

ಸಿರಾ .ದಿನಾಂಕ 28.6.2025 ರಂದು ಸರ್ಕಾರಿ ನೌಕರರ ಭವನ ಸಿರಾ ಇಲ್ಲಿ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ವನ್ನು ಕರ್ನಾಟಕ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘ, ಮಧುಗಿರಿ ಜಿಲ್ಲೆಯ ತಾಲೂಕ್ ಘಟಕ ಸಿರಾ ವತಿಯಿಂದ ಆಯೋಜಿಸಿದ್ದರು. ಶಿಬಿರದಲ್ಲಿ ಅಧಿಕ ರಕ್ತದೋತ್ತಡ, ಮಧುಮೇಹ, ಕಣ್ಣಿನ ತಪಾಸಣೆ, ಸ್ತ್ರೀ ಸಂಬಂದ ರೋಗ ತಪಾಸಣೆ ನೆಡೆಸಲಾಯಿತು. ಡಾ. ಡಿ. ಎಂ. ಗೌಡ ಹಾಗೂ ವೈದ್ಯಕೀಯ ತಂಡದವರು ನೂರಕ್ಕೂ ಹೆಚ್ಚು ಶಿಕ್ಷಕ ಶಿಕ್ಷಕಿಯರ ಆರೋಗ್ಯ ತಪಾಸಣೆ ನೆಡೆಸಿ ಸಲಹೆ ಸೂಚನೆ ನೀಡಿದರು.
ಶಿಬಿರದ ಕುರಿತು ಡಾ. ಡಿ. ಎಂ. ಗೌಡ ರವರು ಮಾತನಾಡಿ ಇಂದಿನ ಒತ್ತಡ ಕಾರ್ಯದಲ್ಲಿ ನೌಕರರು ಸ್ವಯಂ ಆರೋಗ್ಯ, ಮಾನಸಿಕ ಒತ್ತಡ ನಿರ್ವಹಣೆ ಮಾಡುವುದನ್ನು ರೂಢಿಸಿಕೊಳ್ಳಬೇಕೆಂದು ಸಲಹೆ ನೀಡಿದರು.


ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ರಾಧಮ್ಮ ಮಾತನಾಡಿ ಮಹಿಳೆಯರು ಅಬಲೆ ಯಲ್ಲ ಸಬಲೆ ,ಇಂತಹ ಸಮಾಜ ಮುಖಿ ಕಾರ್ಯ ಮಾಡಲು ನಮ್ಮ ಸಂಘದ ಸಂಸ್ಥಾಪಕರು ರಾಷ್ಟೀಯ ಅಧ್ಯಕ್ಷರು ಡಾ . ಲತಾ ಎಸ್ ಮುಳ್ಳುರ ರವರು ಸಮಸ್ತ ಶಿಕ್ಷಕಿಯರಿಗೆ ಸ್ವಾಭಿಮಾನದ ವೇದಿಕೆ ಕಲ್ಪಿಸಿರುವುದೇ ಕಾರಣವಾಗಿದೆ. ನಮ್ಮ ಜಿಲ್ಲೆಯ ತಾಲೂಕ್ ಘಟಕ ಸಿರಾ ವತಿಯಿಂದ ಆಯೋಜಿಸಿರುವ ಈ ಉಚಿತ ಆರೋಗ್ಯ ತಪಾಸಣೆ ಸೇವೆ ಅನನ್ಯ ಎಂದು ತಿಳಿಸಿದರು. ಶಿಬಿರದಲ್ಲಿ ಸಹಕರಿಸಿದವರನ್ನು ಸನ್ಮಾನಿಸಲಾಯಿತು. ಸಿರಾ ತಾಲೂಕ್ ಘಟಕದ ಗೌರವಾಧ್ಯಕ್ಷರಾದ ಶ್ರೀಮತಿ ಮಂಜುಳ, ಗೌರವ ಸಲಹೆಗಾರ ರಾದ ಶ್ರೀಮತಿ ವೆಂಕಟಲಕ್ಷ್ಮಮ್ಮ. ತಾಲೂಕು ಘಟಕದ ಅಧ್ಯಕ್ಷರಾದ ಶ್ರೀಮತಿ ಜಗದಾಂಬ, ಪ್ರಧಾನ ಕಾರ್ಯದರ್ಶಿ ಶ್ರೀಮತಿ ಅರ್ಪಣ, ಖಜಾಂಚಿ ಶ್ರೀಮತಿ ಚಂದ್ರಕಲಾ, ಪಿ ಎಸ್ ಟಿ ಮುಖ್ಯಸ್ಥೆ ಶಬನಾ ಹಾಗೂ ಹಲವು ಸದಸ್ಯ ವೃಂದದವರು ಈ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು.

ವಿಶೇಷ ಅತಿಥಿಗಳಾಗಿ ಸಿರಾ ನಗರ ಸಭೆ ಕೌನ್ಸಿಲರ್ ಶ್ರೀ ರಾಮಕೃಷ್ಣಪ್ಪ ನವರು, ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಶ್ರೀ ನಾಗರಾಜು, ಕಾರ್ಯದರ್ಶಿ ಶ್ರೀ ದೇವರಾಜು, ಜಿಲ್ಲಾ ಉಪಾಧ್ಯಕ್ಷರು ಶ್ರೀ ಸುರೇಶ್,ತಾಲೂಕು ಪ್ರಾಥಮಿಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಹನುಮಂತರಾಜು, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಹಿಮಂತರಾಜು,KSPSTA ಮಾಜಿ ಜಿಲ್ಲಾಧ್ಯಕ್ಷರು ಶ್ರೀ ಅನಿಲ್ ಕುಮಾರ್, ಮಾಜಿ ತಾಲೂಕ್ ಅಧ್ಯಕ್ಷರು ಶ್ರೀ ಓಂಕಾರೇಶ್ವರ್, ಹಾಲಿ ನಿರ್ದೇಶಕರು ಶ್ರೀ ಜಯಚಂದ್ರ, ಮುಖಂಡರಾದ ಶ್ರೀ ರಂಗನಾಥಪ್ಪ. ಸಿ ಆರ್ ಪಿ , ಬಿ ಆರ್ ಪಿ ಸಂಘ ದ ಅಧ್ಯಕ್ಷರಾದ ಶ್ರೀ ಮಂಜುನಾಥ್ ಹಾಗು ಇತರೆ ಪದಾಧಿಕಾರಿಗಳು, ಮುಖ್ಯಶಿಕ್ಷರುಗಳು ಆಗಮಿಸಿ ಶುಭ ಕೋರಿದರು.ಆಗಮಿಸಿದ್ದ ನೂರಾರು ಜನ ಶಿಕ್ಷಕರು ಕಾರ್ಯಕ್ರಮದ ಪ್ರಯೋಜನ ಪಡೆದರು.ಎಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಸಂಘದ ಪ್ರೌಢ ಶಾಲಾ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ರಶ್ಮಿ ರವರು ನಿರೂಪಿಸಿ, ಈ ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದ ವೈದ್ಯಕೀಯ ತಂಡದವರಿಗೂ , ಶಿಬಿರದಲ್ಲಿ ಭಾಗವಹಿಸಿದ್ದ ಎಲ್ಲರಿಗೂ, ಪ್ರತ್ಯಕ್ಷವಾಗಿ ಹಾಗು ಪರೋಕ್ಷವಾಗಿ ಸಹಕಾರ ನೀಡಿದವರಿಗೂ ವಂದಿಸಿದರು.
