ಶಿಕಾರಿಪುರ ಜ.27. ಪಟ್ಟಣದಲ್ಲಿ ಸುವ್ವಿ ಪ್ರಕಾಶನ ಹಾಗೂ ಜನಸ್ಪಂದನ ಟ್ರಸ್ಟ್ ವತಿಯಿಂದ ಅಯೋಜಿಸಿದ್ದ ‘ದಾರ್ಶನಿಕರ ದರ್ಶನ’ ಪುಸ್ತಕ ಬಿಡುಗಡೆ ಸಮಾರಂಭ ಆಯೋಜಿಸಲಾಗಿತ್ತು. ಅಧ್ಯಕ್ಷತೆಯನ್ನು ಶ್ರೀ ಜಯಪ್ಪ ನಿವೃತ್ತಿ ಪ್ರಾಂಶುಪಾಲರು ವಹಿಸಿದ್ದು,ಉಪನ್ಯಾಸವನ್ನು ಡಾ.ಮೋಹನ್ ಚಂದ್ರಗುತ್ತಿ,ಸಹ ಪ್ರಧ್ಯಾಪಕರು, ಸಹ್ಯಾದ್ರಿ ಕಾಲೇಜ್ ಶಿವಮೊಗ್ಗ ರವರು ದಾರ್ಶನಿಕ ದರ್ಶನ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು ಸಮಾಜದಲ್ಲಿ ಸಮಾಜದಲ್ಲಿ ಸುಧಾರಣೆ ತರಲು ಶ್ರಮಿಸಿದ ದಾರ್ಶನಿಕರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಅಪಾಯಕಾರಿ ಬೆಳವಣಿಗೆ ಎಂದರು.


ನಮ್ಮ ನಾಡಿನಲ್ಲಿ ಹಲವಾರು ದಾರ್ಶನಿಕರು ಕತ್ತಲೆಯಿಂದ ಬೆಳಕಿನಡೆಗೆ ಜನರನ್ನು ಕೊಂಡೊಯ್ಯಲು ಅಗತ್ಯವಾದ ಸಂದೇಶಗಳನ್ನು ನೀಡಿದ್ದಾರೆ. ಅಧಿಕಾರ ಹಣ ಧರ್ಮದ ಆಧಾರದ ಮೇಲೆ ಸಮಾಜವನ್ನು ಒಡೆಯುವ ಕಾರ್ಯ ಆಗಬಾರದು ಎಂದು ತಿಳಿಸಿದರು. ,ಸಂಪಾದಕರಾದ ಬಂಗಾರಪ್ಪ ಬಿ,ರವರು 32 ಲೇಖಕರಿಂದ ರಚಿತವಾದ ದಾರ್ಶನಿಕ ದರ್ಶನ ಪುಸ್ತಕವನ್ನು ಎಲ್ಲರು ಓದಬೇಕು ಎಂದು ಸಲಹೆ ನೀಡಿ, 32 ಲೇಖಕರಿಗೂ ಕೃತಜ್ಞತೆ ಸಲ್ಲಿಸಿ,ದಾರ್ಶನಿಕರ ತತ್ವ,ವಿಚಾರಗಳನ್ನು ಎಲ್ಲರಿಗು ತಿಳಿಸಬೇಕು, ದಲಿತರ ಹಾಗೂ ಮಹಾನಾಯಕರ ಜಯಂತಿ ಕಾರ್ಯಕ್ರಮಗಳು ಕೇವಲ ಒಂದು ಸಮುದಾಯವನ್ನು ಓಲೈಸಲು ಮಾತ್ರ ಸೀಮಿತವಾಗಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.32 ಲೇಖಕರಲ್ಲಿ ಒಬ್ಬರಾದ ಶ್ರೀಮತಿ ಉಷಾರಾಣಿ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಸಾವಿತ್ರಿಬಾಯಿಪುಲೆ ಸಂಘ,ತಾಲ್ಲೂಕು ಘಟಕ ಶಿಕಾರಿಪುರ ಇವರು ಸಹ ಮಾತೆ ಸಾವಿತ್ರಿಬಾಯಿ ಫುಲೆ ಅವರ ಜೀವನ ಚರಿತ್ರೆ ಶೈಕ್ಷಣಿಕ ಸುಧಾರಣೆಗಳು ಸಾಮಾಜಿಕ ಕಳಕಳಿಯನ್ನು ಕುರಿತಂತೆ ಒಂದು ಅತ್ಯುತ್ತಮ ಲೇಖನವನ್ನು ಬರೆದಿದ್ದು ಅವಕಾಶ ದೊರಕಿಸಿಕೊಟ್ಟವರನ್ನು ಈ ಸಂದರ್ಭದಲ್ಲಿ ಅವರು ನೆನೆದು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ತಾಲ್ಲೂಕು ಘಟಕದ ಕಾರ್ಯದರ್ಶಿಯಾದ ಉಷಾರಾಣಿರವರು ಲೇಖನ ಬರೆದು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಗರಿಮೆ ಹೆಚ್ಚಿಸಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾಧ್ಯಕ್ಷರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಕಾಶಕರಾದ ಸುನಿಲ್ ಕುಮಾರ್ ರವರು , ರಾಘು ಹೆಚ್ ಎಸ್ ಅಧ್ಯಕ್ಷರು ಕ. ಸಾಹಿತ್ಯ ಪರಿಷತ್ ಶಿಕಾರಿಪುರ , ಶ್ರೀ ಪಾಪಯ್ಯ ಅಧ್ಯಕ್ಷರು ತಾಲ್ಲೂಕು ಜಾನಪದ ಪರಿಷತ್ ಶಿಕಾರಿಪುರ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಶ್ರೀ ಮಧುಕೇಶವ ಹೆಚ್ ಡಿ,ಮುಖ್ಯ ಅತಿಥಿ ಗಳಾಗಿ ಹಾಗೂ ಕರ್ನಾಟಕ ಸಾವಿತ್ರಿಬಾಯಿ ಪುಲೆ ಸಂಘದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ರಾಧಾ , ಶಿಕಾರಿಪುರ ತಾಲ್ಲೂಕು ಅಧ್ಯಕ್ಷರಾದ ಲಕ್ಷ್ಮವ್ವ ಎಂ ಸುಣಗಾರ,ಪ್ರಧಾನ ಕಾರ್ಯದರ್ಶಿ ಶ್ರೀಮತಿ ಉಷಾರಾಣಿ ಎಸ್ ವಿ, ಉಪಾಧ್ಯಕ್ಷರಾದ ಶ್ರೀಮತಿ ಮಧುರ, ಗೃಹಲಕ್ಷ್ಮಿ, ಪ್ರತಿಭಾ ಇತರ ಸದಸ್ಯರು ಭಾಗವಹಿಸಿದ್ದರು.


