
ಸಾವಿತ್ರಿಬಾಯಿಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ (ರಿ) ನವದೆಹಲಿ ಹಾಗೂ ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯ ಘಟಕ ಧಾರವಾಡ ವತಿಯಿಂದ ದಿನಾಂಕ 24 /11 /2025 ರಂದು ಬೆಂಗಳೂರಿನ ವಿಧಾನ ಸೌಧಕ್ಕೆ ಬೇಟಿ ಮಾಡಲಾಗಿತ್ತು. ಸಂಘದ ರಾಷ್ಟ್ರೀಯ ಅಧ್ಯಕ್ಷರು ಮತ್ತು ರಾಜ್ಯಾಧ್ಯಕ್ಷರಾದ ಡಾ. ಲತಾ ಮುಳ್ಳೂರ ಅವರ ನೇತೃತ್ವದಲ್ಲಿ ವಿವಿಧ ಹಂತದ ಘಟಕಗಳ ಪದಾಧಿಕಾರಿಗಳು ಬೇಟಿ ಮಾಡಿದ್ದರು. ಶಿಕ್ಷಕಿಯರ ವಿವಿಧ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವ ಬೇಟಿ ಇದಾಗಿದ್ದು ಮೊದಲನೆಯದಾಗಿ ಮಾನ್ಯ ಮುಖ್ಯಮಂತ್ರಿಗಳ ಕಚೇರಿಗೆ ತೆರಳಿ ಅಲ್ಲಿದ್ದ ಆಪ್ತ ಕಾರ್ಯದರ್ಶಿರವರಿಗೆ ತಮ್ಮ ಬೇಡಿಕೆ ಪತ್ರವನ್ನು ಸಲ್ಲಿಸಿ ಮನವಿ ಮಾಡಲಾಯಿತು. ನಂತರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಶಿಕ್ಷಣ ಸಚಿವರು ಸನ್ಮಾನ್ಯ ಶ್ರೀ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿ ತಮ್ಮ ಬೇಕು ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘಟನೆಯ ಸಂಸ್ಥಾಪಕ ರಾಷ್ಟ್ರೀಯ ಹಾಗೂ ರಾಜ್ಯ ಅಧ್ಯಕ್ಷರಾದ ಡಾ. ಲತಾ. ಎಸ್. ಮುಳ್ಳೂರ ರವರು ಶಿಕ್ಷಕಿಯರ ಸಮಸ್ಯೆ, ಬೇಡಿಕೆಗಳನ್ನು ಮಾನ್ಯ ಸಚಿವರ ಗಮನಕ್ಕೆ ತಂದು ಎಲ್ಲ ಬೇಡಿಕೆ ಸಮಸ್ಯೆಗಳಿಗೂ ಸಕಾರಾತ್ಮಕವಾಗಿ ಸ್ಪಂದಿಸಿ ಮುಟ್ಟಿನ ರಜೆಯನ್ನ ಸರ್ಕಾರಿ ಶಾಲಾ ಶಿಕ್ಷಕಿಯರು ಬಳಸಿಕೊಳ್ಳಲು ಸಹಾಯವಾಗುವ ರೀತಿ ತಕ್ಷಣವೆ ನಮ್ಮ ಇಲಾಖೆಯಿಂದ ಆದೇಶ ಮಾಡಿ ಜಾರಿಗೊಳಿಸುವುದು ಅಲ್ಲದೆ ಜನವರಿ 3 ಮಾತೆ ಸಾವಿತ್ರಿಬಾಯಿ ಫುಲೆ ಯವರ ಜನ್ಮ ದಿನಾಚರಣೆ ಯನ್ನು ಸರಕಾರದ ವತಿಯಿಂದ ಆಚರಿಸುವಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು ಎನ್ನಲಾಗಿದೆ.

ನಂತರ ಸೆಕ್ರೆಟರಿಯೇಟ್ ಕಚೇರಿಗೆ ತೆರಳಿ ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಗೌರವಾನ್ವಿತ ಮಾನ್ಯ ಶ್ರೀಮತಿ ರಶ್ಮಿ ಮೇಡಂ ರವರನ್ನು ಭೇಟಿ ಮಾಡಿದ ರಾಜ್ಯಾಧ್ಯಕ್ಷರು ಡಾ .ಲತಾ ಮುಳ್ಳೂರ ರವರು ಶಿಕ್ಷಕಿಯರ , ಬೇಡಿಕೆ ಸಮಸ್ಯೆಗಳ ಕುರಿತು ಮನವಿ ಮಾಡಿದರು ಮಾನ್ಯರು ಸಕರಾತ್ಮಕ ಮನಸಿನಿಂದ ಸ್ಪಂದಿಸಿದರು

ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ರಾಜಶ್ರೀ ಸಜ್ಜೇಶ್ವರ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀಮತಿ ಪ್ರಭಾರವರು, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀಮತಿ ಸರಸ್ವತಿ ಮಂಡ್ಯ ಜಿಲ್ಲೆ ರವರು, ರಾಜ್ಯ ಸಹ ಕಾರ್ಯದರ್ಶಿಗಳಾದ ಶ್ರೀಮತಿ ರಂಜಿತಾ ಗೋಪಿ ರವರು ,ರಾಮನಗರ ಜಿಲ್ಲಾಧ್ಯಕ್ಷರಾದ ಶ್ರೀಮತಿ ರೀಟಾ ಮನು ಗೌಡರವರು, ಬೆಂಗಳೂರು ನಗರದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಇಂದಿರಾ ಮುನಿರಾಜ್ ರವರು, ರಾಮನಗರ ಜಿಲ್ಲಾ ಸಹ ಕಾರ್ಯದರ್ಶಿಗಳಾದ ಶ್ರೀಮತಿ ಗಂಗಮ್ಮ ಅವರು ಬೆಂಗಳೂರು ದಕ್ಷಿಣ ವಲಯ ನಾಲ್ಕರ ತಾಲೂಕು ಅಧ್ಯಕ್ಷರು
ಶ್ರೀಮತಿ ಜಯಲಕ್ಷ್ಮಿ G ಅವರು
ಮತ್ತು ಕೋಶಾಧ್ಯಕ್ಷರಾದ ಶ್ರೀಮತಿ ರಬೇಕಾ ರವರು, ಕನಕಪುರ ತಾಲೂಕಿನ ಅಧ್ಯಕ್ಷರಾದ ಶ್ರೀಮತಿ ಲಲಿತಾರವರು ಉಪಸ್ಥಿತರಿದ್ದರು.
ಸಂಘಟನೆಯ ಬೇಡಿಕೆಗಳು ಇಂತಿವೆ.
- ಎಲ್ಲಾ ಮಹಿಳಾ ನೌಕರರಿಗೆ ಪ್ರತಿ ತಿಂಗಳು ಒಂದು ದಿನ ಮುಟ್ಟಿನ ರಜೆಯ ಸೌಲಭ್ಯವನ್ನು ಪಡೆಯಲು ಅನುಕೂಲವಾಗುವಂತೆ ಇಲಾಖಾ ಆದೇಶ ಮಾಡಿ ಜಾರಿಗೆ ತರಬೇಕು.
- ಜನವರಿ ಮೂರರಂದು ಭಾರತದ ಪ್ರಥಮ ಮಹಿಳಾ ಶಿಕ್ಷಕಿ ಅಕ್ಷರದವ್ವ ಮಾತೆ ಸಾವಿತ್ರಿಬಾಯಿ ಅವರ ಜನ್ಮ ದಿನಾಚರಣೆಯನ್ನು ಶಿಕ್ಷಕಿಯರ ದಿನಾಚರಣೆಯನ್ನಾಗಿ ಸರ್ಕಾರದ ವತಿಯಿಂದಲೇ ಆಚರಿಸಬೇಕು.
- ಎಲ್ಲಾ ಸಮೀಕ್ಷೆ ಹಾಗೂ ಗಣತಿ ಕಾರ್ಯದಿಂದ ಐವತ್ತು ವರ್ಷ ಮೇಲ್ಪಟ್ಟವರು ಮೂರು ವರ್ಷದ ಒಳಗಿನ ಮಕ್ಕಳಿರುವ ಮಹಿಳಾ ಶಿಕ್ಷಕಿಯರಿಗೆ ಅಂಗವಿಕಲ ಮಹಿಳಾ ಶಿಕ್ಷಕರಿಗೆ ಹಾಗೂ ಗರ್ಭಿಣಿಯರಿಗೆ ವಿನಾಯಿತಿ ನೀಡಬೇಕು.
- ಪ್ರಾಥಮಿಕ ಶಾಲೆಗಳಲ್ಲಿ ಜಾರಿಯಲ್ಲಿರುವ ನಲಿಕಲಿ ಬಹು ವರ್ಗ ಬೋಧನೆಯನ್ನು ರದ್ದು ಪಡಿಸಿ ತರಗತಿವಾರು ಬೋಧನೆಗೆ ಅವಕಾಶ ಮಾಡಿಕೊಡಬೇಕು.
- ಬೋಧಕೇತರ ಕಾರ್ಯಗಳಿಂದ ಹಾಗೂ ಮತದಾರರ ಪಟ್ಟಿ ಪರಿಷ್ಕರಣಿ ಕಾರ್ಯಾಗಳಿಂದ ಶಿಕ್ಷಕಿಯರಿಗೆ ವಿನಾಯಿತಿ ನೀಡಬೇಕು.



