ರಾಷ್ಟ್ರಮಟ್ಟದಲ್ಲಿ ಉದಯವಾದ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ

ರಾಷ್ಟ್ರದ ಏಕೈಕ ಮೊದಲ ಶಿಕ್ಷಕಿಯರ ಸಂಘ

ದಿನಾಂಕ 27 ಆಗಸ್ಟ್ 2023 ರ ಭಾನುವಾರ ದಂದು ಧಾರವಾಡದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಸಾವಿತ್ರಿಬಾಯಿ ಫುಲೆ ರಾಷ್ಟೀಯ ಶಿಕ್ಷಕಿಯರ ಫೆಡರೇಶನ್ ರಿ. ನವದೆಹಲಿ ಕೇಂದ್ರ ಕಛೇರಿ ಧಾರವಾಡ, ಕರ್ನಾಟಕ ಈ ಸಂಘಟನೆಯ
ಉದ್ಘಾಟನಾ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಜರುಗಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನ ಪರಿಷತ್ತಿನ ಸಭಾಪತಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಹೊರಟ್ಟಿ ರವರು,ಶಿಕ್ಷಕಿಯರು ವೃತ್ತಿಯ ಪವಿತ್ರತೆಯನ್ನು ಕಾಪಾಡಿಕೊಳ್ಳಬೇಕು. ವಿದ್ಯಾರ್ಥಿಗಳ ಬುದ್ಧಿಮಟ್ಟ ಅರಿತು ಗುಣಮಟ್ಟದ ಶಿಕ್ಷಣ ಕೊಡುವ ಶಿಕ್ಷಕರನ್ನ ಸಮಾಜ ಗೌರವಿಸುತ್ತದೆ ಎಂದು ಅಭಿಪ್ರಾಯ ಪಟ್ಟರು ಹಾಗೂ ಮಕ್ಕಳ ಜೀವನ ಮತ್ತು ಭವಿಷ್ಯ ರೂಪಿಸುವ ಶಿಕ್ಷಕರ ಸೇವೆ ಮಹತ್ವದ್ದಾಗಿದೆ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಶಿಕ್ಷಕರ ಪಾತ್ರ ದೊಡ್ಡದು ಅದರಲ್ಲೂ ಗ್ರಾಮಾಂತರ ಪ್ರದೇಶಗಳಲ್ಲಿರುವ ಶಿಕ್ಷಕಿಯರ ಪಾತ್ರ ಹೆಚ್ಚಿನ ಜವಾಬ್ದಾರಿಯಿಂದ ಕೂಡಿದೆ ಎಂದು ಅವರು ಸಂಘಟನೆಯ ಎಲ್ಲಾ ಪದಾಧಿಕಾರಿಗಳಿಗೆ ಶುಭ ಕೋರಿದರು.

🌻ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸಂತೋಷ್ ಎಸ್ ಲಾಡ್ ರವರು ತಮ್ಮ ಅಮೃತ ಹಸ್ತದಿಂದ ರಾಷ್ಟ್ರೀಯ ಶಿಕ್ಷಕಿಯರ ಸಂಘದ ಲೋಗೊ ಅನಾವರಣ ಮಾಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಸಾವಿತ್ರಿಬಾಯಿ ಪುಲೆಯವರ ಶೈಕ್ಷಣಿಕ ವಿಚಾರಧಾರೆಗಳನ್ನು ವೃತ್ತಿಜೀವನದಲ್ಲೇ ಅಳವಡಿಸಿಕೊಂಡು ಸಿಹಿ ಕಹಿ ಅನುಭವಗಳನ್ನು ಸಮವಾಗಿ ಹಂಚಿಕೊಳ್ಳಬೇಕು ಹಾಗೂ ಡಾ.ಲತಾ ಎಸ್ ಮುಳ್ಳೂರ್ ಅವರ ಕಾರ್ಯ ಕ್ಷಮತೆಯನ್ನು ಮೆಚ್ಚಿ ಎಲ್ಲಾ ಸಂಘಟನೆಯ ಪದಾಧಿಕಾರಿಗಳಿಗೆ ಶುಭವಾಗಲಿ ಎಂದು ಹಾರೈಸಿದರು.

