ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸ್ವಾಗತಿಸಿದ ಕೊರಟಗೆರೆ ಕ.ಸಾಭಾಫು.ಶಿಕ್ಷಕಿಯರು.

ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ (ರಿ.), ಧಾರವಾಡ — ಜಿಲ್ಲಾ ಘಟಕ: ಮಧುಗಿರಿ, ತಾಲೂಕು ಘಟಕ: ಕೊರಟಗೆರೆ

ದಿನಾಂಕ 05.07.2025 (ಶನಿವಾರ)ರಂದು ಶಾಲಾ ಅವಧಿಯ ನಂತರ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ವತಿಯಿಂದ ತಾಲೂಕಿಗೆ ನೂತನ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ  ಆಗಮಿಸಿರುವ ಶ್ರೀಮತಿ ಫೈರೋಜ್ ಬೇಗಂ ಅವರಿಗೆ ಅಭಿನಂದಿಸಿ ಸ್ವಾಗತ ಕೋರಲಾಯಿತು.

ಸರಳ ಸಜ್ಜನಿಕೆಯಿಂದ ಕೂಡಿರುವ ಶ್ರೀಮತಿ ಫೈರೋಜ್ ಬೇಗಂ ಅವರು ಸಂತಸದಿಂದ ಮಾತನಾಡುತ್ತಾ, ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ನಾವೆಲ್ಲರೂ ನಿಷ್ಠೆಯಿಂದ ಕೆಲಸ ಮಾಡೋಣ, ಅಂತೆಯೇ ಶಿಕ್ಷಕರ ಶಿಕ್ಷಕಿಯರ ಹಿತವು ನನಗೆ ಪ್ರಮುಖವಾಗಿದ್ದು ಅದಕ್ಕಾಗಿ ನನ್ನ ಸಹಕಾರ ಸದಾ ನಿಮ್ಮಗಳ ಮೇಲೆ ಇರುತ್ತದೆ ಎಂದು ತಿಳಿಸಿದರು.
ಭಾರತದ ಮೊಟ್ಟಮೊದಲ ಮಹಿಳಾ ಶಿಕ್ಷಕಿ ಅಕ್ಷರದವ್ವ ಮಾತೆ ಸಾವಿತ್ರಿಬಾಯಿ ಪುಲೆ ಅವರನ್ನು ಹೆಮ್ಮೆಯಿಂದ ಸ್ಮರಿಸಿದರು.
“ಎಲ್ಲರೂ ಸಮಯಪಾಲನೆ ಮಾಡುತ್ತಾ ಮಕ್ಕಳ ಗುಣಾತ್ಮಕ ಶಿಕ್ಷಣದತ್ತ ಗಮನ ಹರಿಸಿದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕೆಲಸ ಕಡಿಮೆಯಾಗುತ್ತದೆ” ಎಂದರು.
ಇದಲ್ಲದೆ, “ಶಿಕ್ಷಕರು ಸಂತೋಷದಾಯಕ ವಾತಾವರಣದಲ್ಲಿ ಮಕ್ಕಳಿಗೆ ಅನ್ಯಾಯವಾಗದಂತೆ ಕೆಲಸ ನಿರ್ವಹಿಸಬೇಕು” ಎಂಬ ಸಲಹೆ ನೀಡಿದರು.

ಸಂಘದ ಜಿಲ್ಲಾಧ್ಯಕ್ಷೆ ಶ್ರೀಮತಿ ಜಿ. ಎಲ್. ರಾಧಮ್ಮ ಮಾತನಾಡುತ್ತಾ, ಸಂಘದ ಸಂಸ್ಥಾಪಕಿ ಡಾ. ಲತಾ ಎಸ್. ಮುಳ್ಳೂರ ಅವರ ಮಾರ್ಗದರ್ಶನದಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸಿ, ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿರುವುದಾಗಿ ಹೇಳಿದರು.
“ಶಾಲಾ ಕಾರ್ಯಕ್ಕೆ ತೊಂದರೆ ಆಗದಂತೆ, ಶಾಲಾ ಅವಧಿಯ ನಂತರ ಸಂಘದ ಚಟುವಟಿಕೆಗಳನ್ನು ಕೈಗೊಂಡಿದ್ದೇವೆ. ನಮ್ಮ ಮೊದಲ ಆದ್ಯತೆ ಮಕ್ಕಳ ಗುಣಾತ್ಮಕ ಶಿಕ್ಷಣವಾಗಿದೆ” ಎಂದು ವಿವರಿಸಿದರು.

ಇದುವರೆಗೆ ಹಮ್ಮಿಕೊಳ್ಳಲಾದ ಕಾರ್ಯಕ್ರಮಗಳು:

ಹೃದಯ ತಪಾಸಣಾ ಶಿಬಿರ

ವೀರಯೋಧರಿಗೆ ಸನ್ಮಾನ

ನಿವೃತ್ತಿ ಶಿಕ್ಷಕರಿಗೆ ಸನ್ಮಾನ

ರಕ್ತದಾನ ಶಿಬಿರ

ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ ಭೇಟಿ

ಶೈಕ್ಷಣಿಕ ವೆಬಿನಾರ್‌ಗಳು

ಇವೆಲ್ಲಾ ಸಂಘದ ನಮ್ಮ  ಜಿಲ್ಲಾ ಘಟಕದ ಬಲಿಷ್ಠತೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ತಾಲೂಕು ಅಧ್ಯಕ್ಷೆ ಶ್ರೀಮತಿ ಸುಜಾತ ಜಿ. ಅವರು ಮಾತನಾಡಿ, “ಸಮಯಪಾಲನೆ ಶಿಕ್ಷಕರ ಶಿಸ್ತುಪೂರ್ಣತೆ ಮತ್ತು ಸೇವಾ ಮನೋಭಾವಕ್ಕೆ ಪ್ರತಿಬಿಂಬವಾಗಿರುತ್ತದೆ” ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಶ್ರೀಮತಿ ಆಶಾರಾಣಿ, ಉಪಾಧ್ಯಕ್ಷರಾದ ಶ್ರೀಮತಿ ನೇತ್ರಾವತಿ ಜಿ., ಶ್ರೀಮತಿ ನಾಗಮಣಿ, ಶ್ರೀಮತಿ ರೂಪಾ, ಶ್ರೀಮತಿ ನಾಗರತ್ನಾ, ಶ್ರೀಮತಿ ಸರೋಜಾ ಮತ್ತಿತರರು ಉಪಸ್ಥಿತರಿದ್ದರು.

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

Leave a comment