ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಮರು ಆಯ್ಕೆ, ಸನ್ಮಾನ್ಯ ಶ್ರೀ ಸಿ.ಎಸ್. ಷಡಕ್ಷರಿ ರವರಿಗೆ ಸನ್ಮಾನ

ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್ (ರಿ)ಕೇಂದ್ರ ಕಚೇರಿ – ನವದೆಹಲಿಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ( ರಿ)ರಾಜ್ಯ ಘಟಕ – ಧಾರವಾಡ ಜಿಲ್ಲಾ ಘಟಕ -ಚಾಮರಾಜನಗರ ದಿನಾಂಕ 27.12.2024 ರಂದು ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಎರಡನೇ ಬಾರಿಗೆ ಸ್ಪರ್ಧಿಸಿ, ಅಖಂಡ ವಿಜಯ ಸಾಧಿಸಿ, ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಮರು ಆಯ್ಕೆಯಾದ ಸನ್ಮಾನ್ಯ ಶ್ರೀ ಸಿ.ಎಸ್. ಷಡಕ್ಷರಿ ರವರಿಗೆ ಚಾಮರಾಜನಗರದ ಜಿಲ್ಲಾಧ್ಯಕ್ಷರಾದ ಶ್ರೀಮತಿ ಭವಾನಿದೇವಿ ಸಿ.ಎನ್., ಜಿಲ್ಲಾ ಸಂಘಟನಾContinue reading “ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಮರು ಆಯ್ಕೆ, ಸನ್ಮಾನ್ಯ ಶ್ರೀ ಸಿ.ಎಸ್. ಷಡಕ್ಷರಿ ರವರಿಗೆ ಸನ್ಮಾನ”

SSLC ಪರೀಕ್ಷೆ ಮಾರ್ಚ್ 2024, ರಾಜ್ಯಕ್ಕೆ ಪ್ರಥಮ ಸ್ಥಾನ‌ ಕು.ಅಂಕಿತಾ ಗೆ ಸನ್ಮಾನ

ಸಾವಿತ್ರಿಬಾಯಿ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್ (ರಿ) ನವದೆಹಲಿ ಹಾಗೂ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ ಹಾಗೂ ಜಿಲ್ಲಾಘಟಕ ಬಾಗಲಕೋಟೆ ವತಿಯಿಂದ2023-24 ನೇ ಸಾಲಿನ ಎಸ್.ಎಸ್. ಎಲ್.ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ‌ ಬಾಗಲಕೋಟೆ ಜಿಲ್ಲೆಯ,ಮುಧೋಳ ತಾ.ವಜ್ರಮಟ್ಟಿ ಗ್ರಾಮದ ವಿದ್ಯಾರ್ಥಿನಿ ಕುಮಾರಿ ಅಂಕಿತಾ ಬಸಪ್ಪ ಕೊಣ್ಣೂರ ರವರ ಮನೆಗೆ ಬೇಟಿ ನೀಡಿ ಸಾಧಕಿಗೆ ಸನ್ಮಾನಿಸಿ ಶುಭ ಹಾರೈಸಲಾಯಿತು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರContinue reading “SSLC ಪರೀಕ್ಷೆ ಮಾರ್ಚ್ 2024, ರಾಜ್ಯಕ್ಕೆ ಪ್ರಥಮ ಸ್ಥಾನ‌ ಕು.ಅಂಕಿತಾ ಗೆ ಸನ್ಮಾನ”

ಶಿಕ್ಷಕ-ಶಿಕ್ಷಕಿಯರಿಗೆ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಿದರೆ ಅದುವೇ‌ ನನಗೆ ಸಿಕ್ಕ ಸನ್ಮಾನ ಡಾ.ಲತಾ.ಎಸ್.ಮುಳ್ಳೂರ

ಧಾರವಾಡ ಶಹರದ ಪ್ರಾಥಮಿಕ ಶಾಲಾ‌ ಶಿಕ್ಷಕರ ಪತ್ತು ಬೆಳೆಸುವ ಸಹಕಾರಿ ಸಂಘ ಇದರ ಆಡಳಿತ ಮಂಡಳಿಯ ಚುನಾವಣೆ‌ಯಲ್ಲಿ‌ ಶ್ರೀ ಫೀರೋಜ ಗುಡೆನಕಟ್ಟಿ ಸರ ನೇತೃತ್ವದಲ್ಲಿ ಹಾಗೂ ಶ್ರೀ M.R. ಕಬ್ಬೇರ ಸರ್ ನೇತ್ರತ್ವದ ಸಮಾನ ಮನಸ್ಕರ ತಂಡಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ರವರ ಮನೆಗೆ ತೆರಳಿ ಚುನಾವಣೆಯಲ್ಲಿ ಬಹಿರಂಗವಾಗಿ ಬೆಂಬಲಿಸಿದ ಅವರಿಗೆ ಮತ್ತು ಅವರ ಸಂಘಟನೆಯ ಬಳಗಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು.ಬಳಗದ ಪರವಾಗಿ ಅವರನ್ನು ಸನ್ಮಾನಿಸಲು ಮುಂದಾದಾಗ ಚುನಾವಣೆ ಯಲ್ಲಿ ಶಿಕ್ಷಕರಿಗೆ ನೀಡಿದContinue reading ಶಿಕ್ಷಕ-ಶಿಕ್ಷಕಿಯರಿಗೆ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಿದರೆ ಅದುವೇ‌ ನನಗೆ ಸಿಕ್ಕ ಸನ್ಮಾನ ಡಾ.ಲತಾ.ಎಸ್.ಮುಳ್ಳೂರ

