಕ್ಷಣೆ ಮತ್ತು ಜಾಗೃತಿ ಮೂಡಿಸುವುದಾಗಿದೆ, ಪರಿಸರವು ನಮ್ಮ ಜೀವನಕ್ಕೆ ಅತ್ಯಗತ್ಯ. ಅದು ನಮಗೆ ನೀರು, ಆಹಾರ, ಗಾಳಿ ಮತ್ತು ಇತರ ಸಂಪನ್ಮೂಲಗಳನ್ನು ಒದಗಿಸುತ್ತದೆ. ಪರಿಸರವು ನಮ್ಮ ಆರೋಗ್ಯ, ಆರ್ಥಿಕತೆ ಮತ್ತು ಸಮಾಜದ ಮೇಲೆ ನೇರವಾದ ಪರಿಣಾಮ ಬೀರುತ್ತವೆ ಮನುಷ್ಯನ ದುರಾಸೆ ಪರಿಸರದ ವಿನಾಶದತ್ತ ಸಾಗುತ್ತಿರುವುದರಿಂದ ಇದರಿಂದಾಗಿ ಹಲವಾರು ತೊಂದರೆಗಳನ್ನು ನಾವೀಗ ನೋಡುತ್ತಿದ್ದೇವೆ ಉದಾಹರಣೆಗೆ ದಿನದಲ್ಲೇ ಗಂಟೆಯಲ್ಲಿ ಬೇಸಿಗೆಗಾಲ ಚಳಿಗಾಲ ಮತ್ತು ಮಳೆಗಾಲವನ್ನು ನೋಡುವಂತಾಗಿದೆ ಹಾಗಾಗಿ ಯಾವುದೇ ದಿನಾಚರಣೆಗಳನ್ನು ಆಚರಿಸುವ ಸಂದರ್ಭದಲ್ಲಿ ಅದರ ಬಗ್ಗೆ ಅರಿತು ವರ್ಷವಿಡಿ ಅದಕ್ಕೆ ಮಹತ್ವವನ್ನು ಕೊಡಬೇಕು ಬರಿ ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್ ಹಾಕಿಕೊಂಡು ಸಂಭ್ರಮಿಸುವುದಲ್ಲ ಎಂದರು

ಸದರಿ ಶಾಲೆಯ ಮೂರು ಕೊಠಡಿಗಳ ಹೊರಗೆ ಬಣ್ಣ ಹಾಗೂ ಬರಹವನ್ನು ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಸ್ವತ: ಬಣ್ಣ ಹಚ್ಚಿ ಬರೆದದ್ದು ವಿಶೇಷವಾಗಿತ್ತು.

ಹಾಗೆ ಈ ಸಂದರ್ಭದಲ್ಲಿ ವೇದಿಕೆ ಮೇಲಿರುವ ಅತಿಥಿಗಳು, ಗಣ್ಯರು ಮತ್ತು ಶಿಕ್ಷಕ ವೃಂದದವರು ಪರಿಸರದ ಕಾಳಜಿ ಮತ್ತು ಮಹತ್ವದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು

ಸದ್ರಿ ಕಾರ್ಯಕ್ರಮದಲ್ಲಿ ಡಾಕ್ಟರ್ ಅಜಯ್ ಕುಮಾರ್, ಎನ್ಎಸ್ಎಸ್ ಪ್ರೋಗ್ರಾಮ್ ಆಫೀಸರ್ ಡಾಕ್ಟರ್ ರೇಣುಕಾರಾಧ್ಯ ಕೆ. ಮಠ, ಶ್ರೀಮತಿ ಗಾಯತ್ರಿ ಕಮ್ಮಾರ CRP, ನವಲೂರ ಕ್ಲಸ್ಟರ್ ಹಾಗೂ
ಡಾ . ಲತಾ ಎಸ್ ಮುಳ್ಳೂರ್ ರಾಷ್ಟ್ರೀಯ ಅಧ್ಯಕ್ಷರು ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್ (ರಿ) ನವದೆಹಲಿ, ಶ್ರೀಮತಿ M.U.ಮಾಯಕ್ಕನವರ ಮುಖ್ಯೋಪಾಧ್ಯಾಯರು ಶ್ರೀ ಶಿವಪ್ಪ ಚಲವಾದಿ ಅಧ್ಯಕ್ಷರು ಎಸ್ಡಿಎಂಸಿ, ಸಮಾಜ ಸೇವಕರು ಶ್ರೀ ಯುತ ಗುರುಪ್ರಸಾದ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ವಿಜಯಲಕ್ಷ್ಮಿ ರಾಯನಾಳ್ ಹಾಗೂ ಕೃಷಿ ಮೇಲ್ವಿಚಾರಕರು ರವಿಕುಮಾರ್ SDMC ಅಧ್ಯಕ್ಷರಾದ ಶ್ರೀ ಶಿವಪ್ಪ ಚಲವಾದಿ. ಶ್ರೀ ಪುಂಡಲೀಕ ತಳವಾರ್ . ಸಮಾಜ ಸೇವಕರು ಹಿರಿಯರಾದ ಶ್ರೀ ಬಿಲಕಾರ ಶ್ರೀ ನವೀನ ಹಾಗೂ ಸಹ ಶಿಕ್ಷಕಿಯರಾದ ಶ್ರೀಮತಿ G G ಬಡಿಗೇರ್ ಶ್ರೀಮತಿ ಶಿವಲೀಲಾ ಹಿರೇಮಠ ಶ್ರೀಮತಿ ದೀಪಾ ಬೆಳ್ಳಕ್ಕಿ ಹಾಗೂ ಶಾಲಾ ಮುದ್ದು ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.

ಸದರಿ ಶಾಲೆಯ ಶಾಲಾ ಸಹಶಿಕ್ಷಕಿ ಹಾಗು ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್ (ರಿ) ನವದೆಹಲಿ ಹಾಗು ಸಂಸ್ಥಾಪಕ
ರಾಷ್ಟ್ರೀಯ ಅಧ್ಯಕ್ಷರು ಮತ್ತು ರಾಜ್ಯಾಧ್ಯಕ್ಷರಾದ Dr. ಲತಾ ಎಸ್ ಮುಳ್ಳೂರ ರವರು ವಿಶ್ವ ಪರಿಸರ ದಿನದಂದು ಪರಿಸರವೇ ನಮ್ಮೆಲ್ಲರ ಉಸಿರು,ಇಂತಹ ಪರಿಸರ ಕಾಳಜಿ ಕಾರ್ಯಕ್ರಮಗಳನ್ನೂ ಮತ್ತಷ್ಟು ಮೊಗದಷ್ಟು ಹಮ್ಮಿಕೊಳ್ಳಬೇಕ್ಕಾಗಿದೆ. ಇಂತಹ ಸಾಮಾಜಿಕ ಜಾಗೃತಿ, ಪರಿಸರ ಕಾಳಜಿ ಕಾರ್ಯಕ್ರಮಗಳನ್ನು ಸಹಯೋಗದಲ್ಲಿ
ಆಯೋಜಿಸಿದ್ದ ಎಲ್ಲ ಸಂಸ್ಥೆ ಗಳ ಆಯೋಜಕರನ್ನು, ಮುಖ್ಯಸ್ಥರನ್ನು, ಹಿರಿಯರನ್ನು ಪ್ರಮುಖ ಅತಿಥಿ ಗಳನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಿ ಧನ್ಯವಾದ ಅರ್ಪಿಸಿದರು.

ನೌಕರರಿಗೆ ಅತೀ ಉಪಯುಕ್ತ ಮಾಹಿತಿ

ಬೇನಾಮಿ ಅಥವಾ ಮೂಖರ್ಜಿ ಆಧಾರದ ಮೇಲೆ ನೋಟಿಸ್ ನೀಡುವಂತಿಲ್ಲ ವಿಚಾರಣೆ ಮಾಡುವಂತಿಲ್ಲ.
AIR 1964 SC 364 ಸುಪ್ರೀಂಕೋರ್ಟ್

ನೌಕರರ ವಯಕ್ತಿಕ ಮಾಹಿತಿ ಬಹುಮೊತ್ತದ ಸಾರ್ವಜನಿಕ ಹಿತದ ಹೊರತು ಕೊಡಲು ಬರುವುದಿಲ್ಲ.. SC/2007/30796/_2007 DATED 31-08-2017 CIVIL APPEAL 22 /2009

