ರಾಜ್ಯ ಮಟ್ಟದ ಸಾಮಾನ್ಯ ಸಭೆ-ಯಶಸ್ವಿ
*ಧಾರವಾಡ ಮೇ24* ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯ ಘಟಕ ಧಾರವಾಡ ವತಿಯಿಂದ
ಇಂದು ಸಂಘದ ಎಲ್ಲಾ ರಾಜ್ಯ ಪದಾಧಿಕಾರಿಗಳು ಹಾಗೂ ಜಿಲ್ಲಾ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಎಲ್ಲಾ ಜಿಲ್ಲಾ ಕೋಶಾಧ್ಯಕ್ಷರುಗಳಿಗೆ
ರಾಜ್ಯ ಮಟ್ಟದ ಸಾಮಾನ್ಯ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಮೊದಲನೆಯದಾಗಿ covid ನಿಂದಾ ಮೃತಪಟ್ಟ ಶಿಕ್ಷಕ ಶಿಕ್ಷಕಿಯರಿಗೆ ಭಾವ ಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು…
ಸಭೆಯಲ್ಲಿ ಸಂಘಟನೆಯ ಕುರಿತು ಹಾಗೂ ಹಲೋ .. ಚಿಲ್ಡ್ರನ್ ಫೋನ್ ಇನ್ ಕಾರ್ಯಕ್ರಮದ ಕುರಿತು ಚರ್ಚಿಸಲಾಯಿತು.. ಮುಂದಿನ ವರ್ಷದಿಂದ ಸಂಘದ ವತಿಯಿಂದ ಹಮಿಕೊಳ್ಳಬೇಕಾದ ಕಾರ್ಯ ಚಟುವಟಕೆಗಳ ಕುರಿತು ಕ್ರಿಯಾ ಯೋಜನೆ.ಶಿಕ್ಷಕಿಯರ ಸಮಸ್ಯೆಗಳ ಕುರಿತು ಚರ್ಚೆ… ಕೋರೋನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕಿಯರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಬಗ್ಗೆ …ಹಾಗೂ
ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಎಲ್ಲಾ ಪದಾಧಿಕಾರಿಗಳಿಗೆ ತಿಳಿಸಲಾಯಿತು.. ಹಲವಾರು ಜಿಲ್ಲೆಗಳಲ್ಲಿ ನಮ್ಮ ಸಂಘಟನೆಯ ವತಿಯಿಂದ ಈಗಾಗಲೇ covid ವಾರಿಯರ್ಸ್ ಗಳಿಗೆ ಮತ್ತು covid ಸೊಂಕೀತರಿಗೆ ಊಟ ಉಪಹಾರದ ವ್ಯವಸ್ಥೆ.. ಮೆಡಿಕಲ್ ಕಿಟ್ ವಿತರಣೆ… ಅಗತ್ಯ ವೈದ್ಯಕೀಯ ಸಾಮಗ್ರಿ(ಆಕ್ಸಿಜನ್) ವಿತರಣೆ ಹಮ್ಮಿಕೊಳ್ಳುತ್ತಿರುವುದರ ಬಗ್ಗೆ ಸಂಘದ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿಲಾಯಿತು..ಉತ್ತಮ ಕ್ರಿಯಾಶೀಲ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.. .. ಸರ್ಕಾರದ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ಒದಗಿಸುವ ಬಗ್ಗೆ ಚರ್ಚಿಸುತ್ತಿರುವ ಮಾನ್ಯ ಶಿಕ್ಷಣ ಸಚಿವರಾದ ಶ್ರೀ ಸುರೇಶ್ ಕುಮಾರ್ ಸರ್ ರವರಿಗೆ ಅಭಿನಂದನೆ ಸಲ್ಲಿಸಲಾಯಿತು.. ವರ್ಗಾವಣೆಯನ್ನೂ ಆದಷ್ಟೂ ಬೇಗ ಪ್ರಾರಂಭ ಮಾಡಲೂ ಸರ್ಕಾರಕ್ಕೇ ಒತ್ತಾಯ ಮಾಡಲು ಚರ್ಚಿಸಲಾಯಿತು. .
