ಕೋಲಾರ ಸೆ.14 ಇತ್ತೀಚೆಗೆ ಗ್ರಾಮದ ವ್ಯಕ್ತಿಯಿಂದ ಹಲ್ಲೆಗೆ ಒಳಗಾದ ಕೋಲಾರ ಜಿಲ್ಲೆ ಮಾಲೂರು ತಾ. ಕ್ಷೇತ್ರನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾದ ಶ್ರೀಮತಿ ಮಂಜುಳಾ ಅವರ ಮನೆಗೆ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಪದಾಧಿಕಾರಿಗಳು ಭೇಟಿ ನೀಡಿ ಶಿಕ್ಷಕಿಯ ಯೋಗಕ್ಷೇಮ ವಿಚಾರಿಸಿ ಸಾಂತ್ವನ ಹೇಳಿದ್ದಾರೆ.


ಸಂಘಟನೆಯ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರೂ ಆದ. ಲತಾ ಎಸ್ ಮುಳ್ಳೂರ ರವರ ಸೂಚನೆ ಹಾಗೂ ಮಾರ್ಗದರ್ಶನದ ಮೇರೆಗೆ ರಾಜ್ಯ ಹಿರಿಯ ಪದಾಧಿಕಾರಿಗಳಾದ ತುಮಕೂರಿನ ಶ್ರೀಮತಿ ಅನುಸೂಯಾದೇವಿ ಹಾಗು ರಾಜ್ಯ ಸಹಕಾರ್ಯದರ್ಶಿ ಕೋಲಾರದ ಶ್ರೀಮತಿ ಮಮತಾ ಆರ್ ಇವರ ನೇತೃತ್ವದಲ್ಲಿ ಕೋಲಾರ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀಮತಿ ಲಕ್ಷಮ್ಮ ಕಾರ್ಯದರ್ಶಿ ಶ್ರೀಮತಿ ನಾಗವೇಣಿ ಬಿವಿ ಬಾಗೇಪಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷರು ಶ್ರೀಮತಿ ರಾಜ ರಾಜೇಶ್ವರಿ ಹಾಗು ಸ.ಕಾರ್ಯದರ್ಶಿ ಕೀರ್ತಿ ಬಸಪ್ಪ ಲಗಳಿ. ಸಂ.ಕಾರ್ಯದರ್ಶಿ ರಾಜೇಶ್ವರಿ BA ಮಾಲೂರು ತಾಲೂಕ್ ಘಟಕ ಅಧ್ಯಕ್ಷರು ಶ್ರೀಮತಿ ಮಾಲತಿ, ಬಂಗಾರಪೇಟೆ ತಾಲ್ಲೂಕು ಅಧ್ಯಕ್ಷರು ಶ್ರೀಮತಿ ರಾಜೇಶ್ವರಿ D, ಕಾರ್ಯದರ್ಶಿ ಶ್ರೀಮತಿ ಗೀತಾ MP ,ಉಪಾಧ್ಯಕ್ಷರು ಶ್ರೀಮತಿ ಶಶಿಕಲಾ ಎಂ, ಮತ್ತು ಲಕ್ಮೀದೇವಮ್ಮ v ,ತುಮಕೂರು ತಾ ಕೋಶದ್ಯಕ್ಷೆ ಶ್ರೀಮತಿ ಲೋಕಮ್ಮ R ಹಾಗೂ ಕೋಲಾರ ಪದಾಧಿಕಾರಿಗಳಾದ ಶ್ರೀಮತಿ ಸುನಂದಮ್ಮ, ಮಂಜುಳಾ ಎಂ, ಸುಶೀಲಮ್ಮ ಎಂ, ನೀಲಮ್ಮ ಇತರೆ ಎಲ್ಲ ಪದಾಧಿಕಾರಿಗಳು ಹಾಜರಿದ್ದರು.


ದೌರ್ಜನ್ಯಕ್ಕೊಳಗಾದ ಶ್ರೀಮತಿ ಮಂಜುಳಾ ಅವರೊಂದಿಗೆ ಸಂಸ್ಥಾಪಕ ರಾಜ್ಯಾಧ್ಯಕ್ಷರು ದೂರವಾಣಿ ಮೂಲಕ ಮಾತನಾಡಿ ಸಾಂತ್ವನ ಹೇಳಿ ಧೈರ್ಯ ಹೇಳಿದರು,. ನಡೆದ ಘಟನೆಯ ವಿವರಣೆ ಪಡೆದು. ಕರ್ತವ್ಯನಿರತ ಸರ್ಕಾರಿ ಶಿಕ್ಷಕಿಯ ಮೇಲೆ ಹಲ್ಲೆ ನಡೆದಿರುವುದು ಘೋರ ಅಪರಾಧವೇ ಸರಿ, ಇದರ ಸಂಬಂಧ ರಾಜ್ಯ ಮಹಿಳಾ ಆಯೋಗದ ಮಾನ್ಯ ಅಧ್ಯಕ್ಷರಿಗೆ ಪತ್ರ ಬರೆಯಲಾಗಿದ್ದು ಮಾನ್ಯ ಅಧ್ಯಕ್ಷರು ಇದನ್ನು ತೀವ್ರವಾಗಿ ಖಂಡಿಸಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ,ಆರೋಪಿ ಬಂಧನ ಆಗಬೇಕು, ತಕ್ಕ ಶಿಕ್ಷೆ ಸಿಗಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದಿದ್ದಾರೆ. ರಾಜ್ಯ ಹಿರಿಯ ಉಪಾಧ್ಯಕ್ಷರು ಅನುಸೂಯದೇವಿ ಮಾತನಾಡಿ ಇಂದು ಭಾನುವಾರ ರಜೆಯ ದಿನ ಮನೆಯ ಎಲ್ಲ ಕಾರ್ಯಗಳನ್ನು ಬದಿಗೊತ್ತಿ ಎಲ್ಲರೂ ತಮ್ಮ ಅಮೂಲ್ಯ ಸಮಯ ನೀಡಿ ದೂರದಿಂದ ಬಂದು ಹಲ್ಲೆಗೆ ಒಳಗಾದ ಶಿಕ್ಷಕಿಗೆ ನ್ಯಾಯ ಒದಗಿಸಲು ಎಲ್ಲರೂ ಕೈಜೋಡಿಸಿದ್ದು ಸಂತಸ ತಂದಿದೆ. ನಮ್ಮ ಸಂಘ ನಮ್ಮ ಹೆಮ್ಮೆ ನಮ್ಮ ಒಗ್ಗಟ್ಟು ಹೀಗೆ ಮುಂದುವರೆಯಬೇಕು ,ರಾಜ್ಯದ ಯಾವುದೇ ಶಿಕ್ಷಕಿಯರಿಗೆ ಅನ್ಯಾಯ ಆಗಲು ನಾವು ಬಿಡಬಾರದು ಎಂದು ಕೋಲಾರ ಘಟನೆಯನ್ನು ಖಂಡಿಸಿ ಮಾತನಾಡಿದರು. ತುಮಕೂರು. ಚಿಕ್ಕಬಳ್ಳಾಪುರ.ಬಾಗೇಪಲ್ಲಿ. ಮಾಲೂರು. ಬಂಗಾರಪೇಟೆ. ಕೋಲಾರದಿಂದ ಆಗಮಿಸಿದ ಎಲ್ಲ ಪದಾಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದರು.

