ಧಾರವಾಡ ಅ.2 ರಾಜ್ಯ ಮಟ್ಟದ ನಲಿಕಲಿ ಶಿಕ್ಷಕರ ವರ್ಚ್ಯಯಲ್ ಸಂವಾದ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾದರೂ ಸಹಾ ನೂರಾರು ಶಿಕ್ಷಕ ಶಿಕ್ಷಕಿಯರಿಗೆ ಜಾಯಿನ್ ಆಗಲು ಅವಕಾಶ ಸಿಗದ ಕಾರಣ ನಿರಾಶೆ ಅನುಭವಿಸಬೇಕಾಯಿತು..ಹೌದು ನಿನ್ನೆ ಶನಿವಾರ ಸಂಜೆ 4 ಗಂಟೆಗೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವೆಬಿನಾರ್ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ರಾಜ್ಯದ ನಲಿಕಲಿ ತಜ್ಞ ರಂದೇ ಹೆಸರಾಗಿರುವ, ರಾಜ್ಯ ಸಂಪನ್ಮೂಲ ವ್ಯಕ್ತಿಗಳಿಗೆಯೇ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ರವೀಂದ್ರ.ಆರ್.ಡಿ. ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ಕಾರ್ಯಕ್ರಮ ಪ್ರಾರಂಭವಾದ ಹತ್ತಾರು ನಿಮಿಷದಲ್ಲಿ ರಾಜ್ಯಾದ್ಯಂತ 1000 ಶಿಕ್ಷಕ ಶಿಕ್ಷಕಿಯರು ಭಾಗವಹಿಸಿ ಮೈಕ್ರೋಸಾಫ್ಟ್ ಟೀಮ್ಸ್ ಆಪ್ಲಿಕೇಷನ್ ಲಿಮಿಟ್ ದಾಟಿದ ಕಾರಣ ಇತರ ನೂರಾರು ಶಿಕ್ಷಕರಿಗೆ ಭಾಗವಹಿಸಲು ಅಡಚಣೆ ಉಂಟಾಯಿತು.



ಸಂಘದ ಕೆಲವಾರು ತಾಂತ್ರಿಕ ಸಮಿತಿ ಸದಸ್ಯರಿಗು ಹಾಗೂ ಪದಾಧಿಕಾರಿಗಳಿಗೂ ಸಹಾ ಜಾಯಿನ್ ಆಗಲು ಅವಕಾಶ ಸಿಗದೇ ಪರಿತಪಿಸುವಂತಾಯಿತು. ರಾಜ್ಯದ ಮೂಲೆ ಮೂಲೆಯಿಂದ ಮೇಲಿಂದ ಮೇಲೆ ಕರೆ ಮಾಡಿ ಆಯೋಜಕರಿಗೆ ಮತ್ತೊಮ್ಮೆ ವೆಬಿನಾರ್ ಹಾಗೂ ಸಂವಾದ ಕಾರ್ಯಕ್ರಮ ಆಯೋಜಿಸಲೇಬೇಕೆಂಬ ಒತ್ತಾಯವನ್ನೂ ಸಹಾ ಮಾಡಿದ್ದಾರೆ. ರಾಜ್ಯದ ಕೋವಿಡ್ ಸಂಕಷ್ಟ ದಿನಗಳಲ್ಲಿ ನಲಕಲಿ ಮಕ್ಕಳಿಗೆ ಪರ್ಯಾಯ ಶೈಕ್ಷಣಿಕ ಯೋಜನೆ,ತರಗತಿ ನಿರ್ವಹಣೆ,ಮೌಲ್ಯಮಾಪನ ಹಾನಿರ್ವಹಣೆ, ನಿರ್ವಹಣೆಗಳನ್ನು ಮಾಡುವ ವಿಚಾರದಲ್ಲಿ ಹಲವಾರು ಗೊಂದಲಗಳಿಗೆ ರವೀಂದ್ರ ಸರ್ ರವರು ಉತ್ತಮ ಮಾರ್ಗದರ್ಶನ ನೀಡಿದರು,
ಶಿಕ್ಷಕರ ಪ್ರಶ್ನೆಗಳನ್ನು ಆಲಿಸಿ ಸೂಕ್ತ ಸಲಹೆ ಕೂಡ ನೀಡಿದ್ದಾರೆ. ವೆಬಿನಾರ್ ನ ವಿಶೇಷವೇನೆಂದರೆ ರಾಜ್ಯದ ವಿವಿಧ ಶಿಕ್ಷಣ ಅಧಿಕಾರಿಗಳು,ಡಯಟ್ ನೋಡಲ್ ಅಧಿಕಾರಿಗಳು, ಬ್ಲಾಕ್ ಸಂಪನ್ಮೂಲ ವ್ಯಕ್ತಿಗಳು ಸಹಾ ಜಾಯಿನ್ ಆಗಿದ್ದು ಯಶಸ್ವಿಗೆ ಕಾರಣವಾಯಿತು.