ಇಂದು ಹಾಜರಾದ ಎಲ್ಲಾ ರಾಜ್ಯ ಪದಾಧಿಕಾರಿಗಳಿಗೆ ಮತ್ತು ಜಿಲ್ಲಾ ಅಧ್ಯಕ್ಷರು,ಪ್ರಧಾನ ಕಾರ್ಯದರ್ಶಿ ಮತ್ತು ಜಿಲ್ಲಾ ಕೋಶಧ್ಯಕ್ಷರು ಮತ್ತು ಎಲ್ಲಾ ಪದಾಧಿಕಾರಿಗಳಿಗೆ
ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಲಾಯಿತು.. ರಾಜ್ಯಾಧ್ಯಕ್ಷರಾದ ಲತಾ ಎಸ್ ಮುಳ್ಳೂರು ಮೇಡಂ ರವರು ಎಲ್ಲಾ ಪದಾಧಿಕಾರಿಗಳಿಗೆ ಅಗತ್ಯ ಮಾಹಿತಿ. ಸಲಹೆ ಸೂಚನೆ ನೀಡಿದರು…


ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಜ್ಯೋತಿ ಹೆಚ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ವತಿಯಿಂದ ಹಮ್ಮಿಕೊಳ್ಳಬಹುದಾದ ಕಾರ್ಯಕ್ರಮಗಳ ವಿವರ. ಮತ್ತು ಅಗತ್ಯ ಮಾರ್ಗದರ್ಶನ ನೀಡಿದರು..ಕಾರ್ಯಕ್ರಮದಲ್ಲಿ ರಾಜ್ಯ ಹಿರಿಯ ಉಪಾಧ್ಯಕ್ಷರಾದ ಹೇಮಾ ಕೊಂಡಣ್ಣನ್ನವರ…ರಾಜ್ಯ ಉಪಾಧ್ಯಕ್ಷರಾದ ಅನುಸೂಯ .ಅಕ್ಕಮಹಾದೇವಿ.. ರಾಜ್ಯ ಸಂಘಟನಾ ಕಾರ್ಯದರ್ಶಿ ಕಲ್ಪನಾ.. ಹಾಗೂ ಜಿಲ್ಲಾ ಅಧ್ಯಕ್ಷರು ಕಾರ್ಯದರ್ಶಿಗಳು ಹಾಗೂ ಕೋಶಾಧ್ಯಕ್ಷರು ಹಾಜರಿದ್ದರು.. ಲತಾ ಎಸ್ ಮುಳ್ಳೂರ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.. ಸಾರಿಕಾ ಗಂಗಾ ಪ್ರಾರ್ಥನೆ ಮಾಡಿದರು.ಹೇಮಾ ಕೊಡ್ಡಣ್ಣವರ ಸ್ವಾಗತ…ಜ್ಯೋತಿ ಹೆಚ್. ವಂದನಾರ್ಪಣೆ ಮಾಡಿದರು… ಅಕ್ಕಮಹಾದೇವಿ ರವರು ನಿರೂಪಣೆ ಮಾಡಿದರು.. ನಿಮ್ಮ ಸಹಕಾರ ಹೀಗೆ ಸದಾ ಇರಲಿ ಎಂದು
ಸಂಸ್ಥಾಪಕ ರಾಜ್ಯಾಧ್ಯಕ್ಷರಾದ
ಡಾ.ಲತಾ ಎಸ್ ಮುಳ್ಳೂರ
ಹಾಗೂ
ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ
ಶ್ರೀಮತಿ ಜ್ಯೋತಿ ಹೆಚ್
ರವರುಗಳು ಆಶಿಸಿದರು.ಒಟ್ಟಾರೆಯಾಗಿ ಸಾಮಾನ್ಯ ಸಭೆಯು ಯಶಸ್ವಿಯಾಯಿತು.

Wow!!! Nice,thank you Lata mdm,Jyoti madam.💐💐
LikeLiked by 1 person
I too joined the Google meet held on 24th may 2021. It was fruitful and came to know the different activities conducting by members in districts and taluks . Congratulations and thanks to all.
LikeLiked by 1 person