ಬೇನಾಮಿ ಅಥವಾ ಮೂಖರ್ಜಿ ಆಧಾರದ ಮೇಲೆ ನೌಕರರಿಗೆ ನೋಟಿಸ್ ನೀಡುವಂತಿಲ್ಲ ವಿಚಾರಣೆ ಮಾಡುವಂತಿಲ್ಲ.
AIR 1964 SC 364 ಸುಪ್ರೀಂಕೋರ್ಟ್

ಇಲಾಖೆ ವಿಚಾರಣೆ ನಡೆಸುವಾಗ ಮನಬಂದಂತೆ ವಿಚಾರಣಾಧಿಕಾರಿಗಳು ವಿಚಾರಣೆ ನಡೆಸುವ ಹಾಗಿಲ್ಲ…
AIR 1973 SC 2701

ಆರೋಪಿತ ನೌಕರ ಆರೋಪ ಒಪ್ಪುವ ಅಥವಾ ನಿರಾಕರಿಸುವ ರಕ್ಷಣಾ ಹೇಳಿಕೆ ನೀಡದ ಹೊರತು ವಿಚಾರಣಾಧಿಕಾರಿ ನೇಮಕ ಮಾಡುವಂತಿಲ್ಲ. 1992 [1] SLR 769 KAR HC

ಕರ್ನಾಟಕ ಹೈ ಕೋರ್ಟ್ W.P.NO 10663/2006 [GM/RES] 0/07/2008 ಪ್ರಕಾರ ವಯಕ್ತಿಕ ಮಾಹಿತಿ ಬಹು ವಿಸ್ತರಿತ ಸಾರ್ವಜನಿಕ ಹಿತವಿಲ್ಲದ ಧಾಖಲೆ ನೀಡುವಂತಿಲ್ಲ.

ಮಾಹಿತಿ ಹಕ್ಕು ಕಲಂ ೮[೧]ಜೆ ಪ್ರಕಾರ ಅರ್ಜಿದಾರರ ಅರ್ಜಿ ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿದೆ ಅಥವಾ ಇಲ್ಲಾ ಎಂದು ನಿರ್ಧರಿಸುವ ಅಧಿಕಾರ ಸಾ ಮಾ ಅ ಅವರಿಗಿದೆ.

HC ಕರ್ನಾಟಕ W.P.NO 4133/2012 [ [GM-RES] 27/05/2013 ತೀರ್ಪು ಪ್ರಕಾರ ಕಡತಗಳಲ್ಲಿ ಲಭ್ಯವಿರುವ ಮಾಹಿತಿ ಮಾತ್ರ ಮಾಹಿತಿ ಹಕ್ಕಿನಲ್ಲಿ ಪಡೆಯಬಹುದು.

ಬಹು ಪತ್ನಿತ್ವ ಪ್ರಕರಣದಲ್ಲಿ ದುರ್ನಡತೆ ಎಂದು ನೌಕರನ ಮೇಲೆ ಇಲಾಖಾ ವಿಚಾರಣೆ ಮಾಡುವಂತಿಲ್ಲ.
ILR-2007-KAR-3243

ಸರಕಾರಿ ನೌಕರರ ಸೇವಾ ಪುಸ್ತಕವನ್ನು ಮಾಹಿತಿ ಹಕ್ಕು ಅರ್ಜಿಗೆ ಬಹಿರಂಗ ಮಾಡುವಂತಿಲ್ಲ.KIC/13045/PTN/
2010–9/8/2010

ಮಾಹಿತಿ ಹಕ್ಕು ಅಡಿ ಸರಕಾರೀ ನೌಕರರ ಮೇಲಿನ ಶಿಸ್ತು ಪ್ರಕರಣಗಳ ಮಾಹಿತಿಯನ್ನು ನೀಡಲು SC SLP [CIVIL] NO 27734 /2012 3/10/2012 ಅವಕಾಶವಿಲ್ಲ

ಮಾಹಿತಿ ಹಕ್ಕು ಅಡಿ ಒಂದು ವಿಷಯಕ್ಕೆ ಸಂಬಂಧಿಸಿ ಒಂದು ಅರ್ಜಿಯಲ್ಲಿ ಮಾಹಿತಿ ಕೇಳಬಹುದು..
DPAR/14/RTI/2008– 17/03/2008

