ಮಾತೇ ಸಾವಿತ್ರಿಬಾಯಿ ಫುಲೆ ಜನ್ಮಜಯಂತಿ ಆಚರಣೆಗೆ ತಯ್ಯಾರಿ

ಧಾರವಾಡ ಜ.20 ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ಜಿಲ್ಲಾಘಟಕ- ಧಾರವಾಡ ವತಿಯಿಂದ ಜನವರಿ 22 ರಂದು ಬೆ.10:30 ಗಂಟೆಗೆ ಧಾರವಾಡ ಶಹರದ ವಿದ್ಯಾವರ್ಧಕ ಸಂಘ,ಡಾ. ಪಾಟೀಲ್ ಪುಟ್ಟಪ್ಪ ಸಭಾ ಭವನದಲ್ಲಿ ಮಾತೇ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ ಹಾಗೂ ಶೈಕ್ಷಣಿಕ ಕಾರ್ಯಾಗಾರಗಳನ್ನು ಹಮ್ಮಿಕೊಂಡಿದೆ.ಈ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸಭಾಪತಿಗಳಾದ ಗೌರವಾನ್ವಿತ ಸನ್ಮಾನ್ಯ ಬಸವರಾಜ ಹೊರಟ್ಟಿ ರವರು ಉದ್ಘಾಟಿಸಲಿದ್ದು,ವಿಶೇಷ ಆಹ್ವಾನಿತರಾಗಿ ಗೌರವಾನ್ವಿತ ಶ್ರೀ ಪರಶುರಾಮ.ಎಫ್.ದೊಡ್ಡಮನಿ ,ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಧಾರವಾಡ ರವರು‌ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ರವರು ವಹಿಸಲಿದ್ದು,ಕಾರ್ಯಕ್ರಮದಲ್ಲಿ ಪೋಕ್ಸೊ ಕಾಯಿದೆ ಮತ್ತು ಆಧುನಿಕ ಜಗತ್ತಿನಲ್ಲಿ ಮಹಿಳೆಯ ಪಾತ್ರ, ಹಾಗೂ ಜೀವನ ಕೌಶಲಗಳು ಮತ್ತು ಮಾನವೀಯ ಮೌಲ್ಯಗಳು ಈ ವಿಷಯಗಳ ಕುರಿತಂತೆ ಶೈಕ್ಷಣಿಕ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರತೀವರ್ಷ ಸಂಘಟನೆಯಿಂದ ಕೊಡಮಾಡುವ ಏಕೈಕ ಅತ್ಯುನ್ನತ ರಾಜ್ಯ ಪ್ರಶಸ್ತಿಯಾದ ” ಮಾತೇ ಅಕ್ಷರದವ್ವ ರಾಜ್ಯ ಪ್ರಶಸ್ತಿಯನ್ಮು ಈ ಸಾಲಿಗೆ ಶಿಕ್ಷಣತಾಯಿ ಲೂಸಿ ಸಾಲ್ಡಾನ ರವರಿಗೆ ನೀಡಲಾಗುತ್ತಿದೆ. ಅಲ್ಲದೇ ನಮ್ಮ ಸಂಘಟನೆ ಸಹಾಯವಾಣಿ ಸಂಖ್ಯೆ ಹಾಗೂ ವೆಬ್ಸೈಟ್ URLs ಬಿಡುಗಡೆ ಮಾಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾಜ್ಯ ಪ್ರಶಸ್ತಿ ವಿಜೇತ ಸಾವಿತ್ರಿಬಾಯಿ ಫುಲೆ ಚಲನಚಿತ್ರದ ನಿರ್ಮಾಪಕರಾದ ಶ್ರೀ ಬಸವರಾಜ ಭೂತಾಳಿ ರವರು, ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರಾದ (ಆಡಳಿತ) ಶ್ರೀ ಎಸ್ ಎಸ್ ಕೆಳದಿಮಠ ರವರು ಹಾಗೂ ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರಾದ (ಅಭಿವೃದ್ದಿ)  ಶ್ರೀಮತಿ ಜಯಶ್ರೀ ಕಾಳೇಕರ್ ರವರು ಹಾಗೂ ಇತರೆ ಗಣ್ಯಮಾನ್ಯರುಗಳು ಉಪಸ್ಥಿತರಿದ್ದು ಎಲ್ಲಾ ತಾಲ್ಲೂಕಿನ ಕ್ಷೇತ್ರಶಿಕ್ಷಣಾಧಿಕಾರಿಗಳು,ಇತರೆ ಶಿಕ್ಷಣ ಅಧಿಕಾರಿಗಳು,ಸಂಘಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಭಾಗವಹಿಸಲು ಧಾರವಾಡ ಜಿಲ್ಲೆಯ ಶಾಲಾ ಶಿಕ್ಷಕಿಯರಿಗೆ ಒಒಡಿ ಸೌಲಭ್ಯ ವಿದ್ದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಜಿಲ್ಲಾ ಹಾಗೂ ಎಲ್ಲಾ ಪದಾಧಿಕಾರಿಗಳ ಪರವಾಗಿ ಜಿಲ್ಲಾಘಟಕದ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ರಾಥೋಡ್ ರವರು ಮನವಿ ಮಾಡಿದ್ದಾರೆ.

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

Leave a comment