ವೈದ್ಯರ ದಿನಾಚರಣೆ ಪ್ರಯುಕ್ತ ವೈದ್ಯರಿಗೆ ಸನ್ಮಾನ

“ವೈದ್ಯ ನಾರಾಯಣೋ ಹರಿ” ವೈದ್ಯರ ದಿನಾಚರಣೆ ಪ್ರಯುಕ್ತ ದಿನಾಂಕ 02-07-2 022 ಶನಿವಾರದಂದು ಪ್ರಾಥಮಿಕ ಆರೋಗ್ಯ ಕೇಂದ್ರ ಘಟಕ ಮಂಡಘಟ್ಟದಲ್ಲಿ ವೈದ್ಯರಿಗೆ ಸನ್ಮಾನ ಕಾರ್ಯಕ್ರಮ ಕರ್ನಾಟಕ ಸಾವಿತ್ರಬಾಯಿ ಫುಲೆ ಶಿಕ್ಷಕಿಯರ ಸಂಘ ಶಿವಮೊಗ್ಗ ಇವರಿಂದ ಸಮಾರಂಭ ನಡೆಸಲಾಯಿತು. ಆಸ್ಪತ್ರೆಯ ವೈದ್ಯರಾದ ಶ್ರೀಯುತ ಸುರೇಶ್,l ಅಪ್ಪಾಜಿಗೌಡ ,ಹಾಗೂ ಸಿಬ್ಬಂದಿ ವರ್ಗದವರಾದ ಶ್ರೀಮತಿ ಪ್ರೇಮ, ಸುಮಾ, ರಂಗನಾಥ್, ಮುಂತಾದವರು *ಪಾಲ್ಗೊಂಡಿದ್ದರು. ಇವರಿಗೆ ಕರ್ನಾಟಕ *ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಮತಿ ರಾಧಾ ಪ್ರಭುಗೌಡ ಅವರು ವೈದ್ಯರ ದಿನಾಚರಣೆ ಪ್ರಯುಕ್ತContinue reading “ವೈದ್ಯರ ದಿನಾಚರಣೆ ಪ್ರಯುಕ್ತ ವೈದ್ಯರಿಗೆ ಸನ್ಮಾನ”

ವೈದ್ಯರಿಗೆ ಸನ್ಮಾನಿಸಿ ವೈದ್ಯರ ದಿನಾಚರಣೆ ಮಾಡಿದ ಶಿಕ್ಷಕಿಯರ ಸಂಘ

ವೈದ್ಯ ನಾರಾಯಣೋ ಹರಿ,ವೈದ್ಯರ ದಿನಾಚರಣೆಯ ಪ್ರಯುಕ್ತ ದಿ‌ನಾಂಕ 02-07-22 ಶನಿವಾರದಂದು ವೈದ್ಯರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಮಾಸಿಕ ಸಭೆಯನ್ನು ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘ ಜಿಲ್ಲಾಘಟಕ ರಾಮನಗರ ವತಿಯಿಂದ ನಡೆಸಲಾಯಿತು.ಈ ಕಾರ್ಯಕ್ರಮದಲ್ಲಿ ವೈದ್ಯರಾದ ಡಾ/ಜಮೀಲರವರು “ಆರೋಗ್ಯ” ದ ಬಗ್ಗೆ ಅತ್ಯುತ್ತಮ ವಾದ 4 ಟಿಪ್ಸ್ ತಿಳಿಸಿದರು.ಹಾಗೂ ದಿನಚರಿಯ ಆಹಾರ ಕ್ರಮಹೇಗಿರಬೇಕೆಂಬ ಬಗ್ಗೆಅತ್ಯಂತ ಸವಿಸ್ತಾರವಾಗಿ ತಿಳಿಸಿದರು.ವೈದ್ಯ ದಂಪತಿಗಳಾದ ಡಾ| ಮುಜಾಹಿದುಲ್ಲಾ ಶರೀಫ್ ಹಾಗೂ ಡಾ /ಸಯ್ಯಿದಾ ಬಾನು “ಆರೋಗ್ಯವೇ ಭಾಗ್ಯ” ಇಂದಿನ ಒತ್ತಡಸಹಿತ ಜೀವನದಲ್ಲಿ ನಾವು ಹೇಗೆContinue reading “ವೈದ್ಯರಿಗೆ ಸನ್ಮಾನಿಸಿ ವೈದ್ಯರ ದಿನಾಚರಣೆ ಮಾಡಿದ ಶಿಕ್ಷಕಿಯರ ಸಂಘ”

