ಮಾತೆ ಸಾವಿತ್ರಿಬಾಯಿ‌ ಫುಲೆ ಪೆಂಟಿಂಗ್ ಚಿತ್ರವನ್ನು ಕೊಡುಗೆ ಕೊಟ್ಟ ಶಿಕ್ಷಕಿಯರು



ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ-ಧಾರವಾಡ✨ತಾಲ್ಲೂಕು ಘಟಕ-ಗುಬ್ಬಿ✨


2024 25 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲೇ ತಾಲ್ಲೂಕು ಘಟಕ- ಗುಬ್ಬಿ ವತಿಯಿಂದ ತಾಲ್ಲೂಕಿನ ಕಲಾವಿದರಾದ ಶ್ರೀ ಈಶ್ವರಪ್ಪ ರವರಿಂದ ರಚಿಸಲಾಗಿದ್ದು ಎನ್ನಲಾದ ಅಕ್ಷರದವ್ವ ಮಾತೇ ಸಾವಿತ್ರಿಬಾಯಿ ಫುಲೆ ಅವರ ಪೆಂಟಿಂಗ್ (ಅಳತೆ 6×4 ಅಡಿಗಳು) ಚಿತ್ರವನ್ನು ಇಂದು ಶಾಲಾ ಶಿಕ್ಷಣ ಇಲಾಖೆಯ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಕೊಡುಗೆಯಾಗಿ ನೀಡಿದ್ದಾರೆ ಅಲ್ಲದೇ ಒಂದು ಫ್ಯಾನ್ ಅನ್ನು ಸಹಾ ಕೊಡುಗೆಯಾಗಿ ಇದೇ ಸಂದರ್ಭದಲ್ಲಿ ನೀಡಲಾಗಿದೆ.

ಮಾತೆಯ ಈ ಪೆಂಟಿಂಗ್ ಚಿತ್ರವನ್ನು ತಾಲ್ಲೂಕಿನ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಲೇಪಾಕ್ಷಯ್ಯ ರವರು ಸ್ವೀಕರಿಸಿ‌ ಮಾತನಾಡಿದ ಅವರು ಭಾರತದ ಮೊದಲ ಶಿಕ್ಷಕಿ, ಅಕ್ಷರದವ್ವ,ಮಾತೇ ಸಾವಿತ್ರಿಬಾಯಿ ರವರ ಕೊಡುಗೆ ಅಪಾರವಾದದ್ದು, ಹೆಣ್ಣು ಶಾಲೆ ಕಲಿತಾಗ ಮಾತ್ರ ಸಮಾಜ ಸುಧಾರಣೆ ಸಾದ್ಯ ಎಂದು ಮನಗಂಡು, ಅನೇಕ ವಿರೋಧಗಳ ನಡುವೆ ಮೊಟ್ಟಮೊದಲ ಹೆಣ್ಣು ಮಕ್ಕಳ ಶಾಲೆ ತೆರೆದು ಇತಿಹಾಸ ಸೃಷ್ಟಿಸಿದವರಾಗಿದ್ದಾರೆ.ಅಂತಹ ಮಹಾ ಮಾತೆಗೆ ಎಲ್ಲರೂ ಮನೆ ಮನಗಳಲ್ಲಿ ಪೂಜನೀಯ ಸ್ಥಾನ ನೀಡಬೇಕಾಗಿದೆ,ಅವರ ಆದರ್ಶಗಳನ್ನ ತಾಲ್ಲೂಕಿನ ಪ್ರತೀ ಶಿಕ್ಷಕ ಶಿಕ್ಷಕಿಯರು ಅಳವಡಿಸಿಕೊಂಡು ಉತ್ತಮ ಸಮಾಜಕ್ಕಾಗಿ ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ಇಂದು ನೀಡಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.
ಮುಂದುವರೆದು
ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ಅನೇಕ ಉತ್ತಮ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು ಹೀಗೇ‌ ಇನ್ನೂ ಅನೇಕ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲಿ, ಸಂಘದ ಯಾವುದೇ ಸಮಾಜಮುಖಿ ಕಾರ್ಯಕ್ರಮಗಳಿಗೆ ನನ್ನ ಸಹಕಾರ,ಬೆಂಬಲ ಸದಾ ಇರಲಿದೆ ಎಂದರು.