ಸರಕಾರೀ ನೌಕರರ ಸೇವಾ ವಿವರಗಳನ್ನು ಮತ್ತು ಕುಟುಂಬ ಸದಸ್ಯರ ವಿವರಗಳನ್ನು ಮಾಹಿತಿ ಹಕ್ಕು ಕಲಂ ೮[೧]ಜೆ ಪ್ರಕಾರ ಕೇಳಲು ಬರುವುದಿಲ್ಲ. KIC 66 APL 2006

: ಪತ್ರಿಕೆ ವರದಿ ಆಧರಿಸಿ ವಿಚಾರಣೆ ಅಧಿಕಾರಿಗಳು ಆಪಾದಿತ ನೌಕರನ ಮೇಲಿನ ಆರೋಪದ ಬಗ್ಗೆ ತೀರ್ಪು ಬರೆಯುವ ಹಾಗಿಲ್ಲ
AIR 1999 SC 3571 suprem court

ಪ್ರಾಧಿಕಾರದಲ್ಲಿ ಕ್ರೋಢೀಕೃತ ಮಾಹಿತಿ ಲಭ್ಯತೆ ಇಲ್ಲದೆ ಇದ್ದಾಗ ಕಲಂ ೬[೩] ರಡಿ ಅನೇಕ ಪ್ರಾಧಿಕಾರಗಳಿಗೆ ಅರ್ಜಿ ವರ್ಗಾಯಿಸುವಂತಿಲ್ಲ. DPAR/107/RTI/2012

ಮಾಹಿತಿ ಹಕ್ಕು ಕಾಯ್ದೆ ೪[೧] ಡಿ ಪ್ರಕಾರ ಬೌದ್ಧಿಕ ಆಸ್ತಿಯನ್ನು ಒಳಗೊಂಡ ಮಾಹಿತಿಯನ್ನು ಸಾರ್ವಜನಿಕ ಹಿತ ಹೊರತು ಪಡಿಸಿ ನೀಡುವಂತಿಲ್ಲ.

ಮಾತೆಯ ಹೆಸರಿನಲ್ಲಿ ಕೊಡುವ ಪ್ರಶಸ್ತಿಗಳಿಗೆ ಶಿಕ್ಷಕಿಯರು ಜಾಗೃತರಾಗಬೇಕು – ಲತಾ ಎಸ್ ಮುಳ್ಳೂರ ಸ್ಪಷ್ಟನೆ

