ನೊಂದ ಶಿಕ್ಷಕಿಯರಿಗೆ ದನಿಯಾಗಿ ನಿಂತ ಡಾ.ಲತಾ.ಎಸ್.ಮುಳ್ಳೂರ

ಕೋಲಾರ ಜು15.ಮುಳುಬಾಗಿಲಿನ ಡಿವಿಜಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಸೊನ್ನಪ್ಪನವರ  ನಡೆಗೆ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿಂದ ಆಕ್ರೋಶ ವ್ಯಕ್ತವಾಗಿದೆ.

ಕೋಲಾರ ಜಿಲ್ಲೆಯ ಮುಳುಬಾಗಿಲಿನ ಡಿವಿಜಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಸೊನ್ನಪ್ಪ ಅವರಿಂದ ಆಗಿರುವ ಶಿಕ್ಷಕಿಯರ ಮೇಲಿನ ದೌರ್ಜನ್ಯವನ್ನು
ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ತೀವ್ರವಾಗಿ ಖಂಡಿಸಿದೆ. ಸುಪ್ರಸಿದ್ದ ಕವಿಗಳಾದ ಡಿವಿಜಿ ರವರ ಮನೆ ಎಂದೇ ಕರೆಸಿಕೊಳ್ಳುವ ಈ ಡಿವಿಜಿ ಸರ್ಕಾರಿ ಶಾಲೆಯು ನಾಡಿಗೆ ಒಂದು ಮಾದರಿಯಾಗಿದೆ.

ಇಂದು ನ್ಯೂಸ್ ಚಾನೆಲೊಂದಿಗೆ ಡಿವಿಜಿ ಶಾಲೆಯ ಪ್ರಕರಣ ಕುರಿತಂತೆ ಮಾತನಾಡಿದ ಡಾ.ಲತಾ ಎಸ್ ಮುಳ್ಳೂರ

ಈ ಶಾಲೆಯ ಜವಾಬ್ದಾರಿ ಹೊತ್ತ ಮುಖ್ಯಶಿಕ್ಷಕರಾದ ಸೊನ್ನಪ್ಪನವರ ಸಣ್ಣತನ,ಅಹಂ, ದರ್ಪ, ಅಸಭ್ಯ ವರ್ತನೆಗಳು ಹಾಗೂ ಅವರ ದುರ್ನಡತೆ‌ಯ‌ ನಿಜ ಸ್ವರೂಪ ಎಲ್ಲದೂ ಸಾಮಾಜಿಕ ಮಾದ್ಯಮಗಳಲ್ಲಿ ಪ್ರಸಾರ ಆಗಿದೆ.ಅದೇ ಶಾಲೆಯಲ್ಲಿ ಕರ್ತವ್ಯನಿರತ ಮಹಿಳಾ ಶಿಕ್ಷಕಿಯರ ಮೇಲೆ ನಡಿದಿದೆ ಎನ್ನಲಾದ ಮಾನಸಿಕ ‌ಕಿರುಕುಳ,ದೌರ್ಜನ್ಯವನ್ಮು ನಾವೆಂದು ಸಹಿಸಲಾರೆವು.
ಅವರನ್ನು ತಕ್ಷಣದಲ್ಲಿ ಅಮಾನತ್ತುಗೊಳಿಸಬೇಕು.
ನೊಂದ ಶಿಕ್ಷಕಿಯರಿಗೆ ಸೂಕ್ತ ರಕ್ಷಣೆ ಹಾಗೂ ನ್ಯಾಯ‌ ಒದಗಿಸಬೇಕು.
ನ್ಯಾಯ ಸಿಗುವವರೆಗೂ ನಮ್ಮ ಸಂಘಟನೆ ರಾಜ್ಯಾದ್ಯಂತ ಹೋರಾಟ ನಡೆಸಲು ಸಿದ್ದವಿದೆ ಎಂದು ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ರವರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ದೌರ್ಜನ್ಯ ಕ್ಕೆ ಒಳಗಾಗುವ ಶಿಕ್ಷಕಿಯರ ರಕ್ಷಣೆಗೆ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸಮಸ್ತ ಪದಾಧಿಕಾರಿಗಳು ಸದಾ ಸನ್ನದ್ದರಾಗಿದ್ದಾರೆ ಎಂದು ತಿಳಿಸಿದ್ದಾರೆ.ಡಿವಿಜಿ ಶಾಲೆಯ ನೊಂದ ಶಿಕ್ಷಕಿಯರೊಂದಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿ ಮಾತನಾಡಿ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ.

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

Leave a comment