About

ಕರ್ನಾಟಕ ಸಾವಿತ್ರಿಬಾಯಿ‌ ಫುಲೆ ಶಿಕ್ಷಕಿಯರ ಸಂಘ(ರಿ.) ರಾಜ್ಯಘಟಕ-ಧಾರವಾಡ.

ನೊಂದಣಿ‌ ಪತ್ರ

ಇದು ಕರ್ನಾಟಕ ರಾಜ್ಯದ‌ಲ್ಲಿನ ಎಲ್ಲಾ ಸರ್ಕಾರಿ ಅನುದಾನಿತ ಶಾಲೆಗಳ ಪ್ರಾಥಮಿಕ,ಪದವೀಧರ ಹಾಗೂ ಪ್ರೌಢಶಾಲಾ ಶಿಕ್ಷಕಿಯರ ಸ್ವಾಭಿಮಾನದ ಸ್ವಾತಂತ್ರ್ಯ ವೇದಿಕೆಯಾಗಿದೆ. ಶಿಕ್ಷಣದ ಗುಣಮಟ್ಟವನ್ನು ಕಾಯ್ದಿರಿಸುವ ನಿಟ್ಟಿನಲ್ಲಿ, ಶಿಕ್ಷಕಿಯರ ಹಿತಕಾಯುವಲ್ಲಿ ಹಾಗೂ ಸಾಮಾಜಿಕ ಸಮಾನತೆಯನ್ನು ಕಾಪಾಡುವುದಲ್ಲದೇ, ಮಹಿಳಾ ಮತ್ತು ಮಕ್ಕಳ ಸಬಲೀಕರಣದತ್ತ ಉತ್ತಮ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಾಗೂ ಸಾಮಾಜಿಕ ಸೇವೆಯನ್ನು ಮಾಡುವ ಉದ್ದೇಶದಿಂದ 2018-19 ನೇ ಸಾಲಿನಲ್ಲಿ ಸ್ಥಾಪಿತಗೊಂಡಿದೆ. ಕೆಲವೇ ವರ್ಷಗಳಲ್ಲಿ ರಾಜ್ಯಾದ್ಯಂತ ಕ್ಷಿಪ್ರವಾಗಿ, ಬಲಾಡ್ಯವಾಗಿ ಬೆಳೆದಿರುವ ಈ ಕರ್ನಾಟಕ‌ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ‌ವು ಇಂದು‌ ರಾಷ್ಟ್ರಮಟ್ಟದಲ್ಲೂ ತನ್ನ ಕೀರ್ತಿ ಪತಾಕೆಯನ್ನು ಹಾರಿಸಿ,ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್ (ರಿ.) ನವದೆಹಲಿ ಎಂಬ ಹೆಸರಿನಲ್ಲಿ ಹೊರ ರಾಜ್ಯಗಳಿಗೂ ದಾಪು ಕಾಲಿಟ್ಟಿದೆ.

ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರು:- ಡಾ.ಲತಾ.ಎಸ್.ಮುಳ್ಳೂರ,ಕರ್ನಾಟಕ

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು:- ಶ್ರೀಮತಿ ಒಕಾಂತಿ ರಜಿತಾ,ತೆಲಂಗಾಣ.

ರಾಷ್ಟ್ರೀಯ ಜನರಲ್ ಕಾರ್ಯದರ್ಶಿ:- ಡಾ.ಸಾರಿಕಾ ಎಸ್ ಗಂಗಾ.ಕರ್ನಾಟಕ

ರಾಜ್ಯ ಪ್ರಧಾನ ಕಾರ್ಯದರ್ಶಿ:- ಶ್ರೀಮತಿ ರಾಜಶ್ರೀ ಎ‌. ಸಜ್ಜೇಶ್ವರ.ಕರ್ನಾಟಕ.

ರಾಜ್ಯ ಕೋಶಾಧ್ಯಕ್ಷರು: ಶ್ರೀಮತಿ ಪ್ರೇಮಾ ಹೆಗಡೆ

ಗುರಿ ಉದ್ದೇಶಗಳು:-

ಸಂಘದ ಸದಸ್ಯರ ಪ್ರತಿಜ್ಞಾ ವಿಧಿ.

ಸಂಘದ ಸದಸ್ಯತ್ವ ಪಡೆಯಲು ಈ ಲಿಂಕ್ ಬಳಸಿ https://surveyheart.com/form/66ebd892d51d21485e72827e