ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಿ ಮಾತೆಯ ಆದರ್ಶ ಪಾಲನೆ ಮಾಡಿದ ಫುಲೆ ಶಿಕ್ಷಕಿಯರು

ಹಾಸನ, ದಿ.14 ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ( ರಿ) ತಾಲೂಕು ಘಟಕ ಹೊಳೆನರಸೀಪುರ ಮತ್ತು ಇತರ ಸಾಮಾಜಿಕ ಸಂಘಟನೆಗಳ ಸಹಯೋಗದಲ್ಲಿ  “ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ರಕ್ತದಾನ ಶಿಬಿರ”ವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಶ್ರೀಮತಿ ಕಾಂತಮಣಿ ಯವರು ಶ್ರೀ ಗಣೇಶನ ಪ್ರಾರ್ಥನೆಯೊಂದಿಗೆ ಚಾಲನೆ ನೀಡಿದರು. ಈ ಕಾರ್ಯಕ್ರಮವನ್ನು ಹೊಳೆನರಸೀಪುರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದಂತಹ ಶ್ರೀಯುತ ಸೋಮಲಿಂಗೇಗೌಡ ರವರು ಹಾಗೂ ನೆರೆದ ಗಣ್ಯರಿಂದ ಗಿಡಕ್ಕೆ ನೀರು ಇರುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಯುತ ಸೋಮಲಿಂಗೇಗೌಡ ರವರು ಮಾತೆ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ವತಿಯಿಂದ ನಡೆಯುತ್ತಿರುವ ಈ ಕಾರ್ಯಕ್ರಮ ನಿಜವಾಗಲೂ ಒಂದು ಉತ್ತಮವಾದಂತಹ ಕಾರ್ಯಕ್ರಮ. ಇಂತಹ ಸಮಾಜಮುಖಿ ಕಾರ್ಯಕ್ರಮದ ಸದುಪಯೋಗವನ್ನು ಶಿಕ್ಷಕರು ಮತ್ತು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಮತ್ತೆ ಸಾವಿತ್ರಿಬಾಯಿ ಫುಲೆ ಸಂಘಕ್ಕೆ ನಮ್ಮ ಸಂಪೂರ್ಣ ಸಹಕಾರವಿರುತ್ತದೆ ಎಂದು ತಿಳಿಸಿದರು. ಮತ್ತು ಈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅದೇ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ರಾಜ್ಯ ಸರ್ಕಾರ ನೌಕರರ ಸಂಘದ ಅಧ್ಯಕ್ಷರಾದ ಪೃಥ್ವಿರಾಜ್ ರವರು ಸಂಘಕ್ಕೆ ಶುಭ ಕೋರುವುದರೊಂದಿಗೆ ತಮ್ಮ ಸಹಕಾರ ಸಂಘಕ್ಕೆ ಸದಾ ಇರುತ್ತದೆ ಎಂದು ತಿಳಿಸಿದರು ಮತ್ತು ರಕ್ತದಾನ ಮಾಡುವ ಮುಖಾಂತರ ಕಾರ್ಯಕ್ರಮಕ್ಕೆ ಮೆರುಗು ತಂದರು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀಮತಿ ಆಶಾ ಆರ್ ಜಿಲ್ಲಾ ಸಾವಿತ್ರಿಬಾಯಿ ಸಂಘದ ಅಧ್ಯಕ್ಷರು,ಇಂತಹ ಒಂದು ವೇದಿಕೆಯನ್ನು ನಮ್ಮ ಹೆಮ್ಮೆಯ ನಾಯಕಿ,  ಸಂಸ್ಥಾಪಕ ರಾಜ್ಯಾಧ್ಯಕ್ಷರು ಡಾ ಲತಾ ಎಸ್ ಮುಳ್ಳೂರ ರವರು ನಮಗೆ ನೀಡಿದ್ದಾರೆ, ಮಾತೆ ಸಾವಿತ್ರಿಬಾಯಿ ಫುಲೆ  ಅವರ ಆದರ್ಶಗಳನ್ನು ಪಾಲಿಸೋಣವೆಂದರು ಮತ್ತು ಸಂಘದ ಯಶಸ್ವಿಗೆ ಎಲ್ಲರ ಪರಿಶ್ರಮ ಬಹಳ ಮುಖ್ಯ ಎಂದು ತಿಳಿಸಿದರು.
ಪುನರ ಜೀವನ ಪ್ರಶ್ನ ಅಧ್ಯಕ್ಷರಾದಂತಹ ಶ್ರೀಯುತ ಭರತ್ ರವರು ಮಾತನಾಡಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರದ ಮಹತ್ವವನ್ನು ತಿಳಿಸುವುದರೊಂದಿಗೆ ಆರೋಗ್ಯ ಕಾಳಜಿಯನ್ನು ವಹಿಸುವುದು ಬಹಳ ಮುಖ್ಯವೆಂದರು. ಹಾಗೆಯೇ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಸಾವಿತ್ರಿಬಾಯಿ ಫುಲೆ ಮಹಿಳಾ ಶಿಕ್ಷಕರ ಸಂಘದ ಅಧ್ಯಕ್ಷರಾದಂತಹ ಶ್ರೀಮತಿ ಮಮತ ಕೆ .ಎಂ ರವರು
ನಮ್ಮ ಸಂಘದ ವತಿಯಿಂದ ಹಮ್ಮಿಕೊಂಡಿರುವ ಈ ಸಮಾಜಮುಖಿ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಮನ್ವಯ ಅಧಿಕಾರಿಗಳ ಮಾರ್ಗದರ್ಶನ ಮತ್ತು ತಾಲೂಕಿನ ಎಲ್ಲಾ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಹಕಾರದಿಂದ ಸಾಧ್ಯವಾಗಿದೆ ಎಂದರು ಹಾಗೆಯೇ ಮಾತೆ ಸಾವಿತ್ರಿಬಾಯಿ ಫುಲೆ ಅವರನ್ನು ಸ್ಮರಿಸುವುದು ನಮ್ಮೆಲ್ಲರ ಭಾಗ್ಯ ವೆಂದರು ಅಕ್ಷರದ ಅವ ಮಾತೇ ಸಾವಿತ್ರಿಬಾಯಿ ಫುಲೆ ದೇಶದ ಮೊದಲ ಮಹಿಳಾ ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯನಿ, ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ದಣಿವರಿಯದ ಸತ್ಯ ಶೋಧಕಿ, ಆಧುನಿಕ ಶಿಕ್ಷಣದ ತಾಯಿ, ಅಕ್ಷರದ ದೀಪ ಹಿಡಿದು ಹೆಣ್ಣು ಮಕ್ಕಳ ಬಾಳಿಗೆ ಬೆಳಕಾಗ ಮಾತೆ ಸಾವಿತ್ರಿಬಾಯಿ ಫುಲೆ ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸುತ್ತಾ ಸಮಾಜಕ್ಕೆ ಮಾದರಿಯಾಗುವುದರೊಂದಿಗೆ ಶಿಕ್ಷಣದ ಪ್ರಗತಿಗೆ ಎಲ್ಲರೂ ಶ್ರಮಿಸೋಣ ಎಂದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಮಹಾಲಿಂಗಪ್ಪ ರವರು ಮಹಿಳಾ ಶಿಕ್ಷಕಿಯರು ಕೈಗೊಂಡಿರುವ ಈ ಉತ್ತಮ ಕಾರ್ಯ ಸ್ವಾಗತ ಅರ್ಹವಾಗಿದೆ ಈ ಸಂಘಕ್ಕೆ ನಮ್ಮ ಸಂಪೂರ್ಣ ಸಹಕಾರವಿರುತ್ತದೆ ಎಂದರೆ. ಈ ಕಾರ್ಯಕ್ರಮದಲ್ಲಿ ಮಲ್ಲರಾಜೇಡೌಡ ರವರು, ಶ್ರೀಯುತ ಶಿವಕುಮಾರಚಾರಿ ರವರು ತಾಲೂಕು ಪ್ರೌಢಶಾಲಾಲಾ ಸಹ ಶಿಕ್ಷಕರ ಸಂಘದ ನಿರ್ದೇಶಕರು, ಶ್ರೀಯುತ ಉಮೇಶ್ ರವರು ಎಸ್ಸಿ ಎಸ್ಟಿ ನೌಕರ ಸಂಘದ ಅಧ್ಯಕ್ಷರು, ಶ್ರೀಯುತ ಗಣೇಶ್ ರವರು ಎನ್. ಪಿ .ಎಸ್ ನೌಕರರ ಸಂಘದ ಅಧ್ಯಕ್ಷರು. ಶ್ರೀಯುತ ರಂಗಸ್ವಾಮಿ ಎಂ.ಪಿ ಬಡ್ತಿ ಮುಖ್ಯ ಗುರುಗಳ ಸಂಘದ ಅಧ್ಯಕ್ಷರು. ಹಾಗೂ ಸಾವಿತ್ರಿಬಾಯಿ ಫುಲೆ ಸಂಘದ ಗೌರವಾಧ್ಯಕ್ಷರಾದ ಸುವರ್ಣ, ಪ್ರಧಾನ ಕಾರ್ಯದರ್ಶಿಗಳಾದ ಬ್ರಮರಾಂಭ, ಖಜಂಚಿಗಳಾದ ಮಧುಮತಿ ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು. ಈ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಶಿಕ್ಷಕರು, ಸಾರ್ವಜನಿಕರು, ಆರೋಗ್ಯ ತಪಾಸಣೆಯ ಸದುಪಯೋಗ ಪಡೆಯುವುದರೊಂದಿಗೆ, ರಕ್ತದಾನ ಮಾಡುವುದರೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಶ್ರೀಮತಿ ಉಮಾದೇವಿಯವರ ಎಲ್ಲರನ್ನು ವಂದಿಸಿದರು.

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

Leave a comment