SSLC ಪರೀಕ್ಷೆ ಮಾರ್ಚ್ 2024, ರಾಜ್ಯಕ್ಕೆ ಪ್ರಥಮ ಸ್ಥಾನ‌ ಕು.ಅಂಕಿತಾ ಗೆ ಸನ್ಮಾನ

ಸಾವಿತ್ರಿಬಾಯಿ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್ (ರಿ) ನವದೆಹಲಿ ಹಾಗೂ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ ಹಾಗೂ ಜಿಲ್ಲಾಘಟಕ ಬಾಗಲಕೋಟೆ ವತಿಯಿಂದ
2023-24 ನೇ ಸಾಲಿನ ಎಸ್.ಎಸ್. ಎಲ್.ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ‌ ಬಾಗಲಕೋಟೆ ಜಿಲ್ಲೆಯ,ಮುಧೋಳ ತಾ.ವಜ್ರಮಟ್ಟಿ ಗ್ರಾಮದ ವಿದ್ಯಾರ್ಥಿನಿ ಕುಮಾರಿ ಅಂಕಿತಾ ಬಸಪ್ಪ ಕೊಣ್ಣೂರ ರವರ ಮನೆಗೆ ಬೇಟಿ ನೀಡಿ ಸಾಧಕಿಗೆ ಸನ್ಮಾನಿಸಿ ಶುಭ ಹಾರೈಸಲಾಯಿತು


ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷರ ಮಾರ್ಗದರ್ಶನದಲ್ಲಿ ರಾಜ್ಯ ಹಿರಿಯ ಉಪಾಧ್ಯಕ್ಷರಾದ ಶ್ರೀಮತಿ ಹೇಮಾ ಕೊಡ್ಡಣ್ಣನವರ ನೇತೃತ್ವದಲ್ಲಿ ಬಾಗಲಕೋಟೆಯ ಜಿಲ್ಲಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಪರ್ವೀನ್ ನದಾಫ, ಜಿಲ್ಲಾ ಕೋಶಾಧ್ಯಕ್ಷರಾದ ಶ್ರೀಮತಿ ಸುಮಿತ್ರಾ ಹಿರೇಮಠ ರವರುಗಳು ಈ ಸನ್ಮಾನ ಸಂದರ್ಭದಲ್ಲಿ ಭಾಗವಹಿಸಿದ್ದರು ಇದೇ ಸಂದರ್ಭದಲ್ಲಿ ಮಾನ್ಯ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರು ಆದ ಡಾ. ಲತಾ.ಎಸ್.ಮುಳ್ಳೂರು ರವರು ಕು. ಅಂಕಿತಾಳೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಅಭಿನಂದನೆ ಸಲ್ಲಿಸಿ,ತಮ್ಮ ಭವಿಷ್ಯದ ಗುರಿ ಏನು ಎಂಬ ಮಾತಿಗೆ ಕು.ಅಂಕಿತ ಐ.ಎ.ಎಸ್.ಅಧಿಕಾರಿ ಆಗುವ ಆಸೆ ವ್ಯಕ್ತ ಪಡಿಸಿದಾಗ ತನ್ನ ಕನಸು ನನಸಾಗಲಿ,ತನ್ನ‌ ಗುರಿ ಸಾಧನೆಗಾಗಿ ಯಾವುದೇ ಸಹಕಾರ ನೆರವಿಗೆ ನಮ್ಮ ಸಂಘಟನೆ ಎಂದಿಗೂ ಸದಾ ಸಿದ್ದವಿರಲಿದೆ ಎಂದು ಭರವಸೆಯ ಮಾತಾಡಿದರು.

ಈ ಸಂದರ್ಭದಲ್ಲಿ ಹೆತ್ತವರಿಗೆ ಕೀರ್ತಿ ತಂದ ಅಂಕಿತಾ ರವರ ತಂದೆ ತಾಯಿಗೂ ಕೂಡ ಅಭಿನಂದನೆ ಸಲ್ಲಿಸಲಾಯಿತು.ಅಂಕಿತ ಮತ್ತು ತಂದೆ ತಾಯಿ ಕುಟುಂಬವು ಈ ಸಂದರ್ಭದಲ್ಲಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

Leave a comment