Dharwad April 10,2025


ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಧನೆಗೈದ ಅನೇಕ ಶಾಲಾ ಶಿಕ್ಷಕಿಯರಿಗೆ ಮಾತೆ ಸಾವಿತ್ರಿಬಾಯಿ ಫುಲೆ ಹೆಸರಲ್ಲಿ ಪ್ರಶಸ್ತಿಗಳನ್ನು ಅನೇಕ ಸಂಘ ಸಂಸ್ಥೆಗಳಿಂದ ನೀಡಲಾಗುತ್ತಿದ್ದು ಇದರಿಂದ ಮಾತೆಯ ಹೆಸರು ಮತ್ತಷ್ಟು ಮೊಗದಷ್ಟು ಮುನ್ನಡೆಗೆ ಬರಲು ಸಾಧ್ಯವಾಗಿದೆ ಅಲ್ಲದೆ ಮಾತೆಯ ಸ್ಮರಣೆಯಾಗಿ ಹಾಗೂ ಶಿಕ್ಷಕಿಯರಿಗೆ ಪ್ರೋತ್ಸಾಹದಾಯಕ ಪ್ರಶಸ್ತಿಗಳಾಗಿವೆ. ಸಾಮಾಜಿಕ ಸಂಘ ಸಂಸ್ಥೆಗಳು ಇತ್ತೀಚಿನ ದಿನಗಳಲ್ಲಿ ಮಾತೆ ಸಾವಿತ್ರಿಬಾಯಿ ಫುಲೆ ರವರ ಹೆಸರಲ್ಲಿ ಶಾಲಾ ಶಿಕ್ಷಕಿಯರಿಗೆ ಪ್ರಶಸ್ತಿಗಳನ್ನು ನೀಡಲು ಪ್ರರಂಭಿಸಿರುವುದು ಸಂತೋಷದ ವಿಷಯವಾಗಿದೆ.
ಆದರೆ ಪ್ರಸ್ತುತ ದಿನಗಳಲ್ಲಿ ಕೆಲವು ಸಂಘ ಸಂಸ್ಥೆಗಳು ಈ ರೀತಿಯಾಗಿ ಪ್ರಶಸ್ತಿ ವಿತರಣಾ ಕಾರ್ಯಕ್ರಮಗಳನ್ನು ಲಾಭಿಗಾಗಿ ಆಯೋಜಿಸುತ್ತಿದ್ದು ಅವುಗಳಲ್ಲಿ ಮಾತೆ ಸಾವಿತ್ರಿಬಾಯಿ ಫುಲೆ ರವರ ಹೆಸರಲ್ಲಿ ಸಹ ಪ್ರಶಸ್ತಿಗಳನ್ನು ಕೊಡಮಾಡಲಾಗುತ್ತಿದೆ
ಅನೇಕ ಅನರ್ಹರನ್ನು ಇಂತಹ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತಿದೆ. ಆಯ್ಕೆ ಮಾಡಲು ಆಯೋಜಕರು ಸರಿಯಾದ ಮಾನದಂಡ ಅನುಸರಿಸುತ್ತಿಲ್ಲ, ಆಯ್ಕೆ ಸಂಬಂಧ ಕೆಲವರಿಂದ ಲಾಬಿ ಮಾಡಿಕೊಳ್ಳಲಾಗುತ್ತಿದೆ ಎಂಬ ಶಿಕ್ಷಕಿಯರ ಪ್ರಶ್ನೆಗಳಿಗೆ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರಾದ ಲತಾ ಎಸ್ ಮುಳ್ಳೂರ ರವರು ಉತ್ತರಿಸಿದ್ದಾರೆ. ಆಮಿಷ ಮತ್ತು ಲಾಭಿಗಾಗಿ ವಿತರಿಸುವ ಪ್ರಶಸ್ತಿಗಳಿಗೆ ಮಾತೆಯ ಹೆಸರನ್ನು ಬಳಸಲಾಗುತ್ತಿದೆ ಎಂಬ ಸುದ್ದಿಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ ರಾಜ್ಯದ ಸಮಸ್ತ ಶಿಕ್ಷಕಿಯರು ಇದರಿಂದ ಎಚ್ಚೆತ್ತುಕೊಳ್ಳಬೇಕು. ಜಾಗೃತರಾಗಬೇಕು ಎಂದಿದ್ದಾರೆ.
ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ರಿ. ರಾಜ್ಯಘಟಕ ಧಾರವಾಡ ಇದರ ವತಿಯಿಂದ ಪ್ರತಿವರ್ಷವೂ ರಾಜ್ಯಮಟ್ಟದಲ್ಲಿ ಕೊಡ ಮಾಡುವ ಏಕೈಕ ಪ್ರಶಸ್ತಿ “ಮಾತೆ ಅಕ್ಷರದವ್ವ ರಾಜ್ಯ ಪ್ರಶಸ್ತಿ” ಇದು ರಾಜ್ಯದ ಉನ್ನತ ಪ್ರಶಸ್ತಿಯಾಗಿದೆ. ಜಿಲ್ಲಾ ಹಾಗು ತಾಲೂಕ್ ಘಟಕಗಳ ವತಿಯಿಂದ ಸಹ ಆಯಾ ವ್ಯಾಪ್ತಿಯ ಉತ್ತಮ ಶಿಕ್ಷಕಿಯರಿಗೆ ವಾರ್ಷಿಕವಾಗಿ ಮಾತೆಯ ಹೆಸರಲ್ಲಿ ಪ್ರಶಸ್ತಿ ವಿತರಣೆ ಮಾಡಿ ಶಿಕ್ಷಕಿಯರಿಗೆ ಪ್ರೋತ್ಸಾಹ ಸಹ ನೀಡಲಾಗುತ್ತಿದೆ. ಇಷ್ಟೇ ಅಲ್ಲದೆ ಶಿಕ್ಷಕಿಯರ ಸಂಘದ ಬೇಡಿಕೆಯಂತೆ ಸರ್ಕಾರದ ವತಿಯಿಂದಲೂ ಮಾತೆಯ ಹೆಸರಲ್ಲಿ ಪ್ರತಿವರ್ಷ ಶಿಕ್ಷಕರ ದಿನಾಚರಣೆಯಂದು ಪ್ರಶಸ್ತಿ ನೀಡಲಾಗುತ್ತಿದೆ.
ಇಷ್ಟೆಲ್ಲಾ ಹೊರತಾಗಿ ಇನ್ನು ಅನೇಕ ಇತರೆ ಸಂಘ ಸಂಸ್ಥೆಗಳು ತಮ್ಮ ಲಾಭಿಗಾಗಿ ಹೆಚ್ಚು ಪ್ರಚಾರಕ್ಕಾಗಿ ಮಾತೆಯ ಹೆಸರಲ್ಲಿ ಪ್ರಶಸ್ತಿ ನೀಡಲು ಪ್ರಾರಂಭಿಸಿವೆ. ಅಂತಹ ಯಾವುದೇ ನಾಮಿನೆಟೆಡ್ ಪ್ರಶಸ್ತಿಗಳು ನಮ್ಮ ಸಂಘಟನೆಗೆ ಸಂಬಂಧ ಇಲ್ಲವೆಂದು ಹಾಗೂ ಪ್ರಶಸ್ತಿಗೆ ಆಯ್ಕೆ ಸಂಬಂಧಿಸಿದ ಯಾವುದೇ ಲಾಬಿ, ಆಮಿಷ, ಆಯ್ಕೆ ಮಾನದಂಡಗಳಿಗೆ ನಮ್ಮ ಸಂಘಟನೆ ಕಾರಣವಾಗುವುದಿಲ್ಲ ಎಂದು ರಾಜ್ಯದ ಹಲವಾರು ಶಿಕ್ಷಕಿಯರ ಗೊಂದಲಗಳಿಗೆ ಉತ್ತರಿಸುವ ಮೂಲಕ ಸ್ಪಷ್ಟಪಡಿಸಿದ್ದಾರೆ.