ಸಂಘದ ತಾಲ್ಲೂಕು ಅಧ್ಯಕ್ಷರಾದ ಶ್ರೀಮತಿ ಎಸ್ ವಿ ಲಕ್ಷ್ಮಿ ಯವರು ಮಾತನಾಡಿ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಮಾತೆ ಸಾವಿತ್ರಿಬಾಯಿ ಪುಲೆಯ ಭಾವಚಿತ್ರವನ್ನು ಸಹಾ ಪ್ರತಿ ವರ್ಷ ವೇದಿಕೆಯಲ್ಲಿಟ್ಟು ಅನಾವರಣ ಮಾಡಿ ಮಾತೆಗೆ ಗೌರವ ಸಲ್ಲಿಸಬೇಕೆಂದು ಎಲ್ಲಾ ಪದಾಧಿಕಾರಿಗಳ ಪರವಾಗಿ ಮನವಿ ಮಾಡಿದರು.

ಮಾತೆಯ ಪೆಂಟಿಂಗ್ ಚಿತ್ರಕ್ಕಾಗಿ ತಗುಲಿದ ಖರ್ಚುವೆಚ್ಚ ಭರಿಸಿ ಸಂಪೂರ್ಣ ಸಹಕಾರ ನೀಡಿದ ಶ್ರೀಮತಿ ಸಾವಿತ್ರಮ್ಮ ರವರು ಮಾತನಾಡಿ ಮಾತೆಯ ಹೆಸರಿನಲ್ಲಿ ರಚಿಸಿಕೊಂಡಿರುವ ನಮ್ಮ ಸಂಘಕ್ಕೆ ಹೆಚ್ಚಿನ ಸಹಾಯ ಸಹಕಾರ ನೆರವನ್ನು ನೀಡಲು ನಾನು ಬಯಸುತ್ತೇನೆ ಇದರಿಂದ ಅಕ್ಷರದವ್ವ ಮಾತೆಗೆ ನನ್ನ ಸೇವೆ ಸಲ್ಲಿಸಿದಂತಾಗುತ್ತದೆ ಎಂಬ ಭಾವನೆಯನ್ನು ವ್ಯಕ್ತಪಡಿಸಿದರು.

ತಾಲ್ಲೂಕಿನ ಶಿಕ್ಷಕರಾದ ಶ್ರೀ
ಸುಬ್ರಹ್ಮಣ್ಯ ನವರು ಸಹ ಹಾಜರಿದ್ದು ಸಂಘದ ಉತ್ತಮ ಕಾರ್ಯಚಟುವಟಿಕೆಗಳಿಗೆ ನನ್ನ ಸಹಾಯ ಸಹಕಾರ ಸದಾ ಇರಲಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಬಿ ಇ ಒ ಕಚೇರಿಯ ಅಧಿಕಾರಿಗಳು,ಶಿಕ್ಷಕರ ಸಂಘದ ಎನ್.ಟಿ ಲಕ್ಷ್ಮಮ್ನ ,ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ತಾಲ್ಲೂಕು ಉಪಾಧ್ಯಕ್ಷರಾದ ಶ್ರೀಮತಿ ಜಯಮ್ಮ, ಸಂಘದ ತಾಲ್ಲೂಕು ಕಾರ್ಯದರ್ಶಿ ಶ್ರೀಮತಿ ವಿಶಾಲಾಕ್ಷಮ್ಮ, ಖಜಾಂಚಿಯಾದ ಶ್ರೀಮತಿ ಮಂಜಮ್ಮ ಮತ್ತು ಪದಾಧಿಕಾರಿಗಳಾದ ದಿವ್ಯ,ತಿಮ್ಮಮ್ಮ,ಚಂದ್ರಕಲಾ,ಸರೋಜಮ್ಮ,ರಾಜಮ್ಮ, ಪದ್ಮಾ, ರವರುಗಳು ಹಾಗೂ ಶಿಕ್ಷಕರಾದ ರವೀಶ್, ಸುಬ್ರಮಣ್ಯ, ಮುಂತಾದವರು
ಭಾಗವಹಿಸಿದ್ದರು.

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

Leave a comment