ಶಾಲಾ ಕರ್ತವ್ಯದಿಂದ ವಿನಾಯಿತಿ ನೀಡಲಿ- ಫುಲೆ ಸಂಘ ಮನವಿ.

ಧಾರವಾಡ ಜೂನ್-8

ಈ ಕೊವಿಡ್ ಸಂಕಷ್ಟ ದಿನಗಳಲ್ಲಿ ಹಲವಾರು ಸವಾಲುಗಳು ಇರುವಂತ ಈ ಸಮಯದಲ್ಲಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಬಿಸಲು ಈಗಾಗಲೇ ಇಲಾಖೆ ಸೂಚನೆ ನೀಡಿದೆ.  ಎಲ್ಲಾ ಶಿಕ್ಷಕ ಶಿಕ್ಷಕಿಯರು
ಜೂನ್ 15 ರಿಂದ ಶಾಲೆಗೆ ಹಾಜರಾಗಿ ಮಕ್ಕಳ ಶಾಲಾ ದಾಖಲಾತಿ ಪ್ರಾರಂಬಿಸಿಕೊಳ್ಳಲು ಶಾಲೆಗಳಿಗೆ ಮರಳಬೇಕಾಗಿದೆ

ಕೊವಿಡ್ ಎರಡನೇ ಅಲೆಯು  ನಗರ ಪ್ರದೇಶಗಳಿಗಿಂತ ಹಳ್ಳಿ ಪ್ರದೇಶಗಳಲ್ಲಿಯೇ ಬಾರಿ ಸಂಚಲನ‌ ಉಂಟು ಮಾಡಿರುವುದು ಎಲ್ಲರಿಗೂ ತಿಳಿದಿದೆ..ಈಗಾಗಲೇ ನೂರಾರು ಶಿಕ್ಷಕ‌-ಶಿಕ್ಷಕಿಯರು ಕೊವಿಡ್ ಸೋಂಕಿಗೆ ಸಿಕ್ಕಿ ಪ್ರಾಣ ಕಳೆದುಕೊಂಡಿದ್ದಾರೆ, ಇಂತಹ  ಸಂದಿಗ್ಧ ಪರಿಸ್ಥಿತಿಯಲ್ಲಿ ಶಾಲೆಗಳಿಗೆ ತೆರಳಿ ಕರ್ತವ್ಯ ನಿರ್ವಹಿಸಲು  ಗರ್ಬಿಣಿ ಶಿಕ್ಷಕಿಯರು, ಒಂದು ವರ್ಷದ ಮಗು ಇರುವ ತಾಯಂದಿರುಗಳಿಗೆ, ವಿಕಲಚೇತನ ಶಿಕ್ಷಕಿಯರಿಗೆ ಹಾಗೂ ತೀವ್ರತರ ಕಾಯಿಲೆಗಳಿಂದ ಬಳಲುತ್ತಿರುವ ಶಿಕ್ಷಕಿಯರಿಗೆ ಕಷ್ಟಸಾದ್ಯವಾಗಿದೆ.

ಅಂತಹ ಶಿಕ್ಷಕಿಯರ ಆರೋಗ್ಯದ ದೃಷ್ಟಿಯಿಂದ ಶಾಲಾ ಕರ್ತವ್ಯದಿಂದ  ವಿನಾಯಿತಿ ನೀಡಬೇಕು ಹಾಗೂ  ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಿಕೊಡಬೇಕು, ಅವರ ಆರೋಗ್ಯದ ಬಗ್ಗೆ ಕಾಳಜಿ ತೋರಬೇಕೆಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಪರವಾಗಿ, ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ರವರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಜ್ಯೋತಿ ಹೆಚ್.ರವರುಗಳು ಘನ ಸರ್ಕಾರವನ್ನು ಒತ್ತಾಯಿಸಿ ಮನವಿ ಮಾಡಿಕೊಂಡಿದ್ದಾರೆ.

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

One thought on “ಶಾಲಾ ಕರ್ತವ್ಯದಿಂದ ವಿನಾಯಿತಿ ನೀಡಲಿ- ಫುಲೆ ಸಂಘ ಮನವಿ.

Leave a reply to ಪ್ರದೀಪ್ ನ್ಯಾಮತಿ Cancel reply