ಮಾತೆ ಸಾವಿತ್ರಿಬಾಯಿ ಫುಲೆಯ ಹಾದಿಯಲ್ಲಿ ನಡೆಯುತ್ತಿರುವ ಶಿಕ್ಷಕಿಯರ ಸಂಘ

ತುಮಕೂರು ಮಾ.22 ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಸಂಘ( ರಿ) ರಾಜ್ಯ ಘಟಕ ಧಾರವಾಡ . ಜಿಲ್ಲಾ ಘಟಕ ಮಧುಗಿರಿ. ತಾಲೂಕು ಘಟಕ ಕೊರಟಗೆರೆ. ಘಟಕದಿಂದ  ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಸಂಘದ ಅಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳು ತುಮಕೂರು ಜಿಲ್ಲೆ ಮೈದಾಳದ ಬಳಿ ಇರುವ ಶ್ರೀ ಶಿವ ಆಶ್ರಮಕ್ಕೆ ಭೇಟಿ ನೀಡಿ ಅಲ್ಲೇ ಇರುವ ಎಲ್ಲಾ ಅನಾಥ ಮಕ್ಕಳಿಗೆ ಹಾಗೂ ವೃದ್ಧಾಶ್ರಮದಲ್ಲಿರುವ ವೃದ್ಧರಿಗೆ ಒಂದು ದಿನದ ಊಟದ ವ್ಯವಸ್ಥೆಯನ್ನು ಸಂಘದ ಕಡೆಯಿಂದ ಮಾಡಲಾಯಿತು.

