Founder

ಹೆಸರು – ಡಾ ಲತಾ ಎಸ್ ಮುಳ್ಳೂರ .
ಸಹಶಿಕ್ಷಕಿ. (ಶಾಲೆ.- ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಆಶ್ರಯ ಕಾಲನಿ ಸತ್ತೂರ. ಧಾರವಾಡ ಶಹರ್)
ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರು
ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್ (ರಿ) ನವದೆಹಲಿ, ಮತ್ತು ರಾಜ್ಯಾಧ್ಯಕ್ಷರು ,ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ರಾಜ್ಯ ಘಟಕ ಧಾರವಾಡ

ಕಿರು ಪರಿಚಯ:-

ಮಹಿಳಾ ಹೋರಾಟಗಾರ್ತಿ
*ಶಿಕ್ಷಕಿಯರ ಕಣ್ಮಣಿ. ಅತ್ತ್ಯುತ್ತಮ ಸಂಘಟಕಿ.ಶೈಕ್ಷಣಿಕ ಚಿಂತಕಿ,ಸಾಧಕಿ,ನೇರ,ದಿಟ್ಟ ಧೀಮಂತ ನಾಯಕಿ

ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರು, ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿರ ಫೆಡರೇಷನ್ (ರಿ) ನವದೆಹಲಿ, ಹಾಗೂ ಸ0ಸ್ಥಾಪಕ ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ರಾಜ್ಯ ಘಟಕ ಧಾರವಾಡ

ಡಾ.ಲತಾ.ಎಸ್.ಮುಳ್ಳೂರ

ಒಂದು ಜೀವವನ್ನು ಸೃಷ್ಟಿಮಾಡುವ ಶಕ್ತಿ ಮಹಿಳೆಗೆ ಇದೆ ಎಂದಾದರೆ, ಖಂಡಿತವಾಗಿ ಅವಳಲ್ಲಿ ಅನಂತವಾದ ಶಕ್ತಿ ಇದೆ ಎಂದರ್ಥ. ಮಾತೃ ಶಕ್ತಿ, ವಾತ್ಸಲ್ಯ, ಸಹನೆ, ಪ್ರೀತಿ, ತಾಳ್ಮೆ, ಆರೈಕೆ, ಸತ್ಕಾರ, ಸನ್ಮಾನ, ಸಾಂತ್ವನ ಗುಣಗಳು ಆಕೆಗೆ ಹುಟ್ಟಿನಿಂದಲೇ ಬೆಳೆಸಿಕೊಂಡು ಬಂದಿರುತ್ತದೆ. ಮಾನವನ ಸಂಸ್ಕೃತಿಯ ಇತಿಹಾಸದಲ್ಲಿ ಹೆಣ್ಣಿಗೆ ಪ್ರತ್ಯೇಕವಾದ ಸ್ಥಾನಮಾನ ಇದೆ. ಆದಿ ಸಮಾಜದ ಪರಿಕಲ್ಪನೆಯಲ್ಲಿ ತಾಯಿ ಮಕ್ಕಳನ್ನು ಗುರುತಿಸಿದ್ದಾರೆ ಮಗುವಿನ ಜನ್ಮಕ್ಕೆ ಕಾರಣರಾದ ತಂದೆಗಿಂತ ಹೆತ್ತ ತಾಯಿಯೊಡ ಗುರುತಿಸಲಾಗುತ್ತಿತ್ತು. ನಮ್ಮ ದೇಶದಲ್ಲೂ ಕೂಡ ಇಂದು ಸ್ತ್ರೀ ಸ್ವಾತಂತ್ರ್ಯ ಚಳುವಳಿಗಳು ನಡೆದು ಅವಳಿಗೆ ಸ್ವಾತಂತ್ರ್ಯ ಸಿಕ್ಕಿರಬಹುದು ಆದರೆ ಅವಳು ಹೋರಾಡಿದ ನಿಜಕ್ಕೂ ಶೋಚನೀಯ. ಸಮಾಜದಲ್ಲಿ ಇರುವ ಪರಿಸ್ಥಿತಿಗಳು, ಕಟ್ಟುಪಾಡುಗಳಿಗೆ ಮತ್ತು ಆಕೆಗೆ ಸಿಗುತ್ತಿರುವ ಪ್ರಾಧಾನ್ಯತೆಗಳಿಗೆ ಸರಿಯಾಗಿ ಅವಳಿಗೆ ಸ್ಥಾನಮಾನ ಸಿಗುತ್ತಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಹಿಳೆ ಪುರುಷರಿಗೆ ಸಮಾನಳು, ತನ್ನ ಜೀವನವನ್ನು ತಾನೇ ರೂಪಿಸಿಕೊಂಡಿರುವುದನ್ನು ನೋಡಬಹುದು. ನಮ್ಮ ದೇಶದಲ್ಲಿ ಕೌಟುಂಬಿಕ ಪದ್ಧತಿ, ಸಂಸ್ಕೃತಿ, ಸಂಸ್ಕಾರಗಳು, ಕುಟುಂಬ ನಿರ್ವಹಣೆ, ಆರೈಕೆ ಮಾಡುವ ಜವಾಬ್ದಾರಿ ಅನಾದಿ ಕಾಲದಿಂದಲೂ ನಿಭಾಯಿಸುತ್ತಲೇ ಬಂದಿದ್ದಾಳೆ. ಹಾಗಾಗಿ ಹೆಣ್ಣು ಭೂಮಿ ತೂಕದ ಆತ್ಮವಿಶ್ವಾಸ ನಿಷ್ಠೆ ಮತ್ತು ಸಹನೆಯನ್ನು ಹೊಂದಿರುತ್ತಾಳೆ ಹಾಗಾಗಿ ಹೆಣ್ಣನ್ನು ಭೂಮಿಗೆ ಹೋಲಿಸುತ್ತಾರೆ. ಇಂತಹ ಹೆಜ್ಜೆಯನ್ನು ನಮ್ಮ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರಾದ ಡಾ.ಲತಾ,ಎಸ್.ಮುಳ್ಳೂರ ಅವರದ್ದು. ನಮ್ಮ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಚುಕ್ಕಾಣಿಯನ್ನು ಹಿಡಿದು ರಾಜ್ಯಾಧ್ಯಕ್ಷರಾದಂತಹ ಡಾ.ಲತಾ.ಎಸ್. ಮುಳ್ಳೂರ ಅವರು ಇಂದು ರಾಷ್ಟ್ರಮಟ್ಟಕ್ಕೆ ಸಂಘಟನೆಯನ್ನು ವಿಸ್ತರಿಸಿದ್ದಾರೆ ಅಂದರೆ ಅವರ ಕಿರು ಪರಿಚಯವನ್ನು ನಾವು ಮಾಡಿ ಕೊಳ್ಳೋಲೇಬೇಕಾಗಿದೆ.

ಜನನ:

ಡಾ.ಲತಾ.ಎಸ್.ಮುಳ್ಳೂರ ಅವರು ಹೆಬ್ಬಳ್ಳಿಯ ಒಂದು ಅಪರೂಪದ ನೇಯ್ಗೆ ಕುಟುಂಬವೊಂದರಲ್ಲಿ ಶಂಕ್ರಪ್ಪ ಹಾಗೂ ಕಮಲಾವತಿ ಅವರ ದಂಪತಿಗಳ ಉದರದಲ್ಲಿ 20 - 2 - 1972 ರಲ್ಲಿ ಜನಿಸುತ್ತಾರೆ. ಇವರು ತಂದೆ ತಾಯಿಗಳ ಕೊನೆಯ ಅಪರೂಪದ ಮಗಳು. ಮನೆಗೆ ವಾರಸುದಾರನ ದಾರಿಯಲ್ಲಿ ಈ ದಂಪತಿಗಳು ಸತತವಾಗಿ ಐದು ಹೆಣ್ಣು ಮಕ್ಕಳನ್ನು ಹೇರುತ್ತಾರೆ. ನಂತರ ಈ ದಂಪತಿಗಳಿಗೆ ಜ್ಞಾನೋದಯವಾಗಿ ಹೆಣ್ಣು ಸಹ ಯಾರಿಗೂ ಕಡಿಮೆಯಲ್ಲ ಎಂಬುದನ್ನು ಅರಿತುಕೊಂಡು ಎಲ್ಲಾ ಹೆಣ್ಣು ಮಕ್ಕಳಿಗೂ ಒಳ್ಳೆಯ ಶಿಕ್ಷಣವನ್ನು ನೀಡುತ್ತಾರೆ. ಅವರಲ್ಲಿ ಕೊನೆಯ ಮಗಳೇ ಡಾಕ್ಟರ್ ಲತಾ ಮುಳ್ಳೂರ ಅವರು.

ವೃತ್ತಿ ಮತ್ತು ಸಂಘಟನೆ:

ಇವರು 30 - 8 -1994 ರಲ್ಲಿ ಸರ್ಕಾರಿ ಸೇವೆಗೆ ಸೇರಿರುತ್ತಾರೆ. ಇವರು ಮೊದಲಿನಿಂದಲೂ ಹೋರಾಟಗಾರ್ತಿ, ಅದ್ಭುತ ಮಹಿಳಾ ಶಕ್ತಿ, ಹೋರಾಟಗಾರ್ತಿ, ಮಹಿಳಾಮಣಿಗಳ ಸ್ಪೂರ್ತಿ, ಮಹಿಳೆಯರ ಪಾಲಿನ ಆಶಾಕಿರಣ ಎಂದರೆ ತಪ್ಪಾಗಲಾರದು. ಇವರು ಸರಕಾರಿ ಸೇವೆಯಲ್ಲಿ ಸೇವೆ ಸಲ್ಲಿಸುತ್ತಿದ್ದು 25 ವರ್ಷಗಳು ಪೂರ್ಣಗೊಂಡಿದ್ದು ಇವರು ವೆಚ್ಚ ರಹಿತ ವಾದಂತಹ ಪಾಟೋಪಕರಣ ಗಳನ್ನು ರಚಿಸಿ ಉತ್ತಮ ನಿದರ್ಶನ ನೀಡುವಲ್ಲಿ ಎತ್ತಿದ ಕೈ. ಇವರು ಸತತವಾಗಿ 10 ವರ್ಷ ಸಮಾಜಸೇವೆಯನ್ನು ಮಾಡಿದ್ದಾರೆ. ಧಾರವಾಡನಲ್ಲಿ ಬಿಆರ್ ಪಿಯಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಧಾರವಾಡ ಶಹರದ ಅಧ್ಯಕ್ಷರಾಗಿ ಜಿಲ್ಲಾ ಉಪಾಧ್ಯಕ್ಷರಾಗಿ ಮಹಿಳಾ ವೇದಿಕೆಯ ಪ್ರಧಾನ ಸಂಚಾಲಕರಾಗಿ, ಸಹಕಾರಿ ಪತ್ತಿನಲ್ಲಿ ಮೂರು ಬಾರಿ ನಿರ್ದೇಶಕಿಯಾಗಿ ಅದರಲ್ಲೂ ಮಹಿಳೆಯರಿಗಾಗಿ 2019ರಲ್ಲಿ ಮಹಿಳಾ ಸಮಾನತೆ ಮಹಿಳಾ ಮೀಸಲಾತಿ ಶಿಕ್ಷಕೀಯರ ಮೇಲೆ ಆಗುತ್ತಿರುವ ಮಾನಸಿಕ ಹಿಂಸೆ ದೌರ್ಜನ್ಯ ಶಿಕ್ಷಕಿಯರ ಬೇಕು ಬೇಡಿಕೆಗಳನ್ನು ಈಡೇರಿಸುವ ದೃಷ್ಟಿಯಲ್ಲಿ ದೇಶದ ಮೊದಲ ಶಿಕ್ಷಕಿ ಆಗಿರುವಂತಹ ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ ಸಂಘಟನೆಯೊಂದಿಗೆ ಎಲ್ಲಾ ಮಹಿಳೆಯರನ್ನು ಸಂಘಟಿಸಿ ಮಹಿಳಾ ನಾಯಕತ್ವ ಹಾಗೂ ಮಹಿಳಾ ಸಬಲೀಕರಣ ಹಾಗೂ ಸರಕಾರಿ ಹಾಗೂ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲ್ಲಿ ವಿವಿಧ ಧ್ಯೇಯೋದ್ದೇಶಗಳನ್ನು ಹೊತ್ತುಕೊಂಡು ಉತ್ತಮ ಶಿಕ್ಷಣ, ನೀಡುವಲ್ಲಿ ಶಿಕ್ಷಕಿಯರ ಪಾತ್ರ ಕಾರ್ಯಾಗಾರ ಮಾಡುವ ಉದ್ದೇಶ. ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ ) ರಾಜ್ಯ ಘಟಕ ಧಾರವಾಡ ನಲ್ಲಿ ಸ್ಥಾಪಿಸಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾಗಿ ರಾಜ್ಯದಾದ್ಯಂತ ಮಹಿಳಾ ಶಿಕ್ಷಕಿಯರಲ್ಲಿ ಸಂಚಲನ ಮೂಡಿಸಿದ ವೀರ ಮಹಿಳೆ ಡಾಕ್ಟರ್ ಲತಾ ಮುಳ್ಳೂರ ಅವರು. ಇವರು ಕೇವಲ ಮೂರು ವರ್ಷದಲ್ಲಿ ಕರ್ನಾಟಕದ ಶೇಕಡಾ 90ರಷ್ಟು ಜಿಲ್ಲೆಗಳಲ್ಲಿ ಹಾಗೂ ತಾಲೂಕುಗಳಲ್ಲಿ ಕರ್ನಾಟಕ ರಾಜ್ಯ ಸಾವಿತ್ರಿಬಾಯಿಪುಲೆ ಘಟಕಗಳನ್ನು ರಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಯಶಸ್ಸಿಗೆ ಎಲ್ಲಾ ಪದಾಧಿಕಾರಿಗಳು ಹಾಗೂ ಶಿಕ್ಷಕಿಯರ ಹೊಮ್ಮನಸು ಕಾರಣ ಎಂದು ಹೇಳಿದರೆ ತಪ್ಪಾಗಲಾರದು. ಮೂರು ವರ್ಷದಲ್ಲಿ ಪ್ರಸ್ತುತ ಸರ್ಕಾರದಿಂದ ಹಲವು ಬೇಡಿಕೆಗಳನ್ನು ಈಡೇರಿಸಿರುವುದು ತುಂಬಾ ಹೆಮ್ಮೆಯ ವಿಷಯ. ಒಂದು ಕಾರ್ಯ ಯಶಸ್ವಿಯಾಗಲು ಡಾಕ್ಟರ್ ಲತಾ ಮುಳ್ಳೂರ ಮೇಡಂ ಅವರ ಸತತ ಪ್ರಯತ್ನ ಹಾಗೂ ಸಾವಿತ್ರಿಬಾಯಿ ಫುಲೆ ಸಂಘಟನೆಯ ಒಗ್ಗಟ್ಟಿನಿಂದ ಮಾತ್ರ ಸಾಧ್ಯ ಎಂದು ಹೇಳಬಹುದು. ಇವರು ಮಾಡಿರುವ ಸಮಾಜ ಸೇವೆ. ಶೈಕ್ಷಣಿಕ ಸೇವೆ ಗುರುತಿಸಿ ಹಲವಾರು ಸಂಘ ಸ0ಸ್ಥೆಗಳಿಂದ ತಾಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗೆ ಹಲವಾರು ಪ್ರಶಸ್ತಿಗಳು ಬಂದಿವೆ. ಮಹಿಳಾ ಶಿಕ್ಷಕಿಯರಿಗೆ ಪ್ರೋತ್ಸಾಹ ನೀಡುತ್ತ ಧೈರ್ಯ ತುಂಬುತ್ತ ಸಮಸ್ತ ಮಹಿಳಾ ಶಿಕ್ಷಕಿಯರ ಪ್ರೀತಿಗೆ ಪಾತ್ರರಾಗಿದ್ದಾರೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘಟನೆಗೆ ಪ್ರೋತ್ಸಾಹಿಸುತ್ತಿರುವ ಸಮಸ್ತ ಗುರು ಬಳಗಕ್ಕೆ ಧನ್ಯವಾದಗಳು.ಈ ಒಂದು ಸಂಘಟನೆ ಬರೀ ಸನ್ಮಾನ ಸತ್ಕಾರ ಹೆಣ್ಣುಮಕ್ಕಳ ಪರವಾಗಿ ಹೋರಾಟ ಇಷ್ಟಕ್ಕೆ ಮಾತ್ರ ಸೀಮಿತವಾಗಿರದೆ ಒಂದು ಸಂಘಟನೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆಯನ್ನು ಕೊಡುತ್ತಾರೆ. ಸಾವಿತ್ರಿಬಾಯಿ ಫುಲೆಯವರು ಶಿಕ್ಷಣಕ್ಕಾಗಿ ಬ್ರಿಟಿಷರ ಕಾಲದಲ್ಲಿ ಭಾರತದ ಪ್ರಪ್ರಥಮ ಮಹಿಳಾ ಶಿಕ್ಷಕಿಯಾಗಿ ನಾನಾರೀತಿಯ ಅಡೆತಡೆಗಳು ಬಂದರೂ ಅವರು ಹೋಗುವಾಗ ದಾರಿಯಲ್ಲಿ ಹೊಡೆದರು ಆದರೆ ಸಾವಿತ್ರಿಬಾಯಿ ಫುಲೆ ಹೆದರದೆ ಶಾಲೆಗೆ ಹೋಗಿ ಸೀರೆಯನ್ನು ಬದಲಾಯಿಸಿಕೊಂಡು ದೀನದಲಿತರಿಗೆ ಮಹಿಳೆಯರಿಗೆ ಶಿಕ್ಷಣವನ್ನು ಕೊಡುತ್ತಿದ್ದರು. ಒಂದು ಕಾಲದಲ್ಲಿ ಪುರುಷಪ್ರಧಾನ ದೇಶದಲ್ಲಿಯೂ ಸಹ ಸಾವಿತ್ರಿಬಾಯಿ ಅವರಿಗೆ ಪ್ರಾಧ್ಯಾನತೆ ಸಿಗದಿದ್ದರೂ ಸಹ ಅವರು ಹೆದರದೆ ತನ್ನ ಛಲವನ್ನು ಬಿಡದೆ ತನ್ನ ಗುರುಗಳು ಹಾಗೂ ಪತಿಯಾದ ಅಂತಹ ಜ್ಯೋತಿಬಾಫುಲೆಯವರು ಒಂದಿಗೆ 14 ಶಾಲೆಗಳನ್ನು ತೆರೆದರು. ಕರ್ನಾಟಕ ರಾಜ್ಯ ಸಾವಿತ್ರಿಬಾಯಿಪುಲೆ ಸಂಘ ಹುಟ್ಟಿದ ಮೇಲೆ ರಾಜ್ಯದಾದ್ಯಂತ ಸಾವಿತ್ರಿಬಾಯಿ ಪುಲೆಯವರ ಜನ್ಮ ದಿನವನ್ನು ಜನವರಿ 3 ರಂದು ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಆಚರಿಸುವಂತೆ ಆದೇಶ ಹೊರಡಿಸಲಾಯಿತು. ಆ ತಾಯಿ ಮಾಡಿದ ತ್ಯಾಗ ಬಲಿದಾನ ಎಲ್ಲೆಡೆ ಈಗ ಪೂಜಿಸಿ ನಮಿಸು ವಂತಾಯಿತು. ಇದಕ್ಕೆ ಕಾರಣ ನಮ್ಮ ಸಂಘಟನೆ ಎಂದು ಹೆಮ್ಮೆಯಿಂದ ಹೇಳಬಲ್ಲೆ. ಸಾವಿತ್ರಿಬಾಯಿ ಫುಲೆಯವರು ನಡೆದು ಬಂದ ದಾರಿಯಲ್ಲಿ ನಮ್ಮ ಸಾವಿತ್ರಿಬಾಯಿಪುಲೆ ಸಂಘದಿಂದ ಪ್ರತಿಯೊಂದು ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಶೈಕ್ಷಣಿಕ ಕಾರ್ಯಾಗಾರಗಳನ್ನು ಹಮ್ಮಿಕೊಂಡಿದ್ದಾರೆ. ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಆಯೋಜಿಸಿದ ಶೈಕ್ಷಣಿಕ ಕಾರ್ಯಾಗಾರ ಹಾಗೂ ಉಪನ್ಯಾಸ ಈ ಕೆಳಗಿನಂತಿವೆ....