🌷 ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಸಂಘದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.
ಲತಾ.ಎಸ್.ಮುಳ್ಳೂರ ರವರು ಮಾತನಾಡಿ
ಕರ್ನಾಟಕ ರಾಜ್ಯದ‌ಲ್ಲಿನ ಎಲ್ಲಾ ಸರ್ಕಾರಿ ಅನುದಾನಿತ ಶಾಲೆಗಳ ಪ್ರಾಥಮಿಕ,ಹಾಗೂ ಪ್ರೌಢಶಾಲಾ ಶಿಕ್ಷಕಿಯರ ಸ್ವಾಭಿಮಾನದ ಸ್ವಾತಂತ್ರ್ಯ ವೇದಿಕೆಯಾಗಿ, ಶಿಕ್ಷಣದ ಗುಣಮಟ್ಟವನ್ನು ಕಾಯ್ದಿರಿಸುವ ನಿಟ್ಟಿನಲ್ಲಿ,,ಶಿಕ್ಷಕಿಯರ ಹಿತಕಾಯುವಲ್ಲಿ ಹಾಗೂ ಸಾಮಾಜಿಕ ಸಮಾನತೆಯನ್ನು ಕಾಪಾಡುವುದಲ್ಲದೇ,ಮಹಿಳಾ ಮತ್ತು ಮಕ್ಕಳ ಸಬಲೀಕರಣದತ್ತ ಉತ್ತಮ ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ಮಾಡುವ ಉದ್ದೇಶದಿಂದ 2018-19 ನೇ ಸಾಲಿನಲ್ಲಿ ಸ್ಥಾಪಿತಗೊಂಡು ಕೆಲವೇ ವರ್ಷಗಳಲ್ಲಿ ರಾಜ್ಯಾದ್ಯಂತ ಕ್ಷಿಪ್ರವಾಗಿ, ಬಲಾಡ್ಯವಾಗಿ ಬೆಳೆಯುತ್ತಿರುವ ಕರ್ನಾಟಕ‌ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ‌ವು ಇಂದು‌ ರಾಷ್ಟ್ರಮಟ್ಟದಲ್ಲೂ ತನ್ನ ಕೀರ್ತಿ ಪತಾಕೆಯನ್ನು ಹಾರಿಸಲು ಸಜ್ಜಾಗುವ ಮೂಲಕ ಹೊರ ರಾಜ್ಯಗಳಿಗೂ ದಾಪು ಕಾಲಿಡುತ್ತಿದೆ.
ಈ ಸಂಘದ ಪದಾಧಿಕಾರಿಗಳ ಸಂಘಟನಾ ದಕ್ಷತೆ, ಚತುರತೆ ಮತ್ತು ಅವರ ನಿರಂತರ ಸಂಘಟನಾ ಕಾರ್ಯ ಯೋಜನೆಗಳಿಂದ,ರಾಜ್ಯದ ಎಲ್ಲಾ ಪದಾಧಿಕಾರಿಗಳ ಸಕ್ರಿಯ ಕಾರ್ಯಚಟುವಟಿಕೆಗಳಿಂದ ಹಾಗೂ ಎಲ್ಲರ ಸಂಪೂರ್ಣ ಸಹಕಾರದಿಂದ ಕೇವಲ ಐದೇ ವರ್ಷದಲ್ಲಿ ರಾಜ್ಯದ ಪ್ರತೀ ತಾಲ್ಲೂಕುಗಳಲ್ಲಿಯೂ ಇದರ ಘಟಕಗಳು ಸ್ಥಾಪಿತಗೊಂಡಿದೆ.