ಆಶ್ರಮದ ಮುಖ್ಯಸ್ಥರಾದ ಶ್ರೀಯುತ ಲೇಪಾಕ್ಷಯ್ಯ ರವರು ಮಾತನಾಡಿ ಸಾವಿತ್ರಿ ಬಾಯಿ ಪುಲೆ ಸಂಘವು ಉತ್ತಮವಾದ ಕಾರ್ಯವನ್ನು ಮಾಡುತ್ತಿದ್ದು ಇದೇ ರೀತಿ ಅನೇಕ ಕಾರ್ಯಕ್ರಮಗಳನ್ನು ಮಾಡಲಿ ಎಂದು ಪ್ರಶಂಶಿಸಿದರು. ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ರಾಧಮ್ಮ ರವರು ಮಾತನಾಡಿ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರು ಹಾಗೂ ರಾಷ್ಟ್ರ ಅಧ್ಯಕ್ಷರಾದ ಡಾ.ಲತಾ ಎಸ್ ಮುಳ್ಳೂರ ಅವರ ಶ್ರಮದಿಂದ ಸಂಘಟನೆ ಹೆಮ್ಮರವಾಗಿ ಬೆಳೆದಿದೆ. ಸಾವಿತ್ರಿಬಾಯಿ ಪುಲೆ ಅವರು ಶಿಕ್ಷಣಕ್ಕಾಗಿ ನೀಡಿದ ಮಹತ್ವವನ್ನು ಹಾಗೂ ತಾವು ಶಿಕ್ಷಣ ಪಡೆಯಲು ಅನುಭವಿಸಿದ ಕಷ್ಟ ಕಾರ್ಪಣ್ಯಗಳನ್ನು ವಿವರಿಸುತ್ತ ಎಲ್ಲಾ ಹೆಣ್ಣು ಮಕ್ಕಳು ಎಲ್ಲಾ ವೃತ್ತಿಗಳನ್ನುಗಳನ್ನು ನಿಭಾಯಿಸುವಂತಹ ಶಕ್ತಿ ಹೊಂದಿದ್ದಾರೆ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷರಾದ ಶ್ರೀಮತಿ ಸುಜಾತ ಕಾರ್ಯದರ್ಶಿಗಳಾದ ಆಶಾ ರಾಣಿ ಪದಾಧಿಕಾರಿಗಳಾದ ಸುನಂದಮ್ಮ ಹೆಚ್ ಆರ್, ಪುಷ್ಪಲತಾ ಟಿ ಆರ್, ಕಲ್ಯಾಣಮ್ಮ,ಸುಜಾತ,ರೂಪ ಎನ್, ವಿಶಾಲಾಕ್ಷಿ,ಮಂಜುಳಾ, ರಮಾ, ರಂಗಮ್ಮ,ಸರೋಜಮ್ಮ ,ಸುಜಾತ ಸಂಘದ ಇತರೆ ಸದಸ್ಯರು ಭಾಗವಹಿಸಿದ್ದರು.

ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಮರು ಆಯ್ಕೆ, ಸನ್ಮಾನ್ಯ ಶ್ರೀ ಸಿ.ಎಸ್. ಷಡಕ್ಷರಿ ರವರಿಗೆ ಸನ್ಮಾನ


ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್ (ರಿ)
ಕೇಂದ್ರ ಕಚೇರಿ – ನವದೆಹಲಿ
ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ( ರಿ)
ರಾಜ್ಯ ಘಟಕ – ಧಾರವಾಡ

ಜಿಲ್ಲಾ ಘಟಕ -ಚಾಮರಾಜನಗರ



ದಿನಾಂಕ 27.12.2024 ರಂದು ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಎರಡನೇ ಬಾರಿಗೆ ಸ್ಪರ್ಧಿಸಿ, ಅಖಂಡ ವಿಜಯ ಸಾಧಿಸಿ, ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಮರು ಆಯ್ಕೆಯಾದ ಸನ್ಮಾನ್ಯ ಶ್ರೀ ಸಿ.ಎಸ್. ಷಡಕ್ಷರಿ ರವರಿಗೆ ಚಾಮರಾಜನಗರದ ಜಿಲ್ಲಾಧ್ಯಕ್ಷರಾದ ಶ್ರೀಮತಿ ಭವಾನಿದೇವಿ ಸಿ.ಎನ್., ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಶ್ರೀಮತಿ ಪಲ್ಲವಿದೇವಿ ಸಿ.ಕೆ., ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಚಾಮರಾಜನಗರದ ನೂತನ ಜಿಲ್ಲಾಧ್ಯಕ್ಷರಾದ ಶ್ರೀಮತಿ ರೇಣುಕಾದೇವಿ ಸಿ.ಎನ್. ರವರು ಹೂ ಗುಚ್ಛ ನೀಡಿ ಅಭಿನಂದಿಸಿದರು.