1) ಗುಣಮಟ್ಟದ ಶಿಕ್ಷಣದಲ್ಲಿ ಶಿಕ್ಷಕಿಯರ ಪಾತ್ರ.
2) ಶಿಕ್ಷಣದ ಸಬಲೀಕರಣದಲ್ಲಿ ಮಹಿಳಾ ಶಿಕ್ಷಕಿಯರ ಪಾತ್ರ.
3)ಗುಣಾತ್ಮಕ ಶಿಕ್ಷಣ ಹಾಗೂ ಮಹಿಳಾ ಶಿಕ್ಷಕಿಯರು.
4)ಬೋಧನೋಪಕರಣಗಳು ಮತ್ತು ಕ್ರಿಯಾಶೀಲ ಚಟುವಟಿಕೆಯಲ್ಲಿ ಶಿಕ್ಷಕಿಯರ ಪಾತ್ರ.
5)ನಲಿಕಲಿ ತರಗತಿ ನಿರ್ವಹಣೆಯಲ್ಲಿ ಶಿಕ್ಷಕಿಯರ ಪಾತ್ರ.
6) ದೈಹಿಕ ಶಿಕ್ಷಣ ಮತ್ತು ಶಿಕ್ಷಕಿಯರು ಎದುರಿಸುತ್ತಿರುವ ಸಮಸ್ಸೆಗಳು.
7) ಚಟುವಟಿಕೆಗಳ ನಿರ್ವಹಣೆಯಲ್ಲಿ ಶಿಕ್ಷಕಿಯರ ಪಾತ್ರ.
8)ಸಹ ಪಠ್ಯದಲ್ಲಿ ಸಹ ಶಿಕ್ಷಕಿಯರು.
9)ನೀರೆಯರು ಮತ್ತು ನೀತಿ ಶಿಕ್ಷಣ ಹಾಗೂ ಮೌಲ್ಯ ಶಿಕ್ಷಣ.
10)ಶಿಕ್ಷಕಿಯರ ಮಮತೆಯ ಮಡಿಲಲ್ಲಿ ಶಿಕ್ಷಣ.
11)ಶಿಕ್ಷಣದ ಮುಂಚೂಣಿಯಲ್ಲಿ ಶಿಕ್ಷಕಿಯರ ಪಾತ್ರ.
12)ಶೈಕ್ಷಣಿಕ ಆಡಳಿತದಲ್ಲಿ ನಾರಿಮಣಿಯರ ನಡೆ.
13)ಮಹಿಳಾ ಶಿಕ್ಷಕಿಯರು ಮತ್ತು ಮಹಿಳಾ ಕಾನೂನು.
14)ಮಹಿಳೆಯರ ಮೀಸಲಾತಿ ಮತ್ತು ಶಿಕ್ಷಣ.
15)ಮಹಿಳೆಯರ ಆತ್ಮ ಗೌರವ ರಕ್ಷಣೆಯಲ್ಲಿ ಶಿಕ್ಷಣ.
16)ಮಹಾಮಾರಿ ರೋಗಗಳ ನಿರ್ಮೂಲನೆಯಲ್ಲಿ ನೀರೆಯರು.
17)ಭಾರತೀಯ ಸಾಂಪ್ರದಾಯಗಳನ್ನು ಸ0ರಕ್ಷಣೆ ಮಾಡುವಲ್ಲಿ ಮಹಿಳಾ ಶಿಕ್ಷಕಿಯರ ಪಾತ್ರ.
18)ಶಿಕ್ಷಕಿಯ ಎರಡು ಕಣ್ಣುಗಳಾಗಿ ಕುಟುಂಬದ ನಿರ್ವಹಣೆ ಮತ್ತು ಶಿಕ್ಷಣದ ಹೊಣೆ.
19)ಶಾಲಾ ಸ್ವಚ್ಛತೆ ಹಾಗೂ ತೋಟಗಾರಿಕೆ.
20) ಪ್ರೌಢ ಶಾಲೆ ವಿದ್ಯಾರ್ಥಿನಿಯರಿಗೆ ಸಂರಕ್ಷಣೆ, ಹಾಗೂ ತಿಳುವಳಿಕೆ.
21)ಓದುವ ಹವ್ಯಾಸ ಹೆಚ್ಚಿಸುವಲ್ಲಿ ಶಿಕ್ಷಕಿಯರ ಪಾತ್ರ. ಶಿಕ್ಷಣ ಕ್ಷೇತ್ರದಲ್ಲಿ ಹತ್ತು ಹಲವಾರು ಧ್ಯೇಯೋದ್ದೇಶಗಳನ್ನು ಹೊಂದಿರುವುದರ ಜೊತೆಗೆ ಮಹಿಳೆ ಬರೀ ಮನೆಯಲ್ಲಿ ಕುಳಿತು ಸಂಸಾರವನ್ನು ನಿಭಾಯಿಸುವ ತಾಕತ್ತು ಒಂದೆಡೆಯಾದರೆ ಹೊರಗೆ ವಿಶ್ವವೇ ಬೆರಗಾಗುವಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಾ ಮುನ್ನಡೆಯುತ್ತಿದ್ದಾರೆ. ಕವಿತಾ ವಿದ್ಯೆಗಳಿಗೆ ಸಾರವಾಗಿ ಅಂತರಿಕ್ಷಯಾನ, ದೇಶದ ರಕ್ಷಣಾ ಮನೆಯೇ ಆರ್ಥಿಕ ಸಂಸ್ಥೆಗಳಲ್ಲಿ ಅತ್ಯುನ್ನತ ಸ್ಥಾನ, ಕಾರ್ಖಾನೆಗಳ ಸ್ಥಾಪನೆ ನಿರ್ವಹಣೆಯಿಂದ ಹಿಡಿದು ಅನಕ್ಷರಸ್ಥರನ್ನು ಕೈಹಿಡಿದು ಮೇಲೆತ್ತಿ ಒಂದಲ್ಲ ಒಂದು ನಿಟ್ಟಿನಲ್ಲಿ ಕೆಲ ಹೊತ್ತು ಮುನ್ನಡೆಯಲು ಹಲವಾರು ಮಹಿಳೆಯರು ಪ್ರೇರಕರಾಗಿದ್ದಾರೆ. "ಹೆಣ್ಣಾದರೇನು ಹಂಗಿನ ಅನ್ನಕ್ಕಿಂತ ಸ್ವಂತ ದುಡಿಮೆ ಗಂಜಿ ಮೇಲು!" ಎಂದು ಎಲ್ಲಾ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳು ಮುನ್ನಡೆ ಸಾಧಿಸುತ್ತಿದ್ದಾರೆ. ಹೆಣ್ಣು ನೆಲದ ಮೇಲೆ ಅಲ್ಲ ಅಂತರಿಕ್ಷಕ್ಕೆ ಹಾರಿ ತನ್ನ ಗುರಿ ಆಕಾಶಕ್ಕೆ ಮಾತ್ರ ಸೀಮಿತ ಅಲ್ಲ ಇನ್ನು ಎತ್ತರದಲ್ಲೇ ಎಂದು ಸಾಬೀತು ಪಡಿಸುವಲ್ಲಿ ನಮ್ಮ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ)ರಾಜ್ಯ ಘಟಕ ಧಾರವಾಡ ದ ರಾಜ್ಯಾಧ್ಯಕ್ಷರಾದ ಡಾಕ್ಟರ್. ಲತಾ. ಎಸ್ ಮುಳ್ಳೂರ ಅವರೇ ಸಾಕ್ಷಿ. ನಮ್ಮ ಸಂಘಟನೆ ನಮಗೆ ಹೆಮ್ಮೆ, ಬಲ. ಸಮಸ್ತ ಮಹಿಳಾ ಶಿಕ್ಷಕಿಯರ ಕನಸನ್ನು ನನಸು ಮಾಡುವಲ್ಲಿ ದಾಪುಗಾಲಿಟ್ಟಿದ್ದಾರೆ ನಮ್ಮ ರಾಜ್ಯಾಧ್ಯ ಕ್ಷರು ಪ್ರತಿಯೊಬ್ಬ ಮಹಿಳೆ ನಾಯಕತ್ವಗುಣ ಹೊಂದಬೇಕು ಮಹಿಳಾ ಸಬಲೀಕರಣ ವಾಗಬೇಕು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂಬುದು ಇವರ ಆಸೆ.

ಸ್ವ ವಿವರ. ( BIODATA)

ಹೆಸರು – ಡಾ ಲತಾ ಎಸ್ ಮುಳ್ಳೂರ .
ಸಹಶಿಕ್ಷಕಿ. (ಶಾಲೆ.- ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಆಶ್ರಯ ಕಾಲನಿ ಸತ್ತೂರ. ಧಾರವಾಡ ಶಹರ್)
ಸಂಸ್ಥಾಪಕ ರಾಜ್ಯಾಧ್ಯಕ್ಷರು. ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ರಾಜ್ಯ ಘಟಕ ಧಾರವಾಡ

ಜನ್ಮ ದಿನಾಂಕ- 20 2 1972

ಸ್ವಂತ ಊರು – ಧಾರವಾಡ

ವೃತ್ತಿ – ಸಹ ಶಿಕ್ಷಕಿ, ಸರ್ಕಾರಿ ನೌಕರಿ (ಶಿಕ್ಷಣ ಇಲಾಖೆ)

ಸೇವೆಗೆ ಸೇರಿದ ದಿನಾಂಕ- 31 8 1994

ಒಟ್ಟು ಸೇವೆ – 28 ವರ್ಷ

ತಂದೆ – ದಿ. ಶಂಕ್ರಪ್ಪ

ತಾಯಿ – ದಿ. ಕಮಲಾವತಿ ಇವರ ಮಗಳು

ಮನೆ ವಿಳಾಸ – ಶ್ರೀಮತಿ ಲತಾ ಎಸ್ ಮುಳ್ಳೂರ,
ಯಾಲಕ್ಕಿ ಶೆಟ್ಟರ ಕಾಲೋನಿ, CMDR ಆಫೀಸ್ ಹತ್ತಿರ ಚಾಲುಕ್ಯ ಬಡಾವಣೆ,
ಫ್ಲಾಟ್ ನಂಬರ್ 110/111
4ನೇ ಅಡ್ಡರಸ್ತೆ, ಧಾರವಾಡ

ಪ್ರಶಸ್ತಿ ಪುರಸ್ಕಾರಗಳು

  1. ತಾಲೂಕು ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ.
  2. ಶಿಕ್ಷಕರ ಕಲ್ಯಾಣ ನಿಧಿಯಿಂದ ಅತ್ಯುತ್ತಮ ಶಿಕ್ಷಕಿ ಜಿಲ್ಲಾಮಟ್ಟದ ಪ್ರಶಸ್ತಿ (2004- 2005)
  3. ಕ್ಲಸ್ಟರ್ ಮಠದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಅಮ್ಮಿನ ಬಾವಿ ಕ್ಲಸ್ಟರ್
  4. (ಶ್ರೀ ಬರಗೂರ ರಾಮಚಂದ್ರಪ್ಪನವರಿಂದ) ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಬ್ಬನ ಉದ್ಯಾನವನ ಬೆಂಗಳೂರು, ರಂಗಸ್ನೇಹ 2000 ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ನನ್ನ ತಂಗಿಗೊಂದು ಗಂಡು ಕೊಡಿ ಪ್ರಥಮ ಸ್ಥಾನ ರಾಜ್ಯಮಟ್ಟದ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಬಂದಿದೆ.
  5. ಧಾರವಾಡ ಗ್ರಾಮೀಣದಲ್ಲಿ ಸನ್ಮಾನ್ಯ ಚಂದ್ರಕಾಂತ ಬೆಲ್ಲದ ಅವರಿಂದ ಪ್ರಶಸ್ತಿ ಸ್ವೀಕಾರ ಕಲಾಜಾಥ ಕಾರ್ಯಕ್ರಮ ಯಶಸ್ವಿ ಅತ್ಯುತ್ತಮ ಕಲಾವಿದೆ.
  6. ಚಿಣ್ಣರ ಮೇಳ ದ ಅತ್ಯುತ್ತಮ ಸಂಪನ್ಮೂಲ ವ್ಯಕ್ತಿ ಪ್ರಶಸ್ತಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ವಿ ಎಂ ಪಾಟೀಲ ಅವರಿಂದ.
  7. ಜಾಗೃತಿ ಬೀದಿ ನಾಟಕ ರಾಜ್ಯ ಮಟ್ಟದಲ್ಲಿ ತೃತೀಯ ಸ್ಥಾನ ಅತ್ಯುತ್ತಮ ಕಲಾವಿದೆ ಪ್ರಶಸ್ತಿ.
  8. ನವೆಂಬರ್ 2005ರಲ್ಲಿ ಸುವರ್ಣ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಗುರುತಿಸಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಧೀಮಂತ ಪ್ರಶಸ್ತಿ ನೀಡಿ ಗೌರವಿಸಿದೆ.
  9. ಅಮರ ಕಲಾವಿದ ಸಫ್ದರ್ ಹಾಶ್ಮಿ ಸ್ಮಾರಕ ಸಮುದಾಯ ಹುಬ್ಬಳ್ಳಿ ಧಾರವಾಡ ಘಟಕದ ವತಿಯಿಂದ ಅತ್ಯುತ್ತಮ ಕಲಾವಿದೆ ಪ್ರಶಸ್ತಿ(2000- 2001ರಲ್ಲಿ)
  10. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕ್ರೀಡಾಕೂಟದಲ್ಲಿ ಜಾನಪದ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ (2000-2001)
  11. ಡಾಕ್ಟರ್ ಎಸ್ ರಾಧಾಕೃಷ್ಣನ್ ಅವರ ಸ್ಮರಣಾರ್ಥವಾಗಿ ಎಚ್ ನರಸಿಂಹಯ್ಯನವರ ಸವಿನೆನಪಿಗಾಗಿ ಶಿಕ್ಷಕರ ದಿನಾಚರಣೆ ಅಂಗವಾಗಿ ನಡೆದ ರಾಜ್ಯಮಟ್ಟದ ಗುರುವಂದನಾ ಕಾರ್ಯಕ್ರಮ ದಡಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಪತ್ರಕರ್ತರ ವೇದಿಕೆಯಿಂದ ರಾಜ್ಯಮಟ್ಟದ 2005ರ ಜನಪ್ರಿಯ ಶಿಕ್ಷಕಿ ಪ್ರಶಸ್ತಿ ಬಂದಿದೆ.
  12. 2007 -08 ರಲ್ಲಿ ವಿಶ್ವ ಮಹಿಳಾ ದಿನಾಚರಣೆ ನಿಮಿತ್ಯ ಯುವ ಮಂಟಪದಿಂದ ಮಹಿಳಾ ಸಾಧಕಿ ಪ್ರಶಸ್ತಿ.
  13. 2008-0 9ರಲ್ಲಿ ಶಿಕ್ಷಕರ ದಿನಾಚರಣೆಯಂದು ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯಿಂದ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಬಂದಿದೆ.
  14. 2008 2009ರಲ್ಲಿ ಲಯನ್ಸ್ ಕ್ಲಬ್ ಧಾರವಾಡ ವತಿಯಿಂದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಬಂದಿದೆ.
  15. ರೋಟರಿ ಕ್ಲಬ್ ವತಿಯಿಂದ ಶಿಕ್ಷಣ ಇಲಾಖೆಯಲ್ಲಿ ಅತ್ಯುತ್ತಮ ಸೇವೆಗೈದವರಿಗೆ ಪ್ರಶಸ್ತಿ ಪ್ರದಾನ
    ಸೆಪ್ಟೆಂಬರ್ 8 INTERNATIONAL LITERACY DAY ನಿಮಿತ್ಯ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಿದರು.
  16. 2016ರಲ್ಲಿ ನ್ಯಾಷನಲ್ ಬಿಲ್ಡರ್ ಅವಾರ್ಡ್ ಬಂದಿದೆ.
  17. ಗ್ಲೋಬಲ್ ಪೀಸ್ ಯೂನಿವರ್ಸಿಟಿಯಿಂದ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಗೆ ಡಾಕ್ಟರೇಟ್ ಪ್ರಶಸ್ತಿ ಪ್ರದಾನ (ಜನವರಿ 2020).
  18. ಅಪ್ನಾ ದೇಶ ರಾಷ್ಟ್ರಮಟ್ಟದ ಸಂಸ್ಥೆಯಿಂದ ರಾಜ್ಯಮಟ್ಟದ ಶಿಕ್ಷಕ ರತ್ನ ಪ್ರಶಸ್ತಿ ದೊರೆತಿದೆ ( 2017-2018 ರಲ್ಲಿ)
  19. ಮಾತೆ ಸಾವಿತ್ರಿಬಾಯಿ ಫುಲೆ ಅವರ ಸಿನಿಮಾ ಬಿಡುಗಡೆಗೆ ಸಹಕಾರ ನೀಡಿದ್ದಕ್ಕಾಗಿ ನಿರ್ದೇಶಕರಾದ ವಿಶಾಲ್ ರಾಜ್ ಹಾಗೂ ಶ್ರೀ ಬಸವರಾಜ ಭೂತಾಳಿ ನಿರ್ಮಾಪಕ ಅವರಿಂದ ಸನ್ಮಾನ.
  20. 2017-2018 ರಲ್ಲಿ ಗಣೇಶೋತ್ಸವದ ಅಂಗವಾಗಿ ಧಾರವಾಡ ಜಿಲ್ಲಾ ಸಮಿತಿಯವರು ಶೈಕ್ಷಣಿಕ ಸಾಧನೆ ಮಾಡಿದವರಿಗೆ ಶಾರದಾ ಶಾಲ್ಮಲಾ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

21) ದಿ.18-09-2022 ರಂದು ಬೆಳಗಾವಿಯಲ್ಲಿ ನಾಡಿನ ಸಮಾಚಾರ ಪತ್ರಿಕೆಯವರಿಂದ “ಹೆಮ್ಮೆಯ ಕನ್ನಡತಿ”,ಪ್ರಶಸ್ತಿ ಸ್ವೀಕರಿಸಿದ ಡಾ.ಲತಾ.ಎಸ್.ಮುಳ್ಳೂರ.

22) *ಬಸವಕಲ್ಯಾಣ ದಲ್ಲಿ ದಿ.28-10-2023 ರಂದು 22 ನೇ ಕಲ್ಯಾಣ ಪರ್ವ ಸಮಾರಂಭದಲ್ಲಿ ಡಾ.ಲತಾ.ಎಸ್.ಮುಳ್ಳೂರ ಅವರಿಗೆ ಡಾ. ಗಂಗಾ ಮಾತಾಜಿ ಅವರಿಂದ ಪ್ರತಿಷ್ಠಿತ "ಸೇವಾ ಧುರಂಧರ",ಪ್ರಶಸ್ತಿ ನೀಡಿ ಗೌರವಿಸಿದರು*.

23,) 30-12-2023 ಧಾರವಾಡ ದಲ್ಲಿ ಡಾ. ಲತಾ ಎಸ್ ಮುಳ್ಳೂರ್ ರವರಿಗೆ ಭಾರತ ರತ್ನ ಡಾ. A.P.J.ಅಬ್ದುಲ್ ಕಲಾಂ ರಾಷ್ಟೀಯ ಪ್ರಶಸ್ತಿ ನೀಡಿ ಗೌರವಿಸಿದರುಭಾರತ ರತ್ನ ಡಾ. A.P.J.ಅಬ್ದುಲ್ ಕಲಾಂ ರಾಷ್ಟೀಯ ಪ್ರಶಸ್ತಿ ನೀಡಿ ಗೌರವಿಸಿದರು



ಈ ಒಂದು ಪ್ರಶಸ್ತಿಯನ್ನು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗೆ ಹಾಗೂ ಸಾಧನೆಗೆ ನೀಡಿದ ಪ್ರಶಸ್ತಿಯಾಗಿದೆ

ಕರ್ನಾಟಕ ನಾಮಕರಣ ಸುವರ್ಣ ಮಹೋತ್ಸವ ವರ್ಷ ಹಾಗೂ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಪ್ರಶಸ್ತಿ ನೀಡಿ ಗೌರವಿಸಿದರು.

ಕಾರ್ಯಕ್ರಮ ದ ಆಯೋಜನೆ ಹಾಗೂ ನೇತೃತ್ವ ಶ್ರೀ.ಬಸವರಾಜ ಆನೆಗುಂದಿ
ಕಾರ್ಯಧ್ಯಕ್ಷರು ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಮಾನವ ಹಕ್ಕುಗಳ ರಕ್ಷಣಾ ಸಮಿತಿ (ರಿ) ಹಾಗೂ ಸಂಪಾದಕರು ಧಾರವಾಡ ನ್ಯೂಸ್ ಸಮೂಹ ಸಂಸ್ಥೆಗಳು

24) ದಿ.06.01.2024 ಶನಿವಾರ ಧಾರವಾಡದಲ್ಲಿ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾ.ಲತಾ.ಎಸ್.ಮುಳ್ಳೂರ ಅವರಿಗೆ ,”ಕಿತ್ತೂರು ರಾಣಿ ಚೆನ್ನಮ್ಮ “ಪ್ರಶಸ್ತಿ ನೀಡಿ ಗೌರವಿಸಿದರು .

ಸಾಂಸ್ಥಿಕ ಚಟುವಟಿಕೆಗಳು

  1. ಕ್ಷೇತ್ರ ಸಮನ್ವಯಾ ಅಧಿಕಾರಿಗಳ ಕಾರ್ಯಾಲಯ ಧಾರವಾಡದಲ್ಲಿ 10 ವರ್ಷ ಬಿ.ಆರ್‌.ಪಿ.ಯಾಗಿ ಕಾರ್ಯ ನಿರ್ವಹಿಸಿರುವೆ.
  2. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷಳಾಗಿ, ಧಾರವಾಡ ಶಹರದ ಪ್ರಧಾನ ಕಾರ್ಯದರ್ಶಿಯಾಗಿ, ಧಾರವಾಡ ಜಿಲ್ಲಾ ಮಹಿಳಾ ವೇದಿಕೆಯ ಪ್ರಧಾನ ಸಂಚಾಲಕರಾಗಿ ಹಾಗೂ ಧಾರವಾಡ ಶಹರದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವೆ.
  3. ಪ್ರಾಥಮಿಕ ಶಾಲಾ ಶಿಕ್ಷಕ- ಶಿಕ್ಷಕಿಯರ ಪತ್ತು ಬೆಳೆಸುವ ಸಹಕಾರಿ ಸಂಘದ ನಿರ್ದೇಶಕಿಯಾಗಿ ಮೂರು ಬಾರಿ ಚುನಾಯಿತ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿರುವೆ.

3 ಪ್ರಸ್ತುತ ಸಂಸ್ಥಾಪಕ ರಾಜ್ಯಾಧ್ಯಕ್ಷರು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ರಾಜ್ಯ ಘಟಕ ಧಾರವಾಡ.

ರಾಜ್ಯ ಜಿಲ್ಲಾ ತಾಲೂಕು ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿ

  1. ಚಿನ್ನರ ಮೇಳ, ಚಿನ್ನರ ಅಂಗಳ, ಕಲಾಜಾಥ, ಅಕ್ಷರ ಪ್ರತಿಷ್ಠಾನ, NPEGEL ಅಲ್ಪ ವೆಚ್ಚ ಹಾಗೂ ವೆಚ್ಚದಾಯಕ, ಸುಲಭವಾಗಿ ಸಿಗುವ ವಸ್ತುಗಳನ್ನು ಉಪಯೋಗಿಸಿ ಪಾಠೋಪಕರಣ ತಯಾರಿಕೆ, ಸಮಾಲೋಚನ ಸಭೆಗಳಲ್ಲಿ ಚೈತನ್ಯಾ ತರಬೇತಿಗಳಲ್ಲಿ ಕೆ ಎಸ್ ಕ್ಯೂ ಎ ಓ ತರಬೇತಿ, ಹದಿಹರೆಯದ ಶಿಕ್ಷಣ ತರಬೇತಿ, ಓದುವ ವೇಗ ವರ್ಧನ ಕಾರ್ಯಕ್ರಮ, ಹಲವಾರು ತಾಲೂಕು ಮಟ್ಟ ಹಾಗೂ ಜಿಲ್ಲಾ ಹಾಗೂ ರಾಜ್ಯ ಮಟ್ಟದ ತರಬೇತಿ ಕಾರ್ಯಕಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಣೆ.

ಸಾಮಾಜಿಕ ಸೇವೆ

  1. ಮಕ್ಕಳಿಗೆ ಕಲಿಕೋಪಕರಣ ವಿತರಣೆ
  2. ಕರೋನ ಸಂದರ್ಭದಲ್ಲಿ ನಿರಾಶ್ರಿತರಿಗೆ ಕಿರಾಣಿ ಸಾಮಗ್ರಿ ವಿತರಣೆ
  3. ಅನಾಥಾಶ್ರಮ ವೃದ್ಧಾಶ್ರಮ ನಿರಾಶ್ರಿತರ ಕೇಂದ್ರಕ್ಕೆ ಆಗಾಗ ಭೇಟಿ ನೀಡಿ ಕೈಲಾದ ಸಹಾಯ
  4. ಪ್ರತಿವರ್ಷ ರಕ್ತದಾನ ಎಬಿ ನೆಗೆಟಿವ್

5.ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿ ಬಿಪಿ ಶುಗರ್ ECG,ECO ಎಲ್ಲಾ ಟೆಸ್ಟ್ ಗಳನ್ನು ಉಚಿತವಾಗಿ ಶಿಕ್ಷಕ ಶಿಕ್ಷಕಿಯರಿಗೆ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ

  1. ಪ್ರತಿ ವರ್ಷ ವನಮಹೋತ್ಸವದಂದು ಪರಿಸರ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿ ಉಚಿತವಾಗಿ ಸಸಿ ವಿತರಿಸಿದೆ
  2. ನೆರೆಹಾವಳಿ ಬಂದಾಗ ನೆರೆ ಸಂತ್ರಸ್ತರಿಗೆ ಸಹಾಯ
  3. ಮಹಿಳೆಯರಿಗೆ ಕಾನೂನು ತಿಳುವಳಿಕೆ
  4. ಅಪಘಾತಕ್ಕೀಡಾದವರಿಗೆ ನೆರವು
  5. ಡಾ. ಲತಾ ಎಸ್ ಮುಳ್ಳೂರ ಅವರು ತಾವು ವಾಸಿಸುವ ಬಡಾವಣೆಯಲ್ಲಿ ಸಿಹಿ ನೀರಿನ ಸೌಲಭ್ಯ, ಕಸದ ವಿಲೇವಾರಿ ವಾಹನ ಬಡಾವಣೆಗೆ ಇವರ ಪ್ರಯತ್ನದಿಂದ ಸೌಲಭ್ಯ ಒದಗಿದೆ.
  6. ಶಾಲೆಯಲ್ಲಿ ಎಲ್ಲಾ ತರಗತಿಗಳಿಗೆ ದಾನಿಗಳ ಮುಖಾಂತರ ಫ್ಯಾನ್ ವ್ಯವಸ್ಥೆ ಒದಗಿಸಿದೆ ಹಾಗೂ ಶಾಲೆಯ ಹತ್ತಿರ ಕಸದ ರಾಶಿ ಜನ ಪ್ರತಿನಿತ್ಯ ಗಲೀಜು ಮಾಡುತ್ತಿದ್ದರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರ ಗಮನಕ್ಕೆ ತಂದು ಅದನ್ನು ಸ್ಥಳಾಂತರಿಸುವ ವ್ಯವಸ್ಥೆ ಮಾಡಲಾಗಿದೆ.
  7. ಯಾವುದೇ ಮಹಿಳಾ ಶಿಕ್ಷಕಿಯರು ಮಾನಸಿಕ ಕಿರುಕುಳ, ಲೈಂಗಿಕ ಕಿರುಕುಳ, ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ಕಲಹ ಹೀಗೆ ಹಲವಾರು ಸಮಸ್ಯೆಗಳನ್ನು ಡಾ. ಲತಾ ಎಸ್ ಮುಳ್ಳೂರ ರಾಜ್ಯಾಧ್ಯಕ್ಷರ ಗಮನಕ್ಕೆ ತಂದಾಗ ಅವರಿಗೆ ಧೈರ್ಯ ತುಂಬಿ ಅವರಿಗೆ ಬೆಂಬಲವಾಗಿ ನಿಂತು ಪ್ರಸ್ತುತ ಮಹಿಳಾ ಕಾನೂನುಗಳ ಬಗ್ಗೆ ವಕೀಲರ ಸಹಾಯದಿಂದ ಅವರ ಸಮಸ್ಯೆ ತಮ್ಮ ಸಮಸ್ಯೆ ಎಂದು ತಿಳಿದು ಪರಿಹರಿಸುತ್ತಾ ಬಂದಿದ್ದಾರೆ.

ಡಾ.ಲತಾ.ಎಸ.ಮುಳ್ಳೂರ ಅವರು BRP ಆಗಿದ್ದಾಗ ಧಾರವಾಡ ಶಹರದ ಪ್ರತಿ ಶಾಲೆಗಳಲ್ಲಿ ತಾಯಂದಿರ ಸಭೆ ನಡೆಸಿದ್ದಾರೆ💐💐💐💐💐, *ಡಾ.ಲತಾ.ಎಸ್.ಮುಳ್ಳೂರ ಅವರು ತಾಯಂದಿರನ್ನು ಉದ್ದೇಶಿಸಿ ಅನೇಕ ವಿಷಯಗಳ ಬಗ್ಗೆ ಮಾತನಾಡಿದರು 1),ಪೋಕ್ಸೋ ಕಾಯ್ದೆ ಬಗ್ಗೆ 2) ವಿದ್ಯಾರ್ಥಿನಿಯರಿಗೆ ಶಿಕ್ಷಣ ದ ಮಹತ್ವದ ಬಗ್ಗೆ 3) ಹೆಣ್ಣು ಮಕ್ಕಳಿಗೆ ಇರುವ ಸರಕಾರದ ಸೌಲಭ್ಯ ಗಳ ಬಗ್ಗೆ 4)ಮನೆಯೇ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರು. ಆದ್ದರಿಂದ ಮಕ್ಕಳಲ್ಲಿ ಮನೆಯಲ್ಲಿ ಉತ್ತಮ ಸಂಸ್ಕೃತಿ. ಮಕ್ಕಳಲ್ಲಿ ತಾಯಂದಿರು ಬೆಳೆಸಬೇಕಾದ ಉತ್ತಮ ಮೌಲ್ಯಗಳ ಬಗ್ಗೆ 5)ಮೊಬೈಲ್.ಹಾಗೂ. TV ಯಿಂದ ಮಕ್ಕಳಲ್ಲಿ ಆಗುವ ಬದಲಾವಣೆಗಳು. ಸಾಧಕ ಬಾಧಕ್ ದ ಬಗ್ಗೆ 6) ಭಾರತದ ಪ್ರಥಮ ಶಿಕ್ಷಕಿ ಮಾತೇ ಸಾವಿತ್ರಿಬಾಯಿ ಫುಲೆ ಅವರು ಹೆಣ್ಣು ಮಕ್ಕಳ ಶಿಕ್ಷಣ ಕ್ಕಾಗಿ ಹಾಗೂ ಹೆಣ್ಣು ಮಕ್ಕಳಿಗೆ ಮಾರಕವಾದ ಸತಿಸಹಗಮನ ಪದ್ದತಿ.ಕೇಶ ಮುಂಡನೆ. ಅನೇಕ ಮೌಢ್ಯಗಳ ವಿರುದ್ಧ ಹೋರಾಡಿದ ಬಗ್ಗೆ 7) ಶಿಕ್ಷಣದ ಮಹತ್ವ ತಾಯಂದಿರ ಕರ್ತವ್ಯ 8) ಹೆಣ್ಣು ಮಕ್ಕಳಿಗೆ ಇರುವ ಪ್ರಸ್ತುತ ಕಾನೂನು ಹಾಗೂ ಸೌಲಭ್ಯಗಳ ಬಗ್ಗೆ 9) ಮಕ್ಕಳಿಗೆ ಮನೆಯಲ್ಲಿ ಅಭ್ಯಾಸ ಮಾಡಲು ಉತ್ತಮ ವಾತಾವರಣ ನಿರ್ಮಾಣ ಮಾಡುವ ಬಗ್ಗೆ 10) ಮಕ್ಕಳನ್ನು ನಿಯಮಿತವಾಗಿ ತಪ್ಪದೆ.ಗೈರ್ ಉಳಿಯದ ಹಾಗೆ ಶಾಲೆಗೆ ಕಳುಹಿಸುವ ಬಗ್ಗೆ 11,,)ವಿದ್ಯಾರ್ಥಿನಿಯರಿಗೆ Bad touch ಹಾಗೂ Good touch ಬಗ್ಗೆ ಮಕ್ಕಳಿಗೆ ಆಗುವ ಮಾನಸಿಕ ಹಾಗೂ ಲೈಂಗಿಕ ಕಿರುಕುಳದ ಬಗ್ಗೆ ತಿಳಿಸಿ ಮಾತನಾಡಿದರು. 12) ಸೈಬರ ಬಗ್ಗೆ ಎಚ್ಚರಿಕೆ 13) ಆರೋಗ್ಯ ಮತ್ತು ಸ್ವಚ್ಛತೆಯ ಬಗ್ಗೆ 14) ಶಿಕ್ಷಣ ದ ಮಹತ್ವದ ಬಗ್ಗೆ ಸರಕಾರದ ಸೌಲಭ್ಯ ಗಳ ಬಗ್ಗೆ ತಿಳಿಸಿದರು ತಾಯಂದಿರು ಉತ್ತಮವಾಗಿ ಸ್ಪ0ದಿಸಿದರು.

ಡಾ. ಲತಾ ಎಸ್ ಮುಳ್ಳೂರ ಅವರ ಶೈಕ್ಷಣಿಕ ಸಾಧನೆಗಳು

  1. ಇವರು ಪ್ರತಿ ವರ್ಷ ತಾವು ತೆಗೆದುಕೊಂಡ ತರಗತಿಯಲ್ಲಿ ವಿಷಯವಾರು ಪಾಠಗಳಲ್ಲಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಸುಲಭವಾಗಿ ಉಚಿತವಾಗಿ ಮನೆಯಲ್ಲಿ ಸಿಗುವ ವೇಸ್ಟ್ ಸಾಮಗ್ರಿಗಳನ್ನು ಸಂಗ್ರಹಿಸಿ ವೆಚ್ಚರಹಿತ ಹಾಗೂ ಅಲ್ಪ ವೆಚ್ಚದ ಪಾಠಕ್ಕೆ ಸಂಬಂಧಿಸಿದ ಕಲಿಕೋಪಕರಣಗಳನ್ನು ತಯಾರಿಸಿ ಮಕ್ಕಳಿಗೆ ಬೋಧಿಸುತ್ತಾರೆ.
  2. MPS NO- 11 ಮಾಳಮಡ್ಡಿ ಧಾರವಾಡ ಶಹರದಲ್ಲಿ ಇವರ ತರಗತಿಗೆ ಕಲಿಕಾ ಸಾಧನ ವರ್ಷದಲ್ಲಿ ಆಗಿನ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಡಿ ವೆಂಕಟೇಶ್ವರ ರಾವ್ ಅವರು ಹಾಗೂ ನಿರ್ದೇಶಕರು ಭೇಟಿ ನೀಡಿ ತಮ್ಮ ಸಂದರ್ಶನ ವರದಿಯಲ್ಲಿ ಶ್ರೀಮತಿ ಲತಾ.ಎಸ್ .ಮುಳ್ಳೂರ ಅವರು ಕಲಿಕಾ ಸಾಧನ ವರ್ಷದ 20 ಅಂಶ ಕಾರ್ಯಕ್ರಮದಡಿ ಬಹಳ ಪರಿಶ್ರಮದಿಂದ ಬೋಧನೋಪಕರಣ ಹಸ್ತಪತ್ರಿಕೆ ಹಾಗೂ ಇತರ ದಾಖಲೆಗಳನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಇವರ ಪರಿಶ್ರಮಕ್ಕೆ ಅವರ ಸಂದರ್ಶನ ವರದಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
  3. ದಿನಾಂಕ : 30-11-2004 ರಲ್ಲಿ ಧಾರವಾಡಕ್ಕೆ ಆಗಿನ ಬೆಂಗಳೂರು ಆಯುಕ್ತರಾದ ಸನ್ಮಾನ್ಯ ಶ್ರೀ ಸಂಜೀವಕುಮಾರ್ ಅವರು ಆಗಮಿಸಿದ್ದರು. ಪಾಠೋಪಕರಣಗಳ ಪ್ರದರ್ಶನದಲ್ಲಿ ಡಾ. ಲತಾ ಎಸ್ ಮುಳ್ಳೂರ ಅವರ ಪ್ರತಿಯೊಂದು ಪಾಠೋಪಕರಣಗಳನ್ನು ವೀಕ್ಷಿಸಿ ಸಂದರ್ಶನ ವರದಿಯಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
  4. ಧಾರವಾಡ ಉಪನಿರ್ದೇಶಕರಾದ ಶ್ರೀ ವಿ ಎಂ ಪಾಟೀಲ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಧಾರವಾಡ ಶಹರದ ಸಮಸ್ತ ಗುರು ಬಳಗ ಡಾ. ಲತಾ ಎಸ್ ಮುಳ್ಳೂರ ಅವರು ಸ್ವತಃ ತಯಾರಿಸಿದ ಪಾಠೋಪಕರಣಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
  5. ಪ್ರತಿಯೊಂದು ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಭಾಷಣ ಹಾಡು ರೂಪಕ ನಾಟಕ ಸ್ವತಃ ಕಲಿಸಿ ಮಕ್ಕಳನ್ನು ಸ್ಪರ್ಧೆಗೆ ಅಣಿಗೊಳಿಸುತ್ತಾರೆ.
  6. ಇವರು ಈ ಕೆಳಕಂಡ ತರಬೇತಿಗಳಿಗೆ ಕ್ಲಸ್ಟರ್ ಮಟ್ಟ ತಾಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ
  7. ಚೈತನ್ಯ ತರಬೇತಿ
  8. ಪಾಠ ಉಪಕರಣ ತಯಾರಿಕೆ
  9. ಸಮನ್ವಯ ಶಿಕ್ಷಣ 4.ದಾಖಲೆಗಳ ನಿರ್ವಹಣೆ 5.ಎಸ್ ಎಸ್ ಎಲ್ ಸಿ ಮಕ್ಕಳಿಗೆ ಎಸ್ ಎಸ್ ಎಲ್ ಸಿ ನಂತರ ಮುಂದೇನು? 6.ಚಿನ್ನರ ಮೇಳ. ಮೌಲ್ಯ ಶಿಕ್ಷಣ ತರಬೇತಿ. ಕೌಶಲ್ಯ ತರಬೇತಿ
  10. ಅಕ್ಷರ ಪ್ರತಿಷ್ಠಾನ ಸಂಸ್ಥೆಯಿಂದ ಆಯೋಜಿಸಿರುವ ವಿವಿಧ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಣೆ.
  11. ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಜಾಗೃತಿ ಮೂಡಿಸಿದ್ದಾರೆ ಲಿಂಗ ತಾರತಮ್ಯ ಹೆಣ್ಣು ಮಕ್ಕಳಿಗೆ ಶಿಕ್ಷಣದ ಮಹತ್ವ ಗಂಡು-ಹೆಣ್ಣು ವೇತನ ತಾರತಮ್ಯ ವರದಕ್ಷಿಣೆ ಕಿರುಕುಳ ಮುಂತಾದ ಮೂಡನಂಬಿಕೆ ತಾರತಮ್ಯ ಕುರಿತು ಗ್ರಾಮೀಣದ ಜನರಿಗೆ ಜಾಗೃತಿ ಮೂಡಿಸಿದ್ದಾರೆ.
  12. ಮಕ್ಕಳಲ್ಲಿ ಆರೋಗ್ಯದ ಮಹತ್ವ ಶಿಕ್ಷಣದ ಮಹತ್ವ ಸಾಧಕರ ಜೀವನ ಚರಿತ್ರೆ ಹೇಳುವುದು ಶಿಕ್ಷಣದಿಂದ ವಂಚಿತರಾದರೆ ಆಗುವ ಅನಾಹುತಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಿದ್ದಾರೆ.
    10.ಆಜಾದಿ ಕಿ ಅಮೃತ ಮಹೋತ್ಸವಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಕ್ಕಳಲ್ಲಿ ರಾಷ್ಟ್ರ ಪ್ರೇಮ ರಾಷ್ಟ್ರಭಕ್ತಿ ಸ್ವಾತಂತ್ರ್ಯಕ್ಕೆ ಹೋರಾಡಿದ ಮಹನೀಯರ ಕುರಿತು ಮಕ್ಕಳಲ್ಲಿ ಅಭಿಮಾನ ಒಗ್ಗಟ್ಟು ಜಾತೀಯತೆ ಕುರಿತು ಜಾಗೃತಿ ಮೂಡಿಸಿದ್ದಾರೆ.
  13. ಡಾ. ಲತಾ ಎಸ್ ಮುಳ್ಳೂರ ಅವರ ಮಾರ್ಗದರ್ಶನದಲ್ಲಿ ನೇತೃತ್ವದಲ್ಲಿ ರಾಜ್ಯಮಟ್ಟದಲ್ಲಿ ಇವರೇ ಆಯೋಜಿಸಿದ ಶೈಕ್ಷಣಿಕ ವಿಭಿನ್ನಾರಗಳು ಅತ್ಯಂತ ಯಶಸ್ವಿಯಾಗಿವೆ ವಿಷಯವಾರು ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಉಪ ನಿರ್ದೇಶಕರ ಕಾರ್ಯಾಲಯದ ವಿಷಯ ಪರೀಕ್ಷಕರು ಡಯಟ್ ಉಪನ್ಯಾಸಕರು ಕ್ಷೇತ್ರ ಶಿಕ್ಷಣಾಧಿಕಾರಿಗಳು ವಕೀಲರು ಡಿ ವೈ ಎಸ್ ಪಿ ಡಾಕ್ಟರ್ ಗಳು ಕಲಾವಿದರು ಅನೇಕ ಜನಪ್ರಿಯ ಅತ್ಯುತ್ತಮ ವಿಷಯ ಪರಿಣಿತಿಯುಳ್ಳ ಸಂಪನ್ಮೂಲ ವ್ಯಕ್ತಿಗಳನ್ನು ರಾಜ್ಯಮಟ್ಟದ ವಿಭಿನ್ನಾರ್ಗೆ ಆಹ್ವಾನಿಸಿ ರಾಜ್ಯದ ಸರಕಾರಿ ಅನುದಾನಿತ ಪ್ರಾಥಮಿಕ ಪದವೀಧರ ಹಾಗೂ ಪ್ರೌಢಶಾಲಾ ಶಿಕ್ಷಕ ಶಿಕ್ಷಕಿಯರು ಪ್ರತಿ ವೆಬಿನಾರ್ ಗೆ 1000ಕ್ಕೂ ಹೆಚ್ಚು ಹಾಜರಾಗಿ ಪ್ರಯೋಜನ ಪಡೆದುಕೊಂಡಿದ್ದಾರೆ. ಪ್ರತಿ ವೆಬ್ನಾರ್ ಕೊನೆಗೆ ಸಂವಾದ ಕಾರ್ಯಕ್ರಮ ಇದ್ದು ಶಿಕ್ಷಕ ಶಿಕ್ಷಕಿಯರು ಸಂಪನ್ಮೂಲ ವ್ಯಕ್ತಿಗಳಿಗೆ ಪ್ರಶ್ನೆಗಳ ಮುಖಾಂತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದಾರೆ.
  14. ಎಲ್ಲಾ ಶಾಲೆಗಳಲ್ಲಿ ನಲಿಕಲಿ ಸಮೀಕ್ಷಾ ಕಾರ್ಯ ಪಾಲಕರ ಸಭೆ ಮಾಡಲಾಗಿದೆ.
  15. ಎಲ್ಲಾ ಶಾಲೆಗಳಲ್ಲಿ ತಾಯಂದಿರ ಸಭೆ ಮಾಡಲಾಗಿದೆ .
  16. ದಾಖಲಾತಿ ಆಂದೋಲನ
  17. ಶಾಲೆಯಿಂದ ಹೊರಗುಳಿದ ಮಕ್ಕಳ ಪಾಲಕರ ಮಕ್ಕಳ ಸಭೆ ಶಾಲಾವದಿ ನಂತರ ಸಂಜೆ ಪಾಲಕರ ಮನೆ ಮನೆಗೆ ಭೇಟಿ ಮಾಡಲಾಗಿದೆ.
  18. ರಾಜ್ಯ ಮಟ್ಟದಲ್ಲಿ ಡಾ. ಲತಾ. ಎಸ್. ಮುಳ್ಳೂರ ಅವರ ನೇತೃತ್ವದಲ್ಲಿ ತುಮಕೂರಿನ ಶ್ರೀವಾಸ್ತವ ಸರ್ ಅವರ ಸಹಕಾರದಿಂದ ರಾಜ್ಯಮಟ್ಟದಲ್ಲಿ ತಾಂತ್ರಿಕ ಕಲಿಕೋಪಕರಣಗಳ ತಯಾರಿಕಾ ತರಬೇತಿಯನ್ನು ಎಲ್ಲಾ ಶಿಕ್ಷಕ ಶಿಕ್ಷಕಿಯರಿಗೆ ಪದಾಧಿಕಾರಿಗಳಿಗೆ ಆಯೋಜಿಸಿ ಎಲ್ಲರೂ ತಾಂತ್ರಿಕ ಜ್ಞಾನಪಡೆದು ತಾಂತ್ರಿಕ ಕಲಿಕೋಪಕರಣಗಳನ್ನು ಬಳಸಿ ಪರಿಣಾಮಕಾರಿ ಪಾಠ ಬೋಧನೆ ಮಾಡಲು ಉತ್ತೇಜನ ನೀಡಿ ಕಲಿಕೋಪಕರಣ (TLM) ತರಬೇತಿ ಯಶಸ್ವಿಯಾಗಿ ಸಮಸ್ತ ಶಿಕ್ಷಕ ಶಿಕ್ಷಕಿಯರ್ ಪ್ರೀತಿಗೆ ಪಾತ್ರರಾಗಿದ್ದಾರೆ
  19. ಶಿಕ್ಷಣ ಇಲಾಖೆ ಅಧಿಕಾರಿಗಳ ತಂಡದೊಂದಿಗೆ ತಮಿಳುನಾಡು ಸೇಲಂ ಜಿಲ್ಲೆಗೆ ಪ್ರವಾಸ.
    ದಿನಾಂಕ: 17.2.2009 ರಿಂದ 20.02.2009ರ ವರೆಗೆ ABL ಶಾಲೆಗಳ ಅಧ್ಯಯನ ಪ್ರವಾಸ ಶಿಕ್ಷಣ ಇಲಾಖೆಯಿಂದ ಕೈಗೊಳ್ಳಲಾಯಿತು. ಧಾರವಾಡ ಜಿಲ್ಲೆಯ ವಿವಿಧ ಅಧಿಕಾರಿಗಳ ತಂಡದೊಂದಿಗೆ ಡಾ.ಲತಾ ಎಸ್ ಮುಳ್ಳೂರ ಅವರು ಬಿ ಆರ್ ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾಗ ಧಾರವಾಡ ಜಿಲ್ಲೆ ಅಧಿಕಾರಿಗಳ ತಂಡದೊಂದಿಗೆ ತಮಿಳುನಾಡು ಸೇಲಂ ಜಿಲ್ಲೆಗೆ ಶೈಕ್ಷಣಿಕ ಅಧ್ಯಯನ ಪ್ರವಾಸದಲ್ಲಿ ಪಾಲ್ಗೊಂಡಿದ್ದರು.
  20. ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ, ಜಿಲ್ಲಾ ಘಟಕ ಕಲ್ಬುರ್ಗಿ ಹಾಗೂ ಎಸ್ ಕೆ ಯು ಪಿ ಸಂಘ ಕಲ್ಬುರ್ಗಿ ಸಹಯೋಗದಲ್ಲಿ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪ್ರತಿದಿನ ಸಂಜೆ ವಿಷಯವಾರು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ನೇರ ಪ್ರಸಾರದಲ್ಲಿ ಪಾಠಗಳು ಪ್ರಸಾರವಾದವು ರಾಜ್ಯಾದ್ಯಂತ ಮಕ್ಕಳು ಪ್ರಯೋಜನ ಪಡೆದಿದ್ದಾರೆ.
  21. ಬಾ. ಬಾಲೆ ಶಾಲೆಗೆ. ಹೆಣ್ಣು ಮಕ್ಕಳ ಶಿಕ್ಷಣದ ಮಹತ್ವ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಬಾಲವಿವಾಹ. ಹೆಣ್ಣು ಮಕ್ಕಳು ಶಾಲೆ ಬಿಟ್ಟರೆ ಆಗುವ ಅನಾಹುತಗಳ ಬಗ್ಗೆ ತೊಂದರೆ ಬಗ್ಗೆ ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ಮಕ್ಕಳ ಮಾನಸಿಕ ತೊಂದರೆ ಆಗಾಗ ಗಮನಹರಿಸುವ ಕುರಿತು ಮಕ್ಕಳು ಶಾಲೆ ಬಿಟ್ಟ ನಂತರ ಸರಿಯಾದ ವೇಳೆಗೆ ಮನೆಗೆ ಬರುವ ಬಗ್ಗೆ. ಹಾಗೂ ಸಿನಿಮಾ. TV. ಮೊಬೈಲ್ ಬಳಕೆಯ ಸಾಧಕ ಬಾಧಕಗಳ ಬಗ್ಗೆ ಪಾಲಕರಲ್ಲಿ ಮಕ್ಕಳಲ್ಲಿ ಜಾಗೃತಿ ಮೂಡಿಸಿದ್ದಾರೆ
    21), ದೇಶ ಸುತ್ತಿ ನೋಡು ಕೋಶ ಓದಿ ನೋಡಿ ಪೂರಕವಾಗಿ ಮಕ್ಕಳಲ್ಲಿ ಓದುವ ಹವ್ಯಾಸ. ಪುಸ್ತಕ ಸಂಗ್ರಹಣೆ ಬಗ್ಗೆ ಜಾಗೃತಿ ಮೂಡಿಸಿದ್ದಾರೆ

22)ಕನ್ನಡ ಸಾಹಿತ್ಯ ಪರಿಷತ್ತ. ಕರ್ನಾಟಕ ವಿದ್ಯಾವರ್ಧಕ ಸಂಘ. ಮಹಿಳಾ ಮಂಟಪ. ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ ಕಾರ್ಯಕ್ರಮ ಗಳಲ್ಲಿ ಮುಖ್ಯ ಅತಿಥಿಯಾಗಿ. ಉಪನ್ಯಾಸಕಿಯಾಗಿ. ವಿವಧ ಕಾರ್ಯಚಟುವಟಿಕೆಗಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ.

ಡಾ. ಲತಾ. ಎಸ್. ಮುಳ್ಳೂರ ಅವರ ನೇತೃತ್ವದಲ್ಲಿ ಹಾಗೂ ರಾಜ್ಯ ತಾಂತ್ರಿಕ ಸಮಿತಿಯ ಸಹಕಾರದೊಂದಿಗೆ ರಾಜ್ಯ ಮಟ್ಟದಲ್ಲಿ ಆಯೋಜಿಸಿದ ಯಶಸ್ವಿ ವೇಬಿನಾರಗಳು

ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ : ಧಾರವಾಡದ ವತಿಯಿಂದ ಆಯೋಜಿಸಿದ ರಾಜ್ಯ ಮಟ್ಟದ ವೆಬಿನಾರಗಳು ರಾಜ್ಯದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದಿವೆ

ಡಾ. ಲತಾ. ಎಸ್. ಮುಳ್ಳೂರ. ಸಂಸ್ಥಾಪಕ ರಾಜ್ಯಾಧ್ಯಕ್ಷರು. ಹಾಗೂ ರಾಜ್ಯ ಪದಾಧಿಕಾರಿಗಳು. ಹಾಗೂ ರಾಜ್ಯ ತಾಂತ್ರಿಕ ಸಮಿತಿಯ ಸದಸ್ಯರಿಂದ ವಾರಂತ್ಯ ದಿನಗಳ ರಜಾವಧಿ ಹಾಗೂ ಶಾಲಾವಧಿ ಹೊರತಾದ ಅವಧಿಗಳಲ್ಲಿ.. ನಡೆದ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ : ಧಾರವಾಡದವತಿಯಿಂದ ಇಲ್ಲಿಯವರೆಗೆ ಆಯೋಜಿಸಿದ ರಾಜ್ಯ ಮಟ್ಟದ ಯಶಸ್ವಿ ವೆಬಿನಾರಗಳು*
(ಶೈಕ್ಷಣಿಕ ವಿಷಯಗಳು. ಪ್ರಸ್ತುತ ಮಹಿಳಾ ಕಾನೂನುಗಳು. ಮಹಿಳಾ ಸಬಲೀಕರಣ. KCSR. ನಿಯಮಗಳು. ಮೂಢನಂಬಿಕೆ. ವೈಚಾರಿಕತೆ. ಸಾಮಾಜಿಕ ಕಾರ್ಯಗಳು. ಮಕ್ಕಳೊಂದಿಗೆ ನೇರ ಫೋನ ಇನ್ ಕಾರ್ಯಕ್ರಮ. ಮಹಿಳಾ ಆರೋಗ್ಯ ಸಮಸ್ಯೆಗಳು ಪರಿಹಾರ. ಪೋಕ್ಸೋ ಕಾಯ್ದೆ. ಸರಕಾರದ ವಿನೂತನ ಶೈಕ್ಷಣಿಕ ಯೋಜನೆಗಳು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ. ಕಲಿಕಾ ಚೇತರಿಕೆ. ಶಿಕ್ಷಕರ ದಾಖಲೀಕರಣ. ಮುಂತಾದ ವಿಷಯಗಳ ಕುರಿತು ರಾಜ್ಯ ಮಟ್ಟದಲ್ಲಿ ನಮ್ಮ ಸಂಘದಿಂದ ನಡೆಸಿದ ಯಶಸ್ವಿ ವೇಬಿನಾರಗಳು SSLC ಮಕ್ಕಳಿಗೆ ಪ್ರತಿದಿನ ಸಂಜೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಪಾಠಗಳ ನೇರ ಪ್ರಸಾರ )

1) ವಿಷಯ — ಕುಟುಂಬ, ವೃತ್ತಿ, ಸಂಘಟನೆಯಲ್ಲಿ ಮಹಿಳೆಯರ ಪಾತ್ರ.
ದಿನಾಂಕ — 30-04-2021
ಉಪನ್ಯಾಸಕರು — ಡಾ. ಲತಾ ಎಸ್ ಮುಳ್ಳೂರ.
ಸಂಸ್ಥಾಪಕ ರಾಜ್ಯಾಧ್ಯಕ್ಷರು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ( ರಿ) ರಾಜ್ಯ ಘಟಕ ಧಾರವಾಡ.

2) ವಿಷಯ — ಸಂಘಟನೆ ಮತ್ತು ಮಹಿಳಾ ನಾಯಕತ್ವ.
ದಿನಾಂಕ — 03-05-2021.ಸೋಮವಾರ.
ಉಪನ್ಯಾಸಕರು — ಡಾ. ಲತಾ ಎಸ್ ಮುಳ್ಳೂರ.
ಸಂಸ್ಥಾಪಕ ರಾಜ್ಯಾಧ್ಯಕ್ಷರು. ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯ ಘಟಕ ಧಾರವಾಡ.

3) ವಿಷಯ — ನಮ್ಮ ಆಲೋಚನೆ ಬದಲಾಯಿಸೋಣ ಕರೋನಾದಿಂದ ಪಾರಾಗೋಣ.
ದಿನಾಂಕ — 06-05-2021. ಗುರುವಾರ.
ಉಪನ್ಯಾಸಕರು — ಶ್ರೀಮತಿ ಶ್ರೀ ಲಕ್ಷ್ಮೀ.
ಸಂಜೀವಿನಿ ಅಧ್ಯಾತ್ಮಿಕ ಚಿಂತಕರು ಧ್ಯಾನ ಪ್ರಚಾರಕರು.

4) ವಿಷಯ — ಮಹಿಳಾ ವಿಮುಕ್ತಿ
ದಿನಾಂಕ — 07-05-2021
ಉಪನ್ಯಾಸಕರು — ಶ್ರೀಮತಿ ಅಪರ್ಣಾ ಬಿ ಆರ್
ರಾಜ್ಯಾಧ್ಯಕ್ಷರು ಎ.ಐ.ಎಮ್. ಎಸ್. ಎಸ್

5) ವಿಷಯ — ಕೆ.ಸಿ.ಎಸ್ ಆರ್ ಸೇವಾ ನಿಯಮಗಳು
ದಿನಾಂಕ — 10-05-2021
ಉಪನ್ಯಾಸಕರು — ಶ್ರೀಮತಿ ಕವಿತಾ ಎಚ್ ಪಿ
ಕೆ ಇ ಎಸ್ ಉಪನ್ಯಾಸಕರು ಡಯಟ್ ಚಿಕ್ಕನಹಳ್ಳಿ.

6) ವಿಷಯ — ರಾಜ್ಯ ಮಟ್ಟದ ಸಾಮಾನ್ಯ ಸಭೆ(ಗೂಗಲ್ ಮೀಟ್)
ದಿನಾಂಕ — 24-05-2021 ಸೋಮವಾರ.
ಉಪನ್ಯಾಸಕರು — ಡಾ.ಲತಾ ಎಸ್ ಮುಳ್ಳೂರ.
ಸಂಸ್ಥಾಪಕ ರಾಜ್ಯಾಧ್ಯಕ್ಷರು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯ ಘಟಕ ಧಾರವಾಡ.

7) ವಿಷಯ — ಹಲೋ ಚಿಲ್ಡ್ರನ್ ಫೋನ್ ಇನ್ ಅಭಿಯಾನ. ಕೋವಿಡ್ ಸನ್ನಿವೇಶ ಎದುರಿಸಲು ಆತ್ಮವಿಶ್ವಾಸ ಮೂಡಿಸಲು ಜಾಗೃತಿ ಅಭಿಯಾನ.
ದಿನಾಂಕ — 24-05-2021 — 31-05 2021
ಉಪನ್ಯಾಸಕರು — ಡಾ.ಲತಾ ಎಸ್ ಮುಳ್ಳೂರ.
ಸಂಸ್ಥಾಪಕ ರಾಜ್ಯಾಧ್ಯಕ್ಷರು. ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯ ಘಟಕ ಧಾರವಾಡ.

8) ವಿಷಯ — ಮಹಿಳೆ ಮತ್ತು ಕಾನೂನು.
ದಿನಾಂಕ — 01-06-2021 ಮಂಗಳವಾರ.
ಉಪನ್ಯಾಸಕರು — ಶ್ರೀಮತಿ ಅಖಿಲಾ ವಿದ್ಯಾಸಂದ್ರ
ಮಾನವ ಹಕ್ಕುಗಳ ಕಾನೂನು ಮಾರ್ಗದರ್ಶಕರು.

9) ವಿಷಯ — ಕೋವಿಡ್ ಪರಿಸ್ಥಿತಿಯಲ್ಲಿ ನಮ್ಮ ಆರೋಗ್ಯ.
ದಿನಾಂಕ — 14-06-2021 ಸೋಮವಾರ.
ಉಪನ್ಯಾಸಕರು — ಡಾ.ಯಶೋಧ ಎಲ್ ಜಿ.
ವೈದ್ಯರು ಹಂಪಸಾಗರ ಬಳ್ಳಾರಿ ಜಿಲ್ಲೆ.

10) ವಿಷಯ — ಸೇತುಬಂಧ (ಬ್ರಿಜ್ ಕೋರ್ಸ್)
ದಿನಾಂಕ — 03-07-2021. ಶನಿವಾರ
ಉಪನ್ಯಾಸಕರು — ಶ್ರೀಮತಿ ಫೌಜಿಯಾ ಸರವತ್ ಸಹ ಶಿಕ್ಷಕಿ
ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿ ಕಲ್ಲುಗುಡ್ಡ ತೀರ್ಥಹಳ್ಳಿ.

11) ವಿಷಯ — ಸಂಪೂರ್ಣ ಜೀವನ ಪರಿಪೂರ್ಣ ಜವಾಬ್ದಾರಿ.
ದಿನಾಂಕ — 11-07-2021 ಭಾನುವಾರ.
ಉಪನ್ಯಾಸಕರು — ರಾಜಯೋಗಿನಿ ಬಿಕೆ ಸ್ಮಿತಾ ಅಕ್ಕನವರು
ಈಶ್ವರಿಯಾ ಮಹಾವಿದ್ಯಾಲಯ ರಾಯಚೂರು.

12) ವಿಷಯ — ಶೈಕ್ಷಣಿಕ ವೈಚಾರಿಕತೆ ( ಸತ್ಯ ಮಿಥ್ಯಗಳ ಅನಾವರಣ)
ದಿನಾಂಕ — 16-06-2021 ಶುಕ್ರವಾರ
ಉಪನ್ಯಾಸಕರು — ಡಾ. ಹುಲಿಕಲ್ ನಟರಾಜು
ಅಧ್ಯಕ್ಷರು ಕ.ರಾ.ವೈ.ಸಂ. ಪರಿಷತ್ತು ದೊಡ್ಡ ಬಳ್ಳಾಪುರ.

13) ವಿಷಯ — ಹೆಣ್ಣಿನ ದೌರ್ಜನ್ಯ ಮತ್ತು ಪೋಲಿಸ್ ರಕ್ಷಣೆ (ಐ ಪಿ ಸಿ ನಿಯಮಗಳು)
ದಿನಾಂಕ — 25-07-2021 ಭಾನುವಾರ.
ಉಪನ್ಯಾಸಕರು — ಶ್ರೀಮತಿ ಪ್ರಿಯದರ್ಶಿನಿ ಈಶ್ವರ ಪೋಲಿಸ್ ಇಲಾಖೆ ಸಾಣಿಕೊಪ್ಪ ಡಿ ವೈ ಎಸ್ ಪಿ ಚಾಮರಾಜನಗರ.

14) ವಿಷಯ — ರಾಜ್ಯ ಮಟ್ಟದ ಎರಡನೇ ಕಾರ್ಯಕಾರಿಣಿ ಸಭೆ (ಗೂಗಲ್ ಮೀಟ್)
ದಿನಾಂಕ — 08-08-2021 ಭಾನುವಾರ.
ಉಪನ್ಯಾಸಕರು — ಡಾ.ಲತಾ ಎಸ್ ಮುಳ್ಳೂರ
ಸಂಸ್ಥಾಪಕ ರಾಜ್ಯಾಧ್ಯಕ್ಷರು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ.

15) ವಿಷಯ — ಮಹಿಳಾ ಸ್ವಾತಂತ್ರ್ಯ ಸಮಾನತೆ ಮತ್ತು ಮಹಿಳಾ ಮೀಸಲಾತಿ.
ದಿನಾಂಕ — 14-08-2021 ಶನಿವಾರ.
ಉಪನ್ಯಾಸಕರು — ಡಾ.ಮಲ್ಲಿಕಾ ಘಂಟಿ. ವಿಶ್ರಾಂತ ಉಪಕುಲಪತಿ. ಕನ್ನಡ ವಿಶ್ವವಿದ್ಯಾಲಯ ಹಂಪಿ.

16) ವಿಷಯ — ಸಾಂವಿಧಾನಿಕ ಸಮಾನತೆಗಾಗಿ ಮಹಿಳಾ ನೌಕರರ ಮೀಸಲಾತಿ ಒತ್ತಾಯ.
ದಿನಾಂಕ –15-08-2021
ಉಪನ್ಯಾಸಕರು — ಡಾ.ಲತಾ ಎಸ್ ಮುಳ್ಳೂರ.
ಸಂಸ್ಥಾಪಕ ರಾಜ್ಯಾಧ್ಯಕ್ಷರು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ.

17) ವಿಷಯ — ಕ್ರಾಂತಿ ಜ್ಯೋತಿ ಸಾವಿತ್ರಿಬಾಯಿ ಫುಲೆ ಬರಹಗಳು ಹಾಗೂ ಶೈಕ್ಷಣಿಕ ಚಿಂತನೆ.
ದಿನಾಂಕ — 28-08-2021 ಶನಿವಾರ.
ಉಪನ್ಯಿಸಕರು — ಡಾ.ವಿದ್ಯಾ ಕುಂದರಗಿ ಕೆ ಇ ಎಸ್.

18) ವಿಷಯ — ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಸ್ಮರಣೋತ್ಸವ ಅಭಿಯಾನ ವಿಡಿಯೋಗಳ ಲೋಕಾರ್ಪಣೆ.
ದಿನಾಂಕ — 01-09-2021
ಉಪನ್ಯಾಸಕರು — ಶಿಕ್ಷಕರ ದಿನಾಚರಣೆ ಅಂಗವಾಗಿ.

19) ವಿಷಯ — ಶಿಕ್ಷಕಿ ಎರಡು ಕಣ್ಣುಗಳಾಗಿ ಶಿಕ್ಷಣದ ಹೊಣೆ ಮತ್ತು ಕುಟುಂಬದ ನಿರ್ವಹಣೆ.
ದಿನಾಂಕ — 04-09-2021
ಉಪನ್ಯಾಸಕರು — ಶ್ರೀಮತಿ ವಿದ್ಯಾ ಅಶೋಕ ನಾಡಿಗೇರ ಕೆ.ಇ.ಎಸ್. ಸಾರ್ವಜನಿಕ ಸಂಪರ್ಕಾಧಿಕಾರಿಗಳು. ಆಯುಕ್ತರ ಕಛೇರಿ ಧಾರವಾಡ.

20) ವಿಷಯ — ಪತ್ರ ಚಳುವಳಿ ಯಶಸ್ವಿ ಕುರಿತು ಹಾಗೂ ಹಬ್ಬ ಹರಿದಿನಗಳಲ್ಲಿ ಮಹಿಳೆಯರ ಪಾತ್ರ.
ದಿನಾಂಕ —12-09-2021
ಉಪನ್ಯಾಸಕರು — ಶ್ರೀಮತಿ ಕೆ. ಸುನಂದ ವಿಜಯಪುರ

21) ವಿಷಯ — ಶಿಕ್ಷಣದ ಸಬಲೀಕರಣದಲ್ಲಿ ಮಹಿಳಾ ಶಿಕ್ಷಕಿಯರ ಪಾತ್ರ ಹಾಗೂ ಸಂವಾದ ಕಾರ್ಯಕ್ರಮ.
ದಿನಾಂಕ — 18-09-2021 ಶನಿವಾರ.
ಉಪನ್ಯಾಸಕರು — ಶ್ರೀಮತಿ ಪಾರ್ವತಿ ವಸ್ತ್ರದ್ ಕೆ.ಇ.ಎಸ್. ಉಪನ್ಯಾಸಕರು ಡಯಟ್ ಧಾರವಾಡ.

22) ವಿಷಯ — ಪಠ್ಯ ಪುಸ್ತಕದಲ್ಲಿನ ಕನ್ನಡ ಪದ್ಯಗಳನ್ನು ರಾಗಬದ್ದವಾಗಿ ಅಭಿನಯದ ಮೂಲಕ ಕಲಿಸುವುದು.
ದಿನಾಂಕ — 25-09-2021 ಶನಿವಾರ
ಉಪನ್ಯಾಸಕರು — ಶ್ರೀಮತಿ ವಂದನಾ ರೈ
ಶಿಕ್ಷಕಿ, ನೃತ್ಯ ನಿರ್ದೇಶಕಿ, ಕಾರ್ಕಳ ಶಾಲಾ ಶಿಕ್ಷಕಿ.

23) ವಿಷಯ — ನಲಿಕಲಿ ಪರ್ಯಾಯ ಶೈಕ್ಷಣಿಕ ಯೋಜನೆ ಮತ್ತು ದಾಖಲೀಕರಣ.
ದಿನಾಂಕ — 02-10-2021
ಉಪನ್ಯಾಸಕರು — ಶ್ರೀ ರವೀಂದ್ರ ಆರ್ ಡಿ.
ರಾಜ್ಯ ನಲಿಕಲಿ ಸಂಪನ್ಮೂಲ ವ್ಯಕ್ತಿಗಳು

24) ವಿಷಯ — ತರಗತಿ ಕೋಣೆಯಲ್ಲಿ ಬೋಧನೋಪಕರಣಗಳ ಬಳಕೆ ಮತ್ತು ಶಿಕ್ಷಕಿಯರ ಪಾತ್ರ.
ದಿನಾಂಕ — 03-10-2021
ಉಪನ್ಯಾಸಕರು — ಶ್ರೀಮತಿ ಶಿವಲೀಲಾ ಕಳಸಣ್ಣನವರ
ಕೆ ಇ ಎಸ್ ಮಾನ್ಯ ಸಹಾಯಕ ಯೋಜನಾ ಸಮನ್ವಯಾಧಿಕಾರಿಗಳು.
ಡಿ ಡಿ ಪಿ ಐ ಕಾರ್ಯಾಲಯ ಧಾರವಾಡ.

25) ವಿಷಯ — ಪ್ರಾಥಮಿಕ ಮತ್ತು ಫ್ರೌಢಶಾಲೆಗಳಲ್ಲಿ ಮೌಲ್ಯಮಾಪನ ಮತ್ತು ದಾಖಲೀಕರಣ.
ದಿನಾಂಕ — 20-10-2021 ಬುಧವಾರ.
ಉಪನ್ಯಾಸಕರು — ಡಾ.ಹರಿಪ್ರಸಾದ್. ಕೆ ಇ ಎಸ್
ಸಿ ಸಿ ಇ ತಜ್ಞರು. ಉಪನ್ಯಾಸಕರು ಡಯಟ್ ಶಿವಮೊಗ್ಗ.

26) ವಿಷಯ — ಹೊಸ ರಾಷ್ಟ್ರೀಯ ಶಿಕ್ಷಣ ನೀತಿ…2020
ದಿನಾಂಕ — 13-11-2021
ಉಪನ್ಯಾಸಕರು — ಡಾ. ರೇಣುಕಾ ಅಮಲಝರಿ.
ಕೆ ಇ ಎಸ್ ಉಪನ್ಯಾಸಕರು ಡಯಟ್ ಧಾರವಾಡ.

27) ವಿಷಯ — ವರ್ಗಾವಣೆಗೆ ಸಂಬಂಧಿಸಿದಂತೆ ವೆಬ್ ಇನ್ ಲೈವ್.
ದಿನಾಂಕ — 07-12-2021 ಮಂಗಳವಾರ.
ಉಪನ್ಯಾಸಕರು — ಡಾ.ಲತಾ ಎಸ್ ಮುಳ್ಳೂರ.
ಸಂಸ್ಥಾಪಕ ರಾಜ್ಯಾಧ್ಯಕ್ಷರು. ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯ ಘಟಕ ಧಾರವಾಡ.

28) ವಿಷಯ — ಬೋಧನೆಯಲ್ಲಿ ಸಂಗೀತ, ಮಿಮಿಕ್ರಿ, ಹಾಸ್ಯ, ನಾಟಕ, ರೂಪಕ ಮನೋರಂಜನೆ.
ದಿನಾಂಕ — 26-02-2022 ಶನಿವಾರ
ಉಪನ್ಯಾಸಕರು — ಶ್ರೀ ಪರಮೇಶ್ವರಪ್ಪ ಕುದುರಿ ಹಿಂದಿ ಶಿಕ್ಷಕರು.
ಸ.ಫ್ರೌ ಶಾಲೆ ರಾಮಜೋಗಿಹಳ್ಳಿ ಚಿತ್ರದುರ್ಗ. ಹಾಸ್ಯ ಕಲಾವಿದರು ಧಾರವಾಡ.

29) ವಿಷಯ — ಕಲಿಕಾ ಚೇತರಿಕೆ — 2022-23. ಕಲಿಕಾ ಚೇತರಿಕಾ ಕಾರ್ಯಕ್ರಮದ ಪರಿಚಯ ಏನು, ಏಕೆ, ಹೇಗೆ..
ದಿನಾಂಕ — 01-05-2022 ಭಾನುವಾರ.
ಉಪನ್ಯಾಸಕರು — ಡಾ.ಗುಣವತಿ ಎಸ್
ಕಿರಿಯ ಕಾರ್ಯಕ್ರಮಾಧಿಕಾರಿಗಳು. ರಾಜ್ಯ ಯೋಜನಾ ನಿರ್ದೇಶಕರ ಕಚೇರಿ. ಸಮಗ್ರ ಶಿಕ್ಷಣ ಕರ್ನಾಟಕ ಬೆಂಗಳೂರು.

30) ವಿಷಯ — (4 ರಿಂದ 9 ನೇ ತರಗತಿ)
ಕಲಿಕಾ ಚೇತರಿಕೆಯಲ್ಲಿ ಶಿಕ್ಷಕರ ಪಾತ್ರ,ತರಗತಿ ಪ್ರಕ್ರಿಯೆ, ದಾಖಲೆಗಳ ನಿರ್ವಹಣೆ ಹಾಗೂ ಸಂವಾದ ಕಾರ್ಯಕ್ರಮ.
ದಿನಾಂಕ– 14-05-2022 ಶನಿವಾರ.
ಉಪನ್ಯಾಸಕರು — ಶ್ರೀ ಬಾನುಕುಮಾರ್ ಆರ್
ಕೆ ಇ ಎಸ್. ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಹಾಗೂ ಡಯಟ್ ಉಪನ್ಯಾಸಕರು ಮಂಡ್ಯ.
ಉಪಸ್ಥಿತಿ — ಶ್ರೀ ರವೀಂದ್ರ ಆರ್ ಡಿ.
ರಾಜ್ಯ ಸಂಪನ್ಮೂಲ ವ್ಯಕ್ತಿಗಳು.

31 ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ರಾಜ್ಯ ಘಟಕ ಧಾರವಾಡ. ಕಲಬುರ್ಗಿ ಜಿಲ್ಲಾ ಘಟಕ ಹಾಗೂ SKUP ಸಂಘ ಕಲಬುರ್ಗಿ ಸಹಯೋಗದಲ್ಲಿ SSLC ಮಕ್ಕಳಿಗೆ ಪ್ರತಿದಿನ ಸಂಜೆ ವಿಷಯವಾರು ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ರಾಜ್ಯಾದ್ಯಂತ ಪಾಠಗಳು ನೇರ ಪ್ರಸಾರ ವಾಗಿವೆ. ರಾಜ್ಯದ ಮಕ್ಕಳು ಪ್ರಯೋಜನ ಪಡೆದಿದ್ದಾರೆ.

32) ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯ ಘಟಕ ಧಾರವಾಡ.
ಹಾಗೂ ಕರ್ನಾಟಕ ಪ್ರತಿಭಾ ಪರಿಷತ್ ಮೈಸೂರು
ಇವರ ಸಹಯೋಗದಲ್ಲಿ ಮಾತೆ ಸಾವಿತ್ರಿಬಾಯಿ ಫುಲೆಯವರ ಕುರಿತ ಜೀವನ ಚರಿತ್ರೆಯನ್ನು ನಾಡಿನಾದ್ಯಂತ ಎಲ್ಲಾ ಪದಾಧಿಕಾರಿಗಳು ವಿಡಿಯೋ ಮಾಡುವ ಮೂಲಕ ಅವರ ಜೀವನ ಚರಿತ್ರೆಯನ್ನು ಮನೆ ಮನೆಗೂ ತಲುಪಿಸುವ ಕಾರ್ಯ ಮಾಡಲಾಯಿತು.

ಡಾ. ಲತಾ. ಎಸ್. ಮುಳ್ಳೂರ. ಅವರು ರಾಜ್ಯ.ಜಿಲ್ಲಾ. ತಾಲೂಕು ಪದಾಧಿಕಾರಿಗಳಿಗೆ ಸ್ವತಃ ತಾವೇ ವಾರ್ಷಿಕ ಕ್ರಿಯಾಯೋಜನೆ ತಯಾರಿಸಿ ಬಿಡುಗಡೆ ಮಾಡಿ ನಿರಂತರ ಸಂಘದ ಪದಾಧಿಕಾರಿಗಳು ಕ್ರಿಯಾಶೀಲರಾಗಿ ಚಟುವಟಿಕೆಗಳಲ್ಲಿ ಭಾಗವಹಿಸಲು ಉತ್ತೇಜಿಸಿದ್ದಾರೆ

ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ರಾಜ್ಯಘಟಕ ಧಾರವಾಡ💐💐💐💐💐💐💐 ( ಡಾ. ಲತಾ. ಎಸ್. ಮುಳ್ಳೂರ ಸಂಸ್ಥಾಪಕ ರಾಜ್ಯಾಧ್ಯಕ್ಷರು ವಾರ್ಷಿಕ ಕ್ರಿಯಾಯೋಜನೆ ಬಿಡುಗಡೆ ಮಾಡಿರುವರು.💐💐💐💐💐💐💐💐💐

ವಾರ್ಷಿಕ ಕ್ರಿಯಾಯೋಜನೆ💐💐💐💐💐💐
( ೧) ಜನೇವರಿ — 3.ಮಾತೆ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ. ಉತ್ತಮ ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಪ್ರಧಾನ. , ಹಾಗೂ ಉಪನ್ಯಾಸ ಕಾರ್ಯಕ್ರಮ

ಜನೇವರಿ 24.ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ.ವಿನೂತನ ಸ್ಪರ್ಧೆ ಗಳು,ಮಕ್ಕಳ ಕುರಿತು ಜಾಗೃತಿ ಕಾರ್ಯಕ್ರಮ

.(2) ಫೆಬ್ರವರಿ 2.ಕಲ್ಪನಾಚಾವ್ಲಾ‌ ಅವರ ಮರಣ.ವಾರ್ಷಿಕೋತ್ಸವ, ಭಾರತೀಯ ಕೋಷ್ಟಕ ಗಾರ್ಡ್ ದಿನ,ಉಪನ್ಯಾಸ

.★ ಫೆಬ್ರವರಿ 11. ವಿಜ್ಞಾನದಲ್ಲಿ ಮಹಿಳಾ & ಬಾಲಕಿಯರ ಅಂತಾರಾಷ್ಟ್ರೀಯ ದಿನಾ ಚರಣೆ

.★ ಫೆಬ್ರವರಿ 20. ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪನಾ ದಿನ. ಆಚರಣೆ. ಶೈಕ್ಷಣಿಕ ಉಪನ್ಯಾಸ,

*(3)
*ಮಾರ್ಚ್ 8 ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಉಪನ್ಯಾಸ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆ ಯರಿಗೆ ಸನ್ಮಾನ*

.★ ಮಾರ್ಚ 10.ಮಾತೆ ಸಾವಿತ್ರಿ ಬಾಯಿ ಫುಲೆ ಅವರ ಪುಣ್ಯ ತಿಥಿ, ಉಪನ್ಯಾಸ
.★ ಮಾರ್ಚ 27. ವಿಶ್ವ ರಂಗಭೂಮಿ ದಿನ.ಕಲಾವಿದರಿಗೆ ಗೌರವಿಸುವದು

.(4) ಎಪ್ರಿಲ್ 2. ಅಂತರಾಷ್ಟ್ರೀಯ ಮಕ್ಕಳ ಪುಸ್ತಕ ದಿನ.ಮಕ್ಕಳ ಪುಸ್ತಕ ಕೊಡುಗೆ, ಮಕ್ಕಳಲ್ಲಿ ಓದುವ ಹವ್ಯಾಸ , ಉಪನ್ಯಾಸ , ಮಕ್ಕಳ ಪುಸ್ತಕ ಸಂಗ್ರಹ

.★ ಎಪ್ರಿಲ್ 7.ವಿಶ್ವ ಆರೋಗ್ಯ ದಿನ.ಉಪನ್ಯಾಸ ಅಥವಾ ಉಚಿತ ಆರೋಗ್ಯ ತಪಾಸಣಾ ಶಿಬಿರ

.★ ಎಪ್ರಿಲ್ 11.ಜ್ಯೋತಿಬಾ ಫುಲೆ ಅವರ ಜನ್ಮದಿನಾಚರಣೆ ಆಚರಿಸುವುದು

.★
ಎಪ್ರಿಲ್ 14.ಅಂಬೇಡ್ಕರ ಅವರ ಜಯಂತಿ ಆಚರಿಸುವುದು ಉಪನ್ಯಾಸ

6) ಜೂನ್ 1. ದಾಖಲಾತಿ ಆಂದೋಲನ ಸ್ಲಮ್ ಏರಿಯಾಗಳಿಗೆ ಹೋಗಿ ಶಿಕ್ಷಣ ಮಹತ್ವ ಸರಕಾರದ ಉಚಿತ ಯೋಜನೆಗಳ ಬಗ್ಗೆ ಜಾಗ್ರತೆ ಮೂಡಿಸುವುದು.
ದಾಖಲಾತಿ ಆಂದೋಲನ ಮತ್ತು ಜಿಲ್ಲಾ ಹಾಗೂ ತಾಲೂಕ ಪದಾಧಿಕಾರಿಗಳ ಸಭೆ

.★ ಜೂನ್ 5.ವಿಶ್ವ ಪರಿಸರ ದಿನ.ಸಸಿ ನೆಡುವುದು,ಸಸಿ ವಿತರಣೆ ಜಾಗ್ರತೆ ಕಾರ್ಯ ಪರಿಸರ ರಕ್ಷಣೆ ಜಾಗೃತಿ ಕಾರ್ಯಕ್ರಮ

.★ ಜೂನ್ 12.ಬಾಲಕಾರ್ಮಿಕ ವಿರೋಧಿ ದಿನ ತಾಯಂದಿರ ಸಭೆ
.
(7) ಜುಲೈ 1.ರಾಷ್ಟ್ರೀಯ ವೈದ್ಯರ ದಿನ.ವೈದ್ಯರಿಗೆ ಸನ್ಮಾನ. ಗೌರವಿಸುವದು

ಜುಲೈ 26.ಕಾರ್ಗಿಲ್ ವಿಜಯ ದಿನ.ಮಿಲಿಟರಿ ಸೈನಿಕರಿಗೆ ಗೌರವಿಸುವುದು ಅಥವಾ ನಿವೃತ್ತ ಸೈನಿಕರ ಅನುಭವ ನುಡಿಗಳು ಉಪನ್ಯಾಸ , ಅವರ ಅನುಭವದ ನುಡಿಗಳು.

(8) ಅಗಷ್ಟ 15 ನಮ್ಮ ದೇಶ ನಮ್ಮ ಹೆಮ್ಮೆ.ಸ್ವಾತಂತ್ರ್ಯ ದಿನಾಚರಣೆ , ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವಿಸುವುದು ಅಥವಾ ಅನುಭವದ ನುಡಿಗಳು.

ಅಗಷ್ಟ 26.ಮಹಿಳಾ ಸಮಾನತೆಯ ದಿನ.ಸಮಾನತೆ ಬಗ್ಗೆ ಜಾಗೃತಿ ಮೂಡಿಸುವುದು ಉಪನ್ಯಾಸ

.(9) ಸೆಪ್ಟೆಂಬರ್ 5 . ಶಿಕ್ಷಕರ ದಿನಾಚರಣೆ.ನಿವೃತ್ತ ಶಿಕ್ಷಕರಿಗೆ ಗೌರವಿಸುವುದು, ಅತ್ಯುತ್ತಮ ಶಿಕ್ಷಕರಿಗೆ ಗೌರವಿಸುವುದು

.(10) ಅಕ್ಟೋಬರ್ 1.ಕಿತ್ತೂರ ರಾಣಿ ಚೆನ್ನಮ್ಮ ದಿನ.ಉಪನ್ಯಾಸ.

ಅಕ್ಟೋಬರ್ 2.ಗಾಂಧಿ ಜಯಂತಿ ಆಚರಣೆ

.★ ಅಕ್ಟೋಬರ್ 5.ವಿಶ್ವ ಶಿಕ್ಷಕರ ದಿನಾಚರಣೆ ಆಚರಣೆ

.★ ಅಕ್ಟೋಬರ್ 11.ರಾಷ್ಟ್ರೀಯ ಹೆಣ್ಣುಮಕ್ಕಳ ದಿನ, ಉಪನ್ಯಾಸ

.(11) ನವ್ಹಂಬರ್ 2.ಓನಕೆ ಓಬವ್ವ ಜಯಂತಿ ಆಚರಣೆ

.★ ನವ್ಹಂಬರ್ 25. ಮಹಿಳೆಯರ ಮೇಲಿನ ದೌರ್ಜನ್ಯ ನಿವಾರಣೆಗಾಗಿ ಅಂತಾರಾಷ್ಟ್ರೀಯ ದಿನ.ಉಪನ್ಯಾಸ ಪ್ರಸ್ತುತ ಮಹಿಳೆಯರಿಗೆ ಇರುವ ಕಾನೂನುಗಳ ತಿಳುವಳಿಕೆ ಮಹಿಳಾ ವಕೀಲರ ಉಪನ್ಯಾಸ

.★ ನವ್ಹಂಬರ್ 28.ಜ್ಯೋತಿಬಾ ಫುಲೆ ಅವರ ಪುಣ್ಯ ತಿಥಿ, ಆಚರಣೆ ಉಪನ್ಯಾಸ.

(12) ಡಿಸೆಂಬರ್ 3.ವಿಶ್ವ ಅಂಗವಿಕಲರ ದಿನ.ವಿಕಲ ಚೇತನರಿಗೆ ಸಹಾಯ ಉಪನ್ಯಾಸ
💐💐💐💐💐💐💐

ಡಾ. ಲತಾ. ಎಸ್. ಮುಳ್ಳೂರ. ಸಂಸ್ಥಾಪಕ ರಾಜ್ಯಾಧ್ಯಕ್ಷರು
ಹಾಗೂ ರಾಜ್ಯ ಪದಾಧಿಕಾರಿಗಳು💐💐💐💐💐
.ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ರಾಜ್ಯಘಟಕ ಧಾರವಾಡ

  • 2017 -18 ರಲ್ಲಿ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವವನ್ನು ಸ್ಥಾಪಿಸಿದವರು ಡಾ. ಲತಾ. ಎಸ್. ಮುಳ್ಳೂರ ಅವರು. ಈ ಸಂಘಟನೆಯು ಕರ್ನಾಟಕದ ಏಕೈಕ ಶಿಕ್ಷಕಿಯರ ಸಂಘಟನೆಯಾಗಿದೆ. ಸಂಘಟನೆಯಲ್ಲಿ ಸರಕಾರಿ. ಅನುದಾನಿತ. ಪ್ರಾಥಮಿಕ. ಪದವೀಧರ.ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಸಂಘಟನೆಯಾಗಿದೆ. ಕರ್ನಾಟಕದಲ್ಲಿ 60/ಕ್ಕಿಂತ ಹೆಚ್ಚು ಮಹಿಳಾ ಶಿಕ್ಷಕಿಯರಿದ್ದು ಯಾವುದೇ ಸಂಘಟನೆಯಲ್ಲಿ ಮಹಿಳಾ ಶಿಕ್ಷಕಿಯರಿಗೆ ಇಲ್ಲಿಯವೆರೆಗೂ ಸರಿಯಾದ ಸ್ಥಾನ ಮಾನ ನೀಡಿಲ್ಲ. ಸಮಾನತೆ ಇಲ್ಲ. ಶಿಕ್ಷಕಿಯರಿಗೆ ತಮ್ಮದೇ ಆದ ಸಮಸ್ಯೆಗಳು ಇರುತ್ತವೆ. ಅವುಗಳ ಬಗ್ಗೆ ಪುರುಷಪ್ರಧಾನ ಸಂಘಟನೆಗಳು ಗಮನನೀಡಿಲ್ಲ . ಸ್ವಾತ0ತ್ರ್ಯವಿಲ್ಲ ಶಿಕ್ಷಕಿಯರ ಬೇಕು ಬೇಡಿಕೆ ಮಾನಸಿಕ ಲೈಂಗಿಕ ಕಿರುಕುಳ ಕಾನೂನು ನೆರವು ಒಡಗಿಸುವದು ಹಾಗೂ ಮಾತೆ ಸಾವಿತ್ರಿಬಾಯಿ ಫುಲೆ ಯವರು ನಡೆದು ಬಂದ ಹಾದಿಯಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕI ಕಾರ್ಯಗಳಿಗೆ ಸಂಘಟನೆ.ಪ್ರಾಮುಖ್ಯತೆ ನೀಡಿದೆ.ಇವೆಲ್ಲ ಕಾರಣಗಳಿಂದ ಡಾ. ಲತಾ. ಎಸ್. ಮುಳ್ಳೂರ ಅವರು ಕರ್ನಾಟಕದಲ್ಲಿ ಪ್ರತ್ಯೇಕವಾದ ಶಿಕ್ಷಕಿಯರ ಸಂಘಟನೆ ಸ್ಥಾಪಿಸಿದ್ದಾರೆ. ಸಂಘ ಸ್ಥಾಪನೇಯಾಗಿ ಕೇವಲ 05 ವರ್ಷದಲ್ಲಿ ರಾಜ್ಯಾದ್ಯಂತ ಪ್ರತಿಜಿಲ್ಲೆ ಪ್ರತಿ ತಾಲೂಕಿನಲ್ಲಿ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘಟನೆಯನ್ನು ರಾಜ್ಯ ಪದಾಧಿಕಾರಿಗಳ ಸಹಾಯ ಸಹಕಾರದೊಂದಿಗೆ ಸ್ಥಾಪಿಸಿದ್ದಾರೆ.

*ಹಾಗೂ 2023 ರಲ್ಲಿ ರಾಷ್ಟ್ರ ಮಟ್ಟದ ಏಕೈಕ ಶಿಕ್ಷಕಿಯರ ಸಂಘ *ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್(ರಿ) ನವದೆಹಲಿ ಸ್ಥಾಪಿಸಿ. ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ರಾದರು.ಬೇರೆ ಬೇರೆ ರಾಜ್ಯಗಳಿಂದ ರಾಷ್ಟ್ರೀಯ ಪದಾಧಿಕಾರಿಗಳೊಂದಿಗೆ ಬೇರೆ ಬೇರೆ ರಾಜ್ಯದಿಂದ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ರಾಷ್ಟ್ರ ಮಟ್ಟದಲ್ಲಿ ಸ್ಥಾಪಿಸಿ.ಧಾರವಾಡ ಆಲೂರ ವೆಂಕಟರಾವ ಭವನದಲ್ಲಿ ದಿ -26.08.2023 ರಂದು ಡಾ.ಲತಾ.ಎಸ್.ಮುಳ್ಳೂರ ಅವರ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ರಾಷ್ಟ್ರ ಸಂಘದ ಉದ್ಘಾಟನೆ ಆಯಿತು.15 ರಾಜ್ಯಗಳಿಂದ ಪದಾಧಿಕಾರಿಗಳು ಆಗಮಿಸಿದ್ದರು. ರಾಷ್ತ್ರದ ಹಾಗೂ ರಾಜ್ಯದ ಏಕೈಕ ಶಿಕ್ಷಕಿಯರ ಸಂಘಟನೆಯಾಗಿದೆ.
” ರಾಜ್ಯಾದ್ಯಂತ ಸಾವಿತ್ರಿಬಾಯಿ ಫುಲೆ ಚಲನಚಿತ್ರ ಬಿಡುಗಡೆ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ(“ಸಾವಿತ್ರಿಬಾಯಿ ಫುಲೆ ಚಲನಚಿತ್ರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿ ಪಡೆದಿದೆ)

*2022 ರಲ್ಲಿ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ಲತಾ. ಎಸ್. ಮುಳ್ಳೂರ. ಹಾಗೂ ಶ್ರೀ ಬಸವಾರಾಜ ಭೂತಾಳಿ ಸಾವಿತ್ರಿಬಾಯಿ ಫುಲೆ ಚಲನಚಿತ್ರ ನಿರ್ಮಾಪಕರು ಹಾಗೂ ಅಧ್ಯಕ್ಷರು ಶ್ರೀ ಅಮೋಘ ಸಿದ್ದೇಶ್ವರ ಕ್ರಿಯೇಷನ್ಸ್ ಸಹಯೋಗದಲ್ಲಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನವಾಗಿದೆ. ಹಿರಿಯ ಪತ್ರಕರ್ತರು ಸಾಹಿತ್ರಿಗಳು ಡಾ. ಸರಜೂ ಕಾಟ್ಕರ್ ಅವರ ಕಾದಂಬರಿ ಆಧಾರಿತ ಚಲನಚಿತ್ರ ಹಾಗೂ ರಾಷ್ಟ್ರ. ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕರಾದ ಶ್ರೀ ವಿಶಾಲರಾಜ್ ಅವರು ನಿರ್ದೇಶಿಸಿದ್ದಾರೆ. ಹಿರಿಯ ಕಲಾವಿದೆ. ರಾಷ್ಟ್ರ ಪ್ರಶಸ್ತಿ ವಿಜೇತೆ. ಶ್ರೀಮತಿ ತಾರಾ ಅನುರಾಧ ಅವರು ಸಾವಿತ್ರಿಬಾಯಿ ಫುಲೆ ಪಾತ್ರಕ್ಕೆ ಜೀವ ತುಂಬಿದ್ದಾರೆ.ಜನಪ್ರಿಯ ರಾಜ್ಯ ಪ್ರಶಸ್ತಿ ವಿಜೇತ ಕಲಾವಿದರಾದ ಶ್ರೀ ಸುಚೇಂದ್ರ ಪ್ರಸಾದ ಅವರು ಜ್ಯೋತಿಬಾ ಫುಲೆ ಅವರ ಪಾತ್ರ ಮಾಡಿದ್ದಾರೆ.

ಬ್ರಿಟಿಷರ ಕಾಲದಲ್ಲಿ ಇಂಡಿಯನ್ ಫಸ್ಟ್ ಲೇಡಿ ಟೀಚರ್ ಪ್ರಶಸ್ತಿ ಪಡೆದ ಸಾವಿತ್ರಿಬಾಯಿ ಫುಲೆ ಅವರು ಭಾರತದ ಪ್ರಥಮ ಶಿಕ್ಷಕಿ ಬ್ರಿಟಿಷರ ಕಾಲದಲ್ಲಿ ಮಹಿಳೆಯರ ಶಿಕ್ಷಣಕ್ಕಾಗಿ ಹೋರಾಡಿದ ಸಾಧಕಿ ಸತಿಸಹಗಮನ್. ಕೇಶ ಮುಂಡನೆ. ವಿಧವೆಯರ ಮೇಲಿನ ಅತ್ಯಾಚಾರ ಜಾತೀಯತೆ ಮುಂತಾದ ವುಗಳ ವಿರುದ್ಧ ಹೋರಾಡಿದ ಸಾವಿತ್ರಿಬಾಯಿ ಫುಲೆ ಅವರ ಹೆಸರಿನಿಂದ ಕಟ್ಟಿದ ಸಂಘಟನೆ ಸಾರ್ಥಕ ವಾಗಿದೆ.

ಸಂಘದ ಸಹಾಯವಾಣಿ ಹಾಗೂ ವೆಬ್ಸೈಟ್ ಬಿಡುಗಡೆ. ಜನೇವರಿ 2024 *ರಾಜ್ಯದಲ್ಲಿ ಯಾವುದೇ ಸಂಘಟನೆ ಇಲ್ಲಿಯರೆಗೂ ಸಹಾಯವಾಣಿ ಪ್ರಾರಂಭಿಸಿಲ್ಲ. ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಡಾ.ಲತಾ.ಎಸ್.ಮುಳ್ಳೂರ ಅವರು ಶಿಕ್ಷಕಿಯರ ಸಮಸ್ಯೆಗಳಿಗಾಗಿ ಅವರ ಸಹಾಯಕ್ಕಾಗಿ ಸಹಾಯವಾಣಿ ಪ್ರಾರಂಭಿಸಿದ್ದಾರೆ.ಜನೇವರಿ 2024 ರಲ್ಲಿ ಪ್ರಾರಂಭಿಸಿದರು. ಸಂಘದ ವೆಬ್ಸೈಟ್ ಕೂಡ ಬಿಡುಗಡೆ ಮಾಡಿದ್ದಾರೆ.
ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಒಂದು ಸಂಘಟನೆ ಶಿಕ್ಷಕಿಯರ ಸಂಘದ ಸಹಾಯವಾಣಿ ಹಾಗೂ ವೆಬಸೈಟ್ ಬಿಡುಗಡೆ ಮಾಡಿದೆ ಎಂದರೆ ಅದು ಡಾ. ಲತಾ.ಎಸ್.ಮುಳ್ಳೂರ ಅವರ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘಟನೆ.

ಸಮಾರಂಭ ಉದ್ಘಾಟಕರು.ಗೌರವಾನ್ವಿತ ಸನ್ಮಾನ್ಯ ಶ್ರೀ ಬಸವರಾಜ ಹೊರಟ್ಟಿ ಸರ ನೆರವೇರಿಸಿದರು.

ಮಾನ್ಯ ಶ್ರೀ ಬಸವರಾಜ. ಭೂತಾಳಿ. ರಾಜ್ಯ ಹಾಗೂ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪಡೆದ “ಸಾವಿತ್ರಿಬಾಯಿ ಫುಲೆ” ಚಲನಚಿತ್ರ ನಿರ್ಮಾಪಕರು.ಅಧ್ಯಕ್ಷ ರು ಗ್ರಾಮ ಪಂಚಾಯತಿ ಗೋಕಾಕ.ಹಾಗೂ ಅಧ್ಯಕ್ಷರು ಅಮೋಘ ಸಿದ್ದೇಶ್ವರ ಕ್ರಿಯೇಷನ್ಸ್ ಇವರು ನಮ್ಮ ಸಂಘದ ಸಹಾಯವಾಣಿ ಹಾಗೂ ವೆಬ್ ಸೈಟ್ ಉದ್ಘಾಟಿಸಿದರು. ಉದ್ಘಾಟಿಸಿ ಮಾತನಾಡಿದ ಮಾನ್ಯರು ಇಲ್ಲಿಯರೆಗೂ ಯಾವ ಸಂಘದವರು ಸಹಾಯವಾಣಿ ಬಿಡುಗಡೆ ಮಾಡಿಲ್ಲ.ರಾಜ್ಯದಲ್ಲಿ ಹಾಗೂ ರಾಷ್ಟ್ರದಲ್ಲಿಯೇ ಪ್ರಥಮ ಇದು. ಶಿಕ್ಷಕಿಯರಿಗೆ ಇದು ಅವಶ್ಯ ಕೂಡ. ಬಿಚ್ಚು ಮನಸ್ಸಿನಿಂದ ತಮ್ಮ ಸಮಸ್ಯೆ ಹೇಳಿಕೊಳ್ಳಬಹುದು. ಸಮಸ್ತ ಮಹಿಳಾ ಶಿಕ್ಷಕಿಯರು ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.
*ರಾಜ್ಯದ್ಯಂತ ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ 4 ರಿಂದ 10 ನೇ ತರಗತಿ ಬಹುಮುಖ ಪ್ರತಿಭೆಯುಳ್ಳ ಮಕ್ಕಳಿಗೆ ರಾಜ್ಯ ಪ್ರಶಸ್ತಿ ನೀಡುವದು.ಸರಕಾರಿ ಶಾಲಾ ಮಕ್ಕಳಿಗೆ ಪ್ರೋತ್ಸಾಹಿಸಿದ್ದಾರೆ.

ರಾಜ್ಯದ ಪ್ರತಿ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಶಿಕ್ಷಕಿಯರಿಗೆ ಮಾನ್ಯ ನ್ಯಾಯಾಧೀಶರನ್ನು ವಕೀಲರನ್ನು. ಗೌರವಿಸಿ ಅವರಿಂದ ಉಪನ್ಯಾಸ ಶಿಕ್ಷಕಿಯರಿಗೆ ಪ್ರಸ್ತುತ ಕಾನೂನುಗಳ ಬಗ್ಗೆ.ಹಾಗೂ ಪೋಕ್ಸೋ ಕಾಯ್ದೆ ಬಗ್ಗೆ ಕಾನೂನು ಅರಿವು ಹಾಗೂ ಶಿಕ್ಷಕಿಯರ ಆರೋಗ್ಯ ಸಮಸ್ಯೆಗಳ ಬಗ್ಗೆ ವೈದ್ಯರಿಂದ ಉಪನ್ಯಾಸ(ಸ್ಥನ ಕ್ಯಾನ್ಸರ.ಗರ್ಭಾಶಯ ಕ್ಯಾನ್ಸರ. ಮೆನೋಪಾಸ್ ಬಗ್ಗೆ.ಬಿಪಿ.ಶುಗರ.ಮುಂತಾದವುಗಳ ಬಗ್ಗೆ ಜಾಗೃತಿ ) ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ.ಕಣ್ಣಿನ ತಪಾಸಣೆ ಕಾರ್ಯಕ್ರಮ ಆಯೋಜನೆ. ಹಾಗೂ ನಿರಾಶ್ರಿತರ ಕೇಂದ್ರ.ವೃದ್ಧಾಶ್ರಮ ಕ್ಕೆ ಭೇಟಿ ಸಹಾಯ. ಕರೊನಾ ವಾರಿಯರ್ಸ್ ಗೆ ಮೆಡಿಕಲ್ ಕಿಟ್ ವಿತರಣೆ. SSLC ಮಕ್ಕಳಿಗೆ ಮಾಸ್ಕ್ ವಿತರಣೆ ಹೀಗೆ ಅನೇಕ ಸಾಮಾಜಿಕ ಕಾರ್ಯದಲ್ಲಿ ಸಂಘಟನೆಯನ್ನು ತೊಡಲಿಸಿದ್ದಾರೆ.

ಡಾ. ಲತಾ. ಎಸ್. ಮುಳ್ಳೂರ ಅವರು ವಿವಿಧ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ

1)ಒಂದೇ ದೇಶ. ಒಂದೇ. ವೃತ್ತಿ ಒಂದೇ ವೇತನ ಹೋರಾಟದಲ್ಲಿ ಭಾಗವಹಿಸಿದ್ದಾರೆ

2) ರಕ್ತ ಕೊಟ್ಟೆವು ಪಿಂಚಣಿ ಬಿಡೆವು ಹೋರಾಟಕ್ಕೆ ಬೆಂಬಲ ಸೂಚಿಸಿ ಭಾಗವಹಿಸಿದ್ದಾರೆ

3) ಬೆಂಗಳೂರು ಫ್ರೀಡಂ ಪಾರ್ಕನಲ್ಲಿ ನಡೆದ ಪದವೀಧರ ಶಿಕ್ಷಕರಿಗೆ ಹಿಂಬಡ್ತಿ ಖಂಡಿಸಿ ಬೆಂಗಳೂರು ಹೋರಾಟದಲ್ಲಿ ಭಾಗವಹಿಸಿದ್ದಾರೆ

4) ಟ್ವಿಟ್ಟರ್ ಅಭಿಯಾನ. ಹಳೆ ಪಿಂಚಣಿ ಯೋಜನೆ ಜಾರಿಗೆ ಬರಲಿ .ರಾಜ್ಯಾ ದ್ಯಂತ ಮುಷ್ಕರದಲ್ಲಿ ಜಾಥಾದಲ್ಲಿ. ಸಂಘದ ಪದಾಧಿಕಾರಿಗಳೊಂದಿಗೆ ಅಭಿಯಾನಕ್ಕೆ ಬೆಂಬಲ ಸೂಚಿಸಿ ಭಾಗವಹಿಸಿದ್ದಾರೆ

5) 100 ವರ್ಷ ಇತಿಹಾಸ ಇರುವ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದಲ್ಲಿ ಇಲ್ಲಿಯವರೆಗೂ ಮಹಿಳಾ ಮೀಸಲಾತಿ ನೀಡಿಲ್ಲ. ಮಹಿಳಾ ನೌಕರರಿಗೆ ಸಮಾನ ಸ್ಥಾನಮಾನ ಇಲ್ಲ. ಡಾ. ಲತಾ. ಎಸ್. ಮುಳ್ಳೂರ ಅವರ ನೇತೃತ್ವದಲ್ಲಿ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿಂದ ರಾಜ್ಯಾದ್ಯಂತ ರಾಜ್ಯ ಜಿಲ್ಲಾ ತಾಲೂಕು ಪದಾಧಿಕಾರಿಗಳು. ಮಹಿಳಾ ಶಿಕ್ಷಕಿಯರಿಗೆ. ಬೇರೆ ಬೇರೆ ಇಲಾಖೆಯ ಮಹಿಳಾ ನೌಕರರು ರಾಜ್ಯಾದ್ಯಂತ ಪತ್ರ ಚಳುವಳಿ ಮಾಡಲಾಯಿತು ಮಹಿಳಾ ಮೀಸಲಾತಿ ಕೋರಿದ ಲೆಕ್ಕವಿಲ್ಕದಷ್ಟು ಪತ್ರಗಳು ನೌಕರರ ಸಂಘದ ರಾಜ್ಯಾಧ್ಯಕ್ಷರಿಗೆ ತಲುಪಿವೆ

6) ರಾಜ್ಯಾದ್ಯಂತ ಪದವೀಧರ ಶಿಕ್ಷಕರಿಗೆ ಹಿಂಬಡ್ತಿ ಅನ್ಯಾಯ ದ ವಿರುದ್ಧ ರಾಜ್ಯಾದ್ಯಂತ ಮಾನ್ಯ ಮುಖ್ಯಮಂತ್ರಿಗಳಿಗೆ .ಶಾಸಕರಿಗೆ ಮನವಿ ನೀಡುವ ಅಭಿಯಾನ ದಲ್ಲಿ ಪಾಲ್ಗೊಂಡು ಪದವೀಧರ ಶಿಕ್ಷಕರಿಗೆ ಬೆಂಬಲ ಕೊಡಲಾಗಿದೆ. ಫ್ರೀಡಂ ಪಾರ್ಕ್ ಹೋರಾಟದಲ್ಲಿ ಹಾಗೂ PST ಶಿಕ್ಷಕರ ಹಿಂಬಡ್ತಿ ಯ ಪ್ರತಿ ಹೋರಾಟ ದಲ್ಲಿ ಭಾಗವಹಿಸಿದ್ದಾರೆ.

7),ಗ್ರಾಮೀಣ ಶಿಕ್ಷಕರು ಹಾಗೂ ಶಹರ ಶಿಕ್ಷಕರ ವೇತನ ತಾರತಮ್ಯ ಹೋರಾಟಕ್ಕೆ ಬೆಂಬಲ ಸೂಚಿಸಿ ಭಾಗವಹಿಸಲಾಗಿದೆ

8)ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ರಾಜ್ಯಾದ್ಯಂತ ಹೋರಾಟಕ್ಕೆ ಕರೆ ಕೊಟ್ಟಾಗ ಭಾಗವಹಿಸಿ ಬೆಂಬಲ ನೀಡಿದ್ದಾರೆ.

9) ಧಾರವಾಡದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ಸಂಘಟಯ ಹಳೆ ಪಿಂಚಣಿ ಯೋಜನೆ ಜಾರಿಗೆ ಬರುವ ಹೋರಾಟದಲ್ಲಿ ಭಾವವಹಿಸಿ ಬೆಂಬಲ ಸೂಚಿಸಿದ್ದಾರೆ

10) ಪದವೀಧರ ಶಿಕ್ಷಕರಿಗೆ ಆದ ಹಿಂಬಡ್ತಿ ಅನ್ಯಾಯ ವಿರುದ್ಧ ರಾಜ್ಯಾದ್ಯಂತ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘಟನೆಯಿಂದ ರಾಜ್ಯಾದ್ಯಂತ ಸರಕಾರಕ್ಕೆ ಮನವಿ ಅರ್ಪಿಸುವ ಅಭಿಯಾನ
11)

  • ಡಾ. ಲತಾ.ಎಸ್. ಮುಳ್ಳೂರ ಹಾಗೂ ಸಂಘದ ಪದಾಧಿಕಾರಿಗಳ ಹೋರಾಟದ ಫಲಶ್ರುತಿಯಾಗಿ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿಂದ ಹಲವು ಬೇಡಿಕೆಗಳು ಸರಕಾರದಿಂದ ಈಡೇರಿವೆ ಅವುಗಳ
    1)ಜನೇವರಿ 03 ಮಾತೇ ಸಾವಿತ್ರಿಬಾಯಿ ಫುಲೆಯವರ ಜನ್ಮದಿನಾಚರಣೆಯನ್ನು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಆಚರಿಸುವಂತೆ ಸರಕಾರದಿಂದ ಆದೇಶ ಮಾಡಬೇಕೆಂದು ಸನ್ಮಾನ್ಯ ಶಿಕ್ಷಣ ಸಚಿವರಾದ ಶ್ರೀ ಸುರೇಶಕುಮಾರ್ ಅವರಿಗೆ ಡಾ. ಲತಾ. ಎಸ್. ಮುಳ್ಳೂರ ಅವರ ನೇತೃತ್ವದಲ್ಲಿ ರಾಜ್ಯ ಪದಾಧಿಕಾರಿಗಳ ತಂಡ ಒತ್ತಾಯ ಮಾಡಲಾಗಿತ್ತು ತಕ್ಷಣ ಸನ್ಮಾನ್ಯ ಸಚಿವರು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿದರು.
    ಸೂಚಿಸಿದರು 2019 ರಲ್ಲಿ ಪ್ರತಿವರ್ಷ ಜನೇವರಿ 03 ರಂದು ಎಲ್ಲ ಶಾಲೆಗಳಲ್ಲಿ ಮಾತೇ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ ಆಚರಿಸಬೇಕೆಂದು ಆದೇಶವಾಗಿದೆ
    2)ಗೌರವಾನ್ವಿತ ಮಾನ್ಯ ಮುಖ್ಯಮಂತ್ರಿಗಳಿಗೆ ಸಂಘಟನೆಯಿಂದ ಮನವಿ ಮಾಡಲಾಗಿತ್ತು ಸೆಪ್ಟೆಂಬರ್ 05 ಶಿಕ್ಷಕರ ದಿನಾಚರಣೆ ಯಂದು ಮಾತೇ ಸಾವಿತ್ರಿಬಾಯಿ ಫುಲೆ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಬೇಕೆಂದು ಮನವಿ ನೀಡಲಾಗಿತ್ತು ಈ ವರ್ಷದ 2022 ರ ಬಜೆಟನಲ್ಲಿ ಮಾನ್ಯ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.
    3)ಶಿಶುಪಾಲನ ರಜೆಗೆ ಸರಕಾರಕ್ಕೆ ಒತ್ತಾಯಿಸಲಾಗಿತ್ತು. ಪ್ರಸ್ತುತ ಶಿಕ್ಷಕಿಯರಿಗೆ ರಜೆ ಮಂಜೂರಾಗಿದೆ.
    4) ಕಳೆದ ವರ್ಷ್ ಬೇಸಿಗೆ ರಜೆ ಕಡಿತಗೊಂಡಿದ್ದು ಮಾನ್ಯ ಶಿಕ್ಷಣ ಸಚಿವರಿಗೆ ಮನವಿ ನೀಡಿದಾಗ ಮಾನ್ಯರು ಸ್ಪಂದಿಸಿ ಮರು ಆದೇಶ ಮಾಡಿದರು.
    ಇನ್ನು ಹಲವಾರು ಬೇಡಿಕೆಗಳು ಈಡೇರಿವೆ.