ಇದು ರಾಜ್ಯದಲ್ಲಿನ ಏಕೈಕ ಶಿಕ್ಷಕಿಯರ ಬೃಹತ್ ಸಂಘಟನೆ ಯಾಗಿದೆ. ರಾಜ್ಯದ ಎಲ್ಲಾ ಪದಾಧಿಕಾರಿಗಳು,ಆಪ್ತ ಸಹಾಯಕ ಕಾರ್ಯದರ್ಶಿಗಳು,ತಾಂತ್ರಿಕ ಸಮಿತಿ ಸದಸ್ಯರುಗಳು ಹಾಗೂ ಪ್ರತೀ ಜಿಲ್ಲೆಯ,ಪ್ರತೀ ತಾಲ್ಲೂಕು ಪದಾಧಿಕಾರಿಗಳ ನಿರಂತರ ಚಟುವಟಿಕೆಗಳು,
ಸಾಮಾಜಿಕ‌ ಉಪಯುಕ್ತ ಸೇವೆಗಳು ಹಾಗೂ ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳಿಗೆ ಸಿಗುವ ಶಿಕ್ಷಣದ ಗುಣಮಟ್ಟವನ್ನು ಕಾಯ್ದಿರಿಸುವಲ್ಲಿ ಹಮ್ಮಿಕೊಂಡಿದ್ದ ನಾನಾ ಬಗೆಯ ಶೈಕ್ಷಣಿಕ ಕಾರ್ಯಾಗಾರಗಳು ಹಾಗೂ ಸಲ್ಲಿಸಿದ ಸಾಮಾಜಿಕ ಸೇವಾ ಚಟುವಟಿಕೆಗಳಿಂದ ಅಲ್ಲದೇ ರಾಜ್ಯದ ಶಿಕ್ಷಕಿಯರಿಗೆ ಭದ್ರತೆಯಾಗಿ ಎಲ್ಲರ ಹಿತ ಕಾಪಾಡುವ ಮೂಲಕ ಈ ಸಂಘಟನೆ ಎಲ್ಲರ ಗಮನ ಸೆಳೆದಿದೆ.
ಎಲ್ಲರ ಸಹಕಾರದಿಂದ ಇಂದು ದೇಶದ ಹಲವಾರು ರಾಜ್ಯಗಳ ಸರ್ಕಾರಿ ಅನುದಾನಿತ ಪ್ರಾಥಮಿಕ,ಹಾಗೂ ಮಾಧ್ಯಮಿಕ, ಹಾಗೂ ಪ್ರೌಢ ಶಾಲೆಗಳ ಕ್ರಿಯಾಶೀಲ ಶಿಕ್ಷಕಿಯರನ್ನು ಒಂದುಗೂಡಿಸಿ
ಸಂವಿಧಾನಾತ್ಮಕವಾಗಿ,ಕೇಂದ್ರ ಸರ್ಕಾರದ ನೊಂದಣಿಯ ನೀತಿ ನಿಯಮಗಳನುಸಾರ
ರಾಷ್ಟ್ರಮಟ್ಟದಲ್ಲಿ ಸಾವಿತ್ರಿ ವುಮೆನ್ ಟೀಚರ್ಸ್ ಪೆಡರೇಷನ್ ಎಂದು ನೊಂದಣಿ ಮಾಡಿಸಲಾಗಿದೆ. ಇದು ರಾಷ್ಟ್ರದಲ್ಲಿ ಪ್ರಾರಂಭವಾದ ಶಾಲಾ ಶಿಕ್ಷಕಿಯರ ಏಕೈಕ ಮೊದಲ ಸಂಘ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.ಈ ಸಂಘವು ಇಂದು ಉದ್ಘಾಟನೆಗೊಂಡಿರುವುದು ದೇಶದ ಶಾಲಾ ಶಿಕ್ಷಕಿಯರಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು

🦚ರಾಷ್ಟ್ರೀಯ ಪದಾಧಿಕಾರಿಗಳ ಪದಗ್ರಹಣ ಕೂಡ ಇದೇ ವೇದಿಕೆಯಲ್ಲಿ ನೆರವೇರಿತು. ಹಾಗೂ ಉಪನ್ಯಾಸಕರಾದ ಶ್ರೀಮತಿ ಪ್ರಜ್ಞಾ ಮತ್ತಿಹಳ್ಳಿ ರವರಿಂದ ಶೈಕ್ಷಣಿಕ ಉಪನ್ಯಾಸವನ್ನು ಸಹಾ ಆಯೋಜಿಸಲಾಗಿತ್ತು.

🦚ಈ ಕಾರ್ಯಕ್ರಮದಲ್ಲಿ ಮಾನ್ಯ ಡಾ. ಗುರುನಾಥ್ ಹೂಗಾರ್.ಸಹ ನಿರ್ದೇಶಕರು ಸಿಸ್ಲೆಪ್ ಧಾರವಾಡ.