ನಮ್ಮ ಸಂಘದ ಆಹ್ವಾನಕ್ಕೆ ಒಪ್ಪಿ,
ತಮ್ಮೆಲ್ಲ ಒತ್ತಡದ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಜ್ಯದ ಹಲವು ವಿಷಯಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿರುವ ಶ್ರೀಯುತ ರವೀಂದ್ರ.ಆರ್.ಡಿ ರವರಿಗೆ ಹಾಗೂ ಸಂಘಟನೆಗೆ ಜೊತೆಯಾಗಿ ಕೈಜೋಡಿಸಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಉತ್ತಮ ಸಲಹೆ ಮಾರ್ಗದರ್ಶನ ನೀಡಿದ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಅಧ್ಯಕ್ಷರಾದ ಶ್ರೀ ಮಹೇಶ್ ರವರಿಗೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘಟನೆಯು ವಿಶೇಷ ಧನ್ಯವಾದಗಳನ್ನು ಸಲ್ಲಿಸಿದೆ.

ರಾಜ್ಯದ ನಲಿಕಲಿ ಶಿಕ್ಷಕ ಶಿಕ್ಷಕಿಯರ ಒತ್ತಾಯದ ಮೇರೆಗೆ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಜ್ಯೋತಿರವರ ಕಾರ್ಯಕ್ರಮ ಆಯೋಜನೆ,ರಾಜ್ಯ ತಾಂತ್ರಿಕ ಸಮಿತಿಯ ಮುಖ್ಯಸ್ಥರಾದ ಭುವನೇಶ್ವರಿ ಯವರ ಅಪ್ಲಿಕೇಷನ್ ನಿರ್ವಹಣೆ, ತಾಂತ್ರಿಕ ಸಮಿತಿಯ ಸದಸ್ಯರಾದ ನಂದಿನಿಯಾದವ್ ರವರ ಮೀಡಿಯ ಪ್ರಕಟಣೆ,
ಹಾವೇರಿಯ ರಾಜಶ್ರೀ ರವರ ಅದ್ಬುತ ನಿರೂಪಣೆ, ಬಹಳ ಅಚ್ಚುಕಟ್ಟಾಗಿ ನಿಬಾಯಿಸಿದ್ದು ಪ್ರಶಂಸನೀಯ. ಒಂದೇ ದಿನದಲ್ಲಿ ತುರ್ತಾಗಿ ಯೋಜನೆ ಮಾಡಿ ದಿನಾಂಕ ನಿಗಧಿ ಮಾಡಿ, ಪ್ರಚಾರ ಮಾಡಿ,
ಹೆಚ್ಚು ಶಿಕ್ಷಕರ ಗಮನ ಸೆಳೆದು ಅತೀ ಹೆಚ್ಚು ಸಂಖ್ಯೆಯಲ್ಲಿ ಶಿಕ್ಷಕರು ಭಾಗವಹಿಸುವಂತೆ ಸಹಕಾರ ನೀಡಿದ ರಾಜ್ಯದ ಪದಾಧಿಕಾರಿಗಳಿಗೆ,ರಾಜ್ಯ ತಾಂತ್ರಿಕ ಸಮಿತಿಯ ಎಲ್ಲಾ ಸದಸ್ಯರಿಗೆ,ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಶಿಕ್ಷಕ ಶಿಕ್ಷಕಿಯರಿಗೆ ಹಾಗೂ ,ಸಹಕರಿಸಿದ ಎಲ್ಲರಿಗೂ
ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ರವರು ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.


very usefull webinar
LikeLiked by 1 person
ಇಂತಹ ಅದ್ಭುತ ವೇದಿಕೆಯನ್ನು ಸೃಷ್ಟಿಸಿಕೊಟ್ಟು ರಾಜ್ಯದ ಮೂಲೆಮೂಲೆಯಿಂದ ಭಾಗವಹಿಸಿದ ಶಿಕ್ಷಕ ಶಿಕ್ಷಕಿಯರ ಜೊತೆ , ಅಧಿಕಾರಿಗಳ ಜೊತೆಗೆ ಸಂವಾದಕ್ಕೆ ಅವಕಾಶ ಮಾಡಿಕೊಟ್ಟ ಅಧ್ಯಕ್ಷರಿಗೂ, ಕಾರ್ಯದರ್ಶಿ ಗಳಿಗೂ, ತಾಂತ್ರಿಕ ಸಮಿತಿಯ ಎಲ್ಲ ಸಹೋದರಿಯರಿಗೂ ಹೃದಯಪೂರ್ವಕ ಅಭಿನಂದನೆಗಳು.
LikeLiked by 1 person