ಲತಾ ಮುಳ್ಳೂರ ಮನವಿಗೆ ಸ್ಪಂದಿಸಿದ ಮಹಿಳಾ ಆಯೋಗ

ಧಾರವಾಡ ಅಕ್ಟೋಬರ್.13.2025 ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ (ರಿ) ಧಾರವಾಡ ಇದರ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ಲತಾ ಎಸ್ ಮುಳ್ಳೂರ್ ಅವರು ಇತ್ತೀಚೆಗೆ ಕೋಲಾರದ ಮಾಲೂರು ವ್ಯಾಪ್ತಿಯಲ್ಲಿ ಶಿಕ್ಷಕಿಯ ಮೇಲೆ ನಡೆದಿದ್ದ ಹಲ್ಲೆ ಉಲ್ಲೇಖಿಸಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಗೌರವಾನ್ವಿತ ಮಾನ್ಯ ಅಧ್ಯಕ್ಷರಿಗೆ ಪತ್ರ ಬರೆದಿದ್ದರು. ಕರ್ನಾಟಕ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕಿಯರ ಮೇಲೆ ಆಗುವ ದೌರ್ಜನ್ಯವನ್ನು, ಮಾನಸಿಕ ಹಾಗೂ ದೈಹಿಕ ಕಿರುಕುಳ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಲುContinue reading “ಲತಾ ಮುಳ್ಳೂರ ಮನವಿಗೆ ಸ್ಪಂದಿಸಿದ ಮಹಿಳಾ ಆಯೋಗ”

ಜುಲೈ-31ಕ್ಕೆ ಸಾವಿತ್ರಿಬಾಯಿ ಫುಲೆ ಚಲನಚಿತ್ರ ವಿಶೇಷ ಪ್ರದರ್ಶನ

ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ,ರಾಜ್ಯಘಟಕ-ಧಾರವಾಡ ಜಿಲ್ಲಾಘಟಕ- ತುಮಕೂರು ದಿನಾಂಕ 31.7. 2022 ರ ಭಾನುವಾರ ಬೆಳಗ್ಗೆ 8.30 ಗಂಟೆಗೆ ತುಮಕೂರು ನಗರದ ಎಂಜಿ ರಸ್ತೆಯಲ್ಲಿರುವ ಶ್ರೀಕೃಷ್ಣ ಚಿತ್ರಮಂದಿರದಲ್ಲಿ” ಭಾರತದ ಮೊದಲ ಮಹಿಳಾ ಶಿಕ್ಷಕಿ, ಅಕ್ಷರದವ್ವ ,ಮಾತೆ ಸಾವಿತ್ರಿಬಾಯಿ ಫುಲೆಯವರ ಜೀವನಾಧರಿತ “ಸಾವಿತ್ರಿಬಾಯಿ ಫುಲೆ” ಚಲನಚಿತ್ರದ ವಿಶೇಷ ಪ್ರದರ್ಶನವನ್ನು ಶ್ರೀ ಅಮೋಘ ಸಿದ್ದೇಶ್ವರ ಕ್ರಿಯೇಷನ್ಸ್ ರವರ ಸಹಭಾಗಿತ್ವದಲ್ಲಿ ಏರ್ಪಡಿಸಲಾಗಿರುತ್ತದೆ.ಸ್ವತಂತ್ರಪೂರ್ವದಲ್ಲಿ ಬ್ರಿಟಿಷ್ ಕಾಲದಲ್ಲಿದ್ದ ಮಹಿಳೆಯರ ಶೋಷಣೆಯ ಸ್ಥಿತಿಗತಿಗಳನ್ನ ಬಿಂಬಿಸುವಂತ,ಶೋಷಿತ,ಹಿಂದುಳಿದ ಸಮಾಜದ ದನಿಯಾಗಿದ್ದ ಮಾತೇ ಸಾವಿತ್ರಿಬಾಯಿ ಫುಲೆಯವರ ಸಮಗ್ರ ಜೀವನContinue reading “ಜುಲೈ-31ಕ್ಕೆ ಸಾವಿತ್ರಿಬಾಯಿ ಫುಲೆ ಚಲನಚಿತ್ರ ವಿಶೇಷ ಪ್ರದರ್ಶನ”

ಕರ್ನಾಟಕ ಸಾವಿತ್ರಿಬಾಯಿ‌ ಫುಲೆ ಶಿಕ್ಷಕಿಯರ ಸಂಘದ YOUTUBE CHANNEL

https://youtube.com/channel/UC5iITWHiMVcE7YblGh-l2wgಈ ಲಿಂಕ್ ಬಳಸಿ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ YOU TUBE ಚಾನೆಲ್ ಗೆ ತಪ್ಪದೇ ಎಲ್ಲರು subscribe ಬಟನ್ ಒತ್ತುವ ಮೂಲಕ SUBSCRIBERS ಆಗಿ,, ಸಪೋರ್ಟ್ ಮಾಡಿ, ಬೆಂಬಲ ನೀಡಿ. https://youtube.com/channel/UC5iITWHiMVcE7YblGh-l2wg

ಜುಲೈ-31ರಂದು ಸಾವಿತ್ರಿಬಾಯಿ ಫುಲೆ ಚಲನಚಿತ್ರ ಪ್ರದರ್ಶನ-ವಿದ್ಯಾರ್ಥಿಗಳಿಗೆ,ಶಿಕ್ಷಕ ಶಿಕ್ಷಕಿಯರಿಗೆ ಮಾನ್ಯ ಸಚಿವರಿಂದ ಉಚಿತ ಟಿಕೆಟ್ ವ್ಯವಸ್ಥೆ.

ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ). ರಾಜ್ಯ ಘಟಕ-ಧಾರವಾಡ ಜಿಲ್ಲಾಘಟಕ : ವಿಜಯನಗರ. ಅಕ್ಷರದವ್ವ ಮಾತೆ ಸಾವಿತ್ರಿಬಾಯಿ ಫುಲೆಯವರ ಜೀವನಾಧಾರಿತ ಚಲನಚಿತ್ರ ‘ರಾಷ್ಟ್ರ ಪ್ರಶಸ್ತಿ ವಿಜೇತೆ ಜನಪ್ರಿಯ ನಟಿ ತಾರಾ ಅವರು ಮಾತೇ ಸಾವಿತ್ರಿಬಾಯಿ ಫುಲೆ ಅವರ ಪಾತ್ರದಲ್ಲಿ ನಟಿಸಿರುವ. ಜನಪ್ರಿಯ ನಟ ಸುಚೇಂದ್ರ ಪ್ರಸಾದ ಅವರು ಜ್ಯೋತಿಬಾ ಫುಲೆ ಪಾತ್ರದಲ್ಲಿ ನಟಿಸಿರುವ, ಜನಪ್ರಿಯ ನಿರ್ದೇಶಕರಾದ ಶ್ರೀ ವಿಶಾಲರಾಜ್ ಅವರು ನಿರ್ದೇಶಿಸಿದ ಹಾಗೂ ಉತ್ತರ ಕರ್ನಾಟಕದ ಯಾದವಾಡದ ಶ್ರೀ ಬಸವರಾಜ ಭೂತಾಳ್ಳಿ ಅವರು ಪ್ರೊಡ್ಯೂಸರ ಆಗಿರುವContinue reading “ಜುಲೈ-31ರಂದು ಸಾವಿತ್ರಿಬಾಯಿ ಫುಲೆ ಚಲನಚಿತ್ರ ಪ್ರದರ್ಶನ-ವಿದ್ಯಾರ್ಥಿಗಳಿಗೆ,ಶಿಕ್ಷಕ ಶಿಕ್ಷಕಿಯರಿಗೆ ಮಾನ್ಯ ಸಚಿವರಿಂದ ಉಚಿತ ಟಿಕೆಟ್ ವ್ಯವಸ್ಥೆ.”

ಶಿಕ್ಷಕಿಯರ ಸಂಘಟನೆಗೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಪ್ರೋತ್ಸಾಹ

ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ-ಧಾರವಾಡಜಿಲ್ಲಾಘಟಕ- ವಿಜಯನಗರ, ತಾಲ್ಲೂಕು ಘಟಕ- ಹರಪನಹಳ್ಳಿ ಮಾ.28. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷರು.ಪ್ರಧಾನ ಕಾರ್ಯದರ್ಶಿಗಳು ಹಾಗೂ ಎಲ್ಲ ಪದಾಧಿಕಾರಿಗಳು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಭೇಟಿಮಾಡಿ ಅಧಿಕೃತವಾಗಿ ನೂತನ ತಾಲ್ಲೂಕು ಘಟಕದ ಬಗ್ಗೆ ಮಾಹಿತಿ ನೀಡಿದರು. ರಾಜ್ಯಾದ್ಯಂತ ಹೆಮ್ಮರವಾಗಿ ಬೆಳೆದಿರುವ ಮಹಿಳಾ ಶಿಕ್ಷಕಿಯರ ಸಂಘಟನೆ ಇದಾಗಿದ್ದು ಇದರಲ್ಲಿ ರಾಜ್ಯದ ಸರ್ಕಾರಿ,ಅನುದಾನಿತ,ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕಿಯರು ಒಳಗೊಂಡಿದ್ದು,ರಾಜ್ಯ ಘಟಕದ ಅನುಮೋದನೆಯೊಂದಿಗೆ ನಾವೆಲ್ಲರೂ ತಾಲ್ಲೂಕು ಘಟಕ ರಚನೆ ಮಾಡಿಕೊಂಡಿರುತ್ತೇವೆ.ಇದರಡಿ ನಾವೆಲ್ಲರೂ ಹಲವಾರುContinue reading “ಶಿಕ್ಷಕಿಯರ ಸಂಘಟನೆಗೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಪ್ರೋತ್ಸಾಹ”

ಶಿಕ್ಷಕಿಗೆ ಹಲ್ಲೆ,ಮಾಂಗಲ್ಯ ಸರ ಕಳವು-ಠಾಣೆಗೆ ದೂರು ಸಲ್ಲಿಸಿದ ಶಿಕ್ಷಕಿಯರ ಸಂಘ

ಸಾಗರ ಮಾ.25.ಕಳೆದ ಎರಡು ದಿನಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ ಶ್ರೀಮತಿ ಪ್ರಭಾವತಿ ಬ್ರಾಹ್ಮಣ ಮಂಚಾಲೆ ರವರು ಎಂದಿನಂತೆ ಬೆಳಿಗ್ಗೆ ಶಾಲೆಗೆ ತೆರಳುತ್ತಿರುವ ಸಂದರ್ಭದಲ್ಲಿ ಮಾರ್ಗ ಮದ್ಯದಲ್ಲಿ‌ ಅವರನ್ನು ಅಪರಿಚಿತ ವ್ಯಕ್ತಿಯೊಬ್ಬರು ಏಕಾಏಕಿ ಅಡ್ಡಗಟ್ಟಿ ಹಲ್ಲೆ ಮಾಡಿ ಕೊರಳಲ್ಲಿದ್ದ 50 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಅಪಹರಣ ಮಾಡಿದ್ದಾರೆ.ಈ ಸುದ್ದಿ ತಿಳಿದ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಸಾಗರ ತಾಲೂಕು ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಆಸ್ಪತ್ರೆಗೆContinue reading “ಶಿಕ್ಷಕಿಗೆ ಹಲ್ಲೆ,ಮಾಂಗಲ್ಯ ಸರ ಕಳವು-ಠಾಣೆಗೆ ದೂರು ಸಲ್ಲಿಸಿದ ಶಿಕ್ಷಕಿಯರ ಸಂಘ”

ಒಮ್ಮೆ ಬಯಸಿದ ಜಿಲ್ಲೆಗಳಿಗೆ ವರ್ಗಾವಣೆ ಕೊಡಿ- ಡಾ.ಲತಾ ಮುಳ್ಳೂರ ಸರ್ಕಾರಕ್ಕೆ ಮನವಿ

ಧಾರವಾಡ ಸೆ.25 ಹತ್ತು ಹಲವಾರು ವರ್ಷಗಳಿಂದ ತಮ್ಮ ಸ್ವಂತ ಜಿಲ್ಲೆ ತೊರೆದು,ತಮ್ಮ ತಂದೆ ತಾಯಿ ಬಂದು ಬಳಗ ಅಲ್ಲದೇ ಕುಟುಂಬಗಳನ್ನೇ ದೂರ ಮಾಡಿ ನೂರಾರು ಕಿಲೋ ಮೀಟರ್ ದೂರದ ಶಾಲೆಗಳಲ್ಲಿ ಮಕ್ಕಳಿಗೆ ಪಾಠ ಪ್ರವಚನ ಮಾಡುತ್ತಿರುವ ಸಾವಿರಾರು ಶಿಕ್ಷಕರಿದ್ದಾರೆ. ಅಂತಹ ಶಿಕ್ಷಕರ ಕೌಟುಂಬಿಕ ಬದುಕು ಶೋಚನೀಯ ಸ್ಥಿತಿ ತಲುಪಿದ್ದು,ಮಾನಸಿಕವಾಗಿ ಕುಗ್ಗಿಹೋಗಿರುತ್ತಾರೆ, ಗಂಡ ಹೆಂಡತಿಯರ ಸಂಬಂದ ಅನೇಕ ವಿಚ್ಚೇದನಗಳ ಕಡೆ ತಿರುಗಿ ಸಂಸಾರದಲ್ಲೂ ನೆಮ್ಮದಿ ಸಿಗದಂತಾಗಿದೆ..ಇಳಿವಯಸ್ಸಿನ ತಂದೆ ತಾಯಂದಿರನ್ನು ಸಹಾ ನೋಡಿಕೊಳ್ಳದ ಸ್ಥಿತಿ ಇದೆ. ಹೀಗೆ ಬೇರೆ ಬೇರೆContinue reading “ಒಮ್ಮೆ ಬಯಸಿದ ಜಿಲ್ಲೆಗಳಿಗೆ ವರ್ಗಾವಣೆ ಕೊಡಿ- ಡಾ.ಲತಾ ಮುಳ್ಳೂರ ಸರ್ಕಾರಕ್ಕೆ ಮನವಿ”