ಮಾನ್ಯ ಶ್ರೀಅಶೋಕ್ ಸಿಂದಗಿ. ಕ್ಷೇತ್ರ ಶಿಕ್ಷಣಾಧಿಕಾರಿ ಗಳು ಧಾರವಾಡ ಶಹರ್.

ಮಾನ್ಯ ಶ್ರೀಮತಿ ಶಿವಲೀಲಾ ಕಳಸನ್ನವರ್. Apco ಉಪನಿರ್ದೇಶಕರ ಕಾರ್ಯಾಲಯ ಧಾರವಾಡ.
ಮಾನ್ಯ.ಶ್ರೀ.ಮಂಜುನಾಥ್. ಅಡಿವೆರ.ಕ್ಷೇತ್ರ ಸಮನ್ವಯಾಧಿಕಾರಿಗಳು ಧಾರವಾಡ ಶಹರ.
ಶ್ರೀ ಬಸವರಾಜ್ ಭೂತಾಳಿ. ಸಾವಿತ್ರಿಬಾಯಿ ಫುಲೆ ಕನ್ನಡ ಸಿನಿಮಾ ನಿರ್ಮಾಪಕರು

ಶ್ರೀ.ಮಾರ್ತಾಂಡಪ್ಪ ಕತ್ತಿ . ಪ್ರ.ಕಾರ್ಯದರ್ಶಿಗಳು.ಪುಟ್ಟರಾಜ ಗವಾಯಿ ಪ್ರತಿಷ್ಟಾನ
ಮುಂತಾದ ಗಣ್ಯರು ಹಾಜರಿದ್ದು ಸಮಾರಂಭ ಅಮೋಘವಾಗಿತ್ತು.

ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಲು ಸಜ್ಜಾದ ಈ ಸಂಘಟನೆಗೆ ರಾಜ್ಯಾಧ್ಯಕ್ಷರ ಜೊತೆ ಸಹಕರಿಸಿದ
ರಾಷ್ಟ್ರೀಯ ಪದಾಧಿಕಾರಿಗಳಾದ
❄️ ವೊಕಾಂತಿ ರಜಿತಾ ,
ರಾಷ್ಟೀಯ ಪ್ರಧಾನ ಕಾರ್ಯದರ್ಶಿ ತೆಲಂಗಾಣ.
❄️ಶ್ರೀಮತಿ ಸಾರಿಕಾ ಎಸ್ ಗಂಗಾ, ರಾಷ್ಟೀಯ ಕಾರ್ಯದರ್ಶಿ,ಕರ್ನಾಟಕ
❄️ಶ್ರೀಮತಿ ಎಂ. ಉಮಾ ರಾಷ್ಟ್ರೀಯ ಖಜಾಂಚಿ, ಆಂಧ್ರಪ್ರದೇಶ .
❄️ಶ್ರೀಮತಿ ಕೌಶಲ್ಯ ಪವಾರ್, ರಾಷ್ಟ್ರ ಉಪಾಧ್ಯಕ್ಷರು, ಮಹಾರಾಷ್ಟ್ರ.
❄️ಶ್ರೀಮತಿ ಶ್ರೀಧರ್ ಗೀತಾ ನಾಯರ್, ರಾಷ್ಟ್ರ ಉಪಾಧ್ಯಕ್ಷರು, ಕೇರಳ .
❄️ಶ್ರೀಮತಿ ಸುಷ್ಮಾ ಕುಮಾರಿ, ರಾಷ್ಟ್ರ ಉಪಾಧ್ಯಕ್ಷರು, ಬಿಹಾರ್.
❄️ಶ್ರೀಮತಿ ಭಾವನಾ ಸಿಂಗ್, ರಾಷ್ಟ್ರ ಉಪಾಧ್ಯಕ್ಷರು, ಉತ್ತರ ಪ್ರದೇಶ
❄️ಶ್ರೀಮತಿ ಪ್ರಭಾಸೋನಿ, ರಾಷ್ಟ್ರ ಉಪಾಧ್ಯಕ್ಷರು, ಮಧ್ಯ ಪ್ರದೇಶ.
❄️ಶ್ರೀಮತಿ ಕಲ್ಪನಾ ಭೂತರೆಡ್ಡಿ, ರಾಷ್ಟ್ರ ಸಹಕಾರ್ಯದರ್ಶಿ, ಕರ್ನಾಟಕ.
❄️ಶ್ರೀಮತಿ ಕಲೈವಾಣಿ, ರಾಷ್ಟ್ರ ಸಹಕಾರ್ಯದರ್ಶಿ, ತಮಿಳುನಾಡು.
❄️ಶ್ರೀಮತಿ ಲಲಿತಾಘವುಂಗಿ, ರಾಷ್ಟ್ರ ಸಹಕಾರ್ಯದರ್ಶಿ, ಮಿಜೋರಾಂ.
❄️ಶ್ರೀಮತಿ ಪುಷ್ಪ ಜೋಶಿ, ರಾಷ್ಟ್ರೀಯ ಸಹಕಾರ್ಯದರ್ಶಿ, ಉತ್ತರಖಂಡ್.
❄️ಶ್ರೀಮತಿ ಅನುಸೂಯ ದೇವಿ ಪಿ.ಎಸ್, ರಾಷ್ಟ್ರ ಸಹ ಕಾರ್ಯದರ್ಶಿ, ಕರ್ನಾಟಕ.
ಶ್ರೀಮತಿ ಅನಿತಾ ಪ್ರಧಾನ್, ರಾಷ್ಟ್ರ ಸಹಕಾರ್ಯದರ್ಶಿ, ಸಿಕ್ಕಿಂ.
❄️ಶ್ರೀಮತಿ ವಿದ್ಯಾಪಾರೀಕ್, ರಾಷ್ಟ್ರ ಸಹ ಕಾರ್ಯದರ್ಶಿ, ರಾಜಸ್ಥಾನ್.
❄️ಶ್ರೀಮತಿ ಅದತ್ರ ಆದಿಲಕ್ಷ್ಮಿ,ರಾಷ್ಟ್ರ ಸಹ ಕಾರ್ಯದರ್ಶಿ, ಆಂಧ್ರಪ್ರದೇಶ.
❄️ಶ್ರೀಮತಿ ಸಿದ್ದೋಜು ಕವಿತಾ, ರಾಷ್ಟ್ರ ಸಹ ಕಾರ್ಯದರ್ಶಿ, ತೆಲಂಗಾಣ.
❄️ಶ್ರೀಮತಿ ರಾಜಶ್ರೀ. ಎ. ಸಜ್ಜೇಶ್ವರ್, ರಾಷ್ಟ್ರ ಸಹ ಕಾರ್ಯದರ್ಶಿ, ಕರ್ನಾಟಕ.
❄️ಶ್ರೀಮತಿ ಪಿ.ಟಿ ಉಷಾ, ರಾಷ್ಟ್ರ ಸಂಘಟನಾ ಕಾರ್ಯದರ್ಶಿ, ಕೇರಳ.
❄️ಶ್ರೀಮತಿ ಕಟ್ಕಮ್ ವಾರ್ ಮಜುಷ, ರಾಷ್ಟ್ರ ಸಂಘಟನಾ ಕಾರ್ಯದರ್ಶಿ, ಮಹಾರಾಷ್ಟ್ರ.
❄️ಶ್ರೀಮತಿ ಪ್ರಭಾವತಿ ಎಲ್, ರಾಷ್ಟ್ರ ಸಂಘಟನಾ ಕಾರ್ಯದರ್ಶಿ ಕರ್ನಾಟಕ.
❄️ಶ್ರೀಮತಿ ಜಿ. ವರಲಕ್ಷ್ಮಿ, ರಾಷ್ಟ್ರ ಸಂಘಟನಾ ಕಾರ್ಯದರ್ಶಿ, ಆಂಧ್ರ ಪ್ರದೇಶ.
❄️ಶ್ರೀಮತಿ ಶಾಂತಾಬಾಯಿ ಬಿರಾದಾರ, ರಾಷ್ಟ್ರ ಸಂಘಟನಾ ಕಾರ್ಯದರ್ಶಿ, ಕರ್ನಾಟಕ.
🌼ಶ್ರೀಮತಿ ಸುಚಿತ್ರಾ ಗೋಸ್ವಾಮಿ, ರಾಷ್ಟ್ರ ಸಂಘಟನಾ ಕಾರ್ಯದರ್ಶಿ, ಅಸ್ಸಾಂ.
🌼ಶ್ರೀಮತಿ ಟಿ ಕುಮಾರಿ, ರಾಷ್ಟ್ರ ಸಂಘಟನಾ ಕಾರ್ಯದರ್ಶಿ, ಆಂಧ್ರಪ್ರದೇಶ.
🌼ಶ್ರೀಮತಿ ಕೆ. ಸುನಿತಾ ದೇವಿ, ರಾಜ ಸಂಘಟನಾ ಕಾರ್ಯದರ್ಶಿ, ಆಂಧ್ರಪ್ರದೇಶ.
🌼ಡಾ. ಅರುಲ್ ಸೆಲ್ವಿ, ರಾಷ್ಟ್ರ ಸಂಘಟನಾ ಕಾರ್ಯದರ್ಶಿ, ತಮಿಳುನಾಡು.
🌼ಶ್ರೀಮತಿ ಸುಷ್ಮಾ, ರಾಷ್ಟ್ರ ಸಂಘಟನಾ ಕಾರ್ಯದರ್ಶಿ, ಮಹಾರಾಷ್ಟ್ರ.
🌸ಶ್ರೀಮತಿ ನಿರಾಲ ಅರುಣ ರಾಜೇಶ್ವರಿ ಫಿಲಿಪ್, ರಾಷ್ಟ್ರ ಸಂಘಟನಾ ಕಾರ್ಯದರ್ಶಿ, ಆಂಧ್ರಪ್ರದೇಶ..
ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಂಘಟನಾ ಶಕ್ತಿಯಾದ ರಾಜ್ಯಪದಾಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮತ್ತು ಪ್ರತಿ ಜಿಲ್ಲೆಯಿಂದ ಬಂದಿದ್ದ ಅಧ್ಯಕ್ಷರು,ಕಾರ್ಯದರ್ಶಿಗಳನ್ನೊಳಗೊಂಡಂತೆ ಎಲ್ಲಾ ತಾಲೂಕುಗಳಿಂದ ನೂರಾರು ಸಂಖ್ಯೆಯಲ್ಲಿ ಬಂದಿದ್ದ ಪದಾಧಿಕಾರಿಗಳಿಗೆ ಪ್ರಶಂಸನಾ ಪತ್ರಗಳನ್ನು ನೀಡಿ ಗೌರವಿಸಿದ್ದು ಕಾರ್ಯಕ್ರಮದಲ್ಲಿ ಮತ್ತಷ್ಟು ಸಂಭ್ರಮಕ್ಕೆ ಸಾಕ್ಷಿಯಾಯಿತು.
ಸಮಾರಂಭದ ಹಾಲ್ ಸಂಪೂರ್ಣ ಭರ್ತಿಯಾಗಿದ್ದಲ್ಲದೇ ಮತ್ತಷ್ಟು ಆಸನಗಳ ವ್ಯವಸ್ಥೆ ಕೂಡ ಕಲ್ಪಿಸಲಾಯಿತು.

