Dharwad April 10,2025

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಧನೆಗೈದ ಅನೇಕ ಶಾಲಾ ಶಿಕ್ಷಕಿಯರಿಗೆ ಮಾತೆ ಸಾವಿತ್ರಿಬಾಯಿ ಫುಲೆ ಹೆಸರಲ್ಲಿ ಪ್ರಶಸ್ತಿಗಳನ್ನು ಅನೇಕ ಸಂಘ ಸಂಸ್ಥೆಗಳಿಂದ ನೀಡಲಾಗುತ್ತಿದ್ದು ಇದರಿಂದ ಮಾತೆಯ ಹೆಸರು ಮತ್ತಷ್ಟು ಮೊಗದಷ್ಟು ಮುನ್ನಡೆಗೆ ಬರಲು ಸಾಧ್ಯವಾಗಿದೆ ಅಲ್ಲದೆ ಮಾತೆಯ ಸ್ಮರಣೆಯಾಗಿ ಹಾಗೂ ಶಿಕ್ಷಕಿಯರಿಗೆ ಪ್ರೋತ್ಸಾಹದಾಯಕ ಪ್ರಶಸ್ತಿಗಳಾಗಿವೆ. ಸಾಮಾಜಿಕ ಸಂಘ ಸಂಸ್ಥೆಗಳು ಇತ್ತೀಚಿನ ದಿನಗಳಲ್ಲಿ ಮಾತೆ ಸಾವಿತ್ರಿಬಾಯಿ ಫುಲೆ ರವರ ಹೆಸರಲ್ಲಿ ಶಾಲಾ ಶಿಕ್ಷಕಿಯರಿಗೆ ಪ್ರಶಸ್ತಿಗಳನ್ನು ನೀಡಲು ಪ್ರರಂಭಿಸಿರುವುದು ಸಂತೋಷದ ವಿಷಯವಾಗಿದೆ.
ಆದರೆ ಪ್ರಸ್ತುತ ದಿನಗಳಲ್ಲಿ ಕೆಲವು ಸಂಘ ಸಂಸ್ಥೆಗಳು ಈ ರೀತಿಯಾಗಿ ಪ್ರಶಸ್ತಿ ವಿತರಣಾ ಕಾರ್ಯಕ್ರಮಗಳನ್ನು ಲಾಭಿಗಾಗಿ ಆಯೋಜಿಸುತ್ತಿದ್ದು ಅವುಗಳಲ್ಲಿ ಮಾತೆ ಸಾವಿತ್ರಿಬಾಯಿ ಫುಲೆ ರವರ ಹೆಸರಲ್ಲಿ ಸಹ ಪ್ರಶಸ್ತಿಗಳನ್ನು ಕೊಡಮಾಡಲಾಗುತ್ತಿದೆ
ಅನೇಕ ಅನರ್ಹರನ್ನು ಇಂತಹ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತಿದೆ. ಆಯ್ಕೆ ಮಾಡಲು ಆಯೋಜಕರು ಸರಿಯಾದ ಮಾನದಂಡ ಅನುಸರಿಸುತ್ತಿಲ್ಲ, ಆಯ್ಕೆ ಸಂಬಂಧ ಕೆಲವರಿಂದ ಲಾಬಿ ಮಾಡಿಕೊಳ್ಳಲಾಗುತ್ತಿದೆ ಎಂಬ ಶಿಕ್ಷಕಿಯರ ಪ್ರಶ್ನೆಗಳಿಗೆ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರಾದ ಲತಾ ಎಸ್ ಮುಳ್ಳೂರ ರವರು ಉತ್ತರಿಸಿದ್ದಾರೆ. ಆಮಿಷ ಮತ್ತು ಲಾಭಿಗಾಗಿ ವಿತರಿಸುವ ಪ್ರಶಸ್ತಿಗಳಿಗೆ ಮಾತೆಯ ಹೆಸರನ್ನು ಬಳಸಲಾಗುತ್ತಿದೆ ಎಂಬ ಸುದ್ದಿಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ ರಾಜ್ಯದ ಸಮಸ್ತ ಶಿಕ್ಷಕಿಯರು ಇದರಿಂದ ಎಚ್ಚೆತ್ತುಕೊಳ್ಳಬೇಕು. ಜಾಗೃತರಾಗಬೇಕು ಎಂದಿದ್ದಾರೆ.
ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ರಿ. ರಾಜ್ಯಘಟಕ ಧಾರವಾಡ ಇದರ ವತಿಯಿಂದ ಪ್ರತಿವರ್ಷವೂ ರಾಜ್ಯಮಟ್ಟದಲ್ಲಿ ಕೊಡ ಮಾಡುವ ಏಕೈಕ ಪ್ರಶಸ್ತಿ “ಮಾತೆ ಅಕ್ಷರದವ್ವ ರಾಜ್ಯ ಪ್ರಶಸ್ತಿ” ಇದು ರಾಜ್ಯದ ಉನ್ನತ ಪ್ರಶಸ್ತಿಯಾಗಿದೆ. ಜಿಲ್ಲಾ ಹಾಗು ತಾಲೂಕ್ ಘಟಕಗಳ ವತಿಯಿಂದ ಸಹ ಆಯಾ ವ್ಯಾಪ್ತಿಯ ಉತ್ತಮ ಶಿಕ್ಷಕಿಯರಿಗೆ ವಾರ್ಷಿಕವಾಗಿ ಮಾತೆಯ ಹೆಸರಲ್ಲಿ ಪ್ರಶಸ್ತಿ ವಿತರಣೆ ಮಾಡಿ ಶಿಕ್ಷಕಿಯರಿಗೆ ಪ್ರೋತ್ಸಾಹ ಸಹ ನೀಡಲಾಗುತ್ತಿದೆ. ಇಷ್ಟೇ ಅಲ್ಲದೆ ಶಿಕ್ಷಕಿಯರ ಸಂಘದ ಬೇಡಿಕೆಯಂತೆ ಸರ್ಕಾರದ ವತಿಯಿಂದಲೂ ಮಾತೆಯ ಹೆಸರಲ್ಲಿ ಪ್ರತಿವರ್ಷ ಶಿಕ್ಷಕರ ದಿನಾಚರಣೆಯಂದು ಪ್ರಶಸ್ತಿ ನೀಡಲಾಗುತ್ತಿದೆ.
ಇಷ್ಟೆಲ್ಲಾ ಹೊರತಾಗಿ ಇನ್ನು ಅನೇಕ ಇತರೆ ಸಂಘ ಸಂಸ್ಥೆಗಳು ತಮ್ಮ ಲಾಭಿಗಾಗಿ ಹೆಚ್ಚು ಪ್ರಚಾರಕ್ಕಾಗಿ ಮಾತೆಯ ಹೆಸರಲ್ಲಿ ಪ್ರಶಸ್ತಿ ನೀಡಲು ಪ್ರಾರಂಭಿಸಿವೆ. ಅಂತಹ ಯಾವುದೇ ನಾಮಿನೆಟೆಡ್ ಪ್ರಶಸ್ತಿಗಳು ನಮ್ಮ ಸಂಘಟನೆಗೆ ಸಂಬಂಧ ಇಲ್ಲವೆಂದು ಹಾಗೂ ಪ್ರಶಸ್ತಿಗೆ ಆಯ್ಕೆ ಸಂಬಂಧಿಸಿದ ಯಾವುದೇ ಲಾಬಿ, ಆಮಿಷ, ಆಯ್ಕೆ ಮಾನದಂಡಗಳಿಗೆ ನಮ್ಮ ಸಂಘಟನೆ ಕಾರಣವಾಗುವುದಿಲ್ಲ ಎಂದು ರಾಜ್ಯದ ಹಲವಾರು ಶಿಕ್ಷಕಿಯರ ಗೊಂದಲಗಳಿಗೆ ಉತ್ತರಿಸುವ ಮೂಲಕ ಸ್ಪಷ್ಟಪಡಿಸಿದ್ದಾರೆ.