ನೊಂದ ಶಿಕ್ಷಕಿಯರಿಗೆ ದನಿಯಾಗಿ ನಿಂತ ಡಾ.ಲತಾ.ಎಸ್.ಮುಳ್ಳೂರ

ಕೋಲಾರ ಜು15.ಮುಳುಬಾಗಿಲಿನ ಡಿವಿಜಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಸೊನ್ನಪ್ಪನವರ  ನಡೆಗೆ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿಂದ ಆಕ್ರೋಶ ವ್ಯಕ್ತವಾಗಿದೆ.

ಕೋಲಾರ ಜಿಲ್ಲೆಯ ಮುಳುಬಾಗಿಲಿನ ಡಿವಿಜಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಸೊನ್ನಪ್ಪ ಅವರಿಂದ ಆಗಿರುವ ಶಿಕ್ಷಕಿಯರ ಮೇಲಿನ ದೌರ್ಜನ್ಯವನ್ನು
ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ತೀವ್ರವಾಗಿ ಖಂಡಿಸಿದೆ. ಸುಪ್ರಸಿದ್ದ ಕವಿಗಳಾದ ಡಿವಿಜಿ ರವರ ಮನೆ ಎಂದೇ ಕರೆಸಿಕೊಳ್ಳುವ ಈ ಡಿವಿಜಿ ಸರ್ಕಾರಿ ಶಾಲೆಯು ನಾಡಿಗೆ ಒಂದು ಮಾದರಿಯಾಗಿದೆ.

ಇಂದು ನ್ಯೂಸ್ ಚಾನೆಲೊಂದಿಗೆ ಡಿವಿಜಿ ಶಾಲೆಯ ಪ್ರಕರಣ ಕುರಿತಂತೆ ಮಾತನಾಡಿದ ಡಾ.ಲತಾ ಎಸ್ ಮುಳ್ಳೂರ

ಈ ಶಾಲೆಯ ಜವಾಬ್ದಾರಿ ಹೊತ್ತ ಮುಖ್ಯಶಿಕ್ಷಕರಾದ ಸೊನ್ನಪ್ಪನವರ ಸಣ್ಣತನ,ಅಹಂ, ದರ್ಪ, ಅಸಭ್ಯ ವರ್ತನೆಗಳು ಹಾಗೂ ಅವರ ದುರ್ನಡತೆ‌ಯ‌ ನಿಜ ಸ್ವರೂಪ ಎಲ್ಲದೂ ಸಾಮಾಜಿಕ ಮಾದ್ಯಮಗಳಲ್ಲಿ ಪ್ರಸಾರ ಆಗಿದೆ.ಅದೇ ಶಾಲೆಯಲ್ಲಿ ಕರ್ತವ್ಯನಿರತ ಮಹಿಳಾ ಶಿಕ್ಷಕಿಯರ ಮೇಲೆ ನಡಿದಿದೆ ಎನ್ನಲಾದ ಮಾನಸಿಕ ‌ಕಿರುಕುಳ,ದೌರ್ಜನ್ಯವನ್ಮು ನಾವೆಂದು ಸಹಿಸಲಾರೆವು.
ಅವರನ್ನು ತಕ್ಷಣದಲ್ಲಿ ಅಮಾನತ್ತುಗೊಳಿಸಬೇಕು.
ನೊಂದ ಶಿಕ್ಷಕಿಯರಿಗೆ ಸೂಕ್ತ ರಕ್ಷಣೆ ಹಾಗೂ ನ್ಯಾಯ‌ ಒದಗಿಸಬೇಕು.
ನ್ಯಾಯ ಸಿಗುವವರೆಗೂ ನಮ್ಮ ಸಂಘಟನೆ ರಾಜ್ಯಾದ್ಯಂತ ಹೋರಾಟ ನಡೆಸಲು ಸಿದ್ದವಿದೆ ಎಂದು ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ರವರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ದೌರ್ಜನ್ಯ ಕ್ಕೆ ಒಳಗಾಗುವ ಶಿಕ್ಷಕಿಯರ ರಕ್ಷಣೆಗೆ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸಮಸ್ತ ಪದಾಧಿಕಾರಿಗಳು ಸದಾ ಸನ್ನದ್ದರಾಗಿದ್ದಾರೆ ಎಂದು ತಿಳಿಸಿದ್ದಾರೆ.ಡಿವಿಜಿ ಶಾಲೆಯ ನೊಂದ ಶಿಕ್ಷಕಿಯರೊಂದಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿ ಮಾತನಾಡಿ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ.