ವೈದ್ಯಕೀಯ ದಿನಾಚರಣೆ ಆಚರಿಸಿದ ಕ.ಸಾ.ಬಾ.ಫುಲೆ ಶಿಕ್ಷಕಿಯರು

ಚನ್ನಪಟ್ಟಣ ಜು.27.ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್ ರಿ. ನವದೆಹಲಿ ಕೇಂದ್ರ ಕಚೇರಿ ಧಾರವಾಡ, ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ, ರಿ. ರಾಜ್ಯ ಘಟಕ ಧಾರವಾಡ, ಜಿಲ್ಲಾ ಘಟಕ ಬೆಂಗಳೂರು ದಕ್ಷಿಣ ಜಿಲ್ಲೆ (ರಾಮನಗರ),ತಾಲೂಕು ಘಟಕ ಚನ್ನಪಟ್ಟಣದ ವತಿಯಿಂದ ಶನಿವಾರದಂದು ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ವಸತಿ ಗೃಹದಲ್ಲಿ ವೈದ್ಯಕೀಯ ದಿನಾಚರಣೆಯನ್ನು ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಶ್ರೀಮತಿ ಡಾ. ಜ್ಯೋತಿ ಅವರನ್ನು ವೈದ್ಯ ನಾರಾಯಣ ಹರಿ ಎಂಬ ಮಾತಿನಂತೆ ತಾಯಿ ಮಗುವಿಗೆ ಜನ್ಮ ಮರುಜನ್ಮ ನೀಡುವ ದೇವರ ಪ್ರತಿರೂಪರೆಂದು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮತ್ತೋರ್ವ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ಗೀತಾಂಜಲಿ ಅವರು ಉಪಸ್ಥಿತರಿದ್ದರು

ಈ ಕಾರ್ಯಕ್ರಮದಲ್ಲಿ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ರಾಮನಗರ ಜಿಲ್ಲಾಧ್ಯಕ್ಷರಾದ ಶ್ರೀಮತಿ ರೀಟಾ ಮನು ಗೌಡರವರು ಶ್ರೀಮತಿ ಸಾಕಮ್ಮ ರವರು ಶ್ರೀಮತಿ ಉಷಾರಾಣಿಯವರು ಚನ್ನಪಟ್ಟಣ ತಾಲೂಕು ಅಧ್ಯಕ್ಷರಾದ ಶ್ರೀಮತಿ ನಾಗಮ್ಮನವರು ಪದಾಧಿಕಾರಿಗಳಾದ ಭಾಗ್ಯಮ್ಮ ವಿಜಿಯಮ್ಮ ಅನ್ನಪೂರ್ಣಮ್ಮ ನವರು ಉಪಸ್ಥಿತರಿದ್ದರು . ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ದೈಹಿಕ ಶಿಕ್ಷಕರಾದ ಶಿವಕುಮಾರ್ ರವರು , ಗೀತ ಗಾಯಕರಾದ ಶ್ರೀ ಬೇವೂರು ರಾಮಯ್ಯನವರು ಮಲೆಯ ಮಹದೇಶ್ವರ ಟ್ರಸ್ಟ್ ಕಲಾತಂಡದ ಕಲಾವಿದರಾದ ಮಹದೇವಯ್ಯ ಹಾಗೂ ಶ್ರೀಯುತ ಸಿದ್ದರಾಜುರವರು ಅಕ್ಷರ ದಾಸೋಹದ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ನಿರ್ಮಲ ರವರು ಉಪಸ್ಥಿತರಿದ್ದರು.

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

Leave a comment