ನೂತನ ಅಧಿಕಾರಿಗಳಿಗೆ ಸ್ವಾಗತಿಸಿ ಅಭಿನಂದಿಸಿದ ಫುಲೆ ಶಿಕ್ಷಕಿಯರು

ಗುಬ್ಬಿ-ಮೇ 21, 2022ರ ಶನಿವಾರದಂದು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ರಾಜ್ಯಘಟಕ-ಧಾರವಾಡ,ಜಿಲ್ಲಾಘಟಕ- ತುಮಕೂರು, ಗುಬ್ಬಿ ತಾಲೂಕು ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಾಲೂಕಿಗೆ ನೂತನವಾಗಿ ಆಗಮಿಸಿದ ಬಿಆರ್ಸಿಯವರಾದ ಶ್ರೀಯುತ ಮಧುಸೂದನ್ ಸರ್ ಹಾಗೂ ಅಕ್ಷರ ದಾಸೋಹದ ನಿರ್ದೇಶಕರಾದ ಶ್ರೀಯುತ ಜಗದೀಶ್ ಸರ್ ರವರಿಗೆ ಸ್ವಾಗತವನ್ನು ಕೋರಿ ಅಭಿನಂದಿಸಿದರು ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶ್ರೀಯುತ ಮಧುಸೂದನ್ ಸರ್ ರವರು ಸಂಘದ ಬಗ್ಗೆ ನನಗೆ ತಿಳಿದಿದೆ. ಸಂಘವು ರಚನೆಯಾಗಿ ಮೂರು ವರ್ಷಗಳಲ್ಲೇ ರಾಜ್ಯದಾದ್ಯಂತ ಉತ್ತಮ ಹೆಸರು ಗಳಿಸಿದೆ.. ಹೀಗೆಯೇContinue reading “ನೂತನ ಅಧಿಕಾರಿಗಳಿಗೆ ಸ್ವಾಗತಿಸಿ ಅಭಿನಂದಿಸಿದ ಫುಲೆ ಶಿಕ್ಷಕಿಯರು”

ಮೊದಲಿಗೆ ಶಿಕ್ಷಕಿಯಾಗಿದ್ದ ಪ್ರತಿಭ. ಆರ್ ಇಂದು ತಾಲ್ಲೂಕು ದಂಡಾಧಿಕಾರಿಗಳಾಗಿ ನೇಮಕ-ಅಭಿನಂದಿಸಿ ಬೀಳ್ಕೊಟ್ಟ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರು

ತುಮಕೂರು ಮೇ04-ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ರಾಜ್ಯಘಟಕ-ಧಾರವಾಡ, ಜಿಲ್ಲಾ- ಘಟಕ ತುಮಕೂರು ವತಿಯಿಂದ ಉಪನಿರ್ದೇಶಕರ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ತುಮಕೂರು(ದ) ಇಲ್ಲಿ ವಿಜ್ಞಾನ ವಿಷಯದ ಪರಿವೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀಮತಿ ಪ್ರತಿಭಾ ಆರ್.ರವರು ರವರು ತಹಸೀಲ್ದಾರರಾಗಿ ನೇಮಕಗೊಂಡಿದ್ದರಿಂದ ಅವರಿಗೆ ಅಭಿನಂದಿಸಿ ಗೌರವಿಸಲಾಯಿತು. ಶ್ರೀಮತಿ ಪ್ರತಿಭಾ ರವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಪ್ರಾರಂಭದಲ್ಲಿ ಸರ್ಕಾರಿ ಸೇವೆಗೆ ಸೇರಿ ನಂತರದಲ್ಲಿ ಪ್ರೌಢಶಾಲಾ ಶಿಕ್ಷಕಿಯಾಗಿ ಬಡ್ತಿಯಾಗಿ, ಸರ್ಕಾರಿ ಶಿಕ್ಷಕರ ತರಬೇತಿ ಕಾಲೇಜಿನ ಉಪನ್ಯಾಸಕರಾಗಿ ಪ್ರಸ್ತುತ ತುಮಕೂರಿನ ಉಪ ನಿರ್ದೇಶಕರContinue reading “ಮೊದಲಿಗೆ ಶಿಕ್ಷಕಿಯಾಗಿದ್ದ ಪ್ರತಿಭ. ಆರ್ ಇಂದು ತಾಲ್ಲೂಕು ದಂಡಾಧಿಕಾರಿಗಳಾಗಿ ನೇಮಕ-ಅಭಿನಂದಿಸಿ ಬೀಳ್ಕೊಟ್ಟ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರು”