ಶಿಕ್ಷಕಿಯರ ಸಂಘಟನೆಗೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಪ್ರೋತ್ಸಾಹ

ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ-ಧಾರವಾಡಜಿಲ್ಲಾಘಟಕ- ವಿಜಯನಗರ, ತಾಲ್ಲೂಕು ಘಟಕ- ಹರಪನಹಳ್ಳಿ ಮಾ.28. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷರು.ಪ್ರಧಾನ ಕಾರ್ಯದರ್ಶಿಗಳು ಹಾಗೂ ಎಲ್ಲ ಪದಾಧಿಕಾರಿಗಳು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಭೇಟಿಮಾಡಿ ಅಧಿಕೃತವಾಗಿ ನೂತನ ತಾಲ್ಲೂಕು ಘಟಕದ ಬಗ್ಗೆ ಮಾಹಿತಿ ನೀಡಿದರು. ರಾಜ್ಯಾದ್ಯಂತ ಹೆಮ್ಮರವಾಗಿ ಬೆಳೆದಿರುವ ಮಹಿಳಾ ಶಿಕ್ಷಕಿಯರ ಸಂಘಟನೆ ಇದಾಗಿದ್ದು ಇದರಲ್ಲಿ ರಾಜ್ಯದ ಸರ್ಕಾರಿ,ಅನುದಾನಿತ,ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕಿಯರು ಒಳಗೊಂಡಿದ್ದು,ರಾಜ್ಯ ಘಟಕದ ಅನುಮೋದನೆಯೊಂದಿಗೆ ನಾವೆಲ್ಲರೂ ತಾಲ್ಲೂಕು ಘಟಕ ರಚನೆ ಮಾಡಿಕೊಂಡಿರುತ್ತೇವೆ.ಇದರಡಿ ನಾವೆಲ್ಲರೂ ಹಲವಾರುContinue reading “ಶಿಕ್ಷಕಿಯರ ಸಂಘಟನೆಗೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಪ್ರೋತ್ಸಾಹ”

ಶಿಕ್ಷಕಿಗೆ ಹಲ್ಲೆ,ಮಾಂಗಲ್ಯ ಸರ ಕಳವು-ಠಾಣೆಗೆ ದೂರು ಸಲ್ಲಿಸಿದ ಶಿಕ್ಷಕಿಯರ ಸಂಘ

ಸಾಗರ ಮಾ.25.ಕಳೆದ ಎರಡು ದಿನಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ ಶ್ರೀಮತಿ ಪ್ರಭಾವತಿ ಬ್ರಾಹ್ಮಣ ಮಂಚಾಲೆ ರವರು ಎಂದಿನಂತೆ ಬೆಳಿಗ್ಗೆ ಶಾಲೆಗೆ ತೆರಳುತ್ತಿರುವ ಸಂದರ್ಭದಲ್ಲಿ ಮಾರ್ಗ ಮದ್ಯದಲ್ಲಿ‌ ಅವರನ್ನು ಅಪರಿಚಿತ ವ್ಯಕ್ತಿಯೊಬ್ಬರು ಏಕಾಏಕಿ ಅಡ್ಡಗಟ್ಟಿ ಹಲ್ಲೆ ಮಾಡಿ ಕೊರಳಲ್ಲಿದ್ದ 50 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಅಪಹರಣ ಮಾಡಿದ್ದಾರೆ.ಈ ಸುದ್ದಿ ತಿಳಿದ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಸಾಗರ ತಾಲೂಕು ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಆಸ್ಪತ್ರೆಗೆContinue reading “ಶಿಕ್ಷಕಿಗೆ ಹಲ್ಲೆ,ಮಾಂಗಲ್ಯ ಸರ ಕಳವು-ಠಾಣೆಗೆ ದೂರು ಸಲ್ಲಿಸಿದ ಶಿಕ್ಷಕಿಯರ ಸಂಘ”

ವಿಶ್ವ ಮಹಿಳಾ ದಿನಾಚರಣೆ-ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಯಶಸ್ವಿ.

ಗುಬ್ಬಿ: ದಿನಾಂಕ 19 ಮಾರ್ಚ್ 2022 ಕರ್ನಾಟಕ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘ (ರಿ) ತಾಲ್ಲೂಕು ಘಟಕ-ಗುಬ್ಬಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸ್ಥಳೀಯ ಸಂಸ್ಥೆ ಗುಬ್ಬಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಗುಬ್ಬಿಶಾಖೆ, ಲಯನ್ಸ್ ಕ್ಲಬ್ ಗುಬ್ಬಿ, ಸುಧೆ ಸೇವಾ ಟ್ರಸ್ಟ್(ರಿ) ತುಮಕೂರು, ಶ್ರೀ ಗುರುರಾಘವೇಂದ್ರ ಚಾರಿಟಬಲ್ ಟ್ರಸ್ಟ್ (ರಿ) ಗುಬ್ಬಿ, ಈ ಎಲ್ಲಾ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆ ಮತ್ತು ಸೇವಾ ತೃಪ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಗರದ ಶ್ರೀ ರಾಘವೇಂದ್ರ ಸ್ವಾಮಿContinue reading “ವಿಶ್ವ ಮಹಿಳಾ ದಿನಾಚರಣೆ-ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಯಶಸ್ವಿ.”

ಇಡೀ ರಾಜ್ಯಕ್ಕೆ ಮಾದರಿ ಸಂಘವಾಗಿದೆ-ಜಿಲ್ಲಾ ಶಿಕ್ಷಣಾಧಿಕಾರಿ ಹೆಚ್.ಸುಖದೇವ್ ಅಭಿಪ್ರಾಯ.

ರಾಯಚೂರು-ದಿನಾಂಕ 29 /01/ 2022 ರಂದು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ತಾಲೂಕು ಘಟಕ ರಾಯಚೂರು ವತಿಯಿಂದ ಸಾವಿತ್ರಿಬಾಯಿ ಪುಲೆಯವರ ಜನ್ಮ ದಿನಾಚರಣೆಯನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಷ್ಮಿಯಾದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಶಿಕ್ಷಣ ಅಧಿಕಾರಿಗಳಾದ H ಸುಖದೇವ ಸರ್ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಶಿಕ್ಷಣ ಇಲಾಖೆಯಲ್ಲಿ ಏನಾದರೂ ಉತ್ತಮ ಕೆಲಸಗಳು ಆಗಿದ್ದರೆ ಅದಕ್ಕೆ ಕಾರಣ ಶಿಕ್ಷಕಿಯರು. ಉದಾಹರಣೆಗೆ ಎಸ್ಎಸ್ಎಲ್ ಸಿ ಫಲಿತಾಂಶ ಮತ್ತೆ ಬೇರೆ ಬೇರೆ ಕಾರ್ಯಕ್ರಮಗಳ ನಿರ್ವಹಣೆಗೆ ಮುಖ್ಯContinue reading “ಇಡೀ ರಾಜ್ಯಕ್ಕೆ ಮಾದರಿ ಸಂಘವಾಗಿದೆ-ಜಿಲ್ಲಾ ಶಿಕ್ಷಣಾಧಿಕಾರಿ ಹೆಚ್.ಸುಖದೇವ್ ಅಭಿಪ್ರಾಯ.”

‘ದಾರ್ಶನಿಕ ದರ್ಶನ’ಪುಸ್ತಕ ಬಿಡುಗಡೆ- ಉಷಾರಾಣಿರವರ ಲೇಖನಕ್ಕೆ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಮೆಚ್ಚುಗೆ.

ಶಿಕಾರಿಪುರ ಜ.27. ಪಟ್ಟಣದಲ್ಲಿ ಸುವ್ವಿ ಪ್ರಕಾಶನ ಹಾಗೂ ಜನಸ್ಪಂದನ ಟ್ರಸ್ಟ್ ವತಿಯಿಂದ ಅಯೋಜಿಸಿದ್ದ ‘ದಾರ್ಶನಿಕರ ದರ್ಶನ’ ಪುಸ್ತಕ ಬಿಡುಗಡೆ ಸಮಾರಂಭ ಆಯೋಜಿಸಲಾಗಿತ್ತು. ಅಧ್ಯಕ್ಷತೆಯನ್ನು ಶ್ರೀ ಜಯಪ್ಪ ನಿವೃತ್ತಿ ಪ್ರಾಂಶುಪಾಲರು ವಹಿಸಿದ್ದು,ಉಪನ್ಯಾಸವನ್ನು ಡಾ.ಮೋಹನ್ ಚಂದ್ರಗುತ್ತಿ,ಸಹ ಪ್ರಧ್ಯಾಪಕರು, ಸಹ್ಯಾದ್ರಿ ಕಾಲೇಜ್ ಶಿವಮೊಗ್ಗ ರವರು ದಾರ್ಶನಿಕ ದರ್ಶನ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು ಸಮಾಜದಲ್ಲಿ ಸಮಾಜದಲ್ಲಿ ಸುಧಾರಣೆ ತರಲು ಶ್ರಮಿಸಿದ ದಾರ್ಶನಿಕರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಅಪಾಯಕಾರಿ ಬೆಳವಣಿಗೆ ಎಂದರು. ನಮ್ಮ ನಾಡಿನಲ್ಲಿ ಹಲವಾರು ದಾರ್ಶನಿಕರು ಕತ್ತಲೆಯಿಂದ ಬೆಳಕಿನಡೆಗೆ ಜನರನ್ನುContinue reading “‘ದಾರ್ಶನಿಕ ದರ್ಶನ’ಪುಸ್ತಕ ಬಿಡುಗಡೆ- ಉಷಾರಾಣಿರವರ ಲೇಖನಕ್ಕೆ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಮೆಚ್ಚುಗೆ.”

ಔದಾರ್ಯ ಮೆರೆದು ಮಾದರಿಯಾದ ಸಾವಿತ್ರಿಬಾಯಿ ಫುಲೆ ಸಂಘದ ಪದಾಧಿಕಾರಿ -ಅಭಿನಂದನೆ ಕೋರಿದ ಡಾ.ಲತಾ.ಎಸ್.ಮುಳ್ಳೂರ

ವಿಜಯಪುರ ಜ. 26. ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ಮುಗಿಸಿ ಶಿಕ್ಷಕಿಯರು ರಿಕ್ಷಾದಲ್ಲಿ ಮನೆಗೆ ಮರಳುತ್ತಿರುವಾಗ ದಾರಿ ಮದ್ಯದಲ್ಲಿ ರಿಕ್ಷಾ ಹಾಗೂ ಮೋಟಾರ್ಸೈಕಲ್ ನಡುವೆ ಅಪಘಾತ ಉಂಟಾಗಿದೆ.ಈ ಅವಘಡದಿಂದಾಗಿ 3 ಜನ ಶಿಕ್ಷಕಿಯರು ಗಂಭೀರವಾಗಿ ಘಾಯಗೊಂಡು ನರಳುವುದನ್ನು ನೋಡಿದ ಬಹಳಷ್ಟು ಜನರು ಫೋಟೋ ವಿಡಿಯೋ ತೆಗಿಯುವುದರಲ್ಲಿ ತೊಡಗಿದ್ದರೇ ಹೊರತು ಗಾಯಾಳುಗಳ ನೆರವಿಗೆ ಗಮನ ಕೊಡದೇ ಹೋದರು. ಆದರೆ ಅದೇ ಸಮಯದಲ್ಲಿ ಬಂದ ವಿಜಯಪುರ ಜಿಲ್ಲೆಯ ಕರ್ನಾಟಕ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ),ತಿಕೋಟಾ ತಾಲೂಕ ಘಟಕದContinue reading “ಔದಾರ್ಯ ಮೆರೆದು ಮಾದರಿಯಾದ ಸಾವಿತ್ರಿಬಾಯಿ ಫುಲೆ ಸಂಘದ ಪದಾಧಿಕಾರಿ -ಅಭಿನಂದನೆ ಕೋರಿದ ಡಾ.ಲತಾ.ಎಸ್.ಮುಳ್ಳೂರ”

ಅಕ್ಷರದವ್ವರ ದಿನಾಚರಣೆ ಆಚರಿಸಿದ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ

ತುಮಕೂರು ಜ.27 ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ. ಜಿಲ್ಲಾಘಟಕ- ತುಮಕೂರು ಹಾಗೂ ತಾಲೂಕು ಘಟಕ-ತುಮಕೂರು ಇವರ ಸಹಯೋಗ ದೊಂದಿಗೆ ದಿನಾಂಕ 26/01/2022 ರಂದು ಅಪರಾಹ್ನ ಆರ್ಯಬಾಲಿಕ ಪ್ರಾಥಮಿಕ ಪಾಠ ಶಾಲೆ ಯಲ್ಲಿ ಮಾತೆ ಸಾವಿತ್ರಿಬಾಯಿ ಫುಲೆ ಹಾಗೂ ಫಾತಿಮಾ ಶೇಕ್ ರವರ ಜನ್ಮ ದಿನಾಚರಣೆ ಯನ್ನು ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಜಿಲ್ಲಾಧ್ಯಕ್ಷರಾದ ಶ್ರೀಮತಿ ಅನುಸೂಯ ದೇವಿ ಅವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ತುಮಕೂರು ತಾಲೂಕ್ ತಹಶಿಲ್ದಾರವರು ಹಾಗೂ ತಾಲ್ಲೂಕು ದಂಡಾಧಿಕಾರಿContinue reading “ಅಕ್ಷರದವ್ವರ ದಿನಾಚರಣೆ ಆಚರಿಸಿದ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ”