ವೈದ್ಯರ ದಿನಾಚರಣೆ ಪ್ರಯುಕ್ತ ವೈದ್ಯರಿಗೆ ಸನ್ಮಾನ

“ವೈದ್ಯ ನಾರಾಯಣೋ ಹರಿ” ವೈದ್ಯರ ದಿನಾಚರಣೆ ಪ್ರಯುಕ್ತ ದಿನಾಂಕ 02-07-2 022 ಶನಿವಾರದಂದು ಪ್ರಾಥಮಿಕ ಆರೋಗ್ಯ ಕೇಂದ್ರ ಘಟಕ ಮಂಡಘಟ್ಟದಲ್ಲಿ ವೈದ್ಯರಿಗೆ ಸನ್ಮಾನ ಕಾರ್ಯಕ್ರಮ ಕರ್ನಾಟಕ ಸಾವಿತ್ರಬಾಯಿ ಫುಲೆ ಶಿಕ್ಷಕಿಯರ ಸಂಘ ಶಿವಮೊಗ್ಗ ಇವರಿಂದ ಸಮಾರಂಭ ನಡೆಸಲಾಯಿತು. ಆಸ್ಪತ್ರೆಯ ವೈದ್ಯರಾದ ಶ್ರೀಯುತ ಸುರೇಶ್,l ಅಪ್ಪಾಜಿಗೌಡ ,ಹಾಗೂ ಸಿಬ್ಬಂದಿ ವರ್ಗದವರಾದ ಶ್ರೀಮತಿ ಪ್ರೇಮ, ಸುಮಾ, ರಂಗನಾಥ್, ಮುಂತಾದವರು *ಪಾಲ್ಗೊಂಡಿದ್ದರು. ಇವರಿಗೆ ಕರ್ನಾಟಕ *ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಮತಿ ರಾಧಾ ಪ್ರಭುಗೌಡ ಅವರು ವೈದ್ಯರ ದಿನಾಚರಣೆ ಪ್ರಯುಕ್ತContinue reading “ವೈದ್ಯರ ದಿನಾಚರಣೆ ಪ್ರಯುಕ್ತ ವೈದ್ಯರಿಗೆ ಸನ್ಮಾನ”

ಸಾವಿತ್ರಿಬಾಯಿ ಫುಲೆ ಸಂಘದ ಉಪಾಧ್ಯಕ್ಷರಾದ ಸುಜಾತ ಎಸ್ ಹೇಮಂತ್ ರವರ “ಅನುಭಾವ” ಕವನ ಸಂಕಲನದ ಬಿಡುಗಡೆ

ಸುಜಾತ ಎಸ್ ಹೇಮಂತ್ , ಉಪಾಧ್ಯಕ್ಷ ರು, ಸಾವಿತ್ರಿಬಾಯಿ ಫುಲೆ ಸಂಘ, ಶಿವಮೊಗ್ಗ.ಇವರು ಸರ್ಕಾರಿ ಪದವಿ ಪೂರ್ವ ಕಾಲೇಜು ಬಸವಾನಿಯ ಪ್ರೌಢಶಾಲಾ ವಿಭಾಗದಲ್ಲಿ ಸಹ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಇವರ “ಅನುಭಾವ” ಎಂಬ ಶೀರ್ಷಿಕೆಯ ಕವನಸಂಕಲನವನ್ನು ದಿನಾಂಕ26/06/22 ರ ಭಾನುವಾರ ಮಧ್ಯಾಹ್ನ ಎರಡು ಗಂಟೆಗೆ ಮಾನ್ಯ ಶ್ರೀಯುತ ಆರಗ ಜ್ಞಾನೇಂದ್ರ ರವರು ಗೃಹ ಸಚಿವರು ಕರ್ನಾಟಕ ಸರ್ಕಾರ ಇವರು ತಮ್ಮ ಅಮೃತ ಹಸ್ತದಿಂದ ಲೋಕಾರ್ಪಣೆ ಮಾಡಿದರು. ಹಾಗೂ ಅನುಭಾವ ಕೃತಿಗೆ ಶುಭ ಹಾರೈಸಿ ಮಾತನಾಡಿದರು. ಶ್ರೀಯುತ ಹರೀಶ್ ಕೆContinue reading “ಸಾವಿತ್ರಿಬಾಯಿ ಫುಲೆ ಸಂಘದ ಉಪಾಧ್ಯಕ್ಷರಾದ ಸುಜಾತ ಎಸ್ ಹೇಮಂತ್ ರವರ “ಅನುಭಾವ” ಕವನ ಸಂಕಲನದ ಬಿಡುಗಡೆ”

ಶಿಕ್ಷಕಿಗೆ ಹಲ್ಲೆ,ಮಾಂಗಲ್ಯ ಸರ ಕಳವು-ಠಾಣೆಗೆ ದೂರು ಸಲ್ಲಿಸಿದ ಶಿಕ್ಷಕಿಯರ ಸಂಘ

ಸಾಗರ ಮಾ.25.ಕಳೆದ ಎರಡು ದಿನಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ ಶ್ರೀಮತಿ ಪ್ರಭಾವತಿ ಬ್ರಾಹ್ಮಣ ಮಂಚಾಲೆ ರವರು ಎಂದಿನಂತೆ ಬೆಳಿಗ್ಗೆ ಶಾಲೆಗೆ ತೆರಳುತ್ತಿರುವ ಸಂದರ್ಭದಲ್ಲಿ ಮಾರ್ಗ ಮದ್ಯದಲ್ಲಿ‌ ಅವರನ್ನು ಅಪರಿಚಿತ ವ್ಯಕ್ತಿಯೊಬ್ಬರು ಏಕಾಏಕಿ ಅಡ್ಡಗಟ್ಟಿ ಹಲ್ಲೆ ಮಾಡಿ ಕೊರಳಲ್ಲಿದ್ದ 50 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಅಪಹರಣ ಮಾಡಿದ್ದಾರೆ.ಈ ಸುದ್ದಿ ತಿಳಿದ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಸಾಗರ ತಾಲೂಕು ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಆಸ್ಪತ್ರೆಗೆContinue reading “ಶಿಕ್ಷಕಿಗೆ ಹಲ್ಲೆ,ಮಾಂಗಲ್ಯ ಸರ ಕಳವು-ಠಾಣೆಗೆ ದೂರು ಸಲ್ಲಿಸಿದ ಶಿಕ್ಷಕಿಯರ ಸಂಘ”

‘ದಾರ್ಶನಿಕ ದರ್ಶನ’ಪುಸ್ತಕ ಬಿಡುಗಡೆ- ಉಷಾರಾಣಿರವರ ಲೇಖನಕ್ಕೆ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಮೆಚ್ಚುಗೆ.

ಶಿಕಾರಿಪುರ ಜ.27. ಪಟ್ಟಣದಲ್ಲಿ ಸುವ್ವಿ ಪ್ರಕಾಶನ ಹಾಗೂ ಜನಸ್ಪಂದನ ಟ್ರಸ್ಟ್ ವತಿಯಿಂದ ಅಯೋಜಿಸಿದ್ದ ‘ದಾರ್ಶನಿಕರ ದರ್ಶನ’ ಪುಸ್ತಕ ಬಿಡುಗಡೆ ಸಮಾರಂಭ ಆಯೋಜಿಸಲಾಗಿತ್ತು. ಅಧ್ಯಕ್ಷತೆಯನ್ನು ಶ್ರೀ ಜಯಪ್ಪ ನಿವೃತ್ತಿ ಪ್ರಾಂಶುಪಾಲರು ವಹಿಸಿದ್ದು,ಉಪನ್ಯಾಸವನ್ನು ಡಾ.ಮೋಹನ್ ಚಂದ್ರಗುತ್ತಿ,ಸಹ ಪ್ರಧ್ಯಾಪಕರು, ಸಹ್ಯಾದ್ರಿ ಕಾಲೇಜ್ ಶಿವಮೊಗ್ಗ ರವರು ದಾರ್ಶನಿಕ ದರ್ಶನ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು ಸಮಾಜದಲ್ಲಿ ಸಮಾಜದಲ್ಲಿ ಸುಧಾರಣೆ ತರಲು ಶ್ರಮಿಸಿದ ದಾರ್ಶನಿಕರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಅಪಾಯಕಾರಿ ಬೆಳವಣಿಗೆ ಎಂದರು. ನಮ್ಮ ನಾಡಿನಲ್ಲಿ ಹಲವಾರು ದಾರ್ಶನಿಕರು ಕತ್ತಲೆಯಿಂದ ಬೆಳಕಿನಡೆಗೆ ಜನರನ್ನುContinue reading “‘ದಾರ್ಶನಿಕ ದರ್ಶನ’ಪುಸ್ತಕ ಬಿಡುಗಡೆ- ಉಷಾರಾಣಿರವರ ಲೇಖನಕ್ಕೆ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಮೆಚ್ಚುಗೆ.”

ನಿವೃತ್ತಿ ಶಿಕ್ಷಕರಿಗೆ ಗೌರವದಿ ಬೀಳ್ಕೊಟ್ಟ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ

ದಿನಾಂಕ:-27/11/2021 ರಂದು ಮಂಡಘಟ್ಟ ಕ್ಲಸ್ಟರಿನ ಸ.ಕಿ.ಪ್ರಾ.ಸೂಡೂರು ಶಾಲೆಯಲ್ಲಿನಿವೃತ್ತಿ ಹೊಂದಿದ್ದ ಶ್ರೀ ವಿರೂಪಾಕ್ಷಪ್ಪ ಸರ್ ಅವರನ್ನು ನಮ್ಮ ಶಿವಮೊಗ್ಗ ಜಿಲ್ಲಾ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಮತಿ ರಾಧಾ ಅವರು ಜಿಲ್ಲಾ ಸಹಕಾರ್ಯದರ್ಶಿಯಾದ ಶ್ರೀಮತಿ ಸುಮಂಗಲಾ ನಾಯ್ಕ ಅವರು ಶಿವಮೊಗ್ಗ ತಾಲ್ಲೂಕು ಸಂಘದ ಅಧ್ಯಕ್ಷರಾದ ಶ್ರೀಮತಿ ಶಾಹಿನಬಾನು ಹಾಗೂ ಗೌರವಾಧ್ಯಕ್ಷರಾದ ಲಕ್ಷ್ಮೀಯವರು ಸೇರಿ ಸನ್ಮಾನಿಸಿದರು. ಶ್ರೀ ವಿರೂಪಾಕ್ಷಪ್ಪ ಸರ್ ರವರು ಸೂಡೂರು ಸ. ಕಿ.ಪ್ರಾ.ಶಾಲೆಯಲ್ಲಿ ಸುಮಾರು 20 ವರ್ಷಗಳಕಾಲ ಸುದೀರ್ಘ ಸೇವೆ ಸಲ್ಲಿಸಿ ಈಗ ವಯೋ ನಿವೃತ್ತಿ ಹೊಂದಿದ್ದಾರೆ.Continue reading “ನಿವೃತ್ತಿ ಶಿಕ್ಷಕರಿಗೆ ಗೌರವದಿ ಬೀಳ್ಕೊಟ್ಟ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ”

ಧನ ಸಹಾಯ ಮಾಡಿದ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ

ಶಿವಮೊಗ್ಗ- ದಿನಾಂಕ 19:11:2021 ರಂದು ಸಾಗರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಮ್ರೀನ್ ಮತ್ತು ಆಫ್ರೀನ್ ಸಹೋದರಿಯರು ಗಾಯಗೊಂಡಿದ್ದು ಆಫ್ರೀನ್ ಕೋಮಾದಲ್ಲಿ ಇರುತ್ತಾರೆ ಇವರಿಗೆ ಚಿಕಿತ್ಸೆಗಾಗಿ ಆರ್ಥಿಕ ಸಹಾಯ ಕೇಳಲಾಗಿತ್ತು, ಈ ಸುದ್ದಿ ತಿಳಿದ ಕರ್ನಾಟಕ ರಾಜ್ಯ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘ,ತಾಲೂಕು ಘಟಕ- ಶಿವಮೊಗ್ಗ ವತಿಯಿಂದ ಸ್ವಯಂಪ್ರೇರಿತ ಧನ ಸಹಾಯ ಮಾಡಲು ಸಂಘದ ಶಿಕ್ಷಕಿಯರಿಗೆ ಪ್ರಕಟಣೆ ಮಾಡಿ ಸ್ವಯಂ ಪ್ರೇರಣೆಯಿಂದ ಸಂಗ್ರಹವಾದ ಹಣವನ್ನು ಕೋಮ ತಲುಪಿರುವ ಗಾಯಾಳುವಿನ ತಂದೆ ತಾಯಿಗೆ ವಿತರಿಸಿ,ಸಾಂತ್ವನ ಹೇಳಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಶಿವಮೊಗ್ಗ ತಾಲ್ಲೂಕಿನContinue reading “ಧನ ಸಹಾಯ ಮಾಡಿದ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ”

NPS ಶಿಕ್ಷಕರ ಅಕಾಲಿಕ ಮರಣ,ಮೃತರ ಕುಟುಂಬಕ್ಕೆ 1ಲಕ್ಷ ರೂ ಧನ ಸಹಾಯ

ಶಿಕಾರಿಪುರ,ಸೆ.06 ತಾಲ್ಲೂಕಿನ GHPS ಹರಗಿ ಶಾಲೆಯ ಶಿಕ್ಷಕರಾದ ಶ್ರೀಯುತ ದಿನೇಶ್ ರವರು ಇತ್ತೀಚೆಗೆ ಅಕಾಲಿಕ ಮರಣ ಹೊಂದಿದ್ದು, ಸದರಿ ಶಿಕ್ಷಕರು NPS ಯೋಜನೆಗೆ ಒಳಪಟ್ಟವರಾಗಿದ್ದು ನಮ್ಮೆಲ್ಲರಿಗೂ ಗೊತ್ತಿರುವಂತೆ NPS ಯೋಜನೆಗೆ ಒಳಪಡುವ ನೌಕರರ ಮರಣ ಉಪಧನವು ಅತಿ ಕಡಿಮೆ ಇರುತ್ತದೆ. ಇಂತಹ ಸ್ಥಿತಿಯಲ್ಲಿಮೃತ ಶಿಕ್ಷಕರ ತಾಯಿಯವರು ಕ್ಯಾನ್ಸರ್ ಖಾಯಿಲೆಯಿಂದ ಬಳಲುತಿದ್ದು ಅವರ ಕುಟುಂಬ ಸಂಕಷ್ಟದಲ್ಲಿ ಸಿಲುಕಿದೆ. ಈ ಕುಟುಂಬಕ್ಕೆ ಸಹಾಯ ಹಸ್ತ ನೀಡಲು ಶಿಕಾರಿಪುರ ಘಟಕದ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಹಾಗೂ NPSContinue reading “NPS ಶಿಕ್ಷಕರ ಅಕಾಲಿಕ ಮರಣ,ಮೃತರ ಕುಟುಂಬಕ್ಕೆ 1ಲಕ್ಷ ರೂ ಧನ ಸಹಾಯ”