ರಾಮನಗರ ದಿ.24 ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ, ತಾಲೂಕು ಘಟಕ ಚನ್ನಪಟ್ಟಣ ವತಿಯಿಂದ ದಿನಾಂಕ 24/ 9 /23ರಂದು ಭಾನುವಾರ ಬೆಳಿಗ್ಗೆ 11:30ಕ್ಕೆ, ಜೆಸಿ ರಸ್ತೆ ಕೋಟೆ ಪಂಚಮುಖಿ ಗಣೇಶ ದೇವಸ್ಥಾನದ ಹತ್ತಿರ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು,




ಚಂದ್ರು ಡಯಾಗ್ನೋಸ್ಟಿಕ್ ಸೆಂಟರ್ ಜೀವಾಮೃತ ರಕ್ತ ನಿಧಿಯ ಸಿಬ್ಬಂದಿಗಳ ಸಹಕಾರದಿಂದ ಇಪ್ಪತ್ತಕ್ಕೂ ಹೆಚ್ಚು ಯುವಕ, ಯುವತಿಯರಿಂದ ರಕ್ತ ಸಂಗ್ರಹಿಸಲಾಯಿತು. ಯುವಕ ಯುವತಿಯರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು ,ಈ ಒಂದು ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದಂತಹ ಶ್ರೀಮತಿ ನಾಗಮ್ಮ ರವರು, ಪ್ರಧಾನ ಕಾರ್ಯದರ್ಶಿಯಾದಂತಹ ಜಿ ನೇತ್ರಾವತಿಯವರು, ಕೋಶ ಅಧ್ಯಕ್ಷರಾದಂತಹ ಜಿಸಿ ಭಾಗ್ಯಮ್ಮರವರು, ಉಪಾಧ್ಯಕ್ಷರಾದಂತಹ ಸುಧಾಮಣಿ ,ಮಂಜುಳ ಎಸ್, ಅಲಮೇಲಮ್ಮ ರವರು ಭಾಗವಹಿಸಿದ್ದರು ಹಾಗೂ ಈ ಒಂದು ಕಾರ್ಯಕ್ರಮಕ್ಕೆ ಭಾರತ್ ವಿಕಾಸ್ ಪರಿಷತ್ ಅಧ್ಯಕ್ಷರಾದಂತಹ ಪಿ. ಗುರು ಮಾದಪ್ಪನವರು, ಉಪಾಧ್ಯಕ್ಷರಾದಂತಹ ವಸಂತ್ ಕುಮಾರ್ ರವರು ,ಭಾರತ್ ಸೇವಾದಳ ಅಧ್ಯಕ್ಷರಾದಂತಹ ಗೋವಿಂದ ರವರು ,ಲಯನ್ಸ್ ಸಂಸ್ಥೆಯ ಅಧ್ಯಕ್ಷರಾದ ತಿ ಪ್ರೇಗೌಡ್ರು, ಬೊಂಬೆ ನಾಡು ಗಮಕ ಪರಂಪರ ಟ್ರಸ್ಟ್ ನ ಅಧ್ಯಕ್ಷರಾದ ಡಿ ಪುಟ್ಟಸ್ವಾಮಿಯವರು, ಗೌರವಾಧ್ಯಕ್ಷರಾದ ಬಿಎಂ. ಕಾಡಯ್ಯ ರವರು ಭಾಗವಹಿಸಿದ್ದರು




ಜೀವಮೃತ ರಕ್ತ ನಿಧಿಯ ಆಡಳಿತ ಅಧಿಕಾರಿ ಆದಂತಹ ಶ್ರೀಯುತ ವಿ.ಸಿ ಚಂದ್ರೇಗೌಡರವರಿಗೆ ಎಲ್ಲರೂ ಸೇರಿ ಸಾವಿತ್ರಿಬಾಯಿ ಪುಲೆ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು, ಹಾಗೂ ಭಾಗವಹಿಸಿದಂತಹ ಅತಿಥಿಗಳಿಗೆ ಸಾವಿತ್ರಿಬಾಯಿ ಪುಲೆ ರವರ ಪುಸ್ತಕವನ್ನು ನೆನಪಿನ ಕಾಣಿಕೆಯಾಗಿ ನೀಡಲಾಯಿತು, ಹಾಗೂ ರಕ್ತದಾನ ಮಾಡಿದಂತಹ ಯುವಕ, ಯುವತಿಯರಿಗೆ ಆಪಲ್ ಜ್ಯೂಸ್ ,ಬಿಸ್ಕೆಟ್ ಬಾಳೆಹಣ್ಣು,ಜೊತೆಗೆ ಸರ್ಟಿಫಿಕೇಟ್ ವಿತರಿಸಲಾಯಿತು. ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ರಕ್ತದಾನಿಗಳು, ಚಂದ್ರು ಡಯಾಗ್ನೋಸ್ಟಿಕ್ ಸೆಂಟರ್ ಜೀವಾಮೃತ ರಕ್ತ ನಿಧಿಯ ಎಲ್ಲಾ ಸಿಬ್ಬಂದಿಗಳಿಗೂ,ಪ್ರತ್ಯಕ್ಷ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ತಾಲ್ಲೂಕಿನ ಅಧ್ಯಕ್ಷರಾದ ಶ್ರೀಮತಿ ನಾಗಮ್ಮ ನವರು ಧನ್ಯವಾದಗಳನ್ನು ತಿಳಿಸಿದ್ದಾರೆ.