ಉದ್ಘಾಟನೆ ಸಮಾರಂಭ ಹಾಗೂ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ
ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೆ ಪಾತ್ರರಾದ ಎಲ್ಲರಿಗೂ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಿದ ಶಾಲಾ ವಿದ್ಯಾರ್ಥಿನಿಯರಿಗೆ ಅಭಿನಂದನಾ ಪತ್ರಗಳನ್ನು
ಸಹ ನೀಡಲಾಗಿದ್ದು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗನ್ನು ನೀಡಿತು.
ಒಟ್ಟಾರೆ ಕಾರ್ಯಕ್ರಮವು ಸುಸೂತ್ರವಾಗಿ ಬಹಳ ಅಚ್ಚುಕಟ್ಟಾಗಿ ಯಶಸ್ವಿಯಾಗಿ ಮುಗಿಯಿತು.

Published by ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ

ರಾಜ್ಯದ ಸರ್ಕಾರಿ,ಅನುದಾನಿತ, ಪ್ರಾಥಮಿಕ, ಪದವೀಧರ, ಹಾಗೂ ಪ್ರೌಢಶಾಲಾ ಶಿಕ್ಷಕಿಯರನ್ನೊಳಗೊಂಡ ಏಕೈಕ‌ ಸಂಘ

Leave a comment